ಟಾಮ್ ಹ್ಯಾಂಕ್ಸ್
ಟಾಮ್ ಹ್ಯಾಂಕ್ಸ್ | |
---|---|
Hanks in April 2009 | |
ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ |
Thomas Jeffrey Hanks ೯ ಜುಲೈ ೧೯೫೬ Concord, California, U.S. |
ವೃತ್ತಿ | Actor, producer, director, voice over artist, writer, speaker, comedian |
ವರ್ಷಗಳು ಸಕ್ರಿಯ | 1979–present |
ಪತಿ/ಪತ್ನಿ | Samantha Lewes (1978–1987) Rita Wilson (1988–present) |
ಥಾಮಸ್ ಜೆಫ್ರಿ "ಟಾಮ್" ಹ್ಯಾಂಕ್ಸ್ (ಜನನ ಜುಲೈ 9, 1956 ) ಒಬ್ಬ ಅಮೆರಿಕದ ನಟ, ನಿರ್ಮಾಪಕ, ಲೇಖಕ, ಮತ್ತು ನಿರ್ದೇಶಕ. ಹ್ಯಾಂಕ್ಸ್ ಮೊದಲಿಗೆ ಟೆಲಿವಿಷನ್ ಮತ್ತು ಕುಟುಂಬ-ನೋಡಲು ಯೋಗ್ಯವಾದ ಹಾಸ್ಯಪಾತ್ರಗಳಲ್ಲಿ ಅಭಿನಯಿಸಲು ಆರಂಭಿಸಿ, ನಂತರ ಭಾವಪೂರ್ಣ ಅಭಿನಯಕ್ಕೆ ಖ್ಯಾತಿ ಪಡೆದು, ಗಮನಾರ್ಹವಾದ ಪಾತ್ರಗಳಾದ ಫಿಲಡೆಲ್ಫಿಯಾ ಚಿತ್ರದಲ್ಲಿನ ಆಂಡ್ರೂ ಬೆಕೆಟ್, ಫಾರೆಸ್ಟ್ ಗಂಪ್ ನ ಫಾರೆಸ್ಟ್ ಗಂಪ್, ಅಪೋಲೋ 13 ರ ಕಮ್ಯಾಂಡರ್ ಜೇಮ್ಸ್ ಎ.ಲೊವೆಲ್, ಸೇವಿಂಗ್ ಪ್ರೈವೇಟ್ ರಿಯಾನ್ ನ ಕ್ಯಾಪ್ಟನ್ ಜಾನ್ ಹೆಚ್.ಮಿಲ್ಲರ್, ಡಿಸ್ನೀ ಯಲ್ಲಿನ ಷೆರೀಫ್ ವುಡಿಯ ಪಾತ್ರ, ಟಾಯ್ ಸ್ಟೋರಿ ಯಲ್ಲಿನ ಪಿಕ್ಸರ್ ಮತ್ತು ಕ್ಯಾಸ್ಟ್ ಎವೇ ಯಲ್ಲಿನ ಚಕ್ ನೋಲ್ಯಾಂಡ್ ಗಳಲ್ಲಿ ಭಾವಪೂರ್ಣ ಅಭಿನಯದ ಮೂಲಕ ಜನಪ್ರಿಯರಾಗಿದ್ದಾರೆ. ಹ್ಯಾಂಕ್ಸ್ ಸತತವಾಗಿ ಅತ್ಯುತ್ತಮ ನಟ ಎಂದು ಅಕಾಡೆಮಿ ಪ್ರಶಸ್ತಿ ಪಡೆದರು; 1993ರಲ್ಲಿ ಫಿಲಡೆಲ್ಫಿಯಾ ಚಿತ್ರದ ಅಭಿನಯಕ್ಕೆ ಮತ್ತು 1994ರಲ್ಲಿ ಫಾರೆಸ್ಟ್ ಗಂಪ್ ನ ಪಾತ್ರಕ್ಕೆ. ಅಮೆರಿಕದ ಗಲ್ಲಾಪೆಟ್ಟಿಗೆಯಲ್ಲಿ ಹ್ಯಾಂಕ್ಸ್ ನ ಚಿತ್ರಗಳಿಂದ ಸಂದ ಮೊತ್ತವು $3.5 ಮಿಲಿಯನ್ ಗೂ ಮಿಗಿಲಾಗಿದೆ.[೧] ಇವರು ನಟ ಕಾಲಿನ್ ಹ್ಯಾಂಕ್ಸ್ ನ ತಂದೆ.
ಆರಂಭದ ಜೀವನ
[ಬದಲಾಯಿಸಿ]ಹ್ಯಾಂಕ್ಸ್ ಕ್ಯಾಲಿಫೋರ್ನಿಯಾದ ಕಾನ್ಕಾರ್ಡ್ನಲ್ಲಿ ಜನ್ಮ ತಾಳಿದರು. ಅವರ ತಂದೆ ಅಮೋಸ್ ಮೆಫ್ಫೋರ್ಡ್ ಹ್ಯಾಂಕ್ಸ್ (ಕ್ಯಾಲಿಪೋರ್ನಿಯಾದ ಗ್ಲೆನ್ ಕೌಂಟಿಯಲ್ಲಿ ಮಾರ್ಚ್ 9, 1924ರಂದು ಜನನ - ಕ್ಯಾಲಿಫೋರ್ನಿಯಾದ ಅಲಾಮೆಡಾದಲ್ಲಿ ಜನವರಿ 31 , 1992ರಂದು ಅವಸಾನ)ಅಮೆರಿಕದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ರಿಗೆ ಲಿಂಕನ್ ರ ತಾಯಿ ನ್ಯಾನ್ಸಿ ಹ್ಯಾಂಕ್ಸ್ ನ ಕಡೆಯಿಂದ ದೂರದ ಸಂಬಂಧಿಗಳಾಗಿದ್ದರು.[೨] ಹ್ಯಾಂಕ್ಸ್ ರ ತಾಯಿ, ಪೋರ್ಚುಗೀಸ್- ಅಮೆರಿಕನ್ ಆದ ಜಾನೆಟ್ ಮರಿಲಿನ್ ಫ್ರೇಗರ್(ಜನವರಿ 18 , 1932ರಂದು ಕ್ಯಾಲಿಫೋರ್ನಿಯಾದ ಅಲಾಮೆಡಾ ಕೌಂಟಿಯಲ್ಲಿ ಜನನ)ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದರು; ಇಬ್ಬರೂ 1960ರಲ್ಲಿ ವಿಚ್ಛೇದನ ಹೊಂದಿದರು. ಆ ಕುಟುಂಬದ ಮೂರು ಹಿರಿಯ ಮಕ್ಕಳಾದ ಸಾಂಡ್ರಾ, (ಈಗ ಸಾಂಡ್ರಾ ಹ್ಯಾಂಕ್ಸ್ ಬೆನಾಯ್ಟನ್, ಬರಹಗಾರ್ತಿ), ಲ್ಯಾರಿ (ಈಗ ಲಾರೆನ್ಸ್ ಎಂ. ಹ್ಯಾಂಕ್ಸ್, ಪಿ ಹೆಚ್ ಡಿ, ಉರ್ಬಾನಾ-ಷಾಂಪೇನ್ ನ ಇಲಿನಾಯ್ಸ್ ವಿಶ್ವವಿದ್ಯಾಲಯದಲ್ಲಿ ಕೀಟಶಾಸ್ತ್ರದ ಪ್ರೊಫೆಸರ್[೩]) ಮತ್ತು ಟಾಮ್ ತಮ್ಮ ತಂದೆಯೊಡನೆ ನಡೆದರೆ, ಕಿರಿಯ ಮಗ ಜಿಮ್, ಈಗ ನಟ ಮತ್ತು ಚಿತ್ರನಿರ್ಮಾಪಕ, ತನ್ನ ತಾಯಿಯೊಡನೆ ರೆಡ್ ಬ್ಲಫ್, ಕ್ಯಾಲಿಫೋರ್ನಿಯಾದಲ್ಲಿ ಉಳಿದುಕೊಂಡನು. ನಂತರ ಇವರ ಮಾತಾಪಿತೃಗಳು ಮರುಮದುವೆಯಾದರು. ಸಾಂಡ್ರಾ, ಲ್ಯಾರಿ ಮತ್ತು ಟಾಮ್ ರ ಮೊದಲ ಮಲತಾಯಿ ತನ್ನ ಮದುವೆಗೆ ತನ್ನದೇ ಆದ ಐದು ಮಕ್ಕಳೊಂದಿಗೆ ಬಂದಳು. ಹ್ಯಾಂಕ್ಸ್ ಒಮ್ಮೆ ರೋಲಿಂಗ್ ಸ್ಟೋನ್ ಗೆ "ನಮ್ಮ ಕುಟುಂಬದ ಪ್ರತಿಯೊಬ್ಬರೂ ಪರಸ್ಪರರನ್ನು ಇಷ್ಟ ಪಡುತ್ತಾರೆ. ಆದರೆ ಮನೆಯಲ್ಲಿ ಯಾವಾಗಲೂ ಸುಮಾರು 50 ಜನ ಇರುತ್ತಿದ್ದರು. ನಾನು ಹೊರಗಿನವನು ಎಂಬ ಭಾವ ಮೂಡದಿದ್ದರೂ, ಒಂದು ವಿಧದಲ್ಲಿ ಅವರಿಂದ ಹೊರಗಂತೂ ಇರುತ್ತಿದ್ದೆ" ಎಂದರು. ಆ ಮದುವೆಯ ಘಟಸ್ಫೋಟವು ಕೇವಲ ಎರಡೇ ವರ್ಷಗಳಲ್ಲಿ ಜರುಗಿತು.
ಅಮೋಸ್ ಹ್ಯಾಂಕ್ಸ್ ಒಂಟಿ ಪೋಷಕನಾಗಿ, ದೀರ್ಘಕಾಲ ದುಡಿಮೆಯಲ್ಲಿ ತೊಡಗಿಕೊಂಡು, ಮಕ್ಕಳು ತಮ್ಮ ಪಾಲನೆ ತಾವೇ ಮಾಡಿಕೊಳ್ಳುವುದರ ಅಪೇಕ್ಷೆ ಹೊಂದಿದುದು, ಮಕ್ಕಳಲ್ಲಿ ಆತ್ಮಾವಲಂಬನದ ಬೆಳವಣಿಗೆಗೆ ಪೂರಕವಾಗಿ, ಅವರ ಮುಂದಿನ ಬದುಕಿಗೆ ಅನುಕೂಲವೇ ಆಯಿತು. ಶಾಲೆಯಲ್ಲಿ ಹ್ಯಾಂಕ್ಸ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಏಕರೀತ್ಯಾ ಬೇಡದವನಾಗಿದ್ದು, ರೋಲಿಂಗ್ ಸ್ಟೋನ್ ಪತ್ರಿಕೆಗೆ: "ನಾನು ಒಬ್ಬ ಗೀಕ್ ಆಗಿದ್ದೆ, ಒಬ್ಬ ಮಖೇಡಿ. ನಾನು ಬಹಳ ಎಂದರೆ ಬಹಳ ನಾಚಿಕೆಯ ಸ್ವಭಾವದವನಾಗಿದ್ದೆ. ಆದರೆ ಚಿತ್ರದ ತುಣುಕುಗಳನ್ನು ತೋರಿಸಿದಾಗ ಅವಕ್ಕೆ ಹಾಸ್ಯಮಯ ತಲೆಬರಹಗಳನ್ನು ಕೂಗಿ ಹೇಳುತ್ತಿದ್ದುದೂ ನಾನೇ. ಆದರೆ ನಾನು ಎಂದೂ ತೊಂದರೆಗೆ ಸಿಲುಕಿಕೊಳ್ಳುತ್ತಿರಲಿಲ್ಲ. ನಾನು ಯಾವಾಗಲೂ ಒಳ್ಳೆಯ ಮತ್ತು ಜವಾಬ್ದಾರಿಯುತ ಹುಡುಗನಾಗಿದ್ದೆ" ಎಂದು ಹೇಳಿಕೆ ನೀಡಿದರು. 1965ರಲ್ಲಿ ಅಮೋಸ್ ಹ್ಯಾಂಕ್ಸ್ ಫ್ರಾನ್ಸೆಸ್ ವಾಂಗ್ ಎಂಬ ಚೀನಾ ಮೂಲದ ಸ್ಯಾನ್ ಫ್ರಾನ್ಸಿಸ್ಕೋ ನಿವಾಸಿಯನ್ನು ಮದುವೆಯಾದನು. ಫ್ರಾನ್ಡೆಸ್ ಗೆ ಮೂರು ಮಕ್ಕಳಿದ್ದು, ಅವರಲ್ಲಿ ಇಬ್ಬರು ಟಾಮ್ ನ ಹೈ ಸ್ಕೂಲ್ ದಿನಗಳಲ್ಲಿ ಟಾಮ್ ನೊಡನಿದ್ದರು. ಟಾಮ್ ಶಾಲೆಯ ನಾಟಕಗಳಲ್ಲಿ ಅಭಿನಯಿಸುತ್ತಿದ್ದು, ಕ್ಯಾಲಿಫೋರ್ನಿಯಾದ ಓಕ್ ಲ್ಯಾಂಡ್ ನ ಸ್ಕೈಲೈನ್ ಹೈ ಸ್ಕೂಲ್ ನಲ್ಲಿದ್ದಾಗಲೇ ಸೌತ್ ಪೆಸಿಫಿಕ್ ಎಂಬ ನಾಟಕದಲ್ಲಿ ಅಭಿನಯಿಸಿದ್ದರು.
ಹ್ಯಾಂಕ್ಸ್ ಕ್ಯಾಲಿಫೋರ್ನಿಯಾದ ಹೇವಾರ್ಡ್ ನ ಷಾಬಾಟ್ ಕಾಲೇಜಿನಲ್ಲಿ ನಾಟಕಕಲೆಯ ವ್ಯಾಸಂಗ ಮಾಡಿ, ಎರಡು ವರ್ಷಗಳ ನಂತರ ಕ್ಯಾಲಿಫೋರ್ನಿಯಾ ರಾಜ್ಯ ವಿಶ್ವವಿದ್ಯಾಲಯ, ಸ್ಯಾಕ್ರಮೆಂಟೋಗೆ ವರ್ಗವಾದರು. ಹ್ಯಾಂಕ್ಸ್ ದ ನ್ಯೂ ಯಾರ್ಕ್ ಟೈಮ್ಸ್ ಗೆ ಹೀಗೆ ಹೇಳಿದರು: "ಅಭಿನಯ ತರಬೇತಿ ತರಗತಿಗಳು ಬಹಳ ಸದ್ದು ಮಾಡುತ್ತಾ ಪ್ರದರ್ಶನಪ್ರಿಯತೆಯನ್ನು ಇಷ್ಟ ಪಡುವವರಿಗೆ ಸೂಕ್ತವಾದ ಸ್ಥಳಗಳೆನಿಸಿದವು. ನಾನು ನಾಟಕಗಳಲ್ಲಿ ಬಹಳ ಸಮಯ ಕಳೆಯುತ್ತಿದ್ದೆನು. ಆಗ ನನ್ನೊಂದಿಗೆ ಯಾರನ್ನೂ ಕರೆಡೊಯ್ಯುತ್ತಿರಲಿಲ್ಲ. ನಾನೊಬ್ಬನೇ ಥಿಯೇಟರ್ ಗೆ ಹೋಗುತ್ತಿದ್ದೆ, ಟಿಕೆಟ್ ಕೊಳ್ಳುತ್ತಿದ್ದೆ, ಸೀಟ್ ನಲ್ಲಿ ಕುಳಿತು ಕಾರ್ಯಕ್ರಮದ ಬಗ್ಗೆ ಓದುತ್ತಿದ್ದೆ ಮತ್ತು ನಂತರ ಸಂಪೂರ್ಣವಾಗಿ ನಾಟಕದಲ್ಲಿ ಮಗ್ನನಾಗಿಬಿಡುತ್ತಿದ್ದೆ. ಈ ರೀತಿ ನಾನು ಬಹಳವಾಗಿ ಕಳೆದ ಸಮಯದಲ್ಲಿ ಬೆರ್ಟಾಲ್ಟ್ ಬ್ರೆಕ್ಟ್, ಟೆನೆಸ್ಸೀ ವಿಲಿಯಮ್ಸ್, ಹೆನ್ರಿಕ್ ಇಬ್ಸೆನ್ ಮತ್ತು ಇಂತಹ ಹಲವಾರು ನಟರನ್ನು ಕಂಡೆ, ಮತ್ತು, ಈಗ ನೋಡಿದರೆ, ನನಗೆ ನಟನೆಯೇ ವೃತ್ತಿಯಾಗಿಬಿಟ್ಟಿದೆ. ನನ್ನ ಬದುಕು ಇನ್ನಾವ ವಿಧದಲ್ಲಿರುವುದನ್ನೂ ನಾನು ಬಯಸುವುದಿಲ್ಲ."
ರಂಗವ್ಯಾಸಂಗ ಸಮಯದಲ್ಲಿಯೇ ಟಾಮ್ ಓಹಿಯೋದ ಕ್ಲೀವ್ ಲ್ಯಾಂಡ್ ನ ಗ್ರೇಟ್ ಲೇಕ್ಸ್ ನಾಟಕೋತ್ಸವದ ರೂವಾರಿಯಾದ ವಿನ್ಸೆಂಟ್ ಡೌಲಿಂಗ್ ರನ್ನು ಭೇಟಿಯಾದರು. ಡಾಲಿಂಗ್ ನ ಸಲಹೆಯ ಮೇರೆಗೆ ಟಾಮ್ ಆ ಉತ್ಸವದ ಪರಿಚಾರಕನಾಗಿ ಸೇರಿದರು ಮತ್ತು ಹಾಗೆ ಸೀರಿದ ನಂತರ ಮೂರು ವರ್ಷಗಳ ಕಾಲ ಲೈಟಿಂಗ್ ನಿಂದ ಹಿಡಿದು, ವೇದಿಕೆಯ ವಿನ್ಯಾಸದಿಂದ ಹಿಡಿದು, ವೇದಿಕೆಯ ನಿರ್ವಹಣೆಯವರೆಗೆ ಎಲ್ಲವನ್ನೂ ಕಲಿತರು. ಈ ವಿಧದ ಕಲಿಕೆಗೆ ಕಾಲೇಜ್ ನಿಂದ ಹೊರಬರುವುದು ಅವಶ್ಯವಾಯಿತು, ಆದರೆ ರಂಗದ ವಿಷಯಗಳು ಕರಗತವಾದುದರಿಂದ ಅಭಿನಯದ ಭವಿಷ್ಯವು ಉಜ್ವಲವಾಗಲು ಸಹಕಾರಿಯಾಯಿತು. ಹ್ಯಾಂಕ್ಸ್ ಗೆ ಷೇಕ್ಸ್ ಪಿಯರ್ ನ ದ ಟೂ ಜೆಂಟಲ್ ಮೆನ್ ಫ್ರಂ ವೆರೋನಾ ನಾಟಕದ ಪ್ರೋಟಿಯಸ್ (ಟಾಮ್ ಖಳನಾಯಕನ ಪಾತ್ರ ಮಾಡಿದ ಅಪರೂಪದ ಪ್ರಸಂಗಗಳಲ್ಲಿ ಇದೊಂದು)ನ ಪಾತ್ರಾಭಿನಯಕ್ಕೆ ಅತ್ಯುತ್ತಮ ನಟ ಎಂದು ಕ್ಲೀವ್ ಲ್ಯಾಂಡ್ ವಿಮರ್ಶಕರ ವೃಂದವು ಪ್ರಶಸ್ತಿ ನೀಡಿತು.
ವೃತ್ತಿಜೀವನದ ಮೊದಮೊದಲು
[ಬದಲಾಯಿಸಿ]1979ರಲ್ಲಿ ಹ್ಯಾಂಕ್ಸ್ ನ್ಯೂ ಯಾರ್ಕ್ ಸಿಟಿ ಗೆ ವಲಸೆ ಬಂದು ತಮ್ಮ ಚೊಚ್ಚಲ ಚಿತ್ರವಾದ ಸ್ಲ್ಯಾಷರ್ ನ ಕಡಿಮೆ ವೆಚ್ಚದ ಚಲನಚಿತ್ರ ಹಿ ನೋಸ್ ಯೂ ಆರ್ ಅಲೋನ್ ನಲ್ಲಿ ಅಭಿನಯಿಸಿದರಲ್ಲದೆ ಕಿರುತೆರೆಗಾಗಿ ತೆಗೆದ ಚಿತ್ರವಾದ ಮೇಝಸ್ ಎಂಡ್ ಮಾನ್ ಸ್ಟರ್ಸ್ ನಲ್ಲೂ ಪಾತ್ರ ವಹಿಸಿದರು. 1979ರ ಅದಿಯಲ್ಲಿ ನಿಕ್ಕೋಲೋ ಮ್ಯಾಷಿಯಾವೆಲ್ಲಿಯ ದ ಮಾಂಡ್ರೇಕ್ ಅನ್ನು ಡೇನಿಯಲ್ ಸದರನ್ ನ ನಿರ್ದೇಶನದಲ್ಲಿ ರಿವರ್ ಸೈಡ್ ಷೇಕ್ಸ್ ಪಿಯರ್ ಕಂಪನಿಯ ನಿರ್ಮಾಪಕತ್ವದಲ್ಲಿ ಕ್ಯಾಲಿಮಾಕೋ ದ ಪ್ರಮುಖ ಪಾತ್ರದಲ್ಲಿ ಹ್ಯಾಂಕ್ಸ್ ಅಭಿನಯಿಸಿದರು. ಇದು ಇಂದಿನವರೆಗೂ ಹ್ಯಾಂಕ್ಸ್ ನ್ಯೂ ಯಾರ್ಕ್ ನಲ್ಲಿ ನೀಡಿದ ಏಕೈಕ ರಂಗಾಭಿನಯವಾಗಿದೆ; ಪ್ರತಿಷ್ಠಿತ ಆಫ್ ಆಫ್ ಬ್ರಾಡ್ ವೇ ಯ ಷೋಕೇಸ್ ನಂತಾದ ಈ ನಾಟಕವು ಹ್ಯಾಂಕ್ಸ್ ರಿಗೆ ಜೋ ಓಹ್ಲಾ ಎಂಬ ಜೆ. ಮೈಕೆಲ್ ಬ್ಲೂಮ್ ಏಜೆನ್ಸಿಯವರನ್ನು ಭೇಟಿಯಾಗಲು ಅನುವು ಮಾಡಿಕೊಟ್ಟಿತು. ನಂತರದ ವರ್ಷದಲ್ಲಿ ABC ಟೆಲಿವಿಷನ್ ನವರ ಬೂಸಮ್ ಬಡ್ಡೀಸ್ ನ ಮುನ್ನೋಟಚಿತ್ರಣದಲ್ಲಿ ಕಿಪ್ ವಿಲ್ಸನ್ ನ ಪಾತ್ರವನ್ನು ಹ್ಯಾಂಕ್ಸ್ ಪಡೆದರು. ಅಲ್ಲಿಂದ ಲಾಸ್ ಏಂಜಲೀಸ್ ಗೆ ಸಾಗಿದ ಹ್ಯಾಂಕ್ಡ್ ಪೀಟರ್ ಸ್ಕೊಲಾರಿ ರೊಡನೆ ಜಾಹಿರಾತು ಜಗತ್ತಿನಲ್ಲಿ ದುಡಿಯುವ ಇಬ್ಬರು ಯುವಕರು ಕಡಿಮೆ ಖರ್ಚಿನಲ್ಲಿ ದೊರೆಯುವ ಸಂಪೂರ್ಣ-ಸ್ತ್ರೀಯರೇ ಇರುವ ಹೊಟೆಲ್ ನಲ್ಲಿ ಇಬ್ಬರೂ ಹುಡುಗಿಯರಂತೆ ಉಡುಗೆ ಧರಿಸಿ ಇರಬೇಕಾದಂತಹ ಪಾತ್ರವನ್ನು ವಹಿಸಿದರು. ಇದಕ್ಕೂ ಮುನ್ನ ಹ್ಯಾಂಕ್ಸ್ ಸ್ಕೋಲಾರಿಯೊಡನೆ 1970ರಲ್ಲಿ ಮೇಕ್ ಮಿ ಲಾಫ್ ಎಂಬ ಒಂದು ಕ್ರೀಡಾ ಕಾರ್ಯಕ್ರಮ ನಡೆಸಿದ್ದರು. ಬೂಸಮ್ ಬಡ್ಡೀಸ್ ಎರಡು ಋತುಗಳು ಓಡಿ, ಬಹಳ ಜನಪ್ರಿಯತೆಯನ್ನು ಪಡೆಯುವಲ್ಲಿ ಸೋತರೂ, ಟೆಲಿವಿಷನ್ ವಿಮರ್ಶಕರು ಅ ಕಾರ್ಯಕ್ರಮಕ್ಕೆ ಹೆಚ್ಚಿನ ಅಂಕಗಳನ್ನು ನೀಡಿದರು. "ನಾನು ಅವರನ್ನು ಸೆಟ್ ನ ಮೇಲೆ ನೋಡಿದ ಮೊದಲ ದಿನವೇ " ರೋಲಿಂಗ್ ಸ್ಟೋನ್ ಗೆ ಹೇಳಿಕೆ ನೀಡುತ್ತಾ ಸಹ-ನಿರ್ಮಾಪಕ ಇಯಾನ್ ಪ್ರೇಯ್ಸರ್ ನುಡಿದರು"ನನಗೆನಿಸಿತು'ಛೆ! ಈತ ಹೆಚ್ಚು ಕಾಲ ಕಿರುತೆರೆಯಲ್ಲಿ ಇರುವುದಿಲ್ಲ.' ನನಗೆ ಆತ ೆರಡು ವರ್ಷಗಳಲ್ಲಿ ಚಲನಚಿತ್ರತಾರೆಯಾಗುವರೆಂದು ತಿಳಿದಿತ್ತು." ಆದರೆ, ಅದು ಪ್ರೇಯ್ಸರ್ ಗೆ ತಿಳಿದಿದ್ದರೂ, ಆ ಬಗ್ಗೆ ಹ್ಯಾಂಕ್ಸ್ ರನ್ನು ಒಪ್ಪಿಸಲಾಗಲಿಲ್ಲ. ಹ್ಯಾಂಕ್ಸ್ ರ ಆಪ್ತಮಿತ್ರ ಟಾಮ್ ಲಿಝ್ಝಿಯೋ ರೋಲಿಂಗ್ ಸ್ಟೋನ್ ನೊಡನೆ ಮಾತನಾಡುತ್ತಾ "ಟೆಲಿಚಷನ್ ಷೋ ಶೂನ್ಯದಿಂದ ಬಂದಂತಿತ್ತು", "ನಂತರ ಅದೇ ಶೂನ್ಯದಲ್ಲೇ ಲೀನವಾಗುವಂತೆ ರದ್ದಾಯಿತು. ಹ್ಯಾಂಕ್ಸ್ ಇನ್ನು ಮುಂದೆ ಪರದೆ ಎಳೆಯುವುದು ಮತ್ತು ಲೈಟ್ ಗಳನ್ನು ಥಿಯೇಟರ್ ಗಳಲ್ಲಿ ತಗುಲಿಹಾಕುವುದೇ ಿನ್ನು ತನ್ನ ಬದುಕಿನ ಮಾರ್ಗ ಎಂದುಕೊಂಡರು."
ಬೂಸಮ್ ಬಡ್ಡೀಸ್ ಮತ್ತು 1992ರಲ್ಲಿ ಹ್ಯಾಪಿ ಡೇಸ್ ನ ಒಂದು ಸಂಚಿಕೆಯಲ್ಲಿ ಅತಿಥಿ ನಟನಾಗಿ ಕಾಣಿಸಿಕೊಂಡದ್ದು(Fonzನ ಅಸಂತುಷ್ಟ ಮಾಜಿ ಸ್ನೇಹಿತನ ಪಾತ್ರವನ್ನು "ಎ ಕೇಸ್ ಆಫ್ ರಿವೆಂಜ್"ನಲ್ಲಿ ಅಭಿನಯಿಸಿದರು)ನಿರ್ದೇಶಕ ರಾನ್ ಹೊವಾರ್ಡ್ ಹ್ಯಾಂಕ್ಸ್ ನನ್ನು ಭೇಟಿಯಾಗಲು ಪ್ರೇರೇಪಿಸಿತು. ಹೊವಾರ್ಡ್ ಸ್ಪ್ಲಾಷ್ ಎಂಬ (1984)ಒಬ್ಬ ಜಲಕನ್ಯೆಯು ಮನುಜನನ್ನು ಪ್ರೀತಿಸುವ ಕಲ್ಪನಾಭರಿತ ರೋಚಕ ಹಾಸ್ಯಚಿತ್ರ ತೆಗೆಯುವ ಬಗ್ಗೆ ಯೋಚಿಸುತ್ತಿದ್ದರು. ಮೊದಲಿಗೆ ಹೊವಾರ್ಡ್ ಮುಖ್ಯಪಾತ್ರದವನೊಡನೆ ಇದ್ದು ಹಾಸ್ಯಚಟಾಕಿಗಳನ್ನು ಹಾರಿಸುವ ಅವನ ತಮ್ಮನ ಪಾತ್ರಕ್ಕೆ ಹ್ಯಾಂಕ್ಸ್ ನನ್ನು ಆರಿಸಿದ್ದು, ಆ ಪಾತ್ರ ನಂತರ ಜಾನ್ ಕ್ಯಾಂಡಿಯ ಪಾಲಾಯಿತು. ಬದಲಿಗೆ ಹ್ಯಾಂಕ್ಡ್ ಗೆ ಪ್ರಮುಖ ಪಾತ್ರ ಮತ್ತು ವೃತ್ತಿಜೀವನಕ್ಕೆ ಒಳ್ಳೆಯ ಪ್ರೇರಣೆ ಸ್ಪ್ಲಾಷ್ ನಿಂದ ದೊರಕಿತು ಮತ್ತು ಆ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಕಂಡು US$69 ಮಿಲಿಯನ್ ಗಿಂತಲೂ ಹೆಚ್ಚು ಹಣವನ್ನು ಬಾಚಿಕೊಂಡಿತು. ಅಲ್ಲದೆ 1984ರಲ್ಲಿ ಹ್ಯಾಂಕ್ಸ್ ಅಭಿನಯದ ಬ್ಯಾಚೆಲರ್ ಪಾರ್ಟಿ ಎಂಬ ಲೈಂಗಿಕ ಹಾಸ್ಯವೂ ತಕ್ಕಮಟ್ಟಿಗೆ ಯಶ ಪಡೆಯಿತು.
1983 -84ರಲ್ಲಿ ಹ್ಯಾಂಕ್ಸ್ ಫ್ಯಾಮಿಲೀ ಟೈಸ್ ಟೆಲಿಸರಣಿಯಲ್ಲಿ ಎಲೈಸ್ ಕೀಟನ್ ನ ಕುಡುಕ ಸಹೋದರ ನೆಡ್ ಡೊನೆಲ್ಲಿಯ ಪಾತ್ರದಲ್ಲಿ ಮೂರು ಬಾರಿ ಅತಿಥಿನಟನಾಗಿ ಕಾಣಿಸಿಕೊಂಡರು.[೪][೫]
ಯಶ ಮತ್ತು ಅಪಯಶಗಳ ಕಾಲ
[ಬದಲಾಯಿಸಿ]1986ರ ನಥಿಂಗ್ ಇನ್ ಕಾಮನ್ ನಲ್ಲಿ - ಒಬ್ಬ ಯುವಕ ತನ್ನ ತಂದೆತಾಯಿಯರಿಂದ ಬೇರ್ಪಟ್ಟಿದ್ದು, ತನ್ನ ತಂದೆ (ತಂದೆಯ ಪಾತ್ರವನ್ನು ಜಾಕೀ ಗ್ಲೀಸನ್ ಅಭಿನಯಿಸಿದರು))ಯೊಡನೆ ಮತ್ತೆ ಸಂಬಂಧ ಹೊಂದಲೇಬೇಕಾದ ಪಾತ್ರವನ್ನು - ಕೈಗೆತ್ತಿಕೊಂಡು ಅಭಿನಯಿಸುವುದರ ಮೂಲಕ ಹ್ಯಾಂಕ್ಸ್ ತಾವು ಹಾಸ್ಯ ಪಾತ್ರಗಳಿಗಷ್ಟೇ ಅಲ್ಲದೆ ಗಂಭೀರ ಪಾತ್ರಗಳಿಗೂ ಹೊಂದುವರೆಂಬುದನ್ನು ಸಾಬೀತುಪಡಿಸಿದರು. "ಅದು ನಾನು ಚಲನಚಿತ್ರಗಳಲ್ಲಿ ಪಾತ್ರ ಮಾಡಲು ಹೊಂದಿದ್ದ ಬಯಕೆಗಳನ್ನು ಬದಲಿಸಿತು." ಎಂದು ರೋಲಿಂಗ್ ಸ್ಟೋನ್ ಗೆ ಹೇಳಿದರು ಹ್ಯಾಂಕ್ಸ್. "ಭಾಗಶಃ ಅದು ವಿಷಯದ ರೀತಿ, ನಾವು ಏನನ್ನು ಹೇಳಬಯಸುತ್ತಿದ್ದವೋ ಅದು. ಆದರೆ ಅದಲ್ಲದೆ, ವಿಷಯವು ಜನಗಳ ಸಂಬಂಧಗಳ ಬಗ್ಗೆ ಕೇಂದ್ರೀಕೃತವಾಗಿತ್ತು. ಈ ಕಥೆ ಒಬ್ಬ ವ್ಯಕ್ತಿ ಮತ್ತು ತನ್ನ ತಂದೆಯ ಬಗ್ಗೆಯದಾಗಿತ್ತು. ಇದು ದ ಮನಿ ಪಿಟ್ (1986) ಎಂಬ, ಒಬ್ಬ ವ್ಯಕ್ತಿ ಮತ್ತು ತನ್ನ ಮನೆಯ ಬಗ್ಗೆಗಿನ ಕಥೆಗಿಂತಲೂ ವಿಭಿನ್ನವಾಗಿತ್ತು."
ಮೂರು ವಿಫಲ ಚಿತ್ರಗಳ ನಂತರ ಹ್ಯಾಂಕ್ಸ್ ಬಿಗ್ (1988)ಎಂಬ ಕಲ್ಪನಾಭರಿತ ಚಿತ್ರದ ಮೂಲಕ ಗಲ್ಲಾಪೆಟ್ಟಿಗೆಯಲ್ಲೂ ಮತ್ತು ಚಿತ್ರೋದ್ಯಮದಲ್ಲೂ ತನ್ನ ಹೆಸರನ್ನು ಸ್ಥಾಪಿಸಿಕೊಂಡು ಹ್ಯಾಂಕ್ಸ್ ಎಂದರೆ ಹಾಲಿವುಡ್ ನ ಪ್ರಮುಖ ಪ್ರತಿಭೆ ಎನ್ನುವ ಮಟ್ಟಿಗೆ ಬೆಳೆದರು.(ಈ ಚಿತ್ರ ಅವರಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ತಂದುಕೊಟ್ಟಿತು). ಈ ಚಿತ್ರದ ನಂತರ ಅದೇ ವರ್ಷ ಪಂಚ್ ಲೈನ್ ಎಂಬ ಚಿತ್ರದಲ್ಲಿ ಹ್ಯಾಂಕ್ಸ್ ಸ್ಯಾಲೀ ಫೀಲ್ಡ್ ರೊಡನೆ ಸಂಕಷ್ಟದಲ್ಲಿರುವ ಸ್ಟ್ಯಾಂಡ್-ಅಪ್ ಕಮೆಡಿಯನ್ ಗಳ ಪಾತ್ರದಲ್ಲಿ ಅಭಿನಯಿಸಿದರು. ಹ್ಯಾಂಕ್ಸ್ ವಹಿಸಿದ ಸ್ಟೀವನ್ ಗೋಲ್ಡ್ ಎಂಬ ಅನುತ್ತೀರ್ಣಗೊಂಡ ವೈದ್ಯಕೀಯ ವಿದ್ಯಾರ್ಥಿಯು ಸ್ಟ್ಯಾಂಡ್-ಅಪ್ ಜಗತ್ತಿಗೆ ಕಾಲಿಡಲು ಪಡುವ ಅವಸ್ಥೆಯನ್ನು ಬಿಂಬಿಸುವ ಪಾತ್ರವು ಕೊಂಚ ಕ್ಲಿಷ್ಟವೂ, ಸಂಕೀರ್ಣವೂ ಆಗಿದ್ದು, ಹ್ಯಾಂಕ್ಸ್ ಮುಂದೆ ಹಲವಾರು ಭಾವಪೂರ್ಣ ಅಭಿನಯಗಳನ್ನು ನೀಡುವುದರ ಕುರುಹು ಇಲ್ಲಿ ಗೋಚರವಾಗಿತ್ತು. ಹ್ಯಾಂಕ್ಸ್ ನಂತರ ಗಲ್ಲಾಪೆಟ್ಟಿಗೆಯಲ್ಲಿ ಹಲವಾರು ವಿಫಲತೆಗಳನ್ನು ಎದುರಿಸಿದರು: ದ ಬರ್ಬ್ಸ್ (1989), ಜೋ ವರ್ಸಸ್ ದ ವಾಲ್ಕೆನೋ (1990), ಮತ್ತು ದ ಬಾನ್ ಫೈರ್ ಆಫ್ ದ ವ್ಯಾನಿಟೀಸ್ (1990)ನಲ್ಲಿ ಒಬ್ಬ ಆಸೆಬುರುಕ ವಾಲ್ ಸ್ಟ್ರೀಟ್ ರೀತಿಯ ವ್ಯಕ್ತಿ ಹಿಟ್ ಎಂಡ್ ರನ್ ಅಪಘಾತದಲ್ಲಿ ಸಿಲುಕಿಕೊಂಡ ಪಾತ್ರ. ಈ ಅವಧಿಯಲ್ಲಿ ಅವರಿಗೆ ಯಶ ತಂದ ಒಂದೇ ಚಿತ್ರ 1989ರ ಟರ್ನರ್ ಎಂಡ್ ಹೂಚ್ . 1993ರ ಡಿಸ್ನೀ ಅಡ್ವೆಂಚರ್ಸ್ ನೊಡನೆ ಮಾತನಾಡುತ್ತಾ ಹ್ಯಾಂಕ್ಸ್ "ಒಮ್ಮೆ ನಾನು ಟರ್ನರ್ ಎಂಡ್ ಹೂಚ್ ಅನ್ನು SAC ಅಂಗಡಿಯಲ್ಲಿ ಕಂಡೆ ಮತ್ತು ಅದರ ನೆನಪುಗಳಲ್ಲಿ ಹುದುಗಿಕೊಂಡೆ. ನಾನು ಮಗುವಿನಂತೆ ಅತ್ತೆ." ಎಂದರು. ಕೆಲವು ಬಮ್ ಟಿಕರ್ಸ್ (ದಡ್ಡ ತೀರ್ಮಾನಗಳು) ತೆಗೆದುಕೊಂಡೆನೆನ್ನುವ ಅವರು ಅದಕ್ಕೆ ಕಾರಣ "...ಅನುಮಾನದ ಯೋಚನಾಲಹರಿ ಮತ್ತು ನಿರ್ಧಾರ ತೆಗೆದುಕೊಳ್ಳುವುದರಲ್ಲಿರುವ ಜಾಣ್ಮೆ" ಎಂದರು.
ಭಾವಪೂರ್ಣ ಪಾತ್ರಾಭಿನಯದತ್ತ ಭಡ್ತಿ
[ಬದಲಾಯಿಸಿ]ಹ್ಯಾಂಕ್ಸ್ ಮತ್ತೆ ಉತ್ತುಂಗಕ್ಕೆ ಏರಲು ಪೂರಕವಾಗಿದ್ದು ಎ ಲೀಗ್ ಆಫ್ ದೇರ್ ಓನ್ (1992)ಎಂಬ ಚಿತ್ರದ ಅಸಫಲನಾದ ಬೇಸ್ ಬಾಲ್ ಮ್ಯಾನೇಜರ್ ನ ಪಾತ್ರದಲ್ಲಿನ ಭಾವಪೂರ್ಣ ಅಭಿನಯ. ಹ್ಯಾಂಕ್ಸ್ ತನ್ನ ಮುಂಚಿನ ಪಾತ್ರಗಳಲ್ಲಿನ ಅಭಿನಯವು ಶ್ರೇಷ್ಠಮಟ್ಟದ್ದಾಗಿರಲಿಲ್ಲವೆಂದೂ, ಈಗ ಉತ್ತಮಗೊಂಡಿದೆಯೆಂದೂ ಖುದ್ದು ಒಪ್ಪಿಕೊಂಡರು. ವ್ಯಾನಿಟಿ ಫೇಯ್ರ್ ಗೆ ನೀಡಿದ ಒಂದು ಸಂದರ್ಶನದಲ್ಲಿ ಹ್ಯಾಂಕ್ಸ್, "ಆಧುನಿಕ ಕಾಲದ ಚಲನಚಿತ್ರ ನಿರ್ಮಾಣ.....ಏಕೆಂದರೆ ಸಾಕಷ್ಟು ಆತ್ಮ-ಶೋಧನೆಯು ನಡೆದಿದೆ... ನನ್ನ ಕೆಲಸವು ಕಡಿಮೆ'ನಾಟಕೀಯ ಮತ್ತು ಅತಿರೇಕ'ತೆಯಿಂದ ಕೂಡಿದೆ."ಎಂದರು. ಈ "ಆಧುನಿಕ ಕಾಲ"ವು ಹ್ಯಾಂಕ್ಸ್ ರಿಗೆ ಒಂದು ಅದ್ಭುತವಾದ 1993ಯನ್ನು ನೀಡಿತು, ಮೊದಲು ಸ್ಲೀಪ್ ಲೆಸ್ ಇನ್ ಸಿಯಟ್ಟಲ್ ನಿಂದ, ನಂತರ ಫಿಲಡೆಲ್ಫಿಯಾ ದಿಂದ. ಮುಂಚಿನ ಚಿತ್ರವು ಅಮೋಘ ಯಶ ಗಳಿಸಿದ್ದು, ಒಬ್ಬ ವಿದುರನು ನಿಜವಾದ ಪ್ರೀತಿಯನ್ನು(ಮೆಗ್ ರಿಯಾನ್ಳ ಪಾತ್ರದಲ್ಲಿ) ಗಾಳಿಯ ತರಂಗಗಳ ಮೇಲೆ ಕಾಣುವ ಚಿತ್ರವದಾಗಿತ್ತು. ಟೈಮ್ ನ ರಿಚರ್ಡ್ ಷಿಕ್ಲ್ ಈ ಅಭಿನಯವನ್ನು "ಆಕರ್ಷಕ" ಎಂದು ಕರೆದನು ಮತ್ತು ಸುಮಾರು ಎಲ್ಲಾ ವಿಮರ್ಶಕರೂ ಹ್ಯಾಂಕ್ಸ್ ರ ಈ ಪಾತ್ರಾಭಿನಯವು ಸಮಕಾಲೀನ ಪ್ರಣಯ-ಹಾಸ್ಯ ಪಾತ್ರ ವಹಿಸುವ ಪ್ರಮುಖ ತಾರೆಯರ ಪಟ್ಟಿಯಲ್ಲಿ ಇವರು ಸಲ್ಲುವರೆಂದೂ ನುಡಿದು, ಹ್ಯಾಂಕ್ಸ್ ಭರವಸೆಯ ತಾರೆಯಾದರು.
ಫಿಲಡೆಲ್ಫಿಯಾ ಚಿತ್ರದಲ್ಲಿ ಹ್ಯಾಂಕ್ಸ್ ಒಬ್ಬ AIDS ಪೀಡಿತ ಸಲಿಂಗಿ ವಕೀಲನೊಬ್ಬ ತನ್ನ ಸಂಸ್ಥೆಯು ತೋರಿದ ತಾರತಮ್ಯದ ವಿರುದ್ಧ ದಾವೆ ಹೂಡುವ ಪಾತ್ರವನ್ನು ವಹಿಸಿದರು. ಆ ಪಾತ್ರದಲ್ಲಿ ರೋಗಿಷ್ಠನಂತೆ ಕಾಣಿಸಿಕೊಳ್ಳುವ ಸಲುವಾಗಿ ಹ್ಯಾಂಕ್ಸ್ ಮೂವತ್ತೈದು ಪೌಂಡ್ ತೂಕ ಇಳಿಸಿಕೊಂಡು ತಮ್ಮ ಕೂದಲನ್ನು ತೆಳುವಾಗಿಸಿಕೊಂಡರು. ಪೀಪಲ್ ಗಾಗಿ ಬರೆದ ವಿಮರ್ಶೆಯಲ್ಲಿ ಲಿಯಾ ರೋಝೆನ್ "ಎಲ್ಲಕ್ಕೂ ಮಿಗಿಲಾಗಿ ಫಿಲಡೆಲ್ಫಿಯಾದ ಗೆಲುವಿನ ಹಿರಿಮೆ ಹ್ಯಾಂಕ್ಸ್ ಗೇ ಸಲ್ಲಬೇಕು, ಅವರು ಪಾತ್ರವೇ ಆಗಿ ಅಭಿನಯಿಸುವುದನ್ನು ಖಚಿತಪಡಿಸಿಕೊಂಡು ಅಭಿನಯಿಸಿದರು, ಸಂತನಂತಲ್ಲ. ಅವರು ಸಂಪೂರ್ಣವಾಗಿ ಅದ್ಭುತಗೈದಿದ್ದಾರೆ, ಬಹಳ ಅನುಭವಿಸಿ, ಎಚ್ಚರಿಕೆಯಿಂದ ಪಾತ್ರದ ಹೊಳಹುಗಳನ್ನು ಗಮನಿಸಿ ನೀಡಿರುವ ಈ ಅಭಿನಯಕ್ಕೆ ಆಸ್ಕರ್ ಸಿಗಬೇಕು" ಎಂದು ಬರೆದರು. ಫಿಲಡೆಲ್ಫಿಯಾ' ದ ಈ ಪಾತ್ರಕ್ಕಾಗಿ ಹ್ಯಾಂಕ್ಸ್ 1993ರ ಅಕಾಡೆಮಿಯ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದುಕೊಂಡರು .ಪ್ರಶಸ್ತಿ ಪಡೆಯು ಸಮಯದಲ್ಲಿ ಮಾಡಿದ ಭಾಷಣದಲ್ಲಿ ತಾನು ಬಹಳ ಹಚ್ಚಿಕೊಂಡಿದ್ದ ಇಬ್ಬರು ವ್ಯಕ್ತಿಗಳಾದ ತನ್ನ ಹೈ ಸ್ಕೂಲ್ ಡ್ರಾಮಾ ಶಿಕ್ಷಕ ರಾಲೀ ಫ್ರಾನ್ಸ್ ವರ್ತ್ ಮತ್ತು ತನ್ನ ಮಾಜಿ ಸಹಪಾಠಿ ಗಿಲ್ಕರ್ಸನ್ ಸಲಿಂಗಿಗಳಾಗಿದ್ದರೆಂದು ಬಹಿರಂಗ ಪಡಿಸಿದರು.[೬] ಹೀಗೆ ಬಹಿರಂಗ ಪಡಿಸಿದ ಸುದ್ದಿಯು 1997ರ ಚಿತ್ರ ಇನ್ & ಔಟ್ ಗೆ ಪ್ರೇರಕವಾಯಿತು. ಆ ಚಿತ್ರದಲ್ಲಿ ಕೆವಿನ್ ಕ್ಲೈನ್ ಒಬ್ಬ ಆಂಗ್ಲ ಸಾಹಿತ್ಯ ಶಿಕ್ಷಕನು ತನ್ನ ಮಾಜಿ ಶಿಷ್ಯನಿಂದಲೇ ಇದೇ ವಿಧದಲ್ಲಿ ಬಹಿರಂಗಗೊಂಡಂತಹವನ ಪಾತ್ರದಲ್ಲಿ ಕಾಣಿಸಿಕೊಂಡನು .
ಹ್ಯಾಂಕ್ಸ್ ಫಿಲಡೆಲ್ಫಿಯಾ ದ ನಂತರ 1994ರ ಬೇಸಿಗೆಯ ಜನಪ್ರಿಯ ಚಿತ್ರ ಫಾರೆಸ್ಟ್ ಗಂಪ್ ನಲ್ಲಿ ಅಭಿನಯಿಸಿದನು: "ಗಂಪ್ ನ ಕಥೆ ಓದಿದಾಗ, ನನಗೆ ಕಂಡದ್ದು ಒಂದು ವೈಭವೋಪೇತ, ಭರವಸೆಭರಿತ ಚಿತ್ರವಾಗಿ ಪ್ರೇಕ್ಷಕರು ಹೋಗಿ (ತಮ್ಮದೇ ಎಂಬಂತೆ) ಅನುಭವಿಸುವಂತಹ ಚಿತ್ರ...ಆ ಜನಗಳಿಗೆ ಮತ್ತು ಅಂತಹವರ ಜೀವನಸ್ಥತಿಗೆ ಕೊಂಚ ಭರವಸೆ.... ನಾನು ಚಿಕ್ಕವನಾಗಿದ್ದಾಗ ನನಗೆ ಅಂತಹ ಭರವಸೆಗಳು ಚಲನಚಿತ್ರಗಳಿಂದ ನೂರಾರು ಮಿಲಯನ್ ಬಾರಿ ದೊರಕಿತ್ತು. ಈಗಲೂ ಸಿಗುತ್ತಿದೆ." ಹ್ಯಾಂಕ್ಸ್ ತನ್ನ ಎರಡನೆಯ ಅತ್ಯುತ್ತಮ ನಟ ಅಕಾಡೆಮಿ ಪ್ರಶಸ್ತಿಯನ್ನು ಫಾರೆಸ್ಟ್ ಗಂಪ್ ನ ಪಾತ್ರದ ಅಭಿನಯಕ್ಕಾಗಿ ಪಡೆದು, ಸತತವಾಗಿ ಎರಡನೆಯ ಬಾರಿಗೆ ಅತ್ಯುತ್ತಮ ನಟ ಅಕಾಡೆಮಿ ಪ್ರಶಸ್ತಿ ಪಡೆದ ಎರಡನೆಯ ನಟನೆಂಬ ಹೆಗ್ಗಳಿಕೆಗೆ ಪಾತ್ರನಾದನು. (ಸ್ಪೆನ್ಸರ್ ಟ್ರೇಸಿ ಮೊದಲಿಗರು, 1937-38ರ ವಿಜೇತರು. ಹ್ಯಾಂಕ್ಸ್ ಮತ್ತು ಟ್ರೇಸಿ ಅಕಾಡೆಮಿ ಪ್ರಶಸ್ತಿ ಪಡೆದಾಗ ಅವರಿಬ್ಬರ ವಯಸ್ಸೂ ಒಂದೇ ಆಗಿತ್ತು: ಮೊದಲನೆಯದನ್ನು ಪಡೆದಾಗ 37 , ೆರಡನೆಯದನ್ನು ಪಡೆದಾಗ 38 .)
ಹ್ಯಾಂಕ್ಸ್ ನ ಮುಂದಿನ ಯೋಜನೆಯಾದ 1995ರ ಚಿತ್ರ ಅಪೋಲೋ 13 ಅವರನ್ನು ಮತ್ತೆ ರಾನ್ ಹೊವಾರ್ಡ್ ನೊಡನೆ ಜೊತೆ ಮಾಡಿತು. ೀ ಚಿತ್ರದಲ್ಲಿ ಅವರು ಖಗೋಳಜ್ಞ ಮತ್ತು ಕಮಾಂಡರ್ ಜೇಮ್ಸ್ ಲೊವೆಲ್ ನ ಪಾತ್ರದಲ್ಲಿ ಅಭಿನಯಿಸಿದರು. ವಿಮರ್ಶಕರು ಈ ಚಿತ್ರವನ್ನು ಮೆಚ್ಚಿದರು ಮತ್ತು ಇಡೀ ಪಾತ್ರವರ್ಗವನ್ನೂ ಶ್ಲಾಘಿಸಿದರು. ಆ ಪಾತ್ರವರ್ಗದಲ್ಲಿ ಕೆವಿನ್ ಬೇಕನ್, ಬಿಲ್ ಪ್ಯಾಕ್ಸ್ ಟನ್, ಗ್ಯಾರಿ ಸಿನಿಸೆ, ಎಡ್ ಹ್ಯಾರಿಸ್ ಮತ್ತು ಕ್ಯಾಥ್ಲೀನ್ ಕ್ವಿನ್ ಲಾನ್ ನಂತಹ ಅಪ್ರತಿಮ ನಟರಿದ್ದರು. ಈ ಚಿತ್ರವು ಒಂಬತ್ತು ಅಕಾಡೆಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡು, ಎರಡನ್ನು ಗೆದ್ದಿತು. ಅದೇ ವರ್ಷ ಹ್ಯಾಂಕ್ಸ್ ಟಾಯ್ ಸ್ಟೋರಿ ಎಂಬ ಅನಿಮೇಷನ್ ಯಶಸ್ವಿ ಚಿತ್ರದಲ್ಲಿ ಷೆರೀಫ್ ವುಡಿ ಎಂಬ ಬೊಂಬೆಯ ದನಿಯಾಗಿ ಕಂಠದಾನ ಮುಖೇನ ಅಭಿನಯಿಸಿದರು.
ನಿರ್ದೇಶಕ, ನಿರ್ಮಾಪಕ ಮತ್ತು ನಟನಾಗಿ
[ಬದಲಾಯಿಸಿ]1996ರ ದಟ್ ಥಿಂಗ್ ಯೂ ಡೂ! ಚಿತ್ರದಿಂದ ಹ್ಯಾಂಕ್ಸ್ ನಿರ್ದೇಶನಕ್ಷೇತ್ರವನ್ನು ಪ್ರವೇಶಿಸಿದರು. ಈ ಚಿತ್ರವು 1960ರ ಪಾಪ್ ತಂಡದ ಕಥೆಯಾಗಿದ್ದು, ಈ ಚಿತ್ರದಲ್ಲಿ ಸಂಗೀತ ನಿರ್ಮಾಪಕನ ಪಾತ್ರವನ್ನೂ ವಹಿಸಿದರು. ಈ ಚಿತ್ರದಲ್ಲಿನ ರೆಕಾರ್ಡ್ ಕಂಪನಿಯ ಹೆಸರಾದ ಪ್ಲೇಟೋನ್ ಎಂಬ ಹೆಸರಿನಲ್ಲೇ ಹ್ಯಾಂಕ್ಸ್ ಮತ್ತು ಗ್ಯಾರಿ ಗೊಯೆಟ್ಝ್ ಮನ್ ಇಬ್ಬರೂ ಸೇರಿ ಒಂದು ರೆಕಾರ್ಡ್ ಮತ್ತು ಚಲನಚಿತ್ರ ನಿರ್ಮಾಪಕ ಸಂಸ್ಥೆಯನ್ನು ಹುಟ್ಟುಹಾಕಿದರು.
ಹ್ಯಾಂಕ್ಸ್ ಕಾರ್ಯಕಾರಿ ನಿರ್ಮಾಪಕನಾಗಿ, ಸಹ-ಲೇಖಕನಾಗಿ ಮತ್ತು ಸಹ-ನಿರ್ದೇಶಕನಾಗಿ HBOದ ಡಾಕ್ಯು-ಡ್ರಾಮಾ ಆದ ಫ್ರಮ್ ದ ಅರ್ಥ್ ಟು ದ ಮೂನ್ ತೆರೆಕಾಣಲು ಕಾರಣರಾದರು. ಈ ಹನ್ನೆರಡು-ಕಂತುಗಳ ಸರಣಿಯು ಬಾಹ್ಯಾಕಾಶ ಪ್ರವಾಸದ ಯೋಜನೆ ರೂಪುಗೊಂಡಾಗಿನಿಂದಲೂ, ನೀಲ್ ಆರ್ಮ್ ಸ್ಟ್ರಾಂಗ್ ಮತ್ತು ಜಿಮ್ ಲೊವೆಲ್ ರ ಪರಿಚಿತವಾದ ಯಾನದವರೆಗೂ ಹಾಗೂ ಚಂದ್ರನ ಮೇಲೆ ಕಾಲಿಟ್ಟುದರ ಬಗ್ಗೆ ವೈಯಕ್ತಿಕ ಭಾವನೆಗಳನ್ನೂ ಒಳಗೊಂಡಿದೆ. ಈ ಎಮ್ಮಿ ಪ್ರಶಸ್ತಿ ವಿಜೇತ ಯೋಜನೆಯು US$68 ಮಿಲಿಯನ್ ಖರ್ಚಿನಲ್ಲಿ ತಯಾರಾಗಿದ್ದು, ಟೆಲಿವಿಷನ್ ಜಗದಲ್ಲಿ ಇದೇ ಅತಿ ಹೆಚ್ಚು ವೆಚ್ಚದಲ್ಲಿ ರೂಪಿಸಿದ ಯೋಜನೆಯಾಯಿತು. ಹ್ಯಾಂಕ್ಸ್ ನ ಮುಂದಿನ ಯೋಜನೆಯೂ ಇದಕ್ಕಿಂತಲೂ ಕಡಿಮೆ ವೆಚ್ಚದ್ದೇನಾಗಿರಲಿಲ್ಲ.
ಸೇವಿಂಗ್ ಪ್ರೈವೇಟ್ ರಿಯಾನ್ ಗಾಗಿ ಹ್ಯಾಂಕ್ಸ್ ಸ್ಟೀವನ್ ಸ್ಪೀಲ್ ಬರ್ಗ್ ರೊಡಗೂಡಿ D-Day, ಓಮಾಹಾ ಬೀಚ್ ನಲ್ಲಿ ಒಂದು ನಿಲ್ದಾಣ ಮತ್ತು ಯುದ್ಧದಿಂದ ಜರ್ಝರಿತವಾದ ಫ್ರಾನ್ಸ್ ನಿಂದ ಮನೆಗೆ ಹೋಗಲು ಅನುಮತಿ ಇರುವ ಒಬ್ಬ ಸೈನಿಕನನ್ನು ಕರೆತರಲು ಯತ್ನಿಸುವ ಕಥೆಯನ್ನು ಹೊಂದಿದ ಒಂದು ಚಿತ್ರವನ್ನು ನಿರ್ಮಿಸಲು ಯೋಚಿಸಿದರು. ಈ ಚಿತ್ರವು ಚಿತ್ರರಂಗದವರ, ವಿಮರ್ಶಕರ ಮತ್ತು ಸಾರ್ವಜನಿಕರ ಮೆಚ್ಚುಗೆ ಮತ್ತು ಗೌರವಕ್ಕೆ ಪಾತ್ರವಾಯಿತು;ಯುದ್ಧದ ವಸ್ತುವನ್ನು ಹೊಂದಿ ತೆಗೆದ ಸರ್ವಕಾಲಿಕ ಚಿತ್ರಗಳಲ್ಲೊಂದೆಂಬ ಕೀರ್ತಿಗೆ ಈ ಚಿತ್ರವು ಭಾಜನವಾಯಿತು ಹಾಗೂ ಸ್ಪೀಲ್ ಬರ್ಗ್ ರಿಗೆ ಅವರ ಎರಡನೆಯ ಅಕಾಡೆಮಿ ಪ್ರಶಸ್ತಿ ಹಾಗೂ ಹ್ಯಾಂಕ್ಸ್ ಗೆ ಅತ್ಯುತ್ತಮ ನಟ ಪ್ರಶಸ್ತಿಗೆ ನಾಮನಿರ್ದೇಶನವನ್ನು ತಂದು ಕೊಟ್ಟಿತು. ನಂತರ, 1998ರಲ್ಲಿ, ಹ್ಯಾಂಕ್ಸ್ ಸ್ಲೀಪ್ ಲೆಸ್ ಇನ್ ಸಿಯಟ್ಟೆಲ್ ನ ಸಹ-ಕಲಾವಿದೆಯಾದ ಮೆಗ್ ರಯಾನ್ಳೊಡಗೂಡಿ ಮತ್ತೊಂದು ಪ್ರಣಯ-ಹಾಸ್ಯಚಿತ್ರವಾದ ಹಾಗೂ 1940ರ ದಶಕದ ದ ಜೇಮ್ಸ್ ಸ್ಟುವರ್ಟ್ ಮತ್ತು ಮಾರ್ಗರೇಟ್ ಸುಲೀವಾನ್ ಅಭಿನಯದ ದ ಷಾಪ್ ಅರೌಂಡ್ ದ ಕಾರ್ನರ್ ನ ರೀಮೇಕ್ ಆದ ಯೂ ಹ್ಯಾವ್ ಗಾಟ್ ಮೇಯ್ಲ್ ಚಿತ್ರವನ್ನು ತಯಾರಿಸಿದರು.
1999ರಲ್ಲಿ ಹ್ಯಾಂಕ್ಸ್ ಸ್ಟೀಫನ್ ಕಿಂಗ್ ವಿರಚಿತ ದ ಗ್ರೀನ್ ಮೈಲ್ ನ ಅವತರಣಿಕೆಯಲ್ಲಿ ಅಭಿನಯಿಸಿದರು. ಅವರು ವುಡಿಯ ಧ್ವನಿಯಾಗಿ ಟಾಯ್ ಸ್ಟೋರಿ ಗೆ ಮರಳಿ ಬಂದರು. ಮರುವರ್ಷ ಹ್ಯಾಂಕ್ಸ್ ಅತ್ಯುತ್ತಮ ಅಭಿನಯಕ್ಕೆ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನೂ, ಮತ್ತು ಅಕಾಡೆಮಿಗೆ ನಾಮನಿರ್ದೇಶನವನ್ನೂ ರಾಬರ್ಟ್ ಝೆಮೆಕಿಸ್ ನ ಕ್ಯಾಸ್ಟ್ ಎವೇ ಚಿತ್ರದಲ್ಲಿನ ನೌಕಾಘಾತಕ್ಕೊಳಗಾಗಿ ದ್ವೀಪದಲ್ಲಿ ಸಿಲುಕಿದ FedExನ ವ್ಯವಸ್ಥಾ ವಿಚಕ್ಷಣಕಾರನ ಪಾತ್ರದ ಅಫೋಘ ಅಭಿನಯದ ಮೂಲಕ ಪಡೆದರು. 2001ರಲ್ಲಿ ಹ್ಯಾಂಕ್ಸ್ HBO ದ ಹೆಸರುವಾಸಿಯಾದ ಸಣ್ಣ-ಸರಣಿ ಬ್ಯಾಂಡ್ ಆಫ್ ಬ್ರದರ್ಸ್ ನಿರ್ಮಿಸಲು ನಿರ್ಮಾಪಕನಾಗಿ ಮತ್ತು ನಿರ್ದೇಶಕನಾಗಿ ಸಹಾಯ ಮಾಡಿದರು. ಸೆಪ್ಟೆಂಬರ್ 11ರ ಟೆಲಿವಿಷನ್ ಸ್ಪೆಷಲ್America: A Tribute to Heroes ನಲ್ಲಿ ಕಾಣಿಸಿಕೊಂಡ ಹ್ಯಾಂಕ್ಸ್, ರೆಸ್ ಕ್ಯೂಡ್ ಫ್ರಮ್ ದ ಕ್ಲಾಸೆಟ್ ಎಂಬ ಸಾಕ್ಷ್ಯಚಿತ್ರದಲ್ಲೂ ಕಾಣಿಸಿಕೊಂಡರು.
ನಂತರ ಅಮೆರಿಕನ್ ಬ್ಯೂಟಿ ಯ ನಿರ್ದೇಶಕ ಸ್ಯಾಮ್ ಮೆಂಡೆಸ್ ರೊಡಗೂಡಿ ಮ್ಯಾಕ್ಸ್ ಅಲನ್ ಕಾಲಿನ್ಸ್ಹಾಗೂ ರಿಚರ್ಡ್ ಪಿಯರ್ಸ್ ರೇನರ್ ರ ಸುಸ್ಪಷ್ಟವಾದ ಕಾದಂಬರಿ ರೋಡ್ ಟು ಪೆರ್ಡಿಷನ್ ಅನ್ನು ಅಳವಡಿಸಿಕೊಂಡ ಚಿತ್ರದಲ್ಲಿ ಪ್ರತಿ-ನಾಯಕನ ಪಾತ್ರವಾದ ತನ್ನ ಮಗನೊಡನೆ ಪರಾರಿಯಾಗುವ ಯತ್ನದಲ್ಲಿರುವ ಹಿಟ್ ಮ್ಯಾನ್ ನ ಪಾತ್ರದಲ್ಲಿ ಅಭಿನಯಿಸಿದರು. ಅದೇ ವರ್ಷ ಹ್ಯಾಂಕ್ಸ್ ನಿರ್ದೇಶಕ ಸ್ಪೀಲ್ ಬರ್ಗ್ ರೊಡನೆ ಮತ್ತೆ ಸೇರಿ, ಫ್ರಾಂಕ್ ಅಬಾಗ್ನೇಲ್, ಜೂನಿಯರ್ ನ ಸತ್ಯಕಥೆಯಾಧಾರಿತ ಜನಪ್ರಿಯ ಅಪರಾಧ-ಹಾಸ್ಯ ಮಿಶ್ರಿತ ಕ್ಯಾಚ್ ಮಿ ಇಫ್ ಯೂ ಕ್ಯಾನ್ ನಲ್ಲಿ ಲಿಯೊನಾರ್ಡೋ ಡಿಕ್ಯಾಪ್ರಿಯೋರ ಎದುರು ಅಭಿನಯಿಸಿದರು. ಅದೇ ವರ್ಷ, ಹ್ಯಾಂಕ್ಸ್ ಮತ್ತು ಅವರ ಪತ್ನಿ ರೀಟಾ ವಿಲ್ಸನ್ ಸೇರಿ, ಮೈ ಬಿಗ್ ಫ್ಯಾಟ್ ಗ್ರೀಕ್ ವೆಡ್ಡಿಂಗ್ ನಿರ್ಮಿಸಿದರು. ಆಗಸ್ಟ್ 2007ರಲ್ಲಿ ಹ್ಯಾಂಕ್ಸ್, ಸಹ-ನಿರ್ಮಾಪಕಿ ರೀಟಾ ವಿಲ್ಸನ್ ಮತ್ತು ಗ್ಯಾರಿ ಗೊಯೆಟ್ಝ್ ಮನ್ ಮತ್ತು ಲೇಖಕ ಹಾಗೂ ತಾರೆ ನಿಯಾ ವಾರ್ಡಲಾಸ್ ಸೇರಿ ಗೋಲ್ಡ್ ಸರ್ಕಲ್ ಫಿಲಮ್ಸ್ ಎಂಬ ನಿರ್ಮಾಪಕ ಸಂಸ್ಥೆಯ ವಿರುದ್ಧ ತಮಗೆ ಸಂದಾಯವಾಗಬೇಕಿದ್ದ ಚಿತ್ರದ ಬಾಬ್ತಿನ ಲಾಭವನ್ನು ಬೇಡಿ ದಾವೆ ಹೂಡಿದರು.[೭][೮] ಜೂನ್ 12 , 2002ರಂದು, ತನ್ನ 45ನೆಯ ವಯಸ್ಸಿನಲ್ಲಿ, ಹ್ಯಾಂಕ್ಸ್ ಅಮೆರಿಕನ್ ಫಿಲ್ಮ್ ಇನ್ಸ್ ಟಿಟ್ಯೂಟ್ ನ ಲೈಫ್ ಅಚೀವ್ ಮೆಂಟ್ ಅವಾರ್ಡ್ ಪಡೆದ ಅತ್ಯಂತ ಕಿರಿಯನೆಂಬ ಗೌರವಕ್ಕೆ ಪಾತ್ರರಾದರು.
ಹ್ಯಾಂಕ್ಸ್ 2003ರಲ್ಲಿ ತೆರೆಯಿಂದ ಮರೆಯಾಗಿದ್ದರು; 2004ರಲ್ಲಿ ಕೊಯೆನ್ ಬ್ರದರ್ಸ್ ರವರ ದ ಲೇಡಿಕಿಲ್ಲರ್ಸ್ , ಮತ್ತೊಂದು ಸ್ಟೀವನ್ ಸ್ಪೀಲ್ ಬರ್ಗ್ ನಿರ್ದೇಶಿತ ದ ಟರ್ಮಿನಲ್ ಮತ್ತು ರಾಬರ್ಟ್ ಝೆಮೆಕ್ಕಿಸ್ ರವರ ಕೌಟುಂಬಿಕ ಚಿತ್ರ ದ ಪೋಲಾರ್ ಎಕ್ಸ್ ಪ್ರೆಸ್ ಎಂಬ ಮೂರು ಚಿತ್ರಗಳಲ್ಲಿ ಅಭಿನಯಿಸಿದರು. USA ವೀಕೆಂಡ್ ಗಾಗಿ ನೀಡಿದ ಸಂದರ್ಶನವೊಂದರಲ್ಲಿ ಹ್ಯಾಂಕ್ಸ್ ತಮ್ಮ ಯೋಜನೆಗಳನ್ನು ಆಯ್ಕೆ ಮಾಡುವ ರೀತಿಯನ್ನು ತಿಳಿಸಿದರು: "ಎ ಲೀಗ್ ಆಫ್ ದೇರ್ ಓನ್ ಇಂದಲೂ ನನಗೆ ಯಾವುದೋ ಒಂದು ಚಿತ್ರವಾದರಾಯಿತು ಎಂದಿರಲಿಲ್ಲ. ಅದು ನನ್ನನ್ನು ಹೇಗಾದರೂ ಪ್ರೇರೇಪಿಸುವಂತಿರಬೇಕು.... ಅದೇ ಚಿತ್ರವನ್ನು ಕೈಗೆತ್ತಿಕೊಳ್ಳಲು ಯಾವುದಾದರೂ ಒಂದು ಬಲವಾದ ವಾಂಛೆ ಅಥವಾ ಭಾವನೆಯು ಉಂಟಾಗಬೇಕು. ಹಾಗೆ (ಸರಿಯಾದ ಆಯ್ಕೆ) ಮಾಡಲು ನಾನು ಯಾವುದೇ ದಾರಿಯಲ್ಲಿ ಸಾಗಲು ತಯಾರಿದ್ದೇನೆಂದು ನನಗೆ ತೋರುತ್ತದೆ". ಆಗಸ್ಟ್ 2005ರಲ್ಲಿ ಹ್ಯಾಂಕ್ಸ್ ನನ್ನು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಎಂಡ್ ಸೈನ್ಸಸ್ ನ ಉಪಾಧ್ಯಕ್ಷರನ್ನಾಗಿ ಚುನಾಯಿಸಲಾಯಿತು.[೯]
ಹ್ಯಾಂಕ್ಸ್ ನಂತರ ಬಹಳ ಆಕಾಂಕ್ಷೆ ಹೊಂದಿದ್ದ ಡ್ಯಾನ್ ಬ್ರೌನ್ ರ ಬಲು ಬೇಡಿಕಿಯ ಕಾದಂಬರಿಯಾಧಾರಿತ ದ ಡಾವಿನ್ಷಿ ಕೋಡ್ ನಲ್ಲಿ ಅಭಿನಯಿಸಿದರು. ಈ ಚಿತ್ರವು ಮೇ ೧೯, 2006ರಂದು US ನಲ್ಲಿ ಬಿಡುಗಡೆಯಾಗಿ US$750 ಮಿಲಿಯನ್ ಗಿಂತಲೂ ಹೆಚ್ಚು ಹಣವನ್ನು ಜಗದಾದ್ಯಂತ ಗಳಿಸಿತು. ಕೆನ್ ಬರ್ನ್ಸ್ ರ ಸಾಕ್ಷ್ಯಚಿತ್ರ ದ ವಾರ್ ಗೆ ಹ್ಯಾಂಕ್ಸ್ ಕಂಠದಾನ ಮಾಡಿ, ವರ್ಲ್ಡ್ ವಾರ್ IIರ- ಕಾಲದ ಆಲ್ ಮೆಕಿಂಟಾಷ್(/0)ರ ಅಂಕಣಗಳಿಂದ ಆಯ್ದ ಭಾಗಗಳನ್ನು ಓದಿದರು. 2006ರಲ್ಲಿ ಫೋರ್ಬ್ಸ್ ಪತ್ರಿಕೆಯವರು ಪ್ರಕಟಿಸಿದ 'ಬಹಳ ಭರವಸೆಯ ಖ್ಯಾತನಾಮರು' ಪಟ್ಟಿಯಲ್ಲಿ ಮೊದಲಿಗರಾಗಿ ನೇಮಿತರಾದರು.[೧೦] ಹ್ಯಾಂಕ್ಸ್ ತದನಂತರ ತನ್ನ ಹೆಸರಿನದೇ ಆದ ಒಂದು ಚಿಕ್ಕ ಪಾತ್ರದಲ್ಲಿ ದ ಸಿಂಪ್ಸನ್ಸ್ ಮೂವೀ ಯಲ್ಲಿ ಕಾಣಿಸಿಕೊಂಡರು; ಅದರಲ್ಲಿ ೊಂದು ಜಾಹಿರಾತಿನಲ್ಲಿ ಕಾಣಿಸಿಕೊಂಡು ಅಮೆರಿಕದ ಸರ್ಕಾರವು ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿರುವುದರಿಂದ ತನ್ನಿಂದ ಅದನ್ನು ಕೊಳ್ಳಲು ಬಂದಿದೆಯೆಂದು ಹೇಳುತ್ತಾರೆ. ಹೆಸರುಗಳನ್ನು ತೋರಿಸುವಾಗಲೂ ಕಾಣಿಸಿಕೊಂಡು ಸಾರ್ವಜನಿಕರ ಮಧ್ಯದಲ್ಲಿ ತಾನು ಕಾಣಿಸಿಕೊಂಡಾಗ ತನ್ನ ಪಾಡಿಗೆ ತನ್ನನ್ನು ಬಿಡುವುದು ತನಗೆ ಇಷ್ಟವಾಗುತ್ತದೆ ಎಂದು ಹೇಳಿದ್ದಾರೆ. ನಂತರ, 2006ರಲ್ಲಿ ಹ್ಯಾಂಕ್ಸ್ ಸ್ಟಾರ್ಟರ್ ಫಾರ್ ಟೆನ್ ಎಂಬ ಯೂನಿವರ್ಸಿಟಿ ಚಾಲೆಂಜ್ ಗೆಲ್ಲಲು ಯತ್ನಿಸುವ ಕಾರ್ಮಿಕ ವರ್ಗದ ವಿದ್ಯಾರ್ಥಿಗಳ ಹಾಸ್ಯಮಯ ಬ್ರಿಟಿಷ್ ಚಿತ್ರ ನಿರ್ಮಿಸಿದರು.[೧೧]
2007ರಲ್ಲಿ ಹ್ಯಾಂಕ್ಡ್ ಮೈಕ್ ನಿಕೋಲಸ್ ರ ಚಿತ್ರ ಚಾರ್ಲೀ ವಿಲ್ಸನ್ಸ್ ವಾರ್ (ಸ್ಕ್ರೀನ್ ರೈಟರ್ ಆರನ್ ಸಾರ್ಕಿನ್ ವಿರಚಿತ)ನಲ್ಲಿ ಟೆಕ್ಸಾಸ್ ನ ಡೆಮೋಕ್ರಾಟಿಕ್ ಕಾಂಗ್ರೆಸ್ಸಿಗ ಚಾರ್ಲೀ ವಿಲ್ಸನ್ ನ ಪಾತ್ರ ವಹಿಸಿದರು. ಈ ಚಿತ್ರವು ಡಿಸೆಂಬರ್ 21 , 2007ರಂದು ಬಿಡುಗಡೆಯಾಗಿ, ಈ ಚಿತ್ರದಲ್ಲಿನ ಅಭಿನಯಕ್ಕೆ ಹ್ಯಾಂಕ್ಸ್ ಗೆ ಗೋಲ್ಡನ್ ಗ್ಲೋಬ್ ನಾಮನಿರ್ದೇಶನವು ಲಭಿಸಿತು.
"ಕಲೆ ಜೀವನದ ಅಣಕ" ಎಂಬಂತೆ ಹ್ಯಾಂಕ್ಸ್, ತೆರೆಯ ಮೇಲೆ,2008ರಲ್ಲಿ ದ ಗ್ರೇಟ್ ಬಕ್ ಹೊವಾರ್ಡ್ ಎಂಬ ಚಿತ್ರದಲ್ಲಿ ತನ್ನ ಪ್ರತಿಭೆಯು ಕ್ಷೀಣಿಸುತ್ತಿರುವ ಮಾಂತ್ರಿಕ ಜಾನ್ ಮ್ಯಾಲ್ಕೋವಿಚ್ ನ ಜೀವನಪಥವನ್ನೇ ಅನುಸರಿಸಹೊರಟ ಒಬ್ಬ ಯುವಕ(ಹ್ಯಾಂಕ್ಸ್ ನ ನಿಜಪುತ್ರ ಕಾಲಿನ್ ಹ್ಯಾಂಕ್ಸ್)ನ ತಂದೆಯಾಗಿ ಅಭಿನಯಿಸಿದರು. ಹ್ಯಾಂಕ್ಸ್ ನ ಪಾತ್ರಕ್ಕೆ ತನ್ನ ಮಗ ಆರಿಸಿದ ಜೀವನಮಾರ್ಗವು ಇನಿತೂ ಖುಷಿ ನೀಡಲಿಲ್ಲ.
ಹ್ಯಾಂಕ್ಸ್ ನ ಮುಂದಿನ ಯೋಜನೆಯು ಡ್ಯಾನ್ ಬ್ರೌನ್ ದ ಡಾವಿನ್ಷಿ ಕೋಡ್ ನ ಮುಂದಿನ ಭಾಗವಾಗಿ ಬರೆದ ಏಂಜಲ್ಸ್ ಎಂಡ್ ಡೆಮನ್ಸ್ ಅಳವಡಿಸಿಕೊಂಡ, ಪುಸ್ತಕದ ಹೆಸರಿನದೇ ಚಿತ್ರವಾಗಿದ್ದು, ಮೇ ೧೫, 2009ರಂದು ಅದು ತೆರೆ ಕಂಡಿತು. ಏಪ್ರಿಲ್ ೧೧, 2007ರಂದು ಹ್ಯಾಂಕ್ಸ್ ತನ್ನ ರಾಬರ್ಟ್ ಲ್ಯಾಂಗ್ಡನ್ ನ ಪಾತ್ರವನ್ನು ಮತ್ತೆ ಕೈಗೆತ್ತಿಕೊಳ್ಳುವುದಾಗಿಯೂ, ಅದಕ್ಕೆ ಅವರಿಗೆ ಯಾವುದೇ ನಟನಿಗೂ ನೀಡದಂತಹ $30–35 ಮಿಲಯನ್ ಸಂಬಳವೂ, ಚಿತ್ರದಿಂದ ಬಂದ ಆದಾಯದ ಮೇಲೆ 10–15% ಲಾಭಾಂಶವೂ ನೀಡಲಾಗುವುದೆಂದು ಪ್ರಕಟಿಸಲಾಯಿತು.[೧೨][೧೩] ಮರುದಿನ ಹ್ಯಾಂಕ್ಸ್ NBCಯ ಸ್ಯಾಟರ್ಡೇ ನೈಟ್ ಲೈವ್ ನಲ್ಲಿ 10ನೆಯ ಬಾರಿಗೆ ಕಾಣಿಸಿಕೊಂಡು ಸೆಲಿಬ್ರಿಟಿ ಜಿಯೋಪಾರ್ಡಿ ಸ್ಕೆಚ್ ಗಾಗಿ ತನ್ನನ್ನು ತಾನೇ ಅಣಕವಾಡಿಕೊಂಡರು.
ಸ್ಸ್ಸ್ಪೈಕ್ ಜೋನ್ಝ್ ರವರ, ಮಾರಿಸ್ ಸೆಂಡಾಕ್ ಬರೆದ ಮಕ್ಕಳ ಪುಸ್ತಕ ಆಧಾರಿಸಿದ ವೇರ್ ದ ವೈಲ್ಡ್ ಥಿಂಗ್ಸ್ ಆರ್ ಚಿತ್ರಕ್ಕೆ ಹ್ಯಾಂಕ್ಸ್ ನಿರ್ಮಾಪಕರು.[೧೪]
ಜಗದಾದ್ಯಂತ ಚಿತ್ರಗಳು ಗಳಿಸಿದ ಅತಿ ಹೆಚ್ಚು ಮೊತ್ತಗಳು
[ಬದಲಾಯಿಸಿ]ಹ್ಯಾಂಕ್ಸ್ ಈಗ ಜಗತ್ತಿನ ಗಲ್ಲಾಪೆಟ್ಟಿಗೆಯ #1 ಸ್ಥಾನದಲ್ಲಿರುವ ತಾರೆಯಾಗಿದ್ದು, ಒಟ್ಟು $3.521 ಬಿಲಿಯನ್ ಗಲ್ಲಾಪೆಟ್ಟಿಗೆಯ ಸಂಗ್ರಹವಾಗಿದ್ದು, ಪ್ರತಿ ಚಿತ್ರಕ್ಕೆ ಸರಾಸರಿ $100.6 ಮಿಲಿಯನ್ ಗಳಿಕೆಯಾದಂತಾಯಿತು.[೧೫] ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ಹ್ಯಾಂಕ್ಸ್ ರ ಹತ್ತೊಂಬತ್ತು ಚಿತ್ರಗಳು $100 ಮಿಲಿಯನ್ ಗೂ ಹೆಚ್ಚು ಹಣವನ್ನು ಗಳಿಸಿವೆ.[೧೬]
ವೈಯಕ್ತಿಕ ಜೀವನ
[ಬದಲಾಯಿಸಿ]ಹ್ಯಾಂಕ್ಸ್ ಸಾಮಂತಾ ಲೆವೆಸ್ ಳೊಡನೆ 1978ರಿಂದ 1987ರವರೆಗೂ ವಿವಾಹವಾಗಿದ್ದರು. ಅವರಿಗೆ ಎರಡು ಮಕ್ಕಳು - ಮಗ ಕಾಲಿನ್ ಹ್ಯಾಂಕ್ಸ್(ಅವನೂ ನಟನೇ) ಮತ್ತು ಮಗಳು ಎಲಿಜಬೆತ್ ಆನ್.[೧೭][೧೮] 1988ರಲ್ಲಿ ಹ್ಯಾಂಕ್ಸ್ ನಟಿ ರೀಟಾ ವಿಲ್ಸನ್ ಳನ್ನು ಮದುವೆಯಾದರು. ಇಬ್ಬರ ಮೊದಲ ಭೇಟಿ ಹ್ಯಾಂಕ್ಸ್ ರ ಟೆಲಿವಿಷನ್ ಕಾರ್ಯಕ್ರಮವಾದ ಬೂಸಮ್ ಬಡ್ಡೀಸ್ ನ ಸೆಟ್ ನಲ್ಲಿ ಆಯಿತಾದರೂ ಪ್ರಣಯ ಕುತೂಹಲ ಉಂಟಾದುದು ಇಬ್ಬರೂ ವಾಲಂಟಿಯರ್ಸ್ ಚಿತ್ರದಲ್ಲಿ ಒಟ್ಟಿಗೆ ದುಡಿಯುತ್ತಿದ್ದಾಗ. ಅವರಿಗೆ ಎರಡು ಮಕ್ಕಳು: ಚೆಸ್ಟರ್ ಅಥವಾ "ಚೇತ್"(ಇಂಡಿಯಾನಾ ಜೋನ್ಸ್ ಎಂಡ್ ದ ಕಿಂಗ್ ಡಮ್ ಆಫ್ ದ ಕ್ರಿಸ್ಟಲ್ ಬಾಲ್ಸ್ ನಲ್ಲಿ ಕಾಲೇಜ್ ನಲ್ಲಿ ಅಟ್ಟಸಿಕೊಂಡುಬರುವುದು (ಕಾಲೇಜ್ ಚೇಸ್) ಮುಗಿದ ನಂತರ ಡಾ.ಜೋನ್ಸ್ ನನ್ನು ಒಂದು ಪ್ರಶ್ನೆ ಕೇಳುವಂತಹ ಒಂದು ಸಣ್ಣ ಪಾತ್ರದಲ್ಲಿ ಈ ಹುಡುಗ ನಟಿಸಿದ್ದಾನೆ) ಮತ್ತು ಟ್ರೂಮನ್.
ರಾಜಕೀಯ
[ಬದಲಾಯಿಸಿ]ಪರಿಸರವಾದದ ಕಾಳಜಿ ಇರುವ ಮತ್ತು ಅದರ ಬಗ್ಗೆ ಅರಿವು ಮೂಡಿಸುವ ಹ್ಯಾಂಕ್ಸ್ ವಿದ್ಯುತ್ ವಾಹನಗಳಲ್ಲಿ ಬಂಡವಾಳ ಹೂಡುತ್ತಾರೆ ಮತ್ತು ಟೊಯೋಟಾ RAV4 EV ಮತ್ತು ಮೊದಲು ಉತ್ಪಾದನೆಯಾದ AC ಪ್ರೊಪಲ್ಷನ್ eBox ನ ಮಾಲೀಕರಾಗಿದ್ದಾರೆ.[೧೯] Aptera 2 Series ಗಾಗಿ ಅವರು ನಿರೀಕ್ಷಿಸುವವರ ಪಟ್ಟಿಯಲ್ಲಿದ್ದಾರೆ.[೨೦]
ಹ್ಯಾಂಕ್ಸ್ ಹಲವಾರು ಡೆಮೋಕ್ರೆಟಿಕ್ ರಾಜಕಾರಣಿಗಳಿಗೆ ಹಣ ನೀಡುತ್ತಾರೆ ಮತ್ತು ಸಲಿಂಗವಿವಾಹವನ್ನು ಬಹಿರಂಗವಾಗಿ ಬೆಂಬಲಿಸುತ್ತಾರೆ, ಪರಿಸರಸಂಬಂಧಿತ ಕೆಲಸಗಳು ಮತ್ತು ಬದಲಿ ಇಂಧನಗಳಿಗೂ ಅವರ ಬೆಂಬಲವಿದೆ.(ಹ್ಯಾಂಕ್ಸ್ ಒಂದು EV1ಯನ್ನು ಭೋಗ್ಯದ ಮೇಲೆ ತೆಗೆದುಕೊಂಡಿದ್ದು, ನಂತರ ಅದು ಹಿಂತೆಗೆದುಕೊಳ್ಳಲ್ಪಟ್ಟದ್ದು "ಹೂ ಕಿಲ್ಡ್ ದ ಎಲೆಕ್ಟ್ರಿಕ್ ಕಾರ್? " ಎಂಬ ಸಾಕ್ಷ್ಯಚಿತ್ರದಲ್ಲಿ ದಾಖಲಾಗಿದೆ.[೨೧] ಹ್ಯಾಂಕ್ಸ್ 2008ರ ಚುನಾವಣೆಯಲ್ಲಿ ತನ್ನ MySpace ಖಾತೆಗೆ ಒಂದು ವಿಡಿಯೋ ಅಪ್ ಲೋಡ್ ಮಾಡಿ ಅದರಲ್ಲಿ ಬರಾಕ್ ಒಬಾಮಾರ ಬಗ್ಗೆ ಶಿಫಾರಸು ಮಾಡುವ ಮೂಲಕ ತನ್ನ ರಾಜಕೀಯ ಅಭ್ಯರ್ಥಿ ಯಾರೆಂದು ಬಹಿರಂಗಗೊಳಿಸಿದರು.[೨೨]
ಹ್ಯಾಂಕ್ಸ್ ವಿವಾಹ ಎಂದರೆ ಗಂಡು ಮತ್ತು ಹೆಣ್ಣಿನ ಮಿಲನ ಮಾತ್ರ ಎಂಬ ಕ್ಯಾಲಿಫೋರ್ನಿಯಾದ ಸಂವಿಧಾನಕ್ಕೆ ತಿದ್ದುಪಡಿ ಸೂಚಿಸಿದ ಪ್ರೊಪೊಸಿಷನ್ 8ರ ಬಗ್ಗೆ ತನ್ನ ನಿರ್ದಾರಗಳನ್ನು ಮತ್ತು ವಿರೋಧವನ್ನು ಬಹಿರಂಗವಾಗಿ, ಕಟುವಾಗಿ, ವ್ಯಕ್ತಪಡಿಸಿದರು. ಹ್ಯಾಂಕ್ಸ್ ಮತ್ತು ಅದರ ವಿರುದ್ಧ ಇದ್ದವರು USD $44 ಮಿಲಿಯನ್ ಸಂಗ್ರಹಿಸಿದರು ಮತ್ತು ಅದರ ಬೆಂಬಲಿಗರು $38 ಮಿಲಿಯನ್[ಸೂಕ್ತ ಉಲ್ಲೇಖನ ಬೇಕು] ಸಂಗ್ರಹಿಸಿದರಾದರೂ ಪ್ರೊಪೊಸಿಷನ್ 8 52% ಮತ ಪಡೆದುದರಿಂದ ಮಂಜೂರಾಯಿತು.[೨೩]
ಹ್ಯಾಂಕ್ಸ್ ಪ್ರೊಪೊಸಿಷನ್ 8ರ ಬೆಂಬಲಿಗರನ್ನು ಅನ್-ಅಮೆರಿಕನ್ ಎಂದು ಬೈದುದಲ್ಲದೆ LDS (ಮೊರ್ಮನ್) ಚರ್ಚ್ ಸದಸ್ಯರ - ಆ ಬಿಲ್ ಮಂಜೂರಾಗಲು ಪ್ರಮುಖ ಪಾತ್ರ ವಹಿಸಿದವರು - ಮೇಲೆ ಆಕ್ರಮಣ ಮಾಡಿದರು ಮತ್ತು ವಿವಾಹದ ಬಗ್ಗೆ ಅವರಿಗಿರುವ ದೃಷ್ಟಿಕೋನ ಮತ್ತು ಪ್ರೊಪೊರಿಷನ್ 8ಕ್ಕೆ ಬೆಂಬಲ ನೀಡಿದ ಅವರ ಕೃತ್ಯವನ್ನು ಖಂಡಿಸಿದರು.[೨೪][೨೫] ಒಂದು ವಾರದ ನಂತರ, ಹ್ಯಾಂಕ್ಸ್ ತನ್ನ ಮಾತುಗಳಿಗೆ ಕ್ಷಮೆ ಕೇಳುತ್ತಾ, ತಮ್ಮ ಮನಸ್ಸಾಕ್ಷಿಗೆ ತಕ್ಕಂತೆ ಅಭಿಪ್ರಾಯ ನೀಡುವುದಕ್ಕಿಂತಲೂ ಅಮೆರಿಕನ್ ತತ್ವವಿಲ್ಲವೆಂದೂ, ಪ್ರೊಪೊಸಿಷನ್ 8ರ ಬೆಂಬಲಿಗರು ಅದನ್ನೇ ಮಾಡಿದ್ದೆಂದೂ ಹೇಳಿದರು.[೨೬]
ಇತರ ಚಟುವಟಿಕೆಗಳು
[ಬದಲಾಯಿಸಿ]ನಾಸಾದ ಮಾನವ ನಿಯಂತ್ರಿತ ಬಾಹ್ಯಾಕಾಶ ಕಾರ್ಯದ ಬೆಂಬಲಿಗರಾದ ಹ್ಯಾಂಕ್ಸ್ ತಾನು ಮೊದಲಿಗೆ ಖಗೋಳಶಾಸ್ತ್ರಜ್ಞನಾಗಬೇಕೆಂದುಕೊಂಡಿದ್ದರೆಂದೂ, ಆದರೆ ಲೆಕ್ಕ ಸರಿಬರಲಿಲ್ಲವೆಂದೂ ಹೇಳುತ್ತಾರೆ. ಹ್ಯಾಂಕ್ಸ್ ನ್ಯಾಷನಲ್ ಸ್ಪೇಸ್ ಸೊಸೈಟಿಯ ಸದಸ್ಯರಾಗಿದ್ದು , ಡಾ. ವೆರ್ನ್ ಹೆರ್ ವಾನ್ ಬ್ರಾನ್ ಸ್ಥಾಪಿಸಿದ ಲಾಭರಹಿತ, ಅರಿವು ಮೂಡಿಸುವ, ಸ್ಪೇಸ್ ಅಡ್ವೊಕೆಸಿ ಸಂಸ್ಥೆಯ ಬೋರ್ಡ್ ಆಫ್ ಗವರ್ನರ್ಸ್ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಚಂದ್ರನ ಮೇಲೆ ವಿಜ್ಞಾನಿಗಳನ್ನು ಕಳುಹಿಸುವ ಅಪೋಲೋ ಯೋಜನೆಯ ಬಗ್ಗೆ ಫ್ರಂ ದ ಅರ್ಥ್ ಟು ದ ಮೂನ್ ಎಂಬ ಮಿನಿಧಾರವಾಹಿಯನ್ನು HBOಗಾಗಿ ನಿರ್ಮಿಸಿದರು. ಅಲ್ಲದೆ ಹ್ಯಾಂಕ್ಸ್ ಸಹ-ಲೇಖಕನಾಗಿ, ಸಹ-ನಿರ್ಮಾಪಕMagnificent Desolation: Walking on the Moon 3D ನಾಗಿ ಚಂದ್ರನ ಮೇಲೆ ಇಳಿಯುವುದರ ಬಗ್ಗೆ IMAX ಎಂಬ ಚಿತ್ರವನ್ನು ಹೊರತಂದರು. ಹ್ಯಾಂಕ್ಸ್ ನ್ಯೂ ಯಾರ್ಕ್ ನ ಅಮೆರಿಕನ್ ಮ್ಯೂಸಿಯಮ್ ಆಫ್ ನ್ಯಾಚುರಲ್ ಹಿಸ್ಟರಿಯಲ್ಲಿರುವ ಹೇಡನ್ ಪ್ಲಾನೆಟೇರಿಯಮ್ ನಲ್ಲಿ ಹೊಸ ರೋಸ್ ಸೆಂಟರ್ ಫಾರ್ ಅರ್ಥ್ ಎಂಡ್ ಸ್ಪೇಸ್ ಆರಂಭವಾದ ನಂತರ ನೀಡಿದ ಹೊಸ ಪ್ಲಾನಟೇರಿಯಮ್ (ಸೌರಮಂಡಲಾಧ್ಯಯನಗೃಹ)ಷೋ ನಲ್ಲಿ ವಿವರಣಾ ಕಾರ್ಯ(ವಾಯ್ಸ್ ಓವರ್)ವನ್ನು ಮಾಡಿದರು.
2006ರಲ್ಲಿ ಸ್ಪೇಸ್ ಫೌಂಡೇಷನ್ ಹ್ಯಾಂಕ್ಸ್ ರಿಗೆ ದ ಡೌಗ್ಲಾಸ್ ಎಸ್.ಮಾರೋ ಪಬ್ಲಿಕ್ ಔಟ್ ರೀಚ್ ಅವಾರ್ಡ್ ನೀಡಿತು.[೨೭] ಈ ಪ್ರಶಸ್ತಿಯು ಪ್ರತಿವರ್ಷ ಬಾಹ್ಯಾಕಾಶ ಯೋಜನೆಗಳ ಬಗ್ಗೆ ಜನರಲ್ಲಿ ಗಮನಾರ್ಹ ರಿವು ಉಂಟುಮಾಡುವ ವ್ಯಕ್ತಿ ಅಥವಾ ಸಂಸ್ಥೆಗಳಿಗೆ ನೀಡಲಾಗುತ್ತದೆ.
ಜೂನ್ 2006ರಲ್ಲಿ, ಸೇವಿಂಗ್ ಪ್ರೈವೇಟ್ ರಿಯಾನ್ ಚಿತ್ರದಲ್ಲಿ ಒಬ್ಬ ಕ್ಯಾಪ್ಟನ್ ನ ಪಾತ್ರವನ್ನು ಕರಾರುವಾಕ್ಕಾಗಿ ಅಭಿನಯಿಸಿದುದನ್ನು ಮೆಚ್ಚಿ, ಹ್ಯಾಂಕ್ಸ್ ರನ್ನು, ಯುನೈಟೆಡ್ ಸ್ಟೇಟ್ಸ್ ಆರ್ಮಿ ರೇಂಜರ್ಸ್ ಹಾಲ್ ಆಫ್ ಫೇಮ್ ನಲ್ಲಿ ಗೌರವಯುತ ಸ್ಥಾನ ನೀಡಿತು; ಪ್ರಶಸ್ತಿಪ್ರದಾನ ಸಮಾರಂಭಕ್ಕೆ ಹೋಗಲಾಗದ ಹ್ಯಾಂಕ್ಸ್ ಈ ಪ್ರಶಸ್ತಿ ಪಡೆದ ಮೊದಲ ನಟ ಎಂಬ ಗೌರವಕ್ಕೆ ಪಾತ್ರರಾದರು.[೨೮] ಸೇವಿಂಗ್ ಪ್ರೈವೇಟ್ ರಿಯಾನ್ ನ ಪಾತ್ರವಲ್ಲದೆ ಹ್ಯಾಂಕ್ಸ್ ಗೆ ಎರಡನೆಯ ಮಹಾಯುದ್ಧದ ಸ್ಮರಣೆಯ ಚಳುವಳಿಯಲ್ಲಿ ದೇಶದ ಬಾತ್ಮೀದಾರನಾಗಿ ಸೇವೆ ಸಲ್ಲಿಸಿದುದಕ್ಕಾಗಿ ಸನ್ಮಾನ, D-Day ಮ್ಯೂಸಿಯಮ್ ಚಳುವಳಿಯ ಗೌರವಾಧ್ಯಕ್ಷನಾಗಿದ್ದುದಕ್ಕಾಗಿ ಬಿನ್ನವತ್ತಳೆ, ಮತ್ತು ಬ್ಯಾಂಡ್ ಆಫ್ ಬ್ರದರ್ಸ್ ಎಂಬ ಎಮ್ಮಿ ಪ್ರಶಸ್ತಿವಿಜೇತ ಮಿನಿಧಾರಾವಾಹಿಯನ್ನು ಬರೆಯಲು ಮತ್ತು ನಿರ್ಮಿಸಲು ಸಹಾಯ ಮಾಡಿದುದಕ್ಕಾಗಿ ಗೌರವ ಸಮರ್ಪಿಸಲಾಯಿತು.
ಹ್ಯಾಂಕ್ಸ್ ಲೇಟ್ ನೈಟ್ ವಿತ್ ಕೋನಾನ್ ಒಬ್ರೈನ್ ಎಂಬ ನಿಯೋಜಿತ ಹಾಸ್ಯತುಣುಕುಗಳನ್ನು ಹೊಂದಿದ್ದ ಕಾರ್ಯಕ್ರಮದಲ್ಲಿ ಆಗಾಗ್ಗೆ ಭಾಗವಹಿಸುವ ಹಲವಾರು ತಾರೆಯರ ಪೈಕಿ ಒಬ್ಬರಾಗಿದ್ದರು. ಹೀಗೆ ಅತಿಥಿಯಾಗಿ ಒಮ್ಮೆ ಹೋಗಿದ್ದಾಗ ಹ್ಯಾಂಕ್ಸ್ ಕೋನಾನ್ ರನ್ನು, ಕಾನ್ಫೆಟ್ಟೀ, ಬಲೂನಗಳನ್ನು ಹೊಂದಿ ಹಾಗೂ ಕೈಯಲ್ಲಿ "ಯು ವುಡ್ ಬಿ ಸ್ಟುಪಿಡ್ ಟು ವೋಟ್ ಫಾರ್ ಅಸ್" ಎಂಬ ಫಲಕ ಹಿಡಿದು, "ಬ್ಯಾಡ್ ಹೇರ್ ಕಟ್ ಪಕ್ದ"ದ ಟಿಕೆಟ್ ನ ಮೇಲೆ,ಪ್ರೆಸಿಡೆಂಟ್ ಸ್ಥಾನಕ್ಕೆ ಸ್ಪರ್ಧಿಸಲು ಕೇಳಿದನು. ಇನ್ನೊಮ್ಮೆ, ಹ್ಯಾಂಕ್ಸ್ ತನ್ನ ಪ್ರಚಾರಪ್ರವಾಸ ಕೈಗೊಳ್ಳುವುದರಿಂದ ಕ್ರಿಸ್ ಮಸ್ ಹಬ್ಬ ಆಚರಿಸಲಾಗದೆಂದು ಮನಗಂಡು, ಆ ಋತುವನ್ನೇ ಅಲ್ಲಿಗೆ ತರುವ ರೀತಿಯಲ್ಲಿ ಒಂದು ಕೊಡುಗೆ (ಹೂಚ್ ನ ಅಸ್ಥಿಪಂಜರ) ಮತ್ತು ಅವರಿಬ್ಬರೂ ಹೂತುಹೋಗುವಷ್ಟು ಮಂಜನ್ನು ತರಿಸಿ ಮಂಜಿನಲ್ಲಿ ಹುದುಗಿ, ಹುದುಗಿಸಿದನು. ಮತ್ತೊಂದು ಬಾರಿ ಕೋನಾನ್ ಹ್ಯಾಂಕ್ಸ್ ಗೆ ತಾನೇ ಮಾಡಿಸಿದ್ದ ಪೇಂಟಿಂಗ್ ಒಂದನ್ನು ಕೊಟ್ಟನು; ಆ ಚಿತ್ರದಲ್ಲಿ ಹ್ಯಾಂಕ್ಸ್ ನ ಎರಡೂ ಆಸಕ್ತಿಗಳು ಬಿಂಬಿತವಾಗಿದ್ದವು; ಖಗೋಳ ವಿಜ್ಞಾನಿಗಳು ನಾರ್ಮಂಡಿಯ ಸಮುದ್ರತೀರದಲ್ಲಿ ಆರೋಹಣ ಮಾಡುತ್ತಿರುವ ಚಿತ್ರ!
ಮಾರ್ಚ್ 10 , 2008ರಂದು ಹ್ಯಾಂಕ್ಸ್ ರಾಕ್ ಎಂಡ್ ರೋಲ್ ಹಾಲ್ ಆಫ್ ಫೇಮ್ ನಲ್ಲಿ 1960ರ ದಶಕದ ಜನಪ್ರಿಯ ತಂಡವಾದ ದ ಡೇವ್ ಕ್ಲಾರ್ಕ್ ಫೈವ್ ತಂಡವನ್ನು ಆ ಖ್ಯಾತ ಹಾಲ್ ಗೆ ಒಳಪಡಿಸುವ ಗೌರವಾನ್ವಿತ ಕಾರ್ಯಕ್ಕಾಗಿ ಖುದ್ದಾಗಿ ಹಾಜರಿದ್ದರು. ಅವರು ಆ ತಂಡವು ಜನತೆಗೆ ನೀಡಿದ ಆನಂದವನ್ನು ಶ್ಲಾಘಿಸಿದುದೇ ಅಲ್ಲದೆ ಅವರ ಪ್ರಕಾಶನ ಹಕ್ಕುಗಳನ್ನು ಯಾರಿಗೂ ಮಾರದೇ ಇದ್ದುದಕ್ಕಾಗಿ ಅವರನ್ನು ಅಭಿನಂದಿಸಿದರು.[೨೯]
ಹ್ಯಾಂಕ್ಸ್ ಟಾಯ್ ಸ್ಟೋರಿಯ ವಿಶೇಷ ಸರಣಿಯ ಮುಂದಿನ ಚಿತ್ರ ಟಾಯ್ ಸ್ಟೋರಿ 3 ಕ್ಕೆ ತಮ್ಮ ಷೆರೀಫ್ ವುಡಿಯ ಪಾತ್ರವನ್ನು ಪುನಶ್ಚೇತನಗೊಳಿಸುತ್ತಿದ್ದಾರೆ.ಈ ಚಿತ್ರವು 2010ರಲ್ಲಿ ಬಿಡುಗಡೆಯಾಗಲಿದೆ. ಟಿಮ್ ಅಲೆನ್ ಮತ್ತು ಜಾನ್ ರಾಟ್ಝೆನ್ ಬೆರ್ಗರ್ ಮತ್ತು ಹ್ಯಾಂಕ್ಸನ್ನು ಒಂದು ಮೂವೀ ಥಿಯೇಟರಿಗೆ ಆ ಚಿತ್ರದ ಸಂಪೂರ್ಣ ರೀಲ್ ಗಳನ್ನು ನೋಡಲು ಆಹ್ವಾನಿಸಿದ, ಅಲ್ಲಿ ಹೋಗಿಬಂದ ನಂತರ, ಹ್ಯಾಂಕ್ಸ್ ತನ್ನ ವುಡಿಯ ದನಿಯನ್ನು ಪುನಃಸ್ಥಾಪಿಸಲು ನಿರ್ಧರಿಸಿದರು.[೩೦]
ಹ್ಯಾಂಕ್ಸ್ ಇಂಗ್ಲಿಷ್ ಪ್ರೀಮಿಯರ್ ಲೀಗ್ ಫುಟ್ ಬಾಲ್ ಕ್ಲಬ್ ಆಸ್ಟನ್ ವಿಲ್ಲಾ ದ ಅಭಿಮಾನಿಯೆಂಬುದು ತಿಳಿದ ಸಂಗತಿಯೇ. ಅವರ ಅಭಿಮಾನವನ್ನು ಗುರುತಿಸಿ ಅವರಿಗೆ ಒಂದು ಅಂಗಿಯನ್ನು TV ಕಾರ್ಯಕ್ರಮದಲ್ಲಿ ನೀಡಲ್ಪಟ್ಟಿದ್ದು, ಆ ಅಂಗಿಯ ಹಿಂಬದಿಯಲ್ಲಿ 'ಹ್ಯಾಂಕ್ಸ್ 1' ಎಂಬುದು ಮುದ್ರಿತವಾಗಿದೆ.[ಸೂಕ್ತ ಉಲ್ಲೇಖನ ಬೇಕು] ಹ್ಯಾಂಕ್ಸ್ ಆ ಕ್ಲಬ್ ನೊಡನೆ ತನ್ನ ಸಂಬಂಧವನ್ನು ದೃಢಪಡಿಸುತ್ತಾ, ಮೇ 2009ರಲ್ಲಿ ಜೊನಾಥನ್ ರಾಸ್ ಗೆ ನೀಡಿದ ಸಂದರ್ಶನದಲ್ಲಿ ಆ ಕ್ಲಬ್ ನ ಹೆಸರು ತನಗೆ ಬಹಳ ಪ್ರಿಯವಾದುದರಿಂದ ಮಾಧ್ಯಮವು ತನ್ನನ್ನು ಆಸ್ಟನ್ ಕ್ಲಬ್ ಅಭಿಮಾನಿ ಎಂದೇ ಕರೆಯುತ್ತದೆ ಎಂದು ಹೇಳಿದರು.
ಚಲನಚಿತ್ರಗಳ ಪಟ್ಟಿ
[ಬದಲಾಯಿಸಿ]ದೂರದರ್ಶನ
[ಬದಲಾಯಿಸಿ]ವರ್ಷ | ಶಿರೋನಾಮೆ | ಪಾತ್ರ | ಟಿಪ್ಪಣಿಗಳು |
---|---|---|---|
1980 -1982 | ಬೂಸಮ್ ಬಡ್ಡೀಸ್ | ಕಿಪ್ ವಿಲ್ಸನ್ | |
1982 | ಟ್ಯಾಕ್ಸಿ | ಗೋರ್ಡಾನ್ | |
ಮೇಝಸ್ ಎಂಡ್ ಮಾನ್ ಸ್ಟರ್ಸ್ | ರಾಬೀ ವೀಲಿಂಗ್ | ||
ಹ್ಯಾಪಿ ಡೇಸ್ | ಡಾ. ಡ್ವೇಯ್ನ್ ಟ್ವಿಚೆಲ್ | ಸಂಚಿಕೆ "ಎ ಕೇಸ್ ಆಫ್ ರಿವೆಂಜ್" | |
1983 | ಫ್ಯಾಮಿಲಿ ಟೈಸ್ | ನೆಡ್ | ಇಲೈಸ್ ಕೀಟನ್ಸ್ ಬ್ರದರ್ |
1994 | ವಾಲ್ಟ್ ಆಫ್ ಹಾರರ್ | ನಿರ್ದೇಶಕ | |
1998 | ಫ್ರಮ್ ದ ಅರ್ಥ್ ಟು ದ ಮೂನ್ | ವಿವರಣಕಾರ (ಹಾಗೂ ನಿರ್ವಾಹಕ ನಿರ್ಮಾಪಕ/ನಿರ್ದೇಶಕ/ಲೇಖಕ) | ಚಿಕ್ಕ ಸರಣಿ |
ಬ್ಯಾಂಡ್ ಆಫ್ ಬ್ರದರ್ಸ್ | ನಿರ್ಮಾಪಕ, ನಿರ್ದೇಶಕ, ಲೇಖಕ | ಚಿಕ್ಕ ಸರಣಿ | |
2002 | The Rutles 2: Can't Buy Me Lunch | ಇಂಟರ್ ವ್ಯೂಯೀ | |
2006- | ಬಿಗ್ ಲವ್ | ಕಾರ್ಯಕಾರಿ ನಿರ್ಮಾಪಕ | ಟೆಲಿವಿಸನ್ ಸರಣಿ |
2008 | ಜಾನ್ ಆಡಮ್ಸ್ | ಕಾರ್ಯಕಾರಿ ನಿರ್ಮಾಪಕ | ಚಿಕ್ಕ ಸರಣಿ |
2010 | ದ ಪೆಸಿಫಿಕ್ | ಕಾರ್ಯಕಾರಿ ನಿರ್ಮಾಪಕ | ಚಿಕ್ಕ ಸರಣಿ |
ಅನ್ಯ ಮಾನ್ಯತೆಗಳು
[ಬದಲಾಯಿಸಿ]ವರ್ಷ | ಸಂಸ್ಥೆ | ಪ್ರಶಸ್ತಿ | ಫಲಿತಾಂಶ |
---|---|---|---|
1988 | ಹಾಲಿವುಡ್ ವಿಮೆನ್'ಸ್ ಪ್ರೆಸ್ ಕ್ಲಬ್ | ಗೋಲ್ಡನ್ ಆಪಲ್ ಪ್ರಶಸ್ತಿ | ಗೆಲುವು |
1995 | ಹೇಸ್ಟೀ ಪುಡ್ಡಿಂಗ್ ಥಿಯೆಟ್ರಿಕಲ್ಸ್ | ಮ್ಯಾನ್ ಆಫ್ ದ ಇಯರ್ (ವರ್ಷದ ಪುರುಷ) | ಗೆಲುವು |
2002 | ಅಮೆರಿಕನ್ ಫಿಲ್ಮ್ ಇನ್ಸ್ ಟಿಟ್ಯೂಟ್ | AFI ಲೈಫ್ ಟೈಮ್ ಅಚೀವ್ ಮೆಂಟ್ ಪ್ರಶಸ್ತಿ | ಗೆಲುವು[೩೧] |
ಹಾಲಿವುಡ್ ಚಲನಚಿತ್ರೋತ್ಸವ | ವರ್ಷದ ನಟ | ಗೆಲುವು | |
2004 | BAFTA/LA ಬ್ರಿಟಾನಿಯಾ ಪ್ರಶಸ್ತಿ | ಚಲನಚಿತ್ರದಲ್ಲಿ ಶ್ರೇಷ್ಠತೆಗಾಗಿ ನೀಡುವ ಬ್ರಿಟಾನಿಯಾ ಪ್ರಶಸ್ತಿ | ಗೆಲುವು |
ಬಾಂಬೀ ಪ್ರಶಸ್ತಿ | ಅಂತಾರಾಷ್ಟ್ರೀಯ ಚಿತ್ರಕ್ಕಾಗಿ - ಬಾಂಬಿ | ಗೆಲುವು | |
2009 | ಫಿಲ್ಮ್ ಸೊಸೈಟಿ ಆಫ್ ಲಿಂಕನ್ ಸೆಂಟರ್ | ಗಾಲಾ ಟ್ರಿಬ್ಯೂಟ್ | ಗೆಲುವು |
ಮೂಲಪುರುಷ
[ಬದಲಾಯಿಸಿ]ಆಸ್ಟೆರಾಯ್ಡ್ 12818 ಟಾಮ್ ಹ್ಯಾಂಕ್ಸ್ ನನ್ನು ಅವನ ಹೆಸರಿನ ಹಿನ್ನೆಲೆಯಲ್ಲೇ ಹೀಗೆ ಹೆಸರಿಸಲಾಯಿತು.[೩೨]
ಆಕರಗಳು
[ಬದಲಾಯಿಸಿ]- ↑ ಫೀಪಲ್ ಇಂಡೆಕ್ಸ್ Archived 2019-08-23 ವೇಬ್ಯಾಕ್ ಮೆಷಿನ್ ನಲ್ಲಿ. ಬಾಕ್ಸ್ ಆಫೀಸ್ ಆಫ್ ಮೋಜೋ ಇಂದ
- ↑ ಫೆನ್ ಸ್ಟರ್, ಬಾಬ್ ದೆ ಡಿಡ್ ವಾಟ್!? ದ ಫನ್ನಿ, ವಿಯರ್ಡ್, ವಂಡರ್ ಫುಲ್ ಎಂಡ್ ಸ್ಟುಪಿಡ್ ಥಿಂಗ್ಡ್ ಫೇಮಸ್ ಪೀಪಲ್ ಹ್ಯಾವ್ ಡನ್ , ಆಂಡ್ರೂಸ್ ಪಬ್ಲಿಷಿಂಗ್, 2002 . ಪುಟ 55
- ↑ ಲಾರೆನ್ಸ್ ಎಂ. ಹ್ಯಾಂಕ್ಸ್, ಅಸೋಸಿಯೇಟ್ ಫ್ರೊಫೆಸರ್ - ಯೂನಿವರ್ಸಿಟಿ ಆಫ್ ಇಲಿನಾಯ್ಸ್ ಎಟ್ ಉರ್ಬಾನಾ-ಷಾಂಪೇಯ್ನ್
- ↑ Television listings, TV Guide, 2003-11-27, retrieved 2009-01-20
{{citation}}
: Italic or bold markup not allowed in:|publisher=
(help) - ↑ Riggs, Thomas (2002). Contemporary Theatre, Film, and Television. Gale Research. p. 117. ISBN 0787651168.
- ↑ ವಿನ್ನರ್ ಸ್ಪೀಚಸ್
- ↑ "ಹ್ಯಾಂಕ್ಸ್ ಫೈಲ್ಸ್ ಬಿಗ್ ಫ್ಯಾಟ್ 'ಗ್ರೀಕ್' ಲಾಸೂಟ್ Archived 2008-02-08 ವೇಬ್ಯಾಕ್ ಮೆಷಿನ್ ನಲ್ಲಿ." - ಯುನೈಟೆಡ್ ಪ್ರೆಸ್ ಇಂಟರ್ನ್ಯಾಷನಲ್ - (c/o NewsDaily.com)- ಆಗಸ್ಟ್ 8, 2007 .
- ↑ "ಹ್ಯಾಂಕ್ಸ್ ಸ್ಯೂಸ್ ಓವರ್ ಅನ್ ಪೇಯ್ಡ್ 'ಮೈ ಬಿಗ್ ಫ್ಯಾಟ್ ಗ್ರೀಕ್ ವೆಡ್ಡಿಂಗ್' ಪ್ರಾಫಿಟ್ಸ್ Archived 2008-10-13 ವೇಬ್ಯಾಕ್ ಮೆಷಿನ್ ನಲ್ಲಿ.", ಐರಿಷ್ ಎಕ್ಸಾಮಿನರ್ , ಆಗಸ್ಟ್ 8, 2007 .
- ↑ "ಆಕ್ಟರ್ ಹ್ಯಾಂಕ್ಸ್ ವೋಟೆಡ್ ಇನ್ ಬೈ ಅಕಾಡೆಮಿ", BBC, 25 ಆಗಸ್ಟ್ 2005.
- ↑ "ಹ್ಯಾಂಕ್ಸ್ ಟಾಪ್ಸ್ 'ಮೋಸ್ಟ್ ಟ್ರಸ್ಟೆಡ್' ಇಂಡೆಕ್ಸ್", BBC, 27 ಸೆಪ್ಟೆಂಬರ್ 2006.
- ↑ "ಎ ರಿಯಲ್ ಮೂವೀ ಚಾಲೆಂಜ್". BBC. ನವೆಂಬರ್ 9, 2006.
- ↑ ಟೈಲರ್, ಜೋಶುವಾ. "ಟಾಮ್ ಹ್ಯಾಂಕ್ಸ್ ಕನ್ ಫರ್ಮ್ಡ್ ಫಾರ್ ಡಾ ವಿನ್ಷಿ ಕೋಡ್ ಸೀಕ್ವೆಲ್" Archived 2009-04-14 ವೇಬ್ಯಾಕ್ ಮೆಷಿನ್ ನಲ್ಲಿ.. ಸಿನೆಮಾ ಬ್ಲೆಂಡ್, 10 ಏಪ್ರಿಲ್ 2007.
- ↑ ಫ್ಲೆಮಿಂಗ್, ಮೈಕೆಲ್. "ಹೊವಾರ್ಡ್ ಮೂವ್ಸ್ ಫಾಸ್ಟ್ ವಿತ್ 'ಕೋಡ್' ಸೀಕ್ವೆಲ್", ವರೈಟಿ, 24 ಅಕ್ಟೋಬರ್ 2007.
- ↑ "ವೇರ್ ದ ವೈಲ್ಡ್ ಥಿಂಗ್ಸ್ ಆರ್". ಗಲ್ಲಾಪೆಟ್ಟಿಗೆ ಮೊಜೊ. ಅಕ್ಟೋಬರ್ 22,2009ರಂದು ಸೇರಿಸಲಾಗಿದೆ.
- ↑ "ಪೀಪಲ್ ಇಂಡೆಕ್ಸ್" ಗಲ್ಲಾಪೆಟ್ಟಿಗೆ ಮೊಜೊ.
- ↑ "ಟಾಮ್ ಹ್ಯಾಂಕ್ಸ್." ಗಲ್ಲಾಪೆಟ್ಟಿಗೆ ಮೊಜೊ.
- ↑ "ಟಾಮ್ ಹ್ಯಾಂಕ್ಸ್" US ಪತ್ರಿಕೆ
- ↑ "ಟಾಮ್ ಹ್ಯಾಂಕ್ಸ್" E!ಎಂಟರ್ ಟೈನ್ಮೆಂಟ್ ಟೆಲಿವಿಷನ್
- ↑ ಟಾಮ್ ಹ್ಯಾಂಕ್ಸ್ ಆನ್ ಲೆಟರ್ ಮ್ಯಾನ್
- ↑ "ಆರ್ಕೈವ್ ನಕಲು". Archived from the original on 2009-04-28. Retrieved 2010-03-03.
- ↑ "ಹಾಲಿವುಡ್ ಲವ್ಸ್ ಹೈಬ್ರಿಡ್ ಕಾರ್ಸ್" Archived 2004-10-30 at Archive.is ವಾಷಿಂಗ್ಟನ್ ಪೋಸ್ಟ್ (c/o AllAboutHyBridCars.com)
- ↑ ಬೀವೇರ್: ಸೆಲೆಬ್ರಿಟಿ ಎಂಡೋರ್ಸ್ ಮೆಂಟ್ ಪಾರ್ ಟಾಮ್ ಹ್ಯಾಂಕ್ಸ್ Archived 2009-10-04 ವೇಬ್ಯಾಕ್ ಮೆಷಿನ್ ನಲ್ಲಿ. ವೀಡಿಯೋಸ್ ಮೈ ಸ್ಪೇಸ್ ನಿಂದ
- ↑ ಕ್ಯಾಲಿಫೋರ್ನಿಯಾ ಪ್ರೊಪೊಸಿಷನ್ಸ್: ಪ್ರೊಪೊಸಿಷನ್ 8,ಕೌಂಟಿ-ಬೈ-ಕೌಂಟಿ ಮ್ಯಾಪ್, ಮಾರ್ಜಿನ್ ಆಫ್ ವಿಕ್ಟರಿ, ಲಾಸ್ ಏಂಜಲೀಸ್ ಟೈಮ್ಸ್
- ↑ "ಟಾಮ್ ಹ್ಯಾಂಕ್ಸ್ ಗೆಟ್ ಪೇಬ್ಯಾಕ್ ಫಾರ್ ಪ್ರಾಪ್ 8" Lonsberry.com ನಿಂದ
- ↑ ಟಾಮ್ ಹ್ಯಾಂಕ್ಸ್ ಹೇಳುತ್ತಾನೆ ಸಲಹೆ 8ನ್ನು ಬೆಂಬಲಿಸುವ ಮಾರ್ಮನ್ ಬೆಂಬಲಿಗರು 'ಅನ್-ಅಮೆರಿಕನ್', ಫಾಕ್ಸ್ ನ್ಯೂಸ್
- ↑ {0/{1}}ಟಾಮ್ ಹ್ಯಾಂಕ್ಸ್ ಸಲಹೆ 8ನ್ನು ಬೆಂಬಲಿಸುವ ಮಾರ್ಮನ್ ಬೆಂಬಲಿಗರು 'ಅನ್-ಅಮೆರಿಕನ್' ಎಂದುದಕ್ಕೆ ಕ್ಷಮೆ ಕೇಳುತ್ತಾನೆ, ಫಾಕ್ಸ್ ನ್ಯೂಸ್
- ↑ "ಆರ್ಕೈವ್ ನಕಲು". Archived from the original on 2009-02-03. Retrieved 2010-03-03.
- ↑ "ಆರ್ಮಿ ಆನರ್ಸ್ ಟಾಮ್ ಹ್ಯಾಂಕ್ಸ್" Archived 2009-05-26 ವೇಬ್ಯಾಕ್ ಮೆಷಿನ್ ನಲ್ಲಿ., ಅಸೋಸಿಯೇಟೆಡ್ ಪ್ರೆಸ್, (c/o ನ್ಯೂಸ್24, 30 ಜೂನ್ 2006 .
- ↑ "ಮಾರ್ಷಲ್ J WMT KPIX KGO ಕಿಡ್ಸ್ ಷೋ ಅತಿಥೇಯ ಜೇ ಅಲೆಕ್ಸಾಂಡರ್". Archived from the original on 2008-03-14. Retrieved 2010-03-03.
- ↑ ಟಾಮ್ ಹ್ಯಾಂಕ್ಸ್ ಆನ್ ಟಾಯ್ ಸ್ಟೋರಿ 3 Firstshowing.net ನಿಂದ
- ↑ ದ ಅಚೀವ್ ಮೆಂಟ್ ಆಫ್ ಟಾಮ್ ಹ್ಯಾಂಕ್ಸ್ Archived 2010-05-18 ವೇಬ್ಯಾಕ್ ಮೆಷಿನ್ ನಲ್ಲಿ. AFI ವೆಬ್ ಸೈಟ್ ನಿಂದ
- ↑ ಮೈನರ್ ಪ್ಲಾನೆಟ್ ನೇಮ್ಸ್: ಆಲ್ಫಬೆಟಿಕಲ್ ಲಿಸ್ಟ್ ಹಾರ್ವರ್ಡ್-ಸ್ಮಿತ್ ಸನಿಯನ್ ಆಸ್ಟ್ರೋಫಿಸಿಕ್ಸ್ ಕೇಂದ್ರದಿಂದ
ಹೆಚ್ಚಿನ ಓದಿಗೆ
[ಬದಲಾಯಿಸಿ]- ಗಾರ್ಡ್ನರ್, ಡೇವಿಡ್, ಟಾಮ್ ಹ್ಯಾಂಕ್ಸ್: ದ ಅನಾಥರೈಝ್ಡ್ ಬಯಾಗ್ರಫಿ , ಲಂಡನ್, ಇಂಗ್ಲೆಂಡ್ 1999
- ಗಾರ್ಡ್ನರ್, ಡೇವಿಡ್, ಟಾಮ್ ಹ್ಯಾಂಕ್ಸ್: ಎನಿಗ್ಮಾ 2007
- ಫೀಫರ್, ಲೀ, ದ ಫಿಲಮ್ಸ್ ಆಫ್ ಟಾಮ್ ಹ್ಯಾಂಕ್ಸ್ , ಸೀಕಾಕಸ್, ನ್ಯೂಜೆರ್ಸಿ, 1996
- ಸಾಲಾಮನ್, ಜೂಲೀ, ದ ಡೆವಿಲ್'ಸ್ ಕ್ಯಾಂಡೀ:ದ ಬಾನ್ ಫೈರ್ ಆಫ್ ದ ವ್ಯಾನಿಟೀಸ್ ಗೋಸ್ ಟು ಹಾಲಿವುಡ್ , ಬೋಸ್ಟನ್, 1991
- ಟ್ರಾಕಿನ್, ರಾಯ್, ಟಾಮ್ ಹ್ಯಾಂಕ್ಸ್: ಜರ್ನೀ ಟು ಸ್ಟಾರ್ ಡಂ , 1987 ; ರಿವೈಸ್ಡ್ ಎಡಿಷನ್ 1995
- ವಾಲ್ನೆರ್, ರೋಸ್ ಮೇರಿ, ಟಾಮ್ ಹ್ಯಾಂಕ್ಸ್: ಅಕಾಡೆಮಿ ಅವಾರ್ಡ್-ವಿನಿಂಗ್ ಆಕ್ಟರ್ , ಎಡಿನಾ, ಮಿನ್ನೆಸೊಟಾ, 1994
ಹೊರಗಿನ ಕೊಂಡಿಗಳು
[ಬದಲಾಯಿಸಿ]- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: markup
- Webarchive template archiveis links
- Articles with hatnote templates targeting a nonexistent page
- Articles with unsourced statements from March 2009
- Articles with unsourced statements from May 2009
- Commons category link is on Wikidata
- ಯುನೈಟೆಸ್ ಸ್ಟೇಟ್ಸ್ ನ ಪೂರ್ವದ ಸಾಂಪ್ರದಾಯಿಕ ಕ್ರಿಶ್ಚಿಯನ್ನರು
- ಅಮೆರಿಕಾದ ಚಲನಚಿತ್ರ ನಟರು
- ಪೋರ್ಚುಗೀಸ್ ಅಮೆರಿಕನ್ನರು
- ಅಮೇರಿಕಾದ ಕಿರುತೆರೆಯ ನಟರು
- ಅಮೆರಿಕಾದ ಕಂಠದಾನ ಕಲಾವಿದರು
- ಅಕಾಡೆಮಿ ಪ್ರಶಸ್ತಿ ಗೆದ್ದ ಅತ್ಯುತ್ತಮ ನಟರು
- ಅತ್ಯುತ್ತಮ ರಂಗನಟ ಗೋಲ್ಡನ್ ಗ್ಲೋಬ್ (ಚಲನಚಿತ್ರ) ವಿಜೇತರು
- ಅತ್ಯುತ್ತಮ ಸಂಗೀತಕಾರ ಅಥವಾ ಹಾಸ್ಯ ನಟ ಗೋಲ್ಡನ್ ಗ್ಲೋಬ್ (ಚಲನಚಿತ್ರ) ವಿಜೇತರು
- ಒಂದು ಪಾತ್ರವರ್ಗದ ಅಮೋಘ ಅಭಿನಯಕ್ಕಾಗಿ ಮೋಷನ್ ಪಿಕ್ಚರ್ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿ ವಿಜೇತರು
- ಕ್ಯಾಲಿಪೊರ್ನಿಯಾದ ನಟರು
- ಕ್ಯಾಲಿಫೋರ್ನಿಯಾ ರಾಜ್ಯ ವಿಶ್ವವಿದ್ಯಾಲಯ, ದಾರ್ಮಿಕಕಾರ್ಯದ ಆಲಮ್ನಿ
- ಕಾಂಕಾರ್ಡ್, ಕ್ಯಾಲಿಫೋರ್ನಿಯಾದ ಜನರು
- ಕ್ಯಾಲಿಫೋರ್ನಿಯಾದ ಡೆಮೋಕ್ರಾಟ್ ಗಳು
- ಕ್ಯಾಲಿಫೋರ್ನಿಯಾದ ಕಾಂಟ್ರಾ ಕೋಸ್ಟಾ ಗ್ರಾಮದ ಜನರು
- ಕ್ಯಾಲಿಫೋರ್ನಿಯಾದ ಓಕ್ ಲ್ಯಾಂಡ್ ನ ಜನರು
- ಸ್ಪೇಸ್ ಅಡ್ವೊಕೆಸಿ
- 1986ರಲ್ಲಿ ಜನಿಸಿದವರು
- ಈಗಿರುವ ಜನರು
- ಚಲನಚಿತ್ರ ನಟರು