ಮೊಹರಂ ಕುಣಿತ
ಮುನ್ನುಡಿ
[ಬದಲಾಯಿಸಿ]ಜಾನಪದ ಕುಣಿತ ಪ್ರಕಾರಗಳಲ್ಲಿ ಮೊಹರಂ ಕುಣಿತ ಕೂಡ ಒಂದು. ಹತ್ತು ದಿನಗಳ ಕಾಲ ನಡೆಯುವ ಮೊಹರಂ ಹಬ್ಬ ಮೂಲ ಕರ್ಬಲಾದ ಘಟನೆಗಳ ಸಾಂಕೇತಿಕ ರೂಪವಾಗಿರುತ್ತದೆ. ಹಲವೆಡೆ ಮೂಲದಿಂದ ಭಿನ್ನವಾಗಿ ವಿಶಿಷ್ಠ ಆಚರಣೆಗಳನ್ನು ಅಳವಡಿಸಿಕೊಂಡಿದೆ. ಶೋಕಾಚರಣೆ ಮೂಲ ಉದ್ಧೇಶವಾದರೂ ಮೊಹರಂನ ಹಿನ್ನಲೆ ತಿಳಿದಿರದ ಜನರಲ್ಲಿ ಭಯಭಕ್ತಿಯ ಜೊತೆಗೆ ಸಾಮಾನ್ಯವಾಗಿ ಹಬ್ಬಗಳಲ್ಲಿನ ಸಂಭ್ರಮ ಮನೆ ಮಾಡಿಕೊಂಡಿರುತ್ತದೆ. ಹಬ್ಬ ಕುರಿತಂತೆ ತಿಳುವಳಿಕೆಯ ಅಭಾವ ಎಲ್ಲೆಡೆಯೂ ಇದೆಯೆಂದಲ್ಲಾ, ಮುಖ್ಯವಾಗಿ ದೇವರ ಪಂಜಾಗಳನ್ನು ಹೊರುವವರು ಮತ್ತದರ ಹಿಂದಿನ ವರ್ಗಕ್ಕೆ ತಕ್ಕಮಟ್ಟಿಗೆ ವಿವರಗಳ ಅರಿವಿರುತ್ತದೆ. ಮೊಹರಂನ ಅಂತಿಮ ದಿನದಲ್ಲಿ (ಕರ್ಬಲಾದ ಬಲಿದಾನದ ಅಂತಿಮ ಕ್ಷಣಗಳು) ದೇವರು ಹೊಳೆಗೆ ಹೋಗುವ ಸಂಪ್ರದಾಯವಿದೆ. ಇದು ಕರ್ಬಲಾದಲ್ಲಿ ಕಾಲವಾದ ಶರಣರ ಪುಣ್ಯತಿಥಿಯಾಗಿದ್ದು ಘಟಿಸಿ ಹೋದ ಕರ್ಬಲಾದ ದುರಂತಕ್ಕೆ ವಿಷಾದ ಸೂಚಿಸುವ ಹೃದಯ ಸ್ಪರ್ಶಿ ಕ್ಷಣಗಳ ಕಾಲವಾಗಿದೆ. ಹತ್ತು ದಿನಗಳ ಕಾಲ ನಡೆಯುವ ಮೊಹರಂನ ಆರಂಭ ಮಸೀದಿಯ ಮುಂದಿನ ಅಳಾಯಿ (ಅಲಾವಿ) ಕುಣಿತ ತೊಡುವುದರೊಂದಿಗೆ ಆರಂಭವಾಗುತ್ತದೆ. ಅಲ್ಲಿಂದಲೇ ಹಬ್ಬದ ಸಂಭ್ರಮ ಗರಿಬಿಚ್ಚುತ್ತದೆ. ಇದಕ್ಕೆ ಗುದ್ದಲಿ ಹಾಕುವುದು ಎನ್ನುತ್ತಾರೆ. ಆರು ಮಂದಿ ತುರುಕರು ಕೂಡಿ ವಾರೇಲಿ ಚಂದಪ್ಪನ ನೋಡಿ ಗುದ್ದಾಲಿ ಹಾಕೋ ಸಡಗಾರ ಯಮ ಹೊನ್ನೂರು ಸ್ವಾಮಿ ಗುದ್ದಲಾ ಸಡಗಾರ
