ನಟಾಲಿಯಾ ಪೋರ್ಟ್‌ಮ್ಯಾನ್
ನಟಾಲಿಯಾ ಪೋರ್ಟ್‌ಮ್ಯಾನ್ | |
---|---|
Portman at the 2009 Toronto International Film Festival | |
ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ |
Natalie Hershlag (ಹೀಬ್ರೂ:נטלי הרשלג) ಜೂನ್ ೯, ೧೯೮೧ Jerusalem, Israel |
ವೃತ್ತಿ | Actress |
ವರ್ಷಗಳು ಸಕ್ರಿಯ | 1994–present |
ನಟಾಲಿಯಾ ಪೋರ್ಟ್‌ಮ್ಯಾನ್ (ಹೀಬ್ರೂ:נטלי פורטמן, ಜನನ: ನಟಾಲಿಯಾ ಹರ್ಷಲಗ್ ನಲ್ಲಿ 9 ಜೂನ್ 1981) ಇಸ್ರೇಲಿ ಅಮೆರಿಕಾ ನಟಿ. 1994ರಲ್ಲಿ ಸ್ವತಂತ್ರ ಚಿತ್ರವಾದ ಲೆಯೊನ್ ವು (ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ದಿ ಪ್ರೋಫೆಷನಲ್ ಎಂದು ಪ್ರಸಿದ್ಧವಾದ) ಅವಳು ಅಭಿನಯಿಸಿದ ಮೊದಲ ಚಿತ್ರವಾಗಿದೆ. ಘಟನೆಗಳ ಆಧಾರಿತ ಚಿತ್ರವಾದ [[ಸ್ಟಾರ್ ವಾರ್ಸ್‌ನಲ್ಲಿ ಅವಳು ಪಡ್ಮೆ ಅಮಿಡಲಾನ ಪಾತ್ರದಲ್ಲಿ ಅಭಿನಯಿಸಿದ ನಂತರ, ಹೆಚ್ಚು ಪ್ರಸಿದ್ದಿ ಪಡೆದಳು|ಸ್ಟಾರ್ ವಾರ್ಸ್ ನಲ್ಲಿ ಅವಳು ಪಡ್ಮೆ ಅಮಿಡಲಾನ ಪಾತ್ರದಲ್ಲಿ ಅಭಿನಯಿಸಿದ ನಂತರ, ಹೆಚ್ಚು ಪ್ರಸಿದ್ದಿ ಪಡೆದಳು]].[೧] ಹಾರ್ವರ್ಡ್ ಕಾಲೇಜ್‌ನಲ್ಲಿ ಮನ:ಶ್ಯಾಸ್ತ್ರದಲ್ಲಿ ಪದವಿ ಪೂರ್ಣಗೊಳಿಸಿದ ನಂತರ, ಪೋರ್ಟ್‌ಮ್ಯಾನ್ ಸ್ಟಾರ್ ವಾರ್ಸ್ ಚಿತ್ರ ಸರಣಿಯಲ್ಲಿ ಕೆಲಸ ಮಾಡುತ್ತಿರುವಾಗ, "ನಾನು ಚಿತ್ರ ನಟರಿಗಿಂತ ಹೆಚ್ಚು ಬುದ್ಧಿವಂತೆ."[೨] ಎಂದು ಹೇಳಿದಳು.[೩]
2001ರಲ್ಲಿ ಚೇಕಾವ್ಸ್ ದಿ ಸೀಗಲ್ ಅಲ್ಲದೆ, ಮೆಲಿಲ್ ಸ್ಟ್ರೀಪ್, ಕೇವಿನ್ ಕ್ಲೈನ್, ಮತ್ತು ಫಿಲಿಪ್ ಸೇಮೋರ್ ಹಾಫ್‌ಮ್ಯಾನ್ ನಿರ್ಮಿಸಿದ ನ್ಯೂಯಾರ್ಕ್ ಸಿಟಿಸ್ ಪಬ್ಲಿಕ್ ಥೀಯೆಟರ್ ಸಂಸ್ಥೆಯನ್ನು ಪೋರ್ಟ್‌ಮ್ಯಾನ್ ಪ್ರಾರಂಭಿಸಿದಳು.[೧] 2005ರಲ್ಲಿ ಕ್ಲೋಸರ್ ನಾಟಕದಲ್ಲಿನ ಅಭಿನಯಕ್ಕಾಗಿ ಪೋರ್ಟ್‌ಮ್ಯಾನ್ ಗೋಲ್ಡನ್ ಗ್ಲೋಬ್ ಅವಾರ್ಡ್ನ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದಳು. ಮೇ 2008ರಲ್ಲಿ ಅವಳು 61ನೇ ವಾರ್ಷಿಕ ಕ್ಯಾನಸ್ ಫಿಲ್ಮ್ ಫೆಸ್ಟಿವಲ್‌ನ ತೀರ್ಪುಗಾರರ ಮಂಡಳಿಯಲ್ಲಿರುವ ಅತಿ ಕಿರಿಯ ಸದಸ್ಯಳಾಗಿದ್ದಳು.[೪] 2008ರಲ್ಲಿ ಪೋರ್ಟ್‌ಮ್ಯಾನ್‌ಳ ಪ್ರಥಮ ನಿರ್ದೇಶನದ ಚಿತ್ರ ಏವ್ , 65ನೇ ವೆನಸ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನ ಕಿರುಚಿತ್ರಗಳ ಸ್ಪರ್ಧೆಯಲ್ಲಿ ತೆರೆಕಂಡಿತು.[೫]
ಆರಂಭಿಕ ಜೀವನ
[ಬದಲಾಯಿಸಿ]ಪೋರ್ಟ್‌ಮ್ಯಾನ್ ಇಸ್ರೇಲ್ನ ಜೆರುಸಲೆಮ್ನಲ್ಲಿ ಜನಿಸಿದಳು.[೬][೭] ಅವಳ ತಂದೆ ಅವ್ನರ್ ಹರ್ಷಲಗ್. ಅವರು ಇಸ್ರೇಲಿ ವೈದ್ಯರಾಗಿದ್ದು, ಗರ್ಭದಾನ ಮತ್ತು ಸಂತಾನೋತ್ಪತ್ತಿ ವಿಜ್ಞಾನದಲ್ಲಿ (ಸಂತಾನೋತ್ಪತ್ತಿ ವಿಷಯ ಕುರಿತ ಅಂತಃಸ್ರಾವಶಾಸ್ತ್ರ) ಪರಿಣತಿ ಹೊಂದಿದ್ದರು.[೮][೯] ಅವಳ ತಾಯಿ ಶೇಲೆ ಸ್ಟೀವನ್ಸ್ ಗೃಹಿಣಿ ಯಾಗಿದ್ದು, ಸದ್ಯ ಅವಳ ಕಾರ್ಯದರ್ಶಿಯಂತೆ ಕೆಲಸಮಾಡುತ್ತಿದ್ದಾಳೆ.[೮] ಪೋರ್ಟ್‌ಮ್ಯಾನ್‌ನ ತಾಯಿಯ ಪೂರ್ವಿಕರು ಆಸ್ಟ್ರೀಯಾ ಮತ್ತು ರಷ್ಯಾದಿಂದ ಬಂದಿರುವ ಯಹೂದಿಗಳಾಗಿದ್ದರೆ, ತಂದೆಯ ಪೂರ್ವಿಕರು ಪೋಲೆಂಡ್ ಮತ್ತು ರೋಮಾನಿಯಾದಿಂದ ಇಸ್ರೇಲ್‌ಗೆ ವಲಸೆ ಬಂದಿರುವ ಯಹೂದಿಗಳಾಗಿದ್ದಾರೆ. ಅವಳ ತಂದೆಯ ಕಡೆಯ ಅಜ್ಜನ ಪೋಷಕರು ಔಷ್ವಿಟ್ಸ್‌ನಲ್ಲಿ ಮರಣಹೊಂದಿದರು. ರೋಮಾನಿಯಾದಲ್ಲಿ ಹುಟ್ಟಿದ ಅವಳ ಮುತ್ತಜ್ಜಿ ಎರಡನೇ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷರ ಪರ ಗೂಢಚಾರರಾಗಿದ್ದರು.[೧೦]
ಪೋರ್ಟ್‌ಮ್ಯಾನ್‌ಳ ಪೋಷಕರು ಒಹಿಯೊ ಸ್ಟೇಟ್ ಯುನಿವರ್ಸಿಟಿಯಲ್ಲಿರುವ ಯಹೂದಿ ವಿದ್ಯಾರ್ಥಿ ಕೇಂದ್ರದಲ್ಲಿ ಭೇಟಿಯಾದರು. ಅಲ್ಲಿ ಅವಳ ತಾಯಿ ಟಿಕೆಟುಗಳನ್ನು ಮಾರುತ್ತಿದ್ದಳು. ಅವಳ ತಂದೆ ಇಸ್ರೇಲ್‌ಗೆ ಮರಳಿದರು. ಕೆಲವು ವರ್ಷಗಳ ನಂತರ ಅವಳ ತಾಯಿ ಇಸ್ರೇಲ್‌ಗೆ ಭೇಟಿ ನೀಡಿದಾಗ, ಪರಸ್ಪರ ಒಪ್ಪಿ, ಮದುವೆಯಾದರು. 1984ರಲ್ಲಿ ಪೋರ್ಟ್‌ಮ್ಯಾನ್ ಮೂರು ವರ್ಷದವಳಾಗಿದ್ದಾಗ, ಅವಳ ಕುಟುಂಬವು ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ವಲಸೆಹೋಯಿತು. ಅಲ್ಲಿ ಅವಳ ತಂದೆ ವೈದ್ಯಕೀಯ ತರಬೇತಿ ಪಡೆದರು. ಪ್ರಾರಂಭದಲ್ಲಿ ಕುಟುಂಬವು ವಾಶಿಂಗ್ಟನ್, D.C.ಯಲ್ಲಿ ನೆಲೆಸಿತ್ತು. ಅಲ್ಲಿ ಪೋರ್ಟ್‌ಮ್ಯಾನ್ ಚಾರ್ಲ್ಸ್ E. ಸ್ಮಿತ್ ಜೆವಿಷ್ ಡೇ ಸ್ಕೂಲ್‌ನ್ನು ಸೇರಿದ್ದಳು. ಆದರೆ ನಂತರ 1988ನಲ್ಲಿ ಕನೆಕ್ಟಿಕಟ್‌ಗೆ ಸ್ಥಳಾಂತರಗೊಂಡರು. ಅಲ್ಲದೇ 1990ರಲ್ಲಿ ನ್ಯೂಯಾರ್ಕ್‌ನ ಲಾಂಗ್ ಐಲೆಂಡ್‌ನಲ್ಲಿ ಶಾಶ್ವತವಾಗಿ ನೆಲೆಯೂರಿದರು.[೧] ಪೋರ್ಟ್‌ಮ್ಯಾನ್ "ನಾನು ನಿಜವಾಗಲೂ ಅಮೆರಿಕಾವನ್ನು ಪ್ರೀತಿಸುತ್ತಿದ್ದರೂ ಸಹ... ನನ್ನ ಹೃದಯ ಜೆರುಸಲೆಮ್‌ನಲ್ಲಿದೆ. ಅಲ್ಲಿ ನನಗೆ ಸ್ವದೇಶದ ಅನುಭವವಾಗುವುದು" ಎಂದು ಹೇಳಿದಳು.[೧೦] ಆಕೆ ತಂದೆತಾಯಿಗೆ ಒಬ್ಬಳೇ ಮಗಳಾಗಿರುವುದರಿಂದ, ಪ್ರೀತಿಯ ಮಗಳಾಗಿದ್ದಳು.[೧] ಅವಳ ಹೆಚ್ಚಿನ ಚಿತ್ರಗಳ ಪ್ರಥಮ ಪ್ರದರ್ಶನದ ಸಂದರ್ಭದಲ್ಲಿ ಹೆತ್ತವರು ಹೆಚ್ಚಾಗಿ ಜೊತೆಯಾಗಿರುತ್ತಿದ್ದರು.
ಶಿಕ್ಷಣ
[ಬದಲಾಯಿಸಿ]ಪೋರ್ಟ್‌ಮ್ಯಾನ್ ತನ್ನದು ಧಾರ್ಮಿಕ ಕುಟುಂಬವಲ್ಲವೆಂದು ಹೇಳಿದರೂ ಸಹ[೧೧], ನ್ಯೂಯಾರ್ಕ್‌ನ ಗ್ಲೇನ್ ಕೋವ್‌ನಲ್ಲಿರುವ ಯಹೂದಿ ಪ್ರಾಥಮಿಕ ಶಾಲೆಯಾದ ಸೋಲೋಮನ್ ಸ್ಕೆಚರ್ ಡೇ ಸ್ಕೂಲ್ ಸೇರಿದಳು. ಅವಳು ಸಾರ್ವಜನಿಕ ಪ್ರೌಢಶಾಲೆಯಾದ ಸ್ಯೊಸೆಟ್ ಹೈಸ್ಕೂಲ್‌ನಿಂದ ಪದವಿ ಪಡೆದಳು.[೧] ಪೋರ್ಟ್‌ಮ್ಯಾನ್ ತನ್ನ ಪ್ರೌಢಶಾಲೆಯ ಕೊನೆಯ ಪರೀಕ್ಷೆಗೆ ಓದುತ್ತಿರುವ ಸಂದರ್ಭದಲ್ಲಿ, ಸ್ಟಾರ್ ವಾರ್ಸ್: ಸರಣಿಯ I ಪ್ರಥಮ ಪ್ರದರ್ಶನವನ್ನು ತಪ್ಪಿಸಿಕೊಂಡಳು.[೧೨]
ಜೂನ್ 2003ರಲ್ಲಿ ಪೋರ್ಟ್‌ಮ್ಯಾನ್ ಹಾರ್ವರ್ಡ್ ಕಾಲೇಜ್‌ನಿಂದ ಮನ:ಶಾಸ್ತ್ರದಲ್ಲಿ ಪದವಿ ಪಡೆದಳು. ಹಾರ್ವರ್ಡ್‌ನ ಮನ:ಶಾಸ್ತ್ರ ಪ್ರಯೋಗಶಾಲೆಯಲ್ಲಿ ಪೋರ್ಟ್‌ಮ್ಯಾನ್ ಅಲನ್ ಡೆರ್ಷೋವಿಟ್ಸ್‌ನ (ಅವರು ದಿ ಕೇಸ್ ಫಾರ್ ಇಸ್ರೇಲ್ ನ ಪುಸ್ತಕದಲ್ಲಿ ಅವಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.) ಸಂಶೋಧನಾ ಸಹಾಯಕಿಯಾಗಿ ಕೆಲಸ ಮಾಡಿದಳು. ಹಾರ್ವರ್ಡ್‌ನಲ್ಲಿ ಅಧ್ಯಯನ ನಡೆಸುತ್ತಿರುವಾಗ, ಅವಳು ಲೋವೆಲ್ ಹೌಸ್‌ನಲ್ಲಿ ವಾಸವಾಗಿದ್ದಳು.[೧೩] ಅಲ್ಲದೇ ಇಸ್ರೇಲಿ ವಿರೋಧಿ ಪ್ರಬಂಧ ಬರೆದಿರುವ ಹಾರ್ವರ್ಡ್ ಕ್ರಿಮ್ಸನ್‌ಗೆ ಪ್ರತಿಕ್ರಿಯೆಯಾಗಿ ಪತ್ರವೊಂದನ್ನು ಬರೆದಳು.[೧೪]
2004ನ ವಸಂತಕಾಲದಲ್ಲಿ ಪೋರ್ಟ್‌ಮ್ಯಾನ್ ಜೆರುಸಲೆಮ್‌ನ ಹಿಬ್ರೊ ವಿಶ್ವವಿದ್ಯಾಲಯದಲ್ಲಿ ಪದವಿಗೆ ಸೇರಿದರು.[೧೧] ಮಾರ್ಚ್ 2006ರಲ್ಲಿ ಅವಳು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕಿಯಾಗಿ ಪ್ರವಾಸೋದ್ಯಮ ಮತ್ತು ಭಯೋತ್ಪಾನಾ ವಿರೋಧದ ಕುರಿತು ಉಪನ್ಯಾಸ ನೀಡಿದಳು. ಅಲ್ಲಿ ತನ್ನ ಚಿತ್ರ ವಿ ಫಾರ್ ವೆಂಡೆಟ್ಟಾ ಬಗ್ಗೆ ಮಾತನಾಡಿದಳು.[೧೫]
ಅವಳು ಹಿಬ್ರೊ[೧೬] ಮತ್ತು ಇಂಗ್ಲಿಷ್ ಎರಡು ಭಾಷೆಗಳಲ್ಲಿದೆ, ಪೋರ್ಟ್‌ಮ್ಯಾನ್ ಫ್ರೆಂಚ್,[೧೭] ಜಪಾನೀಸ್,[೧೭] ಜರ್ಮನ್[೧೮] ಮತ್ತು ಅರಬಿಕ್ ಭಾಷೆಯನ್ನು ಕಲಿತಿದ್ದಳು[೧೯].[೨೦]
ವಿದ್ಯಾರ್ಥಿಯಾಗಿ, ಪೋರ್ಟ್‌ಮ್ಯಾನ್ ವೃತ್ತಿಪರ ವೈಜ್ಞಾನಿಕ ನಿಯತಕಾಲಿಕೆಗಳಲ್ಲಿ ಪ್ರಕಟವಾದ ಎರಡು ಸಂಶೋಧನಾ ಲೇಖನಗಳ ಸಹಲೇಖಕಿಯಾಗಿದ್ದರು. ಸುಮಾರು 1998ರಲ್ಲಿ "ಎ ಸಿಂಪಲ್ ಮೆಥಡ್ ಟು ಡೆಮೊಂಸ್ಟ್ರೇಟ್ ದಿ ಎಂಜಿಮೇಟಿಕ್ ಪ್ರೋಡಕ್ಷನ್ ಆಫ್ ಹೈಡ್ರೋಜನ್ ಫ್ರಮ್ ಶುಗರ್" ಎನ್ನುವ ಅವಳ ಪ್ರೌಢಶಾಲಾ ಪ್ರಬಂಧವು ಇಂಟೆಲ್ ಸೈನ್ಸ್ ಟ್ಯಾಲೆಂಟ್ ಸರ್ಚ್‌ನ್ನು ಪ್ರವೇಶಿಸಿತ್ತು.[೨೧] 2002ರಲ್ಲಿ ಹಾರ್ವರ್ಡ್‌ನಲ್ಲಿ ಅವಳು ಮನಃಶ್ಯಾಸ್ತ್ರ ಅಧ್ಯಯನ ನಡೆಸುವಾಗ "ಫ್ರೊಂಟಲ್ ಲೋಬ್ ಆಕ್ಟಿವೇಷನ್ ಡ್ಯುರಿಂಗ್ ಆಬ್ಜೆಕ್ಟ್ ಪರ್ಮನೆನ್ಸ್" ಎನ್ನುವ ಸ್ಮರಣೆಗೆ ಸಂಬಂಧಿಸಿದ ಅಧ್ಯಯನಕ್ಕೆ ಕೊಡುಗೆ ನೀಡಿದ್ದರು.[೨೨]
ವೃತ್ತಿ ಜೀವನ
[ಬದಲಾಯಿಸಿ]ಆರಂಭಿಕ ವೃತ್ತಿಜೀವನ
[ಬದಲಾಯಿಸಿ]ಪೋರ್ಟ್‌ಮ್ಯಾನ್ ತನ್ನ 4ನೇ ವಯಸ್ಸಿನಲ್ಲಿಯೇ ನೃತ್ಯಾಭ್ಯಾಸ ಪ್ರಾರಂಭಿಸಿದ್ದಳು.[೧] ಅಲ್ಲದೇ ಸ್ಥಳೀಯ ನೃತ್ಯತಂಡಗಳಲ್ಲಿ ಭಾಗವಹಿಸುತ್ತಿದ್ದಳು. ಅವಳು 10 ವರ್ಷದವಳಾಗಿರುವಾಗ, ರೆವಲೊನ್ ಪ್ರತಿನಿಧಿಯು ಅವಳನ್ನು ಬಾಲ್ಯದಲ್ಲೇ ರೂಪದರ್ಶಿಯಾಗುವಂತೆ ಕೇಳಿದ್ದರು.[೧][೨೩] ಆದರೆ ಅವಳು ನಟನೆಯಲ್ಲಿ ಗಮನ ಹರಿಸುವುದಕ್ಕಾಗಿ ಈ ಅವಕಾಶವನ್ನು ತಿರಸ್ಕರಿಸಿದಳು. ಒಂದು ಪತ್ರಿಕಾ ಸಂದರ್ಶನದಲ್ಲಿ ಪೋರ್ಟ್‌ಮ್ಯಾನ್, "ತಾನು ಇತರ ಮಕ್ಕಳಿಗಿಂತ ಭಿನ್ನವಾಗಿದ್ದೆ. ನಾನು ಮಹತ್ವಾಕಾಂಕ್ಷಿಯಾಗಿದ್ದು, ಏನನ್ನು ಇಷ್ಟಪಡುತ್ತೇನೆ ಎನ್ನುವುದು ನನಗೆ ತಿಳಿದಿತ್ತು. ಅದಕ್ಕಾಗಿ ನಾನು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೆ. ಅಲ್ಲದೇ ತುಂಬಾ ಗಂಭೀರ ಹುಡುಗಿಯಾಗಿದ್ದೆ" ಎಂದು ಹೇಳಿದಳು.[೨೪]
ಪೋರ್ಟ್‌ಮ್ಯಾನ್ ತನ್ನ ಶಾಲಾ ರಜಾದಿನಗಳನ್ನು ರಂಗಮಂದಿರ ಶಿಬಿರಗಳಲ್ಲಿ ಕಳೆಯುತ್ತಿದ್ದಳು. ಅವಳು 10 ವಯಸ್ಸಿನವಳಾಗಿರುವಾಗ, ರೂತ್‌ಲೆಸ್! ಗೆ ನಟನಾ ಪ್ರಾತ್ಯಕ್ಷಿಕೆ ನೀಡಲು ಹೋಗಿದ್ದಳು. ಶಾಲಾ ನಾಟಕದಲ್ಲಿ ಹತ್ಯೆಗೈಯಲು ತಯಾರಾಗುವ ಹುಡುಗಿಯ ಪಾತ್ರದಲ್ಲಿ ನಟಿಸಿದಳು. ಅವಳು ಲಾರಾ ಬೆಲ್ ಬುಂಡಿಗೆ ಪರ್ಯಾಯ ಪಾತ್ರಧಾರಿಯಾಗಿ ಆಯ್ಕೆಯಾದಳು.[೧೧] ಕಳೆದ 1994ರಲ್ಲಿ ಅವಳು ಲಕ್ ಬೆಸನ್ರ ಲೆಯೊನ್ (ದಿ ಪ್ರೋಫೆಷನಲ್ ಎಂದು ಕರೆಯುವ) ಚಿತ್ರದಲ್ಲಿ ಮಧ್ಯಮ ವಯಸ್ಸಿನ ಕೊಲೆಗಾರನೊಬ್ಬನ ಸ್ನೇಹತೆಯಾಗುವ ಮಗುವಿನ ಪಾತ್ರಕ್ಕಾಗಿ ನಟನಾ ಪರೀಕ್ಷೆ-ಪ್ರಾತ್ಯಕ್ಷಿಕೆ ನೀಡಿದ್ದಳು. ಆ ಪಾತ್ರ ದೊರೆತ ನಂತರ, ಅವಳು ಗೌಪ್ಯತೆ ಉಳಿಸುಕೊಳ್ಳುವುದಕ್ಕಾಗಿ, ತನ್ನ ಅಜ್ಜಿಯ ಮೊದಲ ಹೆಸರಾದ "ಪೋರ್ಟ್‌ಮ್ಯಾನ್" ಅನ್ನು ತನ್ನ ನಟನಾ ವಲಯದ ಹೆಸರಾಗಿ ಇಟ್ಟುಕೊಂಡಳು;[೧] DVDಯಲ್ಲಿ ಚಿತ್ರದ ನಿರ್ದೇಶಕರ ಪ್ರತಿಯಲ್ಲಿ ಅವಳನ್ನು ನಟಾಲಿಯಾ ಹರ್ಷಲಗ್ ಎಂದು ಹೆಸರಿಸಲಾಗಿತ್ತು. ಕಳೆದ 18 ನವೆಂಬರ್ 1994ರಲ್ಲಿ ಅವಳು ತನ್ನ 13ನೇ ವಯಸ್ಸಿನಲ್ಲಿ ಲೆಯೊನ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಳು. ಅದೇ ವರ್ಷ ದೂರದರ್ಶನದಲ್ಲಿ ಪ್ರಸಾರವಾದ ಡೆವಲಪಿಂಗ್ ಎನ್ನುವ ಕಿರುಚಿತ್ರದಲ್ಲಿ ಕಾಣಿಸಿಕೊಂಡಳು.
1995–1999
[ಬದಲಾಯಿಸಿ]1990ರ ದಶಕದ ಮಧ್ಯಭಾಗದಲ್ಲಿ, ಪೋರ್ಟ್‌ಮ್ಯಾನ್ ಹೀಟ್ , ಎವೆರಿವನ್ ಸೇಸ್ ಐ ಲವ್ ಯು ಮತ್ತು ಮಾರ್ಸ್ ಅಟ್ಯಾಕ್! ಅಲ್ಲದೇ ಬ್ಯುಟಿಫುಲ್ ಗರ್ಲ್ಸ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಳೆ.[೧] ವಿಲಿಯಂ ಷೇಕ್ಸ್‌ಪಿಯರ್ಸ್ ರೋಮಿಯೊ + ಜ್ಯುಲಿಯಟ್ ನಲ್ಲಿ ಜ್ಯುಲಿಯಟ್‌ನ ಪಾತ್ರದಲ್ಲಿ ಅಭಿನಯಿಸಲು ಮೊದಲ ಅವಳನ್ನು ಆಯ್ಕೆ ಮಾಡಲಾಗಿತ್ತು. ಆದರೆ ನಿರ್ಮಾಪಕರು ಅವಳ ವಯಸ್ಸು ಆ ಪಾತ್ರಕ್ಕೆ ಹೊಂದುವುದಿಲ್ಲವೆಂದು ಭಾವಿಸಿದರು.[೨೩] 1997ರಲ್ಲಿ, ಪೋರ್ಟ್‌ಮ್ಯಾನ್ ದಿ ಡೈರಿ ಆಫ್ ಅನ್ನೆ ಫ್ರ್ಯಾಂಕ್ ಮಾರ್ಪಡಿಸಿದ ಬ್ರೋಡ್‌ವೇಯಲ್ಲಿ ಅನ್ನೆ ಫ್ರ್ಯಾಂಕ್‌ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಳೆ. ಪ್ರಾರಂಭದಲ್ಲಿ ಎನಿವೇರ್ ಬಟ್ ಹಿಯರ್ ಚಿತ್ರದಲ್ಲಿ ಅಶ್ಲೀಲ ದೃಶ್ಯವಿದೆ ಎಂದು ತಿಳಿದ ಮೇಲೆ, ಅವಳು ಅದರಲ್ಲಿ ಅಭಿನಯಿಸಲು ನಿರಾಕರಿಸಿದಳು. ಆದರೆ ನಿರ್ದೇಶಕ ವೇನ್ ವಾಂಗ್ ಮತ್ತು ನಟಿ ಸುಸೇನ್ ಸರಂಡನ್ ಚಿತ್ರಕಥೆಯನ್ನು ಪುನಃ ಬರೆಯುವಂತೆ ಬೇಡಿಕೆ ಸಲ್ಲಿಸಿದರು; ನಂತರ ಪೋರ್ಟ್‌ಮ್ಯಾನ್‌ಳಿಗೆ ಹೊಸ ಪ್ರತಿಯನ್ನು ತೋರಿಸಲಾಯಿತು. ಮುಂದೆ ಅವಳು ಆ ಚಿತ್ರ ತಂಡ ಸೇರಿಕೊಂಡಳು.[೧] 1999ರ ಕೊನೆಯಲ್ಲಿ ಚಿತ್ರವು ತೆರೆಕಂಡಿತು. ಅಲ್ಲದೇ ಅನ್ನ್ ಅಗಸ್ಟ್‌ನ ಪಾತ್ರದಲ್ಲಿ ಅವಳ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ಗೋಲ್ಡನ್ ಗ್ಲೋಬ್ ನಾಮನಿರ್ದೇಶನ ಪಡೆದಳು.[೨೫] ಪೋರ್ಟ್‌ಮ್ಯಾನ್ "ನಿಬ್ಬೆರಗುಗೊಳಿಸಿದ್ದಾಳೆ" ಎಂದು ಸಲೋನ್ ನ ಮೇರಿ ಎಲಿಜಬೆತ್ ವಿಲಿಯಂಸ್ ವಿಮರ್ಶೆ ಬರೆದಿದ್ದಾರೆ. ಅದಲ್ಲದೇ "ಅವಳ ವಯಸ್ಸಿನ ಇತರ ನಟಿಯರಂತಿರದೆ, ಇವಳು ತುಂಬಾ ಭಾವುಕಳಾಗಿ ಅಥವಾ ತುಂಬಾ ಧೈರ್ಯವಂತೆಯಾಗಿಯೂ ಇಲ್ಲ" ಎಂದು ಬರೆದಿದ್ದಾರೆ.[೨೬] 1990ರ ದಶಕದ ಕೊನೆಯ ಭಾಗದಲ್ಲಿ, ಸ್ಟಾರ್ ವಾರ್ಸ್ ಕಾದಂಬರಿಯಾಧಾರಿತ ಚಿತ್ರದಲ್ಲಿ ಪೋರ್ಟ್‌ಮ್ಯಾನ್ ಪಡ್ಮೆ ಅಮಿಡಲಾ ಪಾತ್ರದಲ್ಲಿ ನಟಿಸಿದ್ದಳು. 1999ರ ಆರಂಭದಲ್ಲಿ ದಿ ಪ್ಯಾಂಟಮ್ ಮೆನಸ್ ನ ಮೊದಲ ಭಾಗ ತೆರೆಕಂಡಿತು.[೧] ನಂತರ ಅವಳು ವೇರ್ ದ ಹಾರ್ಟ್ ಇಸ್ ನಲ್ಲಿ ಪ್ರಮುಖ ಪಾತ್ರವಾದ ಹದಿಹರೆಯದ ತಾಯಿಯ ಪಾತ್ರದಲ್ಲಿ ಅಭಿನಯಿಸಲು ಒಪ್ಪಿಗೆ ನೀಡಿದಳು.
2000–2005
[ಬದಲಾಯಿಸಿ]ವೇರ್ ದ ಹಾರ್ಟ್ ಇಸ್ ಚಿತ್ರೀಕರಣದ ನಂತರ, ಪೋರ್ಟ್‌ಮ್ಯಾನ್ [[ಮನಃಶ್ಯಾಸ್ತ್ರದಲ್ಲಿ ಪದವಿಯನ್ನು ಪಡೆಯಲು ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಮತ್ತೆ ಸೇರಿದಳು.|ಮನಃಶ್ಯಾಸ್ತ್ರದಲ್ಲಿ ಪದವಿಯನ್ನು ಪಡೆಯಲು ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಮತ್ತೆ ಸೇರಿದಳು.[೧]]] 1999ರಲ್ಲಿ ನೀಡಿದ ಸಂದರ್ಶನದಲ್ಲಿ ಅವಳು ಸ್ಟಾರ್ ವಾರ್ಸ್ ಚಿತ್ರವನ್ನು ಹೊರತುಪಡಿಸಿ, ಮುಂದಿನ ನಾಲ್ಕು ವರ್ಷಗಳಲ್ಲಿ ಯಾವುದೇ ಚಿತ್ರದಲ್ಲಿ ನಟಿಸದೆ, ಓದಿನಲ್ಲಿ ಗಮನ ಕೇಂದ್ರಿಕರಿಸುವುದಾಗಿ ಹೇಳಿದಳು.[೨೭] 2000ರ ಜೂನ್‌ನಿಂದ ಸಪ್ಟೆಂಬರ್‌ವರೆಗಿನ ಬೇಸಿಗೆ ರಜಾದಿನದಲ್ಲಿ, ಪೋರ್ಟ್‌ಮ್ಯಾನ್ ಲಂಡನ್‌ನಲ್ಲಿ ಹೆಚ್ಚುವರಿ ನಿರ್ಮಾಣ ಕಾರ್ಯಗಳಲ್ಲದೆ, ಸಿಡ್ನಿಯಲ್ಲಿನ ಚಿತ್ರೀಕರಣದಲ್ಲಿStar Wars Episode II: Attack of the Clones ಪಾಲ್ಗೊಂಡಿದ್ದಳು. ಜುಲೈ 2001ರಲ್ಲಿ, ಪೋರ್ಟ್‌ಮ್ಯಾನ್ ಚೆಕೊಫ್‌ನ ದಿ ಸೀಗಲ್ ನ ನ್ಯೂಯಾರ್ಕ್ ಸಿಟಿಸ್ ಪಬ್ಲಿಕ್ ಥೀಯೆಟರ್ ನಿರ್ಮಾಣದಲ್ಲಿ ತೆರೆಕಂಡಿತು. ಈ ಚಿತ್ರವನ್ನು ಮೈಕ್ ನಿಕೊಲಸ್ ನಿರ್ದೇಶಿಸಿದ್ದರು; ಅವಳು ಮೆಲಿಲ್ ಸ್ಟ್ರೀಪ್, ಕೇವಿನ್ ಕ್ಲೈನ್, ಮತ್ತು ಫಿಲಿಪ್ ಸೇಮೋರ್ ಹಾಫ್‌ಮ್ಯಾನ್‌ರೊಂದಿಗೆ ನಿನಾ ಪಾತ್ರದಲ್ಲಿ ನಟಿಸಿದ್ದಳು.[೧] ಸೆಂಟ್ರಲ್ ಪಾರ್ಕ್‌ನಲ್ಲಿರುವ ಡೆಲಕೊರ್ಟೆ ರಂಗಮಂದಿರದಲ್ಲಿ ನಾಟಕ ವೇದಿಕೆ ಕಂಡಿತು.[೨೮] ಅದೇ ವರ್ಷ ಅಂದರೆ 2002ರಲ್ಲಿ ಹಾಸ್ಯ ಜೂಲೆಂಡರ್ ದಲ್ಲಿ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡದ್ದರಿಂದ ಹಲವು ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬಳಾದಳು. ಕೋಲ್ಡ್ ಮೌಂಟೇನ್ ಚಿತ್ರದಲ್ಲಿ ಜ್ಯುಡ್ ಲಾ ಮತ್ತು ನಿಕೋಲ್ ಕಿಡ್‌ಮ್ಯಾನ್‌ರೊಂದಿಗೆ ಪೋರ್ಟ್‌ಮ್ಯಾನ್ ಚಿಕ್ಕ ಪಾತ್ರದಲ್ಲಿ ಅಭಿನಯಿಸಿದಳು.[೧]
2004ರಲ್ಲಿ ಪೋರ್ಟ್‌ಮ್ಯಾನ್ ಗಾರ್ಡನ್ ಸ್ಟೇಟ್ ಮತ್ತು ಕ್ಲೋಸರ್ ಚಿತ್ರಗಳಲ್ಲಿ ಅಭಿನಯಿಸಿದಳು.[೧] ಗಾರ್ಡನ್ ಸ್ಟೇಟ್ ಸಂಡ್ಯಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಅಧಿಕೃತ ಆಯ್ಕೆಯಾಗಿತ್ತು. ಅಲ್ಲದೇ ಇಂಡಿಪೆಂಡೆಂಟ್ ಸ್ಪೀರಿಟ್ ಅವಾರ್ಡ್ಸ್‌ನಲ್ಲಿ ಬೆಸ್ಟ್ ಫಸ್ಟ್ ಫೀಚರ್ ಪ್ರಶಸ್ತಿ ಗೆದ್ದಿತು. ಕ್ಲೋಸರ್ ಚಿತ್ರದಲ್ಲಿ ಅಲೈಸ್ ಪಾತ್ರದಲ್ಲಿ ಪೋರ್ಟ್‌ಮ್ಯಾನ್‌ಳ ಅಭಿನಯದಿಂದಾಗಿ, ಅವಳು ಗೋಲ್ಡನ್ ಗ್ಲೋಬ್‌ನ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ, ಹಾಗೆಯೇ ಅತ್ಯುತ್ತಮ ಪೋಷಕ ನಟಿಗಾಗಿ ಅಕಾಡಮಿ ಅವಾರ್ಡ್ ನಾಮನಿರ್ದೇಶನವನ್ನು ಪಡೆದಳು.[೨೯][೩೦]
ಅಂತಿಮ ಸ್ಟಾರ್ ವಾರ್ಸ್ ಚಿತ್ರವು Star Wars Episode III: Revenge of the Sith 19 ಮೇ 2005ರಂದು ಬಿಡುಗಡೆಯಾಯಿತು. ಈ ಚಿತ್ರವು ಪ್ರಾದೇಶಿಕವಾಗಿ ವರ್ಷದ ಅತಿ ಹೆಚ್ಚು ಗಳಿಕೆ ಕಂಡ ಚಿತ್ರವಾಗಿ ಹೊರಹೊಮ್ಮಿತು[೩೧] ಮತ್ತು ಪೀಪಲ್'ಸ್ ಚಾಯಿಸ್ ಅವಾರ್ಡ್ಸ್‌ನಲ್ಲಿ ನೆಚ್ಚಿನ ಚಲನಚಿತ್ರವಾಗಿ ಆಯ್ಕೆಯಾಯಿತು. 2005ರಲ್ಲಿ ಸಹ, ಪೋರ್ಟ್‌ಮ್ಯಾನ್ ಫ್ರೀ ಜೋನ್ ಮತ್ತು ನಿರ್ದೇಶಕ ಮಿಲೋಸ್ ಫಾರ್ಮ್ಯಾನ್ರ ಗೋಯಾ'ಸ್ ಗೋಸ್ಟ್‌ಸ್ ಚಿತ್ರದಲ್ಲಿ ಅಭಿನಯಿಸಿದ್ದರು. ಫೋರ್‌ಮ್ಯಾನ್ ಅವಳ ಯಾವುದೇ ನಟನೆಯನ್ನು ನೋಡಿರಲಿಲ್ಲ. ಆದರೆ ಅವಳು ಗೋಯಾ ಕಲಾಚಿತ್ರದಲ್ಲಿರುವಂತೆ ಕಾಣುವಳು ಎಂದು ಭಾವಿಸಿ, ನಿರ್ದೇಶಕರು ಅವಳಿಗೆ ಅವಕಾಶಕ್ಕೆ ಅನುವು ಮಾಡಿದರು.[೩೨]
2006–ಇಲ್ಲಿಯವರೆಗೆ
[ಬದಲಾಯಿಸಿ]4 ಮಾರ್ಚ್ 2006ರಲ್ಲಿ ಸಾಟರ್ಡೆ ನೈಟ್ ಲೈವ್ ಕಾರ್ಯಕ್ರಮದಲ್ಲಿ ಪೋರ್ಟ್‌ಮ್ಯಾನ್[೩೩] ಅತಿಥಿ ಸಂಗೀತಗಾರ ಫಾಲ್ ಔಟ್ ಬಾಯ್ ಮತ್ತು ವಿಶೇಷ ಅತಿಥಿ ನಟ ಡೆನ್ನಿಸ್ ಹೇಸ್ಬರ್ಟ್‌ರೊಂದಿಗೆ ಕಾರ್ಯಕ್ರಮ ನಡೆಸಿಕೊಟ್ಟರು. SNL ಡಿಜಿಟಲ್ ಶಾರ್ಟ್‌ನಲ್ಲಿ[೩೪] ಕ್ರಿಸ್ ಪರ್ನೆಲ್‌ರೊಂದಿಗಿನ ಅಣಕು ಸಂದರ್ಶನದಲ್ಲಿ, ಅವಳು ತನ್ನನ್ನು ಸಿಡುಕಿನ ಗ್ಯಾಂಗೆಸ್ಟಾ ರಾಪರ್‌ನಂತೆ (ವಿಕಿಂಗ್ ಉಡುಪಿನಲ್ಲಿ ತನ್ನ ಫ್ಲಾವರ್ ಫ್ಲಾವ್-ಸಹ ನಟರಂತೆ ಆಂಡಿ ಸಾಂಬರ್ಗ್‌ರೊಂದಿಗೆ) ಅಭಿನಯಿಸಿ, ತಾನು ಜೂಜಾಟದಂತಹದರಲ್ಲಿ ತೊಡಗಿ, ಮತ್ತು ಕೊಕೇನ್ ಸೇವಿಸಿ ಅಮಲಿನಲ್ಲಿರುವಾಗ, ಪವಿತ್ರ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಮೋಸಮಾಡಿದೆ, ಎಂದು ಪಶ್ಚಾತಾಪಪಟ್ಟಳು.[೩೫] "ನಟಾಲಿಯಾಸ್ ರಾಪ್" ಎನ್ನುವ ಶೀರ್ಷಿಕೆ ಹೊಂದಿರುವ ಹಾಡು ಬಿಡುಗಡೆಯಾಯಿತಲ್ಲದೆ, ಆ ಪ್ರದರ್ಶನದ ಕೆಲವು ತುಣುಕುಗಳು 2009ರಲ್ಲಿ ಬಿಡುಗಡೆಯಾದ ದಿ ಲವ್ಲಿ ಐಲೆಂಡ್‌ನಿಂದ ಇನ್‌ಕ್ರೆಡಿಬಾದ್ ನಲ್ಲಿದ್ದವು.[೩೬] ಇನ್ನೊಂದು ಭಾಗದಲ್ಲಿ, ಬಾರ್ ಮಿಟ್ಸಾವನಲ್ಲಿ ಭಾಗವಹಿಸಿ, ರಿಬೆಕ್ಕಾ ಹರ್ಷಲಗ್ (ಅವಳ ನಿಜವಾದ ಅಡ್ಡಹೆಸರು) ಎಂಬ ಹೆಸರಿನ ವಿದ್ಯಾರ್ಥಿ ಪಾತ್ರದಲ್ಲಿ ನಟಿಸಿದಳು. ಅಲ್ಲದೇ ಇದರ ಮುಂದುವರಿದ ಭಾಗವಾದ ದಿ ನೀಡ್ಲರ್ಸ್‌ನಲ್ಲಿ (ಸ್ಯಾಲಿ ಆಂಡ್ ಡ್ಯಾನ್, ದಿ ಕಪಲ್ ದ್ಯಾಟ್ ಶುಡ್ ಬಿ ಡೈವರ್ಸಡ್ ಎಂದೂ ಕರೆಯುವ) ಸಂತಾನ ಶಕ್ತಿ ನೀಡುವ ತಜ್ಞೆಯಾಗಿ (ಆಕೆ ತಂದೆಯ ವೃತ್ತಿ) ನಟಿಸಿದಳು.
ಕಳೆದ 2006ರ ಪ್ರಾರಂಭದಲ್ಲಿ ವಿ ಫಾರ್ ವೆಂಡೆಟ್ಟಾ ತೆರೆಕಂಡಿತು. ಇದರಲ್ಲಿ ಪೋರ್ಟ್‌ಮ್ಯಾನ್ ಗುಪ್ತದಳ ಪೋಲಿಸರಿಂದ ಪ್ರಮುಖ ಪಾತ್ರ Vಯನ್ನು ರಕ್ಷಿಸಲು ಎವೆರಿ ಹಮ್ಮೊಂಡ್ ಎಂಬ ಯುವತಿಯ ಪಾತ್ರದಲ್ಲಿ ನಟಿಸಿದರು. ಆ ಪಾತ್ರಕ್ಕಾಗಿ ಪೋರ್ಟ್‌ಮ್ಯಾನ್ ಇಂಗ್ಲೀಷ್ ಭಾಷಾ ಶೈಲಿಯಲ್ಲಿ ಮಾತನಾಡಲು ಧ್ವನಿ ತರಬೇತುದಾರರಿಂದ ತರಬೇತಿ ಪಡೆದರು ಮತ್ತು ಪಾತ್ರಕ್ಕಾಗಿ ಅವಳು ತಲೆಗೂದಲನ್ನು ತೆಗೆಯಿಸಿಕೊಂಡಳು.[೩೭]
ಪೋರ್ಟ್‌ಮ್ಯಾನ್ ವಿ ಫಾರ್ ವೆಂಡೆಟ್ಟಾನ ರಾಜಕೀಯ ಪ್ರಸ್ತುತತೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಳು. ಅಲ್ಲದೇ ಅವಳ ತನ್ನ ಸ್ವಭಾವದ ಬಗ್ಗೆ ವಿವರಿಸುತ್ತಾ, "ಹೆಚ್ಚಾಗಿ ಕೆಟ್ಟದಾದ ಮತ್ತು ನೀವು ಇಷ್ಟಪಡದ" ಭೂಗತ ಸರಕಾರಿ ವಿರೋಧಿ ಸಮೂಹವನ್ನು ಸೇರಿದಳು ಮತ್ತು "ನಾನು ಇಸ್ರೇಲ್‌ನವಳಾಗಿರುವುದರಿಂದ ನಾನು ಚಿಕ್ಕವಳಿಂದಲೇ ಭಯೋತ್ಪಾದನೆ ಮತ್ತು ಹಿಂಸೆ ಎನ್ನುವ ವಿಷಯಗಳು ನನ್ನ ದೈನಂದಿನ ಸಂಭಾಷಣೆಯ ಭಾಗವಾಗಿದ್ದವು." ಚಿತ್ರವು "ಉತ್ತಮ ಮತ್ತು ಕೆಟ್ಟ ಹೇಳಿಕೆಗಳನ್ನು ಸ್ಪಷ್ಟಪಡಿಸುವುದಿಲ್ಲ. ತಮ್ಮದೇ ಆದ ರೀತಿಯಲ್ಲಿ ಅಭಿಪ್ರಾಯ ತೆಗೆದುಕೊಳ್ಳುವ ಪ್ರೇಕ್ಷಕರನ್ನು ನಾನು ಗೌರವಿಸುತ್ತೇನೆ" ಎಂದು ಅವಳು ಹೇಳಿದಳು.[೩೮]
2006ರಲ್ಲಿ ಗೋಯಾ'ಸ್ ಗೋಸ್ಟ್‌ಸ್ ಮತ್ತು ಫ್ರೀ ಜೋನ್ ಎರಡೂ ಕಡಿಮೆ ಪ್ರಮಾಣದಲ್ಲಿ ಮಾರಾಟವಾದವು. ಏಪ್ರಿಲ್ 2006ರಲ್ಲಿ ಚಿತ್ರೀಕರಣ ಪ್ರಾರಂಭವಾದ ಮಕ್ಕಳ ಚಿತ್ರ Mr. ಮಗೊರಿಯಮ್'ಸ್ ವಂಡರ್ ಎಂಪೋರಿಯಮ್ ನಲ್ಲಿ ಪೋರ್ಟ್‌ಮ್ಯಾನ್ ಅಭಿನಯಿಸಿದ್ದಳು. ಅಲ್ಲದೇ ಈ ಚಿತ್ರವು ನವೆಂಬರ್ 2007ರಂದು ಬಿಡುಗಡೆಯಾಯಿತು; ಅವಳು ತನ್ನ ಪಾತ್ರದ ಬಗ್ಗೆ ಮಾತನಾಡುತ್ತಾ, "ಮಕ್ಕಳ ಚಿತ್ರ ಮಾಡಲು ಹೆಮ್ಮೆ ಎನಿಸುತ್ತದೆ" ಎಂದಳು.[೩೭] 2006ರ ಕೊನೆಯ ಭಾಗದಲ್ಲಿ, ಪೋರ್ಟ್‌ಮ್ಯಾನ್ ಐತಿಹಾಸಿಕ ನಾಟಕವಾದ ದಿ ಅದರ್ ಬೋಲಿನ್ ಗರ್ಲ್ ನಲ್ಲಿ ಎರಿಕ್ ಬನಾ ಮತ್ತು ಸ್ಕಾರ್ಲೆಟ್ ಜಾಹನ್ಸನ್‌ರೊಂದಿಗೆ ಅನ್ನೆ ಬೋಲಿನ್ ಪಾತ್ರದಲ್ಲಿ ನಟಿಸಿದಳು. ಬ್ಲೆಂಡರ್ ನಿಯತಕಾಲಿಕೆಯು ಇವಳನ್ನು ಚಲನಚಿತ್ರ ಮತ್ತು TVಯ ಆಕರ್ಷಕ ಮಹಿಳೆಯಾಗಿ ಆಯ್ಕೆಮಾಡಿದೆ.[೩೯]
2006ರಲ್ಲಿ, ಅವಳು ವೋಂಗ್ ಕಾರ್-ವೈರ ರೋಡ್ ಚಿತ್ರದಲ್ಲಿ ಮೈ ಬ್ಲೂಬೆರ್ರಿ ನೈಟ್ಸ್ ನಟಿಸಿದಳು. ಅವಳು ಜೂಜುಗಾರ್ತಿ ಲೆಸ್ಲೀಯ ಪಾತ್ರದಿಂದ ಬಹಳ ಮೆಚ್ಚುಗೆಗೆ ಪಾತ್ರಳಾದಳು. ಏಕೆಂದರೆ "ಇದೇ ಮೊದಲ ಬಾರಿಗೆ ಅವಳು ಅನಾಥಶಿಶು ಅಥವಾ ಮಕ್ಕಳ ರಾಣಿ ಪಾತ್ರದಲ್ಲಿ ನಟಿಸದೆ, ಪ್ರಬುದ್ಧ, ಸಂಪೂರ್ಣ ಮಹಿಳೆಯ ಪಾತ್ರದಲ್ಲಿ ನಟಿಸಿದಳು... ಆದರೆ ಈ ಪಾತ್ರದಲ್ಲಿ ಅವಳ ನಿಜವಾದ ರೂಪವನ್ನು ತೋರಿಸಲಿಲ್ಲ... ಅವಳು ಒಂದೇ ಸಮಯದಲ್ಲಿ ಮೇಜಿನ ಸುತ್ತಲಿರುವ ಜೂಜುಗಾರರೊಂದಿಗೆ ಚೆಲ್ಲಾಟ ನಡೆಸುತ್ತಿದ್ದಳು ಮತ್ತು ಅವರನ್ನು ಕೆಣಕಿಸುತ್ತಿದ್ದಳು."[೪೦] ಪೋರ್ಟ್‌ಮ್ಯಾನ್ ದಿ ಸಿಂಪ್ಸನ್ಸ್‌ನ "ಲಿಟಲ್ ಬಿಗ್ ಗರ್ಲ್" ಪ್ರಸಂಗದ 18ನೇ ಅವಧಿಯಲ್ಲಿ ಬಾರ್ಟ್ ಸಂಪ್ಸನ್‌ನ ಗೆಳತಿ ಡರ್ಸಿಗೆ ಕಂಠದಾನ ಮಾಡಿದಳು.[೪೧] 2007ರಲ್ಲಿ ಅವಳು ಪೌಲ್ ಮ್ಯಾಕ್ಕರ್ಟನಿಯ ಮೆಮೊರಿ ಆಲ್‌ಮೋಸ್ಟ್ ಫುಲ್ ಆಲ್ಬಮ್‌ನ ಸಂಗೀತ ವಿಡಿಯೋ "ಡಾನ್ಸ್ ಟುನೈಟ್"ನಲ್ಲಿ ನಟಿಸಿದಳು. ಇದನ್ನು ಮೈಕಲ್ ಗೊಂಡ್ರಿ ನಿರ್ದೇಶಿಸಿದ್ದರು.[೪೨] ವೆಸ್ ಅಂಡರ್ಸನ್‌ರ ಕಿರುಚಿತ್ರ ಹೋಟೆಲ್ ಶೆವಲಿಯರ್ ನಲ್ಲಿ ಪೋರ್ಟ್‌ಮ್ಯಾನ್ ಜಾಸನ್ ಶ್ವೆರ್ಟ್ಸ್‌ಮ್ಯಾನ್‌ರೊಂದಿಗೆ ನಟಿಸಿದಳು. ಈ ಚಿತ್ರದಲ್ಲಿ ಅವಳು ಮೊದಲ ಬಾರಿಗೆ ನಗ್ನತೆಯ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾಳೆ.[೪೩] ಮೇ 2008ರಲ್ಲಿ ಪೋರ್ಟ್‌ಮ್ಯಾನ್ 61ನೇ ವಾರ್ಷಿಕ ಕೇನಸ್ ಫಿಲ್ಮ್ ಫೆಸ್ಟಿವಲ್ ತೀರ್ಪುಗಾರರ ಸಮೂಹದಲ್ಲಿ ಕಿರಿಯ ಸದಸ್ಯೆಯಾಗಿದ್ದಳು.[೪] ಅಲ್ಲದೇ 2009ರಲ್ಲಿ ಬ್ರದರ್ಸ್ ಚಿತ್ರದಲ್ಲಿ ಟೊಬೀ ಮೇಗರ್ ಮತ್ತು ಜಾಕ್ ಗಿಲೆನ್‌ಹಾಲ್‌ರೊಂದಿಗೆ ನಟಿಸಿದಳು. ಈ ಚಿತ್ರ 2004ರಲ್ಲಿ ಬಿಡುಗಡೆಯಾದ ಅದೇ ಹೆಸರಿನ ಡ್ಯಾನಿಷ್ ಚಿತ್ರದ ರಿಮೇಕ್ ಆಗಿದೆ.[೪೪]
ಥೋರ್ ನ ಕೆನ್ನಥ್ ಬ್ರಾನಾಗ್ರ ಮುಂದಿನ ಚಿತ್ರ ರೂಪಾಂತರದಲ್ಲಿ ಜೇನ್ ಫೋಸ್ಟರ್ ಪಾತ್ರದಲ್ಲಿ ಪೋರ್ಟ್‌ಮ್ಯಾನ್‌ಳು ಅಭಿನಯಿಸುತ್ತಿದ್ದಾಳೆ.[೪೫] ಅವಳು ಡ್ಯಾರನ್ ಅರೊನೊಫ್‌ಸ್ಕೈಸ್ ಬ್ಲ್ಯಾಕ್ ಸ್ವಾನ್ ನಲ್ಲಿ ನುರಿತ ನರ್ತಕಿಯಾಗಿ ಅಭಿನಯಿಸಿದ್ದಾಳೆ[೪೬]. ರಿಚರ್ಡ್ ಕೆಲಿಯ ನಿರ್ದೇಶನದಲ್ಲಿ 2010ರ ಪ್ರೈಡ್ ಆಂಡ್ ಪ್ರೆಜ್ಯುಡೈಸ್ ಆಂಡ್ ಜೊಂಬೀಸ್ ಕಾಂದಬರಿಯಾಧಾರಿತ ಚಿತ್ರದಲ್ಲಿ ಎಲಿಜಬೆತ್ ಬೆನಟ್‌ನ ಪಾತ್ರದಲ್ಲಿ ಪೋರ್ಟ್‌ಮ್ಯಾನ್ ನಟಿಸಿದಳು.[೪೭]
ವೈಯಕ್ತಿಕ ಜೀವನ
[ಬದಲಾಯಿಸಿ]ಪೋರ್ಟ್‌ಮ್ಯಾನ್ ಬಾಲ್ಯದಿಂದ ಸಸ್ಯಾಹಾರಿ ಯಾಗಿದ್ದು[೪೮] ಮತ್ತು 2009ರಲ್ಲಿ ಜೋನಥಾನ್ ಸಫ್ರಾನ್ ಫೊಯಿರ್ರ ಈಟಿಂಗ್ ಎನಿಮಲ್ಸ್ ಓದಿದ ನಂತರ ಪಕ್ಕಾ ಸಸ್ಯಹಾರಿಯಾದರು.[೪೯] ಅವರೊಬ್ಬ ಪ್ರಾಣಿ ಹಕ್ಕಗಳ ಪರ ವಾದಿಸುವವರಾಗಿದ್ದರು. ಅವಳು ಪ್ರಾಣಿಯ ಉತ್ಪನ್ನಗಳನ್ನು ತಿನ್ನುವುದಿಲ್ಲ. ಅಲ್ಲದೇತುಪ್ಪಳ, ಹಕ್ಕಿಯ ಗರಿಗಳಿಂದ ತಯಾರಾದ ವಸ್ತು ಅಥವಾ ಚರ್ಮವನ್ನು ಬಳಸುವುದಿಲ್ಲ. ಅವಳು "ತನ್ನೆಲ್ಲ ಪಾದುಕೆಗಳು ಟಾರ್ಗೆಟ್ ಮತ್ತು ಸ್ಟೆಲ್ಲಾ ಮ್ಯಾಕ್‌ಕರ್ಟನಿ ಕಂಪನಿಯದ್ದಾಗಿದೆ" ಎಂದು ಹೇಳಿದ್ದಾಳೆ.[೫೦] 2009ರಲ್ಲಿ ತುಪ್ಪಳ ವಿರೋಧಿ ಆಂದೋಲನದಲ್ಲಿ ಸಮೂಹವನ್ನು ಬೆಂಬಲಿಸಲು PETA ಸಾರ್ವಜನಿಕ ಸೇವೆ ಪ್ರಕಟಣೆಯಲ್ಲಿ ನಟಿ ಎಲಿಸ್ಸಾ ಸುರ್ಸಾರಳೊಂದಿಗೆ ಪೋರ್ಟ್‌ಮ್ಯಾನ್‌ಳು ಕಾಣಿಸಿಕೊಂಡಿದ್ದಳು ಎಂದು ವರದಿಯಾಗಿದೆ.[೫೧] 2007ರಲ್ಲಿ ಅವಳು ತನ್ನದೇ ಆದ ಪಕ್ಕಾ ಸಸ್ಯಗಳಿಂದ ಸಿದ್ದಪಡಿಸಿದ ಪಾದುಕೆಗಳ ಬ್ರ್ಯಾಂಡ್ ಅನ್ನು ಬಿಡುಗಡೆ ಮಾಡಿದಳು.[೫೨]
2007ರಲ್ಲಿ, ನಟಾಲಿಯಾ ಪೋರ್ಟ್‌ಮ್ಯಾನ್ ಗೋರಿಲ್ಲಾಸ್ ಆನ್ ದಿ ಬ್ರಿಂಕ್ ಎಂಬ ಹೆಸರಿನ ಸಾಕ್ಷ್ಯಚಿತ್ರವನ್ನು ಜ್ಯಾಕ್ ಹನ್ನಾರೊಂದಿಗೆ ಚಿತ್ರಿಸಲು ರ್ವಾಂಡಾಕ್ಕೆ ತೆರಳಿದ್ದರು. ನಂತರ ಕೃತಜ್ಞತೆ ನೀಡುವ ಸಮಯದಲ್ಲಿ, ಪೋರ್ಟ್‌ಮ್ಯಾನ್‌ಳನ್ನು ಬೇಬಿ ಗೊರಿಲ್ಲಾ ಗುಕಿನಾ ಎಂದು ಹೆಸರಿಸಲಾಯಿತು. ಹಾಗೆಂದರೆ "ಆಡುವುದು" ಎಂದರ್ಥವಾಗುವುದು.[೫೩] ಪೋರ್ಟ್‌ಮ್ಯಾನ್ ಬಾಲ್ಯದಿಂದಲೂ ಪರಿಸರದ ಪರ ವಾದಿಸುತ್ತಿದ್ದಳು. ಅವಳು ಪರಿಸರ ಹಾಡು ಮತ್ತು ನೃತ್ಯ ಗುಂಪನ್ನು ಸೇರಿದ ನಂತರ, ಅವಳು ವರ್ಲ್ಡ್ ಪೆಟ್ರೋಲ್ ಕಿಡ್ಸ್ ಎಂದು ಪ್ರಸಿದ್ಧಳಾದಳು.[೫೪] ಅವಳು ಒನ್ ವಾಯಿಸ್ ಆಂದೋಲನದ ಸದಸ್ಯಳಾಗಿದ್ದಳು.[೫೫]
ಪೋರ್ಟ್‌ಮ್ಯಾನ್ 2004 ಅಧ್ಯಕ್ಷೀಯ ಚುನಾವಣೆಗೆ ಡೆಮೋಕ್ರ್ಯಾಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಜಾನ್ ಕೆರ್ರಿಯ ಪರ ಪ್ರಚಾರ ಮಾಡಿದ್ದಳು. ಅಲ್ಲದೇ ಬಡತನ ವಿರೋಧಿ ಕಾರ್ಯಕ್ರಮಗಳನ್ನು ಬೆಂಬಲಿಸಿದ್ದಳು. 2004 ಮತ್ತು 2005ರಲ್ಲಿ, ಅವಳು FINCA ಇಂಟರ್‌ನ್ಯಾಷನಲ್‌ನ ಅಂಬಾಸಡರ್ ಆಫ್ ಹೋಪ್ ಆಗಿ, ಉಗಾಂಡಾ, ಗೌಟೆಮಲಾ ಮತ್ತು ಎಕ್ಯುಡೋರ್ಕ್ಕೆ ಪ್ರವಾಸ ಕೈಗೊಂಡಳು. ಈ ಸಂಸ್ಥೆಯು ಬಡರಾಷ್ಟ್ರಗಳಲ್ಲಿ ಮಹಿಳೆಯರಿಗೆ ತಮ್ಮದೇಯಾದ ಸ್ವಂತ ವ್ಯಾಪಾರ ಹೊಂದಲು ಹಣಕಾಸಿನ ಸಹಾಯಕ್ಕಾಗಿ ಸಣ್ಣ ಪ್ರಮಾಣದ ಸಾಲನೀಡುವಿಕೆಯನ್ನು ಉತ್ತೇಜಿಸುವ ಸಂಸ್ಥೆಯಾಗಿದೆ.[೫೬] ಫಿಲಡೆಲ್ಫಿಯಾದಲ್ಲಿ ಲೈವ್ 8 ಎನ್ನುವ ಸಂಗೀತ ಕಾರ್ಯಕ್ರಮದಲ್ಲಿ ವೇದಿಕೆಯ ಹಿಂದುಗಡೆ ನೀಡಿದ ಸಂದರ್ಶನದಲ್ಲಿ ಮತ್ತು PBS ಕಾರ್ಯಕ್ರಮವಾದ ಫಾರಿನ್ ಎಕ್ಸ್‌ಚೇಂಜ್ ವಿದ್ ಫರೀದ್ ಜಕಾರಿಯಾದಲ್ಲಿ, ಅವಳು ಮೈಕ್ರೋಫೈನಾನ್ಸ್ ಬಗ್ಗೆ ಮಾತನಾಡಿದ್ದಳು.[೫೭] ಕಾರ್ಯಕ್ರಮದ ಆತಿಥ್ಯಕಾರ ಫರೀದ್ ಜಕಾರಿಯಾ, ಫ್ಯಾಶನ್ ಕಾರಣಗಳಿಂದ ಹಲವು ಜನಪ್ರಿಯ ವ್ಯಕ್ತಿಗಳನ್ನು ಬದಲಾಗುವುದನ್ನು ನೋಡಿದ್ದೇನೆ. ಆದರೆ ಪೋರ್ಟ್‌ಮ್ಯಾನ್ ತನ್ನ ವಸ್ತುಗಳ ಬಗ್ಗೆ ಕಾಳಜಿಯನ್ನು ಹೊಂದಿದ್ದಾಳೆ ಎಂದು ಹೇಳಿದನು.[೫೮] 29 ಎಪ್ರಿಲ್ 2007ರಂದು ABCಯ ಸಂಡೇ ಮಾರ್ನಿಂಗ್‌ನ ದಿಸ್ ವೀಕ್ ವಿದ್ ಜಾರ್ಜ್ ಸ್ಟೆಫನೊಪೊಲಸ್ ಕಾರ್ಯಕ್ರಮದ "ವಾಯಿಸಸ್" ವಿಭಾಗದಲ್ಲಿ, FINCAಯೊಂದಿಗೆ ತನ್ನ ಕೆಲಸ ಮತ್ತು ಬಡ ರಾಷ್ಟ್ರಗಳಲ್ಲಿ ಅದು ಮಹಿಳೆ ಮತ್ತು ಮಕ್ಕಳಿಗೆ ಹೇಗೆ ಸಹಾಯವನ್ನು ಮಾಡುವುದು ಎನ್ನುವುದನ್ನು ಪೋರ್ಟ್‌ಮ್ಯಾನ್ ಚರ್ಚಿಸಿದಳು.[೫೯] 2007ರಲ್ಲಿ ಸಣ್ಣಪ್ರಮಾಣದ ಹಣಕಾಸಿನ ನೆರವಿನ ಬಗ್ಗೆ ವಿದ್ಯಾರ್ಥಿಗಳನ್ನು ಜಾಗ್ರತಗೊಳಿಸಲು ಮತ್ತು ಬಡತನ ನಿವಾರಿಸುವುದಕ್ಕೆ ಕುಟುಂಬ ಮತ್ತು ಸಮುದಾಯಗಳಿಗೆ ಸಹಾಯ ಮಾಡಲು ಗ್ರಾಮೀಣ ಬ್ಯಾಂಕಿಂಗ್ ಆಂದೋಲನ ಸೇರುವುದಕ್ಕೆ ಪ್ರೋತ್ಸಾಹಿಸಲು ಹಾರ್ವರ್ಡ್, UCLA, UC ಬೆರ್ಕೆಲಿ, ಸ್ಟ್ಯಾನ್ಫೋರ್ಡ್, ಪ್ರಿನ್ಸ್‌ಟನ್, ನ್ಯೂಯಾರ್ಕ್ ವಿಶ್ವವಿದ್ಯಾಲಯ, ಮತ್ತು ಕೊಲಂಬಿಯಾ ಸೇರಿದಂತೆ ಹಲವು ವಿಶ್ವವಿದ್ಯಾಲಯವನ್ನು ಪೋರ್ಟ್‌ಮ್ಯಾನ್ ಸಂದರ್ಶಿಸಿದಳು.[೬೦]
2008 ಡೆಮೋಕ್ರೇಟಿಕ್ ಪೈಮೇರಿಸ್ ಸಮಯದಲ್ಲಿ, ಪೋರ್ಟ್‌ಮ್ಯಾನ್ ಅಧ್ಯಕ್ಷ ಚುನಾವಣೆಗೆ ಸೆನೆಟರ್ ಹಿಲರಿ ಕ್ಲಿಂಟನ್ ರನ್ನು ಬೆಂಬಲಿಸಿದ್ದಳು. ಆದರೆ "ನಾನು ಒಬಾಮಾರನ್ನು ಇಷ್ಟಪಡುತ್ತೇನೆ. ಅಲ್ಲದೆ ನಾನು ಮ್ಯಾಕ್‌ಕೈನ್‌ರನ್ನು ಇಷ್ಟಪಡುತ್ತೇನೆ. ನಾನು ಅವರ ಯುದ್ಧದ ಬಗೆಗಿನ ನಿಲುವನ್ನು ಒಪ್ಪುವುದಿಲ್ಲ — ಅದು ತುಂಬಾ ಮಹತ್ವದ ವಿಷಯವಾಗಿದೆ — ಆದರೆ ನನ್ನ ಪ್ರಕಾರ ಅವರೊಬ್ಬ ಶಿಷ್ಟಾಚಾರಾದ ವ್ಯಕ್ತಿ" ಎಂದು ಹೇಳಿದಳು.[೬೧] ಸಾರ್ವತ್ರಿಕ ಚುನಾವಣೆ ವೇಳೆ ಅವಳು ಒಬಾಮಾ ಪರ ಪ್ರಚಾರ ಮಾಡಿದ್ದಳು.[೬೨]
ಮರಣಾನಂತರದ ಕುರಿತು ಅವಳನ್ನು ಕೇಳಿದಾಗ, "ನನಗೆ ಅವುಗಳಲ್ಲಿ ನಂಬಿಕೆ ಇಲ್ಲ. ನಾನು ಈಗಿರುವುದನ್ನು ಮಾತ್ರ ನಂಬುತ್ತೇನೆ, ಅಲ್ಲದೇ ಈಗಿರುವುದು ಬದುಕಲು ಉತ್ತಮ ಹಾದಿಯೆಂದು ನಾನು ಭಾವಿಸುತ್ತೇನೆ" ಎಂದು ಹೇಳಿದಳು.[೧೦] ಇಸ್ರೇಲ್‌ನಲ್ಲಿ ಹೆಚ್ಚು ಯಹೂದಿಗಳಿದ್ದು ಮತ್ತು ತನ್ನ ಮಕ್ಕಳು ಯಹೂದಿ ಧರ್ಮದಲ್ಲಿಯೆ ಬೆಳೆಯಬೇಕೆಂಬ ತನ್ನ ಭಾವನೆ ವ್ಯಕ್ತಪಡಿಸಿದಳು: "ತನ್ನ ಮಕ್ಕಳನ್ನು ಯಹೂದಿ ಧರ್ಮದಲ್ಲಿ ಬೆಳೆಸುವುದು ಪ್ರಮುಖವಾಗಿದ್ದು, ಆದರೆ ಅದಕ್ಕೂ ಮಹತ್ವದ ವಿಷಯವೆಂದರೆ ನನ್ನ ಗಂಡನಾಗುವವನು ಉತ್ತಮ ವ್ಯಕ್ತಿಯಾಗಿರಬೇಕು."[೬೩]
ಮೇ 2002ರಂದು ನಡೆದ ವೋಘ್‌ಗೆ ಸಂಬಂಧಿಸಿದಂತೆ, ಪೋರ್ಟ್‌ಮ್ಯಾನ್ ನಟ/ಸಂಗೀತಗಾರ ಲುಕಾಸ್ ಹಾಸ್ ಮತ್ತು ಸಂಗೀತಗಾರ ಮೋಬಿಯನ್ನು ತನ್ನ ಆಪ್ತಮಿತ್ರರು ಎಂದು ಹೇಳಿದ್ದಳು.(2/) ಅಮೆರಿಕಾದ ಜನಪದ ಹಾಡುಗಾರ ದೇವೆಂದ್ರ ಬನ್ಹಾರ್ಟ್ನ[೬೪] "ಕಾರ್ಮೆಸಿಟಾ" ಹಾಡಿನಲ್ಲಿ ನಟಿಸಿದ ನಂತರ, ಆತನೊಂದಿಗೆ ಸಂಬಂಧ ಬೆಳೆಸಿದಳು. ಇದು ಸಪ್ಟೆಂಬರ್ 2008ರಂದು ಕೊನೆಗೊಂಡಿತು.[೬೫]
ಚಲನಚಿತ್ರಗಳ ಪಟ್ಟಿ
[ಬದಲಾಯಿಸಿ]ಚಲನಚಿತ್ರ ಮತ್ತು ಕಿರುತೆರೆ
[ಬದಲಾಯಿಸಿ]ವರ್ಷ | ಶೀರ್ಷಿಕೆ | ಪಾತ್ರ | ಟಿಪ್ಪಣಿಗಳು |
---|---|---|---|
1994 | ಲೆಯೊನ್ | ಮತಿಲ್ದಾ | (ದಿ ಪ್ರೋಫೆಷನಲ್ ಎಂದೂ ಕರೆಯುತ್ತಾರೆ) |
"ಡೆವಲಪಿಂಗ್" | ನಿನಾ | 23 ನಿಮಿಷಗಳ ಕಿರುಚಿತ್ರ | |
1995 | ಹೀಟ್ | ಲಾರೆನ್ ಗುಸ್ಟಾಫ್ಸನ್ | |
1996 | ಬ್ಯುಟಿಫುಲ್ ಗರ್ಲ್ಸ್ | ಮಾರ್ಟಿ | |
ಎವೆರಿಒನ್ ಸೇಸ್ ಐ ಲವ್ ಯು | ಲಾರಾ ಡಂಡ್ರಿಡ್ಜ್ | ||
ಮಾರ್ಸ್ ಅಟ್ಯಾಕ್! | ಟಫಿ ಡೇಲ್ | ||
1999 | Star Wars Episode I: The Phantom Menace | ಪಡ್ಮೆ ಅಮಿಡಲಾ | |
ಎನಿವೇರ್ ಬಟ್ ಹಿಯರ್ | ಅನ್ನ್ ಅಗಸ್ಟ್ | ||
2000 | ವೇರ್ ದ ಹಾರ್ಟ್ ಇಸ್ | ನೋವೆಲೀ ನೇಷನ್ | |
2001 | ಜೂಲೆಂಡರ್ | ಸ್ವತಃ ಅವಳೇ | (ಕಿರುಪಾತ್ರ) |
2002 | Star Wars Episode II: Attack of the Clones | ಪಡ್ಮೆ ಅಮಿಡಲಾ | |
2003 | ಕೋಲ್ಡ್ ಮೌಂಟೈನ್ | ಸಾರಾ | |
2004 | ಗಾರ್ಡನ್ ಸ್ಟೇಟ್ | ಸಾಮಂಥ | |
ಕ್ಲೋಸರ್ | ಅಲೈಸ್ ಅಯರ್ಸ್/ಜೇನ್ ಜಾನ್ಸ್
ಅತ್ಯುತ್ತಮ ಪೋಷಕ ನಟಿಗಾಗಿ ಗೋಲ್ಡನ್ ಗ್ಲೋಬ್ ಅವಾರ್ಡ್ - ಚಲನಚಿತ್ರ | ||
2005 | Star Wars Episode III: Revenge of the Sith | ಪಡ್ಮೆ ಅಮಿಡಲಾ | |
ಫ್ರೀ ಜೋನ್ | ರಿಬೆಕ್ಕಾ | ಎಪ್ರಿಲ್ 2006ರಲ್ಲಿ ಮಿತ US ರಂಗಮಂದಿರ ಬಿಡುಗಡೆಯನ್ನು ಪಡೆಯಿತು | |
2006 | ವಿ ಫಾರ್ ವೆಂಡೆಟ್ಟಾ | ಎವೆರಿ ಹಮ್ಮೊಂಡ್ | |
ಪ್ಯಾರಿಸ್, ಜೆ ಟಿ'ಏಮ್ | ಫ್ರಾನ್ಸಿನ್ | ||
ಗೋಯಾ'ಸ್ ಗೋಸ್ಟ್‌ಸ್ | ಇನೆಸ್ ಬಿಲ್ಬಟುಯಾ & ಅಲಿಸಿಯಾ | ||
2007 | ಮೈ ಬ್ಲೂಬೆರ್ರಿ ನೈಟ್ಸ್ | ಲೆಸ್ಲೀ | |
ದಿ ಡಾರ್ಜಿಲಿಂಗ್ ಲಿಮಿಟೆಡ್ | ಜಾಕ್ಸ್ ಎಕ್ಸ್-ಗರ್ಲ್‌ಫ್ರೆಂಡ್ | ||
"ಹೋಟೆಲ್ ಶೆವಲಿಯರ್" | ಜಾಕ್ಸ್ ಎಕ್ಸ್-ಗರ್ಲ್‌ಫ್ರೆಂಡ್ | ದಿ ಡಾರ್ಜಿಲಿಂಗ್ ಲಿಮಿಟೆಡ್ ಗೆ 13 ನಿಮಿಷಗಳ ಕಿರು ಜಾಹೀರಾತು ತುಣುಕು | |
Mr. ಮಗೊರಿಯಮ್'ಸ್ ವಂಡರ್ ಎಂಪೋರಿಯಮ್ | ಮೋಲಿ ಮಹೋನಿ | ||
2008 | ದಿ ಅದರ್ ಬೋಲಿನ್ ಗರ್ಲ್ | ಅನ್ನೆ ಬೋಲಿನ್ | |
2009 | ನ್ಯೂಯಾರ್ಕ್, ಐ ಲವ್ ಯು | ರಿಫ್ಕಾ | |
ಬ್ರದರ್ಸ್ | ಗ್ರೇಸ್ ಕ್ಯಾಹಿಲ್ | ||
2010 | ಲವ್ ಆಂಡ್ ಅದರ್ ಇಂಪಾಸಿಬಲ್ ಪರ್ಸುಟ್ಸ್ | ಎಮಿಲಿಯಾ ಗ್ರೀನ್‌ಲೀಫ್[೬೬] | |
ಹೆಶರ್
ನಿಕೊಲ್ ನಿರ್ಮಾಣ-ನಂತರದ ಹಂತ | |||
ಯುವರ್ ಹೈನೆಸ್ |
ನಿರ್ಮಾಣ-ನಂತರದ ಹಂತ | ||
ಬ್ಲ್ಯಾಕ್ ಸ್ವಾನ್ | ನಿನಾ
ನಿರ್ಮಾಣ-ನಂತರದ ಹಂತ | ||
2011 | ಥೋರ್ [೪೫] | ಜೇನ್ ಫೋಸ್ಟರ್
ಚಿತ್ರೀಕರಣ ಹಂತದಲ್ಲಿದೆ |
ರಂಗಮಂದಿರ
[ಬದಲಾಯಿಸಿ]ವರ್ಷ | ನಿರ್ಮಾಣ | ಪಾತ್ರ | ಟಿಪ್ಪಣಿಗಳು |
---|---|---|---|
1994 | ರೂತ್‌ಲೆಸ್!! | ||
1997 | ದಿ ಡೈರಿ ಆಫ್ ಅನ್ನೆ ಫ್ರ್ಯಾಂಕ್ | ಅನ್ನೆ ಫ್ರ್ಯಾಂಕ್ | |
2001 | ದಿ ಸೀಗಲ್ |
ಪ್ರಶಸ್ತಿಗಳು
[ಬದಲಾಯಿಸಿ]ಯಶಸ್ಸು ಗಳಿಸಿದೆ
[ಬದಲಾಯಿಸಿ]- 2002 - ಟೀನ್ ಚಾಯಿಸ್ ಅವಾರ್ಡ್ಸ್, ಚಾಯಿಸ್ ಚಿತ್ರನಟಿ: ನಾಟಕ/ಅಭಿನಯ ಸಾಹಸ: Star Wars Episode II: Attack of the Clones
- 2005 - ಗೋಲ್ಡನ್ ಗ್ಲೋಬ್ ಅವಾರ್ಡ್ಸ್, ಮೋಶನ್ ಪಿಕ್ಚರ್ನಲ್ಲಿ ಅತ್ಯುತ್ತಮ ಪೋಷಕ ನಟಿ: ಕ್ಲೋಸರ್
- 2005 - ನ್ಯಾಷನಲ್ ಬೋರ್ಡ್ ಆಫ್ ರಿವ್ಯೂ ಅವಾರ್ಡ್ಸ್, ಅತ್ಯುತ್ತಮ ತಂಡದ ಅಭಿನಯ: ಕ್ಲೋಸರ್ (ಕ್ಲೈವ್ ಒವೆನ್, ಜುಲಿಯಾ ರಾಬರ್ಟ್ಸ್ ಮತ್ತು ಜ್ಯುಡ್ ಲಾಯೊಂದಿಗೆ ಹಂಚಿಕೊಂಡಳು)
- 2005 - ಸ್ಯಾನ್ ಡಿಯೆಗೊ ಫಿಲ್ಮ್ ಕ್ರಿಟಿಕ್ಸ್ ಸೊಸೈಟಿ ಅವಾರ್ಡ್ಸ್, ಅತ್ಯುತ್ತಮ ಪೋಷಕ ನಟಿ: ಕ್ಲೋಸರ್
- 2007 - 2006ರಲ್ಲಿ ವೈಜ್ಞಾನಿಕ ಕಾಲ್ಪನಿಕ ಚಿತ್ರ, TV ಚಲನಚಿತ್ರ, ಅಥವಾ ಚಿಕ್ಕ-ಸರಣಿ: ವಿ ಫಾರ್ ವೆಂಡೆಟ್ಟಾ ನಲ್ಲಿನ ಅಭಿನಯಕ್ಕಾಗಿ ದಿ ಕಾಂಸ್ಟೆಲೇಷನ್ ಅವಾರ್ಡ್ಸ್ ಅತ್ಯುತ್ತಮ ನಟಿ ಪ್ರಶಸ್ತಿ.
- 2007 - ಸಟರ್ನ್ ಅವಾರ್ಡ್ಸ್, ಅತ್ಯುತ್ತಮ ನಟಿ: ವಿ ಫಾರ್ ವೆಂಡೆಟ್ಟಾ
ನಾಮನಿರ್ದೇಶನಗಳು
[ಬದಲಾಯಿಸಿ]- 2000 - ಗೋಲ್ಡನ್ ಗ್ಲೋಬ್ ಅವಾರ್ಡ್ಸ್, ಮೋಶನ್ ಪಿಕ್ಚರ್ನಲ್ಲಿ ಅತ್ಯುತ್ತಮ ಪೋಷಕ ನಟಿ: ಎನಿವೇರ್ ಬಟ್ ಹಿಯರ್
- 2000 - ಟೀನ್ ಚಾಯಿಸ್ ಅವಾರ್ಡ್ಸ್, ಚಾಯಿಸ್ ಚಿತ್ರನಟಿ: ವೇರ್ ದ ಹಾರ್ಟ್ ಇಸ್
- 2000 - ಸಟರ್ನ್ ಅವಾರ್ಡ್ಸ್, ಅತ್ಯುತ್ತಮ ಯುವ ನಟಿ: Star Wars Episode I: The Phantom Menace
- 2003 - ಸಟರ್ನ್ ಅವಾರ್ಡ್ಸ್, ಅತ್ಯುತ್ತಮ ನಟಿ: Star Wars Episode II: Attack of the Clones
- 2005 - ಅಕಾಡಮಿ ಅವಾರ್ಡ್ಸ್, ಅತ್ಯುತ್ತಮ ಪೋಷಕ ನಟಿ: ಕ್ಲೋಸರ್
- 2005 - BAFTA ಅವಾರ್ಡ್ಸ್, ಅತ್ಯುತ್ತಮ ಪೋಷಕ ನಟಿ: ಕ್ಲೋಸರ್
- 2005 - ಸ್ಯಾಟಲೈಟ್ ಅವಾರ್ಡ್ಸ್, ಅತ್ಯುತ್ತಮ ಪೋಷಕ ನಟಿ, ನಾಟಕ: ಕ್ಲೋಸರ್
- 2005 - ಟೀನ್ ಚಾಯಿಸ್ ಅವಾರ್ಡ್ಸ್, ಚಾಯಿಸ್ ಚಿತ್ರನಟಿ: ನಾಟಕ: ಕ್ಲೋಸರ್ , ಗಾರ್ಡನ್ ಸ್ಟೇಟ್ ; ಚಾಯಿಸ್ ಚಿತ್ರನಟಿ: ಅಭಿನಯ/ಸಾಹಸ: Star Wars Episode III: Revenge of the Sith ; ಚಾಯಿಸ್ ಮೂವಿ ಲೈಯರ್, ಗಾರ್ಡನ್ ಸ್ಟೇಟ್ ; ಚಾಯಿಸ್ ಮೂವಿ ಲಿಪ್ಲಾಕ್: ಗಾರ್ಡನ್ ಸ್ಟೇಟ್ ; ಚಾಯಿಸ್ ಮೂವಿ ಲವ್ ಸೀನ್: ಗಾರ್ಡನ್ ಸ್ಟೇಟ್
- 2005 - MTV ಮೂವಿ ಅವಾರ್ಡ್ಸ್, ಅತ್ಯುತ್ತಮ ನಟಿ: Star Wars Episode II: Attack of the Clones ; ಅತ್ಯುತ್ತಮ ಮುತ್ತು: ಗಾರ್ಡನ್ ಸ್ಟೇಟ್
- 2005 - ಬ್ರೋಡ್ಕಾಸ್ಟ್ ಫಿಲ್ಮ್ ಕ್ರಿಟಿಕ್ಸ್ ಅಸೋಸಿಯೇಷನ್ ಅವಾರ್ಡ್ಸ್, ಅತ್ಯುತ್ತಮ ಪೋಷಕ ನಟಿ: ಕ್ಲೋಸರ್ ; ಅತ್ಯುತ್ತಮ ನಟನಾ ತಂಡ: ಕ್ಲೋಸರ್
- 2006 - ಟೀನ್ ಚಾಯಿಸ್ ಅವಾರ್ಡ್ಸ್, ಚಾಯಿಸ್ ಚಿತ್ರನಟಿ: ನಾಟಕ/ಕಥೆ ಸಾಹಸ: ವಿ ಫಾರ್ ವೆಂಡೆಟ್ಟಾ
- 2007 - ಸಟರ್ನ್ ಅವಾರ್ಡ್ಸ್, ಅತ್ಯುತ್ತಮ ನಟಿ: Star Wars Episode III: Revenge of the Sith
ಆಕರಗಳು
[ಬದಲಾಯಿಸಿ]- ↑ ೧.೦೦ ೧.೦೧ ೧.೦೨ ೧.೦೩ ೧.೦೪ ೧.೦೫ ೧.೦೬ ೧.೦೭ ೧.೦೮ ೧.೦೯ ೧.೧೦ ೧.೧೧ ೧.೧೨ ೧.೧೩ ೧.೧೪ "Natalie Portman". Inside the Actors Studio. Season 11. Episode 1101. 2004-11-21. Bravo. Archived from the original on 2007-06-12. https://web.archive.org/web/20070612120454/http://www.bravotv.com/Inside_the_Actors_Studio/guest/Natalie_Portman.
- ↑ D'Angelo, Jennifer (2002-05-23). "Cerebral Celebs Give Up Screen for Studies". FOXNews.com. Fox News Channel. Retrieved 2008-01-24.
- ↑ Poole, Oliver (2002-04-23). "Star Wars actress tells of her own battle with fame". The Daily Telegraph. Retrieved 2009-03-28.
- ↑ ೪.೦ ೪.೧ "Natalie Portman in Cannes". Bauer-Griffin. 2008-05-21. Archived from the original on 2008-12-02. Retrieved 2010-03-29.
{{cite news}}
: Italic or bold markup not allowed in:|publisher=
(help) - ↑ "Rappoport to host Venice Fest - will screen Coen's 'Burn After Reading'". Variety. 2008-08-13.
- ↑ Michael Kane. "Portman Bold ... and Bald ... in 'V for Vendetta'". FOX News. Retrieved 2007-10-18.
- ↑ "A 'Garden State' Of Mind". CBS News. Archived from the original on 2014-10-06. Retrieved 2007-10-18.
- ↑ ೮.೦ ೮.೧ "Starwars.com". Natalie Portman. Archived from the original on 2008-02-01. Retrieved 2006-05-08.
- ↑ "IGN Films". Comic-Con 2005: IGN Interviews Natalie Portman. Archived from the original on 2013-10-30. Retrieved 2006-06-22.
- ↑ ೧೦.೦ ೧೦.೧ ೧೦.೨ Chris Heath. "The Private Life of Natalie Portman". Rolling Stone. Archived from the original on 2006-05-20. Retrieved 2006-05-11.
- ↑ ೧೧.೦ ೧೧.೧ ೧೧.೨ Lynn Hirschberg (Holyday 2007). "Screen Goddess: Natalie Portman". The New York Times Style Magazine.
{{cite news}}
: Check date values in:|date=
(help) - ↑ Stella Papamichael. "Natalie Portman interview". BBC. Retrieved 2006-05-01.
- ↑ "The Harvard Crimson :: News :: Housing Frenzy Welcomes Freshmen". Archived from the original on 2009-06-01. Retrieved 2010-03-29.
- ↑ "Natalie Portman Strikes Back". Archived from the original on 2009-08-29. Retrieved 2010-03-29.
- ↑ Mary-Lea Cox (March 31, 2006). "Hollywood Star Leads Columbia Class in Discussion of Political Violence". Columbia News. Retrieved 2006-04-25.
- ↑ "5 facts about Natalie Portman". Something Jewish. 2002-05-15. Archived from the original on 2006-04-27. Retrieved 2006-05-09.
- ↑ ೧೭.೦ ೧೭.೧ David Letterman (host) (1997-11-24). "Natalie Portman". The Late Show. CBS.
- ↑ "Natalie Portman Shows Off Her German Skills". femalefirst.co.uk. Retrieved 2006-05-09.
- ↑ "Biography for Natalie Portman". IMDb.
- ↑ Bachorz, Boris (May 20, 2005). "'Free Zone': movie on Mideast without borders". ezilon.com. Archived from the original on 2013-10-29. Retrieved 2006-05-09.
- ↑ Hershlag, Natalie (October 1998), "A Simple Method To Demonstrate the Enzymatic Production of Hydrogen from Sugar", Journal of Chemical Education, 75 (10): 1270, archived from the original on 2009-09-28, retrieved 2010-03-29
{{citation}}
: Unknown parameter|coauthors=
ignored (|author=
suggested) (help) - ↑ Baird, Abigail A.; Kagan, J.; Gaudette, T.; Walz, K.A.; Hershlag, Natalie; Boas, D.A. (August 2002), "Frontal Lobe Activation During Object Permanence: Data from Near-Infrared Spectroscopy" (PDF), NeuroImage, Academic Press, 16 (4): 1120–1126, doi:10.1006/nimg.2002.1170
- ↑ ೨೩.೦ ೨೩.೧ James Ryan (February 25, 1996). "UP AND COMING: Natalie Portman; Natalie Portman (Not Her Real Name)". The New York Times.
- ↑ Ariel Levy (November 2005). "Natalie Portman Will Change Your Life". Blender.
- ↑ "Golden Globe winners". BBC NEWS. 2000-01-24.
- ↑ Mary Elizabeth Williams (1999-11-12). "Anywhere But Here". Salon. Archived from the original on 2010-02-18. Retrieved 2010-03-29.
- ↑ Pat O'Brien (host) (1999-08-24). "College Queen". Access Hollywood.
- ↑ Ben Brantley (2001-08-13). "Streep Meets Chekhov, Up in Central Park". The New York Times.
- ↑ "Academy Award Database: Natalie Portman". Academy of Motion Picture Arts and Sciences. Retrieved 2008-03-01.
- ↑ "Golden Globe Award Database: Natalie Portman". Hollywood Foreign Press Association. Retrieved 2008-03-01.
- ↑ "2005 Domestic Grosses". Box Office Mojo. Retrieved 2009-09-15.
- ↑ "Goya's ghosts". Age. 2006-11-10.
- ↑ ""Saturday Night Live" Natalie Portman/Fall Out Boy (2006)".
- ↑ "MSN".[ಶಾಶ್ವತವಾಗಿ ಮಡಿದ ಕೊಂಡಿ]
- ↑ "Video of Portman's appearance on Saturday Night Live".
- ↑ "'SNL' Star Andy Samberg Recruits T-Pain, Justin Timberlake, Norah Jones For New Album". Archived from the original on 2010-04-25. Retrieved 2010-03-29.
- ↑ ೩೭.೦ ೩೭.೧ "ComingSoon.net". Natalie Portman: From A(midala) to V. Retrieved 2006-03-13.
- ↑ "Anarchy in the UK! JoBlo.com talks to V for Vendetta star Natalie Portman". JoBlo.com. Retrieved 2006-03-16.
- ↑ Mike Errico (February 2007). "Hottest Women of ... Film and TV!". Blender.
- ↑ Richard Corliss (2007-05-16). "Blue Skies and Blueberry Nights". TIME. Archived from the original on 2010-06-24. Retrieved 2010-03-29.
{{cite news}}
: Unknown parameter|coauthors=
ignored (|author=
suggested) (help) - ↑ "Portman and Bana flirting with Boleyn film". Reuters. 2006-06-21. Retrieved 2006-06-21.[ಶಾಶ್ವತವಾಗಿ ಮಡಿದ ಕೊಂಡಿ]
- ↑ Liz Corcoran (2007-05-24). "Natalie Portman Stars in New Paul McCartney Video". PEOPLE.
- ↑ "Want to See Nat Naked?". Sky News. 2007-09-28. Archived from the original on 2010-04-13. Retrieved 2007-09-28.
- ↑ Siegel, Tatiana (2007-10-02). "Natalie Portman to star in 'Brothers'". Variety. Retrieved 2007-10-03.
- ↑ ೪೫.೦ ೪೫.೧ "Natalie Portman joins the cast of `Thor'". Associated Press. 2009-07-13. Retrieved 2009-07-04.
- ↑ ಫಸ್ಟ್ ಇಮೇಜ್ ಆಫ್ ನಟಾಲಿಯಾ ಪೋರ್ಟ್‌ಮ್ಯಾನ್ ಆನ್ ದಿ ಸೆಟ್ ಆಫ್ ಬ್ಲಾಕ್ ಸ್ವಾನ್
- ↑ Micheal Flemming (2009-12-11). "Natalie Portman to slay zombies". Variety. Retrieved 2009-12-11.
- ↑ McLean, Craig (2007-11-25). "More than meets the eye". Observer.
- ↑ Natalie Portman (2009-10-28). "Jonathan Safran Foer's Eating Animals Turned Me Vegan". Huffington Post. Retrieved 2009-10-28.
- ↑ PETA ಫ್ಯಾಟಲ್ ಫ್ಯಾಷನ್ ಪೋರ್ಟ್‌ಮ್ಯಾನ್ ಸೇಸ್ 'ನೋ' ಟು ಫುರ್, ಲೇದರ್ ಆಂಡ್ ಫೀದರ್ Archived 2007-10-28 ವೇಬ್ಯಾಕ್ ಮೆಷಿನ್ ನಲ್ಲಿ. ಅಕ್ಟೋಬರ್ 30ರಂದು ಪರಿಷ್ಕರಿಸಲಾಯಿತು
- ↑ Sana, Elena (2008-07-04). "Lucas and Sursara Fight the Fur, do PETA with Portman". Ecorazzi.com. Archived from the original (Reprint from Ecorazzi) on 2012-01-31. Retrieved 2008-07-10.
- ↑ "Natalie Portman's vegan shoe line". China Daily. 2007-12-26.
- ↑ Ileane Rudolph (October 26, 2007). "Natalie Portman Braves the Jungle's Species". TV Guide.
- ↑ ""CBS Late Show with David Letterman"". 2006-03-14. Retrieved 2008-04-13.
- ↑ "ಅಧಿಕೃತ ವೈಬ್‌ಸೈಟ್". Archived from the original on 2010-10-06. Retrieved 2010-03-29.
- ↑ "Celebrating 20 Years of Village Banking". villagebanking.org. Retrieved 2006-05-01.
- ↑ "In Focus: Natalie Portman and Microfinance". foreignexchange.tv. Archived from the original on 2007-10-07. Retrieved 2006-05-01.
- ↑ Press, Joy (August 16, 2005). "The Interpreter". The Village Voice. Archived from the original on 2010-04-03. Retrieved 2010-03-29.
- ↑ "Voices, Funnies, and In Memoriam". ABC News. May 3, 2007.
- ↑ "FINCA in the News". Archived from the original on 2012-02-07. Retrieved 2008-01-06.
- ↑ Levy, Ariel (2008-03-05). "The Natural". Elle. Retrieved 2009-11-25.
- ↑ "Obama's presidential campaign is getting help in Toledo this weekend". 2008-10-12. Archived from the original on 2011-06-29. Retrieved 2010-03-29.
- ↑ "Help find Natalie a Jewish man". Ynetnews. 2006-07-10.
- ↑ ""Trans World News: Natalie Portman Dating Devendra Barnhart"". 2008-04-10. Archived from the original on 2008-04-14. Retrieved 2008-04-12.
- ↑ ""Devendra Barnhart splits with Natalie Portman"". 2008-09-25. Retrieved 2009-07-03.
- ↑ "Natalie Portman falls in 'Love'". Variety. 2008-10-27. Retrieved 2008-10-29.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Pages containing cite templates with deprecated parameters
- CS1 errors: markup
- CS1 errors: dates
- CS1 errors: unsupported parameter
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Commons category link from Wikidata
- 1930ರಲ್ಲಿ ಜನಿಸಿದವರು
- ಈಗಿರುವ ವ್ಯಕ್ತಿಗಳು
- ಅಮೆರಿಕಾದ ಬಾಲ್ಯ ನಟರು
- ಅಮೆರಿಕನ್ ಚಿತ್ರ ನಟರು
- ಅಮೆರಿಕನ್ ಯಹೂದಿಗಳು
- ಅಮೆರಿಕಾದ ಸಸ್ಯಹಾರಿಗಳು
- ಅತ್ಯುತ್ತಮ ಪೋಷಕ ನಟಿ ಗೋಲ್ಡನ್ ಗ್ಲೋಬ್ (ಚಲನಚಿತ್ರ) ವಿಜೇತರು
- ಹಾರ್ವರ್ಡ್ ವಿಶ್ವವಿದ್ಯಾಲಯದ ಅಲುಮ್ನಿ
- ಇಸ್ರೇಲಿ-ಅಮೆರಿಕನ್ನರು
- ಇಸ್ರೇಲಿ ಚಿತ್ರ ನಟರು
- ಇಸ್ರೇಲಿ ಯಹೂದಿಗಳು
- ಇಸ್ರೇಲಿ ಸಸ್ಯಹಾರಿಗಳು
- ರೋಮೆನಿಯಾ ವಂಶದ ಇಸ್ರೇಲಿಗಳು
- ಯಹೂದಿ ನಟರು
- ಜೆರುಸಲೆಮ್ನಿಂದ ಬಂದ ಜನರು
- ನಸುವಾ ದೇಶದ ಜನರು, ನ್ಯೂಯಾರ್ಕ್
- ಸಾಟರ್ನ್ ಪ್ರಶಸ್ತಿ ವಿಜೇತರು
- ಹಾಲಿವುಡ್ ಚಲನಚಿತ್ರ ಕಲಾವಿದರು
- ಚಲನಚಿತ್ರ ನಟಿಯರು