ಸೂರ್ಯ (ದೇವ)
Surya | |
---|---|
God of the Sun | |
ದೇವನಾಗರಿ | सूर्य |
ಸಂಬಂಧ | Graha, Deva |
ಹೆಂಡತಿ | Saranyu, Ragyi, Prabha, and Chhaya |
ವಾಹನ | Chariot drawn by seven white horses / by seven-headed horse (Charioteer:Aruna)[೧] |
ಹಿಂದೂ ಧರ್ಮ ದಲ್ಲಿ , ಸೂರ್ಯದೇವ (ದೇವನಾಗರಿ : सूर्य, ಸೂರ್ಯ ("ಅತ್ಯುಚ್ಚ ಬೆಳಕು ");[೨] Malay: [Suria] Error: {{Lang}}: text has italic markup (help); ಥಾಯ್:พระอาทิตย์ Suraya, Suriya or Phra Athit) ಮುಖ್ಯ ಸೂರ್ಯನ ದೇವತೆ , ಆದಿತ್ಯ ರಲ್ಲಿ ಒಬ್ಬ ಕಶ್ಯಪ ನ ಮಗ ಮತ್ತು ಅವನ ಹೆಂಡತಿಯರಲ್ಲಿ ಒಬ್ಬಳು , ಅದಿತಿ ;[೩] ಇಂದ್ರ ನ ಪತ್ನಿ ; ಅಥವಾ ದಯುಸ್ ಪಿತರ್ (ಅವತರಿಣಿಕೆಯ ಆಧಾರದನ್ವಯ ). ಸಾಮಾನ್ಯವಾಗಿ ಸೂರ್ಯ ನನ್ನು , ಸನ್‌ಎಂದು ಕರೆಯಲ್ಪಡುತ್ತಾರೆ. ಸೂರ್ಯನಿಗೆ ಕೂದಲುಗಳಿದ್ದು, ಚಿನ್ನ ದ ತೊಳುಗಳಿವೆ. ಆತನು ತನ್ನ ವಿಜಯೋತ್ಸವದ ರಥ ದಲ್ಲಿ ಸ್ವರ್ಗದಿಂದ ಬರಲಿದ್ದು,ಏಳು ಕುದುರೆಗಳು ರಥವನ್ನು ಎಳೆಯುತ್ತಿದ್ದು , ಅಥವಾ ಒಂದೇ ಕುದುರೆಗೆ ಏಳು ತಲೆಗಳಿದ್ದು,[೧] ಕಾಮನಬಿಲ್ಲಿನ ಏಳು ಬಣ್ಣಗಳನ್ನು ಪ್ರತಿನಿಧಿಸುತ್ತದೆ,ಅಥವಾ ಏಳು ಚಕ್ರ ಗಳನ್ನೂ ಗುರುತಿಸಲ್ಪಡುತ್ತಿವೆ. ಈತ "ರವಿ -ವಾರ " ಅಥವಾ ಭಾನುವಾರವನ್ನು ಪ್ರತಿನಿಧಿಸುತ್ತಾನೆ . ಹಿಂದೂ ಧರ್ಮ ಸಾಹಿತ್ಯದಲ್ಲಿ, ಸೂರ್ಯನನ್ನು ಕಣ್ಣಿಗೆ ಕಾಣುವ ದೇವರೆಂದು ಹೋಲಿಸಿದ್ದು,ಈತನನ್ನು ಪ್ರತಿದಿನ ನೋಡಬಹುದಾಗಿದೆ. ಇನ್ನೂ ಮುಂದೆ ಹೋಗಿ , ಶೈವರು ಈತನನ್ನು ಶಿವ ನ ಪ್ರಕಾರ ಎಂದು ಮತ್ತು ವೈಷ್ಣವರು ವಿಷ್ಣು ವಿನ ಪ್ರಕಾರ ಎಂದು ಕ್ರಮವಾಗಿ ಕರೆಯುತ್ತಾರೆ. ಉದಾಹರಣೆಗಾಗಿ ,ವೈಷ್ಣವರು ಸೂರ್ಯನನ್ನು ಸೂರ್ಯ ನಾರಾಯಣ ಎಂದು ಕರೆಯುತ್ತಾರೆ . ಶೈವಧರ್ಮದ ತತ್ವದಲ್ಲಿ , ಸೂರ್ಯನನ್ನು ಶಿವ ನ ಎಂಟು ರೂಪಗಳಲ್ಲಿ ಒಂದು ಎಂದು ಕರೆಯಲಾಗುತ್ತದೆ , ಅದರ ಆ ರೂಪವನ್ನು ಅಷ್ಟಮೂರ್ತಿ ಎಂದು ಕರೆಯಲಾಗುತ್ತದೆ . ಸೂರ್ಯನ ಇನ್ನೊಂದು ಹೆಸರು ವೈವಸ್ವತ (ಸಂಸ್ಕೃತದಲ್ಲಿ ) (ವಿವಸ್ವನ್ ಸಹ ), ರವಿ (ಸಾಹಿತ್ಯದಲ್ಲಿ . "ಬೆಂಕಿಯ ಪಕ್ಷಿ "[೨]), ಆದಿತ್ಯ (ಸಾಹಿತ್ಯದಲ್ಲಿ . ಅದಿತಿ ಯ ಮಗ ),[೪] ಪುಷ (ಒಬ್ಬ ಉತ್ತಮ ಪಾವನ ಮಾಡುವವನು ), ದಿವಾಕರ (ದಿನದ ಆಗುಹೋಗುಗಳ ಕಾರ್ಯಕರ್ತ ), ಸವಿತಾ (ಜೀವಕಳೆ ತುಂಬುವವನು ), ಅರ್ಕ (ಸೂರ್ಯನ ಕಿರಣ ), ಮಿತ್ರ (ಸ್ನೇಹಿತ ),[೪] ಭಾನು (ಬೆಳಕು ), ಭಾಸ್ಕರ (ಬೆಳಕನ್ನು ಸೃಜಿಸುವವನು ), ಮತ್ತು ಗ್ರಹಪತಿ ( ಗ್ರಹ ಗಳ ರಾಜ).[೫]
ವರ್ಣನೆ
[ಬದಲಾಯಿಸಿ]ಕೆಲವೊಂದು ಸರ್ತಿ, ಸೂರ್ಯನು ತನ್ನ ಎರಡೂ ಕೈಗಳಿಂದ ಕಮಲವನ್ನು ಹಿಡಿದಂತೆ ಚಿತ್ರಿಸಲಾಗಿದೆ ; ಇನ್ನು ಕೆಲವು ಬಾರಿ ತನ್ನ ನಾಲ್ಕು ಕೈಗಳಲ್ಲಿ ಕಮಲ, ಚಕ್ರ , ಶಂಖ , ಗದೆಯನ್ನು ಹಿಡಿದುಕೊಂಡಂತೆ ವರ್ಣಿಸಲಾಗಿದೆ .
ಅರ್ಕ ಮಾದರಿ/ ಅರ್ಕ ರೂಪದಲ್ಲಿ
[ಬದಲಾಯಿಸಿ]ಭಾರತ ದೇಶದಾದ್ಯಂತ ಸೂರ್ಯನನ್ನು ವಿವಿಧ ರೀತಿಯಲ್ಲಿ ವರ್ಣಿಸಲಾಗುತ್ತದೆ. ಅಂತಹ ಒಂದು ಮುಖ್ಯ ಮಹಾಕಾವ್ಯದ (ರೀತಿ ) ಯಲ್ಲಿ , 'ಸೂರ್ಯ ' ನನ್ನು 'ಅರ್ಕ ' ಎನ್ನಲಾಗುತ್ತದೆ. ಸೂರ್ಯನನ್ನು "ಅರ್ಕ " ರೂಪದಲ್ಲಿ ಭಾರತದ ಉತ್ತರ ಮತ್ತು ಪೂರ್ವ ಪ್ರಾಂತ್ಯಗಳಲ್ಲಿ ಪೂಜಿಸಲಾಗುತ್ತದೆ. ಸೂರ್ಯನ 'ಅರ್ಕ ' ರೂಪದ ದೇವಾಲಯಗಳೆಂದರೆ , ಒಡಿಶಾ ದಲ್ಲಿನ ಸೂರ್ಯ ಕೊನಾರ್ಕ ದೇವಾಲಯ , ಉತ್ತರ ಪ್ರದೇಶ ದ ಉತ್ತರರ್ಕ ಮತ್ತು ಲೋಲರ್ಕ ,ಹಾಗು ರಾಜಸ್ಥಾನ ದ ಬಲಾರ್ಕಗಳು . ( ಉತ್ತರ ಪ್ರದೇಶ ದ (ಬಹರೈಚ್ ನಲ್ಲಿ,ಒಂದು ಹಳೇ ಸೂರ್ಯ-ದೇವಾಲಯವನ್ನು , ಬಲಾರ್ಕ ಸೂರ್ಯ ಮಂದಿರ ಎಂದು ಕರೆಯಲಾಗುತ್ತದೆ , ಇದನ್ನು 10 ನೇ ಶತಮಾನದಲ್ಲಿ (ಎಡಿ ) ತಿಲೋಕ್ ಚಂದ್ ಅರ್ಕವಂಶಿ ಯನ್ನು ಕಟ್ಟಿಸಿದ್ದಾನೆ. 14 ನೇ ಶತಮಾನದಲ್ಲಿ (ಎ ಡಿ ),ಆಕ್ರಮಣ ಕಾಲದಲ್ಲಿ ಟರ್ಕಿಷ್ನಿಂದ ಬಂದ ವಿದೇಶಿಯರು ಈ ದೇವಸ್ಥಾನವನ್ನು ಹಾಳುಮಾಡಿದ್ದಾರೆ.
'ಮಿತ್ರ ' ಸೂರ್ಯ ನ ಮತ್ತೊಂದು ರೂಪ
[ಬದಲಾಯಿಸಿ]ಜೀವವನ್ನು ಬೆಳೆಸುವ ಗುಣಗಳಿಂದ 'ಸೂರ್ಯ 'ನನ್ನು 'ಮಿತ್ರ ' ( ಸ್ನೇಹಿತ ಎಂದು ಅರ್ಥ .) ಎಂದೂ ಕರೆಯಲಾಗುತ್ತದೆ. 'ಸೂರ್ಯ ' ನ 'ಮಿತ್ರ' ರೂಪವನ್ನು ಗುಜರಾತಿನ ಬಹು ಭಾಗದಲ್ಲಿ ಆರಾಧಿಸಲಾಗುತ್ತದೆ, ಸೂರ್ಯ ವಂಶಿ ಗಳು ರಾಜ ವಂಶದವರು, 'ಮಿತ್ರ ವಂಶಿ' ಕ್ಷತ್ರಿಯರು ,ಎಂದು ತಿಳಿದು ಬಂದಿದೆ.ಹಾಗೆಯೇ ಇವರನ್ನು ಕೊಂಕಿನ ಹೆಸರಾದ ಮೈತ್ರಕರು ಎಂದೂ ತಿಳಿಯಲಾಗಿದೆ.
ಸೂರ್ಯ ನಮಸ್ಕಾರ , ಅಥವಾ "ಸೂರ್ಯ ವಂದನೆಗಳು "
[ಬದಲಾಯಿಸಿ]ಪ್ರಸಿದ್ಧವಾದ ಹಿಂದೂ ಧರ್ಮದ ಪೂಜಿಸುವ ಪದ್ಧತಿ ಯಲ್ಲಿ ಸೂರ್ಯನನ್ನು ಬೆಳಗೆದ್ದು,ಅಂದರೆ ಉದಯಿಸುವ ಸೂರ್ಯನನ್ನು ಆರಾಧಿಸುವುದು , ಸೂರ್ಯ ನಮಸ್ಕಾರ (ಸೂರ್ಯ ವಂದನೆ ) ಒಂದು ಬೆಳೆದು ಬಂದ ದೈವ ಪದ್ಧತಿ . ಒಬ್ಬ ಯೋಗಿಯ ಹತ್ತು ಭಂಗಿಗಳು ಯಶಸ್ಸಿನ ಚಲನೆಯ ಪ್ರತೀಕವಾಗಿದ್ದು,ಅದು ಒಂದು ನಮಸ್ಕಾರವಾಗಿದೆ. 12 ಪವಿತ್ರ ಹಿಂದೂ ಮಂತ್ರಗಳನ್ನು ಹೇಳುತ್ತಾ,ಒಂದು ಮಂತ್ರದ ಕೊನೆಗೆ ಒಂದು ನಮಸ್ಕಾರ ಎಂದು ಪರಿಗಣಿಸಲಾಗುತ್ತದೆ. ಪ್ರಾಚೀನ ಕಾಲದಲ್ಲಿ 108 ನಮಸ್ಕಾರಗಳನ್ನು ಒಂದು ದಿನಕ್ಕೆ ಅಭ್ಯಸಿಸಲಾಗುತ್ತಿತ್ತು. ಇವುಗಳನ್ನು ಮಾಡುವುದು ಬಹಳ ಮಂಗಳಕರವೆಂದು ಹಿಂದೂಗಳಲ್ಲಿ ನಂಬಲಾಗಿದೆ. ಸೂರ್ಯನನ್ನು ನಮಸ್ಕರಿಸಲು 12 ಮಂತ್ರಗಳು :
- ಓಂ ಮಿತ್ರಾಯ ನಮಃ
- ಓಂ ರವಯೇ ನಮಃ
- ಓಂ ಸೂರ್ಯಾಯ ನಮಃ
- ಓಂ ಭಾನವೇ ನಮಃ
- ಓಂ ಖಗಾಯ ನಮಃ
- ಓಂ ಪೂಷ್ಣೇ ನಮಃ
- ಓಂ ಹಿರಣ್ಯಗರ್ಭಾಯ ನಮಃ
- ಓಂ ಮರಿಚಯೇ ನಮಃ
- ಓಂ ಅದಿತ್ಯಾಯ ನಮಃ
- ಓಂ ಸಾವಿತ್ರೆ ನಮಃ
- ಓಂ ಅರ್ಕಾಯ ನಮಃ
- ಓಂ ಭಾಸ್ಕರಾಯ ನಮಃ
ಋಗ್ವೇದ ದ , ಪುಸ್ತಕ - 1 35 ನೇ ಶ್ಲೋಕದಲ್ಲಿ ,ಸೂರ್ಯ ಮಂತ್ರವನ್ನು ಪದೇ ಪದೇ ಜಪಿಸುವುದು, ಸೂರ್ಯನನ್ನು ಹೊಗಳುವುದಕ್ಕಾಗಿಯೇ ಆಗಿದೆ.
- ಮುಂಸೂಚನೆಯೆಂದು ಅಂತರಿಕ್ಷದಲ್ಲಿ, ಸಾವಿಲ್ಲದ ಅಥವಾ ಸಾಯುವ ತೆರದಿ ವಿಶ್ರಮಿಸುತ್ತಾನೆ,
- ಮತ್ತೆ ಬೆಳಗಿನಂದು ತನ್ನ ಚಿನ್ನದ ರಥದಲ್ಲಿ, ಸಾವಿತ್ರನು ದೇವರಾಗಿ ಬಂದು ಸೃಷ್ಟಿಯ ಪ್ರತಿಯೊಂದೂ ಜೀವಕ್ಕೂ [ಸಾಕ್ಷ್ಯಾಧಾರ ಬೇಕಾಗಿದೆ] ಬೆಳಕಾಗುತ್ತಾನೆ .
ಗಾಯತ್ರಿ ಮಂತ್ರವೂ ಕೂಡ ಸೂರ್ಯ ನೊಂದಿಗೆ ಬೆಸೆದಿದೆ . ಸೂರ್ಯನೊಂದಿಗೆ ಸೇರಿರುವ ಮತ್ತೊಂದು ಹಾಡು/ಶ್ಲೋಕ ಆದಿತ್ಯ ಹೃದಯಂ .ಇದನ್ನು ಅಗಸ್ತ್ಯಮಹಾಮುನಿಗಳು ಶ್ರೀ ರಾಮ ನಿಗೆ , ಯುದ್ಧಭೂಮಿಯಲ್ಲಿ ರಾವಣ ನೊಂದಿಗೆ ಹೋರಾಡುವುದಕ್ಕಿಂತ ಮುಂಚೆ ಜಪಿಸಲು ಹೇಳಿಕೊಟ್ಟರು. ಸೂರ್ಯನು , ತನ್ನ ಸ್ಥಾನವನ್ನು ಆಕ್ರಮಿಸಲು ಪ್ರಾರಂಭಿಸುವ ಮೊದಲು, ಅವನನ್ನು ಪೂಜಿಸುವ/ವರ್ಣಿಸುವ , ಮತ್ತೊಂದು ಪ್ರಸಿದ್ಧ ಸೂರ್ಯ ಮಂತ್ರ ಹೀಗಿದೆ. |ಓಂ ಬೂರ್ಬುವಸ್ವಹಃ,ಕಾಶ್ಯಪ ಗೋತ್ರ ರಕ್ತ ವರ್ಣ ಬೋ ಅರ್ಕ,ಇಹಾಗಚ್ಛ ಇಹ ತಿಷ್ಟ ಅರ್ಕಾಯ ನಮಃ
ಧಾರ್ಮಿಕ ಪಾತ್ರಗಳು ಮತ್ತು ಸಂಬಂಧಗಳು
[ಬದಲಾಯಿಸಿ]ವೈವಸ್ವತ (ಸೂರ್ಯ )ನಿಗೆ, ಮೂವರು ರಾಣಿಯರು ; ಸರಣ್ಯು ( ಸರಣಿಯಾ , ಸರಣ್ಯ , ಸಂಜನಾ , ಅಥವಾ ಸಂಗ್ಯಾ ಎಂತಲೂ ಕರೆಯುತ್ತಾರೆ ), ರಾಗ್ಯಿ , ಮತ್ತು ಪ್ರಭಾ . ಸರಣ್ಯು , ವೈವಸ್ವತ ಮನು ಅಥವಾ ಶ್ರದ್ಧ ದೇವ ಮನು ವಿನ ತಾಯಿ(ಏಳನೆಯವನು,ಅಂದರೆ ಈಗಿನ ಮನು )ಮತ್ತು ಅವಳಿ-ಜವಳಿಗಳಾದ ಯಮ (ಸಾವಿನ ದೇವತೆ ) ಮತ್ತು ಅವನ ತಂಗಿ ಯಮಿ ( ಯಮುನಾ ನದಿಗೆ ಸಬಂಧಿಸಿದ್ದು). ಯಮಿಯ ಅವಳಿ-ಜವಳಿಗಳಾದವರು - ಅಶ್ವಿನಿ ದೇವತೆಗಳಾದ , ದೈವ ಶಕ್ತಿ ಹೊಂದಿದ ಕುದುರೆ ಮುಖದ ಮನುಷ್ಯ (ಹಯವದನ) ಮತ್ತು ದೇವತೆ ಗಳ ಭೌತ ಶಾಸ್ತ್ರಜ್ಞರು . ಸೂರ್ಯನ ತೀಕ್ಷ್ಣ ಕಿರಣಗಳನ್ನು ತಡೆಯಲಾರದ ಸರಣ್ಯು , ತನ್ನ ನೆರಳಿನಿಂದ ಸ್ಥೂಲವಾದ ಅಸ್ಥಿತ್ವ ಛಾಯೆ ಯನ್ನು ಸೃಜಿಸಿದಳು ಹಾಗೂ ತನ್ನ ಗೈರು ಹಾಜರಿಯಲ್ಲಿ, ಸೂರ್ಯನ ಹೆಂಡತಿಯಾಗಿ ನಟಿಸುವಂತೆ ಹೇಳಿದಳು. ಛಾಯಾಳು ಇಬ್ಬರು ಗಂಡು ಮಕ್ಕಳ ತಾಯಿಯಾದಳು - ಸವರ್ಣಿ ಮನು (ಎಂಟನೆಯವನು , 'ಮನು' ನಂತರದವನು ) ಮತ್ತು ಶನಿ (ಶನಿ ಗ್ರಹ ), ಮತ್ತು ಇಬ್ಬರು ಹೆಣ್ಣು ಮಕ್ಕಳು - ತಪತಿ ( ನದಿ ದೇವತೆ ತಪತಿ ) ಮತ್ತು ವಿಷ್ತಿ .[೬] ಸೂರ್ಯನಿಗೆ 'ರಾಗ್ಯಿ' ಯಿಂದ , ರೇವಂತ ಅಥವಾ 'ರೈವತ' ಎಂಬ ಮಗನೂ ಇದ್ದನು . ಸೂರ್ಯನ ಇಬ್ಬರು ಮಕ್ಕಳಾದ ಶನಿ ಮತ್ತು ಯಮ ರು , ಮನುಷ್ಯ ಜೀವನದ ಬಗ್ಗೆ ಒಂದು ಸ್ಪಷ್ಟ ತೀರ್ಮಾನದ ಜವಾಬ್ದಾರಿಯನ್ನು ಹೊರುತ್ತಾರೆ ಎಂಬುದು ಆಸಕ್ತಿದಾಯಕ ವಿಷಯ. 'ಶನಿ'ಯು , ಮನುಷ್ಯ ಜೀವನದ ಒಂದೊಂದೂ ಕಾರ್ಯದ ನಂತರವೂ ಫಲವನ್ನು ಅಥವಾ ಶಿಕ್ಷೆಯನ್ನು ಯೋಗ್ಯತೆಗನುಸಾರವಾಗಿ ನೀಡಿದರೆ , 'ಯಮ'ನು ಮನುಷ್ಯನ ಸಾವಿನ ನಂತರ ,ಅವನು ಮಾಡಿದ ಕರ್ಮಗಳಿಗೆ ಫಲಿತಾಂಶ ನೀಡುತ್ತಾನೆ.[೭] ರಾಮಾಯಣ ದಲ್ಲಿ ಸೂರ್ಯನನ್ನು , ರಾಜ ಸುಗ್ರೀವ ನ ತಂದೆಯೆಂದು ಕರೆಯಲಾಗಿದ್ದು, ಅಮಾನವೀಯ ರಾಜ ರಾವಣ ನ ಸೋಲಿಸುವುದರಲ್ಲಿ/ ಸಂಹಾರದಲ್ಲಿ , ಈ ಸುಗ್ರೀವನು ರಾಮ ಮತ್ತು ಲಕ್ಷ್ಮಣರಿಗೆ ಸಹಾಯ ಮಾಡುತ್ತಾನೆ. ಹನುಮ ನನ್ನು ಅವನ ಗುರುವನ್ನಾಗಿಯೂ, ಅವನು ತರಬೇತು ಗೊಳಿಸಿದ್ದಾನೆ . ಸೂರ್ಯವಂಶಿ / ಸೂರ್ಯವಂಶ ಸಾಮ್ರಾಜ್ಯದ ರಾಜರುಗಳಲ್ಲಿ , ರಾಮನೂ ಒಬ್ಬನಾಗಿದ್ದು , ಸೂರ್ಯನಿಂದ ಉತ್ತಮನೆನಿಸಿಕೊಂಡಿದ್ದಾನೆ. ಮಹಾಭಾರತದಲ್ಲಿ, ರಾಜಕುಮಾರಿ ಕುಂತಿಯು,ಮುನಿ ದೂರ್ವಾಸ ರಿಂದ ಮಂತ್ರದ ವರವನ್ನು ಪಡೆದಿದ್ದು,ತಾನು ಇಷ್ಟ ಪಟ್ಟ ಯಾವುದೇ ದೇವರನ್ನು ನೆನೆದು ಮಂತ್ರವನ್ನು ಜಪಿಸಿದಲ್ಲಿ ,ಅಂತಹವರಿಂದ ಮಗುವನ್ನು ಪಡೆಯಲು ಶಕ್ತಳಾಗಿದ್ದಳು. ಅಂತಹ ಮಂತ್ರದ 'ಅದ್ಭುತ' ಶಕ್ತಿಯಿಂದ , ಕುಂತಿಯು ಮಂತ್ರವನ್ನು ಪರೀಕ್ಷಿಸುವ ಉದ್ದೇಶದಿಂದ, ಸೂರ್ಯನ ಮೇಲೆ ಪ್ರಯೋಗಿಸಿದಾಗ , ಸೂರ್ಯ ಪ್ರತ್ಯಕ್ಷನಾಗಿದ್ದನ್ನು ಕಂಡು ಹೆದರಿದವಳಾದಳು ಮತ್ತು ಹಿಂತಿರುಗಿ ಹೋಗಲು ಬೇಡಿಕೊಂಡಳು. ಆದರೆ , ಸೂರ್ಯನು ಹೋಗುವ ಮುನ್ನ ಮಂತ್ರದ ಫಲವನ್ನು ನೀಡಿಯೇ /ಪೂರೈಸಿಯೇ ಹೋಗಬೇಕಾಗುತ್ತದೆ. ಸೂರ್ಯನು ತನ್ನ ಮಾಯಾ ಶಕ್ತಿಯಿಂದ 'ಕುಂತಿ' ಗೆ ಮಗುವೊಂದನ್ನು ದಯಪಾಲಿಸಿ,ಆಕೆಯ ಶೀಲವನ್ನೂ ಸಹ ಉಳಿಸಿ ಹೋಗುತ್ತಾನೆ.ಇದರಿಂದಾಗಿ ಮದುವೆಯಾಗದ ರಾಜಕುಮಾರಿಗೆ 'ಮಗು' ಹೇಗಾದೀತು? ಎಂಬ ಮುಜುಗರದಿಂದ ಪಾರು ಮಾಡುತ್ತಾನೆ ಅಥವಾ ಸಮಾಜದ ಪ್ರಶ್ನೆಗಳಿಗೆ ಆಸ್ಪದ ಇಲ್ಲದಂತೆ ಮಾಡುತ್ತಾನೆ. ಕುಂತಿಯು ಮಗುವನ್ನು ತನ್ನ ಬಳಿ ಇಟ್ಟುಕೊಳ್ಳಲು ಹಿಂಜರಿಯುತ್ತಾಳೆ. ಕುರುಕ್ಷೇತ್ರ ದ ಮಹಾಯುದ್ಧದಲ್ಲಿ , ಕರ್ಣನು ಒಂದು 'ಕೇಂದ್ರೀಯ' ಮಹಾಪಾತ್ರವನ್ನು ಹೊಂದಿ ಬೆಳೆಯುತ್ತಾನೆ.
ಜ್ಯೋತಿಷ್ಯ ಶಾಸ್ತ್ರ
[ಬದಲಾಯಿಸಿ]ವೇದಗಳ ಭವಿಷ್ಯ ಶಾಸ್ತ್ರ ದಲ್ಲಿ, ಸೂರ್ಯನು ತನ್ನ ಬಿಸಿ ಮತ್ತು ಒಣಗಿದ ಪ್ರಕೃತಿಯಿಂದಾಗಿ, ಸಣ್ಣ ಪ್ರಮಾಣದ ಮೇಲ್ಫಿಕ್ ಎಂದು ಕರೆಯಲಾಗಿದೆ. ಆತ್ಮ , ಇಚ್ಚಾ-ಶಕ್ತಿ ,ಹೆಸರು , ಕಣ್ಣುಗಳು , ಸಾಮಾನ್ಯ ಶಕ್ತಿ , ಧೈರ್ಯ , ಒಡೆತನ , ತಂದೆ , ಉನ್ನತ ಸ್ಥಾನದಲ್ಲಿರುವವರು ಹಾಗು ಅಧಿಕಾರ ಇವುಗಳನ್ನು ಸೂರ್ಯನು ಪ್ರತಿನಿಧಿಸುತ್ತಾನೆ. ಮೇಷ (ಏರೀಸ್)ರಾಶಿಯಲ್ಲಿ ಸೂರ್ಯನು 'ಉಚ್ಚ' ಸ್ಥಾನದಲ್ಲಿದ್ದರೆ, ತುಲಾ (ಲಿಬ್ರಾ )ರಾಶಿಯಲ್ಲಿ 'ನೀಚ'ಸ್ಥಾನದಲ್ಲಿ ಇದ್ದಾನೆ. 'ಸೂರ್ಯ' ನು 10 ನೇ ಮನೆಯಲ್ಲಿ ಹೆಚ್ಚು 'ಬಲಶಾಲಿ'ಯಾಗಿ ಇರುತ್ತಾನೆ.ಹಾಗು 'ಕೋನ'ಗಳಲ್ಲಿ ( 1 ನೇ , 4 ನೇ ಮತ್ತು 7 ನೇ ಮನೆ )ಹೊಂದಿದ್ದಾನೆ. ಸೂರ್ಯನು ಮೂರು ನಕ್ಷತ್ರ ಗಳಿಗೆ ರಾಜನಾಗಿದ್ದು, ಅಥವಾ ಚಂದ್ರನ ಮನೆಯಲ್ಲಿ : ಕೃತ್ತಿಕ , ಉತ್ತರ ಫಲ್ಗುಣಿಮತ್ತು ಉತ್ತರ ಆಷಾಢ . ಸೂರ್ಯನ ಇತರ ವಿವರಗಳೆಂದರೆ : ಬಣ್ಣಗಳು - ತಾಮ್ರ ಅಥವಾ ಕೆಂಪು , ಲೋಹಗಳು (ಧಾತು) - ಚಿನ್ನ ಅಥವಾ ಹಿತ್ತಾಳೆ , ರತ್ನಗಳು - ರೂಬಿ (ಕೆಂಪು) , ದಿಕ್ಕುಗಳು - ಪೂರ್ವ ಹಾಗು ಋತುಗಳಲ್ಲಿ 'ಬೇಸಿಗೆ'. 'ಗೋಧಿ' ( ನವ ಧಾನ್ಯಗಳಲ್ಲಿ ಒಂದು ) ಈತನಿಗೆ ಪ್ರಿಯವಾದ ಆಹಾರ.
ದೇವಾಲಯಗಳು
[ಬದಲಾಯಿಸಿ]ಭಾರತದಾದ್ಯಂತ ಸೂರ್ಯ ದೇವಾಲಯಗಳು ಇವೆ. ಒಡಿಶಾ ದ ಕೊನಾರ್ಕ್ ನಲ್ಲಿನ , ಸೂರ್ಯ ದೇವಾಲಯ ಬಹಳ ಪ್ರಖ್ಯಾತಿ ಹೊಂದಿದ ವಿಶ್ವದಾದ್ಯಂತ ಹೆರಿಟೇಜ್ ಸೈಟ್ ಆಗಿದೆ. ಕೊನಾರ್ಕ್ ಅಲ್ಲದೆ , ಇನ್ನೊಂದು ಸೂರ್ಯ ದೇವಾಲಯವು ಒಡಿಶಾದಲ್ಲಿದ್ದು, ಬುಗುಡ ಕ್ಷೇತ್ರದಲ್ಲಿ , 'ಬಿರಂಚಿ ಖೇತ್ರ' (ಬಿರಂಚಿ ನಾರಾಯಣ ದೇವಸ್ಥಾನ )ದೇವಾಲಯವಿದ್ದು, ಇದು ಗಂಜಾಂ ಜಿಲ್ಲೆಯಲ್ಲಿದೆ . ಕೆಲವು ಸೂರ್ಯನ ದೇವಾಲಯಗಳೆಂದರೆ , ಸೋಲಂಕಿ ಸಾಮ್ರಾಜ್ಯದ ರಾಜ ಭೀಮದೇವನಿಂದ ರಚಿಸಲ್ಪಟ್ಟ , ಗುಜರಾತಿನ ಮೊಧೆರ ದೇವಾಲಯ , ಆಂಧ್ರ ಪ್ರದೇಶ ದ ಅರಸವಲ್ಲಿ , , ರಾಜಸ್ಥಾನದ ಜೈಪುರದಲ್ಲಿರುವ ಪ್ರಸಿದ್ಧ ಗಲ್ತಾಜಿ ದೇವಾಲಯ ಮತ್ತು ತಮಿಳು ನಾಡು ಹಾಗು ಅಸ್ಸಾಂ ನಲ್ಲಿರುವ ನವಗ್ರಹ ದೇವಸ್ಥಾನಗಳು . ಜಮ್ಮು ಮತ್ತು ಕಾಶ್ಮೀರ ದಲ್ಲಿನ ಮಾರ್ತಂಡ ಸೂರ್ಯ ದೇವಾಲಯ ಮತ್ತು ಮುಲ್ತಾನ್ ಸೂರ್ಯ ದೇವಾಲಯ ಗಳನ್ನೂ ಹಾಳುಗೆಡವಲಾಗಿದೆ .
ಹಬ್ಬಗಳು/ಉತ್ಸವಗಳು/ಜಾತ್ರೆಗಳು
[ಬದಲಾಯಿಸಿ]ಭಾರತದಾದ್ಯಂತ ಸೂರ್ಯನಿಗೆ ,ಸೂರ್ಯನ ಹೆಸರಿನಲ್ಲಿ ವಿವಿಧ ರೀತಿಯ ಹಬ್ಬಗಳು ಮೀಸಲಿಟ್ಟಿವೆ. ಸೂರ್ಯನಿಗಾಗಿಯೇ ಮಕರ ಸಂಕ್ರಾಂತಿ ಯನ್ನು, ಹಿಂದೂಗಳು ಹೆಚ್ಚಾಗಿ ಆಚರಿಸುತ್ತಾ ಬಂದಿದ್ದಾರೆ. ಭಾರತದಾದ್ಯಂತ ಮಕರ ಸಂಕ್ರಾಂತಿ ಎಂದು ಕರೆಯಲ್ಪಡುವ ಈ ಹಬ್ಬವನ್ನು ತಮಿಳರು ಪೊಂಗಲ್ ಎಂದು ವಿಶ್ವದಾದ್ಯಂತ ಆಚರಿಸುತ್ತಾರೆ. ಒಳ್ಳೆಯ ಫಸಲ ನ್ನು/ಬೆಳೆಯನ್ನು ಸೂರ್ಯ ದೇವನು ನೀಡಿದ ಕಾರಣದಿಂದ , ಆ ಫಸಲಿನ ಮೊದಲ ಬೆಳೆಯನ್ನು ಭಗವಂತನಿಗೆ ಅರ್ಪಿಸಿ , ವಂದನೆ ಸಲ್ಲಿಸುತ್ತಾರೆ. ಚ್ಚಾಥ್ ಎನ್ನುವುದು , ಹಿಂದೂಗಳು ಆಚರಿಸುವ ಮತ್ತೊಂದು ಸೂರ್ಯನ ಹಬ್ಬ. ಸೂರ್ಯನ ಪುತ್ರನಾದ ಕರ್ಣ ಇದನ್ನು ಪ್ರಾರಂಭಿಸಿದ ಎಂದು ನಂಬಿಕೆಯಿದೆ. ಕರ್ಣನು ,ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರ ವಿರುದ್ಧ ಹೋರಾಡಿದ ಒಬ್ಬ 'ಮಹಾನ್ ಯೋಧ'ನಾಗಿದ್ದಾನೆ. ಚ್ಚಾಥ್ ಹಬ್ಬವನ್ನು ಬಿಹಾರ , ಝಾರ್ಖಂಡ್ ಮತ್ತು ಉತ್ತರ ಪ್ರದೇಶ ನೇಪಾಳ ಹಾಗು ಮಾರಿಷಿಯಸ್ ನ ಕೆಲವು ಭಾಗಗಳಲ್ಲಿ ಆಚರಿಸಲಾಗುತ್ತದೆ. ಮಾಘ [೮] ಮಾಸದ ಏಳನೇ ದಿನದಂದು (ಸಪ್ತಮಿ ) ,ಹಿಂದೂ ಪಂಚಾಂಗದ ಪ್ರಕಾರ ಹಿಂದೂಗಳು ರಥ ಸಪ್ತಮಿಯನ್ನು ಆಚರಿಸುತ್ತಾರೆ ಈ ದಿನವನ್ನು ಸೂರ್ಯ ಜಯಂತಿ ಎಂದು ಆಚರಿಸಲಾಗುತ್ತಿದ್ದು,ಅಪಾರ ಶಕ್ತಿಯ ಸೂರ್ಯ ದೇವನನ್ನು ಆರಾಧಿಸಿ, 'ದೇವ /ಭಗವಂತ ವಿಷ್ಣುವಿನ' ಅಪರಾವತಾರ ಎಂದು ತಿಳಿಯಲಾಗಿದೆ. 'ಮಹಾ ವಿಷ್ಣು'ವಿನ ಅಪರಾವತಾರವೇ ಆದ ಸೂರ್ಯನನ್ನು ಸಾಮಾನ್ಯವಾಗಿ ಈ ದಿನ ಪೂಜಿಸುತ್ತಾರೆ. ಸಾಮಾನ್ಯವಾಗಿ , 'ರಥಸಪ್ತಮಿ'ಯಂದು ಮನೆಮನೆಗಳಲ್ಲಿ ಕೆಲವು 'ಬಿಲ್ವಪತ್ರೆ' ಗಳನ್ನು ತಲೆಯ ಮೇಲಿಟ್ಟು ಸ್ನಾನ ಮಾಡುತ್ತಾ, ಶ್ಲೋಕಗಳನ್ನು ಹೇಳುತ್ತಾ, ಸೂರ್ಯನ ಔದಾರ್ಯವನ್ನು ವರ್ಣಿಸುತ್ತಾ,ಇಡೀ ವರ್ಷಕ್ಕೆ ಒಮ್ಮೆ ಮಾತ್ರ ಪೂಜಿಸುವುದಾಗಿದೆ. ಪೂಜೆಯ ಜೊತೆಗೆ, ಶಾಸ್ತ್ರ ರೀತ್ಯಾ 'ನೈವೇದ್ಯಕ್ಕೆಂದು' ಹೂಗಳು ಮತ್ತು ಹಣ್ಣುಗಳನ್ನು ಅರ್ಪಿಸಲಾಗುತ್ತದೆ.
ಇವನ್ನೂ ಗಮನಿಸಿ
[ಬದಲಾಯಿಸಿ]ಆಕರಗಳು
[ಬದಲಾಯಿಸಿ]- ↑ ೧.೦ ೧.೧ Jansen, Eva Rudy. The Book of Hindu Imagery: Gods, Manifestations and Their Meaning, p. 65.
- ↑ ೨.೦ ೨.೧ ವಿಲ್ ಹೆಲ್ಮ್ , ಎರ್ನ್ಸ್ಟ್ . ಗ್ರಹ ಸೂತ್ರಗಳು , ಕಲಾ ಒಕ್ಕುಲ್ತ್ ಪಬ್ಲಿಷರ್ಸ್ , ಪುಟ .49. ಐ ಎಸ್ ಬಿ ಎನ್ 1586486837
- ↑ ಗಂಗೂಲಿ , ಕಿಸಾರಿ ಮೋಹನ್ . ವ್ಯಾಸರಿಂದ ಮಹಾಭಾರತ ಭಾಷಾಂತರ , ಮಹಾಭಾರತದ ಕಥೆಗಳು ಮತ್ತು ಪಾತ್ರಗಳು .
- ↑ ೪.೦ ೪.೧ ವಿಲ್ ಹೆಲ್ಮ್ , ಎರ್ನ್ಸ್ಟ್ . ಗ್ರಹ ಸೂತ್ರಗಳು , ಕಲಾ ಒಕ್ಕುಲ್ತ್ ಪಬ್ಲಿಷರ್ಸ್ , ಪುಟ .50. ಐಎಸ್ ಬಿಎನ್ 1586486837
- ↑ ವಿಲ್ ಹೆಲ್ಮ್ , ಎರ್ನ್ಸ್ಟ್ . ಗ್ರಹ ಸೂತ್ರಗಳು , ಕಲಾ ಒಕ್ಕುಲ್ತ್ ಪಬ್ಲಿಷರ್ಸ್ , ಪುಟ .51. ಐಎಸ್ ಬಿಎನ್ 1586486837
- ↑ ಪದ್ಮ ಪುರಾಣ - ಸೃಷ್ಟಿ ಖಂಡ ಅಧ್ಯಾಯ, ಭಾಗ 8
- ↑ ಶನಿಯ ಆರಾಧನೆಯಿಂದ ಆದ ಪರಿಣಾಮಗಳು , ಪುಟ . 10, at https://books.google.com/books?id=RnzLgxvmOFkC&pg=PA9&dq=shani+karma&cd=2#v=onepage&q=shani%20karma&f=false
- ↑ ಸ್ವಾಮಿ ಶಿವಾನಂದ , ರಥ ಸಪ್ತಮಿ
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Orphaned articles from ಡಿಸೆಂಬರ್ ೨೦೧೫
- All orphaned articles
- Articles with hatnote templates targeting a nonexistent page
- Lang and lang-xx template errors
- ಉಲ್ಲೇಖಗಳ ಅಗತ್ಯ ಇರುವ ಲೇಖನಗಳು
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Commons category link is on Wikidata
- All articles with dead external links
- Articles with dead external links from ಆಗಸ್ಟ್ 2021
- Articles with invalid date parameter in template
- Articles with permanently dead external links
- ಅದಿತ್ಯರು
- ಗ್ರಹ
- ಹಿಂದೂ ದೇವರುಗಳು
- ರುಗ್ವೇದದ ದೇವತೆಗಳು
- ಸೂರ್ಯ ದೇವರುಗಳು
- ಭಾರತೀಯ ಜ್ಯೋತಿಷ್ಯ ಶಾಸ್ತ್ರ
- ಸಂಸ್ಕೃತ ಪದಗಳು ಮತ್ತು ವಾಕ್ಯಗಳು
- ಹಿಂದೂ ದೇವತೆಗಳು