ಹತ್ತು ಮಂದಿ ತುರುಕರು ಕೂಡಿ ವಾರೇಲಿ ಚಂದಪ್ಪನ ನೋಡಿ ಹಲಗೀಯ ಸಬೂದ ದಿಮಿ ದಿಮಿ|
ಆಚರಣೆ
[ಬದಲಾಯಿಸಿ]ಮುಸ್ಲಿಂ ಬಾಂಧವರೊಡಗೂಡಿ ಗುದ್ದಲಿ ಹಾಕುವುದು ಸಡಗರದ ವಿಷಯ. ಚಂದ್ರ ಕಾಣದಿದ್ದರೆ ಹಬ್ಬದ ಆರಂಭದ ದಿನ ಚಂದ್ರ ಕಾಣುವವರೆಗೂ ಮುಂದುವರೆಯುತ್ತದೆ. ಗುದ್ದಲಿ ಹಾಕುವ ಸಂಪ್ರದಾಯ ಕರ್ಬಲಾದಲ್ಲಿ ಧರ್ಮಯುದ್ಧಕ್ಕೆ ಆಹ್ವಾನವಿತ್ತುದರ ಸಂಕೇತವಾಗಿದೆ. ನಂತರದಲ್ಲಿ ಕ್ರಮವಾಗಿ ಮೂರು ಮತ್ತು ಐದು ದಿನಗಳ ಏಳು ದಿನಗಳಲ್ಲಿ ಫಕೀರರಾಗುತ್ತಾರೆ. ಮುಸ್ಲಿಂರೊಂದಿಗೆ ಹಿಂದೂಗಳೂ ಫಕೀರರಾಗುತ್ತಾರೆ. ಕೆಲವೆಡೆ ಮಾತ್ರ ಮೇಲು ಜಾತಿಯ ಹಿಂದೂಗಳು ಫಕೀರರಾಗುತ್ತಾರೆ. ಖತಲ್ ರಾತ್ರಿಯ ದಿನ ಬಹಳಷ್ಟು ಜನರು ಫಕೀರರಾಗಲು ಇಷ್ಟಪಡುತ್ತಾರೆ. ಹೊಸ ಮಣ್ಣಿನ ಕೊಡಗಳಲ್ಲಿ ಬೆಲ್ಲದ ಪಾನಕ ಹೊತ್ತು ಹಲಗೆಗಳ ಸದ್ದಿನೊಂದಿಗೆ ಕೈಯಲ್ಲಿ ಹಸಿರು ಝಂಡಾಗಳನ್ನು ಹಿಡಿದು ಗುಂಪು ಗುಂಪಾಗಿ ಮಸೀದಿ ಗುಡಿಯ ಮುಂದಿನ ಅಲಾಯಿ ಕುಣಿ ಮತ್ತು ಮಸೀದಿಯನ್ನು ಸುತ್ತುವರೆಯುತ್ತಾ ‘ಸಾಹುಸೇನ ಧೂಲ್ಲೇವ್’ಎಂದು ಕೂಗುತ್ತಾರೆ. ಈ ತೆರನಾದ ಆಚರಣೆ ಬೇರೆ ಬೇರೆ ಕಡೆ ಬೇರೆ ಬೇರೆ ರೀತಿಯಲ್ಲಿರುತ್ತದೆ. ಬೆಲ್ಲದ ಪಾನಕ ಅಥವಾ ಶರಬತ್ ಕೊಡುವ ಉದ್ದೇಶ ಯುಜೀದ್ನ ಕಡೆಯವರು ಮುತ್ತಿಗೆ ಹಾಕಿದಾಗ ಹುಸೇನರ ಪರಿವಾರಕ್ಕೆ ನೀರು ಸಿಕ್ಕದೆ ಪರಿತಾಪ ಪಟ್ಟಿದ್ದನ್ನು ಹಬ್ಬದಲ್ಲಿ ಸ್ಮರಿಸಿ ಅವರ ಸ್ಮರಣೆಯೊಂದಿಗೆ ಜನರಿಗೆ ಹಂಚುವುದಾಗಿದೆ. ತಕ್ಕ ಮಟ್ಟಿನ ವಿಸ್ತಾರದ ಮತ್ತು ಮನುಷ್ಯನಾಳದ ಹೊಂಡದಲ್ಲಿ, ಧಗಧಗಿಸಿವ ಬೆಂಕಿಯ ಸುತ್ತಾ ಅಲಾಯಿ ಕುಣಿತ ಶುರುವಾಗುತ್ತದೆ. ಕಿವಿಗಡಚಿಕ್ಕುವ ಹಲಗೆಗಳ ತಾಳಕ್ಕೆ ಕ್ರಮವಾಗಿ ಹೆಜ್ಜೆ ಹಾಕುತ್ತಾ ಕುಣಿಯುವವರ ಮನಸ್ಸು ಕುಂದುವುದೇ ಅಪರೂಪ. ಎದುರುಗಡೆ ಮಸೀದಿಯೊಳಗೆ ತಲೆಗೆ ಮುಂಡಾಸು ಸುತ್ತಿಕೊಂಡು ಮುಲ್ಲಾರೊಂದಿಗೆ ಏಳೆಂಟು ಜನ ದೇವರ ಪಂಜಾಗಳನ್ನು ಹೊರುವವರು ಕೂತಿರುತ್ತಾರೆ. ಹೊರಗಡೆ ಪೌಳಿಯಂತಹ ಭಾಗದಲ್ಲಿ ಕಿಕ್ಕಿರಿದು ಕೂತ ಸ್ತ್ರೀಯರು ಮತ್ತು ಭಯಭಕ್ತಿಯಿಂದ ಮಸೀದಿಯೊಳಗೆ ನಡೆಯುವ ಪ್ರತಿ ವಿವರಗಳನ್ನು ಸೂಕ್ಷ್ಮವಾಗಿ ವೀಕ್ಷಿಸುತ್ತಾರೆ. ಈ ಬಗೆಯಾಗಿ ವೀಕ್ಷಿಸಿವುದು ಅವರ ಭಕ್ತಿಯ ಒಂದು ಭಾಗವೂ ಹೌದು. ತಾವು ಹರಕೆ ಹೊತ್ತಂತೆ ತಮ್ಮ ಇಷ್ಟಾರ್ಥಗಳು ಈಡೇರಿದುದರ ಫಲವಾಗಿ ಮೊಹರಂ ದೇವರಿಗೆ ಮಾಡಿಸಿ ತಂದ ಬೆಳ್ಳಿಯ ತೊಟ್ಟಿಲು, ಛತ್ರಿಗಳನ್ನು ಅರ್ಪಿಸುವುದು ಈ ವೇಳೆಯಲ್ಲಿಯೆ. ಮೊಹರಂನ ಮುಖ್ಯ ದೇವರನ್ನು ಹೊರುವವರು ಹೆಚ್ಚಾಗಿ ಹಿಂದುಗಳೇ ಆಗಿರುತ್ತಾರೆ. ತಮ್ಮೆದುರುಗಡೆ ಸಾಲಾಗಿ ನಿಂತ ದೇವರುಗಳ ಸನ್ನಿಧಿಯಲ್ಲಿ ಕೂತವರು ಅದರಲ್ಲೂ ಮುಖ್ಯ ದೇವರನ್ನು ಹೊರುವವರು ಭಕ್ತಿಯ ಆವೇಶದಿಂದ ಚಡಪಡಿಸುತ್ತಿರುತ್ತಾರೆ. ಲೋಬಾನದ ಹೊಗೆಯಿಂಧ ಮತ್ತು ಬುಕ್ಕಿಟ್ಟಿನ ಧೂಳಿನಿಂದ ತುಂಬಿದ ಮಸೀದಿಯಲ್ಲಿ ದೇವರು ಮೇಲೇಳುವುದನ್ನು ಕಾಯುತ್ತಾ ಕೂತವರ ನಿಲುವು, ಪೌಳಿಯಂತಹ ಭಾಗದಲ್ಲಿ ಮೌನವಾಗಿ ನೆರೆದ ಭಕ್ತ ಸಮೂಹದೊಂದಿಗೆ ಎದುರುಗಡೆ ಬಿಡುವಿಲ್ಲದೆ ಮುಂದುವರಿಯುವ ಅಲಾಯಿ ಕುಣಿತ. ಇವೆಲ್ಲಾ ಈ ಜನರ ದೈನಂದಿನ ಬದುಕಿನಲ್ಲಿ ಅನುಭವಕ್ಕೆ ಬರದಿರುವಂತಹ ಅಪೂರ್ವ ಅಲೌಕಿಕ ಪರಿಸರವೊಂದನ್ನು ಅನಾವರಣಗೊಳಿಸಿ ಬಿಡುತ್ತವೆ. ಅಲ್ಲಿದ್ದವರ ಲಹರಿಯೆಲ್ಲಾ ಒಮ್ಮುಖವಾಗಿ ದೇವರೆಡೆಗೇ ತುಯ್ಯುವಂತೆ ಪ್ರೇರೇಪಿಸುತ್ತವೆ. ಮೊಹರಂನ ಈ ಕ್ರಿಯೆ ಉಂಟು ಮಾಡುವಂತಹ ಅನನ್ಯತೆಯಿಂದಾಗಿಯೇ ಈ ದೇವರು ಜನರ ಬದುಕಿನಲ್ಲಿ ಬೇರ್ಪಡಿಸಲಾಗದ ಭಾಗವಾಗಿ ಬಿಟ್ಟದ್ದಾನೆ. ಬಹುಶಃ ಇಂತಹ ಅಪೂರ್ವ ಕ್ಷಣಗಳಲ್ಲಿಯೇ ಜರುಗುವ ಅತೀ ಸಾಮಾನ್ಯ ಘಟನೆಗಲೂ ದೈವಿಕ ಅರ್ಥ ಪಡೆದುಕೊಂಡು ಪ್ರಚಲಿತಕ್ಕೆ ಬರುತ್ತವೆನಿಸುತ್ತದೆ. ಮೊಹರಂನ ಮೂಲ ಘಟನೆಗಳಿಗೆ ಸಂಬಂಧ ಪಡೆದು ಎಷ್ಟೋ ವಿವರಗಳು ಈ ಮೂಲಕ ಸೇರಿಕೊಂಡಿರಬಹುದಾಗಿದೆ. ನಿದರ್ಶನಕ್ಕೆ ಖತಲ್ ರಾತ್ರಿಯ ವೇಳೆ ಬೆಳಗಿನಜಾವ ಗುಂಗಾಡಿಯೊಂದು ದೇವರುಗಳ ಸುತ್ತ ಸುತ್ತುವರಿದ ಮೇಲೆಯೇ ದೇವರುಗಳು ಮೇಲೆದ್ದು ಊರಲ್ಲಿ ಸವಾರಿ ಹೊರಡುವೆವೆಂಬ ನಂಬಿಕೆ ಪ್ರಚಲಿತದಲ್ಲಿದೆ.
