ವಿಷಯಕ್ಕೆ ಹೋಗು

ಕೊಲಾಮಿ ಭಾಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಕೊಲಾಮಿ
कॊलामि, कोलावा
ಬಳಕೆಯಲ್ಲಿರುವ 
ಪ್ರದೇಶಗಳು:
ಭಾರತ 
ಪ್ರದೇಶ: ಮಹಾರಾಷ್ಟ್ರ, ತೆಲಂಗಾಣ, ಮಧ್ಯಪ್ರದೇಶ
ಒಟ್ಟು 
ಮಾತನಾಡುವವರು:
128,451, 54% of ethnic population
ಭಾಷಾ ಕುಟುಂಬ:
 ಮಧ್ಯ
  ಕೊಲಾಮಿ-ನಾಯ್ಕಿ
   ಕೊಲಾಮಿ 
ಬರವಣಿಗೆ: ದೇವನಾಗರಿ,

ತೆಲುಗು ಲಿಪಿ, • ಗೋಯ್ಕನಾಡಿ

ಭಾಷೆಯ ಸಂಕೇತಗಳು
ISO 639-1: ಯಾವುದೂ ಇಲ್ಲ
ISO 639-2: ಸೇರಿಸಬೇಕು
ISO/FDIS 639-3: either:
kfb – ವಾಯುವ್ಯ ಕೊಲಾಮಿ
nit – ಆಗ್ನೇಯ ಕೊಲಾಮಿ (ನಾಯ್ಕಿ)

ಕೊಲಾಮಿ (ವಾಯುವ್ಯ ಕೊಲಾಮಿ/ಆಗ್ನೇಯ ಕೊಲಾಮಿ) ಕೊಲವ ಎಂದೂ ಕರೆಯಲ್ಪಡುವ ಇದು ಭಾರತದ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಮಾತನಾಡುವ ಬುಡಕಟ್ಟು ಮಧ್ಯ ದ್ರಾವಿಡ ಭಾಷೆಯಾಗಿದೆ.[] ಇದು ಕೊಲಾಮಿ-ನಾಯ್ಕಿ ಭಾಷೆಗಳ ಗುಂಪಿನ ಅಡಿಯಲ್ಲಿ ಬರುತ್ತದೆ. ಇದು ಅತ್ಯಂತ ವ್ಯಾಪಕವಾಗಿ ಮಾತನಾಡುವ ಮಧ್ಯ ದ್ರಾವಿಡ ಭಾಷೆಯಾಗಿದೆ.[] []

ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳ ವರ್ಧಾ, ಯೋತ್‍ಮಾಲ್, ಅದಿಲಾಬಾದ್ ಮತ್ತು ಮಹಾರಾಷ್ಟ್ರದ ಚಂದ ಮೊದಲಾದ ಜಿಲ್ಲೆಗಳಲ್ಲಿ ಕೊಲಾಮಿಗಳು ಬಳಸುತ್ತಿರುವ ಒಂದು ದ್ರಾವಿಡಭಾಷೆ. 1951ರ ಭಾರತ ಜನಗಣತಿಯ ಪ್ರಕಾರ ಈ ಭಾಷೆಯನ್ನಾಡುವ ಜನಸಂಖ್ಯೆ 45,000.[] ಇದಕ್ಕೆ ಸಂಬಂಧಿಸಿದಂತೆ ಅನೇಕ ಉಪಭಾಷೆಗಳಿವೆ. ಆದರೆ ಎಷ್ಟು ಉಪಭಾಷೆಗಳಿವೆ, ಎಷ್ಟರಮಟ್ಟಿಗೆ ಕೊಲಾಮಿಯಿಂದ ಅವು ಭಿನ್ನವಾಗಿವೆ ಎಂಬುದನ್ನು ಇನ್ನೂ ಹೆಚ್ಚಿನ ಸಂಶೋಧನೆ ನಡೆಸಿ ನಿರ್ಧರಿಸಬೇಕಾಗಿದೆ. ದೊರೆತಿರುವ ಸಾಮಗ್ರಿಯಲ್ಲಿ ಅಧಿಕೃತ ಮತ್ತು ಅಧಿಕ ಪರಿಮಾಣದ್ದೆನ್ನಬಹುದಾದುದನ್ನು ವರ್ಧಾ ಜಿಲ್ಲೆಯಿಂದ ಸಂಗ್ರಹಿಸಲಾಗಿದೆ.

