ಕುವೆಂಪು
![]() ಶ್ರೀ ಪುಟ್ಟಪ್ಪನವರು |
|
| ಕಾವ್ಯನಾಮ(ಗಳು): | ಕುವೆಂಪು |
|---|---|
| ಜನನ: | ೧೯೦೪ |
| ಜನನ ಸ್ಥಳ: | ಕುಪ್ಪಳ್ಳಿ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ |
| ನಿಧನ: | ೧೯೯೪ ಮೈಸೂರು |
| ವೃತ್ತಿ: | ಲೇಖಕ, ಪ್ರಾಧ್ಯಾಪಕ, ಕುಲಪತಿ |
| ರಾಷ್ಟ್ರೀಯತೆ: | ಭಾರತೀಯ |
| ಬರವಣಿಗೆಯ ಕಾಲ: | (ಮೊದಲ ಪ್ರಕಟಣೆಯಿಂದ ಕೊನೆಯ ಪ್ರಕಟನೆಯ ಕಾಲ) |
| ಸಾಹಿತ್ಯದ ವಿಧ(ಗಳು): | ಕಥೆ, ಕವನ, ಕಾದಂಬರಿ |
| ವಿಷಯಗಳು: | ಕರ್ನಾಟಕ, ರಾಮಾಯಣ, ಜೀವನ, ಶಿವಮೊಗ್ಗ |
| ಸಾಹಿತ್ಯ ಶೈಲಿ: | ಬಂಡಾಯ, ನವೋದಯ |
| ಪ್ರಥಮ ಕೃತಿ: | (ಮೊದಲ ಪ್ರಕಟಿತ ಕೃತಿ/ಗಳು) |
| ಪ್ರಭಾವಗಳು: | ಕಾರ್ಲ್ ಮಾರ್ಕ್ಸ್, ಕುಮಾರವ್ಯಾಸ, ವರ್ಡ್ಸ್ ವರ್ತ್,ರಾಮಕೃಷ್ಣ ಪರಮಹಂಸ |
| ಹಸ್ತಾಕ್ಷರ: | ![]() |
| ಅಂತರ್ಜಾಲ ತಾಣ: | http://www.kuvempu.com/ |
| (ಇತರ ವಿಷಯಗಳು) | |
ಕುವೆಂಪು - ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ (೧೯೦೪ - ೧೯೯೪) - ಕನ್ನಡವು ಪಡೆದ ಅತ್ಯುತ್ತಮ ಕವಿ, 'ರಾಷ್ಟ್ರಕವಿ'. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಕನ್ನಡದ ಪ್ರಥಮ ವ್ಯಕ್ತಿ. 'ವಿಶ್ವ ಮಾನವ'. ಕನ್ನಡ ಸಾಹಿತ್ಯಕ್ಕೆ ಇವರ ಕಾಣಿಕೆ ಅಪಾರ.
ಪರಿವಿಡಿ |
[ಬದಲಾಯಿಸಿ] ಜೀವನ
ಡಿಸೆಂಬರ್ ೨೯, ೧೯೦೪, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆಯಲ್ಲಿ ಜನಿಸಿದ ಇವರು, ಕುಪ್ಪಳ್ಳಿ (ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕು) ಹಾಗೂ ಮೈಸೂರಿನಲ್ಲಿ ಬೆಳೆದರು. ಮೈಸೂರಿನ 'ಮಹಾರಾಜಾ' ಕಾಲೇಜಿನಲ್ಲಿ ಓದಿದ ಇವರು, ಮೈಸೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ಉಪಕುಲಪತಿಯಾಗಿ ನಿವೃತ್ತರಾದರು.ಇವರು ಮೈಸೂರಿನ ಒಂಟಿಕೊಪ್ಪಲುವಿನಲ್ಲಿರುವ "ಉದಯರವಿ"ಯಲ್ಲಿ ವಾಸಿಸುತ್ತಿದ್ದರು. ಇವರ ಹೆಂಡತಿಯ ಹೆಸರು ಹೇಮಾವತಿ ಮತ್ತು ಇವರಿಗೆ ನಾಲ್ಕು ಜನ ಮಕ್ಕಳು(ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ, ತಾರಿಣಿ ಚಿದಾನಂದ).