ಪೂಜಾ ವಿಧಾನ
[ಬದಲಾಯಿಸಿ]ಖತಲ್ ರಾತ್ರಿಯ ದಿನ ಬೆಳಗಿನ ಜಾವ ಎದ್ದ ದೇವರುಗಳು ಊರಲ್ಲಿ ಸವಾರಿ ಹೊರಟು ಅಥವಾ ಊರ ಹೊರಗೆ ದರ್ಗಾಗಳೇನಾದರು ಇದ್ದರೆ ಪಂಜಾಗಳು ಅಲ್ಲಿಗೆ ಹೋಗಿ ಪೂಜೆ ಸಲ್ಲಿಸಿ ಊರಲ್ಲಿ ಸವಾರಿಗೆ ಬರುತ್ತವೆ. ಊರ ಓಣಿಗಳಲ್ಲಿ ಸವಾರಿ ಹೊರಟಾಗ ಜನರ ಭಕ್ತಿಯ ಪ್ರದರ್ಶನಕ್ಕೊಂದು ತಿರುವು ಮೂಡುತ್ತದೆ. ತುಂಬಿದ ಕೊಡಗಳಿಂದ ಮನೆಯ ಮುಂದೆ ನೆರೆದ ಹೆಂಗೆಳೆಯರು ದೇವರ ಕಾಲಿಗೆ ನೀರು ಸುರುವಿ ಊದುಬತ್ತಿ ಹಚ್ಚಿ ನಮಿಸುತ್ತಾರಲ್ಲದೆ, ಮೊಹರಂನ ಮುಖ್ಯ ಪಂಜಾ ಹೊತ್ತವರಿಗೆ ತಮ್ಮನ್ನು ತುಳಿದು ಹೋಗಲು ಹೇಳುತ್ತಾರೆ. ಅದುಕ್ಕೂ ಮುಂಚೆ ಗುಡಿಯಿಂದ ದರ್ಗಾಕ್ಕೆ ಹೊರಟಾಗ ಸಂತನಿಗೆ ನಮಿಸುತ್ತಾರೆ. ಆ ವೇಳೆಯಲ್ಲಿ ಐದಾರು ಜನರು ಹಿರಿಯರೊಡಗೂಡಿ 'ಮೊಹರಂ'ನ ಮುಖ್ಯ ದೇವರು ದರ್ಗಾದ ಪಶ್ಚಿಮ ದಿಕ್ಕಿಗೆ ಸುಮಾರು ದೂರ ಆವೇಶದಿಂದ ಓಟದ ನಡಿಗೆಯಲ್ಲಿ ಸಾಗುತ್ತಾದೆ. ಅವರ ಹಿಂದೆ ಪಂಜು ಹಿಡಿದವರು, ನವಿಲು ಗರಿ ಬೀಸಿದವರು ಮಾತ್ರ ಹೋಗಬೇಕು. ಮೊಹರಂ ದೇವರುಗಳು ಸವಾರಿ ಹೊರಟಾಗ ಇತರ ದೇವತೆಗಳ ಗುಡಿಗೆ ಭೇಟಿ ಕೊಡುವುದಲ್ಲದೆ ಹೇಳಿಕೆ (ಕಾರಣಿಕ) ಹೇಳುವಾಗ ಯಾವುದಾದರೊಂದು ದೇವಸ್ಥಾನವನ್ನು ಆರಿಸಿಕೊಳ್ಳುವುದು ವಾಡಿಕೆ. ಕೆಲವು ಊರಲ್ಲಂತು ಮೊಹರಂ ದೇವರ ಹೇಳಿಕೆ ರಾಮನ ಭಕ್ತ ಆಂಜನೇಯನ ಗುಡಿಯಲ್ಲೇ ನಡೆಯಬೇಕು. ಮಳೆ ಹಾಗೂ ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಕೇಳುವುದು ಸರ್ವೇಸಾಮಾನ್ಯ.
ಸಂಬಂಧ
[ಬದಲಾಯಿಸಿ]ಊರೊಟ್ಟಿನ ಸಮಸ್ಯೆಗಳನ್ನು ವಿವರಿಸಿ ಅದಕ್ಕೆ ಪರಿಹಾರ ಹತ್ತಿರದಲ್ಲಿದೆಯೋ ದೂರದಲ್ಲಿದೆಯೋ ಎಂಬ ವಿಷಯದ ಬಗ್ಗೆ ಹೆಚ್ಚಿನ ಆಸ್ಥೆ ಬಹುತೇಕ ಹಿರಿಯರದಾಗಿರುತ್ತದೆ. ಇಂತಹ ಸಂದಂರ್ಭಗಳಲ್ಲಿ ದೇವರು ಮನುಷ್ಯ ಸಹಜವಾಗಿ ವರ್ತಿಸಿ ಅದಾಗದೆಂದು ಪಟ್ಟು ಹಿಡಿಯುವುದು. ಅಲ್ಲಿನ ಭಕ್ತರೆಲ್ಲಾ ಇದು ಆಗಲೇಬೇಕೆಂದು ಹಠ ಹಿಡಿಯುವುದು ಆ ಪರಿಸರದಿಂದ ಹೊರಗೆ ನಿಂತ್ತು ನೋಡುವವನಿಗೆ ಬಹು ಮೋಜಿನದಾಗಿ ಕಂಡುಬರುತ್ತದೆ. ಇಲ್ಲಿ ದೇವರ ಮತ್ತು ಭಕ್ತ ವೃಂದದ ಸಂಬಂಧ ತಂದೆ ಮಕ್ಕಳ ಬಾಂಧವ್ಯವಾಗಿ, ತಂದೆ ಮಕ್ಕಳ ಮೇಲೆ ಕೋಪಿಸಿಕೊಂಡಾಗ ವರ್ತಿಸುವಂತೆ ದೇವರೂ ಹಠ ಮಾರಿಯಾಗಿ ಚಂಡಿ ಹಿಡಿಯುವುದು ಮನೋಜ್ಞವಾಗಿರುತ್ತದೆ. ಇಂತಹ ಬೇಡಿಕೆಗಳಾವುವು ಸ್ವಂತದ್ದಾಗಿರದೆ ಹೆಚ್ಚಾಗಿ ಸಾರ್ವಜನಿಕವಾಗಿರುತ್ತವೆ.
