ಫೋರ್ಬ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Forbes
Editor-in-chiefSteve Forbes
ಪ್ರಥಮ ಸಂಚಿಕೆ1917
ದೇಶUnited States
ಮೂಲಸ್ಥಳನ್ಯೂ ಯಾರ್ಕ್ ನಗರ
ಭಾಷೆEnglish
ಜಾಲತಾಣforbes.com

ಫೋರ್ಬ್ಸ್, ಇಂಕ್. ಒಂದು ಖಾಸಗಿ ಮಾಲಿಕತ್ವದ ಪ್ರಕಾಶನ ಮತ್ತು ಮಾಧ್ಯಮ ಸಂಸ್ಥೆ. ೯೦೦,೦೦೦ ಕ್ಕಿಂತ ಹೆಚ್ಚು ಪತ್ರಿಕಾ ಪ್ರಸಾರಣೆಯ ಸಹಿತ, ಒಂದು ಪಾಕ್ಷಿಕ ನಿಯತಕಾಲಿಕೆಯಾದ ಫೋರ್ಬ್ಸ್ ಅದರ ಮುಂಚೂಣಿಯ ಪ್ರಕಟಣೆಯಾಗಿದೆ. ಆಗಸ್ಟ್ ೨೦೦೬ ರಲ್ಲಿ, ಎಲಿವೇಶನ್ ಪಾರ್ಟ್ನರ್ಸ್ ಎನ್ನುವ ಖಾಸಗಿ ನ್ಯಾಯದ ವ್ಯವಹಾರ ನಿರ್ವಹಣಾ ಮಂಡಲಿಯು ಹೊಸದಾಗಿ ಪ್ರಾರಂಭವಾದ ಸಂಸ್ಥೆ ಫೋರ್ಬ್ಸ್ ಮೀಡಿಯಾದ ಒಂದು ಅಲ್ಪ ಸಂಖ್ಯಾತ ಭಾಗೀದಾರನಾಯಿತು, ಇದರಲ್ಲಿ ಫೋರ್ಬ್ಸ್ ನಿಯತಕಾಲಿಕೆ ಮತ್ತು ಜಾಲದಲ್ಲಿನ ಪ್ರಮುಖ ವ್ಯವಹಾರ ತಾಣಗಳಲ್ಲಿ ಒಂದಾದ ಫೋರ್ಬ್ಸ್.ಕಾಂ ಅನ್ನು ಒಳಗೊಂಡಿದೆ. ಫೋರ್ಬ್ಸ್.ಕಾಂ ಮಾಸಿಕವಾಗಿ ೧೮ ಮಿಲಿಯನ್ ಜನಗಳನ್ನು ತಲುಪುತ್ತದೆ. ಇತರೆ ಫೋರ್ಬ್ಸ್ ಮೀಡಿಯಾ ಜಾಲತಾಣಗಳೆಂದರೆ: ಇನ್ವೆಸ್ಟೊಪಿಡಿಯಾ; ರಿಯಲ್ ಕ್ಲಿಯರ್ ಪಾಲಿಟಿಕ್ಸ್, ರಿಯಲ್ ಕ್ಲಿಯರ್ ಮಾರ್ಕೆಟ್ಸ್ ಮತ್ತು ರಿಯಲ್ ಕ್ಲಿಯರ್ ಸ್ಪೋರ್ಟ್ಸ್; ಮತ್ತು ಟ್ರೂ/ಸ್ಲ್ಯಾಂಟ್. ಫೋರ್ಬ್ಸ್.ಕಾಂ ನ ವ್ಯವಹಾರ ಮತ್ತು ವಿತ್ತೀಯ ಬ್ಲಾಗ್ ಗಳ ನೆಟ್ವರ್ಕ್ ಗಳ ಸಹಿತ ಒಟ್ಟಾರೆ ಈ ವ್ಯವಹಾರಗಳೆಲ್ಲವೂ ಪ್ರತಿ ತಿಂಗಳೂ ಸುಮಾರು ೪೦ ಮಿಲಿಯನ್ ವ್ಯವಹಾರದ ತೀರ್ಮಾನ ಕೈಗೊಳುವವರನ್ನು ತಲುಪುತ್ತವೆ.[೧]

ಈ ಸಂಸ್ಥೆಯು ಫೋರ್ಬ್ಸ್ ಏಷ್ಯಾ, ಫೋರ್ಬ್ಸ್ ಲೈಫ್ ಹಾಗೂ ಫೋರ್ಬ್ಸ್ ವುಮೆನ್ ಎನ್ನುವ ನಿಯತಕಾಲಿಕೆಗಳನ್ನು ಸಹ ಪ್ರಕಟಿಸುತ್ತದೆ. ಅದೂ ಅಲ್ಲದೆ, ಚೀನಾ, ಕ್ರೋಶಿಯಾ, ಇಂಡಿಯಾ, ಇಂಡೋನೇಷ್ಯಾ, ಇಸ್ರೇಲ್, ಕೋರಿಯಾ, ಪೋಲೆಂಡ್, ರೋಮಾನಿಯಾ, ರಷ್ಯಾ, ಮತ್ತು ಟರ್ಕಿ ಗಳಲ್ಲಿ ಫೋರ್ಬ್ಸ್ ೧೦ ಸ್ಥಳೀಯ ಭಾಷೆಗಳ ಅನುಮತಿ ಪಡೆದ ಮುದ್ರಣ ಆವೃತ್ತಿಗಳನ್ನು ಹೊಂದಿದೆ. ಫೋರ್ಬ್ಸ್, ಫೋರ್ಬ್ಸ್ ಏಷ್ಯಾ ಹಾಗೂ ಸಂಸ್ಥೆಯ ಹತ್ತು ಅಂತರಾಷ್ಟ್ರೀಯ ಅನುಮತಿ ಪಡೆದ ಆವೃತ್ತಿಗಳು ಒಟ್ಟಾಗಿ ೬ ಮಿಲಿಯನ್ ಗಿಂತಲೂ ಹೆಚ್ಚು ಓದುಗರ ಒಂದು ವಿಶ್ವವ್ಯಾಪಿ ಶ್ರೋತೃಗಳನ್ನು ತಲುಪುತ್ತದೆ.

ಕೌಟುಂಬಿಕ ಸಂಸ್ಥೆಯ ಇತಿಹಾಸ[ಬದಲಾಯಿಸಿ]

ಮನ್ ಹಟನ್ ದಲ್ಲಿನ ೫ ನೇ ಅವೆನ್ಯೂ ದ ಫೋರ್ಬ್ಸ್ ಪ್ರಧಾನ ಕಚೇರಿ (ಈಗ ಅದು ನ್ಯೂಯಾರ್ಕ್ ವಿಶ್ವವಿದ್ಯಾಲಯದವರ ಮಾಲಿಕತ್ವದಲ್ಲಿದೆ)

೧೯೧೭ ರಲ್ಲಿ, ಬಿ. ಸಿ. ಫೋರ್ಬ್ಸ್ ಎಂದು ಹೆಸರಾದ, ಬೆರ್ಟಿ ಚಾರ್ಲ್ಸ್ ಫೋರ್ಬ್ಸ್, ಉನ್ನತ ತೀರ್ಮಾನ ಕೈಗೊಳ್ಳುವವರನ್ನು ಸಜ್ಜುಗೊಳಿಸಲು ಪಾಕ್ಷಿಕ ವ್ಯವಹಾರದ ಪ್ರಕಟಣೆಯಾದ ಫೋರ್ಬ್ಸ್ ನಿಯತಕಾಲಿಕೆಯನ್ನು ಪ್ರಾರಂಭಿಸಿದನು. ಸ್ಕಾಟಿಶ್ ವಲಸೆಗಾರ ಬಿ. ಸಿ. ಫೋರ್ಬ್ಸ್ ೧೯೦೪ ರಲ್ಲಿ ನ್ಯೂಯಾರ್ಕ್ ಗೆ ಬಂದರು, ಹಾಗೂ ಜರ್ನಲ್ ಆಫ್ ಕಾಮರ್ಸ್ ಗೆ ವರದಿಗಾರನಾಗಿ ಮುಫತ್ತಾಗಿ ಕೆಲಸ ಮಾಡುವದಾಗಿ ತಿಳಿಸಿ ತನ್ನ ಮೊದಲ ಉದ್ಯೋಗವನ್ನು ಪಡೆದರು. ಹನ್ನೆರಡು ವರ್ಷಗಳ ನಂತರ ಅವರು ವಿಶಾಲವಾದ ಓದುಗರನ್ನುಳ್ಳ ವ್ಯವಹಾರಗಳ ಅಂಕಣಕಾರರಾಗಿದ್ದರು. ೧೯೧೭ ರಲ್ಲಿ, ತಮ್ಮ ಪ್ರತಿ ದಿನದ ಅಂಕಣ ಹಾಗೂ ತಮ್ಮ ಇತರೆ ಸಂಚಿಕೆಗಳ ವೈಶಿಷ್ಟ್ಯಪೂರ್ಣ ಸಾಹಿತ್ಯಿಕ ಲೇಖನಗಳಿಗಾಗಿ ತಮ್ಮ ಅತಿ ಹೆಚ್ಚಾದ ವಿಸ್ತಾರವುಳ್ಳಂತಹ ಭಾವನೆಗಳನ್ನು ವ್ಯಕ್ತಗೊಳಿಸುವುದಕ್ಕಾಗಿ ಅವರು ಫೋರ್ಬ್ಸ್ ಅನ್ನು ಪ್ರಾರಂಭಿಸಿದರು.

