ವಿಷಯಕ್ಕೆ ಹೋಗು

ತಪತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಪತಿ
ತಾಪಿ ನದಿ ದೇವತೆ
ಸಂಲಗ್ನತೆದೇವಿ, ನದಿ ದೇವತೆ
ನೆಲೆಸೂರ್ಯಲೋಕ
ಮಂತ್ರಓಂ ಸೂರ್ಯಪುತ್ರೀ ಮಾಂ ತಾಪಿ ನಮಃ
ಲಾಂಛನನೀರು
ಸಂಗಾತಿರಾಜ ಸಂವರಣ
ಒಡಹುಟ್ಟಿದವರುಶನಿ, ಸಾವರ್ಣಿ ಮನು, ಶ್ರದ್ಧದೇವ ಮನು, ಯಾಮಿ, ಯಮ, ಅಶ್ವಿನ್ಸ್ ಮತ್ತು ರೇವಂತ
ಮಕ್ಕಳುಕುರು
ವಾಹನಮೀನು
ತಂದೆತಾಯಿಯರುಸೂರ್ಯ ಮತ್ತು ಛಾಯಾ

ತಪತಿ ಹಿಂದೂ ಧರ್ಮದ ದೇವತೆ.[೧] ತಪತಿ ಸೂರ್ಯನ(ಸೂರ್ಯದೇವರ) ಮತ್ತು ಸೂರ್ಯನ ಹೆಂಡತಿಯರಲ್ಲಿ ಒಬ್ಬಳಾದ ಛಾಯ ದೇವಿಯ ಮಗಳು.[೨] ತಪತಿ ಹೆಸರು ಅಕ್ಷರಶಃ "ಬೆಚ್ಚಗಾಗುವುದು", "ಬಿಸಿ", "ಸುಡುವುದು" ಎಂದರ್ಥ. ಪರಿಪೂರ್ಣ ವೈಶಿಷ್ಟ್ಯಗಳು, ಧಾರ್ಮಿಕತೆಯ ವಿಷಯದಲ್ಲಿ ತೀವ್ರವಾದ ಸ್ವಯಂ-ಶಿಸ್ತು ಹೊಂದಿರುವ ಸೌಂದರ್ಯದಲ್ಲಿ ಮೂರು ಪ್ರಪಂಚಗಳಲ್ಲಿ ಯಾರೂ ಅವಳಿಗೆ ಸರಿಸಾಟಿಯಿಲ್ಲ. ವೇದಗಳಲ್ಲಿ ಹಾಗೂ ಸೌಂದರ್ಯದಲ್ಲಿ ತಪತಿಗೆ ಸರಿ ಸಮಾನಾದವರು ಯಾರು ಇಲ್ಲ.

ದಂತಕಥೆಗಳು

[ಬದಲಾಯಿಸಿ]

ತಪತಿಯನ್ನು ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ. ಸಂವರಣ ಪತ್ನಿಯಾದ ತಪತಿಯು ಕುರು (ಕುರು ರಾಜವಂಶ ಮತ್ತು ಕುರು ಸಾಮ್ರಾಜ್ಯದ ಸ್ಥಾಪಕ) ಎಂಬ ಮಗನನ್ನು ಹೊಂದಿದ್ದಾಳೆ.[೩] ಹಿಂದೂ ಗ್ರಂಥಗಳಾದ ಶ್ರೀಮದ್-ಭಾಗವತ ಮತ್ತು ಪುರಾಣಗಳ ಪ್ರಕಾರ ತಪತಿಯ ಮನೆಯು ತಪತಿ ನದಿಯ ದಡದಲ್ಲಿದೆ.

ತಪತಿ ಸಂವರಣನನ್ನು ಭೇಟಿ ಮಾಡಿದ್ದು

ಬೇಟೆಯಾಡಲು ಹೋದ ರಾಜ ಸಂವರಣನು ತಪತಿಯನ್ನು ನೋಡಿದನು ಮತ್ತು ಪ್ರೀತಿಸುತ್ತಿದ್ದನು. ರಾಜನು ತಪತಿಯ ಮುಂದೆ ಮದುವೆಯ ಪ್ರಸ್ತಾಪವನ್ನು ಮಾಡಿದನು.ತಪತಿಯು ತನ್ನ ತಂದೆಯ ಒಪ್ಪಿಗೆಗಾಗಿ ಸೂರ್ಯದೇವನ ಬಳಿ ಹೋಗಲು ಹೇಳಿದಳು. ಆದಾದ ನಂತರ ರಾಜನು ಸೂರ್ಯನನ್ನು ಆರಾಧಿಸಲು ಪ್ರಾರಂಭಿಸಿದನು. ವಸಿಷ್ಠ ಋಷಿಯ ಸಹಾಯದಿಂದ ರಾಜನು ಸೂರ್ಯದೇವನ ಬಳಿ ಹೋದನು. ನಂತರ ವಸಿಷ್ಠ ಸಂವರಣ ಮತ್ತು ತಪತಿಯ ವಿವಾಹವನ್ನು ಮಾಡುವಂತೆ ಹೇಳಿದರು. ನಂತರ ಸೂರ್ಯದೇವ ಒಪ್ಪಿ ಮದುವೆ ಮಾಡಿಸಿದನು.


ಉಲ್ಲೇಖಗಳು

[ಬದಲಾಯಿಸಿ]

https://www.indiaforums.com/forum/topic/4898166

  1. https://www.indiaforums.com/forum/topic/4898166
  2. https://timesofindia.indiatimes.com/blogs/littlethoughts/mythology-5-surya/
  3. https://www.thehindu.com/entertainment/art/a-koodiyattam-festival-organised-by-nepathya-highlighted-the-chemistry-between-the-hero-and-the-vidooshakan/article26013351.ece
"https://kn.wikipedia.org/w/index.php?title=ತಪತಿ&oldid=1166293" ಇಂದ ಪಡೆಯಲ್ಪಟ್ಟಿದೆ