ಕಾರಣಿಕ
[ಬದಲಾಯಿಸಿ]ಇಸ್ಲಾಂನ ಹುಟ್ಟು ಶಾಂತಿಯ ಮೂಲಕ ವಾದರು ಕೂಡ ಇಸ್ಲಾಂನ ವಿಸ್ತಾರ ಖಡ್ಗದ ಮೂಲಕ ಸಾವಿರಾರು ಮುಗ್ದ ಜೀವಿಗಳ ಹತ್ಯೆ ಯಿಂದ ವಾಯಿತ್ತು ಇಸ್ಲಾಂ ಧರ್ಮ ವನ್ನು1400 ಹಿಂದೆ ಮೊಹಮ್ಮದ್ ಪೈಗಂಬರು ಸ್ಥಾಪಿಸಿದರು ಪೈಗಂಬರರು ಒಬ್ಬ ಧಾರ್ಮಿಕ ನಾಯಕರು ಮತ್ತು ರಾಜಕೀಯ ನಾಯಕರಾಗಿದ್ದರು , ಇವರು ದೇವರ ಸಂದೇಶವನ್ನು ದೇವ ಕನ್ಯೆ ಗೇಬ್ರಿಲ್ ದಿಂದ ತಿಳಿದು ಪವಿತ್ರ ರಂಜಾನ ಮಾಸದಲ್ಲಿ ಕುರಾನ್ ಬರೆದರು ,ಇವರು ಬರೆದ ಈ ಮೂಲ ಕುರಾನನ್ನು ಮೆಕ್ಕಾ ಕುರಾನ್ ಪಾಠಗಳು ಎಂದು ಕರೆಯುತ್ತಾರೆ ಇದು ಶಾಂತಿ ಸಾರುವ ಕುರಾನ್ ಎಂದು ನಂಬಲಾಗಿದೆ. ನಂತರ ಇಸ್ಲಾಂ ಧರ್ಮದ ವಿಸ್ತಾರಕ್ಕೆ ಸೌದಿ ಅರೇಬಿಯಾದ ಮೂಲ ನಿವಾಸಿಗಳು ವಿರೋಧ ವ್ಯಕ್ತಪಡಿಸಿದಾಗ ,ಪೈಗಂಬರರು ಮೆಕ್ಕಾ ದಿಂದ ಮದೀನಾಕ್ಕೆ ವಲಸೆ ಬಂದರು ಆ ನಂತರ ರಾಜಕೀಯ ಪ್ರೇರನಿಯಿಂದ ಬಂದ ಕುರಾನ್ ನ್ನು ಮದೀನಾ ಕುರಾನ್ ಪಾಠಗಳೆಂದು ಕರೆಯಲಾಗುತ್ತದೆ,ಮದೀನಾ ಕುರಾನ್ ದ್ವೇಷ ಅಶಾಂತಿ ಸಾರುವ ಕುರಾನ್ಎಂದು ಗುರುತಿಸಲಾಗಿದೆ. ಸಿರಾ ಮತ್ತು ಹದಿತ್ ಗಳು ಇಸ್ಲಾಂನ ಪವಿತ್ರ ಗ್ರಂಥಗಳೆಂದು ಕರೆಯಲಾಗುತ್ತವೆ.
ಒಬ್ಬ ಸತ್ಯ ವಿಶ್ವಾಸಿ (ಮುಸ್ಲಿಂ) ಈ 3 ಗ್ರಂಥಗಳನ್ನು ಓದುವ ಮೂಲಕ ಯುದ್ದಕ್ಕೆ ಅಥವಾ ಇಸ್ಲಾಂ ನ ವಿಸ್ತಾರಕ್ಕಾಗಿ ಮಾಡ ಬೇಕಾದ ಕಾರ್ಯಗಳ ಬಗ್ಗೆ ಮಾಹಿತಿ(ಜಿಹಾದ್) ಪಡೆಯುತ್ತಾನೆ.
ಇಸ್ಲಾಂ ದ್ವೇಷ ರಕ್ತ ಪಾತ ಅಶಾಂತಿ ಯಿಂದ ಮುಂದೆ ವಿಸ್ತಾರ ವಾಗಿದ್ದು ಇತಿಹಾಸ . ಪೈಗಂಬರ ಕಾಲದಲ್ಲಿ ಇಡೀ ಸೌದಿ ರಾಷ್ಟ್ರಗಳು ಇಸ್ಲಾಮಿಕರ ಗೊಂಡವು. ಮುಂದೆ ಪೈಗಂಬರ ಮರಣಾ ನಂತರ
ರಾಜಕೀಯ ನಾಕತ್ವಕ್ಕಾಗಿ ಪೈಗಂಬರ ಅನುವಾಯಿಗಳಲ್ಲಿ ದ್ವೇಷ ಹುಟ್ಟಿ ,ಇಂದಿನ ಇರಾಕನ ಕರ್ಬಲಾ ದಲ್ಲಿ ಯುದ್ಧ ನಡೆಯಿತು. ಆ ಯುದ್ಧ ಪೈಗಂಬರ ಅನುಯಾಯಿಗಳಾದ 3 ಜನ ಇಮಾಮಗಳ ಬೆಂಬಲಿಗರ (ಸುನ್ನೀಗಳು) ಮತ್ತು ಪೈಗಂಬರರ ಮೊಮ್ಮಗ ಹಜರತ ಅಲಿ(ಶಿಯಾಗಳ ) ಬೆಂಬಲಿಗರ ನಡುವೆ ನಡೆಯಿತು, ಆ ಯುದ್ಧ ದಲ್ಲಿ ಹಜರತ ಅಲಿ ಹುತಾತ್ಮರಾಗಿ ಸುನ್ನೀಗಳ ಜಯವಾಯಿತು ,ಅಂದಿನಿಂದ ಸುನ್ನೀಗಳ ಪ್ರಾಬಲ್ಯ ಹೆಚ್ಚಾಯಿತು. ಅಂದಿನಿಂದ ಇಸ್ಲಾಂ ಸುನ್ನಿ ಇಸ್ಲಾಂ ಮತ್ತು ಶಿಯಾ ಇಸ್ಲಾಂ ಎಂದು ವಿಭಜನೆಯಾಗಿದೆ.
ಸುನ್ನೀಗಳು ಇಂದಿಗೂ ಶಿಯಾಗಳನ್ನು ಹತ್ಯೆ ಮಾಡುತ್ತಿದ್ದಾರೆ.
ಜಗತ್ತಿನಲ್ಲಿ ಇಂದು ಇರಾಕ್ ಮತ್ತು ಇರಾನ್ ಶಿಯಾ ಬಹುಸಂಖ್ಯಾತ ರಾಷ್ಟ್ರಗ ಳಾಗಿವೆ ಇರಾನ್ ಪ್ರಬಲ ಸೌದಿ ಅರೇಬಿಯಾ ವಿರೋಧಿ ರಾಷ್ಟ್ರವಾಗಿದೆ...
ಭಾರತದಲ್ಲಿ ಹಲವು ಮುಸ್ಲಿಂ ಮೌಲ್ವಿಗಳು ಹಲವು ಬಾರಿ ಹಿಂದೂ ಪರ ,ಭಾರತದ ಪರ, ಬಿಜೆಪಿ ಪರ ,rss ಪರ ,ರಾಮ ಮಂದಿರದ ಪರ ,ಹೇಳಿಕೆ ನಿಡುವವರು ಶಿಯಾ ಮೌಲ್ವಿಗಳಾಗಿರುತ್ತಾರೆ
ಭಾರತದಲ್ಲಿ ಶಿಯಾಗಳನ್ನು ಗುರುತಿಸುವುದು ಹಿಂದುಗಳಿಗೆ ಅನಿವಾರ್ಯವಾಗಿದೆ.
ಮೊಹರಂನ್ನ ಶಿಯಾಗಳು ಹುತಾತ್ಮರಾದ ಹಜರತ ಅಲಿ ಯ ಬಲಿದಾನ ದಿನವಾಗಿ ಆಚರಿಸುತ್ತಾರೆ, ಇದನ್ನು ಸುನ್ನೀಗಳು ಪ್ರಬಲವಾಗಿ ವಿರೋಧಿಸುತ್ತಾರೆ. ಕಾರಣಿಕವನ್ನು ಪಾಜಿಯಾದ ಮೆರವಣಿಗೆಯ ದಿನದಂದು ನಡೆಸಲಾಗುವುದು. ಪಾಜಿಯಾಕ್ಕೆ ಹೆಚ್ಚಾಗಿ ಈ ಭಾಗದಲ್ಲಿನ ಹಿಂದುಗಳು ದೇವರ ಪೆಟ್ಟಿಗೆಯೆಂದು ಕರೆಯುತ್ತಾರೆ. ಈ ಮೆರವಣಿಗೆ ಎಲ್ಲಾ ಕಡೆಗೂ ಕಡ್ಡಾಯವಾಗಿ ನಡೆಯಬೇಕೆಂದಿಲ್ಲ. ಖತಲ್ ರಾತ್ರಿಯ ಮರುದಿನ ಅಲಾಯಿ ಕುಣಿ ಮುಚ್ಚುವುದರೊಂದಿಗೆ ಕೆಲವೆಡೆ ಹಬ್ಬ ಮುಕ್ತಾಯಗೊಳ್ಳುತ್ತದೆ. ಖತಲ್ ರಾತ್ರಿಯ ಮರುದಿನ ದೇವರು ಹೊಳೆಗೆ ಹೋಗಿ ಬಂದ ಮೇಲೆ ಪಂಜಾಗಳ ಮೇಲಿನ ವಸ್ತ್ರ, ಆಭರಣಗಳನ್ನು ಕಳಚಿ ಪೆಟ್ಟಿಗೆಯಲ್ಲಿಟ್ಟು ಮರುದಿನ ಮೆರವಣಿಗೆ ಮಾಡುವಂತಿದ್ದರೆ ಅದನ್ನು ಮುಗಿಸಿ ಮಸೀದಿಯಲ್ಲಿ ತೂಗು ಹಾಕುತ್ತಾರೆ. ಮುಂದಿನ ಹಬ್ಬದಲ್ಲಿ ಇದೇ ಪಾಜಿಯಾವನ್ನು ಬಳಸುತ್ತಾರೆ. ಕೆಲವೆಡೆ ಪಾಜಿಯಾದ ಬೆಲೆ ಬಾಳುವ ಭಾಗಗಳನ್ನು ಬೇರ್ಪಡಿಸಿ ನೆಲದಲ್ಲಿ ಹೂಳೂತ್ತಾರೆ.
ಉಲ್ಲೇಖ
[ಬದಲಾಯಿಸಿ]- ಸಂಪಾದಕರು: ಹಿ. ಚಿ. ಬೋರಲಿಂಗಯ್ಯ, ಕರ್ನಾಟಕ ಜನಪದ ಕಲೆಗಳ ಕೋಶ, ಕನ್ನಡ ವಿಶ್ವವಿದ್ಯಾಲಯ. ಹಂಪಿ, ಪುಟ: ೧೧೫-೧೧೭