ಟಿ.ಬರೊ ಮತ್ತು ಎಮೆನೊ ಅವರ ಕೋಶದಲ್ಲಿ ಅದಿಲಾಬಾದಿನ ಕಿನ್ವತ್‍ನಲ್ಲಿ ಸಂಗ್ರಹಿಸಲಾದ ಕೈಕಿ ಎಂಬ ಭಾಷೆಯನ್ನು ಪ್ರತ್ಯೇಕ ಭಾಷೆಯೆಂದೇ ಹೇಳಲಾಗಿದೆ.[] ಆದರೆ ಇದನ್ನು ಕೊಲಾಮಿಯ ಉಪಭಾಷೆಯಾದ ನಾಯ್ಕಿ ಎಂದು ಪರಿಗಣಿಸಬೇಕೆಂದು ಈಚಿನ ಸಂಶೋಧನೆಗಳು ತೋರಿಸಿವೆ.[]

ಕೊಲಾಮಿ ಭಾಷೆಯನ್ನು ನಾಯ್ಕಿ, ಪರ್ಜಿ ಮತ್ತು ಗದಬ ಉಪಭಾಷೆಗಳೊಂದಿಗೆ ಸೇರಿಸಿ ದ್ರಾವಿಡಭಾಷಾ ಪರಿವಾರದಲ್ಲಿ ಉಪಪರಿವಾರವನ್ನಾಗಿ ಮಾಡಿ ಕೊಲಾಮಿ- ಪರ್ಜಿ ಎಂದು ಕರೆದಿದ್ದಾರೆ. ಈ ಭಾಷೆಯಲ್ಲಿ ಕಂಡುಬರುವ ಕೆಲವು ವಿಶಿಷ್ಟ ಲಕ್ಷಣಗಳು ಇವು : (1) ಮೂಲ ದ್ರಾವಿಡಭಾಷೆಯ * ರ >ದ (* > ಜ) ಆಗಿರುವುದು, (2) ನಾಮಪದಗಳಲ್ಲಿ ಬಹುವಚನ ಪ್ರತ್ಯಯಗಳ ಬೆಳೆವಣಿಗೆ ಮತ್ತು (3) 2 ರಿಂದ 4 ರ ವರೆಗಿನ ಸಂಖ್ಯಾವಾಚಿಗಳಲ್ಲಿನ ತ್ರಿಲಿಂಗ ಪದ್ಧತಿ. ಈ ಉಪಪರಿವಾರ ತೆಲುಗು ಭಾಷೆಯನ್ನೊಳಗೊಂಡ ಮಧ್ಯದ್ರಾವಿಡಭಾಷಾ ಗುಂಪಿಗೆ ಸೇರುತ್ತದೆ. ಮೂಲ ದ್ರಾವಿಡದ *ಣ > ನ ಮತ್ತು * ಳ >ಲ ಗಳ ಪರಿವರ್ತನೆ ಮತ್ತು * ಅವನ್ರು (ದಕ್ಷಿಣ ದ್ರಾವಿಡ ಭಾಷೆಗಳ *ಅವನ್ ರೂಪಕ್ಕೆ ವಿರುದ್ಧವಾದ) ರೂಪದ ನಿರ್ದೇಶಕ ಸರ್ವನಾಮಗಳಲ್ಲಿನ ಪುಲ್ಲಿಂಗ ಏಕವಚನದ ಬೆಳೆವಣಿಗೆಗಳು ಈ ಗುಂಪಿನ ವಿಶಿಷ್ಟ ಲಕ್ಷಣಗಳು. ನಿರ್ದೇಶಕ ಸರ್ವನಾಮದ ಪುಲ್ಲಿಂಗ ಏಕವಚನದ ಈ ರೂಪಗಳೇ ಕೊಲಾಮಿಯ ವಿಶಿಷ್ಟರೂಪಗಳು. ಇದಕ್ಕೆ ಸಂವಾದಿಯಾಗಿ ನಾಯ್ಡಿ ಉಪಭಾಷೆಯು `ಅವೆನ್ದ್ (ಚಿvಟಿಜ ) ಮತ್ತು ಇತರ ಉಪಭಾಷೆಗಳು ವ್ನ್-ಮ್ ಮತ್ತು ಅಮ್ ರೂಪಗಳನ್ನು ಹೊಂದಿವೆ.