ರಾಷ್ಟ್ರಕವಿ ಡಾ.ಕು.ವೆಂ.ಪು ಅವರ ಕುರಿತ ಮತ್ತೊಂದು ಲೇಖನಕ್ಕೆ ಇಲ್ಲಿ ಕ್ಲಿಕ್ ಮಾಡಿ http://kannadaratna.com/achievers/kuvempu.html
[ಬದಲಾಯಿಸಿ] ವಿಶ್ವ ಮಾನವ ಸಂದೇಶ
ಪ್ರತಿಯೊಂದು ಮಗುವೂ ಹುಟ್ಟುತ್ತಲೆ -ವಿಶ್ವ ಮಾನವ. ಬೆಳೆಯುತ್ತಾ ನಾ ಅದನ್ನು ದೇಶ, ಭಾಷೆ, ಮತ, ಜಾತಿ,ಜನಾಂಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ”’ವಿಶ್ವಮಾನವ”’ನನ್ನಾಗಿ ಮಾಡುವುದೆ ವಿದ್ಯೆ, ಸಂಸ್ಕೃತಿ, ನಾಗರಿಕತೆಯ ಕರ್ತವ್ಯವಾಗಬೇಕು ಈ ದರ್ಶನವನ್ನೆ ’ವಿಶ್ವಮಾನವ ಗೀತೆ’ ಸಾರುತ್ತದೆ
ಓ ನನ್ನ ಚೇತನ, ಆಗು ನೀ ಅನಿಕೇತನ ರೂಪರೂಪಗಳನು ದಾಟಿ, ನಾಮಕೋಟಿಗಳನು ಮೀಟಿ, ಎದೆಯ ಬಿರಿಯೆ ಭಾವದೀಟಿ, ಓ ನನ್ನ ಚೇತನ, ಆಗು ನೀ ಅನಿಕೇತನ! ನೂರು ಮತದ ಹೊಟ್ಟ ತೂರಿ, ಎಲ್ಲ ತತ್ತ್ವದೆಲ್ಲೆ ಮೀರಿ, ನಿರ್ದಿಗನ೦ತವಾಗಿ ಏರಿ, ಓ ನನ್ನ ಚೇತನ, ಆಗು ನೀ ಅನಿಕೇತನ! ಎಲ್ಲಿಯೂ ನಿಲ್ಲದಿರು; ಮನೆಯನೆ೦ದೂ ಕಟ್ಟದಿರು; ಕೊನೆಯನೆ೦ದೂ ಮುಟ್ಟದಿರು; ಓ ಅನ೦ತವಾಗಿರು! ಓ ನನ್ನ ಚೇತನ, ಆಗು ನೀ ಅನಿಕೇತನ! ಅನ೦ತ ತಾನ್ ಅನ೦ತವಾಗಿ ಆಗುತಿಹನೆ ನಿತ್ಯಯೋಗಿ; ಅನ೦ತ ನೀ ಅನ೦ತವಾಗು; ಆಗು, ಆಗು, ಆಗು, ಆಗು, ಓ ನನ್ನ ಚೇತನ, ಆಗು ನೀ ಅನಿಕೇತನ!
[ಬದಲಾಯಿಸಿ] ಸಾಹಿತ್ಯ
ಕುವೆಂಪುರವರು ರಚಿಸಿದ ಚಿನ್ನದ ಮಾತುಗಳು:
ಕನ್ನಡ ಎನೆ ಕುಣಿದಾಡುವುದೆನ್ನದೆ ಕನ್ನಡ ಎನೆ ಕಿವಿನಿಮಿರುವುದು | ಕಾಮನಬಿಲ್ಲನು ಕಾಣುವ ಕವಿಯೊಳು ತೆಕ್ಕನೆ ಮನ ಮೈ ಮರೆಯುವುದು | ಕನ್ನಡ ಕನ್ನಡ ಹಾ ಸವಿಗನ್ನಡ ಬಾಳುವುದೇತಕೆ ನುಡಿ ಎಲೆ ಜೀವ | ಸಿರಿಗನ್ನಡದಲಿ ಕವಿತೆಯ ಹಾಡೆ ಸಿರಿಗನ್ನಡದೇಳಿಗೆಯನು ನೋಡೆ | ಕನ್ನಡತಾಯಿಯ ಸೇವೆಯ ಮಾಡೆ | ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ! ಸತ್ತಂತಿಹರನು ಬಡಿದೆಚ್ಚರಿಸು; ಕಚ್ಚಾಡುವರನು ಕೂಡಿಸಿ ಒಲಿಸು. ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು; ಒಟ್ಟಿಗೆ ಬಾಳುವ ತೆರದಲಿ ಹರಸು! ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ! ಕ್ಷಯಿಸೆ ಶಿವೇತರ ಕೃತಿ ಕೃತಿಯಲ್ಲಿ ಮೂಡಲಿ ಮಂಗಳ ಮತಿಮತಿಯಲ್ಲಿ; ಕವಿ ಋಷಿ ಸಂತರ ಆದರ್ಶದಲಿ ಸರ್ವೋದಯವಾಗಲಿ ಸರ್ವರಲಿ! ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ!
ಕುವೆಂಪುರವರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಅಪಾರ. ಇವರು ಧಾರವಾಡದಲ್ಲಿ ನಡೆದ ೧೯೫೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ೧೯೫೫ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು. ಇವರ ಶ್ರೀ ರಾಮಾಯಣ ದರ್ಶನಂ ಕೃತಿಯು ಕನ್ನಡಕ್ಕೆ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿಯನ್ನು ದೊರಕಿಸಿ ಕೊಟ್ಟಿತು. ಭಾರತ ಸರ್ಕಾರದ ಪದ್ಮವಿಭೂಷಣದಿಂದಲೂ ಪುರಸ್ಕೃತಗೊಂಡ ಇವರು 'ಜೈ ಭಾರತ ಜನನಿಯ ತನುಜಾತೆ...' ಕನ್ನಡ ನಾಡ ಗೀತೆಯನ್ನು ರಚಿಸಿದ ಮೇರು ಕವಿ. ಇವರು ಬರೆದ 'ಸ್ವಾಮಿ ವಿವೇಕಾನಂದ'ರ ಬಗೆಗಿನ ಕೃತಿ ಬಹಳ ಜನಪ್ರಿಯವಾದದ್ದು.
ಇವರ ವಿಶ್ವಮಾನವ ಸಂದೇಶ ಅತಿ ಪ್ರಸಿದ್ಡವಾಗಿದೆ.
[ಬದಲಾಯಿಸಿ] ಶ್ರೀ ರಾಮಾಯಣ ದರ್ಶನಂ
ಕುವೆಂಪುರವರು ಬರೆದ ಈ ಕೃತಿಯು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತವಾಗಿದೆ. ಕನ್ನಡದ ಅತ್ಯಮೂಲ್ಯ ಗ್ರಂಥಗಳಲ್ಲಿ ಒಂದು, ಈ ಕೃತಿ. ಈ ಕೃತಿ ಕನ್ನಡದ ಮೊದಲ ಆಧುನಿಕ ಮಹಾಕಾವ್ಯ; ಸರಳರಗಳೆಯನ್ನು ಕನ್ನಡದಲ್ಲಿ ಮೊತ್ತಮೊದಲ ಬಾರಿಗೆ ಬಳಸಲಾಗಿದೆ.
[ಬದಲಾಯಿಸಿ] ಕೃತಿಗಳು
ಕಾದಂಬರಿ:
- ಕಾನೂರು ಹೆಗ್ಗಡತಿ (ಚಲನ ಚಿತ್ರವಾಗಿದೆ)
- ಮಲೆಗಳಲ್ಲಿ ಮದುಮಗಳು (ಧಾರವಾಹಿಯಾಗಿದೆ)
ನಾಟಕಗಳು:
- ಬೆರಳ್ಗೆ ಕೊರಳ್
- ಶೂದ್ರ ತಪಸ್ವಿ
- ಸ್ಮಶಾನ ಕುರುಕ್ಷೇತ್ರ
- ರಕ್ತಾಕ್ಷಿ
- ಬಿರುಗಾಳಿ
- ಯಮನ ಸೋಲು
- ನನ್ನ ಗೋಪಾಲ (ಮಕ್ಕಳ ನಾಟಕ)
- ವಾಲ್ಮೀಕಿಯ ಭಾಗ್ಯ
- ಮಹಾರಾತ್ರಿ
- ಜಲಗಾರ
- ಚಂದ್ರಹಾಸ
- ಬಲಿದಾನ
- ಮೋಡಣ್ಣನ ತಮ್ಮ (ಮಕ್ಕಳ ನಾಟಕ)
ಚಿತ್ರ ಪ್ರಬಂಧ:
ವಿಚಾರ:
ಆತ್ಮ ಚರಿತ್ರೆ:
ಕಾವ್ಯಗಳು:
- ಶ್ರೀ ರಾಮಾಯಣ ದರ್ಶನ೦
- ಕೊಳಲು
- ಅಗ್ನಿಹಂಸ
- ಅನಿಕೇತನ
- ಅನುತ್ತರಾ
- ಇಕ್ಶುಗಂಗೋತ್ರಿ
- ಕದರಡಕೆ
- ಕಥನ ಕವನಗಳು
- ಕಲಾಸುಂದರಿ
- ಕಿಂಕಿಣಿ
- ಕೃತ್ತಿಕೆ
- ಜೇನಾಗುವ
- ನವಿಲು
- ಪಕ್ಷಿಕಾಶಿ
- ಚಿತ್ರಾಂಗದಾ
- ಪ್ರೇತಕ್ಯು
- ಪ್ರೇಮಕಾಶ್ಮೀರ
- ಮಂತ್ರಾಕ್ಷತೆ
- ಷೋಡಶಿ
- ಹಾಳೂರು
- ಕೋಗಿಲೆ
- ಪಾಂಚಜನ್ಯ
- ಕುಟೀಚಕ
ಕಥಾಸಂಕಲನ:
- ನನ್ನ ದೇವರು ಮತ್ತು ಇತರ ಕಥೆಗಳು
ವಿಮರ್ಶೆ:
- ದ್ರೌಪದಿಯ ಶ್ರೀಮುಡಿ
ಜೀವನ ಚರಿತ್ರೆ:
- ಸ್ವಾಮಿ ವಿವೇಕಾನಂದ
- ಶ್ರೀ ರಾಮಕೃಷ್ಣ ಪರಮಹಂಸ
[ಬದಲಾಯಿಸಿ] ಕುವೆಂಪುರವರ ಬಗ್ಗೆ ಇತರರು ಬರೆದ ಪುಸ್ತಕಗಳು
- ಮಗಳು ಕಂಡ ಕುವೆಂಪು - ಲೇ: ತಾರಿಣಿ ಚಿದಾನಂದ ಪ್ರಕಾಶಕರು:ಪುಸ್ತಕ ಪ್ರಕಾಶನ
- ಅಣ್ಣನ ನೆನಪು - ಲೇ: ಕೆ ಪಿ ಪೂರ್ಣಚಂದ್ರ ತೇಜಸ್ವಿ ಪ್ರಕಾಶಕರು:ಪುಸ್ತಕ ಪ್ರಕಾಶನ
- ಯುಗದ ಕವಿ-ಲೇ: ಡಾ.ಕೆ.ಸಿ.ಶಿವಾರೆಡ್ಡಿ
- ಹೀಗಿದ್ದರು ಕುವೆಂಪು - ಲೇ:ಪ್ರಭುಶಂಕರ
[ಬದಲಾಯಿಸಿ] ಪ್ರಶಸ್ತಿ ಪುರಸ್ಕಾರಗಳು
- ಜ್ಞಾನಪೀಠ ಪ್ರಶಸ್ತಿ (ಶ್ರೀ ರಾಮಾಯಣ ದರ್ಶನಂ) (೧೯೬೭)
- ಪದ್ಮಭೂಷಣ (೧೯೫೮)
- ಪದ್ಮವಿಭೂಷಣ (೧೯೮೯)
- ಕರ್ನಾಟಕ ರತ್ನ (೧೯೯೨)
- ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೫೫)
- ಪಂಪ ಪ್ರಶಸ್ತಿ(೧೯೮೮)
- ರಾಷ್ಟ್ರಕವಿ ಎಂದು ಬಿರುದು (೧೯೬೪)
[ಬದಲಾಯಿಸಿ] ಕೆಲವು ಮಾಹಿತಿಗಳು
ಇವರ ಬೆರಳ್ಗೆಕೊರಳ್ ನಾಟಕವು ಚಲನಚಿತ್ರವಾಗಿದೆ.
[ಬದಲಾಯಿಸಿ] ಇತರೆ ಸಂಬಂಧಪಟ್ಟ ಪುಟಗಳು
- ಕುವೆಂಪು ವಿಶ್ವವಿದ್ಯಾನಿಲಯ - ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟ ಎಂಬ ಊರಿನಲ್ಲಿ ಕುವೆಂಪು ಹೆಸರಿನ ವಿಶ್ವವಿದ್ಯಾನಿಲಯ ಸ್ಥಾಪನೆ.
