ಪೈಥಾಗರಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪೈಥಾಗರಸ್ (Πυθαγόρας)
ಜನನಕ್ರಿ.ಪೂ. 570
ಮರಣಕ್ರಿ.ಪೂ. 495
ಕಾಲಮಾನಸಾಕ್ರೆಟಸ್ ಪೂರ್ವ ತತ್ತ್ವಶಾಸ್ತ್ರ
ಪ್ರದೇಶಪೈಥಾಗರಸ್
ಪರಂಪರೆಪೈಥಾಗರಿಯನಿಸ್ಮ್
ಮುಖ್ಯ  ಹವ್ಯಾಸಗಳುತಾತ್ವಿಕ ಸಿದ್ಧಾಂತ, ಸಂಗೀತ, ಗಣಿತ, ನೀತಿಶಾಸ್ತ್ರ, ರಾಜ್ಯಶಾಸ್ತ್ರ
ಗಮನಾರ್ಹ ಚಿಂತನೆಗಳುಮ್ಯೂಸಿಕಾ ಯೂನಿವರ್ಸಾಲಿಸ್, ಚಿನ್ನದ ಅನುಪಾತ, ಪೈಥಾಗರಿಯನ್ ಟ್ಯೂನಿಂಗ್, ಪೈಥಾಗರಿಯನ್ ಪ್ರಮೇಯ

ಸಮೊಸ್‌ನ ಪೈಥಾಗರಸ್ (Greek: Ὁ Πυθαγόρας ὁ Σάμιος , O Pūthagoras o Samios , "ಪೈಥಾಗರಸ್ ದಿ ಸಮಿಯನ್‌", ಅಥವಾ ಸರಳವಾಗಿ ಈ ಅವಧಿಯಲ್ಲಿὉ Πυθαγόρας; c. 570-c. 495 BC[೧]) ಒಬ್ಬ ಅಯಾನಿಯನ್‌ ಪಂಗಡದ ಗ್ರೀಕ್‌ ತತ್ವಜ್ಞಾನಿ. ಪೈಥಾಗರಿಯನಿಸಮ್‌ ಎಂಬ ಧಾರ್ಮಿಕ ಪಂಥದ ಚಳವಳಿನ್ನು ಹುಟ್ಟುಹಾಕಿದರು. ಇವರನ್ನು ಒಬ್ಬ ಮಹಾನ್‌ ಗಣಿತಜ್ಞ, ಸಂತ ಮತ್ತು ವಿಜ್ಞಾನಿಯೆಂದು ಗೌರವಿಸಲಾಗಿದೆ. ಆದರೂ, ಕೆಲವರು ಗಣಿತ ಮತ್ತು ನೈಸರ್ಗಿಕ ತತ್ವಶಾಸ್ತ್ರಕ್ಕೆ ಇವರ ಕೊಡುಗೆಯ ವ್ಯಾಪ್ತಿಯನ್ನು ಪ್ರಶ್ನಿಸಿದ್ದಾರೆ. 'ಗ್ರೀಕರಲ್ಲಿ ಅತ್ಯಂತ ಸಮರ್ಥ ತತ್ವಜ್ಞಾನಿ'ಯೆಂದು ಹೆರೊಡೊಟಸ್‌ ಅಭಿಪ್ರಾಯಪಟ್ಟಿದ್ದಾರೆ. ಅವರ ಹೆಸರು ಪೈಥಿಯನ್‌ ಅಪೊಲೊದೊಂದಿಗೆ ಸೇರಿಸಲಾಯಿತು. 'ಪೈಥಿಯನ್‌ (ಪೈಥ್‌-ಭವಿಷ್ಯವಾಣಿ=ಅಲ್ಲಿನ ಪವಿತ್ರ ಗ್ರಂಥ- ‌)ದಷ್ಟೇ (ಅಗೊರ್‌- )ನಿಜ ನುಡಿಯುತ್ತಿದ್ದರು' ಎಂದು ಅರಿಸ್ಟಿಪಸ್‌ ಪೈಥಾಗರಸ್‌ರ ಹೆಸರನ್ನು ವಿವರಿಸಿದ್ದಾರೆ. ಗರ್ಭಿಣಿಯಾಗಿದ್ದ ಅವರ ತಾಯಿಯು ಒಬ್ಬ ಮೇಧಾವಿ ವ್ಯಕ್ತಿಗೆ ಜನ್ಮ ನೀಡುವಳೆಂಬ ಪೈಥಿಯಾ ಭವಿಷ್ಯ ನುಡಿದ ಕಥೆಯನ್ನು ಇಯಾಂಬ್ಲಿಕಸ್‌ ಹೇಳುತ್ತಾರೆ.[೨] ಪೈಥಾಗರಸ್ ಎಂಬಾತ ಹುಟ್ಟಿ ಇಡೀ ಮನುಕುಲಕ್ಕೇ ಉಪಕಾರಿಯಾಗುತ್ತಾನೆ ಎಂದು ಆಗ ಭವಿಷ್ಯ ನುಡಿಯಲಾಗಿತ್ತು. ಈತ ಜಾಣ, ಆಕರ್ಷಕ ಹಾಗು ಅಪಾರ ಮನ್ನಣೆಯ ವ್ಯಕ್ತಿಯಾಗುತ್ತಾನೆಂದೂ ಹೇಳಲಾಗಿತ್ತು.

ಪೈಥಾಗರಿಯನ್‌ ಪ್ರಮೇಯಕ್ಕಾಗಿ ಅವರು ಹೆಚ್ಚು ಪ್ರಖ್ಯಾತರಾಗಿದ್ದಾರೆ. ಅವರನ್ನು 'ಸಂಖ್ಯಾಶಾಸ್ತ್ರದ(ಅಂಕಿ-ಸಂಖ್ಯೆಗಳ) ಪಿತಾಮಹ' ಎಂದು ಕರೆಯಲಾಗುತ್ತದೆ. ಆರನೆಯ ಶತಮಾನ BCಯ ಉತ್ತರಾರ್ಧದಲ್ಲಿ ಪೈಥಾಗರಸ್‌ ತತ್ವಜ್ಞಾನ ಮತ್ತು ಧಾರ್ಮಿಕ ಬೋಧನೆಗೆ ಅಪಾರ ಕೊಡುಗೆ ನೀಡಿದರು. ಸಾಕ್ರೆಟಿಸ್‌-ಪೂರ್ವ ಸಮಕಾಲೀನರಿಗೆ ಹೋಲಿಸಿದರೆ, ಇವರ ಕಾರ್ಯಗಳು ದಂತಕಥೆ ಮತ್ತು ಬೆರಗುಗಳಡಿ ಮರೆಮಾಚಿಹೋಗಿತ್ತು. ಆದ್ದರಿಂದ, ಇವರ ಜೀವನ ಮತ್ತು ಬೋಧನೆಗಳ ಕುರಿತು ನಿಖರವಾದ ಮಾಹಿತಿಯು ದೊರೆಯಲಾರದು. ದೈನಂದಿನ ಆಗುಹೋಗುಗಳು ಗಣಿತಶಾಸ್ತ್ರಕ್ಕೆ ಬಹುಮಟ್ಟಿಗೆ ಸಂಬಂಧಿಸಿವೆ ಎಂದು ಪೈಥಾಗರಸ್‌ ಮತ್ತವರ ಶಿಷ್ಯರು ನಂಬುತ್ತಿದ್ದರು. ಎಲ್ಲದಕ್ಕೂ ಅಂಕಿಅಂಶಗಳೇಆಧಾರ ಮತ್ತು ವಾಸ್ತವಾಂಶವೇ ಅಂತಿಮ. ಗಣಿತಶಾಸ್ತ್ರದ ಮೂಲಕವೇ ಎಲ್ಲದಕ್ಕೂ ಮುನ್ಸೂಚನೆ ಪಡೆದು ನಿಖರತೆಯನ್ನು ಊಹಿಸಲು ಸಾಧ್ಯವಿದೆ., ಅವುಗಳನ್ನು ಲಯಬದ್ಧ ಕ್ರಮಗಳಲ್ಲಿ ಅಳೆಯಬಹುದು ಎಂಬುದು ಅವರ ವಾದವಾಗಿತ್ತು. ಚಾಲ್ಸಿಸ್‌ಇಯಾಂಬ್ಲಿಕಸ್‌ರ ಪ್ರಕಾರ, 'ಅಂಕಿಗಳೇ ಸ್ವರೂಪದ ಆಧಾರ' ದೇವರು ಮತ್ತು ಸೈತಾನಗಳಗುಣಲಕ್ಷಣಗಳು ಮತ್ತು ಯೋಚನಾ ಲಹರಿಯನ್ನು ಗುರ್ತಿಸಲು ಅಂಕಿಅಂಶಗಳೇ ಮೂಲಾಧಾರ' ಎಂದು ಪೈಥಾಗರಸ್‌ ಒಮ್ಮೆ ಹೇಳಿದ್ದರು.

ತಮ್ಮನ್ನು ತಾವೇ ಒಬ್ಬ ತತ್ವಜ್ಞಾನಿ ಅಥವಾ ಚಾಣಾಕ್ಷ, ಕೌಶಲ್ಯಗಳ ಪ್ರೇಮಿ[೩] ಎಂದು ಕರೆದುಕೊಳ್ಳುವಲ್ಲಿ ಅವರೇ ಮೊದಲಿಗರೆನ್ನಬಹುದು. ಪೈಥಾಗರಿಯನ್‌ ತತ್ವಗಳು ಖಗೋಳಜ್ಞ ಪ್ಲಾಟೊರ ಮೇಲೆ ಗಮನಾರ್ಹ ಪ್ರಭಾವ ಬೀರಿದ್ದವು. ದುರದೃಷ್ಟವಶಾತ್‌, ಅವರ ಯಾವುದೇ ಬದುಕಿನ ಚಿತ್ರಣ ಬರಹದಲ್ಲಿ ಉಳಿದುಕೊಳ್ಳಲಿಲ್ಲ. ಆದ್ದರಿಂದ ಪೈಥಾಗರಸ್‌ ಬಗ್ಗೆ ಮಾಹಿತಿ ಲಭ್ಯತೆ ಕಡಿಮೆ. ಪೈಥಾಗರಸ್‌ಗೆ ಸಂದ ಪ್ರಖ್ಯಾತಿ ವಾಸ್ತವಿಕವಾಗಿ ಅವರ ಸಮಕಾಲೀನರ ಅಥವಾ ಅವರ ಉತ್ತರಾಧಿಕಾರಿಗಳ ಶ್ರಮದ ಪ್ರತಿಫಲ ಆಗಿರಬಹುದು.

ಜೀವನಚರಿತ್ರೆಯ ಆಕರಗಳು[ಬದಲಾಯಿಸಿ]

ಪೈಥಾಗರಸ್‌ರ ಜೀವನದ ಬಗ್ಗೆ ಲಭ್ಯ ಮಾಹಿತಿ ತೀರ ಕಡಿಮೆ. ಅವರ ಬಗೆಗಿನ ಮಾಹಿತಿಯಲ್ಲಿ ಬಹುಪಾಲು ಬಹಳ ತಡವಾಗಿ ಹೊರಬಂದಿವೆ. ಅವು ವಿಶ್ವಸನೀಯವೆಂದೂ ಹೇಳಲಾಗದು. ಹೀಗಾಗಿ ಅವರ ಜೀವನದ ಅಸ್ಪಷ್ಟ ಆಕೃತಿಯಷ್ಟೇ ಲಭಿಸಲು ಸಾಧ್ಯ. ಅವರ ಸುತ್ತಲಿನ ವಿಷಯಗಳ ಬಗೆಗಿನ ರಹಸ್ಯದ ಕಾರಣ ಪೈಥಾಗರಸ್‌ ಕುರಿತ ಮಾಹಿತಿಗಳು ಬಹುಶಃ ಅಲಭ್ಯವಾಗಿ ಉಳಿದವು.ಸಮಕಾಲೀನರಲ್ಲಿನ ಮಾಹಿತಿ ಕೊರತೆ ಮತ್ತು ಪೈಥಾಗರಿಯನ್ನರ ರಹಸ್ಯ ಕಾಪಾಡುವ ಸೂತ್ರಗಳು ಪೂರ್ಣ ಮಾಹಿತಿಗೆ ತೊಡಕಾಗಿವೆ. ನಿಯೊಪ್ಲಾಟೊನಿಸ್ಟ್‌(ನವ್ಯ-ಪ್ಲಾಟಿನೊಗಳು) ಬರಹಗಾರರು, ಅಲ್ಲಲ್ಲಿ ಹುಟ್ಟಿಕೊಂಡಿದ್ದ ಕಥೆಗಳನ್ನು ಆಧರಿಸಿ, ಅದರಿಂದ ಪೈಥಾಗರಸ್‌ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದರು. ಆದರೂ ಯಾವ ಮಾಹಿತಿ ನಿಜ ಸಂಬಂಧಿತ ಮತ್ತು ಯಾವುದು ದಿವ್ಯವೆಂಬುದನ್ನು ಅವರು ಗಹನವಾಗಿ ಪರಿಶೀಲಿಸಿರಲಿಲ್ಲ.[೪] ಈ ರೀತಿ ಹಲವಾರು ಕಲ್ಪನೆಗಳು ಹುಟ್ಟಿಕೊಂಡವು. ಉದಾಹರಣೆಗೆ, ಅಪೊಲೊ ಇವರ ತಂದೆಯಾಗಿದ್ದರೆಂದು; ಪೈಥಾಗರಸ್‌ ಅಲೌಕಿಕ ಪ್ರಭೆಯಂತೆ ಪ್ರಕಾಶಿಸುತ್ತಿದ್ದರು; ಅವರಿಗೆ ಚಿನ್ನದ ತೊಡೆಇದೆ ಎಂಬ ಗುಣವಾಚಕವಿತ್ತೆಂದು ಹೇಳಲಾಗುತ್ತಿತ್ತು. ಅಲ್ಲದೇ ಅಬಾರಿಸ್‌ ಎಂಬ ದೇವಧೂತನು ಚಿನ್ನದ ಬಾಣದ ಮೇಲೆ ಹಾರಿ ಇವರಲ್ಲಿಗೆ ಬಂದನೆಂದು; ಒಂದೇ ಹೊತ್ತಿಗೆ ಹಲವೆಡೆ ಕಾಣಿಸಿಕೊಳ್ಳುತ್ತಿದ್ದರೆಂದು[೫] ಊಹಾಪೋಹಗಳ ಸಾಲೇ ಹುಟ್ಟಿಕೊಂಡವು. ಪ್ರಮುಖ ಬರಹಗಾರರಾದಕ್ಸೆನೊಫೆನ್ಸ್, ಹೆರಾಕ್ಲಿಟಸ್‌, ಹೆರೊಡೊಟಸ್‌, ಪ್ಲಾಟೊ, ಅರಿಸ್ಟಾಟಲ್ ಮತ್ತು ಐಸೊಕ್ರೆಟ್ಸ್‌ - ಇವರಿಂದ ಕೆಲವು ಟಿಪ್ಪಣಿಗಳನ್ನು ಹೊರತುಪಡಿಸಿ, ಜೀವನಚರಿತ್ರೆಯ ವಿಸ್ತೃತ ಮಾಹಿತಿಗಾಗಿ ಡಯೊಜೀನ್ಸ್‌ ಲೇರ್ಷಿಯಸ್‌, ಪೊರ್ಫಿರಿ ಮತ್ತು ಇಯಾಂಬ್ಲಿಕಸ್‌ರನ್ನು ಅವಲಂಬಿಸಲಾಗುತ್ತಿದೆ. ಅರಿಸ್ಟಾಟಲ್ , ಪೈಥಾಗರಿಯನ್‌ ಪಂಥೀಯರ ಮೇಲೆ ಪ್ರತ್ಯೇಕವಾಗಿ ದಾಖಲಿಸಿದ್ದರೂ ಸಹ, ದುರದೃಷ್ಟವಶಾತ್ ಅದು ಅಸ್ತಿತ್ವ ಕಳೆದುಕೊಂಡಿದೆ ಅಥವಾ ಚಾಲ್ತಿಯಲ್ಲಿಲ್ಲ.[೬] ಅವರ ಶಿಷ್ಯರಾದ ಡಿಸಿಯಾರ್ಚಸ್‌, ಅರಿಸ್ಟೊಕ್ಸನಸ್‌ ಮತ್ತು ಹೆರಾಕ್ಲಿಡಸ್‌ ಪಾಂಟಿಕಸ್‌ ಇದೇ ವಿಷಯ ಕುರಿತು ಬರೆದಿದ್ದರು. ತಮ್ಮದೇ ಆದ ಸಂಶೋಧನೆಗಳಲ್ಲದೆ,ಬರಹಗಾರರಾದ ಪೊರ್ಫಿರಿ ಮತ್ತು ಇಯಾಂಬ್ಲಿಕಸ್‌ ಮೇಲ್ಕಂಡ ಅಧಿಕೃತ ಮೂಲಗಳಿಂದ ಕೆಲವು ಮಾಹಿತಿಯನ್ನು ಸಂಗ್ರಹಿಸಿದ್ದರು. ಇದರಿಂದಾಗಿ, ಇತಿಹಾಸಕಾರರು ಕೇವಲ ಸಂಭಾವ್ಯತೆಯನ್ನಾಧರಿಸಿದ ಹೇಳಿಕೆಗಳನ್ನು ಪರಿಗಣಿಸುತ್ತಿದ್ದರಷ್ಟೆ. ಆದರೂ, ಪೈಥಾಗರಸ್‌ ಬಗ್ಗೆ ಎಲ್ಲಾ ಕಥೆಗಳು ಸತ್ಯವಾಗಿದ್ದಲ್ಲಿ, ಅವರ ಚಟುವಟಿಕೆಗಳ ವ್ಯಾಪ್ತಿಯು ಬಹಳ ವಿಸ್ತಾರವಾಗಿರುತಿತ್ತು.[೭]

ಬದುಕು[ಬದಲಾಯಿಸಿ]

ವ್ಯಾಟಿಕನ್‌ನಲ್ಲಿ ಪೈಥಾಗರಸ್‌ರ ಪ್ರತಿಮೆ

ಪೈಥಾಗರಸ್‌ ಮ್ನೆಸಾರ್ಚಸ್‌ರ ಪುತ್ರ ಎಂಬುದನ್ನು ಹೆರೊಡೊಟಸ್‌ ಖಚಿತಪಡಿಸಿದ್ದಾರೆ. ಪೂರ್ವ ಏಜಿಯನ್‌ನಲ್ಲಿರುವ ಸಮೊಸ್‌ ಎಂಬ ಗ್ರೀಕ್‌ ದ್ವೀಪವು ಅವರ ಜನ್ಮಸ್ಥಳವೆಂದು ಐಸಾಕ್ರೆಟ್ಸ್‌ ಪ್ರತಿಪಾದಿಸಿದ್ದಾರೆ.[೮] ಬಹುಕಾಲದ ನಂತರ ದೊರೆತ ಮೂಲವೊಂದರ ಪ್ರಕಾರ ತಾಯಿಯ ಹೆಸರು ಪೈಥಿಯಾಸ್‌.[೯] ಎಂದು ಉಲ್ಲೇಖಿಸಲಾಗಿದೆ. ಅವರ ತಂದೆ ವಜ್ರದ ಶಿಲ್ಪಿ ಅಥವಾ ವ್ಯಾಪಾರಿಯಾಗಿದ್ದರು. ಪಾಲಿಕ್ರೆಟ್ಸ್‌ ಆಳ್ವಿಕೆಯ ಕಾಲದಲ್ಲಿ, 40 ವರ್ಷ ವಯಸ್ಸಿನ ಪೈಥಾಗರಸ್‌, ಸಮೊಸ್‌ ಪಟ್ಟಣವನ್ನು ತೊರೆದರು ಎಂದು ಅರಿಸ್ಟೊಕ್ಸೆನಸ್‌ ಹೇಳಿದ್ದಾರೆ. ಇದರಂತೆ ಪೈಥಾಗರಸ್‌ರ ಜನ್ಮ ಸುಮಾರು 570 BC ಹಿಂದೆ ಎಂದು ತರ್ಕಿಸಬಹುದು.[೧೦]

ಪುರಾತನ ಇತಿಹಾಸಗಾರರು ಪೈಥಾಗರಸ್‌ರ ಅಸಾಧಾರಣ ವ್ಯಕ್ತಿತ್ವದ ಮೂಲಗಳ ಬಗ್ಗೆ ಆಸಕ್ತಿ ತೋರಿದ್ದು ಸಹಜವಾಗಿತ್ತು. ಆದರೂ, ಖಚಿತ ಮಾಹಿತಿಯ ಗೈರುಹಾಜರಿಯಿಂದಾಗಿ, ಪೈಥಾಗರಸ್‌ಗೆ ಶಿಕ್ಷಣ ನೀಡಲು ಬೋಧಕರ ದಂಡನ್ನೇ ನೇಮಿಸಲಾಗಿತ್ತು. ಕೆಲವರು ಅವರ ತರಬೇತಿಯನ್ನು ಸಂಪೂರ್ಣವಾಗಿ ಗ್ರೀಕ್‌ ಮಾಧ್ಯಮದಲ್ಲಿ ನೀಡಿದರು. ಇನ್ನು ಕೆಲವರು ವಿಶೇಷವಾಗಿ ಈಜಿಪ್ಟಿಯನ್‌ ಮತ್ತು ಪೂರ್ವಾತ್ಯ ದೇಶದ ಮಾದರಿಯಲ್ಲಿ ಶಿಕ್ಷಣ ನೀಡಿದರು. ಕ್ರಿಯೊಫಿಲಸ್‌,[೧೧] ಹರ್ಮೊಡಮಸ್‌,[೧೨] ಬಯಾಸ್‌,[೧೧] ಥೇಲೆಸ್‌,[೧೧] ಅನಕ್ಸಿಮಾಂಡರ್‌[೧೩] ಮತ್ತು ಸೈರೊಸ್‌ನ ಫೆರೆಸಿಡೆಸ್‌[೧೪] ಪೈಥಾಗರಸ್‌ರ ಮಾಹಿತಿ ಕಣಜ ಮತ್ತು ಶಿಕ್ಷಕರಾಗಿದ್ದರೆಂದು ಉಲ್ಲೇಖಿಸಲಾಗಿದೆ. ಈಜಿಪ್ಟಿಯನ್ನರು ಅವರಿಗೆ ರೇಖಾಗಣಿತ, ಫೀನಿಷಿಯನ್ನರು ಅಂಕಗಣಿತ, ಚಾಲ್ಡಿಯನ್ನರು ಖಗೋಳಶಾಸ್ತ್ರ, ಮ್ಯಾಗಿಯನ್ನರು ಜೀವನಮೌಲ್ಯ, ಅಗತ್ಯವಾದ ಧರ್ಮ ಮತ್ತು ಲೌಕಿಕ ಅಂಶಗಳನ್ನು ಬೋಧಿಸಿದರು.[೧೫] ಇವರಲ್ಲಿ ಗ್ರೀಕ್‌ ಅಧ್ಯಾಪಕರ ಪೈಕಿ ಫೆರೆಸಿಡೆಸ್‌ರ ಹೆಸರನ್ನು ಹಲವೆಡೆ ಉಲ್ಲೇಖಿಸಲಾಗಿದೆ.

ತಮ್ಮ ಜ್ಞಾನ ದಾಹ ತೀರಿಸಿಕೊಳ್ಳಲು ಪೈಥಾಗರಸ್‌ ದೀರ್ಘಕಾಲಿಕ ಪ್ರವಾಸ ಕೈಗೊಂಡರು. ಈಜಿಪ್ಟ್‌ ಮಾತ್ರವಲ್ಲದೆ, ಅರಬಿಯಾ, ಫೀನಿಷಿಯಾ, ಜೂಡಿಯಾ, ಬೆಬಿಲಾನ್‌ ಮತ್ತು ಭಾರತ ದೇಶಗಳಿಗೆ ಭೇಟಿ ನೀಡಿದ್ದರೆಂದು ನಂಬಲಾಗಿದೆ. ಇವರು ದೇವರುಗಳ, ಅತೀಂದ್ರಿಯ ರಹಸ್ಯಗಳನ್ನು ಅರಿಯಲು ಈ ದೇಶಗಳಲ್ಲಿನ ಜ್ಞಾನಮೂಲಗಳನ್ನು ಅರಸಿದ್ದರು.[೧೬] ಬೆಬಿಲಾನ್‌ನತ್ತ ಪ್ರಯಾಣ ಮಾಡಿದ ಸಾಧ್ಯತೆ ಇದೆ; ಆದರೆ ಇದು ಪ್ರಯಾಸಕರ ಮತ್ತು ಕಷ್ಟಕರವಾಗಿತ್ತು.ಇದನ್ನು ಅಸಂಭವನೀಯ ಎಂದು ವ್ಯಾಖ್ಯಾನಿಸಬಹುದಾಗಿದೆ.

ಅವರು ಈಜಿಪ್ಟ್‌ಗೆ ಭೇಟಿ ನೀಡಿದ್ದರು ಎಂಬದನ್ನು ಹಲವು ಪುರಾತನ ಲೇಖಕರು  ಸಮರ್ಥಿಸಿದ್ದಾರೆ.[೧೭]  ಕುತೂಹಲ ಮನೋಭಾವವುಳ್ಳ ಗ್ರೀಕರು ಈಜಿಪ್ಟ್‌ನತ್ತ ಆಕರ್ಷಿತರಾದರು. ಈಜಿಪ್ಟ್‌ನೊಂದಿಗೆ ಸಮೊಸ್‌ ಮತ್ತು ಗ್ರೀಸ್‌ನ ಇತರೆ ಭಾಗಗಳ ಸಂಪರ್ಕವಿತ್ತೆಂಬುದನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಲಾಗಿದೆ.[೧೮]

ಈಜಿಪ್ಟ್‌ನ ಪಾದ್ರಿಗಳಿಗೆ ಪೈಥಾಗರಸ್‌ ಅದೆಷ್ಟರ ಮಟ್ಟಿಗೆ ಋಣಿಯಾಗಿದ್ದರು; ಅಥವಾ ಅವರಿಂದ ಏನನ್ನಾದರೂ ಕಲಿತರೆಂಬುದನ್ನು ನಿರ್ಣಯಿಸುವುದು ಸುಲಭದ ಮಾತಲ್ಲ. ಪೈಥಾಗರಿಯನ್ನರು ರೂಪಿಸಿಕೊಂಡ ಸಾಂಕೇತಿಕ ನಿರೂಪಣಾ ಶೈಲಿಯಲ್ಲಿ ಈಜಿಪ್ಟ್‌ ಮೂಲದ ಯಾವುದೇ ಕುರುಹು ಕಂಡುಬರಲಿಲ್ಲ. ರಹಸ್ಯ ಧಾರ್ಮಿಕ ಆಚರಣೆಗಳು ಗ್ರೀಕ್‌ ಧರ್ಮ ಧ್ಯೇಯದಲ್ಲಿ ಒಳಗೊಂಡಿರುವುದನ್ನು ಬಿಟ್ಟರೆ ಇನ್ಯಾವುದರ ಸುಳಿವನ್ನೂ ನೀಡಲಿಲ್ಲ. (ಪೈಥಾಗರಸ್ ಅವರ ಧಾರ್ಮಿಕ ಚಳವಳಿಯ ಅನುಯಾಯಿಗಳನ್ನು ಪೈಥಾಗರಿಯನ್ನರು ಅಥವಾ ಧಾರ್ಮಿಕ ಪಂಥದ ಬೆಂಬಲಿಗರು ಎಂದು ಊಹಿಸಬಹುದಾಗಿದೆ.) ಆ ಯುಗದ ಸಾಮಾನ್ಯ ಪ್ರಭಾವಗಳಿಗೆ ಒಳಗಾಗುವ ಗ್ರೀಕರ ಮನಸ್ಥಿತಿಯನ್ನು ಪೈಥಾಗರಸ್‌ನ ತತ್ವ ಮತ್ತು ಸಂಸ್ಥೆಗಳು ತೋರಿಸಿಕೊಟ್ಟವು. ಆರ್ಫಿಕ್‌ ಅಥವಾ ಕ್ರೆಟನ್‌ ರಹಸ್ಯಗಳು,[೧೯] ಅಥವಾ ಡೆಲ್ಫಿಕ್‌ ಆರೆಕಲ್‌[೨೦](ದಿವ್ಯವಾಣಿ)ನೊಂದಿಗೆ ಪೈಥಾಗರಸ್‌ರ ಧಾರ್ಮಿಕ ಮತ್ತು ಸಾತ್ವಿಕ ಗುಣಗಳ ಸಮಾನರೂಪತೆಗಳ ಹೋಲಿಕೆ ಮಾಡಲಾಗಿತ್ತು.[೨೧] ಇತಿಹಾಸಕಾರರು ಈ ಸಮ್ಮಿಲನವನ್ನು ವಿಷದಪಡಿಸಿದ್ದಾರೆ.

ಪೈಥಾಗರಸ್‌ನ ಜ್ಞಾನಗ್ರಾಹ್ಯ ರೀತಿ ಮತ್ತು ಪ್ರಮಾಣ, ಅಥವಾ ಅವರ ಖಚಿತ ತತ್ವಚಿಂತನೆ ಹಾಗು ಅವರು ಸಂಪಾದಿಸಿದ ಜ್ಞಾನದ ಬಗ್ಗೆ ನಿಖರ ಮಾಹಿತಿಯಿಲ್ಲ. ಅತ್ಯಂತ ಕಡಿಮೆ ಮಟ್ಟದ ಸಾಕ್ಷ್ಯಗಳು ಈ ವಿಷಯದಲ್ಲಿ ದೊರೆಯುತ್ತವೆ. ಪ್ಲಾಟೊ ಮತ್ತು ಅರಿಸ್ಟೊಟ್ಲ್‌ ವಿವರಿಸಿದ್ದೆಲ್ಲವೂ ಸಹ ಪೈಥಾಗರಸ್‌ರಿಗಿಂತ ಹೆಚ್ಚಾಗಿ ಅವರು ಹುಟ್ಟು ಹಾಕಿದ ಪಂಥದ ಅನುಯಾಯಿಗಳಾಗಿರುವ ಪೈಥಾಗರಿಯನ್ನರಿಗೆ ಸಂಬಂಧಿಸಿದೆ. ಕಲಿಯುವುದರಲ್ಲಿ ಅವರು ಅಧಿಕ ಆಸಕ್ತಿಯ ವ್ಯಕ್ತಿಯಾಗಿದ್ದರೆಂದು ಹೆರಕ್ಲಿಟಸ್‌ ಹೇಳುತ್ತಾರೆ. ಆತ್ಮ-ದೇಹಗಳ ಬಗೆಗಿನ ಸ್ವರೂಪಗಳ ನಂಬಿಕೆಯಿತ್ತು.ಪರಕಾಯ ಪ್ರವೇಶದ ಬಗೆಗೂ ಅವರಲ್ಲಿ ನಿಖರ ಜ್ಞಾನವಿತ್ತು. ಪುನರ್ಜನ್ಮದ ಬಗ್ಗೆ ಕೂಡ ಪೈಥಾಗರಸ್‌ ವಿಶಿಷ್ಟ ಕಲ್ಪನೆ ಹೊಂದಿದವರಾಗಿದ್ದರು ಎಂದು ಕ್ಸೆನೊಫೆನ್ಸ್‌ ಹೇಳಿದ್ದರು.[೨೨] ನಾಯಿಯೊಂದು ಏಟು ತಿಂದು ನಲುಗಿದ್ದನ್ನು ಪೈಥಾಗರಸ್‌ ನೋಡಿದ್ದರು. ಅದರ ಕೂಗಿನಲ್ಲಿ ಅಗಲಿದ ತಮ್ಮ ಗೆಳೆಯನೊಬ್ಬನ ಧ್ವನಿಯನ್ನು ಗುರುತಿಸಿದ ಕೂಡಲೇ ಅವರು ಮಧ್ಯ ಪ್ರವೇಶಿಸಿದ ಪ್ರಸಂಗವನ್ನು ಕ್ಸೆನೊಫನ್ಸ್‌ ಉಲ್ಲೇಖಿಸಿದ್ದಾರೆ. ಅದು ಪಾಂಥಸ್‌ನ ಪುತ್ರ ಯುಫೊರ್ಬಸ್‌ನ ಪುನರ್ಜನ್ಮ ಎಂದು ಪೈಥಾಗರಸ್ ಹೇಳಿದ್ದರು. ಆತನು ಟ್ರೋಜನ್‌ ಯುದ್ಧದಲ್ಲಿ ಪಾಲ್ಗೊಂಡಿದ್ದನಂತೆ. ಇದೇ ರೀತಿ, ಒಬ್ಬ ವ್ಯಾಪಾರಿ, ಗೃಹಕೃತ್ಯಸ್ತ್ರೀ ಸೇರಿದಂತೆ ವಿವಿಧ ಜನರನ್ನು ಪೈಥಾಗರಸ್‌ ಬೇರೆ ಬೇರೆ ರೂಪಗಳಲ್ಲಿ ಗುರುತಿಸಿದ್ದರಂತೆ.[೨೩]

ಅವರ ಖ್ಯಾತ ಪ್ರಮೇಯವೂ[೨೪] ಸೇರಿದಂತೆ ಹಲವು ಗಣಿತಶಾಸ್ತ್ರ ಮತ್ತು ವೈಜ್ಞಾನಿಕ ಸಂಶೋಧನೆಗಳೊಂದಿಗೆ ಪೈಥಾಗರಸ್‌ರ ಸಮೀಕರಣಗಳನ್ನು ಹೋಲಿಸಲಾಗಿದೆ. ಇವಲ್ಲದೆ, ಸಂಗೀತ,[೨೫] ಖಗೋಳ ವಿಜ್ಞಾನ,[೨೬] ಮತ್ತು ವೈದ್ಯಕೀಯ ವಿಜ್ಞಾನ[೨೭] ಕ್ಷೇತ್ರಗಳಲ್ಲಿನ ಸಂಶೋಧನೆಗಳಲ್ಲಿ ಅವರು ಆಳವಾಗಿ ತೊಡಗಿದ್ದರು ಎನ್ನಲಾಗಿದೆ. ಆದರೆ, ಧಾರ್ಮಿಕ ಪಂಥದ ವಿಚಾರವು ಅವರ ಸಮಕಾಲೀನರ ಮೇಲೆ ಅತ್ಯಧಿಕ ಪ್ರಭಾವ ಬೀರಿತ್ತು. ಹೀಗಾಗಿ ಕ್ರೊಟೊನಿಯೆಟ್‌ಗಳು (ಜನಾಂಗ) ಅವರನ್ನು ಹೈಪರ್ಬೊರಿಯನ್‌ ಅಪೊಲೊ[೨೮] ದೊಂದಿಗೆ ಸಮೀಕರಿಸಿದ್ದರು. ಅಂದರೆ ಉತ್ತರ ಧ್ರುವದ ತುದಿಯಲ್ಲಿ ವಾಸಿಸುವವರು ಈ ಗಣಿತಜ್ಞರನ್ನು ಸೂರ್ಯ ದೇವತೆಗೆ ಹೋಲಿಸಿದ ಪುರಾವೆಗಳೂ ದೊರಕುತ್ತವೆ. ಪೈಥಾಗರಸ್‌ ಕಾಲಜ್ಞಾನದ ಪ್ರವಾದಿ ಮತ್ತು ಭವಿಷ್ಯ ನುಡಿಯುವ ಸಾಮರ್ಥ್ಯ[೨೯] ಹೊಂದಿದ್ದರೆಂದೂ ಉಲ್ಲೇಖಿಸಲಾಗಿದೆ. ಗ್ರೀಸ್‌ನಲ್ಲಿ ಡೆಲೊಸ್‌, ಸ್ಪಾರ್ಟಾ, ಫ್ಲಿಯಸ್‌, ಕ್ರೆಟ್‌ ಇತ್ಯಾದಿಗೆ ಸ್ಥಳಗಳಿಗೆ ಪೈಥಾಗರಸ್‌ ಭೇಟಿ ನೀಡುತ್ತಿದ್ದರು ಎನ್ನಲಾಗಿದೆ. ಆಗ ಅವರು ಸಾಮಾನ್ಯವಾಗಿ ಧರ್ಮ ಗುರುವಿನ ಅಥವಾ ಅರ್ಚಕರ ಅಥವಾ ದಂಡಾಧಿಕಾರಿ[೩೦] ವೇಷದಲ್ಲಿ ಇರುತ್ತಿದ್ದರು.

ಇಟಲಿಯ ದಕ್ಷಿಣ ತೀರದಲ್ಲಿರುವ ಕ್ರೊಟಾನ್‌

ತಮ್ಮ ಪ್ರವಾಸಗಳ ನಂತರ ಪೈಥಾಗರಸ್‌ ಇಟಲಿ (ಮ್ಯಾಗ್ನಾ ಗ್ರೇಸಿಯಾ) ಯಲ್ಲಿರುವ ಕ್ರೊಟಾನ್ ಗೆ ತೆರಳಿದರು. ಬಹುಶಃ ಸಮೊಸ್‌ನಲ್ಲಿ ಪಾಲಿಕ್ರೆಟ್ಸ್‌ನ ದಬ್ಬಾಳಿಕೆಯಿಂದಾಗಿ ಅವರ ತತ್ವ, ಧರ್ಮ, ಸಿದ್ದಾಂತಗಳಿಗೆ ಅಷ್ಟಾಗಿ ಮನ್ನಣೆ ದೊರೆಯದಿದ್ದುದೇ ಇದಕ್ಕೆ ಕಾರಣವಾಗಿರಬೇಕು. ಸಮೊಸ್‌ನಲ್ಲಿ ಸಾರ್ವಜನಿಕ ಕರ್ತವ್ಯಗಳ ಹೊರೆ ಹೆಚ್ಚಾಗಿತ್ತು ಎಂಬ ಕಾರಣವೂ ಇತ್ತು. ಜೊತೆಗೆ, ಸಹನಾಗರಿಕರ ದೃಷ್ಟಿಯಲ್ಲಿ ಅವರು ಮಹಾನ್‌ ವ್ಯಕ್ತಿಯಾಗಿದ್ದ ಕಾರಣ, ಅವರು ಕ್ರೊಟಾನ್‌ಗೆ ತೆರಳಿದರೆಂದು ಅಧ್ಯಯನಕಾರರು ಹೇಳಿದ್ದಾರೆ.[೩೧] ಕ್ರೊಟಾನ್‌ ತಲುಪಿದಾಗ ಅವರು ಬಹಳ ಬೇಗ ಅಲ್ಲಿದ್ದವರ ಮೇಲೆ ಪ್ರಭಾವ ಬೀರಿದರು. ಇನ್ನಷ್ಟು ಜನರು ಇವರ ಅನುಯಾಯಿಗಳಾದರು. ಆನಂತರ, ಪೈಥಾಗರಸ್‌ರ ನಿರರ್ಗಳ ಭೋದನೆಗಳ ಪ್ರಭಾವ ಕಲ್ಪನಾತೀತ ಎಂದು ಜೀವನಚರಿತ್ರೆಕಾರರು ವರ್ಣಿಸಿದ್ದಾರೆ. ಇದರಿಂದಾಗಿ ಕ್ರೊಟೊನಿಯೆಟರು ಐಷಾರಾಮೀ ಬದುಕು ಮತ್ತು ಲಂಚಕೋರತನ ತ್ಯಜಿಸಿ ಸರಳ, ಶುದ್ಧ ಜೀವನ ಶೈಲಿ[೩೨] ರೂಪಿಸಿಕೊಳ್ಳುವಂತೆ ಮಾಡಿತು.

ಅವರ ಅನುಯಾಯಿಗಳು ಸೌಹಾರ್ದಕೂಟವೊಂದನ್ನು ಸ್ಥಾಪಿಸಿದರು. ಪೈಥಾಗರಸ್‌ ಪ್ರತಿಪಾದಿಸಿದ ಧಾರ್ಮಿಕ ಮತ್ತು ದೈವಿಕ-ಧಾರ್ಮಿಕ ಆಚರಣೆಗಳನ್ನು ರೂಢಿಸಿಕೊಳ್ಳುವುದು ಈ ಪಂಥದ ಉದ್ದೇಶವಾಗಿತ್ತು. ಅನುಯಾಯಿಗಳು ಮತ್ತು ಬೆಂಬಲಿಗರ ಏನು ಮಾಡುತ್ತಾರೆ,ಏನು ಭೋದಿಸಲಾಗುತ್ತದೆ ಎಂಬವು ಗಾಢ ರಹಸ್ಯವಾಗಿದ್ದವು. ಪಂಥ ಚಳವಳಿಯ ಮಾರ್ಗದರ್ಶಿಗಳು ಇದನ್ನು ಪುಷ್ಟೀಕರಿಸಿ ಒಪ್ಪಿಕೊಂಡಿದ್ದಾರೆ. ಕೆಲವೇ ವರ್ಗಕ್ಕೆ ಸೀಮಿತಾದ ಈ ಉಪದೇಶಗಳು ರಹಸ್ಯ ಸಿದ್ಧಾಂತ ಮತ್ತು ಅವುಗಳ ಪಾಲನೆಗೆ ಸಂಬಂಧಿತವಾಗಿರಬಹುದು. ಇದು ಪೈಥಾಗರಿಯನ್‌ ವ್ಯವಸ್ಥೆಯಲ್ಲಿ ಪ್ರಮುಖ ಭಾಗವಾಗಿತ್ತು. ಇದು ಅಪೊಲೊನ (ಸೂರ್ಯನ) ಆರಾಧನೆಗೂ ಸಹ ಸಂಬಂಧಿತವಾಗಿರಬಹುದು.[೩೩] ಎಲ್ಲಾ ರೀತಿಯ ಆತ್ಮಸಂಯಮ, ಇಂದ್ರೀಯ ನಿಗ್ರಹವೂ ಸಹ ಇದರಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುತಿತ್ತು. ಪೈಥಾಗರಸ್‌ ಎಲ್ಲಾ ರೀತಿಯ ಮಾಂಸಾಹಾರವನ್ನು[೩೪] ನಿಷೇಧಿಸಿದ್ದರೋ ಅಥವಾ ಕೆಲವನ್ನು ಮಾತ್ರವೋ[೩೫] ಎಂಬುದರ ಬಗ್ಗೆ ಜೀವನಚರಿತ್ರೆಕಾರರಲ್ಲಿ ಭಿನ್ನಾಭಿಪ್ರಾಯವಿದೆ. ಆದರೂ ಪ್ರಾಣಿಗಳನ್ನು ಆಹಾರಕ್ಕಾಗಿ ಬಳಸುವದನ್ನು ತಕ್ಕಮಟ್ಟಿಗೆ ಈ ಧಾರ್ಮಿಕ ಪಂಥ ನಿಯಂತ್ರಿಸಿತ್ತು. ಒಂದು ಕಾಲದಲ್ಲಿ, ಈ ಸಮುದಾಯವು 'ತತ್ವ ಶಾಲೆ, ಧಾರ್ಮಿಕ ಸಹೋದರತೆ ಭ್ರಾತೃತ್ವದ ಪಾಠ ಮತ್ತು ರಾಜಕೀಯ ಸಂಘಟನೆ'ಯೂ ಆಗಿತ್ತು.

ಮೂರನೆಯ ಶತಮಾನದ ನಾಣ್ಯವೊಂದರಲ್ಲಿ ಪೈಥಾಗರಸ್‌ರ ಮುದ್ರಿತ ಚಿತ್ರಣಭಾವಚಿತ್ರ ಮುದ್ರಿಸಲಾಗಿತ್ತು.

ಇಂತಹ ಸಭ್ಯ ಮತ್ತು ವಿಶಿಷ್ಟ ಸಮುದಾಯವು, ಹಲವು ಕ್ರೊಟಾನೀಯರ ಮಾತ್ಸರ್ಯ ಮತ್ತು ದ್ವೇಷವನ್ನು ಸುಲಭವಾಗಿ ಪ್ರಚೋದಿಸಿತು. ಹಾಗಾಗಿ ಈ ಸಮುದಾಯವು ನಶಿಸಿಹೋಗಲು ಕಾರಣವಾಯಿತು. ಕ್ರೋಶಿಯನ್ನರ ಭಾವುಕತೆ ಮತ್ತು ಅಂಧಾನುಕರಣೆ ಅವರ ಸಂತತಿಗೆ ಮುಳುವಾಯಿತು. ಆದರೂ, ಈ ಘಟನೆಗಳು ನಿರ್ದಿಷ್ಟವಾಗಿಲ್ಲ. ಆದರೆ ಸೈಬರಿಸ್‌ ಮತ್ತು ಕ್ರೊಟಾನ್‌ ಪಟ್ಟಣಗಳ ಜನಸಮೂದಾಯದ ನಡುವೆ ಹಗೆತನ ಆರಂಭವಾಗಿತ್ತು. ಪೈಥಾಗರಿಯನ್‌ ಮಿಲೊ,ಎಂಬಾತ ಕ್ರೊಟಾನ್‌ ಪಡೆಗಳ ನಾಯಕತ್ವ ವಹಿಸಿ ಈ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಕ್ರೊಟಾನ್‌ ಪಡೆಯು ನಿರ್ಣಾಯಕ ಜಯಗಳಿಸಿದ ನಂತರ, ಇನ್ನಷ್ಟು ಪ್ರಜಾಪ್ರಭುತ್ವದ ಸಂವಿಧಾನ ಸ್ಥಾಪಿಸುವ ಪ್ರಸ್ತಾಪವಿತ್ತು. ಪೈಥಾಗರಿಯನ್ನರು ಇದಕ್ಕೆ ಪ್ರತಿರೋಧವೊಡ್ಡುವುದರಲ್ಲಿ ವಿಫಲರಾದರು. ಸೈಕ್ಲಾನ್‌ ಮತ್ತು ನಿನಾನ್‌(ಈ ಪಂಥದಿಂದ ಒತ್ತಾಯಪೂರ್ವಕವವಾಗಿ ಹೊರಬಿದ್ದಿದ್ದ ಇಬ್ಬರೂ ಯುದ್ಧಕ್ಕೆ ಮುಂದಾದರು) ನಾಯಕತ್ವದಲ್ಲಿ ಶತ್ರುಗಳು ಸಿಡಿದೆದ್ದರು. ಇದರ ಕಾರಣ ಸಹೋದರತ್ವ ಸಂಘಟನೆಯಿಂದ ತನ್ನನ್ನು ಹೊರಗಿಟ್ಟಿರುವ ಬಗ್ಗೆ ಸೈಕ್ಲಾನ್‌ ತೀವ್ರ ಅಸಮಾಧಾನಗೊಂಡಿದ್ದ. ಇದರ ವಿರುದ್ಧ ಜನತೆಯನ್ನು ಎತ್ತಿಕಟ್ಟುವುದರಲ್ಲಿ ಯಶಸ್ವಿಯಾಗಿದ್ದ. ಮಿಲೊನ ಮನೆಯಲ್ಲೋ ಅಥವಾ ಇನ್ನೆಲ್ಲೋ ಸಭೆ ನಡೆಯುತ್ತಿದ್ದಾಗ ಅವರ ಮೇಲೆ ಹಲ್ಲೆ ನಡೆಸಲಾಯಿತು. ಕಟ್ಟಡಕ್ಕೆ ಬೆಂಕಿ ಹಚ್ಚಲಾಯಿತು. ಸಭಿಕರಲ್ಲಿ ಹಲವರು ಹತರಾದರು. ಕೇವಲ ಹರೆಯದವರು ಮತ್ತು ದೈಹಿಕ ಸಾಮರ್ಥ್ಯವುಳ್ಳವರು ಘಟನೆಯಿಂದ ಪಾರಾದರು.[೩೬] ಪೈಥಾಗರಿಯನ್‌ ಸಮುದಾಯಗಳು ರಚಿಸಲಾಗಿದ್ದ ಮ್ಯಾಗ್ನಾ ಗ್ರೇಸಿಯಾದ ಇತರೆ ನಗರಗಳಲ್ಲಿ ಇದೇ ರೀತಿಯ ಹಲ್ಲೆಗಳು, ದಂಗೆಗಳು ನಡೆದವು.

ಅದುವರೆಗೂ ಕ್ರಿಯಾಶೀಲ ಮತ್ತು ಸಂಘಟಿತವಾಗಿದ್ದ ಪೈಥಾಗರಿಯನ್ ಪಂಥವು ಎಲ್ಲೆಡೆಯೂ ವೈಫಲ್ಯ ಕಂಡು ಪುನಃ ಚೇತರಿಸಿಕೊಳ್ಳಲಿಲ್ಲ. ಆದರೂ, ಪೈಥಾಗರಿಯನ್‌ರ ಒಂದು ಸಣ್ಣ ಸಮೂದಾಯ ಪಂಥವಾಗಿ ಮುಂದುವರೆಯಿತು. ಅದರ ಸದಸ್ಯರು ತಮ್ಮ ಧಾರ್ಮಿಕ ಆಚರಣೆ ಮತ್ತು ವೈಜ್ಞಾನಿಕ ಅನುಕರಣೆಗಳನ್ನು ಪರಿಮಿತಿಯಲ್ಲೇ ಮುಂದುವರೆಸಿಕೊಂಡರು. ಆರ್ಕಿಟಾಸ್‌ನಂತೆ ಕೆಲವು ವ್ಯಕ್ತಿಗಳು ಆಗೊಮ್ಮೆ ಈಗೊಮ್ಮೆ ರಾಜಕೀಯ ಪ್ರಾಬಲ್ಯ ಸಾಧಿಸಿದರು. ಪೈಥಾಗರಸ್‌ರ ಅಂತ್ಯದ ಬಗ್ಗೆ ಹುಟ್ಟಿಕೊಂಡ ಕಥೆಗಳಲ್ಲಿ ಹಲವಾರು ಏರುಪೇರು, ವ್ಯತ್ಯಾಸಗಳಿದ್ದವು. ತಮ್ಮ ಶಿಷ್ಯರೊಂದಿಗೆ ದೇವಾಲಯವೊಂದರಲ್ಲಿ ಅವರು ಅಸುನೀಗಿದರೆಂದು ಹೇಳಲಾಗುತ್ತದೆ.[೩೭] ಅವರು ಮೊದಲು ಟಾರೆಂಟಮ್‌ಗೆ ಪಲಾಯನ ಮಾಡಿದರು, ಅಲ್ಲಿಂದ ಹೊರದೂಡಲ್ಪಟ್ಟು ಮೆಟಾಪಾಂಟಮ್‌ಗೆ ಪಾರಾಗಿ ಅಲ್ಲಿಯೇ ಹಸಿವಿನಿಂದ ಕಂಗಾಲಾಗಿ ಮೃತರಾದರೆಂದೂ ಇನ್ನು ಕೆಲವರು ಉಲ್ಲೇಖಿಸುತ್ತಾರೆ.[೩೮] ಸಿಸೆರೊನ ಕಾಲದಲ್ಲಿ ಮೆಟಾಪಾಂಟಮ್‌ನಲ್ಲಿ ಅವರ ಸ್ಮಾರಕ ಸಮಾಧಿಯನ್ನು ತೋರಿಸಲಾಗಿತ್ತು.[೩೯]

ಕೆಲವು ಆಧಾರಗಳ ಪ್ರಕಾರ ಪೈಥಾಗರಸ್‌ ಥಿಯನೊ ಎಂಬ ಕ್ರೊಟಾನ್ ಮಹಿಳೆಯನ್ನು ವಿವಾಹವಾಗಿದ್ದರು. ಅವರ ಮಕ್ಕಳ ಬಗ್ಗೆ ಕೆಲವಡೆ ವಿಧವಿಧವಾಗಿ ಹೇಳಲಾಗಿದೆ. ಟೆಲಾಗೆಸ್‌ ಎಂಬೊಬ್ಬ ಮಗ ಹಾಗೂ ಡಾಮೊ, ಅರಿಗ್ನೋಟ್‌ ಮತ್ತು ಮಿಯಾ ಎಂಬ ಮೂವರು ಹೆಣ್ಣು ಮಕ್ಕಳಿಗೆ ಅವರು ಜನ್ಮ ನೀಡಿದ್ದರು.

ಬರಹಗಳು (ಪೂರಕ ಮಾಹಿತಿಗಳು)[ಬದಲಾಯಿಸಿ]

ಪೈಥಾಗರಸ್‌ರ ಯಾವುದೇ ಬರಹಗಳು ಉಳಿದಿಲ್ಲ. ಆದರೂ, ಪುರಾತನಕಾಲದಲ್ಲಿ ಅವರ ಹೆಸರಿನಲ್ಲಿ ಹುಸಿ ಬರಹಗಳು ಪ್ರಚಾರವಾಗುತ್ತಿದ್ದವು. ಅವರೇ ಬರೆದಿದ್ದಾರೆ ಎಂದು ನಂಬಿಸಲಾಗುತ್ತಿತ್ತು. ಇದರ ಬಗ್ಗೆ ವ್ಯಾಪಕ ಪ್ರಚಾರ ನಡೆಸಿದ ಪ್ರಯತ್ನವೂ ಆ ಕಾಲದಲ್ಲಿ ನಡೆಯಿತು. ಪ್ರಮುಖ ಇತಿಹಾಸಕಾರರಾದ ಅರಿಸ್ಟಾಟಲ್ ಮತ್ತು ಅರಿಸ್ಟೊಕ್ಸೆನಸ್‌ ಈ ಪುರಾತನ ದಾಖಲೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಪುರಾತನ ಪೈಥಾಗರಿಯನ್ನರು ತಮ್ಮ ಗುರುಗಳ ಉಪದೇಶಗಳನ್ನು ಆಟೊಸ್‌ ಎಫೆ ("ಅವರೇ ಖುದ್ದಾಗಿ ಹೇಳಿದರು") ಎಂಬ ವಾಕ್ಯದೊಂದಿಗೆ ಸಮರ್ಥಿಸಿಕೊಳ್ಳುತ್ತಿದ್ದರು. ಇದರ ಅರ್ಥ ಪೈಥಾಗರಸ್‌ ಹೆಚ್ಚಾಗಿ ಮೌಖಿಕವಾಗಿಯೇ ಬೋಧಿಸುತ್ತಿದ್ದರು.

ಗಣಿತಶಾಸ್ತ್ರ[ಬದಲಾಯಿಸಿ]

The so-called Pythagoreans, who were the first to take up mathematics, not only advanced this subject, but saturated with it, they fancied that the principles of mathematics were the principles of all things.

— Aristotle, Metaphysics 1-5 , cc. 350 BC

ಪೈಥಾಗರಿಯನ್‌ ಪ್ರಮೇಯ[ಬದಲಾಯಿಸಿ]

ಪೈಥಾಗರಿಯನ್‌ ಪ್ರಮೇಯ: ತ್ರಿಭುಜ ಪಾದಗಳ (a ಮತ್ತು b) ಮೇಲಿನ ಚೌಕಗಳ ವಿಸ್ತೀರ್ಣಗಳು ಸಮಕೋನಕ್ಕೆ ಎದಿರಿನ ಭುಜ(c)ದ ಚೌಕದ ವಿಸ್ತೀರ್ಣಕ್ಕೆ ಸಮನಾಗಿದೆ.

ಪೈಥಾಗರಿಯನ್‌ ಪ್ರಮೇಯ ಕಂಡು ಹಿಡಿದಿರುವ ಪೈಥಾಗರಸ್‌ರಿಗೆ ವಿಶ್ವದ ಎಲ್ಲೆಡೆಯೂ ಮಾನ್ಯತೆ ದೊರಕಿದೆ. ಕ್ರಿಸ್ತ ಶಕ ನಾಲ್ಕನೆಯ ಶತಮಾನದಿಂದಲೂ ಗಣಿತದ ಈ ಅವಿಷ್ಕಾರ ಜನಪ್ರಿಯತೆಯನ್ನು ತಂದಿದೆ. ಇದು ರೇಖಾಗಣಿತದ ಪ್ರಮುಖ ಪ್ರಮೇಯಗಳಲ್ಲೊಂದು. ಇದರಂತೆ,(ಮೇಲಿನ ಚಿತ್ರರೇಖೆಯಲ್ಲಿಯಂತೆ) 'ಲಂಬಗೋನೀಯ ತ್ರಿಕೋನದಲ್ಲಿ, ಲಂಬಗೋನಕ್ಕೆ ಎದಿರಾಗಿರುವ ಭುಜದ ಚೌಕವು c ಇತರೆ ಎರಡೂ ಭುಜಗಳಾದ b ಮತ್ತು a ನ ಚೌಕಗಳ ಭುಜದ ವರ್ಗಗಳ ಮೊತ್ತಕ್ಕೆ ಸಮವೀರುತ್ತದೆ.'. ಭೂಮಿತಿ(ಭೂರೂಪ ರೇಷೆ) ವಿಜ್ಞಾನದಲ್ಲಿ ಇಂದು ಪ್ರತಿಯೊಬ್ಬ ವಿದ್ಯಾರ್ಥಿಗೂ ಈ ಪ್ರಮೇಯ ರೇಖಾಗಣಿತಕ್ಕೆ ಮಾರ್ಗಸೂಚಿಯಾಗಿದೆ.ಗಣಿತಜ್ಞರಿಗೆ ಈ ಜ್ಯಾಮಿತಿ ಪ್ರಮೇಯ ಇಂದಿಗೂ ಹೊಸ ಆವಿಷ್ಕಾರಗಳಿಗೆ ಮಾರ್ಗದರ್ಶಿಯಾಗಿದೆ ಎಂದು ಹೇಳಬಹುದು.

ಈ ಪ್ರಮೇಯವು ಹಿಂದೆ ಬೆಬಿಲೋನಿಯನ್ನರು ಮತ್ತು ಭಾರತೀಯರಿಗೆ ತಿಳಿದಿತ್ತು. ಈ ಪ್ರಮೇಯ ಖಚಿತ ಆಧಾರ ಹೊಂದಿದೆ ಎಂದು ಸಾಧಿಸುವ ಮೊದಲ ಪ್ರಯೋಗವನ್ನು ಪೈಥಾಗರಸ್‌ ಅಥವಾ ಅವರ ಶಿಷ್ಯರು ಕೈಗೊಂಡರೆಂದು ಹೇಳಲಾಗಿದೆ. ಬೆಬಿಲೋನಿಯನ್ನರು ಈ ಪೈಥಾಗರಿಯನ್‌ ಪ್ರಮೇಯ ಬಳಸಿದ್ದನ್ನು ಗಮನಿಸಿದರೆ, ಈ ತತ್ವವು ಬಹುಪಾಲು ಅವರಿಗೆ ತಿಳಿದಿರುವುದು ಸ್ಪಷ್ಟವಾಗಿದೆ. ಈ ಪ್ರಮೇಯವನ್ನು ಸಾಧಿಸುವ ಒಂದು ಪುರಾವೆಯೂ ಅವರಿಗೆ ತಿಳಿದಿತ್ತು. ಆದರೆ ಅವುಗಳ ಬಗ್ಗೆ ಯಾವದೇ ವಿವರ (ಇದುವರೆಗೂ ಪ್ರಕಟವಾಗಿಲ್ಲದ) ಪ್ರಾಚೀನ ಶಾಸನ ಲಿಪಿಗಳಲ್ಲಿ ಕಂಡುಬಂದಿಲ್ಲ.[೪೦] ಅವರ ಶಾಲೆಯದು ನಿಗೂಢತೆ ಲಕ್ಷಣ. ಅವರ ಶಿಷ್ಯರು ಪ್ರತಿಯೊಂದು ವಿಚಾರವನ್ನೂ ಸಹ ಅವರ ಗುರುಗಳಿಗೆ ಸಂಬಂಧಿಸುವ ಪದ್ಧತಿಯನ್ನು ಮಾತ್ರ ಅನುಸರಿಸುತ್ತಿದ್ದರು. ಆದ್ದರಿಂದ, ಪೈಥಾಗರಸ್‌ರೇ ಸ್ವತಃ ಈ ಪ್ರಮೇಯವನ್ನು ಸಾಧಿಸಿದರು ಎಂಬುದಕ್ಕೆ ಪುರಾವೆಯಿಲ್ಲ. ಇಷ್ಟೇ ಅಲ್ಲದೆ, ಗಣಿತದ ಇತರೆ ಯಾವುದೇ ವಿಭಾಗಗಳು, ಸಮೀಕರಣ, ಸೂತ್ರ,ವ್ಯತ್ಯಾಸಗಳು ಅಥವಾ ಸಮಸ್ಯೆಗಳ ಕುರಿತು ಅವರು ಅಧ್ಯಯನ ನಡೆಸಿದ ಸಾಕ್ಷ್ಯಗಳಿಲ್ಲ. ಪೈಥಾಗರಸ್‌ಗೆ ಸಂಬಂಧಿಸಿದ ತತ್ವಗಳಿಗೆ ಹೊಂದುವಂತಹ ಪ್ಲೇಟೊನ ತತ್ವಶಾಸ್ತ್ರವನ್ನು ಸಮರ್ಥಿಸುವ ಅಗತ್ಯವಿತ್ತು. ಇದರಿಂದ, ಪೈಥಾಗರಸ್‌ ನಿಧನರಾಗಿ ಎರಡು ಶತಮಾನಗಳ ನಂತರ, ಪ್ಲಾಟೊರ ಅನುಯಾಯಿಗಳು ವ್ಯವಸ್ಥಿತವಾಗಿ ಕಟ್ಟಿಧ ಕಲ್ಪನೆ ಎಂಬುದು ಕೆಲವರ ಅಭಿಪ್ರಾಯ.ಪ್ಲಾಟೊನ ಭೌತಶಾಸ್ತ್ರದ ಮೂಲ ಸಿದ್ದಾಂತಗಳಿಗೆ ಆಧಾರ ದೊರೆಯುವಂತೆ ಮಾಡಲು ಆತನ ಅಭಿಮಾನಿಗಳು ಪೈಥಾಗರಸ ಪ್ರಮೇಯಗಳನ್ನು ವ್ಯವಸ್ಥಿತವಾಗಿ ತಮ್ಮೊಳಗೆ ಸೇರುವಂತೆ ಮಾಡಿದರೆಂಬುದು ಕೆಲವರ ವಾದ. ಈ ತೆರನಾದ ಸಂಬಂಧವು ಹಲವು ಶತಮಾನಗಳಿಂದ ಹಿಡಿದು ಇಂದಿನವರೆಗೂ ಉಳಿದುಕೊಂಡಿದೆ.[೪೧] ಅವರು ನಿಧನರಾಗಿ ಐದು ಶತಮಾನಗಳ ನಂತರ, ಈ ಪ್ರಮೇಯದೊಂದಿಗೆ ಪೈಥಾಗರಸ್‌ರ ಹೆಸರು ಕೇಳಿಬಂದಿತು. ಸಿಸೆರೊ ಮತ್ತು ಪ್ಲುಟಾರ್ಕ್‌ರ ಬರಹಗಳಲ್ಲಿ ಈ ಸಂಬಂಧವನ್ನು ಪ್ರಸ್ತಾಪಿಸಲಾಯಿತು.

ಸಂಗೀತದ ತತ್ವ- ಸಿದ್ಧಾಂತ ಮತ್ತು ಸಂಶೋಧನೆಗಳು[ಬದಲಾಯಿಸಿ]

ಮಧ್ಯಯುಗದ ಮರಕೆತ್ತನೆಯ ಚಿತ್ರದಲ್ಲಿ 'ಪೈಥಾಗರಿಯನ್‌ ಶ್ರುತಿ'ಯಲ್ಲಿರುವ ಗಂಟೆಗಳೊಡನೆ ಇರುವ ಪೈಥಾಗರಸ್‌

ಸಂಗೀತದ ತರಂಗಳನ್ನು ಗಣಿತದ ಸಮೀಕರಣಗಳನ್ನಾಗಿ ಮಾಡಬಹುದು ಎಂಬುದನ್ನು ಪೈಥಾಗರಸ್‌ ಶೋಧಿಸಿದ್ದರು. ದಾರಿಯಲ್ಲಿ ನಡೆದು ಹೋಗುತ್ತಿದ್ದಾಗ, ಕೆಲಸ ಮಾಡುತ್ತಿದ್ದ ಕಮ್ಮಾರರನ್ನು ಗಮನಿಸಿದರು. ಕಮ್ಮಾರರು ಸುತ್ತಿಗೆಯಿಂದ ಕುಟ್ಟಿದಾಗ ಹೊರಬರುತ್ತಿದ್ದ ತರಂಗಗಳು ಒಂದೇ ವೇಗದ್ದಾಗಿದ್ದವೆಂದು ಪೈಥಾಗರಸ್‌ ತರ್ಕಿಸಿದರು. ಇದಕ್ಕೆ, ಕಾರಣವಾಗುವ ಯಾವುದೇ ವೈಜ್ಞಾನಿಕ ನಿಯಮವನ್ನು ಗಣಿತಕ್ಕೆ ಅಳವಡಿಸಬೇಕೆಂದೂ; ಈ ತತ್ವವನ್ನು ಸಂಗೀತಕ್ಕೂ ಅನ್ವಯಿಸಬಹುದು ಎಂದು ನಿರ್ಧರಿಸಿದರು. ಅವರು ಕಮ್ಮಾರನನ್ನು ಸಮೀಪಿಸಿ, ಅವರ ಸಲಕರಣೆಗಳನ್ನು ಗಮನಿಸುತ್ತ ಸದ್ದು ಉಂಟಾದದ್ದು ಹೇಗೆ ಎಂಬುದನ್ನು ಅರಿತರು. ಬಡಿಗಲ್ಲುಗಳು ಪರಸ್ಪರ ಉದ್ದೇಶಪೂರ್ವಕ ಘರ್ಷಣೆಯಾಗಿದ್ದು ಈ ರೀತಿಯ ಶಬ್ದ ಶೃತಿಗೆ ಕಾರಣವಾಗಿತ್ತು. ಎರಡನೆಯ ಬಡಿಗಲ್ಲು ಮೊದಲನೆಯದರ ಅರ್ಧದಷ್ಟು, ಮೂರನೆಯದು 2/3ರಷ್ಟು ಗಾತ್ರದ್ದಾಗಿತ್ತು ಎಂದು ಅವರಿಗೆ ಗೊತ್ತಾಯಿತು. ಕಬ್ಬಿಣದ ದೊಡ್ದ ಸುತ್ತಿಗೆಯಿಂದ ಇನ್ನೊಂದು ಕಬ್ಬಿಣದ ಮೇಲೆ ಸಮಪ್ರಮಾಣದ ಏಟನ್ನು ಸತತವಾಗಿ ಹಾಕುವದರಿಂದ ಉಂಟಾಗುವ ಸದ್ದು ಅಥವಾ ಅಲೆಗಳನ್ನು ಗಣಿತೀಕರಿಸಬಹುದೆಂಬುದನ್ನು ಅವರು ಕಂಡುಕೊಂಡರು.

ಪೈಥಾಗರಿಯನ್ನರು ಅಂಕಿಅಂಶಗಳ ತತ್ವ-ಸಿದ್ಧಾಂತ,ಪ್ರಯೋಗ ಕುರಿತು ದೀರ್ಘ ವಿವರಣೆಗಳನ್ನು ನೀಡಿದರು. ಇದರ ನಿಖರ ಅರ್ಥವನ್ನು ಪರಿಣಿತರು ಇಂದಿಗೂ ಚರ್ಚಿಸುತ್ತಿದ್ದಾರೆ. 'ಗೋಲಗಳ ಪರಸ್ಪರ ಸಾಮರಸ್ಯ ತೋರಿಕೆ' ವೆಂಬುದು ಪೈಥಾಗರಸ್‌ರ ನಿಯಮಕ್ಕೆ ಸಂಬಂಧಿತ ಇನ್ನೊಂದು ನಂಬಿಕೆ. ಇದರಂತೆ ಗ್ರಹಗಳು ಮತ್ತು ನಕ್ಷತ್ರಗಳು ಗಣಿತ ಪ್ರಮೇಯಗಳ, ಸಮೀಕರಣಗಳ ನಿರ್ದೇಶನದಂತೆ ಚಲಿಸುತ್ತಿದ್ದವು. ಇದು ಸ್ವರಗಳ ನಾದಕ್ಕೆ ಲಯಬದ್ಧತೆಗೆ ಹೊಂದಿಕೆಯಾಗಿ ಸಂಗೀತಮೇಳವನ್ನು ಸೃಷ್ಟಿಸಿತು.[೪೨]

ಟೆಟ್ರಾಕ್ಟಿಸ್‌ (ಚೌಕಾಕೃತಿಗಳ ಪರಸ್ಪರ ಸಂಬಂಧ)[ಬದಲಾಯಿಸಿ]

ಟೆಟ್ರಾಕ್ಟಿಸ್‌ ಎಂಬುದು ನಾಲ್ಕು ಪಂಕ್ತಿಗಳಲ್ಲಿ ಜೋಡಿಸಲಾದ ಹತ್ತು ಚುಕ್ಕೆಗಳ ತ್ರಿಕೋನೀಯ ಆಕೃತಿ. ಪೈಥಾಗರಸ್‌ ಇದನ್ನು ರೂಪಿಸಿದರೆಂದು ಹೇಳಲಾಗಿದೆ. ಇದು ಆಧ್ಯಾತ್ಮಿಕತೆಗೆ ಸಂಬಂಧಿತ ಸಂಕೇತ. ಪೈಥಾಗರಿಯನ್ನರು ದೇವರ ಆರಾಧನೆಗೆ ಮತ್ತು ಅದರ ಸನ್ನಿಧಿಯಲ್ಲಿ ಪ್ರಮಾಣ ಮಾಡಲು ಇದು ಒಂದು ಮುಖ್ಯ ಸಂಕೇತವಾಗಿತ್ತು. ನಮ್ಮ ವೇದಕಾಲದಲ್ಲಿಯೂ ರೇಖೆಗಳನ್ನು ಬಳಸಿ ಧಾರ್ಮಿಕ ಸಂಕೇತಗಳನ್ನು ರಚಿಸಲಾಗುತ್ತಿತ್ತು. ದೈವಿಕ ಯಂತ್ರ-ತಂತ್ರ ಎಂದೂ ಕೂಡ ಅಂದು ಮತ್ತು ಇಂದು ನಾವು ಕಾಣುತ್ತೇವೆ. ಗಣಿತವನ್ನು ಅಕ್ಷರಗಳ ಮೂಲಕ ಸಾಂಕೇತಿಸುವ ಪದ್ದತಿ ನಮ್ಮಲ್ಲಿ ಆದಿ ಕಾಲದಿಂದಲೂ ಪ್ರಚಲಿತದಲ್ಲಿದೆ.

And the inventions were so admirable, and so divinised by those who understood them, that the members used them as forms of oath: "By him who handed to our generation the tetractys, source of the roots of ever-flowing nature."

— Iamblichus, Vit. Pyth., 29

ಧಾರ್ಮಿಕತೆ(ಧರ್ಮ) ಮತ್ತು ವಿಜ್ಞಾನ[ಬದಲಾಯಿಸಿ]

ಪೈಥಾಗರಸ್‌ರ ಧಾರ್ಮಿಕ ಮತ್ತು ವೈಜ್ಞಾನಿಕ ದೃಷ್ಟಿಕೋನಗಳು ಪರಸ್ಪರ ಸಂಬಂಧಿತವಾಗಿದ್ದವು. ಧಾರ್ಮಿಕವಾಗಿ, ಪೈಥಾಗರಸ್‌ರಿಗೆ ಪರಕಾಯ ಪ್ರವೇಶದಲ್ಲಿ ನಂಬಿಕೆಯಿತ್ತು. ಅವರು ಪುನರ್ಜನ್ಮದಲ್ಲಿಯೂ ನಂಬಿಕೆಯಿಟ್ಟಿದ್ದರು. ಪುನರ್ಜನ್ಮವೆಂದರೆ ಆತ್ಮವು ಶುದ್ಧವಾಗುವವರೆಗೂ ಮೋಕ್ಷ ಪಡೆಯುವವರೆಗೆ ಮನುಷ್ಯ, ಪ್ರಾಣಿ ಅಥವಾ ತರಕಾರಿಗಳೊಳಗೆ ಮರುಹುಟ್ಟು ಪಡೆಯುತ್ತಾನೆ ಎಂದು ಅವರು ನಂಬಿದ್ದರು. ಪುನರ್ಜನ್ಮದ ಬಗೆಗಿನ ಅವರ ಕಲ್ಪನೆಯು ಪುರಾತನ ಗ್ರೀಕ್‌ ಧರ್ಮದಿಂದ ಪ್ರಭಾವಿತವಾಗಿತ್ತು. ತಾವು ನಾಲ್ಕು ಜನ್ಮಗಳನ್ನು ದಾಟಿ ಬಂದಿದ್ದೇನೆ ಎಂದು ಅವರೇ ಸ್ವತಃ ಹೇಳಿಕೊಂಡಿದ್ದರು. ಅವರು ತಮ್ಮ ಹಿಂದಿನ ಜನ್ಮಗಳ ಪ್ರತಿಯೊಂದು ವಿವರವನ್ನೂ ನೆನಪಿನಲ್ಲಿಟ್ಟುಕೊಂಡಿದ್ದರಂತೆ. ನಾಯಿಯೊಂದರ ಬೊಗಳುವಿಕೆಯಲ್ಲಿ ತಮ್ಮ ಅಗಲಿದ ಸ್ನೇಹಿತನ ಕೂಗನ್ನು, ಆರ್ತವನ್ನು ಗುರುತಿಸಿದ್ದರಂತೆ.

ಸಿದ್ಧಾಂತ (ತತ್ವಜ್ಞಾನ)[ಬದಲಾಯಿಸಿ]

ಪೈಥಾಗರಸ್‌ ಅವರ ಐತಿಹಾಸಿಕ ವ್ಯಕ್ತಿತ್ವ ಅವರನ್ನು ವಿಚಿತ್ರ ಘಟನೆಗಳಿಗೆ ಕಾರಣ ಮಾಡಿತು. ಇತರರಿಗೆ ಕಥೆ ಹೆಣೆಯಲು ಪ್ರೇರಿಪಿಸಿದಂತೆ ಭಾಸವಾಗುತ್ತದೆ. ವಿಸ್ತಾರವಾದ ದಂತಕಥೆಗಳಿಗೆ ಅವರು ವಸ್ತುವಾದರು. ಪೈಥಾಗರಸ್‌ ಒಬ್ಬ ವಿಸ್ಮಯಕಾರಿ ವ್ಯಕ್ತಿ ಮತ್ತು ಕೆಲವೊಮ್ಮೆ ಒಬ್ಬ ಅತೀಂದ್ರಿಯ ವ್ಯಕ್ತಿ ಎನ್ನುವಂತೆ ಅರಿಸ್ಟಾಟ್ಲ್‌ ವಿವರಿಸಿದ್ದಾರೆ. ದಿವ್ಯತೆಯ ಪ್ರತೀಕ ಎನ್ನಲಾದ ಚಿನ್ನದ ತೊಡೆಯನ್ನು ಪೈಥಾಗರಸ್‌ ಹೊಂದಿದ್ದು ಅವರ ವಿಶಿಷ್ಟ ವ್ಯಕ್ತಿತ್ವಕ್ಕೆ ಸಾಕ್ಷಿ ಎಂದು ಅರಿಸ್ಟೊಟಲ್ ಬಣ್ಣಿಸಿದ್ದಾರೆ. ಅರಿಸ್ಟಾಟಲ್ ಮತ್ತು ಇತರರು ಹೇಳುವಂತೆ ಪೈಥಾಗರಸ್‌ ಕಾಲವನ್ನು ಮೀರುವ(ಕಾಲಾತೀತ) ಸಾಮರ್ಥ್ಯ ಹೊಂದಿದವರಾಗಿದ್ದರು. ಬಾಹ್ಯಾಕಾಶದಲ್ಲಿ ಭೌತಿಕವಾಗಿ ಪಯಣಿಸುವ ಶಕ್ತಿ ಅವರಲ್ಲಿ ಅಡಕವಾಗಿತ್ತು. ಅವರು ತಮ್ಮ ಅನಂತ ಹೃದಯವಂತಿಕೆಯಿಂದ ಪ್ರಾಣಿ ಪಶು, ಪಕ್ಷಿ,ಗಿಡ ಮರಗಳೊಂದಿಗೆ ಆಯಾ ಭಾಷೆಗಳಲ್ಲಿ ಸಂಹನ ಮಾಡಲು ಶಕ್ತರಾಗಿದ್ದರು ಎಂದು ಅವರ ಹಲವು ಸಮಕಾಲೀನರು ದಾಖಲಿಸುತ್ತಾರೆ. ಇದನ್ನು ಕೆಲವು ಪುರಾತನರೂ ನಂಬಿದ್ದರು.[೪೩] ಬ್ರೂಯರ್ಸ್‌ ಡಿಕ್ಷನರಿ ಆಫ್‌ ಫ್ರೇಸ್‌ ಅಂಡ್‌ ಫೇಬಲ್‌ನಲ್ಲಿ 'ಗೋಲ್ಡನ್‌ ಥಾಯ್ (ಚಿನ್ನದ ತೊಡೆ)' ಬಗ್ಗೆ ಹೀಗೆ ನಮೂದಿಸಲಾಗಿದೆ: ಇದರಲ್ಲಿ ಉದಾಹರಣೆಗಾಗಿ ನಮ್ಮ ಧುರ್ಯೋಧನ ವಜ್ರ ಶರೀರಿಯಾಗಿದ್ದ ಎಂದು ನಾವು ಕೇಳಿಲ್ಲವೇ ಹಾಗೆ ಚಿನ್ನದ ತೊಡೆ ಒಂದು ಬಲಿಷ್ಟನ ಸಂಕೇತವೆಂದು ಇಲ್ಲಿ ವ್ಯಾಖ್ಯಾನಿಸಬಹುದು.

ಪೈಥಾಗರಸ್‌ ಚಿನ್ನದ ತೊಡೆಯನ್ನು ಹೊಂದಿದ್ದರು ಎನ್ನಲಾಗಿದೆ. ಅವರು ಅದನ್ನು ಹೈಪರ್ಬೊರಿಯನ್‌ ಅರ್ಚಕನಾದ ಅಬಾರಿಸ್‌ಗೆ ತೋರಿಸಿ, ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಪ್ರದರ್ಶಿಸಿದ್ದರಂತೆ. [೪೪]

ಇನ್ನೊಂದು ದಂತಕಥೆಯು ಅವರು ಚಂದ್ರನ ಮೇಲೆ ಬರೆಯುವ ಸಾಮರ್ಥ್ಯದ ಬಗ್ಗೆ ವಿವರಿಸಿದೆ:

ತಾವು ಚಂದ್ರನ ಮೇಲೆ ಬರೆಯಬಲ್ಲರೆಂದು ಪೈಥಾಗರಸ್ ಪ್ರತಿಪಾದಿಸಿದ್ದರು. ಅವರ ಯೋಜನೆಯಂತೆ, ಕನ್ನಡಿ ಮೇಲೆ ರಕ್ತದಲ್ಲಿ ಬರೆದು ಅದನ್ನು ಚಂದ್ರೆನೆದುರು ಇಡುವುದು. ಆ ಬರಹವು ಛಾಯಾಚಿತ್ರದಂತೆ ಕಾಣುವುದು ಅಥವಾ ಚಂದ್ರನ ಬಿಲ್ಲೆಯ ಮೇಲೆ ಪ್ರತಿಬಿಂಬಿತವಾಗುವುದು. [೪೫]

ಪೈಥಾಗರಿಯನ್ ನಿಷ್ಟರು[ಬದಲಾಯಿಸಿ]

ರಫೇಲ್‌ರ 'ದಿ ಸ್ಕೂಲ್‌ ಆಫ್‌ ಅಥೆನ್ಸ್‌'ನಲ್ಲಿ, ಮಧ್ಯದಲ್ಲಿರುವ ವ್ಯಕ್ತಿ ಪೈಥಾಗರಸ್‌, ಪುಸ್ತಕ ಹಿಡಿದು ಸಂಗೀತ ಹೇಳಿಕೊಡುತ್ತಿರುವುದು.

ಎಲ್ಲದಕಿಂತಲೂ ಮಿಗಿಲಾಗಿ, ಪೈಥಾಗರಸ್‌ ಒಂದು ಅಪರೂಪದ ಮಾದರಿಯ ಜೀವನ ಶೈಲಿಯನ್ನು ರೂಢಿಸಿ ಪ್ರತಿಪಾದಿಸಿದ್ದಕ್ಕೆ ಪ್ರಖ್ಯಾತರಾದರೆಂದು ಪ್ಲಾಟೊ ಮತ್ತು ಐಸೊಕ್ರೆಟ್ಸ್‌ ಹೇಳಿದ್ದರು.[೪೬] ಪೈಥಾಗರಸ್ ತಮ್ಮ ಉತ್ಕೃಷ್ಟ ಬುದುಕಿನ ಮಾದರಿಯನ್ನು ಮುಂದಿನ ಪೀಳಿಗೆಗಾಗಿ ತಮ್ಮ ಹಿಂದೆ ಬಿಟ್ಟು ಹೋಗಿದ್ದಾರೆ. ಇತಿಹಾಸಕಾರರಾದಇಯಾಂಬ್ಲಿಕಸ್‌ ಮತ್ತು ಪೊರ್ಫಿರಿ ಸಹ ಆ ಶಾಲೆಯ ಅಂಗರಚನೆಯ ವಿಸ್ತೃತ ವಿವರಣೆಯನ್ನು ನೀಡಿದ್ದರು. ಆದರೂ, ಇವರ ಪ್ರಾಥಮಿಕ ಆಸಕ್ತಿಯು ಐತಿಹಾಸಿಕ ನಿಖರತೆಯಲ್ಲಿರಲಿಲ್ಲ. ಬದಲಾಗಿ ಪೈಥಾಗರಸ್‌ರನ್ನು 'ಮನುಕುಲದ ಕಲ್ಯಾಣಕ್ಕಾಗಿ ದೇವರು ಕಳುಹಿಸಿದ ಒಬ್ಬ ದೇವಧೂತ, ದಿವ್ಯ ವ್ಯಕ್ತಿ' ಎಂದು ನಿರೂಪಿಸುವುದು ಅವರ ಧ್ಯೇಯವಾಗಿತ್ತು.[೪೭]

ಪೈಥಾಗರಸ್ ಒಂದು ಧಾರ್ಮಿಕ ಪಂಥ ಚಳವಳಿಯನ್ನು ಹುಟ್ಟು ಹಾಕಿದ್ದರು. ಅದು ವಿವಿಧ ರೀತಿಗಳಲ್ಲಿ ಪಾಠಶಾಲೆ, ಸೋದರತ್ವ ಸಮಬಾಳ್ವೆಯ ಮತ್ತು ಸಾಧು-ಸಂತರ, ಯೋಗಿಗಳ, ವಿರಕ್ತರ ಆಶ್ರಯದ ಅನುಭವ ಮಂಟಪವಾಗಿತ್ತು. ಇದು ಪೈಥಾಗರಸ್‌ರ ಧಾರ್ಮಿಕ ಪ್ರವಚನ, ಭೋಧನೆಗಳನ್ನು ಆಧರಿಸಿತ್ತು. ಇದು ಬಹಳ ರಹಸ್ಯವಾಗಿಯೂ ಇತ್ತು. ಈ ಧರ್ಮನಿಷ್ಟರು ಪೈಥಾಗರಸ್‌ ಹಾಗೂ ಪರಸ್ಪರರಿಗೆ ಪ್ರಮಾಣ ಬದ್ಧ ನಿಷ್ಟಾವಂತರಾಗಿದ್ದರು. ಇದರಂತೆ ಧಾರ್ಮಿಕ ಮತ್ತು ಬ್ರಹ್ಮಚರ್ಯ ಆಚರಣೆಗಳನ್ನು ಕೈಗೊಳುವುದರ ಜೊತೆಗೆ, ಆಧ್ಯಾತ್ಮಿಕ ಮತ್ತು ತಾತ್ವಿಕ ಸಿದ್ಧಾಂತಗಳ ಅಧ್ಯಯನ ಮಾಡುತ್ತಿದ್ದರು. ಪೈಥಗೊರಸ್ ಪಂಥೀಯರು ತಮ್ಮೆಲ್ಲರ ವೈಯಕ್ತಿಕ ಆಸ್ತಿ-ಪಾಸ್ತಿಗಳನ್ನು ಒಂದೆಡೆ ಒಟ್ಟು ಮಾಡಿ ಸರ್ವ ಸಮ್ಮತಿಯ ಮೇಲೆ ಉಪಭೋಗಿಸುವ ಆಚರಣೆಗೆ ಬದ್ದರಾಗಿದ್ದರು. ತಮ್ಮ ಆಸೆ ದುರಾಸೆಗಳಿಗೆ ಅವರು ತಿಲಾಂಜಲಿ ಕೊಡಬೇಕಾಗುತ್ತಿತ್ತು. ತ್ಯಾಗದ ಮನೋಭಾವದ ಕ್ರಿಯೆಗಳಿಗೆ ಹೆಚ್ಚು ಒತ್ತು ಕೊಡಲಾಗುತ್ತಿತ್ತು. ಪೈಥಾಗೊರಿಯನ್ ಪಂಥದ ಅನುಯಾಯಿಗಳಲ್ಲಿ ಮಹಿಳೆಯರೂ ಬಹು ಸಂಖ್ಯೆಯಲ್ಲಿದ್ದುದು ಕಂಡು ಬರುತ್ತದೆ. ಇನ್ನೊಂದೆಡೆ, ಪೈಧಾಗರಸ್‌ ಪಂಥದ ಸದಸ್ಯರಲ್ಲಿ ಹಲವು ಮಹಿಳೆಯರಿದ್ದರೆಂಬುದು ಧೃಡಪಟ್ಟಿದೆ.[೪೮]

ಪಂಥದ ಆಂತರಿಕ ವ್ಯವಸ್ಥೆಗಳಲ್ಲಿ, ಸದಸ್ಯರ ಚಟುವಟಿಕೆಗಳನ್ನು ಭಾರೀ ರಹಸ್ಯವಾಗಿಡಲಾಗಿತ್ತು ಎಂದು ತಿಳಿಯಲಾಗಿದೆ. ಪೊರ್ಫಿರಿರ ಪ್ರಕಾರ, ಈ ಮೌನ ಸ್ಫೋಟಕವಾಗಿತ್ತು.ಅದು 'ಸಾಧಾರಣವಾದದ್ದಲ್ಲ'!. ಪಂಥ ಸೇರುವಾಗಿನ ಪ್ರವೇಶ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಮೌನವನ್ನಾಚರಿಸುವ ಸಾಮರ್ಥ್ಯ,ಪ್ರಶಾಂತತೆ, (ಎಕಿಮಿಥಿಯಾ ), ಸಾಮಾನ್ಯ ಸ್ವಭಾವ, ಪ್ರವೃತ್ತಿ ಮತ್ತು ಮಾನಸಿಕ ಸಾಮರ್ಥ್ಯವನ್ನು ಒರೆಗೆ ಹಚ್ಚಲಾಗುತ್ತಿತ್ತು.[೪೯] ಸದಸ್ಯರುಗಳಲ್ಲಿಯೇ ವರ್ಗಶ್ರೇಣಿಗಳಿದ್ದವು. ಎಲ್ಲ ವಿಷಯಗಳನ್ನೂ ಎಲ್ಲರಿಗೂ ತಿಳಿಸುವಂತಿಲ್ಲವೆಂಬುದು ಹಳೆಯ ಪೈಥಾಗರಿಯನ್‌ ಸೂತ್ರವಾಕ್ಯವಾಗಿತ್ತು.[೫೦] ಪೈಥಾಗರಿಯನ್ನರಲ್ಲಿ ಮ್ಯಾಥೆಮಟಿಕೊಯಿ ('ಕಲಿಯುವವರು') ಶಾಸ್ತ್ರಾಭ್ಯಾಸಿಗಳು, ಅಂತರಂಗ ಮತ್ತು ಬಾಹ್ಯ ಮತ್ತು ಅಕೌಸ್ಮಾಟಿಕೊಯಿ ('ಕೇಳುಗರು) ಎಂಬ ವಿಂಗಡಿತ ಗುಂಪುಗಳಿದ್ದವು.[೫೧] ಪೈಥಾಗರಸ್‌ರೊಂದಿಗಿದ್ದ ಆತ್ಮೀಯತೆ ಹಾಗು ಸಂಬಂಧಗಳ ಆಧಾರದಂತೆ ಇಸೊಟೆರಿಕೊಯಿ‌ ಮತ್ತು ಎಕ್ಸೊಟೆರಿಕೊಯಿ (ಅಥವಾ ಪರ್ಯಾಯವಾಗಿ ಪೈಥಾಗರಿಯೊಯಿ ಮತ್ತು ಪೈಥಾಗರಿಸ್ಟಯಿ ),[೫೨] ಎಂದು ಇಯಾಂಬ್ಲಿಕಸ್‌ ವಿವರಿಸಿದ್ದರು. 'ಮ್ಯಾಥೆಮಾಟಿಕೊಯಿ ಯ ಪೊರ್ಫಿರಿ ಈ ಜ್ಞಾನದ ವಿಸ್ತೃತ ಮತ್ತು ನಿಖರ ಮಾಹಿತಿಯ ಅಧ್ಯಯನ ಕೈಗೊಂಡರು. ಅಕೌಸ್ಮಾಟಿಕೊಯಿ ಪೈಥಾಗರಸ್‌ರ ಲೇಖನಗಳ (ಹೆಚ್ಚಿನ ಮಾಹಿತಿಗಳಿಲ್ಲದೆ) ಕೇವಲ ಸಂಕ್ಷಿಪ್ತ ಶೀರ್ಷಿಕೆಗಳನ್ನು ಆಲಿಸಿದ್ದರು' ಎಂದು ಪೊರ್ಫಿರಿ ಬರೆದಿದ್ದರು.

ಈ ಪಂಥದ ಜೀವನ ಶೈಲಿಯಲ್ಲಿ ತ್ಯಾಗ, ವೈರಾಗ್ಯಸಂಬಂಧಿತ ಆಚರಣೆಗಳಿದ್ದವು.[೫೩] ಇವುಗಳಲ್ಲಿ ಬಹುಪಾಲು ಸಾಂಕೇತಿಕ ಅರ್ಥವನ್ನು ಹೊಂದಿದ್ದವು. ಪೈಥಾಗರಸ್‌ ಎಲ್ಲಾ ರೀತಿಯ ಮಾಂಸಾಹಾರವನ್ನು ನಿಷೇಧಿಸಿದ್ದರೆಂದು ಕೆಲವರು ನಿರೂಪಿಸಿದ್ದಾರೆ. ಇದು ಮೆಟೆಂಪ್ಸೈಕೊಸಿಸ್‌ ಭೋಧನೆಗೆ ಪೂರಕ ವಾಗಿರಬಹುದು.[೫೪] ಇತರೆ ಮೂಲಗಳು ಈ ಹೇಳಿಕೆಯನ್ನು ಅಲ್ಲಗೆಳೆಯುತ್ತವೆ. ಅರಿಸ್ಟೊಕ್ಸೆನಸ್‌ರ ಪ್ರಕಾರ,[೫೫] ಪೈಥಾಗರಸ್‌ (ಭೂ ಕೃಷಿಗಾಗಿ ಬಳಸಲಾಗುತ್ತಿದ್ದ) ಎತ್ತು ಮತ್ತು ಟಗರುಗಳ ಮಾಂಸವನ್ನು ಹೊರತುಪಡಿಸಿ ಉಳಿದ ಮಾಂಸಾಹಾರಗಳಿಗೆ ಅನುಮತಿಸುತ್ತಿದ್ದರಂತೆ.[೫೬] ಮೀನು ಮತ್ತು ಬೀಜಗಳುಳ್ಳ ಆಹಾರ ಪದಾರ್ಥ(ಹುರುಳಿ, ಅಲಸಂದೆ,ಅವರೆ ಇತ್ಯಾದಿ) ಸೇವನೆ ನಿಷೇಧದ ಕುರಿತು ಇದೇ ರೀತಿಯ ವಿವರಣೆ ಇದೆ.[೫೭] ಆದರೆ ಎಲ್ಲಾ ರೀತಿಯ ಆತ್ಮಸಂಯಮ ಮತ್ತು ಇಂದ್ರಿಯ ನಿಗ್ರಹಕ್ಕೆ ಒತ್ತು ನೀಡಲಾಯಿತು. ಸರ್ವರಿಗೂ ಸಾಮಾನ್ಯ ಭೋಜನ ವ್ಯವಸ್ಥೆಯಿರುತ್ತಿತ್ತು ಎನ್ನಲಾಗಿದೆ. ಇದು ಹತ್ತು ಜನ ಗುಂಪಿನ ಸ್ಪಾರ್ಟನ್‌ ವ್ಯವಸ್ಥೆಯನ್ನು ಹೋಲುತ್ತಿತ್ತು.[೫೮] ಇಂತಹ ಸಂದರ್ಭಗಳಲ್ಲಿ ಪರಸ್ಪರರ ಪರಿಚಯವಾಗುತಿತ್ತು.

ಅನುಯಾಯಿಗಳ ಪ್ರತಿದಿನದ ಅಭ್ಯಾಸಗಳಲ್ಲಿ ಸಂಗೀತ ಮತ್ತು ಜಿಮ್ನಾಸ್ಟಿಕ್‌ ವ್ಯಾಯಾಮ (ದೇಹ ದಂಡನೆ)ಗಳಿಗೆ ಗಮನಾರ್ಹ ಪ್ರಾಮುಖ್ಯತೆ ನೀಡಲಾಗಿತ್ತು. ಅವರ ಒಟ್ಟಾರೆ ಶಿಸ್ತು, ಉನ್ನತ ಮಟ್ಟದ ಪ್ರಶಾಂತತೆ,ಸ್ವಯಂ ನಿಯಂತ್ರಣ ಮತ್ತು ನಿರುದ್ವಿಗ್ನತೆಯನ್ನು ಕಾಪಾಡಿಕೊಳ್ಳಲು ಪ್ರೋತ್ಸಾಹಿಸುವಂತೆ ನಿರೂಪಿಸಲಾಗಿದೆ. ಇದರ ಬಗ್ಗೆ ವಿವಿಧ ಸ್ವಾರಸ್ಯಕರ ಘಟನೆಗಳು ಜರುಗಿದ್ದವು.[೫೯] (ಅರಿಸ್ಟೊನೆಕ್ಸಸ್‌ ಪ್ರಸ್ತಾವಗಳ-ಸಾಧನೆಗಳ ಆಧರಿಸಿ )[೬೦], ಇಯಾಂಬ್ಲಿಕಸ್‌ ಈ ಸದಸ್ಯರ ದಿನಚರಿಯ ವಿಸ್ತೃತ ವಿವರಣೆ ನೀಡಿದ್ದಾರೆ. ಇದು ಸ್ಪಾರ್ಟಾನೊಂದಿಗೆ ಹೋಲುವ ಹಲವು ವಾಸ್ತವಾಂಶಗಳನ್ನು ಸೂಚಿಸುತ್ತದೆ. ಪಂಥದ ಸದಸ್ಯರೆಲ್ಲರೂ ಪರಸ್ಪರ ಆತ್ಮೀಯತೆಯನ್ನು ಹೊಂದಿದ್ದರು. ತಮ್ಮ ವಲಯ ಅಥವಾ ಮಾರ್ಗ ಸೇರದ ಸದಸ್ಯರು ಈ ರೀತಿಯ ಆತ್ಮೀಯತೆಗೆ ಪಾತ್ರರಾಗಿರಲಿಲ್ಲ.[೬೧] ಸದಸ್ಯರ ಹೊಸ ಪರಿಚಯವಾಗಿದ್ದರೂ, ರಹಸ್ಯ ಸಂಜ್ಞೆಗಳ ಮೂಲಕ ಒಬ್ಬರನ್ನೊಬ್ಬರು ಪರಸ್ಪರ ಗುರುತಿಸುತ್ತಿದ್ದರೆಂಬ ಕಥೆಗಳೂ ಇದ್ದವು.[೬೨]

ಪ್ರಭಾವ[ಬದಲಾಯಿಸಿ]

'ನ್ಯುರೆಂಬರ್ಗ್‌ ಕ್ರಾನಿಕಲ್‌'ನಲ್ಲಿ ಪೈಥಾಗರಸ್‌ರನ್ನು ಮಧ್ಯಯುಗದ ವಿದ್ವಾಂಸರನ್ನಾಗಿ ಚಿತ್ರಿಸಿರುವುದು.

ಪ್ಲಾಟೊ ಮೇಲಿನ ಪ್ರಭಾವ[ಬದಲಾಯಿಸಿ]

ಪ್ಲಾಟೊರ ತತ್ವಗಳು ಮತ್ತು ಸಾಧನೆ ಮೇಲೆ ಪೈಥಾಗರಸ್‌ರ, ಅಥವಾ, ಇನ್ನೂ ಸ್ಥೂಲವಾಗಿ, ಪೈಥಾಗರಿಯನ್ನರ ಪ್ರಮುಖ ಪ್ರಭಾವವಿತ್ತು ಎನ್ನಲಾಗಿದೆ. ಆರ್‌. ಎಂ. ಹೇರ್‌ರ ಅಭಿಪ್ರಾಯದಲ್ಲಿ, ಪೈಥಾಗರಸ್‌ರ ಪ್ರಭಾವವು ಮೂರು ಅಂಶಗಳನ್ನು ಒಳಗೊಂಡಿದೆ: (ಅ) ಪ್ಲಾಟೊನಿಕ್‌ ರಿಪಬ್ಲಿಕ್‌ ಎಂಬುದು ಸಂಘಟಿತ ಸಮಾನ-ಮನಸ್ಕ ಚಿಂತಕರ ಸಮುದಾಯದ ಕಲ್ಪನೆ. ಇದನ್ನು ಪೈಥಾಗರಸ್‌ ಕ್ರೊಟಾನ್‌ನಲ್ಲಿ ಸ್ಥಾಪಿಸಿದ ಪಂಥಕ್ಕೆ ಸಂಬಂಧಿತವಾಗಿರಬಹುದು.

(ಆ) ಗಣಿತ ಮತ್ತು ಅಮೂರ್ತ ಚಿಂತನೆಗಳು, ತಾತ್ವಿಕ ಚಿಂತನೆ, ವಿಜ್ಞಾನ ಮತ್ತು ನೀತಿ-ಸೂತ್ರಯಲ್ಲಿನ ಪ್ರಮೇಯಗಳಿಗೆ ದೃಢ ಆಧಾರಸ್ಥಂಬವಾಗಿವೆ.

(ಇ) ಪ್ಲಾಟೊ ಮತ್ತು ಪೈಥಾಗರಸ್ ಆತ್ಮ ಮತ್ತು ಭೌತಿಕ ಪ್ರಪಂಚದಲ್ಲಿನ ಅದರ ಮೋಕ್ಷದತ್ತ ಆಧ್ಯಾತ್ಮಿಕ ದಾರಿಯನ್ನು ಕಂಡುಕೊಂಡರು. ಇವರಿಬ್ಬರೂ ಆರ್ಫ್ಯೂಸನ ತತ್ವಗಳಿಂದ ಪ್ರಭಾವಿತರಾಗಿರುವ ಸಾಧ್ಯತೆಯಿತ್ತು.[೬೩]

ಪಾಶ್ಚಾತ್ಯ ತತ್ವಜ್ಞಾನದ ಇತಿಹಾಸ ದಲ್ಲಿ ಬರ್ಟ್‌ರಾಂಡ್‌ ರಸೆಲ್‌ ವಾದಿಸಿದಂತೆ, ಪ್ಲಾಟೊ ಮತ್ತು ಇತರರ ಮೇಲೆ ಪೈಥಾಗರಸ್‌ರದ್ದು ಭಾರೀ ಪ್ರಭಾವವಿತ್ತು. ಆದ್ದರಿಂದ ಅವರು ಪಾಶ್ಚಾತ್ಯ ತತ್ವಜ್ಞಾನಿಗಳ ಪೈಕಿ ಅತ್ಯಂತ ಪ್ರಭಾವಿ ಎಂದು ಪರಿಗಣಿಸಲಾಗಿದೆ. ಆದರೂ, ಪೈಥಾಗರಸ್‌ರ ಟೀಕಾಕಾರರೂ ಸಹ ಇದ್ದರು. ಉದಾಹರಣೆಗೆ ಹೆರಕ್ಲಿಟಸ್‌ ಹೇಳಿದ್ದು, 'ಬಹಳಷ್ಟು ಕಲಿಕೆಯು ಜಾಣತನವನ್ನು ಸಂಪಾದಿಸಿಕೊಡುವುದಿಲ್ಲ. ಇಲ್ಲದಿದ್ದಲ್ಲಿ ಅದು ಹೆಸಿಯಾಡ್‌, ಪೈಥಾಗರಸ್, ಕ್ಸೆನೊಫೆನ್ಸ್‌ ಮತ್ತು ಹೆಕಾಟೆಯಸ್‌[೬೪] - ಇವರೆಲ್ಲರಿಗೂ ಒಂದೇ ತೆರನಾಗಿ ಜಾಣತನವನ್ನು ನೀಡುತಿತ್ತು.

ಸಿದ್ಧಾಂತಿ ಗುಂಪುಗಳ ಮೇಲೆ ಪ್ರಭಾವ (ತತ್ವಜ್ಞಾನಿಗಳ ಸಮೂಹ)[ಬದಲಾಯಿಸಿ]

ಪೈಥಾಗರಸ್‌ 'ಪೈಥಾಗರಿಯನ್‌ ಸೋದರತ್ವ' ಎಂಬ ಒಂದು ರಹಸ್ಯ ಧಾರ್ಮಿಕ ಪಂಥವನ್ನು ಸ್ಥಾಪಿಸಿದರು. ಗಣಿತ ವಿಷಯದ ಅಧ್ಯಯನವು ಈ ಪಂಥದ ಪ್ರಮುಖ ಧ್ಯೇಯವಾಗಿತ್ತು. ಇದು ಭವಿಷ್ಯದ ಸೈದ್ಧಾಂತಿಕ ಸಂಪ್ರದಾಯಗಳ ಮೇಲೆ ಭಾರೀ ಪ್ರಭಾವ ಬೀರಿತ್ತು. ಇವುಗಳಲ್ಲಿ ರೋಸಿಕ್ರುಷಿಯನ್‌ ಮತ್ತು ಫ್ರೀಮೇಸನ್‌ ಎಂಬ ಎರಡು ದಿವ್ಯಜ್ಞಾನ-ಸಂಬಂಧಿತ ಸಂಘಟನೆಗಳು ಸಹ ಸೇರಿದ್ದವು. ಇವೆರಡೂ ಗಣಿತದ ಅಧ್ಯಯನವನ್ನು ಪ್ರಮುಖ ಧ್ಯೇಯವಾಗಿಸಿಕೊಂಡಿದ್ದವು. ಅವು ಪೈಥಾಗರಿಯನ್‌ ಸೋದರತ್ವ ಸಮಭಾವದೊಂದಿಗೆ ವಿಕಾಸಗೊಂಡಿದ್ದವೆಂದು ಹೇಳಿಕೊಂಡಿವೆ. ಮ್ಯಾನ್ಲಿ ಪಿ. ಹಾಲ್‌ರ ದಿ ಸೀಕ್ರೆಟ್‌ ಟೀಚಿಂಗ್ಸ್‌ ಆಫ್‌ ಆಲ್‌ ಏಜೆಸ್‌ ಗ್ರಂಥದ 'ಪೈಥಾಗರಿಯನ್‌ ಮ್ಯಾಥೆಮ್ಯಾಟಿಕ್ಸ್‌' ಅಧ್ಯಾಯದಲ್ಲಿ, ಪೈಥಾಗರಿಯನ್‌ ಗಣಿತದ ಆಧ್ಯಾತ್ಮಿಕ ಮತ್ತು ದಿವ್ಯಜ್ಞಾನ-ಸಂಬಂಧಿತ ಗುಣಗಳನ್ನು ವಿವರಿಸಲಾಗಿದೆ.

ಪುರಾತನ ಕಾಲದ ಮಧ್ಯಪ್ರಾಚ್ಯ ವಲಯದುದ್ದಕ್ಕೂ ಬಹಳ ಜನಪ್ರಿಯವಾಗಿದ್ದ ಸಂಖ್ಯಾರಹಸ್ಯಶಾಸ್ತ್ರದ ಮೇಲೂ ಪೈಥಾಗರಿಯನ್‌ ಸಿದ್ಧಾಂತ ಭಾರೀ ಪ್ರಭಾವ ಬೀರಿತ್ತು. ಎಂಟನೆಯ ಶತಮಾನದ ಮುಸ್ಲಿಮ್‌ ರಸವಿದ್ಯಾತಜ್ಞ ಜಬೆರ್‌ ಇಬ್ನ್‌ ಹಯನ್‌ರ ಸಂಖ್ಯಾರಹಸ್ಯಶಾಸ್ತ್ರ ಸಂಶೋಧನೆಯ ಮೇಲೆ ಪೈಥಾಗರಿಯನ್‌ ಸಿದ್ಧಾಂತದ ಪ್ರಭಾವವನ್ನು ಕಾಣಬಹುದು.[ಸಾಕ್ಷ್ಯಾಧಾರ ಬೇಕಾಗಿದೆ] ಪ್ಲಾಟೊರೊಂದಿಗೆ ಪೈಥಾಗರಸ್‌ರನ್ನು ಸಹ ಅಹ್ಲ್‌ ಅಲ್‌-ತಾಹೀದ್‌ ಅಥವಾ ದ್ರೂಜ್‌ ಮತದವರು ಪ್ರವಾದಿಯೆಂದು ಇಂದಿಗೂ ಗೌರವಿಸುತ್ತಾರೆ.

ಇದನ್ನೂ ನೋಡಿ [382][ಬದಲಾಯಿಸಿ]

ಆಕರಗಳು[ಬದಲಾಯಿಸಿ]

  1. "ಅವರ ಜೀವನದ ದಿನಾಂಕಗಳನ್ನು ನಿಖರವಾಗಿ ಹೇಳಲಾಗದು. ಆದರೆ, 'ತಮ್ಮ ನಲವತ್ತನೆಯ ವಯಸ್ಸಿನಲ್ಲಿ, ಪಾಲಿಕ್ರೆಟ್ಸ್‌ನ ದಬ್ಬಾಳಿಕೆಯಿಂದ ಪಾರಾಗಲು ಪೈಥಾಗರಸ್‌ ಸಮೊಸ್‌ ಸ್ಥಳವನ್ನು ತೊರೆದಿದ್ದರು' ಎಂಬ ಅರಿಸ್ಟೊಕ್ಸೆನಿಸ್‌ ಹೇಳಿರುವುದನ್ನು ಪರಿಗಣಿಸಿ (ಎಪಿ. ಪೊರ್ಫಿರಿ. V.P. 9) ಅವರ ಜನ್ಮ ವರ್ಷವನ್ನು 570 BC, ಅಥವಾ ಕೆಲವು ವರ್ಷಗಳ ಮುಂಚೆ ಎಂದು ಅಂದಾಜಿಸಬಹುದು. ಅವರ ಜೀವಾವಧಿಯನ್ನು ವಿವಿಧವಾಗಿ ಅಂದಾಜಿಸಲಾಯಿತು. ಆದರೆ ಅವರು ವೃದ್ಧಾಪ್ಯದ ವರೆಗೂ ಜೀವಿಸಿ, ಬಹುಶಃ ಎಪ್ಪತ್ತೈದನೆಯ ಅಥವಾ ಎಂಭತ್ತನೆಯ ವಯಸ್ಸಿನಲ್ಲಿ ನಿಧನರಾದರು." ವಿಲಿಯಮ್‌ ಕೀತ್‌ ಚೇಂಬರ್ಸ್‌ ಗುಥ್ರೀ, (1978), ಎ ಹಿಸ್ಟರಿ ಆಫ್‌ ಗ್ರೀಕ್‌ ಫಿಲಾಸಫಿ, ಸಂಪುಟ 1: ದಿ ಅರ್ಲಿಯರ್‌ ಪ್ರಿಸೋಕ್ರೆಟಿಕ್ಸ್‌ ಅಂಡ್‌ ದಿ ಪೈಥಾಗರಿಯನ್ಸ್‌ , ಪುಟ 173. ನ್ಯೂ ಯಾರ್ಕ್: ಕೇಂಬ್ರಿಡ್ಜ್‌ ಯೂನಿವರ್ಸಿಟಿ ಪ್ರೆಸ್‌, 1996.
  2. Riedweg, Christoph (2005). Pythagoras: His Life, Teaching and Influence. Cornell University. pp. 5–6, 59, 73.
  3. ಸಿಸೆರೊ, ಟಸ್ಕುಲನ್‌ ಡಿಸ್ಪುಟೇಷನ್ಸ್‌ , 5.3.8-9 = ಹೆರಕ್ಲಿಡ್ಸ್‌ ಪಾಂಟಿಕಸ್‌ ಎಫ್‌ಆರ್‌. 88 ವೆಹ್ರ್‌ಲಿ, ಡಯೊಜಿನ್ಸ್‌ ಲೆರ್ಟಿಯಸ್‌ 1.12, 8.8, ಇಯಾಂಬ್ಲಿಕಸ್‌ VP 58. ಬರ್ಕರ್ಟ್‌ ಈ ಪ್ರಾಚೀನ ಸಂಪ್ರದಾಯಕ್ಕೆ ಕಳಂಕ ತರಲು ಯತ್ನಿಸಿದ. ಆದರೂ ಇದನ್ನು ಸಮರ್ಥಿಸಿದ್ದು - ಸಿ.ಜೆ. ಡಿ ವೊಗೆಲ್‌, ಪೈಥಾಗರಸ್ ಅಂಡ್‌ ಅರ್ಲಿ ಪೈಥಾಗರಿಯನಿಸಮ್‌ (1966), ಪಿಪಿ. 97-102; ಹಾಗೂ ಸಿ. ರೀಡ್ವೆಗ್‌, ಪೈಥಾಗರಸ್‌: ಹಿಸ್‌ ಲೈಫ್‌, ಟೀಚಿಂಗ್‌ ಅಂಡ್‌ ಇನ್ಫ್ಲುಯೆನ್ಸ್‌ (2005), ಪಿ. 92.
  4. ಇಯಾಂಬ್ಲಿಕಸ್‌, ಅಡ್ಹಾರ್ಟ್‌. ಆಡ್‌ ಫಿಲೊಸ್‌. ಪಿ. 324, ಸಂ. ಕೀಸ್ಲಿಂಗ್‌.
  5. ಕಂಪ್‌. ಹಿರೊಡಿಯನ್‌, iv. 94, ಇತ್ಯಾದಿ.
  6. ಅವರೇ ಸ್ವತಃ ಸೂಚಿಸುತ್ತಾರೆ, ಮೆಟ್‌. i. 5. p. 986. 12, ಸಂ. ಬೆಕರ್‌.
  7. ಟೆಂಪ್ಲೇಟು:SmithDGRBM
  8. ಹೆರೊಡೊಟಸ್‌, iv. 95, ಇಸಾಕ್ರೆಟ್ಸ್‌, ಬುಸಿರ್‌. ಪು. 227, ಸಂ. ಸ್ಟಿಫ್‌.; ಇತರರು ಅವರನ್ನು ಟಿರಿನಿಯನ್‌ ಅಥವಾ ಫ್ಲಿಯಾಸಿಯನ್‌ ಎಂದು ಕರೆದರು. ಅವರು ಪೈಥಾಗರಸ್‌ರ ತಂದೆಯ ಹೆಸರು ಮಾರ್ಮಕಸ್‌ ಅಥವಾ ಡೆಮರಟಸ್ ಎನ್ನುತ್ತಿದ್ದರು, ಡಯೊಜಿನ್ಸ್‌ ಲೆಯರ್ಟಿಯಸ್‌, viii. 1; ಪೊರ್ಫಿರಿ, ವೈಟ್‌. ಪೈಥ್‌. 1, 2; ಜಸ್ಟಿನ್‌, xx. 4; ಪಾಸಾನಿಯಾಸ್‌, ii. 13
  9. ಟಿಯನಾದ ಅಪೊಲೊನಿಯಸ್‌ ಎಪಿ. ಪೊರ್ಫಿರಿ, ವೈಟ್‌. ಪೈಥ್‌‌. 2
  10. ಪೊರ್ಫಿರಿ, ವೈಟ್‌. ಪೈಥ್‌‌. 9
  11. ೧೧.೦ ೧೧.೧ ೧೧.೨ ಇಯಾಂಬ್ಲಿಕಸ್‌, ವೈಟ್‌. ಪೈಥ್‌‌. 9
  12. ಪೊರ್ಫಿರಿ, ವೈಟ್‌. ಪೈಥ್‌‌. 2, ಡಯೊಜಿನ್ಸ್‌ ಲೆಯರ್ಟಿಯಸ್‌, viii. 2
  13. ಇಯಾಂಬ್ಲಿಕಸ್‌, ವೈಟ್‌. ಪೈಥ್‌‌. 9; ಪೊರ್ಫಿರಿ, ವೈಟ್‌. ಪೈಥ್‌‌. 2
  14. ಡಯೊಜಿನ್ಸ್‌ ಲೆರ್ಟಿಯಸ್‌ನಲ್ಲಿ ಅರಿಸ್ಟೊನೆಕ್ಸಸ್‌ ಮತ್ತು ಇತರರು, i. 118, 119; ಸಿಸೆರೊ, ಡಿ ಡಿವ್‌. i. [49]
  15. ಪೊರ್ಫಿರಿ, ವೈಟ್‌. ಪೈಥ್‌‌. [6];
  16. ಡಯೊಜಿನ್ಸ್‌ ಲೆರ್ಟಿಯಸ್‌, viii. 2; ಪೊರ್ಫಿರಿ, ವೈಟ್‌. ಪೈಥ್‌‌. 11, 12; ಇಯಾಂಬ್ಲಿಕಸ್‌, ವೈಟ್‌. ಪೈಥ್‌‌. 14, ಇತ್ಯಾದಿ.
  17. ಆಂಟಿಫಾನ್‌. ಎಪಿ. ಪೊರ್ಫಿರಿ, ವೈಟ್‌. ಪೈಥ್‌‌. 7; ಐಸಾಕ್ರೆಟ್ಸ್‌, ಬುಸಿರ್‌. p. 227; ಸಿಸೆರೊ, ಡಿ ಫಿನಿಬಸ್‌ , v. 27; ಸ್ಟ್ರಾಬೊ, xiv.
  18. ಹೆರೊಡೊಟಸ್‌, ii. 134, 135, iii. 39.
  19. ಇಯಾಂಬ್ಲಿಕಸ್‌, ವೈಟ್‌. ಪೈಥ್‌‌. 25; ಪೊರ್ಫಿರಿ, ವೈಟ್‌. ಪೈಥ್‌‌. 17; ಡಯೊಜಿನ್ಸ್‌ ಲೆರ್ಟಿಯಸ್‌, viii. 3
  20. ಅರಿಸಟೊನ್‌. ಎಪಿ. ಡಯೊಜಿನ್ಸ್‌ ಲೆರ್ಟಿಯಸ್‌, viii. 8, 21; ಪೊರ್ಫಿರಿ, ವೈಟ್‌. ಪೈಥ್‌‌. [41]
  21. ಅರಿಸಟೊನ್‌. ಎಪಿ. ಡಯೊಜಿನ್ಸ್‌ ಲೆರ್ಟಿಯಸ್‌, viii. 8, 21; ಪೊರ್ಫಿರಿ, ವೈಟ್‌. ಪೈಥ್‌‌. [41]
  22. ಡಯೊಜಿನ್ಸ್‌ ಲೆರ್ಟಿಯಸ್‌, viii. 36, ಕಂಪ್‌. ಅರಿಸ್ಟೊಟ್ಲ್‌, ಡಿ ಅನಿಮಾ , i. 3; ಹೆರೊಡೊಟಸ್‌, ii. [123]
  23. ಪೊರ್ಫಿರಿ, ವೈಟ್‌. ಪೈಥ್‌‌. 26; ಪಾಸಾನಿಯಾಸ್‌, ii. 17; ಡಯೊಜಿನ್ಸ್‌ ಲೆರ್ಟಿಯಸ್‌, viii. 5; ಹಾರೇಸ್‌, ಒಡಿ. i. 28,1. ಆಫ್ಘಾನಿಸ್ತಾನ್‌' gtc:mediawiki-xid="10" gtc:suffix="">[10]
  24. ಡಯೊಜಿನ್ಸ್‌ ಲೆರ್ಟಿಯಸ್‌, viii. 12 ; ಪ್ಲುಟಾರ್ಕ್‌, ನಾನ್‌ ಪೊಸ್‌ ಸುಆವ್‌. ವಿವಿ ಸೆಕ್. ಎಪ್‌. p. 1094
  25. ಪೊರ್ಫಿರಿ, ಇನ್ ಪಾಲ್‌. ಹರ್ಮ್‌. p. 213; ಡಯೊಜಿನ್ಸ್‌ ಲೆರ್ಟಿಯಸ್‌, viii. 12
  26. ಡಯೊಜಿನ್ಸ್‌ ಲೆರ್ಟಿಯಸ್‌, viii. 14 ; ಪ್ಲಿನಿ, ಹಿಸ್ಟ್‌. ನ್ಯಾಟ್‌. ii. ಜುಲೈ 8
  27. ಡಯೊಜಿನ್ಸ್‌ ಲೆರ್ಟಿಯಸ್‌, viii. 12, 14, 32
  28. ಪೊರ್ಫಿರಿ, ವೈಟ್‌. ಪೈಥ್‌‌. 20; ಇಯಾಂಬ್ಲಿಕಸ್‌, ವೈಟ್‌. ಪೈಥ್‌‌. 31, 140; ಏಲಿಯನ್‌, ವಾರಿಯಾ ಹಿಸ್ಟರಿಕಾ , ii. 26; ಡಯೊಜಿನ್ಸ್‌ ಲೆರ್ಟಿಯಸ್‌, viii. 36
  29. ಸಿಸೆರೊ, ಡಿ ಡಿವಿನ್‌. i. 3, 46; ಪೊರ್ಫಿರಿ, ವೈಟ್‌. ಪೈಥ್‌‌. ಏಪ್ರಿಲ್‌ 29, 2007
  30. ಇಯಾಂಬ್ಲಿಕಸ್‌, ವೈಟ್‌. ಪೈಥ್‌‌. 25; ಪೊರ್ಫಿರಿ, ವೈಟ್‌. ಪೈಥ್‌‌. 17; ಡಯೊಜಿನ್ಸ್‌ ಲೆರ್ಟಿಯಸ್‌, viii. 3, 13; ಸಿಸೆರೊ, ಟಸ್ಕ್‌. ಕ್ಯು. v. 3
  31. ಇಯಾಂಬ್ಲಿಕಸ್‌, ವೈಟ್‌. ಪೈಥ್‌‌. 28; ಪೊರ್ಫಿರಿ, ವೈಟ್‌. ಪೈಥ್‌‌. ನವೆಂಬರ್‌ 9
  32. ಪೊರ್ಫಿರಿ, ವೈಟ್‌. ಪೈಥ್‌‌. 18; ಇಯಾಂಬ್ಲಿಕಸ್‌, ವೈಟ್‌. ಪೈಥ್‌‌. 37, ಇತ್ಯಾದಿ.
  33. ಏಲಿಯನ್‌, ವಾರಿಯಾ ಹಿಸ್ಟರಿಕಾ , ii. 26; ಡಯೊಜಿನ್ಸ್‌ ಲೆರ್ಟಿಯಸ್‌, viii. 13; ಇಯಾಂಬ್ಲಿಕಸ್‌, ವೈಟ್‌. ಪೈಥ್‌‌. 8, 91, 141
  34. ಆನಂತರ ಎಂಪೆಡಾಕ್ಲಸ್‌ ಮಾಡಿದಂತೆ, ಅರಿಸ್ಟಾಟ್ಲ್‌, ರೆಟ್‌. i. 14 ಜನವರಿ § 2; ಸೆಕ್ಸ್ಟಸ್‌ ಎಂಪಿರಿಕಸ್‌, ix. 127 ಇದೂ ಸಹ ಆರ್ಫಿಕ್‌ ಆದೇಶಗಳಲ್ಲಿ ಒಂದು, ಅರಿಸ್ಟೊಫ್‌. ರನ್‌. 1032
  35. ಅರಿಸ್ಟೊ ಎಪಿ. ಡಯೊಜಿನ್ಸ್‌ ಲೆರ್ಟಿಯಸ್‌, viii. 20; ಕಂಪ್‌. ಪೊರ್ಫಿರಿ, ವೈಟ್‌. ಪೈಥ್‌‌. 7; ಇಯಾಂಬ್ಲಿಕಸ್‌, ವೈಟ್‌. ಪೈಥ್‌‌. 85, 108
  36. ಇಯಾಂಬ್ಲಿಕಸ್‌, ವೈಟ್‌. ಪೈಥ್‌‌. 255-259; ಪೊರ್ಫಿರಿ, ವೈಟ್‌. ಪೈಥ್‌‌. 54-57; ಡಯೊಜಿನ್ಸ್‌ ಲೆರ್ಟಿಯಸ್‌, viii. 39; ಕಂಪ್‌. ಪ್ಲುಟಾರ್ಕ್‌, ಡಿ ಜೆನ್‌. ಸಾಕ್ರ್‌. p. 583
  37. ಅರ್ನೊಬ್‌. ಅಡ್ವ್‌. ಜೆಂಟೆಸ್‌ , i. p. 23
  38. ಡಯೊಜಿನ್ಸ್‌ ಲೆರ್ಟಿಯಸ್‌, viii. 39, 40; ಪೊರ್ಫಿರಿ, ವೈಟ್‌. ಪೈಥ್‌‌. 56; ಇಯಾಂಬ್ಲಿಕಸ್‌, ವೈಟ್‌. ಪೈಥ್‌‌. 249; ಪ್ಲುಟಾರ್ಕ್‌, ಡಿ ಸ್ಟಾಯಿಕ್‌. ರೆಪ್‌. 37
  39. ಸಿಸೆರೊ, ಡಿ ಫಿನ್‌. v. 2
  40. ಬ್ರಿಟಿಷ್‌ ಸಂಗ್ರಹಾಲಯವೊಂದರಲ್ಲೇ ಸುಮಾರು 100,000 ಅಪ್ರಕಟಿತ ಬೆಣೆಲಿಪಿ ಮೂಲಗಳಿವೆ. ಪೈಥಾಗರಿಯನ್‌ ಪ್ರಮೇಯ ಪುರಾವೆಯ ಬಗ್ಗೆ ಬೇಬಿಲಾನಿಯನ್ನರ ತಿಳಿವಳಿಕೆಯನ್ನು ಜೆ. ಹೊಯ್ರಪ್‌ರು ಈ ಅಧ್ಯಾಯದಲ್ಲಿ ತಿಳಿಸಿದ್ದಾರೆ: 'ದಿ ಪೈಥಾಗರಿಯನ್‌ 'ರೂಲ್‌' ಅಂಡ್‌ ಥಿಯರೆಮ್‌ - ಮಿರರ್‌ ಆಫ್‌ ದಿ ರಿಲೇಷನ್‌ ಬಿಟ್ವೀನ್‌ ಬೆಬಿಲಾನಿಯನ್‌ ಅಂಡ್‌ ಗ್ರೀಕ್‌ ಮ್ಯಾಥೆಮ್ಯಾಟಿಕ್ಸ್‌'. ಗ್ರಂಥ: ಜೆ. ರೆಂಗರ್‌ (ರೆಡ್‌.): ಬೆಬಿಲಾನ್‌. ಫೊಕಸ್‌ ಮೆಸೊಪೊಟಮಿಸ್ಕರ್‌ ಗೆಸ್ಕಿಕ್ಟ್‌, ವೀಜ್‌ ಫ್ರುಹರ್‌ ಗೆಲೆರ್ಸಮ್ಕೀಟ್‌, ಮೈಥೊಸ್‌ ಇನ್‌ ಡರ್‌ ಮೊಡರ್ನ್‌ (1999).
  41. ಕ್ರಿಸ್ಟೊಫ್‌ ರೀಡ್ವೆಗ್‌ ರ ಕೃತಿ ಪೈಥಾಗರಸ್, ಹಿಸ್‌ ಲೈಫ್‌, ಟೀಚಿಂಗ್‌ ಅಂಡ್‌ ಇನ್ಫ್ಲೂಯೆನ್ಸ್‌ (ಪ್ರಕಾಶಕರು: ಕಾರ್ನೆಲ್‌: ಕಾರ್ನೆಲ್‌ ಯುನಿವರ್ಸಿಟಿ ಪ್ರೆಸ್‌, 2005) ಇಂದ: "ಪೈಥಾಗರಸ್‌ ಮತ್ತು ಅವರ ಬೋಧನೆಗಳು ಪ್ಲಾಟೊ ಅನಯಾಯಿಗಳ ಮೇಲೆ ಛಾಪು ಬೀರದಿದ್ದಲ್ಲಿ, ಮಧ್ಯ ಮತ್ತು ಆಧುನಿಕ ಕಾಲದ ವಿದ್ವಾಂಸರಿಗೆ ಈ ಮಹಾನ್ ವ್ಯಕ್ತಿತ್ವ ಅರಿವಾಗುತ್ತಿರಲಿಲ್ಲ. ನವ-ಪೈಥಾಗರಿಯನ್ನರು ಮತ್ತು ಪ್ಲಾಟೊನಿಸ್ಟರು ವಿವರಿಸಿದ ಪೈಥಾಗರಸ್‌ರ ವ್ಯಕ್ತಿತ್ವ ಶತಮಾನಗಳಲ್ಲಿ ಉಳಿದ ಪೈಥಾಗರಿಯನ್‌ ಕಲ್ಪನೆ ನಿರ್ಣಯಿಸಿತು."
  42. ಕ್ರಿಸ್ಟೊಫ್‌ ರೀಡ್ವೆಗ್‌, ಪೈಥಾಗರಸ್: ಹಿಸ್ ಲೈಫ್‌, ಟೀಚಿಂಗ್‌ ಅಂಡ್‌ ಇನ್‌ಫ್ಲುಯೆನ್ಸ್‌, ಕಾರ್ನೆಲ್‌: ಕಾರ್ನೆಲ್‌ ಯುನಿವರ್ಸಿಟಿ ಪ್ರೆಸ್‌, 2005 .
  43. ಹಫ್‌ಮನ್‌, ಕಾರ್ಲ್‌. ಪೈಥಾಗರಸ್ (ಸ್ಟ್ಯಾನ್ಫರ್ಡ್‌ ಎನ್ಸೈಕ್ಲೊಪೀಡಿಯಾ ಆಫ್‌ ಫಿಲಾಸಫಿ)
  44. ಬ್ರೂಯರ್‌, ಇ. ಕಾಬ್ಹ್ಯಾಮ್‌, ಬ್ರೂಯರ್ಸ್‌ ಡಿಕ್ಷನರಿ ಆಫ್‌ ಫ್ರೇಸ್‌ ಅಂಡ್‌ ಫೇಬಲ್‌
  45. ಬ್ರೂಯರ್‌, ಇ. ಕಾಬ್ಹ್ಯಾಮ್‌, ಬ್ರೂಯರ್ಸ್‌ ಡಿಕ್ಷನರಿ ಆಫ್‌ ಫ್ರೇಸ್‌ ಅಂಡ್‌ ಫೇಬಲ್‌
  46. ಪ್ಲಾಟೊ, ರಿಪಬ್ಲಿಕ್‌ , 600a, ಐಸೊಕ್ರೆಟ್ಸ್‌, ಬುಸಿರಿಸ್‌ , 28
  47. ಜಾನ್‌ ಡಿಲನ್‌ ಮತ್ತು ಜ್ಯಾಕ್ಸನ್‌ ಹರ್ಷ್‌ಬೆಲ್‌, (1991), ಇಯಾಂಬ್ಲಿಕಸ್‌, ಆನ್‌ ದಿ ಪೈಥಾಗರಿಯನ್‌ ವೇ ಆಫ್‌ ಲೈಫ್‌ , ಪುಟ 14. ಸ್ಕಾಲರ್ಸ್‌ ಪ್ರೆಸ್‌.; ಡಿ. ಜೆ. ಒ'ಮೀರಾ, (1989), ಪೈಥಾಗರಸ್ ರಿವೈವ್ಡ್‌. ಮ್ಯಾಥೆಮ್ಯಾಟಿಕ್ಸ್‌ ಅಂಡ್‌ ಫಿಲಾಸಫಿ ಇನ್‌ ಲೇಟ್‌ ಆಂಟಿಕ್ವಿಟಿ , ಪುಟ 35-40. ಕ್ಲಾರೆಂಡನ್‌ ಪ್ರೆಸ್‌.
  48. ಪೊರ್ಫಿರಿ, ವೈಟ್‌. ಪೈಥ್‌‌. 19 ನವೆಂಬರ್
  49. ಅರಿಸ್ಟೊನೆಕ್ಸಸ್‌ ಎಪಿ. ಇಯಾಂಬ್ಲಿಕಸ್‌, ವೈಟ್‌. ಪೈಥ್‌‌. [94] ಜಪಾನ್‌
  50. ಡಯೊಜಿನ್ಸ್‌ ಲೆರ್ಟಿಯಸ್‌, viii. 15; ಅರಿಸ್ಟೊನೆಕ್ಸಸ್‌ ಎಪಿ. ಇಯಾಂಬ್ಲಿಕಸ್‌, ವೈಟ್‌. ಪೈಥ್‌‌. 31
  51. ಇಯಾಂಬ್ಲಿಕಸ್‌, ವೈಟ್‌. ಪೈಥ್‌‌. 80, ಸಿಎಫ್‌. ಆಲಸ್‌ ಜೆಲಿಯಸ್‌, i. 9
  52. ಇಯಾಂಬ್ಲಿಕಸ್‌, ವೈಟ್‌. ಪೈಥ್‌‌. 80
  53. ಕಂಪ್‌. ಪೊರ್ಫಿರಿ, ವೈಟ್‌. ಪೈಥ್‌‌. 32; ಇಯಾಂಬ್ಲಿಕಸ್‌, ವೈಟ್‌. ಪೈಥ್‌‌. 96, ಇತ್ಯಾದಿ.
  54. ಪ್ಲುಟಾರ್ಕ್‌, ಡಿ ಎಸು ಕಾರ್ನ್‌. ಪಿಪಿ. 993, 996, 997
  55. ಅರಿಸ್ಟೊನೆಕ್ಸಸ್‌ ಎಪಿ. ಡಯೊಜಿನ್ಸ್‌ ಲೆರ್ಟಿಯಸ್‌, viii. ದ್ವಿತೀಯ 20
  56. ಕಂಪ್‌. ಪೊರ್ಫಿರಿ, ವೈಟ್‌. ಪೈಥ್‌‌. 7; ಇಯಾಂಬ್ಲಿಕಸ್‌, ವೈಟ್‌. ಪೈಥ್‌‌. 85, 108
  57. ಡಯೊಜಿನ್ಸ್‌ ಲೆರ್ಟಿಯಸ್‌, viii. 19, 34; ಆಲಸ್‌ ಜೆಲಿಯಸ್‌, iv. 11; ಪೊರ್ಫಿರಿ, ವೈಟ್‌. ಪೈಥ್‌‌. 34, ಡಿ ಅಬ್‌ಸ್ಟ್‌. i. 26; ಇಯಾಂಬ್ಲಿಕಸ್‌, ವೈಟ್‌. ಪೈಥ್‌‌. ಆರೆಕಲ್‌ ಸ್ಪೇಷಿಯಲ್‌ [98]
  58. ಇಯಾಂಬ್ಲಿಕಸ್‌, ವೈಟ್‌. ಪೈಥ್‌‌. 98; ಸ್ಟ್ರಾಬೊ, vi.
  59. ಅಥೆನೇಯಸ್‌, xiv. 623; ಏಲಿಯನ್‌, ವಾರಿಯಾ ಹಿಸ್ಟರಿಕಾ , xiv. 18; ಇಯಾಂಬ್ಲಿಕಸ್‌, ವೈಟ್‌. ಪೈಥ್‌‌. [197]
  60. ಇಯಾಂಬ್ಲಿಕಸ್‌, ವೈಟ್‌. ಪೈಥ್‌‌. 96-101
  61. ಅರಿಸ್ಟೊನೆಕ್ಸಸ್‌ ap. ಇಯಾಂಬ್ಲಿಕಸ್‌, ವೈಟ್‌. ಪೈಥ್‌‌. 94, 101, ಇತ್ಯಾದಿ., 229, ಇತ್ಯಾದಿ.; ಕಂಪ್‌. ದಿ ಸ್ಟೋರಿ ಆಫ್‌ ಡಾಮನ್‌ ಅಂಡ್‌ ಫಿಂಟಿಯಾಸ್‌; ಪೊರ್ಫಿರಿ, ವೈಟ್‌. ಪೈಥ್‌‌. 60; ಇಯಾಂಬ್ಲಿಕಸ್‌, ವೈಟ್‌. ಪೈಥ್‌‌. 233, ಇತ್ಯಾದಿ.
  62. ಸ್ಕಾಲಿಯಾನ್‌ ಆಡ್‌ ಅರಿಸ್ಟೊಫೆನ್ಸ್‌, ನುಬ್‌. 611; ಇಯಾಂಬ್ಲಿಕಸ್‌, ವೈಟ್‌. ಪೈಥ್‌‌. 237, 238
  63. ಆರ್‌.ಎಂ. ಹೇರ್‌, ಪ್ಲಾಟೊ ಇನ್‌ ಸಿ.ಸಿ.ಡಬ್ಲ್ಯೂ. ಟೇಲರ್‌, ಆರ್‌.ಎಂ. ಹೇರ್‌ ಮತ್ತು ಜಾನಾಥನ್‌ ಬಾರ್ನ್ಸ್‌, ಗ್ರೀಕ್‌ ಫಿಲಾಸಫರ್ಸ್‌, ಸಾಕ್ರೆಟ್ಸ್‌, ಪ್ಲಾಟೊ ಮತ್ತು ಅರಿಸ್ಟಾಟ್ಲ್‌‌, ಆಕ್ಸ್‌ಫರ್ಡ್‌: ಆಕ್ಸ್‌ಫರ್ಡ್‌ ಯುನಿವರ್ಸಿಟಿ ಪ್ರೆಸ್‌, 1999 (1982), 103-189, ಇಲ್ಲಿ 117-9.
  64. ಡಿಯೊಗ. L. ix. 1 (ಫ್ರ್‌. 40 ಇನ್‌ ವೊರ್ಸೊಕ್ರಟಿಕರ್‌ , i3, p. 86. 1/3)

ಮೂಲಗಳು[ಬದಲಾಯಿಸಿ]

ಶಾಸ್ತ್ರೀಯ ಆನುಷಂಗಿಕ ಮೂಲಗಳು[ಬದಲಾಯಿಸಿ]

ಕೆಲವೇ ಸಂಗತವಾದ ಮೂಲ ಪಠ್ಯಗಳು ಮಾತ್ರ ಪೈಥಾಗರಸ್‌ ಮತ್ತು ಪೈಥಾಗರಿಯನ್ನರ ಬಗೆಗಿನ ಮಾಹಿತಿಯನ್ನು ಹೊಂದಿವೆ. ಇವುಗಳಲ್ಲಿ ