ಹಿ. ಚಿ. ಬೋರಲಿಂಗಯ್ಯ

ವಿಕಿಪೀಡಿಯ ಇಂದ
Jump to navigation Jump to search
ಹಿ. ಚಿ. ಬೋರಲಿಂಗಯ್ಯ
ಜನನಅಕ್ಟೋಬರ್ 25, 1955
ಹಿತ್ತಲಪುರ, ಕುಣಿಗಲ್ ತಾಲ್ಲೂಕು, ತುಮಕೂರು ಜಿಲ್ಲೆ, ಕರ್ನಾಟಕ
ವೃತ್ತಿಲೇಖಕ, ಪ್ರಾಧ್ಯಾಪಕ, ಕುಲಸಚಿವ, ಕುಲಪತಿ
ರಾಷ್ಟ್ರೀಯತೆಭಾರತೀಯ
ವಿಷಯಜಾನಪದ

ಜಾನಪದ ವಿದ್ವಾಂಸ, ಲೇಖಕ, ಪ್ರಾಧ್ಯಾಪಕ ಡಾ. ಹಿ. ಚಿ.ಬೋರಲಿಂಗಯ್ಯ(Dr. H. C. Boralingaiah)ನವರು ಹಂಪಿಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದರು.

ಜನನ[ಬದಲಾಯಿಸಿ]

ಡಾ. ಹಿ.ಚಿ.ಬೋರಲಿಂಗಯ್ಯ ಅವರು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ 'ಹಿತ್ತಲಪುರ' ಗ್ರಾಮದಲ್ಲಿ ಅಕ್ಟೋಬರ್ 25, 1955ರಂದು ಜನಿಸಿದರು. ತಂದೆ ಚಿಕ್ಕಣ್ಣ, ತಾಯಿ ಕಾಳಮ್ಮ.

ವಿದ್ಯಾಭ್ಯಾಸ[ಬದಲಾಯಿಸಿ]

 • ಹಿ.ಚಿ.ಬೋರಲಿಂಗಯ್ಯನವರ ಪ್ರಾಥಮಿಕ ಶಿಕ್ಷಣ ಹಿತ್ತಲಪುರ, ಉಜ್ಜನಿಗಳಲ್ಲಿ ನಡೆಯಿತು. ಅವರು ತಮ್ಮ ಪ್ರೌಢಶಿಕ್ಷಣವನ್ನು ಹುಲಿಯೂರುದುರ್ಗದಲ್ಲಿ ಮುಗಿಸಿದರು. ಮುಂದೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಂದುವರೆಸಿ 1981ರಲ್ಲಿ ಜಿ.ಪಿ.ರಾಜರತ್ನಂ ಚಿನ್ನದ ಪದಕದೊಂದಿಗೆ ಕನ್ನಡ ವಿಷಯದಲ್ಲಿ ಎಂ.ಎ. ಪದವಿ ಪಡೆದರು.
 • 'ವಿಸ್ಮೃತಿ ಮತ್ತು ಸಂಸ್ಕೃತಿ: ಒಂದು ಬುಡಕಟ್ಟಿನ ಲೋಕದೃಷ್ಟಿ ಹಿನ್ನೆಲೆಯಲ್ಲಿ ಸಂಸ್ಕೃತಿ ಚರ್ಚೆ' ಎಂಬ ಸಂಪ್ರಬಂಧಕ್ಕಾಗಿ ಕನ್ನಡ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಕಾಯದಿಂದ ಪಿಎಚ್‍.ಡಿ. ಪದವಿ ಪಡೆದರು.

ವೃತ್ತಿಜೀವನ[ಬದಲಾಯಿಸಿ]

ಹಲವು ಹುದ್ದೆಗಳಲ್ಲಿ[ಬದಲಾಯಿಸಿ]

ಸದಸ್ಯರಾಗಿ[ಬದಲಾಯಿಸಿ]

 • 1998ರಿಂದ 2001ರವರೆಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ
 • 2000ದಿಂದ 2003ರವರೆಗೆ ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಸದಸ್ಯರಾಗಿ

ಸೇವೆ ಸಲ್ಲಿಸಿದ್ದಾರೆ.

ಮಾರ್ಗದರ್ಶನ[ಬದಲಾಯಿಸಿ]

 • 12 ಪಿಎಚ್.ಡಿ. ವಿದ್ಯಾರ್ಥಿಗಳಿಗೆ
 • 6 ಎಂ.ಫಿಲ್. ವಿದ್ಯಾರ್ಥಿಗಳಿಗೆ

ಮಾರ್ಗದರ್ಶನ ಮಾಡಿದ್ದಾರೆ.

ಪ್ರಕಟಣೆ[ಬದಲಾಯಿಸಿ]

 • 22 ಕೃತಿಗಳನ್ನೂ, ಕನ್ನಡ ಹಾಗೂ ಇಂಗ್ಲಿಷಿನಲ್ಲಿ 82 ಲೇಖನಗಳನ್ನೂ ಪ್ರಕಟಿಸಿದ್ದಾರೆ.
 • 1985ರಿಂದ 1991ರವರೆಗೆ ಕರ್ನಾಟಕ ಜಾನಪದ ಅಕಾಡೆಮಿಯ 'ಜಾನಪದ ಗಂಗೋತ್ರಿ' ನಿಯತಕಾಲಿಕದ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.

ವಿಚಾರ ಸಂಕಿರಣಗಳಲ್ಲಿ[ಬದಲಾಯಿಸಿ]

 • ಇಟಲಿ, ಹಾಲೆಂಡ್, ಫ್ರಾನ್ಸ್, ಇರಾನ್ ದೇಶಗಳಲ್ಲಿ ನಡೆದ ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡಿದ್ದಾರೆ.

ಸಾಹಿತ್ಯ ಸೇವೆ[ಬದಲಾಯಿಸಿ]

ಡಾ. ಹಿ. ಚಿ. ಬೋರಲಿಂಗಯ್ಯನವರು 22 ಕೃತಿಗಳನ್ನೂ, ಕನ್ನಡ ಹಾಗೂ ಇಂಗ್ಲಿಷಿನಲ್ಲಿ 82 ಲೇಖನಗಳನ್ನೂ ಪ್ರಕಟಿಸಿದ್ದಾರೆ.

 1. ಉಜ್ಜನಿ ಚೌಡಮ್ಮ
 2. ಮಂಟೇಸ್ವಾಮಿ
 3. ಮಂಟೇಸ್ವಾಮಿ ಮಹಾಕಾವ್ಯ
 4. ಗಿರಿಜನ ಕಾವ್ಯ
 5. ಸಿದ್ಧಿಯರ ಸಂಸ್ಕೃತಿ
 6. ಕಾಡು ಕಾಂಕ್ರೀಟ್ ಮತ್ತು ಜಾನಪದ
 7. ದಾಸಪ್ಪ-ಜೋಗಪ್ಪ
 8. ಬುಡಕಟ್ಟು ದೈವಾರಾಧನೆ
 9. ಹಾಲಕ್ಕಿ ಒಕ್ಕಲಿಗರ ಜ್ಞಾನ ಪರಂಪರೆ
 10. ತಿಮ್ಮಪ್ಪಗೊಂಡ ಹಾಡಿಕ ಗೊಂಡರ ರಾಮಾಯಣ
 11. ವಿಸ್ಮೃತಿ ಮತ್ತು ಸಂಸ್ಕೃತಿ: ಒಂದು ಬುಡಕಟ್ಟಿನ ಲೋಕದೃಷ್ಟಿ ಹಿನ್ನೆಲೆಯಲ್ಲಿ ಸಂಸ್ಕೃತಿ ಚರ್ಚೆ
 12. ಗಿರಿಜನ ನಾಡಿಗೆ ಪಯಣ
 13. ಗಿರಿಜನರು
 14. ವೈ.ಕೆ.ರಾಮಯ್ಯ: ಬದುಕು ಮತ್ತು ಸಾಧನೆ
 15. ಸುವರ್ಣ ಕರ್ನಾಟಕ ಅಭಿವೃದ್ಧಿ ಪಥ
 16. ನಮ್ಮೊಳಗೊಂದು ಪುಟ್ಟ ಆಫ್ರಿಕಾ
 17. ದೇಸೀ ಸಂಸ್ಕೃತಿ ಸಂಕಥನ

ಸಂಪಾದಿತ ಕೃತಿಗಳು[ಬದಲಾಯಿಸಿ]

 1. ಕರ್ನಾಟಕದ ಜನಪದ ಕಲೆಗಳ ಕೋಶ
 2. ಪ್ರಶಸ್ತಿ ಪಡೆದ ಮಹನೀಯರು
 3. ಕರ್ನಾಟಕ ಜಾನಪದ
 4. ಬುಡಕಟ್ಟು ರಾಮಾಯಣ
 5. ಕಾಗೋಡು ಚಳವಳಿ
 6. ಸಂಸದೀಯ ಪಟು ವೈ. ಕೆ. ರಾಮಯ್ಯ

ಪ್ರಶಸ್ತಿ-ಗೌರವ[ಬದಲಾಯಿಸಿ]

 1. ಡಾ. ಹಿ. ಚಿ. ಬೋರಲಿಂಗಯ್ಯನವರಿಗೆ 2003ರಲ್ಲಿ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ 'ಜಾನಪದ ತಜ್ಞ' ಪ್ರಶಸ್ತಿ(ಜೀವಮಾನದ ಸಾಧನೆಗಾಗಿ),
 2. 2004ರಲ್ಲಿ ಮಂಟೇಸ್ವಾಮಿ ಸಾಹಿತ್ಯ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ,
 3. ಬರೋಡದ ಭಾಷಾ ಸಂಶೋಧನಾ ಕೇಂದ್ರದ ಪ್ರಶಸ್ತಿ,
 4. ಹೊನ್ನಾವರದ ಜಾನಪದ ಪ್ರಕಾಶನದ 'ಶಿವರಾಮ ಕಾರಂತ ಪ್ರಶಸ್ತಿ',
 5. ಗುಂಡ್ಮಿ ಜಾನಪದ ಪ್ರಶಸ್ತಿ ಸಂದಿವೆ.
 6. 2015 ಜನವರಿ 16ರಂದು ನಡೆದ ಕುಣಿಗಲ್ ತಾಲ್ಲೂಕು ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.