- ಪೂರ್ಣಚಂದ್ರ ತೇಜಸ್ವಿ - ಕುವೆಂಪುರವರ ಪುತ್ರ, ಸಾಹಿತಿ.
[ಬದಲಾಯಿಸಿ] ಹೊರಗಿನ ಸಂಪರ್ಕಗಳು
- ಕುವೆಂಪು ಅವರ ಅಧಿಕೃತ ತಾಣ (ಉದಯರವಿ ಪ್ರಕಾಶನ)
- NIC ಪುಟದಲ್ಲಿ ಕುವೆಂಪು
- ವಿಚಾರಮಂಟಪ.ನೆಟ್ - ಕುವೆಂಪುರವರ ಕೆಲವು ಲೇಖನಗಳು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು
ಕನ್ನಡ: ಕುವೆಂಪು | ದ.ರಾ.ಬೇಂದ್ರೆ | ವಿ.ಕೃ.ಗೋಕಾಕ | ಶಿವರಾಮ ಕಾರಂತ | ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಯು.ಆರ್.ಅನಂತಮೂರ್ತಿ | ಗಿರೀಶ್ ಕಾರ್ನಾಡ್ | ಚಂದ್ರಶೇಖರ ಕಂಬಾರ
ಹಿಂದಿ: ಮಹಾದೇವಿ ವರ್ಮ | ನಿರ್ಮಲಾ ವರ್ಮ | ಸುಮಿತ್ರಾ ನಂದನ್ ಪಂತ್ | ರಾಮ್‍ಧಾರಿ ಸಿಂಘ್ ದಿನಕರ್ | ಅಜ್ಞೇಯ | ನರೇಶ್ ಮೆಹ್ತಾ
ಬೆಂಗಾಲಿ: ಟಿ.ಎಸ್.ಬಂದ್ಯೋಪಾಧ್ಯಾಯ | ಬಿಷ್ಣು ಡೆ | ಆಶಾಪೂರ್ಣ ದೇವಿ | ಸುಭಾಷ್ ಮುಖ್ಯೋಪಾಧ್ಯಾಯ | ಮಹಾಶ್ವೇತಾದೇವಿ
ಮಲಯಾಳಂ: ಎಂ.ಟಿ.ವಾಸುದೇವನ್ ನಾಯರ್ | ಜಿ. ಶಂಕರ ಕುರುಪ್ | ಎಸ್.ಕೆ.ಪೊಟ್ಟೆಕ್ಕಾಡ್ | ಟಿ. ಶಿವಶಂಕರ ಪಿಳ್ಳೈ
ಗುಜರಾತಿ: ಉಮಾಶಂಕರ್ ಜೋಶಿ | ಪನ್ನಾಲಾಲ್ ಪಟೇಲ್ | ರಾಜೇಂದ್ರ ಕೇಶವ್‌ಲಾಲ್ ಷಾ
ಒರಿಯಾ: ಗೋಪಿನಾಥ್ ಮೊಹಾಂತಿ | ಎಸ್. ರೌತ್ ರಾಯ್ | ಸೀತಾಕಾಂತ್ ಮಹಾಪಾತ್ರ
ಉರ್ದು: ಫಿರಾಕ್ ಗೋರಕ್ ಪುರಿ | ಕುರ್ರಾತುಲೈನ್ ಹೈದರ್ | ಅಲಿ ಸರ್ದಾರ್ ಜಾಫ್ರಿ
ತೆಲುಗು: ವಿಶ್ವನಾಥ ಸತ್ಯನಾರಾಯಣ | ಸಿ. ನಾರಾಯಣ ರೆಡ್ಡಿ
ತಮಿಳು: ಪಿ.ವಿ. ಅಕಿಲಾಂಡಮ್ | ಡಿ. ಜಯಕಾಂತನ್
ಪಂಜಾಬಿ: ಅಮೃತ ಪ್ರೀತಮ್ | ಗುರ್ದಿಯಲ್ ಸಿಂಘ್
ಅಸ್ಸಾಮೀಸ್ ಬಿ.ಕೆ. ಭಟ್ಟಾಚಾರ್ಯ | ಇಂದಿರಾ ಗೋಸ್ವಾಮಿ
ಮರಾಠಿ: ವಿಂದಾ ಕರಂದೀಕರ್ | ಕುಸುಮಾಗ್ರಜ್