ಕೊಲಾಮಿ ಭಾಷೆ ತೆಲುಗು ಮತ್ತು ಮರಾಠಿ ಭಾಷೆಗಳಿಂದ ಸಾಕಷ್ಟು ಶಬ್ದಗಳನ್ನು ಎರವಲು ಪಡೆದಿದೆ. ವರ್ಧಾ ಉಪಭಾಷೆಯಿಂದ ಸಂಗ್ರಹಿಸಿರುವ ಶಬ್ದಗಳಲ್ಲಿ 35% ಭಾಗ ಮರಾಠಿ ಮೂಲದವು.

ಸಾತುಪತಿ ಪ್ರಸನ್ನ ಶ್ರೀಗಳು ಭಾಷೆಯೊಂದಿಗೆ ಬಳಸಲು ವಿಶಿಷ್ಟವಾದ ಲಿಪಿಯನ್ನು ಅಭಿವೃದ್ಧಿಪಡಿಸಿದ್ದಾರೆ.

ವರ್ಗೀಕರಣ

[ಬದಲಾಯಿಸಿ]

ಕೊಲಾಮಿ ಭಾಷೆಯನ್ನು ಕೇಂದ್ರ ದ್ರಾವಿಡ ಭಾಷೆ ಎಂದು ವರ್ಗೀಕರಿಸಲಾಗಿದೆ. ಇದು ಮಹಾರಾಷ್ಟ್ರ ರಾಜ್ಯದ ದ್ರಾವಿಡ ಭಾಷೆ ಎಂದು ಪ್ರಸಿದ್ಧವಾಗಿದೆ. ತೆಲುಗು ಮತ್ತು ಗೊಂಡಿಯಂತಹ ದಕ್ಷಿಣ ಮಧ್ಯ ದ್ರಾವಿಡ ಭಾಷೆಗಳಿಂದ ಚೆನ್ನಾಗಿ ಪ್ರಭಾವಿತವಾಗಿದೆ. ಇದು ಬುಡಕಟ್ಟು ದ್ರಾವಿಡ ಭಾಷೆಯಾಗಿದೆ.

ಗುಣಲಕ್ಷಣಗಳು

[ಬದಲಾಯಿಸಿ]

ಕೊಲಾಮಿಯು ಪುರುಷ ಅಥವಾ ಪುಲ್ಲಿಂಗವಲ್ಲದ ಎರಡು-ಲಿಂಗ ವ್ಯವಸ್ಥೆಯನ್ನು ಹೊಂದಿದೆ. ಕೊಲಾಮಿ ತನ್ನ ಪೂರ್ವಜವಾದ ಪ್ರೊಟೊ-ದ್ರಾವಿಡದಿಂದ ದೂರವಿದ್ದು, ಮಹತ್ವಾಕಾಂಕ್ಷೆಯ ನಿಲುಗಡೆಗಳನ್ನು ಅಭಿವೃದ್ಧಿಪಡಿಸಿದೆ.

ಧ್ವನಿಶಾಸ್ತ್ರ

[ಬದಲಾಯಿಸಿ]

ಸ್ವರಗಳು

[ಬದಲಾಯಿಸಿ]
ಸ್ವರಗಳು []
ನಾಲಗೆ ಮುಂಭಾಗ ನಾಲಗೆ ಮಧ್ಯ ನಾಲಗೆ ಹಿಂಭಾಗ
ಹ್ರಸ್ವ ದೀರ್ಘ ಹ್ರಸ್ವ ದೀರ್ಘ ಹ್ರಸ್ವ ದೀರ್ಘ
ಉನ್ನತ i u
ಮಧ್ಯ e o
ಅವನತ a

ವ್ಯಂಜನಗಳು

[ಬದಲಾಯಿಸಿ]
ವ್ಯಂಜನಗಳು []
ಓಷ್ಠ್ಯ ದಂತ್ಯ ಮೂರ್ಧನ್ಯ ತಾಲವ್ಯ ಕಂಠ್ಯ ಗಲಕುಹರ
ಅನುನಾಸಿಕ m n ɳ ŋ
ಸ್ಪರ್ಷ ಅಘೋಷ p t ʈ t͡ʃ k
ಘೋಷ b d ɖ d͡ʒ ɡ
ಘರ್ಷ ಅಘೋಷ s h
ಘೋಷ z
ಅಂದಾಜು ಕೇಂದ್ರ ʋ j
ಪಾರ್ಶ್ವ l
ಕಂಪಿತ r

ಮಾದರಿ ಪಠ್ಯ

[ಬದಲಾಯಿಸಿ]
ನುಡಿಗಟ್ಟುಗಳು ಇಂಗ್ಲೀಷ್ ಅನುವಾದ ದೇವನಾಗರಿ ತೆಲುಗು
ಇನ್ನೆ ಪೆರ್ ನಿಮ್ಮ ಹೆಸರು ಇನ್ನ ಪರ್ ಇನ್ನೆ ಪೇರ್
ಅನ್ನಿ ಪೆರ್ ನನ್ನ ಹೆಸರು ಅಣ್ಣಾ ಪರ್ ಆನ್ನೆ ಪೇರ್
ಏಯ್ ಹೌದು ಆಯ್ ಆಯ್
ಟೋಟೆಡ್ ಸಂ ತೋಟಾದ್ ತೋಟೆದ್

ವಿಕ್ಷನರಿಯಲ್ಲಿ ಕೊಲಾಮಿ ಸ್ವದೇಶ್ ಪಟ್ಟಿಯನ್ನು ಸಹ ನೋಡಿ.

ಉಲ್ಲೇಖಗಳು

[ಬದಲಾಯಿಸಿ]
  1. "About: Kolami language". dbpedia.org.
  2. "Kolami language | Britannica". www.britannica.com (in ಇಂಗ್ಲಿಷ್).
  3. "Dravidian languages - Nonliterary, South India, Tamil | Britannica". www.britannica.com (in ಇಂಗ್ಲಿಷ್).
  4. Subrahmanyam†, P. S. (2019). "Kolami". The Dravidian Languages. Routledge. doi:10.4324/9781315722580-14/kolami-subrahmanyam%E2%80%A0.
  5. https://aptribes.ap.gov.in/pdfViewer.jsp?pdf=4117&id=digital
  6. https://theswissbay.ch/pdf/Books/Linguistics/Mega%20linguistics%20pack/Dravidian/Kolami%20-%20A%20Dravidian%20Language%20%28Emeneau%29.pdf
  7. Krishnamurti, Bhadriraju (16 January 2003). "The Dravidian Languages" (in ಇಂಗ್ಲಿಷ್). Cambridge University Press.
  8. Reference Krishnamurti, Bhadriraju (2003). The Dravidian Languages. Cambridge University Press. ISBN 978-1-139-43533-8.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: