೮೩ನೇ ಅಕಾಡೆಮಿ ಪ್ರಶಸ್ತಿಗಳು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
 1. REDIRECTTemplate:Infobox film awards

೮೩ನೇ ಅಕಾಡೆಮಿ ಪ್ರಶಸ್ತಿ ಗಳ ಪ್ರದಾನ ಸಮಾರಂಭವನ್ನು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಎಂಡ್ ಸೈನ್ಸಸ್(AMPAS) ಪ್ರಸ್ತುತಪಡಿಸಿತು ಮತ್ತು ಅತ್ಯುತ್ತಮ ೨೦೧೦ರ ಚಲನಚಿತ್ರಗಳನ್ನು ಗೌರವಿಸಿತು. ಇದು ಲಾಸ್‌ಏಂಜಲ್ಸ್, ಹಾಲಿವುಡ್‌ನ ಕೋಡಕ್ ಚಿತ್ರಮಂದಿರದಲ್ಲಿ ೨೦೦೧೧ರ ಫೆಬ್ರವರಿ ೨೭ರಂದು ೫.೩೦ ಅಪರಾಹ್ನ PST/ ೮:೩೦ ರಾತ್ರಿ ESTಸಮಯದಲ್ಲಿ ನೆರವೇರಿತು. ಸಮಾರಂಭದ ಕಾಲದಲ್ಲಿ ೨೪ ಸ್ಪರ್ಧಾತ್ಮಕ ವಿಭಾಗಗಳಲ್ಲಿ ಅಕಾಡೆಮಿ ಪ್ರಶಸ್ತಿಗಳನ್ನು(ಸಾಮಾನ್ಯವಾಗಿ ಆಸ್ಕರ್ಸ್ ಎಂದು ಉಲ್ಲೇಖಿಸಲಾಗುತ್ತದೆ)ವಿತರಿಸಲಾಯಿತು. ಸಮಾರಂಭವನ್ನು ಅಮೆರಿಕದ ABCಟೆಲಿವಿಷನ್ ಪ್ರಸಾರ ಮಾಡಿತು. ನಟರಾದ ಜೇಮ್ಸ್ ಫ್ರಾಂಕೊ ಮತ್ತು ಅನ್ನೆ ಹಾಥ್ವೇ ಸಮಾರಂಭದ ಸಹ ನಿರೂಪಕರಾಗಿದ್ದರು. ಇದು ಇಬ್ಬರಿಗೂ ಮೊದಲನೇ ಬಾರಿಯಾಗಿತ್ತು.[೧]

ಸಂಬಂಧಿಸಿದ ಘಟನೆಗಳಲ್ಲಿ, ಅಕಾಡೆಮಿ ಎರಡನೇ ವಾರ್ಷಿಕ ಗವರ್ನರ್ಸ್ ಪ್ರಶಸ್ತಿಗಳ ಸಮಾರಂಭವನ್ನು ೨೦೧೦ರ ನವೆಂಬರ್ ೧೩ರಂದು ಹಾಲಿವುಡ್ ಮತ್ತು ಹೈಲ್ಯಾಂಡ್ ಕೇಂದ್ರದ ಗ್ರಾಂಡ್ ಬಾಲ್‌ರೂಂನಲ್ಲಿ ಆಯೋಜಿಸಿತು. ೨೦೧೧ರ ಫೆಬ್ರವರಿ ೧೨ರಂದು, ಬೆವರ್ಲಿ ಹಿಲ್ಸ್‌ನ ಬೆವರ್ಲಿ ವಿಲ್‌ಶೈರ್ ಹೊಟೆಲ್ ಸಮಾರಂಭದಲ್ಲಿ ತಾಂತ್ರಿಕ ಸಾಧನೆಗಾಗಿ ಅಕಾಡೆಮಿ ಪ್ರಶಸ್ತಿಗಳನ್ನು ನಿರೂಪಕ ಮಾರಿಸಾ ಟಾಮಿ ಪ್ರಸ್ತುತಪಡಿಸಿದರು.[೨]

ದಿ ಕಿಂಗ್ಸ್ ಸ್ಪೀಚ್ ನಾಲ್ಕು ಪ್ರಶಸ್ತಿಗಳನ್ನು ಎಲ್ಲ ಪ್ರಮುಖ ವಿಭಾಗಗಳಲ್ಲಿ ಗೆದ್ದಿತು. ಉತ್ತಮ ಚಿತ್ರ, ಉತ್ತಮ ನಿರ್ದೇಶಕ, ಉತ್ತಮ ನಟ ಮತ್ತು ಉತ್ತಮ ಮೂಲ ಚಿತ್ರಕಥೆ. ಇನ್‌ಸೆಪ್ಷನ್ ಕೂಡ ನಾಲ್ಕು ಪ್ರಶಸ್ತಿಗಳನ್ನು ಎಲ್ಲವನ್ನೂ ತಾಂತ್ರಿಕ ವಿಭಾಗಗಳಲ್ಲಿ ಗೆದ್ದಿತು.[೩] ಇತರ ಬಹು ವಿಜೇತರಲ್ಲಿ ಮೂರು ಪ್ರಶಸ್ತಿಗಳೊಂದಿಗೆ ಸೋಷಿಯಲ್ ನೆಟ್‌ವರ್ಕ್ ಮತ್ತು ಅಲೈಸ್ ಇನ್ ವಂಡರ್‌ಲ್ಯಾಂಡ್ , ದಿ ಫೈಟರ್ ಮತ್ತು ಟಾಯ್ ಸ್ಟೋರಿ ೩ ತಲಾ ಎರಡು ಪ್ರಶಸ್ತಿಗಳೊಂದಿಗೆ. ಇದರ ಜತೆಗೆ, ಬ್ಲಾಕ್ ಸ್ವಾನ್ , ಇನ್ ಎ ಬೆಟರ್ ವರ್ಲ್ಡ್ , ಇನ್‌ಸೈಟ್ ಜಾಬ್ ,ಮತ್ತು ದಿ ವುಲ್ಫ್‌ಮ್ಯಾನ್ ಪ್ರತಿಯೊಂದೂ ಒಂದು ಪ್ರಶಸ್ತಿಯನ್ನು ಸ್ವೀಕರಿಸಿತು.[೪] ಕಿರು ಚಿತ್ರಗಳಾದ ಗಾಡ್ ಆಫ್ ಲವ್ , ದಿ ಲಾಸ್ಟ್ ಥಿಂಗ್ , ಮತ್ತುಸ್ಟ್ರೇಂಜರ್ಸ್ ನೋ ಮೋರ್ ಆಯಾ ಕಿರು ವಿಷಯದ ವಿಭಾಗಗಳಲ್ಲಿ ಗೆಲುವು ಗಳಿಸಿದವು. ಈ ಪ್ರಸಾರವು ೩೮ ದಶಲಕ್ಷ ವೀಕ್ಷಕರನ್ನು ಸೆಳೆಯಿತು(ಉತ್ತರ ಅಮೆರಿಕದಲ್ಲಿ)ಮತ್ತು ನಿರೂಪಕರು ಮುಖ್ಯವಾಗಿ ನಕಾರಾತ್ಮಕ ವಿಮರ್ಶೆಗಳನ್ನು ಸ್ವೀಕರಿಸಿದರು.

ಪರಿವಿಡಿ

ವಿಜೇತರು ಮತ್ತು ನಾಮಿನಿಗಳು[ಬದಲಾಯಿಸಿ]

೮೩ನೇ ಅಕಾಡೆಮಿ ಪ್ರಶಸ್ತಿಗಳಿಗಾಗಿ ನಾಮಿನಿಗಳನ್ನು(ನಾಮಕರಣ)ಕ್ಯಾಲಿಫೋರ್ನಿಯದ ಬೆವರ್ಲಿ ಹಿಲ್ಸ್‌ನ ಸ್ಯಾಮ್ಯುಯಲ್ ಗೋಲ್ಡ್‌ವಿನ್ ಚಿತ್ರಮಂದಿರದಲ್ಲಿ ೨೦೧೧ರ ಜನವರಿ ೨೫ರಂದು ಪ್ರಕಟಿಸಲಾಯಿತು. ಅಕಾಡೆಮಿಯ ಅಧ್ಯಕ್ಷ ಟಾಮ್ ಶೆರಾಕ್ ಮತ್ತು ನಟಿ ಮೋನಿಕ್ ಇವನ್ನು ಪ್ರಕಟಿಸಿದರು.

ಬಹುಮಟ್ಟಿನ ನಾಮಕರಣಗಳನ್ನು ಸ್ವೀಕರಿಸಿದ ಚಿತ್ರಗಳು ದಿ ಕಿಂಗ್ಸ್ ಸ್ಪೀಚ್ ೧೨ ನಾಮನಿರ್ದೇಶನಗಳೊಂದಿಗೆ, ಅದನ್ನು ಅನುಸರಿಸಿ ಟ್ರೂ ಗ್ರಿಟ್ ೧೦ ನಾಮನಿರ್ದೇಶನಗಳೊಂದಿಗೆ. ವಿಜೇತರನ್ನು ೨೦೧೧ರ ಫೆಬ್ರವರಿ ೨೭ರಂದು ಪ್ರಶಸ್ತಿಗಳ ವಿತರಣೆ ಸಮಾರಂಭದಂದು ಪ್ರಕಟಿಸಲಾಯಿತು.[೫][೬][೭]

ಪ್ರಶಸ್ತಿಗಳು[ಬದಲಾಯಿಸಿ]

ಟಾಮ್ ಹೂಪರ್, ಅತ್ಯುತ್ತಮ ನಿರ್ದೇಶಕ ವಿಜೇತ
ಕಾಲಿನ್ ಫಿರ್ತ್,ಅತ್ಯುತ್ತಮ ನಟ ವಿಜೇತ
ನಟಾಲಿ ಪೋರ್ಟ್‌ಮನ್, ಅತ್ಯುತ್ತಮ ನಟಿ ವಿಜೇತೆ
ಕ್ರಿಸ್ಟಿಯನ್ ಬೇಲ್, ಅತ್ಯುತ್ತಮ ಪೋಷಕ ನಟ ವಿಜೇತ
ಮೆಲ್ಲಿಸಾ ಲಿಯೊ,ಅತ್ಯುತ್ತಮ ಪೋಷಕ ನಟಿ ವಿಜೇತೆ

ವಿಜೇತರನ್ನು ಮೊದಲಿಗೆ ಪಟ್ಟಿ ಮಾಡಲಾಗಿದೆ ಮತ್ತು ದಪ್ಪಕ್ಷರ ಗಳಲ್ಲಿ ಗಮನಸೆಳೆಯಲಾಗಿದೆ.

ಅತ್ಯುತ್ತಮ ಚಿತ್ರ' ಅತ್ಯುತ್ತಮ ನಿರ್ದೇಶಕ
 • ದಿ ಕಿಂಗ್ಸ್ ಸ್ಪೀಚ್'  – ಐಯಾನ್ ಕ್ಯಾನಿಂಗ್,ಎಮಿಲೆ ಶರ್ಮನ್, ಮತ್ತು ಗೆರೆತ್ ಅನ್ವಿನ್
  • 127 ಅವರ್ಸ್'  – ಡ್ಯಾನಿ ಬಾಯ್ಲೆಮತ್ತು ಕ್ರಿಶ್ಚಿಯನ್ ಕಾಲ್ಸನ್
  • ಬ್ಲಾಕ್ ಸ್ವ್ಯಾನ್'  – ಸ್ಕಾಟ್ ಫ್ರಾಂಕ್ಲಿನ್, ಮೈಕ್ ಮೆಡಾವಾಯ್ಮತ್ತು ಬ್ರಿಯಾನ್ ಆಲಿವರ್
  • ದಿ ಫೈಟರ್'  – ಡೇವಿಡ್ ಹಾಬರ್‌ಮ್ಯಾನ್, ಟಾಡ್ ಲೈಬರಹ್‌ಮ್ಯಾನ್ ಮತ್ತು ಮಾರ್ಕ್ ವಾಹಲ್‌ಬರ್ಗ್
  • ಇನ್‌ಸೆಪ್ಷನ್  – ಕ್ರಿಸ್ಟೋಫರ್ ನೊಲಾನ್ ಮತ್ತುಎಮ್ಮಾ ಥಾಮಸ್
  • ದಿ ಕಿಡ್ಸ್ ಆರ್ ಆಲ್ ರೈಟ್'  – ಗ್ಯಾರಿ ಗಿಲ್ಬರ್ಟ್, ಜೆಫ್ರಿ ಲೆವಿ ಹಿಂಟೆ, ಮತ್ತು ಸೆಲೈನ್ ರಾಟ್ರೆ
  • ದಿ ಸೋಷಿಯಲ್ ನೆಟ್ವರ್ಕ್'  – ಡಾನಾ ಬ್ರುನೆಟ್ಟಿ, ಸಿಯನ್ ಚಾಫಿನ್, ಮೈಕೇಲ್ ಡಿ ಲೂಸಾ, ಮತ್ತು ಸ್ಕಾಟ್ ರುಡಿನ್
  • ಟಾಯ್ ಸ್ಟೋರಿ 3  – ಡಾರ್ಲಾ K. ಆಂಡರ್‌ಸನ್
  • ಟ್ರೂ ಗ್ರಿಟ್  – ಎಥಾನ್ ಕೋಯೆನ್, ಜೋಯಿಲ್ ಕೋಯೆನ್, ಮತ್ತು ಸ್ಕಾಟ್ ರುಡಿನ್
  • ವಿಂಟರ್ಸ್ ಬೋನ್  –ಆಲಿಕ್ಸ್ ಮ್ಯಾಡಿಗನ್ ಮತ್ತು ಅನ್ನೆ ರೋಸೆಲ್ಲಿನಿ
 • ಟಾಮ್ ಹೂಪರ್ – ದಿ ಕಿಂಗ್ಸ್ ಸ್ಪೀಚ್
  • ಡ್ಯಾರೆನ್ ಅರೊನೊಫ್‌ಸ್ಕೈ – ಬ್ಲಾಕ್ ಸ್ವ್ಯಾನ್
  • ಎಥಾನ್ ಕೋಯಿನ್ ಮತ್ತು ಜೋಯಿಲ್ ಕೋಯಿನ್ – ಟ್ರೂ ಗ್ರಿಟ್
  • ಡೇವಿಡ್ ಫಿಂಚರ್ – ದಿ ಸೋಷಿಯಲ್ ನೆಟ್ವರ್ಕ್
  • ಡೇವಿಡ್ ಓ.ರಸೆಲ್ – ದಿ ಫೈಟರ್
ಅತ್ಯುತ್ತಮ ನಟ ಅತ್ಯುತ್ತಮ ನಟಿ
 • ಕಾಲಿನ್ ಫಿರ್ತ್ – ದಿ ಕಿಂಗ್ಸ್ ಸ್ಪೀಚ್ ಪ್ರಿನ್ಸ್ ಆಲ್ಬರ್ಟ್ ಡ್ಯೂಕ್ ಆಫ್ ಆರ್ಕ್ / ಕಿಂಗ್ ಜಾರ್ಜ್ VI ಪಾತ್ರದಲ್ಲಿ.
  • ಜೇವಿಯರ್ ಬಾರ್ಡೆಂ – ಬಿಯುಟಿಫುಲ್ ಉಕ್ಸ್‌ಬಾಲ್ ಪಾತ್ರದಲ್ಲಿ
  • ಜೆಫ್ ಬ್ರಿಜಸ್ – ಟ್ರೂ ಗ್ರಿಟ್ ರೂಸ್ಟರ್ ಕಾಗ್‌ಬರ್ನ್ಆಗಿ
  • ಜೆಸ್ಸೆ ಐಸೆನ್‌ಬರ್ಗ್ – ದಿ ಸೋಷಿಯಲ್ ನೆಟ್ವರ್ಕ್ ಮಾರ್ಕ್ ಜಕರ್‌ಬರ್ಗ್ಪಾತ್ರದಲ್ಲಿ
  • ಜೇಮ್ಸ್ ಫ್ರಾಂಕೊ – 127 ಅವರ್ಸ್ ಆರಾನ್ ರಾಲ್‌ಸ್ಟನ್ ಪಾತ್ರದಲ್ಲಿ
 • ನಟಾಲಿ ಪೋರ್ಟ್‌‍ಮನ್ – ಬ್ಲಾಕ್ ಸ್ವ್ಯಾನ್ ನೈನಾ ಸೇಯರ್ಸ್/ದಿ ಸ್ವಾನ್ ಕ್ವೀನ್ ಪಾತ್ರದಲ್ಲಿ
  • ಅನ್ನೆಟೆ ಬೆನಿಂಗ್ – ದಿ ಕಿಡ್ಸ್ ಆರ್ ಆಲ್ ರೈಟ್ ನಿಕ್ ಪಾತ್ರದಲ್ಲಿ
  • ನಿಕೋಲ್ ಕಿಡ್‌ಮ್ಯಾನ್ – ರಾಬಿಟ್ ಹೋಲ್ ಬೆಕ್ಕಾ ಕಾರ್ಬೆಟ್
  • ಜೆನ್ನಿಫರ್ ಲಾರೆನ್ಸ್ – ವಿಂಟರ್ಸ್ ಬೋನ್ ರೀ ಡಾಲಿ ಪಾತ್ರದಲ್ಲಿ
  • ಮಿಶೆಲೆ ವಿಲಿಯಮ್ಸ್ – ಬ್ಲೂ ವಾಲೆಂಟೈನ್ ಸಿಂಡಿ ಪಾತ್ರದಲ್ಲಿ
ಅತ್ಯುತ್ತಮ ಪೋಷಕ ನಟ ಅತ್ಯುತ್ತಮ ಪೋಷಕ ನಟಿ
 • ಕ್ರಿಶ್ಚಿಯನ್ ಬೇಲ್ – ದಿ ಫೈಟರ್ ಡಿಕಿ ಎಕ್ಲಂಡ್ಪಾತ್ರದಲ್ಲಿ
  • ಜಾನ್ ಹಾಕ್ಸ್ – ವಿಂಟರ್ಸ್ ಬೋನ್ ಟಿಯರ್‌ಡ್ರಾಪ್ ಪಾತ್ರದಲ್ಲಿ
  • ಜೆರೆಮಿ ರೆನ್ನೆರ್ – ದಿ ಟೌನ್ ಜೇಮ್ಸ್ "ಜೆಮ್" ಕಫ್ಲಿನ್ ಪಾತ್ರದಲ್ಲಿ
  • ಮಾರ್ಕ್ ರಫಾಲೊ – ದಿ ಕಿಡ್ಸ್ ಆರ್ ಆಲ್ ರೈಟ್ ಪಾಲ್ ಪಾತ್ರದಲ್ಲಿ
  • ಜೆಫ್ರಿ ರಶ್ – ದಿ ಕಿಂಗ್ಸ್ ಸ್ಪೀಚ್ ಲಯೋನೆಲ್ ಲೋಗ್ಪಾತ್ರದಲ್ಲಿ
 • ಮೇಲಿಸ್ಸಾ ಲಿಯ1 – ದಿ ಫೈಟರ್ ಅಲೈಸ್ ವಾರ್ಡ್ ಪಾತ್ರದಲ್ಲಿ
  • ಆಮಿ ಅಡಾಮ್ಸ್ – ದಿ ಫೈಟರ್ ಚಾರ್ಲೀನ್ ಫ್ಲೆಮಿಂಗ್ ಪಾತ್ರದಲ್ಲಿ
  • ಹೆಲೆನಾ ಬಾನ್‌ಹಾಮ್ ಕಾರ್ಟರ್ – ದಿ ಕಿಂಗ್ಸ್ ಸ್ಪೀಚ್ ಎಲಿಜಬೆತ್, ಡಚಸ್ ಆಫ್ ಯಾರ್ಕ್ / ಕ್ವೀನ್ ಎಲಿಜಬೆತ್ ಪಾತ್ರದಲ್ಲಿ
  • ಹೈಲಿ ಸ್ಟೈನ್‌ಫೆಲ್ಡ್ – ಟ್ರೂ ಗ್ರಿಟ್ ಮ್ಯಾಟ್ಟಿ ರೋಸ್ ಪಾತ್ರದಲ್ಲಿ
  • ಜ್ಯಾಕಿ ವೀವರ್ – ಎನಿಮಲ್ ಕಿಂಗ್ಡಂ "ಸ್ಮರ್ಫ್" ಕೋಡಿ
ಅತ್ಯುತ್ತಮ ಸಾಹಿತ್ಯ – ಮೂಲ ಚಿತ್ರಕಥೆ

ಅತ್ಯುತ್ತಮ ಸಾಹಿತ್ಯ-ಮಾರ್ಪಡಿಸಿದ ಚಿತ್ರಕಥೆ.

 • ದಿ ಕಿಂಗ್ಸ್ ಸ್ಪೀಚ್  – ಡೇವಿಡ್ ಸೈಡ್ಲರ್
  • ಅನದರ್ ಇಯರ್  – ಮೈಕ್ ಲೈಗ್
  • ದಿ ಫೈಟರ್  – ಸ್ಕಾಟ್ ಸಿಲ್ವರ್, ಪಾಲ್ ಟಮಾಸಿ, ಮತ್ತು ಎರಿಕ್ ಜಾನ್ಸನ್
  • ಇನ್‌ಸೆಪ್ಷನ್  – ಕ್ರಿಸ್ಟೋಫರ್ ನೋಲಾನ್
  • ದಿ ಕಿಡ್ಸ್ ಆರ್ ಆಲ್ ರೈಟ್  – ಲೀಸಾ ಕೊಲೊಡೆಂಕೊ ಮತ್ತು ಸ್ಟಾರ್ಟ್ ಬ್ಲಮ್‌ಬರ್ಗ್
 • ದಿ ಸೋಷಿಯಲ್ ನೆಟ್ವರ್ಕ್  – ಆರಾನ್ ಸಾರ್ಕಿನ್ ಬೆನ್ ಮೆಜ್ರಿಕ್ ಅವರ ದಿ ಆಕ್ಸಿಡೆಂಟಲ್ ಬಿಲಿಯನೈರ್ಸ್ ನಿಂದ
  • 127 ಅವರ್ಸ್  – ಡ್ಯಾನಿ ಬಾಯ್ಲೆಮತ್ತು ಸೈಮನ್ ಬಿಯೊಫೈ ಆರನ್ ರಾಲ್‌ಸ್ಟನ್ ಅವರ ಬಿಟ್ವೀನ್ ಎ ರಾಕ್ ಎಂಡ್ ಹಾರ್ಡ್ ಪ್ಲೇಸ್ ಪುಸ್ತಕದಿಂದ.
  • ಟಾಯ್ ಸ್ಟೋರಿ 3  –ಮೈಕೇಲ್ ಆರನ್‌ಟ್ , ಜಾನ್ ಲೆಸೆಟರ್, ಆಂಡ್ರಿವ್ ಸ್ಟಾಂಟನ್, ಮತ್ತು ಲೀ ಅನ್‌ಕ್ರಿಚ್; ಟಾಯ್ ಸ್ಟೋರಿ ಮತ್ತು ಟಾಯ್ ಸ್ಟೋರಿ 2 ಆಧರಿಸಿದ ಪಾತ್ರಗಳು.
  • ಟ್ರೂ ಗ್ರಿಟ್  – {1ಎಥಾನ್ ಕೋಯಿನ್ಮತ್ತು ಜೋಯಿಲ್ ಕೋಯಿನ್ ಚಾರ್ಲ್ಸ್ ಪೋರ್ಟಿಸ್ ಅವರಟ್ರೂ ಗ್ರಿಟ್ ನಿಂದ.
  • ವಿಂಟರ್ಸ್ ಬೋನ್  – ಡೆಬ್ರಾ ಗ್ರಾನಿಕ್ ಮತ್ತು ಆನ್ನೆ ರೊಸೆಲಿನಿ ಡೇನಿಯಲ್ ವುಡ್ರೆಲ್ಅವರ ವಿಂಟರ್ಸ್ ಬೋನ್‌ ನಿಂದ.
ಅತ್ಯುತ್ತಮ ಆನಿಮೇಟೆಡ್ ಚಿತ್ರ ಅತ್ಯುತ್ತಮ ವಿದೇಶಿ ಭಾಷೆ ಚಿತ್ರ
 • ಟಾಯ್ ಸ್ಟೋರಿ 3  – ಲೀ ಅನ್‌ಕ್ರಿಚ್
  • ಹೌ ಟು ಟ್ರೈನ್ ಯುವರ್ ಡ್ರಾಗನ್  – ಕ್ರಿಸ್ ಸ್ಯಾಂಡರ್ಸ್ ಮತ್ತು ಡೀನ್ ಡಿ ಬ್ಲಾಯಿಸ್
  • ದಿ ಇಲ್ಯುಷನಿಸ್ಟ್  – ಸಿಲ್ವೈನ್ ಕಾಮೆಟ್
 • ಇನ್ ಎ ಬೆಟರ್ ವರ್ಲ್ಡ್ (ಡೆನ್ಮಾರ್ಕ್) ಡ್ಯಾನಿಷ್, ಸ್ವೀಡಿಷ್, ಮತ್ತು ಇಂಗ್ಲೀಷ್‌ನಲ್ಲಿ – ಸುಸೇನ್ ಬೈರ್ಅವರಿಂದ.
  • ಬ್ಯುಟಿಫುಲ್ (ಮೆಕ್ಸಿಕೊ) ಸ್ಪಾನಿಷ್, ಮ್ಯಾಂಡಾರಿನ್ ಮತ್ತು ವೊಲೊಫ್ – ಅಲೆಜಾಂಡ್ರೊ ಗೊಂಜಾಲೆಜ್ ಇನಾರಿಟ್ಟುಅವರಿಂದ.
  • ಡಾಗ್‌ಟೂಥ್ (ಗ್ರೀಸ್) ಗ್ರೀಕ್ನಲ್ಲಿ– ಯೋರ್ಗಾಸ್ ಲಾಂಥಿಮೋಸ್
  • ಇನ್ಸೆಂಡೀಸ್ (ಕೆನಡಾ) ಫ್ರೆಂಚ್ ಮತ್ತು ಅರೇಬಿಕ್ನಲ್ಲಿ – ಡೆನಿಸ್ ವಿಲ್ಲೆನುವೆ
  • ಔಟ್‌ಸೈಡ್ ದಿ ಲಾ (ಅಲ್ಜೀರಿಯ)ಅರೇಬಿಕ್ ಮತ್ತು ಫ್ರೆಂಚ್ – ರಾಚಿಡ್ ಬೌಚಾರೆಬ್ಅವರಿಂದ
ಅತ್ಯುತ್ತಮ ಸಾಕ್ಷ್ಯಚಿತ್ರ –ಫೀಚರ್ ಅತ್ಯುತ್ತಮ ಸಾಕ್ಷ್ಯಚಿತ್ರ – ಕಿರು ವಿಷಯ
 • ಇನ್‌ಸೈಡ್ ಜಾಬ್  – ಚಾರ್ಲ್ಸ್ H. ಫರ್ಗ್ಯುಸನ್ಮತ್ತು ಆಡ್ರೆ ಮಾರ್ಸ್
  • ಎಕ್ಸಿಟ್ ಥ್ರೂ ದಿ ಗಿಫ್ಟ್ ಶಾಪ್  – ಬ್ಯಾಂಕ್ಸಿ ಮತ್ತು ಜೈಮೆ ಡಿಕ್ರಜ್
  • ಗ್ಯಾಸ್‌ಲ್ಯಾಂಡ್  – ಜಾಶ್ ಫಾಕ್ಸ್ ಮತ್ತು ಟ್ರಿಷ್ ಅಡ್ಲೆಸಿಕ್
  • ರೆಸ್ಟ್ರೆಪೊ  – ಟಿಂ ಹೆದೆರಿಂಗ್ಟನ್ ಮತ್ತು ಸೆಬಾಸ್ಟಿಯನ್ ಜಂಗರ್
  • ವೇಸ್ಟ್ ಲ್ಯಾಂಡ್  – ಲೂಸಿ ವಾಕರ್ ಮತ್ತು ಆಂಗಸ್ ಐನ್‌ಸ್ಲೆ
 • ಸ್ಟ್ರೇಂಜರ್ಸ್ ನೊ ಮೋರ್  – ಕೇರೆನ್ ಗುಡ್‌ಮ್ಯಾನ್ ಮತ್ತು ಕಿರ್ಕ್ ಸೈಮನ್
  • ಕಿಲ್ಲಿಂಗ್ ಇನ್ ದಿ ನೇಮ್  – ಜೆಡ್ ರೋಥ್‌ಸ್ಟೈನ್
  • ಪೋಸ್ಟರ್ ಗರ್ಲ್  –ಸಾರಾ ನೆಸ್ಸನ್
  • ಸನ್ ಕಮ್ ಅಪ್  –ಜೆನ್ನಿಫರ್ ರೆಡ್‌ಫರ್ನ್ ಮತ್ತು ಟಿಂ ಮೆಟ್‌ಜಗರ್
  • ದಿ ವಾರಿಯರ್ಸ್ ಆಫ್ ಕ್ವಿಗ್ಯಾಂಗ್  – ರೂಬಿ ಯಾಂಗ್ ಮತ್ತು ಥಾಮಸ್ ಲೆನನ್
ಅತ್ಯುತ್ತಮ ನೇರ ಕ್ರಿಯೆಯ ಕಿರು ಚಿತ್ರ ಅತ್ಯುತ್ತಮ ಆನಿಮೇಟೆಡ್ ಕಿರುಚಿತ್ರ
 • ಗಾಡ್ ಆಫ್ ಲವ್  – ಲ್ಯೂಕ್ ಮೆಥೇನಿ
  • ದಿ ಕನ್ಫೆಷನ್  – ಟ್ಯಾನೆಲ್ ಟ್ಯೂಮ್
  • ' ದಿ ಕ್ರಷ್/0} – ಮೈಕೇಲ್ ಕ್ರೀಗ್
  • ನಾ ವೆವೆ  – ಐವಾನ್ ಗೋಲ್ಡ್ಸ್‌ಸ್ಕಿಮಿಡ್
  • ವಿಷ್ ೧೪೩  –ಐಯಾನ್ ಬಾರ್ನೆಸ್
 • ದಿ ಲಾಸ್ಟ್ ಥಿಂಗ್  –ಆಂಡ್ರಿವ್ ರುಹೆಮಾನ್ ಮತ್ತು ಶಾನ್ ಟಾನ್
  • ಡೇ & ನೈ ಟ್ – ಟೆಡ್ಡಿ ನ್ಯೂಟನ್
  • ದಿ ಗ್ರಫಾಲೊ  –ಮ್ಯಾಕ್ಸ್ ಲ್ಯಾಂಗ್ ಮತ್ತು ಜಾಕೋಬ್ ಸ್ಕಹ್
  • ಲೆಕ್ಸ್ ಪೊಲ್ಯುಟ್  – ಗೀಫ್ವಿ ಬೊಯೆಡೊಯಿ
  • ಮಡಗಾಸ್ಕರ್,ಎ ಜರ್ನಿ ಡೈರಿ  – ಬ್ಯಾಸ್ಟಿಯನ್ ಡುಬೋಯಿಸ್
ಉತ್ತಮ ಮೂಲ ಅಂಕ ಉತ್ತಮ ಮೂಲ ಹಾಡು
 • ದಿ ಸೋಷಿಯಲ್ ನೆಟ್ವರ್ಕ್  – ಟ್ರೆಂಟ್ ರೆಜ್ನರ್ ಮತ್ತು ಆಟ್ಟಿಕಸ್ ರೋಸ್
  • ೧೨೭ ಅವರ್ಸ್  – A.R. ರೆಹ್ಮಾನ್
  • ಹೌ ಟು ಟ್ರೈನ್ ಯುವರ್ ಡ್ರಾಗನ್  – ಜಾನ್ ಪೋವೆಲ್
  • ಇನ್‌ಸೆಪ್ಷನ್  – ಹ್ಯಾನ್ಸ್ ಜಿಮ್ಮರ್
  • ದಿ ಕಿಂಗ್ಸ್ ಸ್ಪೀಚ್  – ಅಲೆಕ್ಸಾಂಡ್ರೆ ಡೆಸ್‌ಪ್ಲಾಟ್
 • "ವಿ ಬಿಲಾಂಗ್ ಟುಗೆದರ್" ಟಾಯ್ ಸ್ಟೋರಿ ೩ ರಿಂದ – ರಾಂಡಿ ನ್ಯೂಮ್ಯಾನ್
  • "ಕಮಿಂಗ್ ಹೋಮ್" ಕಂಟ್ರಿ ಸ್ಟ್ರಾಂಗ್‌ ನಿಂದ. ಬಾಬ್ ಡೈಪೈರೊ, ಟಾಮ್ ಡೌಗ್ಲಾಸ್ ಹಿಲರಿ ಲಿಂಡ್ಸೆ, ಮತ್ತು ಟ್ರಾಯ್ ವರ್ಗೀಸ್
  • "ಐ ಸೀ ದಿ ಲೈಟ್" ಟ್ಯಾಂಗಲ್ಡ್ ನಿಂದ – ಅಲನ್ ಮೆನ್‌ಕೆನ್ಮತ್ತು ಗ್ಲೆನ್ ಸ್ಲೇಟರ್
  • "ಇಫ್ ಐ ರೈಸ್" ೧೨೭ ಅವರ್ಸ್ ನಿಂದ – A.R. ರೆಹ್ಮಾನ್, ರೊಲೊ ಆರ್ಮ್‌ಸ್ಟ್ರಾಂಗ್, ಮತ್ತು ಡಿಡೊ
ಅತ್ಯುತ್ತಮ ಧ್ವನಿ ಸಂಕಲನ ಅತ್ಯುತ್ತಮ ಧ್ವನಿ ಮಿಶ್ರಣ
 • ಇನ್‌ಸೆಪ್ಷನ್  – ರಿಚರ್ಡ್ ಕಿಂಗ್
  • ಟಾಯ್ ಸ್ಟೋರಿ ೩  –ಟಾಮ್ ಮೈಯರ್ಸ್ ಮತ್ತು ಮೈಕೇಲ್ ಸಿಲ್ವರ್ಸ್
  • Tron: Legacy  –ಗ್ವೆಂಡೋಲಿನ್ ಯೇಟ್ಸ್ ವಿಟಲ್ ಮತ್ತು ಅಡಿಸನ್ ಟೀಗ್
  • ಟ್ರೂ ಗ್ರಿಟ್  – ಸ್ಕಿಪ್ ಲೈವ್‌ಸೆ ಮತ್ತು ಕ್ರೇಗ್ ಬರ್ಕಿ
  • ಅನ್‌ಸ್ಟಾಪೇಬಲ್  – ಮಾರ್ಕ್ P. ಸ್ಟೋಯಿಕಿಂಗರ್
 • ಇನ್‌ಸೆಪ್ಷನ್  – ಲೋರಾ ಹಿರ್ಸ್ಚ್‌ಬರ್ಗ್, ಗ್ಯಾರಿ A. ರಿಜೊ, ಮತ್ತು ಎಡ್ ನೋವಿಕ್
  • ದಿ ಕಿಂಗ್ಸ್ ಸ್ಪೀಚ್  –ಪಾಲ್ ಹ್ಯಾಂಬ್ಲಿನ್, ಮಾರ್ಟಿನ್ ಜೆನ್ಸನ್, ಮತ್ತು ಜಾನ್ ಮಿಡ್‌ಗ್ಲೇ
  • ಸಾಲ್ಟ್  – ಜೆಫ್ರಿ J.ಹ್ಯಾಬೌಷ್, ಗ್ರೆಗ್ P.ರಸೆಲ್, ಸ್ಕಾಟ್ ಮಿಲ್ಲಾನ್, ಮತ್ತು ವಿಲಿಯಂ ಸಾರೊಕಿನ್
  • ದಿ ಸೋಷಿಯಲ್ ನೆಟ್ವರ್ಕ್  – ರೆನ್ ಕ್ಲೈಸ್, ಡೇವಿಡ್ ಪಾರ್ಕರ್, ಮೈಕೇಲ್ ಸೆಮಾನಿಕ್, ಮತ್ತು ಮಾರ್ಕ್ ವೇನ್‌ಗಾರ್ಟನ್
  • ಟ್ರೂ ಗ್ರಿಟ್  – ಸ್ಕಿಪ್ ಲೈವ್‌ಸೆ, ಕ್ರೇಗ್ ಬರ್ಕಿ, ಗ್ರೇಗ್ ಆರ್ಲಾಪ್, ಮತ್ತು ಪೀಟರ್ F. ಕರ್ಲ್ಯಾಂಡ್
ಅತ್ಯುತ್ತಮ ಕಲಾ ನಿರ್ದೇಶನ ಅತ್ಯುತ್ತಮ ಸಿನೇಮಾಟೊಗ್ರಫಿ
 • ಅಲೈಸ್ ಇನ್ ವಂಡರ್‌ಲ್ಯಾಂಡ್  – ಕಲಾ ನಿರ್ದೇಶನ: ರಾಬರ್ಟ್ ಸ್ಟ್ರಾಮ್‌ಬರ್ಗ್; ಸೆಟ್ ಡೆಕೋರೇಷನ್:ಕಾರೆನ್ ಓ ಹರಾ
  • ಹ್ಯಾರಿ ಪಾಟರ್ ಎಂಡ್ ದಿ ಡೆತ್ಲಿ ಹಾಲೋಸ್: ಭಾಗ ೧  –ಕಲಾ ನಿರ್ದೇಶನ: ಸ್ಟಾರ್ಟ್ ಕ್ರೇಗ್; ಸೆಟ್ ಡೆಕೋರೇಷನ್: ಸ್ಟೆಫೆನಿ ಮೆಕ್‌ಮಿಲನ್
  • ಇನ್‌ಸೆಫ್ಷನ್  – ಕಲಾ ನಿರ್ದೇಶನ: ಗೈ ಹೆಂಡ್ರಿಕ್ಸ್ ಡಯಾಸ್; ಸೆಟ್ ಡೆಕೋರೇಷನ್: ಲ್ಯಾರಿ ಡಯಾಸ್ ಮತ್ತು ಡೋಗ್ ಮೊವಾಟ್
  • ದಿ ಕಿಂಗ್ಸ್ ಸ್ಪೀಚ್  – ಕಲಾ ನಿರ್ದೇಶನ:ಈವ್ ಸ್ಟೆವಾರ್ಟ್; ಸೆಟ್ ಅಲಂಕಾರ: ಜೂಡಿ ಫಾರ್
  • ಟ್ರೂ ಗ್ರಿಟ್  –ಕಲಾ ನಿರ್ದೇಶನ: ಜೆಸ್ ಗಾಂಚರ್; ಸೆಟ್ ಅಲಂಕಾರ : ನ್ಯಾನ್ಸಿ ಹೈಗ್
 • ಇನ್‌ಸೆಪ್ಷನ್  – ವ್ಯಾಲಿ ಪಿಫಿಸ್ಟರ್
  • ಬ್ಲಾಕ್ ಸ್ವ್ಯಾನ್  – ಮ್ಯಾಥಿವ್ ಲಿಬಾಟಿಕ್
  • ದಿ ಕಿಂಗ್ಸ್ ಸ್ಪೀಚ್  – ಡ್ಯಾನಿ ಕೋಹೆನ್
  • ದಿ ಸೋಷಿಯಲ್ ನೆಟ್ವರ್ಕ್  – ಜೆಫ್ ಕ್ರಾನೆನ್‌ವೆತ್
  • ಟ್ರೂ ಗ್ರಿಟ್  – ರೋಜರ್ ಡೀಕಿನ್ಸ್
ಅತ್ಯುತ್ತಮ ಮೇಕಪ್ ಅತ್ಯುತ್ತಮ ಉಡುಪಿನ ವಿನ್ಯಾಸ
 • ದಿ ವುಲ್ಫ್‌ಮ್ಯಾನ್  – ರಿಕ್ ಬೇಕರ್ಮತ್ತು ಡೇವ್ ಎಲ್ಸಿ '
  • ಬಾರ್ನಿಸ್ ವರ್ಷನ್‌  – ಆಡ್ರಿಯನ್ ಮೊರೊಟ್
  • ದಿ ವೇ ಬ್ಯಾಕ್  – ಎಡ್ವರ್ಡ್ F. ಹೆನ್ರಿಕ್ಸ್, ಗ್ರೆಗರಿ ಫಂಕ್, ಮತ್ತು ಯೊಲಾಂಡಾ ಟೌಸೀಂಗ್
 • ಅಲೈಸ್ ಇನ್ ವಂಡರ್‌ಲ್ಯಾಂಡ್'  – ಕಾಲೀನ್ ಆಟ್ವುಡ್
  • ಐ ಯಾಮ್ ಲವ್'  – ಆಂಟೊನೆಲ್ಲೆ ಕೆನ್ನಾರೋಜಿ
  • ದಿ ಕಿಂಗ್ಸ್ ಸ್ಪೀಚ್  – ಜೆನ್ನಿ ಬೀವನ್
  • ದಿ ಟೆಂಪೆಸ್ಟ್  – ಸ್ಯಾಂಡಿ ಪೋವೆಲ್
  • ಟ್ರೂ ಗ್ರಿಟ್  – ಮೇರಿ ಜೋಫ್ರೆಸ್
ಅತ್ಯುತ್ತಮ ಚಲನಚಿತ್ರ ಸಂಕಲನ ಅತ್ಯುತ್ತಮ ದೃಶ್ಯ ಪರಿಣಾಮಗಳು
 • ದಿ ಸೋಷಿಯಲ್ ನೆಟ್ವರ್ಕ್  – ಆಂಗಸ್ ವಾಲ್ ಮತ್ತು ಕಿರ್ಕ್ ಬ್ಯಾಕ್ಸ್‌ಟರ್
  • ೧೨೭ ಅವರ್ಸ್  – ಜಾನ್ ಹ್ಯಾರಿಸ್
  • ಬ್ಲಾಕ್ ಸ್ವ್ಯಾನ್  – ಆಂಡ್ರಿವ್ ವೈಸ್‌ಬ್ಲಂ
  • ದಿ ಫೈಟರ್  – ಪಮೇಲಾ ಮಾರ್ಟಿನ್
  • ದಿ ಕಿಂಗ್ಸ್ ಸ್ಪೀಚ್  – ತಾರಿಖ್ ಅನ್ವರ್
 • ಇನ್‌ಸೆಪ್ಷನ್  – ಪಾಲ್ ಫ್ಲಾಂಕ್ಲಿನ್, ಕ್ರಿಸ್ ಕಾರ್‌ಬೌಲ್ಡ್, ಆಂಡ್ರಿವ್ ಲಾಕ್‌ಲಿ, ಮತ್ತು ಪೀಟರ್ ಬೆಬ್
  • ಅಲೈಸ್ ಇನ್ ವಂಡರ್‌ಲ್ಯಾಂಡ್  – ಕೆನ್ ರಾಲ್‌ಸ್ಟನ್, ಡೇವಿಡ್ ಸ್ಕಾಬ್, ಕ್ಯಾರಿ ವಿಲೇಗಾಸ್,ಮತ್ತು ಸೀನ್ ಫಿಲಿಪ್ಸ್
  • ಹ್ಯಾರಿ ಪಾಟರ್ ಎಂಡ್ ದಿ ಡೆತ್ಲಿ ಹಾಲೋಸ್: ಭಾಗ ೧  – ಟಿಮ್ ಬುರ್ಕ್, ಜಾನ್ ರಿಚರ್ಡ್‌ಸನ್, ಕ್ರಿಶ್ಚಿಯನ್ ಮ್ಯಾಂಜ್, ಮತ್ತು ನಿಕೋಲಾಸ್ ಐತಾಡಿ
  • ಹಿಯರ್‌ಆಫ್ಟರ್  –ಮೈಕೇಲ್ ಓವನ್ಸ್, ಬ್ರಯಾನ್ ಗ್ರಿಲ್, ಸ್ಟೀಫನ್ ಟ್ರೊಜಾನ್ಸ್ಕಿ, ಮತ್ತು ಜೋಯಿ ಫೇರೆಲ್
  • ಐರನ್ ಮ್ಯಾನ್ ೨  – ಜ್ಯಾನೆಕ್ ಸಿರ್ಸ್ ಬೆನ್ ಸ್ನೊ, ಜೆಡ್ ರೈಟ್ ಮತ್ತು ಡೇನಿಯಲ್ ಸಡಿಕ್

ಗೌರವ ಅಕಾಡೆಮಿ ಪ್ರಶಸ್ತಿಗಳು[ಬದಲಾಯಿಸಿ]

ಅಕಾಡೆಮಿಯು ೨ನೇ ವಾರ್ಷಿಕ ಗವರ್ನರ್ಸ್ ಪ್ರಶಸ್ತಿಗಳ ಸಮಾರಂಭವನ್ನು ೨೦೧೦ರ ನವೆಂಬರ್ ೧೩ರಂದು ಆಯೋಜಿಸಿತು. ಈ ಸಂದರ್ಭದಲ್ಲಿ ಕೆಳಗಿನ ಪ್ರಶಸ್ತಿಗಳನ್ನು ವಿತರಿಸಲಾಯಿತು.[೮][೯][೧೦]

ಅಕಾಡೆಮಿ ಗೌರವ ಪ್ರಶಸ್ತಿ[ಬದಲಾಯಿಸಿ]

 • ಕೆವಿನ್ ಬ್ರೌನ್‌‍ಲೊ
 • ಜೀನ್-ಲಕ್ ಗೊಡಾರ್ಡ್
 • ಎಲಿ ವಾಲ್ಲಚ್

೧೯೪೯: ಇರ್ವಿಂಗ್‌ ಜಿ. ಥಾಲ್ಬರ್ಗ್‌ ಸ್ಮಾರಕ ಪ್ರಶಸ್ತಿ[ಬದಲಾಯಿಸಿ]

 • ಫ್ರಾನ್ಸಿಸ್‌ ಫೋರ್ಡ್‌ ಕೋಪ್ಪೊಲಾ

ಬಹು ನಾಮನಿರ್ದೇಶನಗಳು ಮತ್ತು ಪ್ರಶಸ್ತಿಗಳು[ಬದಲಾಯಿಸಿ]

ಪ್ರಶಸ್ತಿ ನೀಡಿದವರು ಮತ್ತು ಪ್ರದರ್ಶಕರು[ಬದಲಾಯಿಸಿ]

ಕೆಳಗಿನ ವ್ಯಕ್ತಿಗಳು ಪ್ರಶಸ್ತಿ ಪ್ರದಾನ ಮಾಡಿದರು ಅಥವಾ ಸಂಗೀತ ಪ್ರದರ್ಶನ ನಿರ್ವಹಿಸಿದರು.[೧೧]

ಪ್ರಶಸ್ತಿ ಪ್ರದಾನ ಮಾಡಿದವರು[ಬದಲಾಯಿಸಿ]

ಪ್ರದರ್ಶಕರು[ಬದಲಾಯಿಸಿ]

ಇನ್ ಮೆಮೋರಿಯಂ[ಬದಲಾಯಿಸಿ]

ವಾರ್ಷಿಕ ಇನ್ ಮೆಮೋರಿಯಲ್ ಗೌರವದ ಸಂದರ್ಭದಲ್ಲಿ ಸೆಲೈನ್ ಡಿಯಾನ್ ಸ್ಮೈಲ್ ಹಾಡನ್ನು ನುಡಿಸಿದರು. ಜತೆಗೆ, ಹ್ಯಾಲೆ ಬೆರ್ರಿ ಲೀನಾ ಹಾರ್ನೆಗೆ ವಿಶೇಷ ಗೌರವ ಸಲ್ಲಿಸಿದರು. ಗೌರವವು ಕೆಳಗಿನ ವ್ಯಕ್ತಿಗಳನ್ನು ಒಳಗೊಂಡಿದೆ:

ಸಮಾರಂಭದ ಮಾಹಿತಿ[ಬದಲಾಯಿಸಿ]

ಸಮಾರಂಭಕ್ಕೆ ಯುವ ಮುಖಗಳಿಗೆ ಆದ್ಯತೆ ನೀಡಿದ ನಿರ್ಮಾಪಕರಾದ ಬ್ರೂಸ್ ಕೊಹೆನ್ ಮತ್ತು ಡಾನ್ ಮಿಶ್ಚರ್ ಜೇಮ್ಸ್ ಫ್ರಾಂಕೊ ಮತ್ತು ಅನ್ನೆ ಹಾಥ್ವೇಯನ್ನು ಸಹ-ನಿರೂಪಕರನ್ನಾಗಿ ಆಯ್ಕೆ ಮಾಡಿದರು. ಫ್ರಾಂಕೊ ಈ ಸಮಾರಂಭಕ್ಕೆ ಅತ್ಯುತ್ತಮ ನಟ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದರು. ನಟನೆಯ ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡ ವರ್ಷದಲ್ಲೇ ನಟ ಅಥವಾ ನಟಿ ಪ್ರಶಸ್ತಿ ಸಮಾರಂಭಕ್ಕೆ ಅವನು ಅಥವಾ ಅವಳು ನಿರೂಪಣೆ ವಹಿಸಿದ್ದು, ೧೯೭೩ರಿಂದೀಚೆಗೆ ಮೊದಲನೇ ಬಾರಿ ಎಂದು ಈ ವಿದ್ಯಮಾನವನ್ನು ಗುರುತಿಸಲಾಗಿದೆ. ಆ ವರ್ಷದ ಸಮಾರಂಭದಲ್ಲಿ, ಮೈಕೇಲ್ ಕೇನ್ ಸಮಾರಂಭಕ್ಕೆ ಸಹ- ನಿರೂಪಣೆ ವಹಿಸಿದರು ಮತ್ತು ಸ್ಲೂಥ್‌ ನಲ್ಲಿ ಅತ್ಯುತ್ತಮ ನಟನೆಗಾಗಿ ನಾಮನಿರ್ದೇಶಿತರಾದರು. ನಟನೆ ಪ್ರಶಸ್ತಿಯನ್ನು ಗೆದ್ದ ಕೊನೆಯ ನಿರೂಪಕ ಡೇವಿಡ್ ನಿವೆನ್. ೧೯೫೯ರ ೩೧ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಸಪರೇಟ್ ಟೇಬಲ್ಸ್‌ ನಲ್ಲಿ ಅತ್ಯುತ್ತಮ ನಟನೆಗಾಗಿ ಆಸ್ಕರ್ ಪ್ರಶಸ್ತಿಯನ್ನು ಅವರು ಗೆದ್ದಿದ್ದರು.[೧೪] ೮೩ನೇ ಸಮಾರಂಭವು ೧೯೫೭ರಿಂದೀಚೆಗೆ ಮೊದಲ ಬಾರಿ ಅಕಾಡೆಮಿ ಪ್ರಶಸ್ತಿಗಳ ಸಮಾರಂಭವು ಪುರುಷ-ಮಹಿಳೆ ದ್ವಯರಿಂದ ಸಹ ನಿರೂಪಣೆ ವಹಿಸಿದ್ದಕ್ಕಾಗಿ ಗುರುತಿಸಲಾಗಿದೆ. ಪ್ರಶಸ್ತಿಗಳ ಪ್ರಸಾರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪುರುಷ-ಮಹಿಳೆ ದ್ವಯರು ನಿರೂಪಣೆ ಕರ್ತವ್ಯದಲ್ಲಿ ಒಂದೇ ವೇದಿಕೆಯನ್ನು ಹಂಚಿಕೊಂಡಿದ್ದರು.[೧೩]

ದೊಡ್ಡ ಪ್ರಮಾಣದ ಟೆಲಿವಿಷನ್ ವೀಕ್ಷಕರನ್ನು ಸೆಳೆಯಲು ಮತ್ತು ವೀಕ್ಷಕರಿಗೆ ಹೆಚ್ಚು ಪರಸ್ಪರ ಸಂಪರ್ಕದ ಕಾರ್ಯಕ್ರಮ ಸೃಷ್ಟಿಸುವ ಪ್ರಯತ್ನವಾಗಿ, AMPAS ಈ ವರ್ಷದ ಸಮಾರಂಭವು ಇತಿಹಾಸದಲ್ಲಿ ಅತ್ಯಂತ ಪರಸ್ಪರ ಪ್ರಭಾವ ಬೀರಿದ ಪ್ರಶಸ್ತಿಗಳ ಪ್ರದರ್ಶನ ಎಂದು ಪ್ರಕಟಿಸಿತು.[೧೫] ಅಕಾಡೆಮಿಯು ಅದರ ಅಧಿಕೃತ ಜಾಲತಾಣ oscar.comಪುನಾರಚಿಸಿ ಎಲ್ಲ ನಾಮಿನಿಗಳು ಮತ್ತು ವಿಜೇತರ ಪಟ್ಟಿಗಳನ್ನು ಮತ್ತು ಚಲನಚಿತ್ರದ ತುಣಕುಗಳನ್ನು ಮತ್ತು AMPASಮತ್ತು ಆಸ್ಕರ್ ಪ್ರಸಾರ ಮಾಡಿದ ABC ಉತ್ಪಾದಿಸಿದ ವಿಶೇಷ ವಿಡಿಯೊ ವಸ್ತುವನ್ನು ಸೇರಿಸಿಕೊಂಡಿತು. ಕ್ರಿಸ್ ಹ್ಯಾರಿಸನ್ ಪುಟದಲ್ಲಿ ಮಾಸಿಕ ದೃಶ್ಯಗಳ ಹಿಂದಿನ ವಿಡಿಯೊ ಬ್ಲಾಗ್ "ರೋಡ್ ಟು ದಿ ಆಸ್ಕರ್ಸ್" ಆಯೋಜಿಸಿದರು.[೧೬][೧೭] ಅಕಾಡೆಮಿಯ ಟ್ವಿಟರ್ ಮತ್ತು ಫೇಸ್‌ಬುಕ್ ಪುಟಗಳಲ್ಲಿ, ಉತ್ಸವಕ್ಕೆ ಆಗಮಿಸಿದ ಯಾವುದೇ ನಟ ಅಥವಾ ಪ್ರಸಿದ್ಧ ವ್ಯಕ್ತಿಗೆ ಉತ್ತರ ಪಡೆಯುವುದಕ್ಕಾಗಿ ಜನರು ಪ್ರಶ್ನೆಗಳನ್ನು ಕೇಳಬಹುದಿತ್ತು. ನಾಲ್ಕು ಪೂರ್ವ ಪ್ರದರ್ಶನ ಸಹ ನಿರೂಪಕರಲ್ಲಿ ಒಬ್ಬರು ನಾಮಿನಿಗಳಿಗೆ ಮತ್ತು ಭಾಗವಹಿಸಿದವರಿಗೆ ಇಬ್ಬರಿಗೂ ಆಯ್ದ ಪ್ರಶ್ನೆಗಳನ್ನು ಕೇಳುತ್ತಾರೆ.[೧೮] $೪.೯೯ಶುಲ್ಕದೊಂದಿಗೆ ಬಳಕೆದಾರರಿಗೆ ಎರಡು ಡಜನ್ ವಿಡಿಯೊ ಚಿತ್ರಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಅವು ಬಳಕೆದಾರರನ್ನು ಕೆಂಪು ಹಾಸಿನಿಂದ ಸಮಾರಂಭಕ್ಕೆ ಮತ್ತು ನಂತರದ ಪ್ರಸಾರವಾದ ಗವರ್ನರ್ಸ್ ಬಾಲ್‌ಗೆ ಒಯ್ಯುತ್ತದೆ. ಮನೆಯಲ್ಲಿ ಕುಳಿತು ಆಸ್ಕರ್ ಸಮಾರಂಭದ ದೃಶ್ಯಗಳನ್ನು ವೀಕ್ಷಿಸುವುದಕ್ಕಾಗಿ ಅನೇಕ ಕ್ಯಾಮೆರಾಗಳು ೩೬೦ ಡಿಗ್ರಿ ದೃಶ್ಯಗಳನ್ನು ಬಳಸಿಕೊಂಡಿತು.[೧೯]

ಇದರ ಜತೆಗೆ, ಅಕಾಡೆಮಿ ವಿನ್ಯಾಸಕ ಮಾರ್ಕ್ ಫ್ರೈಡ್‌ಲ್ಯಾಂಡ್ ಅವರನ್ನು ಪ್ರತಿಯೊಂದು ವಿಭಾಗದ ವಿಜೇತನನ್ನು ಶ್ಲಾಘಿಸಲು ಹೊಸ ಲಕೋಟೆಯನ್ನು ವಿನ್ಯಾಸಗೊಳಿಸುವುದಕ್ಕಾಗಿ ನೇಮಿಸಿತು. ಹೊಸ ಲಕೋಟೆಯನ್ನು ಲೋಹೀಯ ಚಿನ್ನದ ಕಾಗದದಿಂದ ಕೈಯಿಂದ ತಯಾರಿಸಲಾಗಿತ್ತು ಮತ್ತು ಕೆಂಪು ಮೆರುಗಿನ ಗೆರೆಯೊಂದಿಗೆ ಆಸ್ಕರ್ ಸಣ್ಣ ಪ್ರತಿಮೆಯನ್ನು ನುಣುಪಾದ ಚಿನ್ನದ ಎಲೆಯಲ್ಲಿ ಮುದ್ರೆಯೊತ್ತಲಾಗಿತ್ತು.[೨೦][೨೧]

ವೋಟಿಂಗ್ ಪ್ರವೃತ್ತಿಗಳು ಮತ್ತು ಸಾರಾಂಶ[ಬದಲಾಯಿಸಿ]

ಎರಡನೇ ಅನುಕ್ರಮ ವರ್ಷಕ್ಕಾಗಿ, ಪ್ರಮುಖ ನಾಮಿನಿಗಳ ಕ್ಷೇತ್ರದಲ್ಲಿ ಅಮೆರಿಕ ಮತ್ತು ಕೆನಡಾ ಗಲ್ಲಾ ಪೆಟ್ಟಿಗೆಯಲ್ಲಿ ಕನಿಷ್ಠ ಒಂದು ಬ್ಲಾಕ್‌ಬಸ್ಟರ್ ಒಳಗೊಂಡಿತ್ತು. ಆದಾಗ್ಯೂ, ಕೇವಲ ಮೂರು ನಾಮಿನಿಗಳು ಹಿಂದಿನ ವರ್ಷದ ಐದಕ್ಕೆ ಹೋಲಿಸಿದರೆ, ನಾಮನಿರ್ದೇಶನಗಳನ್ನು ಪ್ರಕಟಿಸುವ ಮುಂಚೆ ೧೦೦ ದಶಲಕ್ಷ ಡಾಲರ್‌ಗಳಿಗಿಂತ ಹೆಚ್ಚು ಗಳಿಸಿದವು.[೨೨] ಆಸ್ಕರ್ಸ್ ಪ್ರಕಟಿಸಿದಾಗ, ಹತ್ತು ಅತ್ಯುತ್ತಮ ಚಿತ್ರದ ನಾಮಿನಿಗಳ ಒಟ್ಟು ಮೊತ್ತವು ೧.೨ ಶತಕೋಟಿ ಡಾಲರ್‌ಗಳಾಗಿತ್ತು. ೨೦೦೯ರ ನಂತರ ಎರಡನೇ ಅತ್ಯಧಿಕ ಮೊತ್ತವಾಗಿತ್ತು. ಸರಾಸರಿ ಒಟ್ಟು ಮೊತ್ತವು ೧೧೯.೩ ದಶಲಕ್ಷ ಡಾಲರ್‌ಗಳಾಗಿತ್ತು.[೨೨]

ಹತ್ತು ಅತ್ಯುತ್ತಮ ಚಿತ್ರದ ನಾಮಿನಿಗಳಲ್ಲಿ ಎರಡು ಚಿತ್ರಗಳು ನಾಮನಿರ್ದೇಶನಗಳ ಸಂದರ್ಭದಲ್ಲಿ ಗಲ್ಲಾ ಪೆಟ್ಟಿಗೆಯಲ್ಲಿ ಹತ್ತು ಅಗ್ರ ಬಿಡುಗಡೆಗಳ ಪೈಕಿ ಸೇರಿವೆ. ಜನವರಿ ೨೫ರಂದು ನಾಮನಿರ್ದೇಶನಗಳನ್ನು ಪ್ರಕಟಿಸುವ ಸಂದರ್ಭದಲ್ಲಿ, ಟಾಯ್ ಸ್ಟೋರಿ ೩ ಅತ್ಯುತ್ತಮ ಚಿತ್ರದ ನಾಮಿನಿಗಳಲ್ಲಿ ಅತ್ಯಂತ ಗಳಿಕೆಯ ಚಿತ್ರವಾಗಿದ್ದು, ದೇಶೀಯ ಗಲ್ಲಾ ಪೆಟ್ಟಿಗೆ ಗಳಿಕೆಗಳಲ್ಲಿ ೪೧೪.೯ ದಶಲಕ್ಷ ಡಾಲರ್‌ಗಳನ್ನು ಬಾಚಿಕೊಂಡಿದೆ.[೨೩] ಇತರೆ ಅಗ್ರ ಹತ್ತು ಗಲ್ಲಾ ಪೆಟ್ಟಿಗೆ ಯಶಸ್ಸಿನ ಚಿತ್ರಗಳ ಪೈಕಿ ನಾಮನಿರ್ದೇಶನವನ್ನು ಸ್ವೀಕರಿಸಿದ ಏಕೈಕ ಚಿತ್ರ ಇನ್‌ಸೆಪ್ಷನ್ ಆಗಿದ್ದು, ೨೯೨.೫ದಶಲಕ್ಷ ಡಾಲರ್‌ಗಳನ್ನು ಗಳಿಸಿದೆ.[೨೩] ಉಳಿದ ಎಂಟು ನಾಮಿನಿಗಳಲ್ಲಿ ಟ್ರೂ ಗ್ರಿಟ್ ೧೩೭.೯ ದಶಲಕ್ಷ ಡಾಲರ್‌ಗಳೊಂದಿಗೆ ಮುಂದಿನ ಅತ್ಯಂತ ಗಳಿಕೆಯ ಚಿತ್ರವಾಗಿದೆ.[೨೩] ಅದನ್ನು ಅನುಸರಿಸಿ ದಿ ಸೋಷಿಯಲ್ ನೆಟ್ವರ್ಕ್ ($೯೫.೪ ದಶಲಕ್ಷ),[೨೩] ಬ್ಲಾಕ್ ಸ್ವ್ಯಾನ್ $೮೩.೨ ದಶಲಕ್ಷ,[೨೩] ದಿ ಫೈಟರ್ ($೭೨.೬ ದಶಲಕ್ಷ),[೨೩] ದಿ ಕಿಂಗ್ಸ್ ಸ್ಪೀಚ್ ($೫೭.೩ ದಶಲಕ್ಷ),[೨೩] ದಿ ಕಿಡ್ಸ್ ಆರ್ ಆಲ್ ರೈಟ್ ($೨೦.೮ ದಶಲಕ್ಷ),[೨೩] ೧೨೭ ಅವರ್ಸ್ ($೧೧.೨ ದಶಲಕ್ಷ),[೨೩] ಮತ್ತು ಅಂತಿಮವಾಗಿ ವಿಂಟರ್ಸ್ ಬೋನ್ ($೬.೨ ದಶಲಕ್ಷ).[೨೩]

ವರ್ಷದ ಅಗ್ರ ೫೦ ಗಳಿಕೆಯ ಚಿತ್ರಗಳ ಪೈಕಿ, ೫೫ ನಾಮನಿರ್ದೇಶನಗಳು ಪಟ್ಟಿಯಲ್ಲಿ ೧೫ ಚಿತ್ರಗಳಿಗೆ ಸಿಕ್ಕಿವೆ. ಕೇವಲ ಟಾಯ್ ಸ್ಟೋರಿ ೩ (೧ನೇಯ), ಇನ್‌ಸೆಪ್ಷನ್ (೫ನೇಯ), ಹೌ ಟು ಟ್ರೈನ್ ಯುವರ್ ಡ್ರಾಗನ್ (೯ನೇಯದು), ಟ್ರೂ ಗ್ರಿಟ್ (೧೭ನೇಯದು), ದಿ ಸೋಷಿಯಲ್ ನೆಟ್ವರ್ಕ್ (೨೯ನೇಯದು), ದಿ ಟೌನ್ (೩೨ನೇಯದು), ಬ್ಲಾಕ್ ಸ್ವ್ಯಾನ್ (೩೮ನೇಯದು), ಮತ್ತು ದಿ ಫೈಟರ್ (೪೫ನೇಯದು) ನಿರ್ದೇಶನ, ನಟನೆ, ಚಿತ್ರಕಥೆ ಅತ್ಯುತ್ತಮ ಚಿತ್ರ ಅಥವಾ ಆನಿಮೇಟೆಡ್ ಚಿತ್ರಕ್ಕಾಗಿ ನಾಮಾಂಕಿತವಾಗಿವೆ. ಇತರೆ ಅಗ್ರ ೫೦ ಗಲ್ಲಾ ಪೆಟ್ಟಿಗೆ ಯಶಸ್ಸಿನ ನಾಮನಿರ್ದೇಶನಗಳನ್ನು ಗಳಿಸಿದ ಚಿತ್ರಗಳು ಅಲೈಸ್ ಇನ್ ವಂಡರ್‌ಲ್ಯಾಂಡ್ (ಎರಡನೆಯದು) ಐರನ್ ಮ್ಯಾನ್ ೨ (೩ನೆಯದು), ಹ್ಯಾರಿ ಪಾಟರ್ ಎಂಡ್ ದಿ ಡೆತ್ಲಿ ಹಾಲೋಸ್, ಭಾಗ೧ (೬ನೆಯದು), ಟ್ಯಾಂಗಲ್ಡ್ (೧೦ನೆಯದು), ಟ್ರಾನ್: ಲೀಗಸಿ (೧೨ನೆಯದು), ಸಾಲ್ಟ್ (೨೧ನೆಯದು), ಮತ್ತುಅನ್‌ಸ್ಟಾಪೇಬಲ್ (೩೯ನೆಯದು).

ವಿಮರ್ಶಾತ್ಮಕ ವಿಶ್ಲೇಷಣೆಗಳು[ಬದಲಾಯಿಸಿ]

ಈ ಪ್ರದರ್ಶನಕ್ಕೆ ಮಾಧ್ಯಮ ಪ್ರಕಟಣೆಗಳು ನಕಾರಾತ್ಮಕ ಸ್ವಾಗತವನ್ನು ನೀಡಿದವು.[೨೪] ಕೆಲವು ಮಾಧ್ಯಮ ಕೇಂದ್ರಗಳು ಈ ಪ್ರದರ್ಶನವನ್ನು ತೀವ್ರವಾಗಿ ಟೀಕಿಸಿದವು ಮತ್ತು ಬಹುತೇಕ ವಿಮರ್ಶಕರು ಹಾಥ್ವೇ ಮತ್ತು ಫ್ರಾಂಕೊ ಅವರ ನಿರೂಪಣೆಯ ಕರ್ತವ್ಯಗಳನ್ನು ಹೊಂದಿಕೆಯಾಗದ ವ್ಯವಹಾರ ಎಂದು ತೀರ್ಮಾನಿಸಿದರು. ಕೆಲವರು ಹಾಥ್ವೇಯ ನಿರೂಪಣೆಯ ಕರ್ತವ್ಯಗಳನ್ನು ಶ್ಲಾಘಿಸಿದರೆ, ಫ್ರಾಂಕೋ ಅವರ ವೇದಿಕೆಯ ಮೇಲಿನ ಇರುಸುಮುರುಸು ಮತ್ತು ಚೈತನ್ಯಹೀನ ಸ್ಥಿತಿಯನ್ನು ಟೀಕಿಸಿದರು. ಚಲನಚಿತ್ರ ವಿಮರ್ಶಕ ರೋಜರ್ ಎಬರ್ಟ್ ದೂರದರ್ಶನ ಪ್ರಸಾರವನ್ನು ಟೀಕಿಸಿದರು ಮತ್ತು ಇದು ತಾವು ನೋಡಿದ ಅತ್ಯಂತ ಕೆಟ್ಟ ಆಸ್ಕರ್ ಪ್ರಶಸ್ತಿಗಳ ಸಮಾರಂಭದ ಪ್ರಸಾರ ಎಂದು ಹೇಳಿದರು. ಅವರು ರಾತ್ರಿ ನಡೆದ ಸಮಾರಂಭದ ವಿಜೇತರನ್ನು ಶ್ಲಾಘಿಸಿದರು. ಆದರೆ ತಮ್ಮ ವಿಮರ್ಶೆಯನ್ನು ಈ ಪದಗಳಿಂದ ಮುಕ್ತಾಯಗೊಳಿಸಿದರು. "ಡೆಡ್. ಇನ್. ದಿ. ವಾಟರ್."[೨೫] ಹಾಲಿವುಡ್ ವರದಿಗಾರ ಪ್ರದರ್ಶನವನ್ನು"ಪ್ರದರ್ಶನಾತ್ಮಕವಾಗಿ ಕೆಟ್ಟದಾಗಿದೆ" ಮತ್ತು "ಈ ವರ್ಷವು, ಆಸ್ಕರ್ಸ್ ತೀರಾ ಕೆಳಮಟ್ಟದ ಆಕರ್ಷಣೆ ಪಡೆಯಿತು. ಅದು ಹಳ್ಳಕ್ಕೆ ಬಿದ್ದ ರೀತಿ."[೨೬] ಇದೇ ನಂಬಿಕೆಯನ್ನು ರಾಲಿಂಗ್ ಸ್ಟೋನ್ ವಿಮರ್ಶಕ ಪೀಟರ್ ಟ್ರಾವರ್ಸ್ ಧ್ವನಿಸಿದರು ಮತ್ತು ಅತ್ಯಂತ ಕೆಟ್ಟ ಆಸ್ಕರ್ಸ್ ಸಮಾರಂಭ ಎಂದು ಕರೆದರು.[೨೭] CNNಪರಾಮರ್ಶೆಯು ಪ್ರದರ್ಶನಕ್ಕೆ C ದರ್ಜೆಯನ್ನು ನೀಡಿತು. ನಿರೂಪಕರ ಬಗ್ಗೆ ಪ್ರತಿಕ್ರಿಯಿಸುತ್ತಾ, ಆಸ್ಕರ್‌ಗಳು ಲೇಡಿ ಗಾ ಗಾ ಗ್ರಾಮಿಗಳ ರೀತಿಯಿರಲು ಬಯಸುತ್ತಾರೆ: ನಾವು ಯುವೋತ್ಸಾಹ ಮತ್ತು ಮೇಲುಗೈಗೆ ಪ್ರಯತ್ನಿಸಬೇಕು. ಆದರೆ ಜೇಮ್ಸ್ ಫ್ರಾಂಕೊ ಮತ್ತು ಆನ್ನೆ ಹಾಥ್ವೇ ನಿರೂಪಕ ಸಂಯೋಜನೆಯಿಂದ, ಅದು ನೆಲಕ್ಕೆ ಬಿತ್ತು. ಅನ್ನೆ ಅತ್ಯುತ್ತಮ ಪ್ರಯತ್ನ ಮಾಡಿದರು. ಆದರೆ ಫ್ರಾಂಕೊ ಗೊಂದಲ ಮತ್ತು ಕಕ್ಕಾಬಿಕ್ಕಿಯಾಗಿ ಕಂಡುಬಂದರು."[೨೮] E. ಇದು ಇತಿಹಾಸದಲ್ಲೇ ಅತ್ಯಂತ ಕೆಟ್ಟ ಆಸ್ಕರ್ ಪ್ರದರ್ಶನವೇ ಎಂದು ಆನ್‌ಲೈ ನ್ ಪ್ರಶ್ನೆ ಮಾಡಿತು. ಆಸ್ಕರ್‌ನಲ್ಲಿ ಇಲ್ಲದಿರಬಹುದಾದ ಎಲ್ಲವೂ ಇದರಲ್ಲಿತ್ತು: ಗಾಂಭೀರ್ಯವಿಲ್ಲದ, ತಜ್ಞತೆಯಿಲ್ಲದೆ ಮತ್ತು ಪ್ರಶಸ್ತಿಗಳನ್ನು ಪಡೆಯದ ನಮ್ಮಂತವರಿಗೆ ವಾಸ್ತವ ಮನರಂಜನೆ ಮೌಲ್ಯದಲ್ಲಿ ಕೊರತೆ ಹೊಂದಿತ್ತು ಎಂದು ಅದು ಹೇಳಿಕೆ ನೀಡಿತು.[೨೯]

ಕೆಲವು ಮಾಧ್ಯಮ ಕೇಂದ್ರಗಳು ಪ್ರಸಾರವನ್ನು ಸಕಾರಾತ್ಮಕವಾಗಿ ತೆಗೆದುಕೊಂಡವು. ಎಂಟರ್‌ಟೇನ್‌ಮೆಂಟ್ ವೀಕ್ ಲಿ ಟೆಲಿವಿಷನ್ ವಿಮರ್ಶಕ ಕೆನ್ ಟಕರ್, ಪ್ರದರ್ಶನವು ಹಾಸ್ಯಮಯ, ಆರಾಮ, ಸಮಚಿತ್ತತೆ ಬುದ್ಧಿವಂತಿಕೆಯಿಂದ ಕೂಡಿತ್ತು ಮತ್ತು ಆನ್ನೆ ಹಾಥ್ವೇ ಮತ್ತು ಜೇಮ್ಸ್ ಫ್ರಾಂಕೊ ಅಚ್ಚರಿಯ ಆಸ್ಕರ್ ನಿರೂಪಕರಾಗಿದ್ದರು ಎಂದು ಹೇಳಿಕೆ ನೀಡಿತು. ಅವರ ಗೌರವ ಮತ್ತು ಔಪಚಾರಿಕತೆಯ ಸಂಯೋಜನೆಯು ರಾತ್ರಿ ಪ್ರದರ್ಶನದಲ್ಲಿ ಸೂಕ್ತ ಧ್ವನಿಯನ್ನು ಹೊಮ್ಮಿಸಿತು. ಸಂತೋಷದ, ಅಚ್ಚರಿಯ ನಿರ್ಮಾಣವಾಗಿದ್ದು, ಯೋಜಿತವಾದ ಸುಂದರ ಕ್ಷಣಗಳನ್ನು ಹಂಚಿಕೊಂಡಿತು. ಸಮಾರಂಭದ ಬಗ್ಗೆ ಒಟ್ಟಾರೆ ಅಂಶದ ಬಗ್ಗೆ ಅದೊಂದು ವಿನೋದದ, ಚುರುಕಿನ ಗತಿಯ ರಾತ್ರಿ ಎಂದು ತೀರ್ಮಾನಿಸಿದರು.[೩೦] ಲಾಸ್ ಏಂಜಲ್ಸ್ ಟೈಮ್ಸ್‌ ನ ಮೇರಿ ಮೆಕ್‌ನಮಾರಾ ಸಾಧಾರಣ ವಿಮರ್ಶೆಯನ್ನು ನೀಡಿದರು. ಫ್ರಾಂಕ್‌ವೇ ಮತ್ತು ಹಾಥ್ವೇ ಬಗ್ಗೆ ಪ್ರತಿಕ್ರಿಯಿಸುತ್ತಾ, ಮೊದಲಿಗೆ ಕೆಟ್ಟದ್ದನ್ನು ಮಾಡಬೇಡಿ ಎಂಬ ಸೂಚನೆಯನ್ನು ಪಾಲಿಸುವಂತೆ ಇಬ್ಬರೂ ಕಂಡುಬಂದರು. ಎಮ್ಮೀಸ್ ಜತೆ ಜಿಮ್ಮಿ ಫ್ಯಾಲನ್‌ನಷ್ಟು ಅಂಕಗಳಿಸುವುದು ಸಾಧ್ಯವಿಲ್ಲವೆಂದು ಅವರಿಗೆ ತಿಳಿದಿತ್ತು. ಈ ವರ್ಷದ ಗೋಲ್ಡನ್ ಗ್ಲೋಬ್ಸ್ ಬಳಿಕ ರಿಕಿ ಗೆರ್ವಾಯಿಸ್ ರೀತಿಯಲ್ಲಿ ಬೆಳಗಿನ ಪ್ರದರ್ಶನದ ಮೇವಾಗುವುದನ್ನು ತಪ್ಪಿಸಲು ಅವರು ನಿಶ್ಚಿಯಿಸಿದ್ದರು. ಇದರ ಫಲವಾಗಿ ಪ್ರದರ್ಶನವು ಬೇಸರ ಹುಟ್ಟಿಸುವುದರೊಂದಿಗೆ ಉಚ್ಚ ಸ್ವರದಿಂದ ನಡೆಯಿತು. ನಿಖರವಾಗಿ ಅತೀ ದೀರ್ಘ ಮತ್ತು ಮನಸ್ಸನ್ನು ಹಿಡಿದಿಟ್ಟ ಪ್ರಶಸ್ತಿಗಳ ಪ್ರದಾನ ಪ್ರದರ್ಶನವಾಗಿತ್ತು. ಆಕೆಯ ವಿಮರ್ಶೆಯು ಒಟ್ಟಾರೆಯಾಗಿ, ಸಂಜೆಯು ವಿಚಿತ್ರವಾದ ವ್ಯವಹಾರದ ರೀತಿಯ ಭಾವನೆ, ಬೇಸರದ ಏಕರೂಪತೆಯು ವಿಜೇತರ ನಿರಂತರ ಮುಂಗಾಣ್ಕೆಯಿಂದ ಉಲ್ಬಣಿಸಿತು ಮತ್ತು ಹಾಲಿ ವಿಜೇತರ "ಥ್ಯಾಂಕ್ ಯು"ಗಳು ದೀರ್ಘಕಾಲವರೆಗೆ ಮುಂದುವರಿದರೂ ಯಾರೊಬ್ಬರನ್ನು ಅನಾದರಕ್ಕೆ ಒಳಪಡಿಸಲಿಲ್ಲ ಎಂದು ತಿಳಿಸಿತು.[೩೧] ಮನರಂಜನೆ ಅಂಕಣಕಾರ ಮತ್ತು ಬ್ಲಾಗರ್ ಪಾಲ್ ಶೀನನ್ ಫ್ರಾಂಕೋ ಮತ್ತು ಹಾಥ್ವೇ ಒಟ್ಟಾರೆ ನಿರ್ವಹಣೆಯನ್ನು ಶ್ಲಾಘಿಸಿದರು. ಕೆಲವು ವಿಮರ್ಶಕರ ಅಪೇಕ್ಷೆಯಂತೆ ಅವರಲ್ಲಿ ಲೈಂಗಿಕ ಆಕರ್ಷಣೆ ಇಲ್ಲದಿರಬಹುದು, ಆದರೆ ಅವರ ಹಾಸ್ಯಮಯ ಗೇಲಿಯು ವಾಸ್ತವವಾಗಿ ಹೊಂದಿಕೊಳ್ಳುವ ಒಡಹುಟ್ಟಿದ ಮಕ್ಕಳನ್ನು ಮನಸ್ಸಿನಲ್ಲಿ ಮೂಡಿಸಿತು ಎಂದು ಹೇಳಿದ್ದಾರೆ. ಆರಂಭದ ಕ್ಷಣಗಳಲ್ಲಿ ಆಕೆಯು ಅವನ ಜತೆಯಲ್ಲಿಲ್ಲದೇ ತಾಯಿಯ ಜತೆ ಇದ್ದದ್ದು ವೈಶಿಷ್ಟ್ಯವಾಗಿತ್ತು.[೩೨]

ರೇಟಿಂಗ್‌ಗಳು ಮತ್ತು ಸ್ವಾಗತ[ಬದಲಾಯಿಸಿ]

ಫಾಕ್ಸ್ ನ್ಯೂಸ್ ನಡೆಸಿದ ಜನಮತ ಗಣನೆಯಲ್ಲಿ ಬಹುತೇಕ ಶೇಕಡ ೫೭ ವೀಕ್ಷಕರು ಪ್ರದರ್ಶನವನ್ನು ಹಿಂದೆಂದೂ ಕಂಡಿರದ ಅತೀ ಕೆಟ್ಟದೆಂದು ದರ್ಜೆ ನೀಡಿದರು.[೩೩]

ABCಯಲ್ಲಿ ಅಮೆರಿಕದ ಟಿವಿ ಪ್ರಸಾರವು ಸರಾಸರಿ ೩೭.೯೦ ದಶಲಕ್ಷ ಜನರನ್ನು ಸೆಳೆಯಿತು. ಹಿಂದಿನ ವರ್ಷದ ಸಮಾರಂಭಕ್ಕಿಂತ ಇದು ಶೇಕಡ ೧೦ರಷ್ಟು ಕುಸಿತವಾಗಿತ್ತು.[೩೪][೩೫] ಅಂದಾಜು ೭೧.೪೫ದಶಲಕ್ಷ ಒಟ್ಟು ವೀಕ್ಷಕರು ಪ್ರಶಸ್ತಿಗಳ ವಿತರಣೆ ಸಮಾರಂಭವನ್ನು ಪೂರ್ಣವಾಗಿ ಅಥವಾ ಆಂಶಿಕವಾಗಿ ವೀಕ್ಷಿಸಿದರು. ಇದರ ಜತೆಗೆ, ಕಾರ್ಯಕ್ರಮವು ೧೮-೪೯ ವಯೋಮಾನದ ನಡುವೆ ೩೩.೯೬ ಪಾಲಿನಲ್ಲಿ ೧೧.೭೮ ರೇಟಿಂಗ್ ಗಳಿಸಿತು. ಇದು ಶೇಕಡ ೧೨ರಷ್ಟು ಕುಸಿತವಾಗಿತ್ತು. ಪ್ರದರ್ಶನವು ಮುಂಚಿನ ಎರಡು ಸಮಾರಂಭಗಳಿಗೆ ಹೋಲಿಸಿದರೆ ಕಡಿಮೆ ನೀಲ್ಸನ್ ರೇಟಿಂಗ್ಸ್ ಪಡೆಯಿತು. ಸುಮಾರು ೨೨.೯೭ಶೇಕಡ ಮನೆಗಳಲ್ಲಿ ೩೩.೬೩ ಪಾಲನ್ನು ವೀಕ್ಷಿಸಿದರು.[೩೪]

ವಿವಾದಗಳು[ಬದಲಾಯಿಸಿ]

"ಅತ್ಯುತ್ತಮ ಪೋಷಕ ನಟಿ" ಭಾಷಣ[ಬದಲಾಯಿಸಿ]

ಮೆಲ್ಲಿಸ್ಸಾ ಲಿಯೊ ತನ್ನ ದಿ ಫೈಟರ್ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ಗಳಿಸಿದ್ದಕ್ಕಾಗಿ ಮಾಡಿದ ಭಾಷಣದಲ್ಲಿ, ನಾನು ಕೇಟ್‌ನನ್ನು ಎರಡು ವರ್ಷಗಳ ಹಿಂದೆ ಗಮನಿಸಿದಾಗ ಇದು ಅತೀ ಸುಲಭವಾಗಿ ಕಂಡುಬಂತು(ಇಟ್ ಲುಕ್ಡ್ ಸೊ ಫಕಿಂಗ್ ಈಸಿ) ಎಂದು ಹೇಳಿದಳು.[೩೬] ೭ ಸೆಕೆಂಡಿನ ಟೇಪ್ ವಿಳಂಬದ ಮೂಲಕ ಪ್ರಸಾರಕ ABC ಫಕ್‌ಇಂಗ್ ಶಬ್ದವನ್ನು ಬ್ಲೀಪ್ ಶಬ್ದದೊಂದಿಗೆ ನೇರ ಪ್ರಸಾರದಿಂದ ತೆಗೆದುಹಾಕಿತು. ತನ್ನ ಅಸಭ್ಯ ಶಬ್ದದ ಸ್ಫೋಟವನ್ನು ಮನಗಂಡ ಲಿಯೊ ವೇದಿಕೆಯ ಹಿಂಭಾಗದಲ್ಲಿ ಕ್ಷಮೆ ಯಾಚಿಸುತ್ತಾ, ತನ್ನ ಹೇಳಿಕೆಯು ಆ ಪದಗಳನ್ನು ಬಳಸಲು ಅತ್ಯಂತ ಅಸೂಕ್ತವಾದ ಸ್ಥಳ. ಅದರಿಂದ ಯಾರಿಗೆ ನೋವಾಗಿದ್ದರೂ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದಳು.[೩೭][೩೮]

ಜೇವಿಯರ್ ಬಾರ್ಡೆಮ್ ಮತ್ತು ಜೋಶ್ ಬ್ರಾಲಿನ್ ನೃತ್ಯ ಮತ್ತು ಚುಂಬನ ಸೇರಿಸದಿರುವುದು[ಬದಲಾಯಿಸಿ]

LGBTಆಸಕ್ತಿಯ ಮಾಧ್ಯಮ ಔಟ್‌ಲೆಟ್‌ಗಳು ಚಿತ್ರಕಥೆ ಪ್ರಶಸ್ತಿ ಪ್ರದಾನ ಮಾಡಿದ ಜೋಶ್ ಬ್ರಾಲಿನ್ ಮತ್ತು ಜೇವಿಯರ್ ಬಾರ್ಡೆಮ್ ಅವರ ಪೆನೆಲೋಪ್ ಕ್ರಜ್ ವಿಸ್ತರಿತ ಛಾಯಾಚಿತ್ರಕ್ಕಾಗಿ ನೃತ್ಯ ಮತ್ತು ಚುಂಬನವನ್ನು ವಿನಿಮಯ ಮಾಡಿಕೊಂಡ ದೃಶ್ಯವನ್ನು ತೆಗೆದುಹಾಕಿದ ABCನಿರ್ಧಾರವನ್ನು ಪ್ರಶ್ನಿಸಿದವು.[೩೯][೪೦] ABC ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿತು.[೪೧] ದೂರದರ್ಶನ ಪ್ರಸಾರದ ಸಹ ನಿರ್ಮಾಪಕ ಮತ್ತು ಸ್ವತಃ ಸಲಿಂಗಿಯಾದ ಬ್ರೂಸ್ ಕೊಹೆನ್ ಕೆಳಗಿನ ಹೇಳಿಕೆಯನ್ನು ನೀಡಿದರು:

ನೃತ್ಯ ಮತ್ತು ಚುಂಬನದ ದೃಶ್ಯವನ್ನು ತೆಗೆಯಲಾಯಿತು. ಇವರ ಯೋಜನೆಯು ಜೋಷ್ ಮತ್ತು ಜೇವಿಯರ್ ಪರಿಚಯದ ಬಗ್ಗೆ ಶ್ಲಾಘಿಸುತ್ತಿದ್ದ ಪ್ರೇಕ್ಷಕವರ್ಗವನ್ನು ಪೆನೆಲೋಪ್ ಛಾಯಾಚಿತ್ರದ ಕಡೆ ತಿರುಗಿಸುವುದಾಗಿತ್ತು. ಅವರು ನೃತ್ಯ ಆರಂಭಿಸುತ್ತಿದ್ದಂತೆ ಯೋಜಿಸಿದ ಹಾಗೇ ಸಂಭವಿಸಿತು. ಜೋಷ್ ಮತ್ತು ಜೇವಿಯರ್ ಕ್ಷಣವು(ನಾನು ಅವರು ನೃತ್ಯ ಮಾಡಿದ್ದನ್ನು ನೋಡಿದೆ, ಆದರೆ ಅವರು ಚುಂಬಿಸಿದ ಬಗ್ಗೆ ನನಗೆ ಕಲ್ಪನೆ ಇರಲಿಲ್ಲ-ಅದನ್ನು ನಾನು ಮೊದಲಿಗೆ ಕೇಳಿದೆ)ಅದು ಮಹತ್ತರ ಟಿವಿ ಕ್ಷಣವನ್ನು ಉಂಟುಮಾಡುತ್ತಿತ್ತು. ಆದರೆ ಅವರು ಚುಂಬಿಸುವ ಬಗ್ಗೆ ಯಾರಿಗೂ ಗೊತ್ತಿರಲಿಲ್ಲವಾದ್ದರಿಂದ ನಾವು ಯೋಜನೆಯಂತೆ ಕಣ್ಸೆಳೆವ [sic] ಕ್ರಜ್‌ರತ್ತ ತಿರುಗಿಸಿದೆವು. ನಾವು ಆಕೆಯ ಕ್ಲೋಸ್ ಅಪ್ ಚಿತ್ರದಿಂದ ವಾಪಸಾದ ನಂತರ ಜೇಮ್ಸ್ ಮತ್ತು ಜೇವಿಯರ್ ಪೀಠದತ್ತ ತೆರಳುತ್ತಿದ್ದರು.[೪೨]

ಇನ್ ಮೆಮೋರಿಯಂ ಹೊರತುಪಡಿಸುವಿಕೆಗಳು[ಬದಲಾಯಿಸಿ]

ಕೋರಿ ಹೇಮ್ ಲ್ಯೂಕಾಸ್ , ದಿ ಲಾಸ್ಟ್ ಬಾಯ್ಸ್ ಮತ್ತು ಲೈಸೆನ್ಸ್ ಟು ಡ್ರೈವ್ ಪಾತ್ರಗಳ ಕಾರಣದಿಂದ ೨೧ ವರ್ಷ ವಯಸ್ಸಿಗೆ ಮುಂಚೆಯೇ ವಿಶ್ವದ ಅತ್ಯಂತ ಲಾಭದಾಯಕ ನಟರ ಪೈಕಿ ಒಬ್ಬರಾಗಿದ್ದರೂ,[೪೩] ೧೭ನೇ ವಾರ್ಷಿಕ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿಗಳು ಮತ್ತು ಅವರ ಸಾವಿನ ನಂತರ ೮೩ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇನ್ ಮೆಮೋರಿಯಂ ಗೌರವ ಸಂಕಲನದಿಂದ ಅವರನ್ನು ಹೊರತುಪಡಿಸಲಾಗಿತ್ತು.[೪೪] ಮಾಧ್ಯಮ ಇದನ್ನು ತೇಜೋವಧೆ ಎಂದು ಗ್ರಹಿಸಿತು ಮತ್ತು ಹೈಮ್ ಅವರನ್ನು ಆಸ್ಕರ್ಸ್‌ನಿಂದ ನು ಹೊರತುಪಡಿಸಿದ್ದು, ವ್ಯಾಪಕ ಮಾಧ್ಯಮ ಪ್ರಸಾರವನ್ನು ಪಡೆಯಿತು.[೪೫][೪೬]

ಸೋರಿಕೆಯಾದ ಸಮಾರಂಭದ ವೇಳಾಪಟ್ಟಿ[ಬದಲಾಯಿಸಿ]

೨೦೧೧ಫೆಬ್ರವರಿ ೨೫ರಂದು ವರದಿಗಾರ ನಿಕ್ಕಿ ಫಿಂಕೆಜಾಲತಾಣ Deadline.com ನಲ್ಲಿ ಇಡೀ ಸಮಾರಂಭದ ವಿವರವಾದ ವೇಳಾಪಟ್ಟಿಯನ್ನು ಸೋರಿಕೆ ಮಾಡಿದರು.[೪೭] ಟಾಮ್ ಹ್ಯಾಂಕ್ಸ್ ಅತ್ಯುತ್ತಮ ಕಲಾ ನಿರ್ದೇಶನಕ್ಕೆ ರಾತ್ರಿಯ ಪ್ರಥಮ ಪ್ರಶಸ್ತಿ ವಿತರಿಸಲಿದ್ದಾರೆ, ನಿರೂಪಕರಾದ ಫ್ರಾಂಕೊ ಮತ್ತು ಹಾಥ್ವೇ ಆರಂಭಿಕ ಭಾಗದಲ್ಲಿ ಕಾಣಿಸಿಕೊಳ್ಳಲಿದ್ದು, ಹತ್ತು ಅತ್ಯುತ್ತಮ ಚಿತ್ರ ನಾಮನಿರ್ದೇಶನದ ಚಲನಚಿತ್ರಗಳಲ್ಲಿ ಅವರನ್ನು ಸಾಂಖ್ಯಿಕವಾಗಿ ಸೇರಿಸಲಾಗಿದೆ. ಮುಂಚಿನ ನಿರೂಪಕ ಬಿಲ್ಲಿ ಕ್ರಿಸ್ಟಲ್ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ, ಕ್ಯಾಥರಿನ್ ಬೈಜ್‌ಲೊ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ವಿತರಿಸಲಿದ್ದಾರೆ ಮತ್ತು ಸ್ಟೀವನ್ ಸ್ಪೀಲ್‌ಬರ್ಗ್ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ವಿತರಿಸಲಿದ್ದಾರೆ ಎಂದು ಸೋರಿಕೆಯಾದ ವೇಳಾಪಟ್ಟಿಯು ಇತರೆ ವಿವರಗಳ ನಡುವೆ ಸೂಚಿಸಿತು.[೪೮]

ಅಂತಾರಾಷ್ಟ್ರೀಯ ದೂರದರ್ಶನ ಪ್ರಸಾರ[ಬದಲಾಯಿಸಿ]

ಇವನ್ನೂ ಗಮನಿಸಿ‌[ಬದಲಾಯಿಸಿ]

ಉಲ್ಲೇಖಗಳು‌‌[ಬದಲಾಯಿಸಿ]

 1. Cite error: Invalid <ref> tag; no text was provided for refs named Hosts
 2. O'Neil, Tom. "Marisa Tomei to host Sci-Tech Oscars". Los Angeles Times. Tribune Company. 
 3. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 4. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 5. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 6. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 7. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 8. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 9. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 10. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 11. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 12. ಸ್ಟಾರ್ಸ್ ರಾಕ್ ದಿ ಕೋಡಕ್ ಎಟ್ ಆಸ್ಕರ್ಸ್ ಮ್ಯೂಸಿಕ್ ರಿಹರ್ಸಲ್ಸ್ CTV ನ್ಯೂಸ್ ಮರುಸಂಪಾದಿಸಲಾಗಿದೆ 2011-02-26
 13. ೧೩.೦ ೧೩.೧ 8 ವೇಸ್ ದಿ ಆಸ್ಕರ್ಸ್ ಆರ್ ಗೋಯಿಂಗ್ ಟು ಬಿ ರಾಡಿಕಲಿ ಢಿಫರೆಂಟ್ ದಿಸ್ ಇಯರ್
 14. "James Franco Isn't The First Oscar-Nominated Oscar Host!". 
 15. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 16. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 17. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 18. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 19. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 20. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 21. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 22. ೨೨.೦ ೨೨.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 23. ೨೩.೦ ೨೩.೧ ೨೩.೨ ೨೩.೩ ೨೩.೪ ೨೩.೫ ೨೩.೬ ೨೩.೭ ೨೩.೮ ೨೩.೯ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 24. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 25. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 26. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 27. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 28. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 29. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 30. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 31. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 32. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 33. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 34. ೩೪.೦ ೩೪.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 35. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 36. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 37. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 38. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 39. ಆಸ್ಕರ್ ಶೋ ಕಟ್ ಬಾರ್ಡೆಂ, ಬ್ರಾಲಿನ್ ಕಿಸ್
 40. ದಿ ಜೇವಿಯರ್ ಬಾರ್ಡೆಮ್, ಜೋಷ್ ಬ್ರಾಲಿನ್ ಆಸ್ಕರ್ ಕಿಸ್ ದೆಟ್ ವಾಸನ್ಟ್ ಟೆಲಿವೈಸ್ಡ್
 41. Jಜೇವಿಯರ್ ಬಾರ್ಡೆಮ್ ಜೋಷ್ ಬ್ರಾಲಿನ್ ಡ್ಯಾನ್ಸಡ್ ಎಂಡ್ ಕಿಸ್ಸ್‌ಡ್ ಎಟ್ ಆಸ್ಕರ್ಸ್. ಟೂ ಬ್ಯಾಡ್ ಇಟ್ ಡಿಡನ್ಟ್ ಮೇಕ್ ದಿ ಟೆಲಿಕಾಸ್ಟ್
 42. ಔಟ್ ಆಸ್ಕರ್ ಪ್ರೊಡ್ಯೂಸರ್ ಬ್ರೂಸ್ ಕೊಹೆನ್ ಅಡ್ರೆಸಸ್ ವೈ ಬ್ರಾಡ್‌ಕಾಸ್ಟ್ ಡಿಡನ್ಟ್ ಶೋ ಕಿಸ್ ಬೆಟ್ವೀನ್ ಬಾರ್ಡೆಮ್ ಎಂಡ್ ಬ್ರಾಲಿನ್
 43. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 44. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 45. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 46. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 47. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 48. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 49. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.

ಬಾಹ್ಯ ಕೊಂಡಿಗಳು‌‌[ಬದಲಾಯಿಸಿ]

ಅಧಿಕೃತ ಜಾಲತಾಣಗಳು
ಸುದ್ದಿಗಳ ಸಂಪನ್ಮೂಲಗಳು
ವಿಶ್ಲೇಷಣೆ
ಇತರೆ ಮೂಲಗಳು