ಅಜಿಮ್ ಪ್ರೇಮ್‍ಜಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅಜಿಮ್ ಪ್ರೇಮ್‍ಜಿ

ಅಜಿಮ್ ಪ್ರೇಮ್‍ಜಿ (ಜನನ: ೧೯೪೫) ಭಾರತದ ವಾಣಿಜ್ಯೋದ್ಯಮಿ; ಪ್ರತಿಷ್ಠಿತ ಸಂಸ್ಥೆ ವಿಪ್ರೊದ ಪ್ರಸಕ್ತ ಅಧ್ಯಕ್ಷರು.

ಫೋರ್ಬ್ಸ್ ಪತ್ರಿಕೆಯ ಅಂದಾಜಿನ ಪ್ರಕಾರ ಅಜಿಮ್ ಪ್ರೇಮ್‍ಜಿ ೧೯೯೯ ರಿಂದ ೨೦೦೫ ರ ವರೆಗೆ ಭಾರತದ ಅತಿ ಶ್ರೀಮಂತ ವ್ಯಕ್ತಿಯಾಗಿದ್ದರು. ಈಗ ಅವರ ಒಟ್ಟು ಸಂಪತ್ತು ಸುಮಾರು ೧೭೧೦ ಕೋಟಿ ಡಾಲರ್ ಎಂದು ಅಂದಾಜು ಮಾಡಲಾಗಿದೆ.

ಅಜಿಮ್ ಪ್ರೇಮ್‍ಜಿ ಮುಂಬಯಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ನಡೆಸಿದರು. ಸ್ಟ್ಯಾನ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಇವರ ತಂದೆ ನಿಧನರಾದರು. ತಕ್ಷಣ ಭಾರತಕ್ಕೆ ಮರಳಿದ ಪ್ರೇಮ್‍ಜಿ ತಮ್ಮ ಕುಟುಂಬದ ತರಕಾರಿ ಎಣ್ಣೆ ಉದ್ಯಮವನ್ನು ಮುನ್ನಡೆಸಿದರು. ಇದೇ ಸಂಸ್ಥೆ (ವಿಪ್ರೊ) ಬೆಳೆಯುತ್ತಾ ಬಂದು ಇಂದು ಭಾರತದ ಅತಿ ದೊಡ್ಡ ಸಂಸ್ಥೆಗಳಲ್ಲಿ ಒಂದಾಗಿದೆ.

ಭಾರತದ ಪ್ರಾಥಮಿಕ ವಿದ್ಯಾಭ್ಯಾಸ ಪದ್ಧತಿಯಲ್ಲಿ ಸುಧಾರಣೆಗಳನ್ನು ತರುವ ಉದ್ದೇಶದಿಂದ ಅಜಿಮ್ ಪ್ರೇಮ್‍ಜಿ "ಅಜಿಮ್ ಪ್ರೇಮ್‍ಜಿ ಪ್ರತಿಷ್ಠಾನ"ವನ್ನು ಸ್ಥಾಪಿಸಿದ್ದಾರೆ.