೧೯೪೬ ರಲ್ಲಿ, ಎರಡನೆಯ ಮಹಾಯುದ್ಧದ ನಂತರ, ಬಿ. ಸಿ ಪುತ್ರರಾದ, ಬ್ರೂಸ್ ಮತ್ತು ಮಾಲ್ಕೊಮ್ ಫೋರ್ಬ್ಸ್ ಸಂಸ್ಥೆಗೆ ಸೇರಿದರು. ಬ್ರೂಸ್ ಡೆಟ್ರಾಯಿಟ್ ನಲ್ಲಿ ಜಾಹಿರಾತಿನ ಮುಖ್ಯಸ್ಥರಾದರು, ಮತ್ತು ಮಾಲ್ಕೊಮ್ ಸಹಾಯಕ ಪ್ರಕಾಶಕರಾದರು. ೧೯೫೪ ರಲ್ಲಿ ಬಿ. ಸಿ ಯವರು ಮರಣಿಸಿದಾಗ, ಬ್ರೂಸ್ ಅವರು ಅಧ್ಯಕ್ಷರಾದರು ಹಾಗೂ ಮಾಲ್ಕೊಮ್ ಮುಖ್ಯ ಸಂಪಾದಕ ಹಾಗೂ ಪ್ರಕಾಶಕರಾದರು.

ಮಾಲ್ಕೊಮ್ ಮತ್ತು ಬ್ರೂಸ್ ರಲ್ಲದೆ, ಇನ್ನೂ ಮೂರು ಸಹೋದರರಿದ್ದರು: ಡಂಕನ್, ತನ್ನ ಹದಿ ವಯಸ್ಸಿನಲ್ಲಿಯೇ ಮರಣಿಸಿದನು, ಗೊರ್ಡನ್ ೧೯೮೭ ರಲ್ಲಿ ಗತಿಸಿದರು, ಹಾಗೂ ವ್ಯಾಲೆಸ್, ಈಗ ಫೋರ್ಬ್ಸ್ ಇನ್ವೆಸ್ಟರ್ಸ್ ಅಡ್ವೈಸರಿ ಇನಸ್ಟಿಟ್ಯೂಟ್ ನ ಅಧ್ಯಕ್ಷರು. ೧೯೬೪ ರಲ್ಲಿ, ಬ್ರೂಸ್ ಫೋರ್ಬ್ಸ್ ತಮ್ಮ ೪೮ ನೇ ವಯಸ್ಸಿನಲ್ಲಿ ಕ್ಯಾನ್ಸ್ರರ್ ನಿಂದ ಮರಣಹೊಂದಿದರು. ಮಾಲ್ಕೊಮ್ ಫೋರ್ಬ್ಸ್ ಅಧ್ಯಕ್ಷ ಹಾಗೂ ಮುಖ್ಯ ಸಂಪಾದಕರಾದರು, ಹಾಗೂ ವ್ಯವಹಾರ ಮತ್ತು ಹಣದ ಹೂಡಿಕೆಗೆ ಬಂದಾಗ ಫೋರ್ಬ್ಸ್ ನ ಹೆಸರು ಮನೆ ಮಾತಾಗುವಂತೆ ಮಾಡಿದರು.[೨]

೧೯೯೦ ರಲ್ಲಿ ಮಾಲ್ಕೊಮ್ ಫೋರ್ಬ್ಸ್ ತಮ್ಮ ೭೦ ನೇ ವಯಸ್ಸಿನಲ್ಲಿ ಮರಣಹೊಂದಿದರು. ಫೋರ್ಬ್ಸ್, ಇಂಕ್. ಅವರ ನಾಲ್ಕು ಮಕ್ಕಳು ಮತ್ತು ಮಗಳು ಮೊಯಿರಾ ಪಾಲಿಗೆ ಬಂದಿದೆ.

ಇಂದು, ಸ್ಟೀವ್ ಫೋರ್ಬ್ಸ್ ಅವರು ಫೋರ್ಬ್ಸ್ ನ CEO ಮತ್ತು ಚೇರ್ಮ್ಯಾನ್ ರೂ ಅಲ್ಲದೆ ಫೋರ್ಬ್ಸ್ ಮ್ಯಾಗಜೈನ್ ನ ಮುಖ್ಯ ಸಂಪಾದಕರಾಗಿದ್ದಾರೆ; ಅವರ ಸಹೋದರ ಟಿಮ್ ಫೋರ್ಬ್ಸ್, ಫೋರ್ಬ್ಸ್ ನ ಚೀಫ್ ಆಪರೇಟಿಂಗ್ ಆಫೀಸರ್ ಹಾಗೂ ಅಧ್ಯಕ್ಷರಾಗಿದ್ದಾರೆ; ಕ್ರಿಸ್ಟೋಫರ್ ಫೋರ್ಬ್ಸ್, ಫೋರ್ಬ್ಸ್ ನ ವೈಸ್ ಚೇರ್ಮ್ಯಾನ್ ಆಗಿದ್ದಾರೆ. ರಾಬರ್ಟ್ ಫೋರ್ಬ್ಸ್ ಅವರು ಫೋರ್ಬ್ಸ್ ನ ಉಪ ಅಧ್ಯಕ್ಷರು ಹಾಗೂ ಫೋರ್ಬ್ಸ್ ಲೈಫ್ (ಹಿಂದಿನ ಫೋರ್ಬ್ಸ್ FYI ) ನ ಅಧ್ಯಕ್ಷರು.

ಫೋರ್ಬ್ಸ್.ಕಾಂ[ಬದಲಾಯಿಸಿ]

ಫೋರ್ಬ್ಸ್.ಕಾಂ ವಿಶ್ವದ ವ್ಯವಹಾರ ಮುಖಂಡರಿಗೆ ಒಂದು ಹೋಮ್ ಪೇಜ್ ಆಗಿದೆ ಹಾಗೂ ಹಿರಿಯ ವ್ಯವಹಾರ ಕಾರ್ಯನಿರ್ವಾಹಕರಿಗೆ ಅತ್ಯಂತ ಭರವಸೆಯ ಸಂಪನ್ಮೂಲಗಳಲ್ಲಿ ಕೆಲವು, ಅವರಿಗೆ ನಿಜವಾದ ಸಮಯದ ವರದಿ ಮಾಡುವುದು, ರಾಜಿಯಾಗದ ವಿಮರ್ಶೆ, ಸಂಕ್ಷಿಪ್ತವಾದ ವಿಂಗಡಣೆ, ಸಮಂಜಸವಾದ ಉಪಕರಣಗಳು, ಮತ್ತು ತಾವು ಕೆಲಸಮಾಡಿ ಜಯಶಾಲಿಯಾಗುವ ಸಾಮೂಹಿಕ ಒಡೆತನದ, ಹಣ ಹೂಡಿಕೆಯಿಂದ ಲಾಭ, ಹಾಗೂ ವಿಜಯದ ಬಹುಮಾನದ ಜೊತೆ ಸಂತೋಷಪೂರ್ಣವಾಗಿರುವಂತೆ ಮಾಡುತ್ತದೆ. ಇಡೀ ವ್ಯವಹಾರದ ದಿನವೆಲ್ಲಾ ಫೋರ್ಬ್ಸ್.ಕಾಂ ಫೋರ್ಬ್ಸ್ ಪತ್ರಿಕೋದ್ಯಮದ ಮತ್ತು ಜಾಲವು ಅನುವು ಮಾಡಿಕೊಡುವಂತಹ ಪರಸ್ಪರ ಕಾರ್ಯಮಾಡುವಿಕೆ, ಆಳ ಮತ್ತು ಎಲ್ಲಾ ವಿಷಯಗಳ ತಕ್ಷಣದ ವರದಿಯ ಜೊತೆ ತನ್ನ ಆರಿಸಿದ ಪಾಲುದಾರರ ಅತ್ಯಂತ ಶ್ರೇಷ್ಠ ಸಾವಿರಾರು ಲೇಖನಗಳನ್ನು ಬಿಡುಗಡೆ ಮಾಡುತ್ತಾ ಪ್ರಕಟಿಸುತ್ತದೆ. ತಾಣದ ಒಂಬತ್ತು ಸಂಪಾದಕೀಯ ವಾಹಿನಿಗಳು ವ್ಯವಹಾರ, ತಾಂತ್ರಿಕತೆ, ಮಾರುಕಟ್ಟೆಗಳು, ವ್ಯಕ್ತಿಗತ ಹಣಕಾಸು, ಉದ್ಯಮಶೀಲಗಾರರು, ನಾಯಕತ್ವ, ಫೋರ್ಬ್ಸ್ ಲೈಫ್, ವಿಮರ್ಶೆ ಹಾಗೂ ಯಾದಿಗಳನ್ನು ಒಳಗೊಂಡಿರುತ್ತವೆ. ಫೋರ್ಬ್ಸ್ ವಿಡಿಯೊ ನೆಟ್ವರ್ಕ್ ಪ್ರತಿ ವಾರವೂ ಸುಮಾರು ೧೦೦ ಮೂಲ ವಿಡಿಯೊಗಳನ್ನು ನಿರ್ಮಿಸುತ್ತದೆ. ಫೋರ್ಬ್ಸ್.ಕಾಂ ಚಂದಾದಾರಿಕೆಯ ಹಣಹೂಡಿಕೆಯ ವಾರ್ತಾಪತ್ರಗಳನ್ನು ಸಹ ಪ್ರಕಾಶಿಸುತ್ತದೆ. ಫೋರ್ಬ್ಸ್ ನ ವಿಷಯಗಳು ಅನೇಕ ಮೊಬೈಲ್ ನ ವೇದಿಕೆಗಳಲ್ಲೂ ದೊರಕುತ್ತದೆ (ಐ ಫೋನ್, ಬ್ಲಾಕ್ ಬೆರ್ರಿ ಮತ್ತು ಪಾಮ್ ಪ್ರಿ ಒಳಗೊಂಡಂತೆ).

ಫೋರ್ಬ್ಸ್.ಕಾಂ ಫೋರ್ಬ್ಸ್ ಡಿಜಿಟಲ್ ನ ಒಂದು ಭಾಗ, ಫೋರ್ಬ್ಸ್ ಮೀಡಿಯದ ಒಂದು ವಿಭಾಗ. ಫೋರ್ಬ್ಸ್.ಕಾಂ ಮತ್ತು ಅದು ಸಂಯೋಜಿಸಿಕೊಂಡಿರುವ ವಹಿವಾಟುಗಳಲ್ಲಿ ಇವುಗಳೂ ಸೇರಿಕೊಂಡಿವೆ:

ಈ ವಿಭಾಗಗಳೆಲ್ಲವೂ ಒಟ್ಟುಸೇರಿ, ಪ್ರತಿ ತಿಂಗಳೂ ಸರಾಸರಿ ೪೦ ಮಿಲಿಯನ್ ವ್ಯವಹಾರದ ತೀರ್ಮಾನ ಕೈಗೊಳ್ಳುವವರನ್ನು ತಲುಪುತ್ತದೆ.

ಫೋರ್ಬ್ಸ್ ಅಂತರಾಷ್ಟ್ರೀಯ ಅನುಮತಿಪಡೆದ ಮುದ್ರಣ ಆವೃತ್ತಿಗಳು

ಕೊರಿಯಾದಲ್ಲಿ ಒಂದು ಪ್ರಮುಖ ವರ್ತಮಾನ ಪತ್ರಿಕೆ, ಜೂಂಗ್ ಆಂಗ್ ಲಿಬೊ ಜೊತೆ ಸಂಯೋಜನೆಗೊಂಡು ೨೦೦೨ ರ ಕೊನೆಯ ಹೊತ್ತಿಗೆ ಫೋರ್ಬ್ಸ್ ಕೋರಿಯಾ ಪ್ರಾರಂಭಿಸಲ್ಪಟ್ಟಿತು. ಮೊದಲ ಪ್ರಮುಖ ಸಂಚಿಕೆಯು ೨೦೦೩ ರಲ್ಲಿ ಪ್ರಕಟವಾಯಿತು ಹಾಗೂ ಅದರ ಪ್ರಸಾರಣಾ ಸಂಖ್ಯೆಯು ೫೨,೦೦೦ ರದಷ್ಟಿತ್ತು. ಇದು ಸುಮಾರಾಗಿ ಶೇಕಡಾ ೪೦ ಫೋರ್ಬ್ಸ್ ಸಂಚಿಕೆಗಳಿಂದ ಸಂಪಾದಕೀಯ, ಶೇಕಡಾ ೬೦ ಕೋರಿಯಾದ ವ್ಯವಹಾರದ ವಾರ್ತೆಗಳು, ವಿಮರ್ಶೆಗಳು, ಹಾಗೂ ಜೀವನ ಶೈಲಿಯ ವೈಶಿಷ್ಟ್ಯಗಳನ್ನು ಸಹ ಹೊಂದಿದೆ. ಅದರ ಸಂಪಾದಕರು ಕಿಲ್-ಜೂ ಯೂನ್.

ಆಕ್ಸೆಲ್ ಸ್ಪ್ರಿಂಜರ್ ರಷ್ಯಾ ಪ್ರಕಾಶಕರ ಜೊತೆ ಒಪ್ಪಂದದ ಪ್ರಕಾರ ಏಪ್ರಿಲ್ ೨೦೦೪ ರಲ್ಲಿ ಫೋರ್ಬ್ಸ್ ರಷ್ಯಾ ಆರಂಭಿಸಲ್ಪಟ್ಟಿತು. ೧೦೦,೦೦೦ ದ ಪ್ರಸಾರಣೆಯ ಸಹಿತ, ಅದು ಮಾಸ್ಕೋ, ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ಹಾಗೂ ಇತರೆ ಪ್ರಮುಖ ಪ್ರಾಂತೀಯ ನಗರಗಳಲ್ಲಿ ಹಂಚಲ್ಪಟುತ್ತದೆ. ಅದು ಸ್ಥಳೀಯ ರಷ್ಯಾದ ವ್ಯವಹಾರ ವಾರ್ತೆ ಮತ್ತು ವಿಮರ್ಶೆ ಹಾಗೂ ಫೋರ್ಬ್ಸ್ ಯು ಎಸ್ ಆವೃತ್ತಿಯ ಆಧಾರದ ಮೇಲೆ ವಿಷಯಗಳನ್ನು ಒಳಗೊಂಡಿರುವಂತೆ, ಒಂದು ಸ್ವತಂತ್ರ ಸಂಪಾದಕೀಯ ತಂಡದಿಂದ ಪ್ರಕಟಿಸಲ್ಪಡುತ್ತದೆ. ಮ್ಯಾಕ್ಸಿಮ್ ಕಶುಲಿನ್ಸ್ಕಿ ಅದರ ಸಂಪಾದಕರು.

ಚೀನಾದ ಅತ್ಯಂತ ದೊಡ್ಡ ಖಾಸಗಿ ವಿವಿಧ ಕಂಪನಿಗಳ ಸಮೂಹಗಳಲ್ಲಿ ಒಂದಾದ, ಫಾಸುನ್ ಗುಂಪಿನ ಸದಸ್ಯ, ಫಾಸುನ್ ಮೀಡಿಯಾ ಜೊತೆ ಪಾಲುದಾರಿಕೆಯಲ್ಲಿ ಫೋರ್ಬ್ಸ್ ಚೀನಾ ಪ್ರಕಾಶಿಸಲ್ಪಡುತ್ತದೆ. ಫೋರ್ಬ್ಸ್ ಚೀನಾ ೧೫೮,೦೦೦ ಪ್ರಸಾರಣೆಯ ಸಹಿತ ಪ್ರತಿ ತಿಂಗಳೂ ಪ್ರಕಟಣೆಗೊಳ್ಳುತ್ತದೆ ಮತ್ತು ಜೋಹ್ವು ಜಿಯಾಂಗೊಂಗ್ ಅದರ ಸಂಪಾದಕರು. ಮೊದಲ ಸಂಚಿಕೆ ಮಾರ್ಚ್ ೨೦೦೩ ರಲ್ಲಿ ಪ್ರಕಾಶಗೊಂಡಿತು.

ಹೀಬ್ರೂ-ಭಾಷೆಯ ಆವೃತ್ತಿಯಾದ ಫೋರ್ಬ್ಸ್ ಇಸ್ರೇಲ್ SBC ಗುಂಪಿನ ಜೊತೆ ಮೇ ೨೦೦೪ ರಲ್ಲಿ ಪ್ರಾರಂಭಿಸಲ್ಪಟ್ಟಿತು. ೨೫,೦೦೦ ರ ಸಂಖ್ಯೆಯ ಪ್ರಸಾರಣೆಯನ್ನು ಹೊಂದಿದ್ದು ಇಸ್ರೇಲ್ ನಲ್ಲಿ ಹಂಚಲ್ಪಡುವ ಪ್ರದೇಶಿಕ ವ್ಯಾಪಾರದ ಸಮಾಜದ ಬಗ್ಗೆ ವಿಶ್ಲೇಷಣಕಾರರು ಮತ್ತು ಸ್ಥಳೀಯ ಆರ್ಥಿಕ ಬರಹಗಾರರಿಂದ ಲೇಖನಗಳನ್ನು ಸಂಚಿಕೆಯ ಸಂಪಾದಕೀಯ ವಿಷಯವು ಒಳಗೊಂಡಿರುತ್ತವೆ. ಅತ್ಯಂತ ಶ್ರೀಮಂತ ಇಸ್ರೇಲಿಗಳ ಶ್ರೇಣಿ ಹಾಗೂ ಇಸ್ರೇಲಿನ ಅತ್ಯಂತ ದೊಡ್ಡ ಸಂಸ್ಥೆಗಳನ್ನು ಒಳಗೊಂಡಂತೆ, ಪ್ರಾಂತೀಯ ಸಮೀಕ್ಷೆಗಳ ಸಹಿತ, ಫೋರ್ಬ್ಸ್ ನ ವಾರ್ಷಿಕ ಯಾದಿಗಳೂ ಸಹ ಪ್ರಕಾಶನದಲ್ಲಿರುತ್ತವೆ. ಬೋಜ್ ಬಿನ್-ನುನ್ ಅದರ ಸಂಪಾದಕರು.

ಎಕ್ಸೆಲ್ ಸ್ಪ್ರಿಂಜರ್ ವೆರ್ಲಾಗ್ ಎಜಿ ಎಂಬ ಜರ್ಮನ್ ಸಂಸ್ಥೆಯ ಒಂದು ಘಟಕ, ಎಕ್ಸೆಲ್ ಸ್ಪ್ರಿಂಜರ್ ಪೋಲಸ್ಕ ಜೊತೆ ಒಂದು ಒಪ್ಪಂದದಂತೆ ಡಿಸೆಂಬರ್ ೨೦೦೪ ರಲ್ಲಿ ಫೋರ್ಬ್ಸ್ ಪೋಲೆಂಡ್ ಆರಂಭವಾಯಿತು. ಫೋರ್ಬ್ಸ್ ಪೋಲೆಂಡ್ ೪೨,೦೦೦ ಸಂಖ್ಯೆಯ ಪ್ರಸಾರವನ್ನು ಹೊಂದಿದೆ. ಅದು ಫೋರ್ಬ್ಸ್ ಯು ಎಸ್ ಆವೃತ್ತಿಯಂತೆ ರೂಪಿಸಲ್ಪಟ್ಟಿದೆ, ಆದರೆ ಪೋಲಿಶ್ ಆರ್ಥಿಕ ವಿಷಯಗಳು ಹಾಗೂ ಕೌಶಲ್ಯಗಳು, ಜೀವನ ಶೈಲಿ ಮತ್ತು ಅಂಕಣಗಳಂತಹ ವಿಶಿಷ್ಟ ವಿಭಾಗಗಳನ್ನು ಕೇಂದ್ರಿಕರಿಸುತ್ತದೆ. ಕಾಝಿಮಿಯರ್ಝ್ ಕೃಪ ಇದರ ಸಂಪಾದಕರು.

ಟರ್ಕಿಯಲ್ಲಿ, ಕಲಿಕ್ ಹೋಲ್ಡಿಂಗ್ ಎ.ಎಸ್., ನ ಒಂದು ವಿಭಾಗ, ಟುರ್ಕುವಾಜ್ ಗೆಜೆಟೆ ಡೆರ್ಗಿ ಬಾಸಿಮ್ ಅನೋನಿಮ್ ಸಿರ್ಕೆಟಿ ಜೊತೆ ಸಹಕಾರದಿಂದ, ಅಕ್ಟೋಬರ್ ೨೦೦೫ ರಲ್ಲಿ ಫೋರ್ಬ್ಸ್ ಟರ್ಕಿ ಪ್ರಾರಂಭಿಸಲ್ಪಟ್ಟಿತು. ಒಂದು ಸ್ವತಂತ್ರ ಸಂಪಾದಕೀಯ ತಂಡದಿಂದ ತಯಾರಿಸಲ್ಪಟ್ಟು, ಈ ಸಂಚಿಕೆಯು ೧೭,೦೦೦ ಸಂಖ್ಯೆಯ ಪ್ರಸಾರವನ್ನು ಹೊಂದಿದೆ ಮತ್ತು ರಾಷ್ಟ್ರದ ಪ್ರಮುಖ ಪ್ರಾಂತೀಯ ನಗರಗಳಲ್ಲಿ ಹಂಚಲ್ಪಡುತ್ತದೆ. ಬರ್ಕಕ್ ಗುವೆನ್ ಇದರ ಸಂಪಾದಕರು.

ಕ್ರೋಷಿಯಾದಲ್ಲಿ ಯುರೋಪಾಪ್ರೆಸ್ ಹೋಲ್ಡಿಂಗ್ ನ ಜೊತೆ ಪಾಲುಗಾರಿಕೆಯಲ್ಲಿ, ನವೆಂಬರ್ ೨೦೦೮ ರಲ್ಲಿ ಫೋರ್ಬ್ಸ್ ಕ್ರೋಷಿಯಾ ಆರಂಭವಾಯಿತು. ಕ್ರೋಷಿಯಾದಲ್ಲಿ ಒಂದು ಸ್ವಾಯತ್ತ ಸಂಪಾದಕೀಯ ತಂಡದಿಂದ ತಯಾರಾಗುವ ಈ ನಿಯತಕಾಲಿಕೆ ಫೋರ್ಬ್ಸ್ ಯು ಎಸ್ ಆವೃತ್ತಿಯ ಆಧಾರದ ಮೇಲೆ ವಿಷಯಗಳನ್ನು ಅಲ್ಲದೆ, ಜೊತೆಗೆ ಸ್ಥಳೀಯ ಕ್ರೋಷಿಯಾದ ವ್ಯವಹಾರದ ವಾರ್ತೆಗಳು ಹಾಗೂ ವಿಮರ್ಶೆಗಳನ್ನು ಹೊಂದಿರುತ್ತದೆ. ಕ್ರೋಷಿಯಾದ ಪ್ರಮುಖ ನಗರಗಳಲ್ಲಿ ಮೂಲ ಮುದ್ರಣದ ೨೪,೦೦೦ ಸಂಖ್ಯೆಯ ಪ್ರತಿಗಳನ್ನು ಅದು ಹಂಚಿತ್ತು. ಸರ್ಬಿಯಾ, ಬೋಸ್ನಿಯಾ-ಹರ್ಜೆಗೊವಿನಾ ಮತ್ತು ಮೊಂಟೆನೆಗ್ರೊ ಅಲ್ಲದೆ ಕ್ರೋಷಿಯಾದಲ್ಲಿ ನಂತರ ಪತ್ರಿಕೆಯನ್ನು ಪ್ರಕಾಶಗೊಳಿಸುವ ಯೋಜನೆಗಳನ್ನು ಯುರೋಪಾಪ್ರೆಸ್ ಒಪ್ಪಂದವು ಒಳಗೊಂಡಿದೆ. ವಿಕ್ಟರ್ ವ್ರೆಸ್ನಿಕ್ ಅದರ ಸಂಪಾದಕರು.

ಅಡೆವರುಲ್ ಹೋಲ್ಡಿಂಗ್ ಮಾಧ್ಯಮದ ಗುಂಪಿನ ಜೊತೆ ಸಹಭಾಗಿತ್ವದಲ್ಲಿ ಪ್ರಕಟಿಸಲ್ಪಡುವ ಫೋರ್ಬ್ಸ್ ರೊಮೇನಿಯಾ ಮಾರ್ಚ್ ೨೦೦೯ ರಲ್ಲಿ ಪ್ರಾರಂಭವಾಯಿತು. ೫೦,೦೦೦ ಮೂಲ ಪ್ರಸಾರದ ಜೊತೆ, ಅದರ ಸಾರಾಂಶಗಳು ಶೇಕಡಾ ೬೦ ರಷ್ಟು ರೊಮೇನಿಯಾದ ವ್ಯವಹಾರ, ವಾರ್ತೆಗಳು, ವಿಮರ್ಶೆ ಹಾಗೂ ವೈಶಿಷ್ಟ್ಯಗಳು ಮತ್ತು ಶೇಕಡ ೪೦ ರಷ್ಟು ಫೋರ್ಬ್ಸ್ ಯು ಎಸ್ ಆವೃತ್ತಿಯಿಂದ ಸಂಪಾದಕೀಯವನ್ನು ಹೊಂದಿರುತ್ತದೆ. ಆಡ್ರಿಯಾನ ಹಾಲ್ಪರ್ಟ್ ಇದರ ಸಂಪಾದಕರು.

ಇಂಡಿಯಾದ ಪ್ರಮುಖ ಮಾಧ್ಯಮದ ಸಮೂಹ ಸಂಸ್ಥೆಯಾದ, ನೆಟ್ವರ್ಕ್ ೧೮ ರ ಸಹಭಾಗಿತ್ವದಲ್ಲಿ, ೨೦೦೯ ಮೇ ೨೧ ರಂದು, ಮುಂಬಯಿಯಲ್ಲಿ, ಫೋರ್ಬ್ಸ್ ಇಂಡಿಯಾ ಆರಂಭಿಸಲ್ಪಟ್ಟಿತು. ಎರಡು ವಾರಕ್ಕೊಮ್ಮೆ ಪ್ರಕಟಿಸಲ್ಪಡುವ ಪತ್ರಿಕೆಯಲ್ಲಿ ಭಾರತೀಯ ಮಾರುಕಟ್ಟೆಯಿಂದ ವಿಮರ್ಶೆ ಮತ್ತು ಸ್ಥಳೀಯ ವ್ಯವಹಾರ ವಾರ್ತೆಗಳ ಸಹಿತ ಫೋರ್ಬ್ಸ್ ಯು ಎಸ್ ಆವೃತ್ತಿಯಿಂದ ಸಾರಾಂಶವನ್ನು ಹೊಂದಿರುತ್ತದೆ. ಇಂದ್ರಜಿತ್ ಗುಪ್ತ ಅದರ ಸಂಪಾದಕರು.

ಲಾಟ್ವಿಯಾದಲ್ಲಿ, ಒಂದು ಅಂತರಾಷ್ಟ್ರೀಯ ಪ್ರಕಾಶನಾ ತಂಡ, SK ಗ್ರೂಪ್ ನ ಪಾಲುದಾರಿಕೆಯಲ್ಲಿ ಮೇ ೨೦೧೦ ರಲ್ಲಿ ಫೋರ್ಬ್ಸ್ ಲಾಟ್ವಿಯಾ ಪ್ರಾರಂಭಿಸಲ್ಪಟ್ಟಿತು. ಈ ನಿಯತಕಾಲಿಕೆಯು ಮಾಸಿಕವಾಗಿ ಪ್ರಕಟಿಸಲ್ಪಡುವುದು ಹಾಗೂ ೨೦,೦೦೦ ಮೂಲ ಪ್ರಸಾರಣೆಯನ್ನು ಹೊಂದಿದೆ. ರೀಗಾದಲ್ಲಿ ಇದರ ಪ್ರಾರಂಭವನ್ನು ಮಾಡಲಾಯಿತು.

೨೦೧೦ ರ ಮಧ್ಯ ಚಳಿಗಾಲದಲ್ಲಿ ಫೋರ್ಬ್ಸ್ ಇಂಡೋನೇಷ್ಯಾ ಪ್ರಾರಂಭಿಸುವ ಯೋಜನೆಯಿದೆ. PT ವಾಹನ ಮೀಡಿಯಾತಮ ಗುಂಪಿನ ಮಾಧ್ಯಮದ ಸಹಭಾಗಿತ್ವದಲ್ಲಿ ಈ ಸಂಚಿಕೆಯು ಪ್ರಕಾಶಿಸಲ್ಪಡುವುದು.

ಇತರೆ ವಿಭಾಗಗಳು

ಫೋರ್ಬ್ಸ್ ಸ್ಪೆಷಲ್ ಸಿಚುಯೇಷನ್ ಸರ್ವೆ, ದಿ ಫೋರ್ಬ್ಸ್ ಗ್ರೋಥ್ ಇನ್ವೆಸ್ಟರ್ ಮತ್ತು ಫೋರ್ಬ್ಸ್ ಸ್ಟಾಕ್ ಮಾರ್ಕೆಟ್ ಕೋರ್ಸ್ ಗಳ ಪ್ರಕಟಣೆಯು ಫೋರ್ಬ್ಸ್ ಇನ್ವೆಸ್ಟರ್ ಅಡ್ವೈಸರಿ ಇಸ್ಟಿಟ್ಯೂಟ್ ನ ಜವಾಬ್ದಾರಿಯಾಗಿದೆ (FIAI). ಫೋರ್ಬ್ಸ್ ಸ್ಪೆಷಲ್ ಸಿಚುಯೇಷನ್ ಸರ್ವೆ ೧೯೫೪ ರಲ್ಲಿ ಮೊದಲಬಾರಿಗೆ ಪ್ರಕಟವಾಯಿತು. ಅದು ಪ್ರತಿ ತಿಂಗಳಿಗೊಮ್ಮೆ ಪ್ರಕಟವಾಗುತ್ತಿದ್ದು ಸಾರ್ವಜನಿಕವಾಗಿ ವ್ಯವಹಾರದ ಸಂಸ್ಥೆಯೊಂದರ ಮೇಲೆ ಒಂದು ವಿವರವಾದ ಸಂಶೋಧನೆಯ ವರದಿಯನ್ನು ಹೊಂದಿರುತ್ತದೆ. ಫೋರ್ಬ್ಸ್ ಗ್ರೋಥ್ ಇನ್ವೆಸ್ಟರ್ ೨೦೦೦ ದಲ್ಲಿ ಸ್ಥಾಪಿಸಲ್ಪಟ್ಟು, ಇದೂ ಸಹ ತಿಂಗಳಿಗೊಮ್ಮೆ ಪ್ರಕಟಣೆಗೊಳ್ಳುತ್ತದೆ. ಅದು ಎಂಟು ಪ್ರಮುಖ ಕ್ಷೇತ್ರಗಳಿಂದ ೫೦ ಸ್ಟಾಕ್ ಗಳ ಯಾದಿಯನ್ನು ಶಿಫಾರಸ್ಸು ಮಾಡಿ ನೋಡಿಕೊಳ್ಳುತ್ತದೆ. ದಿ ಫೋರ್ಬ್ಸ್ ಸ್ಟಾಕ್ ಮಾರ್ಕೆಟ್ ಕೋರ್ಸ್, ೧೯೪೮ ರಲ್ಲಿ ಮೊದಲ ಬಾರಿಗೆ ಪ್ರಕಟಿಸಲ್ಪಟ್ಟಿತು, ಇದು ಹಣ ಹೂಡಿಕೆದಾರರಿಗೆ ಸ್ಟಾಕ್ ಗಳು, ಬಾಂಡ್ ಗಳು, ಮ್ಯೂಚುಯಲ್ ಫಂಡ್ ಗಳು, ಹಾಗೂ ಬೇರೆ ಬೇರೆ ಹಣ ಹೂಡುವ ಮಾರ್ಗಗಳ ಸಹಿತ ಬಂಡವಾಳವನ್ನು ಹೇಗೆ ವೃದ್ಧಿ8ಸಿಕೊಳ್ಳಬೇಕೆಂಬ ಸಲಹೆ ನೀಡುತ್ತದೆ. ವ್ಯಾಲೇಸ್ ಫೋರ್ಬ್ಸ್ ರು FIAI ನ ಅಧ್ಯಕ್ಷರು, ಹಾಗೂ ವಾಹನ್ ಜಾನ್ಜಿಜಿಯನ್ ಅದರ ಉಪಾಧ್ಯಕ್ಷರು/ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಫೋರ್ಬ್ಸ್ ನ ಮುಖ್ಯ ಹಣಹೂಡಿಕೆಯ ಕೌಶಲ್ಯಗಾರರು.

ಫೋರ್ಬ್ಸ್ ನ್ಯೂಸ್ ಲೆಟರ್ ಗ್ರೂಪ್ (FNG) ಈ ಕೆಳಗಿನ ವಾರ್ತಾಪತ್ರಗಳನ್ನು ಪ್ರಕಾಶಿಸಿ, ಸಂಪಾದಿಸಿ ಪ್ರಕಟಣೆಗೆ ಸಿದ್ಧಪಡಿಸುತ್ತದೆ: ಫೋರ್ಬ್ಸ್ ಗ್ರೋಥ್ ಇನ್ವೆಸ್ಟರ್, ಫೋರ್ಬ್ಸ್/ಲೆಹ್ಮಾನ್ ಇನ್ ಕಮ್ ಸೆಕ್ಯುರಿಟೀಸ್ ಇನ್ವೆಸ್ಟರ್, ಫೋರ್ಬ್ಸ್ ETF ಅಡ್ವೈಸರ್, ಫೋರ್ಬ್ಸ್/ವುಲ್ಫ್ ಎಮರ್ಜಿಂಗ್ ಟೆಕ್ ರಿಪೋರ್ಟ್, ಫೋರ್ಬ್ಸ್/ಸ್ಲಾಟಿನ್ ರಿಯಲ್ ಎಸ್ಟೇಟ್ ರಿಪೋರ್ಟ್, ಫೋರ್ಬ್ಸ್ ಇಂಟರ್ನಾಷನಲ್ ಇನ್ವೆಸ್ಟಮೆಂಟ್ ರಿಪೋರ್ಟ್, ಫೋರ್ಬ್ಸ್ ಟ್ಯಾಕ್ಸ್ ಅಡ್ವಾಂಟೇಜ್ ಇನ್ವೆಸ್ಟರ್, ಫೋರ್ಬ್ಸ್ ವೈರ್ ಲೆಸ್ ಸ್ಟಾಕ್ ವಾಚ್, ಹಾಗೂ ದಿ ಪ್ರುಡೆಂಟ್ ಸ್ಪೆಕ್ಯುಲೇಟರ್. FNG ಯು ಐದು ಸಾಪ್ತಾಹಿಕ ಇ-ಪತ್ರಗಳನ್ನು ತಯಾರಿಸುತ್ತದೆ ಹಾಗೂ ೩೫ ಕ್ಕಿಂತಲೂ ಹೆಚ್ಚು ಹೊರಗಡೆಯ ವಾರ್ತಾಪತ್ರಗಳ (www.newsletters.forbes.com) ಜೊತೆ ಮಾರುಕಟ್ಟೆ, ವ್ಯವಹಾರ, ವಿಷಯಗಳು ಹಾಗೂ ಹೆಂಚಿಕೆಯ ಸಂಬಂಧಗಳನ್ನು ನಡೆಸಿಕೊಂಡು ಬರುತ್ತದೆ. FNG ಯು ಫೋರ್ಬ್ಸ್.ಕಾಂ ನ ಪರ್ಸನಲ್ ಫೈನಾನ್ಸ್ ಚಾನೆಲ್ (www.forbes.com/finance)ನಲ್ಲಿ ಕಂಡುಬರುವ ಹಣ ಹೂಡಿಕೆಯ ಸಂಗತಿಗಳಿಗಾಗಿ ಜವಾಬ್ದಾರನಾಗಿದೆ. FNG ಯು ಅನೇಕ ಕೇವಲ ಆನ್ ಲೈನ್ ನಲ್ಲಿ ಮಾತ್ರ ಹಣಹೂಡಿಕೆಯ ಐಕಾನ್ಫರೆನ್ಸ್ ಗಳನ್ನು ನಡೆಸುತ್ತದೆ, ಇವು ವೈಯಕ್ತಿಕವಾದ ಹಣ ಹೂಡಿಕೆಯಲ್ಲಿ ಅತ್ಯಂತ ಚುರುಕಾದ ಮನಸ್ಸುಗಳ ಜೊತೆ ತನ್ನ ಓದುಗರನ್ನು ಜೊತೆಗೂಡಿಸಿ ಪರಸ್ಪರವಾಗಿ ಕಾರ್ಯಮಾಡುವ ವ್ಯಾಪಾರದ ಪ್ರದರ್ಶನಗಳನ್ನು ಸಹ ನಡೆಸುತ್ತದೆ. ಮಾಥ್ಯೂ ಶ್ಕಿಫ್ರಿನ್ ಇದರ ಉಪಾಧ್ಯಕ್ಷರು/ಸಂಪಾದಕರು.

ಫೋರ್ಬ್ಸ್ ದೂರದರ್ಶನ : ಸಂಸ್ಥೆಯು ತನ್ನ ಮಾಧ್ಯಮದ ವೇದಿಕೆಗಳನ್ನು ವಿಸ್ತರಿಸಲು, ಫಾಕ್ಸ್ ನ್ಯೂಸ್ ಚಾನೆಲ್ ಜೊತೆ ಫೋರ್ಬ್ಸ್ ಮೇ ೨೦೦೧ ರಲ್ಲಿ ಸಹ ವ್ಯಾಪಾರದ ಮುದ್ರೆಯ "ಫೋರ್ಬ್ಸ್ ಆನ್ ಫಾಕ್ಸ್" ಆರಂಭಿಸಿತು. ಫೋರ್ಬ್ಸ್ ನ ಸಂಪಾದಕರು ಮತ್ತು ಬರಹಗಾರರು ಸರತಿಯಂತೆ ತಕ್ಷಣದ ವ್ಯವಹಾರದ ವಾರ್ತೆ ಹಾಗೂ ಮಾರುಕಟ್ಟೆಗಳ ಮೇಲೆ ತಮ್ಮ ಅಪೂರ್ವ, ವಿರುದ್ಧವಾದ ಯಥಾದೃಶ್ಯರೂಪಣವನ್ನು ಕೊಡುತ್ತಾರೆ. ಪ್ರತಿ ಶನಿವಾರ ಬೆಳಿಗ್ಗೆ ಈ ಪ್ರದರ್ಶನವು ಕೇಬಲ್ ವಾಹಿನಿಯ ಮೇಲೆ ಪ್ರಸಾರವಾಗುತ್ತದೆ. ೨೦೦೭ ರಲ್ಲಿ, ಫೋರ್ಬ್ಸ್ E! ಜೊತೆ ಸಂಯೋಗದಲ್ಲಿ ವಿಶೇಷ ಕಾರ್ಯಕ್ರಮ ನಡೆಸಲು ವರ್ತಮಾನದ ಉತ್ಪಾದನೆಯ ಸಹ ಭಾಗಿತ್ವವನ್ನು ಶುರುಮಾಡಿತು ಎಂಟರ್ ಟೈನ್ಮಂಟ್ ಟೆಲಿವಿಷನ್, ಇದು ಇಂದಿಗೆ ೧೩ ಫೋರ್ಬ್ಸ್ E! ವಿಶೇಷಗಳಲ್ಲಿ ಪರಿಣಾಮಬೀರಿದೆ. ೨೦೦೮ ರ ಮಧ್ಯ ಭಾಗದಲ್ಲಿ, ಕ್ರಮಬದ್ಧವಾದ ಪಂದ್ಯಗಳ ವ್ಯವಹಾರದ ವಿಡಿಯೊ ಗಳನ್ನು ತಯಾರಿಸಲು YES ನೆಟ್ವರ್ಕ್ ಜೊತೆ ಜಂಟಿ ಸಹ ಭಾಗಿತ್ವಕ್ಕೆ ಸಂಸ್ಥೆಯು ಪ್ರವೇಶಿಸಿತು. ಜನವರಿ ೨೦೦೯ ರಲ್ಲಿ ಪ್ರಥಮವಾಗಿ ತೋರಿಸಲ್ಪಟ್ಟು ಒಂದು ಮಾಸಿಕ ಅರ್ಧ ಘಂಟೆಯ ಪ್ರದರ್ಶನವೂ ಅಲ್ಲದೆ, ಫೋರ್ಬ್ಸ್ ನ ರಾಷ್ಟ್ರೀಯ ಸಂಪಾದಕ ಮೈಖೇಲ್ ಒಜಾನಿಯನ್ ನಿಂದ ಕಲಾಪ ನಿರ್ವಹಣೆಗೊಂಡು, ಯಾಂಕೀಗಳ ಪೂರ್ವ-ಪಂದ್ಯದ ಋತುಮಾನದ ಕಾರ್ಯಕ್ರಮದ ಅವಧಿಯಲ್ಲಿ ಕ್ರಮಬದ್ಧವಾದ ಪಂದ್ಯಗಳ ವ್ಯವಹಾರದ ಅಪ್ ಡೇಟ್ ಗಳನ್ನು ಇವು ಒಳಗೊಂಡಿರುತ್ತವೆ. ದಿ ಟ್ರಾವಲ್ ಚಾನೆಲ್ ಜೊತೆ ಕಾರ್ಯಕ್ರಮಗಳಿಗಾಗಿ ಉತ್ಪಾದನೆಯ ಪಾಲುದಾರಿಕೆಗೂ ಸಹ ಫೋರ್ಬ್ಸ್ ಪ್ರವೇಶಿಸಿತು, ಇದು ಡಿಸೆಂಬರ್ ೨೦೦೮ ರಲ್ಲಿ ಮೊದಲ ಪ್ರದರ್ಶನವನ್ನು ಪ್ರಧಾನವಾಗಿ ತೋರಿಸಿತು.

ನ್ಯೂಯಾರ್ಕ್ ನಗರದಲ್ಲಿನ ದಿ ಫೋರ್ಬ್ಸ್ ಗ್ಯಾಲರೀಸ್; ಕ್ಯಾಲಿಫೋರ್ನಿಯಾ, ಬರ್ಲಿನ್ ಗೇಮ್ ನಲ್ಲಿನ ದಿ ಫೋರ್ಬ್ಸ್ ಗ್ಯಾಲರೀಸ್; ಹಾಗೂ ಫ್ರಾನ್ಸ್ ನಾರ್ಮಂಡಿಯಲ್ಲಿನ ಫೋರ್ಬ್ಸ್ ಚಟೆವ್ ಡಿ ಬಲ್ಲೆರಾಯ್ ಗೆ ಹೊಂದಿಕೊಂಡಿರುವ ಮುಸ್ಸೀ ಡೆಸ್ ಬಲ್ಲೊನ್ಸ್ ಒಳಗೊಂಡಂತೆ ಅನೇಕ ಸ್ಥಳಗಳಲ್ಲಿ ಫೋರ್ಬ್ಸ್ ಸಂಗ್ರಹವು ಸಾರ್ವಜನಿಕವಾಗಿ ತೆರೆಯಲ್ಪಟ್ಟಿದೆ. ಇಂಗ್ಲೆಂಡಿನ, ಲಂಡನ್ ನಲ್ಲಿನ ಓಲ್ಡ್ ಬ್ಯಾಟರ್ ಸೀ ಹೌಸ್ ಮತ್ತು ದಿ ಹೈಲ್ಯಾಂಡರ್ ಎಂಬ ಫೋರ್ಬ್ಸ್ ನ ಕ್ರೀಡಾ ನೌಕೆಯ ಮೇಲಿರುವುದನ್ನೂ ಒಳಗೊಂಡಂತೆ, ಸಾರ್ವಜನಿಕರಿಗೆ ಮುಕ್ತವಾಗಿಲ್ಲದ ಶೇಖರಣೆಯ ಇತರೆ ಭಾಗಗಳು ವಿಶ್ವದಾದ್ಯಂತ ಫೋರ್ಬ್ಸ್ ನ ವ್ಯವಹಾರ ಸ್ಥಳಗಳಲ್ಲಿ ಇಡಲಾಗಿವೆ. ೮೦೦೦ ಚದುರ ಅಡಿಗಳ ಪ್ರದರ್ಶನದ ಜಾಗದ ಸಹಿತ ಫೆಬ್ರುವರಿ ೧೯೮೫ ರಲ್ಲಿ ಸಾರ್ವಜನಿಕರಿಗೆ ದಿ NYC ಗ್ಯಾಲರೀಸ್ ತೆರೆಯಲ್ಪಟ್ಟಿತು, ಹಾಗೂ ಅನೇಕ ಸಾವಿರ ಅಮೇರಿಕಾದ ಅಧ್ಯಕ್ಷೀಯ ಹಸ್ತಪ್ರತಿಗಳು ಮತ್ತು ಸಂಬಂಧಿಸಿದ ಐತಿಹಾಸಿಕ ದಾಖಲೆಗಳು, ಆಟದ ದೋಣಿಗಳು, ಮೊನೊಪಲಿ ಆಟಗಳು, ಆಟಿಗೆಯ ಸೈನಿಕರು, ಬಹುಮಾನಗಳು ಮತ್ತು ವರ್ಣ ಚಿತ್ರಗಳ ಒಂದು ಸಂಗ್ರಹವನ್ನು ಪ್ರದರ್ಶಿಸಿತು.

ಗಮನಾರ್ಹ ಘಟನೆಗಳು[ಬದಲಾಯಿಸಿ]

ಫಿಡೆಲ್ ಕ್ಯಾಸ್ಟ್ರೋ ವಿವಾದ[ಬದಲಾಯಿಸಿ]

ಸುಮಾರು US$೫೫೦ ಮಿಲಿಯನ್ ದಷ್ಟು ಅಂದಾಜು ಮಾಡಿದ ನಿವ್ವಳ ಬೆಲೆಯ ಸಹಿತ, ಫಿಡೆಲ್ ಕ್ಯಾಸ್ಟ್ರೋ ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರೆಂದು ೨೦೦೫ ರ ರಲ್ಲಿ, ಫೋರ್ಬ್ಸ್ ಪಟ್ಟಿ ಮಾಡಿತು. ೨೦೦೬ ರ ಲೇಖನದಲ್ಲಿ, "ಫಾರ್ಚೂನ್ಸ್ ಆಫ್ ಕಿಂಗ್ಸ್, ಕ್ವೀನ್ಸ್, ಮತ್ತು ಡಿಕ್ಟೇಟರ್ಸ್", ನಲ್ಲಿ ಫೋರ್ಬ್ಸ್ ತಮ್ಮ ಅಂದಾಜನ್ನು US$೯೦೦ ಮಿಲಿಯನ್ ಗೆ ಏರಿಸಿತು.[೩] ಸರ್ಕಾರಿ ಮುಖಂಡರಿಗೆ ನಿವ್ವಳ ಬೆಲೆಯನ್ನು ಲೆಕ್ಕಹಾಕುವುದು "ವಿಜ್ಞಾನಕ್ಕಿಂತ ಕಲೆಯೇ ಹೆಚ್ಚು" ಎಂದು ಆ ಲೇಖನವು ತಿಳಿಸಿತು, ಮತ್ತು ಕ್ಯಾಸ್ಟ್ರೋ ವಿಷಯದಲ್ಲಿ, ಅನೇಕ ರಾಜ್ಯದ ವಶದಲ್ಲಿದ್ದ ಸಂಸ್ಥೆಗಳಿಗೆ ಲೇಖಕರು ಬಹಿರಂಗಪಡಿಸದ ಅಪಾರ ಹಣದ ಪದ್ಧತಿಯನ್ನು ಉಪಯೋಗಿಸಿದ್ದಾರೆಂದು ತೋರಿಸಿದ್ದಾರೆ, ಹಾಗೂ ಆ ಲಾಭದ ಹರಿವಿನ ಒಂದು ಭಾಗವು ಕ್ಯಾಸ್ಟ್ರೋಗೆ ಹೋಯಿತೆಂದು ಊಹಿಸಿದ್ದಾರೆ.

ತಾವು US$೧ ಕ್ಕಿಂತಲೂ ಕಡಿಮೆ ನಿವ್ವಳ ಆಸ್ತಿಯನ್ನು ಹೊಂದಿರುವುದಾಗಿ ಕ್ಯಾಸ್ಟ್ರೋ ಪ್ರತಿಕ್ರಿಯಿಸಿದರು, ಮತ್ತು ತಾವು ಸಮುದ್ರದಾಚೆಯ ಖಾತೆಗಳಲ್ಲಿ ಹಣ ಹೊಂದಿರುವುದನ್ನು ಯಾರಾದರೂ ಸಮರ್ಥಿಸಲು ಸವಾಲೊಡ್ಡಿದರು.[೪]

ನ್ಯೂಯಾರ್ಕ್ ವಿಶ್ವವಿದ್ಯಾಲಯಕ್ಕೆ ಕೇಂದ್ರಕಾರ್ಯಸ್ಥಳದ ಮಾರಾಟ[ಬದಲಾಯಿಸಿ]

ಜನವರಿ ೨೦೧೦ ರಲ್ಲಿ, ನ್ಯೂಯಾರ್ಕ್ ವಿಶ್ವವಿದ್ಯಾಲಯಕ್ಕೆ, ಮನ್ ಹ್ಯಾಟನ್ ನಲ್ಲಿನ, ಫಿಪ್ತ್ ಅವೆನ್ಯೂನಲ್ಲಿರುವ ತಮ್ಮ ಕೇಂದ್ರಕಾರ್ಯಸ್ಥಳದ ಕಟ್ಟಡವನ್ನು ಮಾರಲು ಫೋರ್ಬ್ಸ್ ಒಂದು ಒಪ್ಪಂದಕ್ಕೆ ಬಂದಿತು. ವ್ಯಾಪಾರದ ಕರಡನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಲ್ಪಡಲಿಲ್ಲ, ಆದರೆ ಫೋರ್ಬ್ಸ್ ಐದು ವರ್ಷದ ಮಾರಾಟದ ಕರಾರು ವಾಪಸ್ಸಿನ ವ್ಯವಸ್ಥೆಯ ಕೆಳಗೆ ಅದೇ ಜಾಗದಲ್ಲಿ ವಾಸಿಸುವುದನ್ನು ಮುಂದುವರಿಸುವುದು.[೫]

ಯಾದಿಗಳು[ಬದಲಾಯಿಸಿ]

ಸಂಪತ್ತು:
• ವಿಶ್ವದ ಬಿಲೇನಿಯರ್ ಗಳು [೧]
• ೪೦೦ ಅತ್ಯಂತ ಶ್ರೀಮಂತ ಅಮೇರಿಕನ್ನರು [೨]
• ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡಿನ ೪೦ ಅತ್ಯಂತ ಶ್ರೀಮಂತರು [೩]
• ಚೀನಾದ ೪೦೦ ಅತ್ಯಂತ ಶ್ರೀಮಂತರು [೪]
• ಟೈವಾನಿನ ೪೦ ಅತ್ಯಂತ ಶ್ರೀಮಂತರು [೫]
• ಹಾಂಗ್ ಕಾಂಗಿನ ೪೦ ಅತ್ಯಂತ ಶ್ರೀಮಂತರು [೬]
• ಭಾರತದ ೧೦೦ ಅತ್ಯಂತ ಶ್ರೀಮಂತರು [೭]
• ಜಪಾನಿನ ೪೦ ಅತ್ಯಂತ ಶ್ರೀಮಂತರು [೮]
• ಕೊರಿಯಾದ ೪೦ ಅತ್ಯಂತ ಶ್ರೀಮಂತರು [೯]
• ಮಲೇಷಿಯಾದ ೪೦ ಅತ್ಯಂತ ಶ್ರೀಮಂತರು [೧೦]
• ಫಿಲಿಫೈನ್ಸ್ ನ ೪೦ ಅತ್ಯಂತ ಶ್ರೀಮಂತರು [೧೧]
• ಸಿಂಗಾಪೂರ್ ನ ೪೦ ಅತ್ಯಂತ ಶ್ರೀಮಂತರು [೧೨]
• ಇಂಡೋನೇಷ್ಯಾ ದ ೪೦ ಅತ್ಯಂತ ಶ್ರೀಮಂತರು [೧೩]
• ಥೈಲ್ಯಾಂಡಿನ ೪೦ ಅತ್ಯಂತ ಶ್ರೀಮಂತರು [೧೪]
ಕಂಪನಿಗಳು:
• ೨೦೦ ಶ್ರೇಷ್ಠ ಸಣ್ಣ ಕಂಪನಿಗಳು [೧೫]
• ೪೦೦ ಶ್ರೇಷ್ಠ ದೊಡ್ಡ ಕಂಪನಿಗಳು [೧೬]
• ಅಮೇರಿಕಾದ ಅತ್ಯಂತ ದೊಡ್ಡ ಖಾಸಗಿ ಕಂಪನಿಗಳು [೧೭]
• ಒಂದು ಬಿಲಿಯನ್ ಒಳಗಿನ ಏಷ್ಯಾದ ಶ್ರೇಷ್ಠ ಕಂಪನಿಗಳು [೧೮]
• ಏಷ್ಯಾದ ಅತ್ಯುತ್ತಮ ೫೦ ಕಂಪನಿಗಳು [೧೯]
• ಜಾಗತಿಕವಾಗಿ ಎತ್ತರದ ಸಾಧಕರು [೨೦]
• ಫೋರ್ಬ್ಸ್ ರವರ ೨೦೦೦ [೨೧]
• ಟಾಪ್ ಮೈಕ್ರೋ ಫೈನಾನ್ಸ್ ಇನ್ಸ್ಟಿಟ್ಯೂಷನ್ನುಗಳು [೨೨]
ಜನಗಳು:
• ದಿ ಬೆಸ್ಟ್ ಬ್ರೋಕರೇಜ್ ಅನಲಿಸ್ಟ್ ಗಳು [೨೩]
• ೪೮ ಏಷ್ಯಾದ ಆಲ್ಟ್ರುಯಿಸ್ಟ್ ಗಳು [೨೪]
• ದಿ ಸೆಲೆಬ್ರಿಟಿ ೧೦೦ [೨೫]
• ದಿ ಫೋರ್ಬ್ಸ್ ಫಿಕ್ಷನಲ್ ೧೫ [೨೬]
• ವಿಶ್ವದ ಅತ್ಯಂತ ಹೆಚ್ಚು ಶಕ್ತಿಶಾಲಿ ಮಹಿಳೆಯರು [೨೭]
• ಅತ್ಯಂತ ಹೆಚ್ಚು ಹಣಗಳಿಸುವ CEO ಗಳು [೨೮]
• ಅತ್ಯಂತ ಹೆಚ್ಚು ಹಣಗಳಿಸುವ ಮರಣಹೊಂದಿದ ಹೆಸರಾಂತ ವ್ಯಕ್ತಿಗಳು [೨೯]
• ವಿಶ್ವದ ಅತಿ ಹೆಚ್ಚು ಹಣಗಳಿಸುವ ರೂಪದರ್ಶಿಗಳು[೩೦]
ಹಣಕಾಸು ಮತ್ತು ಹೂಡಿಕೆಗಳು
• ೧೦೦ ಅತ್ಯುತ್ತಮ ಮಿಡ್-ಕ್ಯಾಪ್ ಸ್ಟಾಕ್ ಗಳು [೩೧]
• ೨೦೦ ಅತಿ ದೊಡ್ಡ ಯು. ಎಸ್. ನ ಚಾರಿಟಿ ಸಂಸ್ಥೆಗಳು [೩೨]
• ದಿ ಬೆಸ್ಟ್ ಬ್ರೋಕರೇಜ್ ಅನಲಿಸ್ಟ್ ಗಳು [೩೩]
• ಅಂತರಾಷ್ಟ್ರೀಯ ಹಣ ಹೂಡಿಕೆ [೩೪]
• ದಿ ಇನ್ವೆಸ್ಟಮೆಂಟ್ ಗೈಡ್ [೩೫]
• ಮ್ಯೂಚುಯಲ್ ಫಂಡ್ ಗೈಡ್ [೩೬]
ಸ್ಥಳಗಳು
• ಅಮೇರಿಕಾದ ಅತ್ಯುತ್ತಮ ಕಾಲೇಜುಗಳು [೩೭]
• ಶ್ರೇಷ್ಠ ವ್ಯವಹಾರದ ಶಾಲೆಗಳು [೩೮]
• ಏಕಾಂಗಿಯಾಗಿ ವಾಸಿಸುವವರಿಗೆ ಶ್ರೇಷ್ಠ ನಗರಗಳು [೩೯]
• ವ್ಯವಹಾರ ಮಾಡುವುದಕ್ಕೆ ಶ್ರೇಷ್ಠ ರಾಷ್ಟ್ರಗಳು [೪೦]
• ವ್ಯವಹಾರ ಮತ್ತು ವೃತ್ತಿಯ ಅಭಿವೃದ್ದಿಗೆ ಶ್ರೇಷ್ಠ ಸ್ಥಳಗಳು. [೪೧]
• ವ್ಯವಹಾರಕ್ಕಾಗಿ ಶ್ರೇಷ್ಠ ರಾಜ್ಯಗಳು [೪೨]
• ಅತ್ಯಂತ ವೆಚ್ಚದಾಯಕ ಜಿಪ್ ಕೋಡುಗಳು [೪೩]
ಕ್ರೀಡೆಗಳು
• ಬೇಸ್ ಬಾಲ್ ನ ವ್ಯವಹಾರ [೪೪]
• ಅತ್ಯಂತ ಮಹತ್ವಪೂರ್ಣ NASCAR ತಂಡಗಳು [೪೫]
• ಬ್ಯಾಸ್ಕೆಟ್ ಬಾಲ್ ನ ವ್ಯವಹಾರಗಳು [೪೬]
• ಫುಟ್ ಬಾಲ್ ನ ವ್ಯವಹಾರಗಳು [೪೭]
• ಹಾಕಿಯ ವ್ಯವಹಾರಗಳು [೪೮]
• ಅತ್ಯಂತ ಮಹತ್ವಪೂರ್ಣ ಸಾಕರ್ ತಂಡಗಳು [೪೯]
• ಅತಿ ಹೆಚ್ಚು ಗಳಿಸುವ ಟೆನ್ನಿಸ್ ತಾರೆಯರು [೫೦]
ತಾಂತ್ರಿಕತೆ
• ದಿ E-ಗ್ಯಾಂಗ್ [೫೧]
• ಜಾಲದ ಹೆಸರಾಂತ ವ್ಯಕ್ತಿಗಳು 25 [೫೨]
• ೨೫ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಟೆಕ್ ಕಂಪನಿಗಳು [೫೩]
• ಟೆಕ್ ನ ಟಾಪ್ ಡೀಲ್ ಮೇಕರ್ಸ್ [೫೪]
ಶಿಕ್ಷಣ
• ಅಮೇರಿಕಾದ ಶ್ರೇಷ್ಠ ಕಾಲೇಜುಗಳು [೫೫]
• ಶ್ರೇಷ್ಠ ವ್ಯವಹಾರದ ಶಾಲೆಗಳು [೫೬]
• ಅಮೇರಿಕಾದಲ್ಲಿನ ಶ್ರೇಷ್ಠ ಕಾಲೇಜುಗಳ ಕೊಳ್ಳುವಿಕೆ [೫೭]
ಆಹಾರ ಮತ್ತು ಪಾನೀಯ
• ವಿಶ್ವದ ಅತ್ಯಂತ ಹೆಚ್ಚು ದುಬಾರಿಯಾದ ಫಾಸ್ಟ್ ಫುಡ್ [೫೮]
• ಪ್ರಯತ್ನಿಸಲು ಹತ್ತು ಶ್ರೇಷ್ಠವಾದ ಸೋಸದ ವೈನ್ ಗಳು [೫೯]
• ಹತ್ತು ಬೋರ್ಡೆಕ್ಸ್ ಮತ್ತು ಕ್ಯಾಲಿಫೋರ್ನಿಯಾ ರೆಡ್ಸ್ ಹೆಡ್-ಟು-ಹೆಡ್ [೬೦]
• ಭಾರತದ ಅತ್ಯುತ್ತಮ ವೈನ್ ಹಾಟ್ ಸ್ಫಾಟ್ ಗಳು [೬೧]
• ವಿಶ್ವದ ಅತಿ ಶ್ರೇಷ್ಠ ಹೆಸರುಮಾಡಿರುವ ಶಾಂಪೇನ್ ಗಳು [೬೨]
• ಅತಿ ಹೆಚ್ಚು ಗಳಿಸುವ ಹೆಸರಾಂತ ಬಾಣಸಿಗರು [೬೩]
ಆರೋಗ್ಯ
• ನಿಮ್ಮ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಹನ್ನೊಂದು ಮಾರ್ಗಗಳು [೬೪]
• ಅಮೇರಿಕಾದ ಸದೃಢ ನಗರಗಳು [೬೫]
• ವಿಶ್ವದ ಆಹಾರಕ್ರಮದ ಗುಟ್ಟುಗಳು [೬೬]
• ನೀವು ಜ್ಞಾಪಕದಲ್ಲಿಡಬೇಕಾದ ಹತ್ತು ಊಟಗಳು [೬೭]
• ಭೂಮಿಯ ಮೇಲೆ ಅತ್ಯಂತ ಆರೋಗ್ಯದಾಯಕ ಆಹಾರಗಳು [೬೮]
• ಅಮೇರಿಕಾದ ಅತ್ಯಂತ ಮಾಲಿನ್ಯಗೊಂಡ ನಗರಗಳು [೬೯]
ರಿಯಲ್ ಎಸ್ಟೇಟ್
• ಅಮೇರಿಕಾದ ಅತ್ಯಂತ ಜವಾಬ್ದಾರಿಯುತ ನಗರಗಳು [೭೦]
• ವಾಸಿಸಲು ವಿಶ್ವದ ಅತ್ಯಂತ ದುಬಾರಿ ನಗರಗಳು [೭೧]
• ಹೋಗಲು ಅಮೇರಿಕಾದ ೨೫ ಅತ್ಯುತ್ತಮ ಸ್ಥಳಗಳು [೭೨]
• ಅಮೇರಿಕಾದ ಅತಿ ಹೆಚ್ಚು ಜನಸಾಂದ್ರತೆಯಿರುವ ನಗರಗಳು [೭೩]
• ಅಮೇರಿಕಾದ ಅತಿ ವೇಗವಾಗಿ ಇಳಿಮುಖಗೊಂಡಿರುವ ನಗರಗಳು [೭೪]
• ಜೀವನ ನಿರ್ವಹಣೆ ಕಷ್ಟಕರವಾದ ಯು. ಎಸ್. ನ ನಗರಗಳು[೭೫]
• ಅಮೇರಿಕಾದ ಅತಿ ಹೆಚ್ಚು ಬಿಕರಿಯಾಗುತ್ತಿರುವ ವಿಲಾಸಿ ಪ್ರದೇಶಗಳು [೭೬]
• ವಾಸಿಸಲು ವಿಶ್ವದ ಅತ್ಯುತ್ತಮ ೨೦ ಸ್ಥಳಗಳು [೭೭]
• ಉತ್ತಮ ಜೀವನ ನಡೆಸಲು ಅಮೇರಿಕಾದ ೨೫ ಶ್ರೇಷ್ಠ ನಗರಗಳು [೭೮]
• ಅಮೇರಿಕಾದ ಅತಿ ದುಬಾರಿ ಜಿಪ್ ಕೋಡ್ ಗಳು [೭೯]
ಶೈಲಿ
• ವಿಶ್ವದ ಅತ್ಯಂತ ಶೈಲಿಪೂರ್ಣ ನಗರಗಳು [೮೦]
• ವಿಶ್ವದ ಅತ್ಯಂತ ಶಕ್ತಶಾಲಿ ವಿಲಾಸಿ ಬ್ರಾಂಡ್ ಗಳು [೮೧]
• ಕೊಳ್ಳುವಿಕೆಯನ್ನು ಉತ್ತೇಜಿಸುವಂತಹ ಚಾಲಾಕಿತನದ ಮಾರ್ಗಗಳು [೮೨]
• ಹಣಕ್ಕೆ ಸರಿಯಾಗಿ ದೊರಕುವ ಚಳಿಗಾಲದ ಉಡುಪುಗಳು [೮೩]
• ನಿಮ್ಮ ಬಗ್ಗೆ ನಿಮ್ಮ ನಾಯಿ ಏನನ್ನು ಹೇಳುತ್ತದೆ [೮೪]
• ನಂಬಲಸಾಧ್ಯವಾದ ಅತೀ ಕೆಟ್ಟ ಸ್ಪಾ ಉಪಚಾರಗಳು [೮೫]
• ಯು. ಎಸ್. ನ ಅತಿ ಶಕ್ತಿಶಾಲಿ ಫ್ಯಾಶನ್ ನಿಯತಕಾಲಿಕೆಗಳ ಸಂಪಾದಕರು [೮೬]
ಸಂಚಾರ
• ವಿಲಾಸಿ ಡಿಜೈನರ್ ಹೋಟೆಲ್ ಗಳು [೮೭]
• ಕಡೇ ಘಳಿಗೆಯಲ್ಲಿ ಹೋಗುವಂತಹ ಕಡಿಮೆ ಬೆಲೆಯ ತಾಣಗಳು [೮೮]
• ವಿಶ್ವದ ಅತಿ ಹೆಚ್ಚು ಸಂದರ್ಶಿಸಲ್ಪಟ್ಟ ರಾಷ್ಟ್ರಗಳಲ್ಲಿ ಸಂಚಾರಿ ಪದ್ಧತಿಗಳು [೮೯]
• ಮಧ್ಯ ಪೂರ್ವ ರಾಷ್ಟ್ರಗಳಲ್ಲಿ ಹುದುಗಿಹೋಗಿರುವ ಸಂಪತ್ತು [೯೦]
• ವಿಶ್ವದ ೧೦ ಅತ್ಯುತ್ತಮ ವಿಮಾನ ನಿಲ್ದಾಣಗಳು [೯೧]
ವಾಹನಗಳು
• ರಸ್ತೆಯ ಮೇಲೆ ಅತ್ಯಂತ ಶಕ್ತಿಶಾಲಿ ಕಾರ್ ಗಳು [೯೨]
• ವಿಶ್ವದ ಅತ್ಯಂತ ದುಬಾರಿ ಪ್ರಯಾಣ [೯೩]
• ೨೦೦೯ ರ ಅತಿ ಹೆಚ್ಚಿನ ಗುಣಮಟ್ಟದ ಕಾರ್ ಗಳು [೯೪]
• ವಿಶ್ವವನ್ನೇ ಬದಲಾಯಿಸಿದ ಹತ್ತು ಕಾರ್ ಗಳು [೯೫]
• ಅಮೇರಿಕಾದ ಅತಿ ಹೆಚ್ಚಿನ ದರದ ಕಾರ್ ಗಳು [೯೬]
• $100,000 ಒಳಗಿನ 2009 ರ ಅತಿ ವೇಗದ ಕಾರ್ ಗಳು [೯೭]
• ೨೦೦೯ ರ ಅತ್ಯುತ್ತಮ ಕನ್ವರ್ಟಿಬಲ್ ಗಳು [೯೮]
• ಚಿಕ್ಕ ನಗರದ ಚಾಲಕರಿಗೆ ಅತ್ಯುತ್ತಮ ಕಾರ್ ಗಳು [೯೯]
• ಅಮೇರಿಕಾದ ಅತಿ ಹೆಚ್ಚು ಜನಪ್ರಿಯ ಕಾರಿನ ಬಣ್ಣಗಳು [೧೦೦]
• ೨೦೦೯ ರ ಅತಿ ಹೆಚ್ಚು ಕೊಳ್ಳಲು ಸಾಧ್ಯವಾಗುವ ವಾಹನಗಳು [೧೦೧]

ಟಿಪ್ಪಣಿಗಳು[ಬದಲಾಯಿಸಿ]

  1. "Forbes Company Background". Forbes, Inc. 2010. Archived from the original on 11 ಏಪ್ರಿಲ್ 2010. Retrieved 4 May 2010.
  2. Forbes, Malcolm S. (1989). Clark, Tony (ed.). More Than I Dreamed. New York: Simon and Schuster. ISBN 0671671219. OCLC 19222269.
  3. Kroll, Luisa (2006-05-05). "Fortunes Of Kings, Queens And Dictators". Forbes.com. Archived from the original on 2012-05-29. Retrieved 2010-05-04.
  4. Mayoral, Maria Julia; de la Hoz, Pedro; de la Osa, Jose (2006-05-16). "I call on them to prove that I have one single dollar!". Granma International - English Edition. Archived from the original on 2007-06-22. Retrieved 2010-05-04.
  5. Carr, David (2010-01-07). "Forbes Sells Building to N.Y.U." The New York Times. Retrieved 2010-05-04.

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

  • Forbes, Malcolm S. (1974). Fact & Comment. New York: Knopf; [distributed by Random House]. ISBN 0394491874. OCLC 2696070.
  • Grunwald, Edgar A. (1988). The Business Press Editor. The New York University business magazine publishing series. New York: New York University Press. ISBN 0814730167. OCLC 17300233.
  • Holliday, Karen Kahler (1987). A Content Analysis of Business Week, Forbes and Fortune from 1966-1986 (M.J. thesis). Baton Rouge: Louisiana State University. OCLC 18772376.
  • Kohlmeier, Louis M.; Udell, Jon G.; Anderson, Laird B. (1981). Reporting on Business and the Economy. Englewood Cliffs, N.J.: Prentice-Hall. ISBN 013773879X. OCLC 6487745.
  • Kurtz, Howard (2000). The Fortune Tellers: Inside Wall Street's Game of Money, Media, and Manipulation. New York: Free Press. ISBN 0684868792. OCLC 44131817.
  • Parsons, D. W. (1990) [1989]. The Power of the Financial Press: Journalism and Economic Opinion in Britain and America. New Brunswick, N.J.: Rutgers University Press. ISBN 0813514975. OCLC 496521134.
  • Tebbel, John William; Zuckerman, Mary Ellen (1991). The Magazine in America, 1741-1990. New York: Oxford University Press. ISBN 0195051270. OCLC 422903333.

ಬಾಹ್ಯ ಕೊಂಡಿಗಳು[ಬದಲಾಯಿಸಿ]

  1. REDIRECT Template:Major English-language business magazines

ಟೆಂಪ್ಲೇಟು:Forbes Magazine Lists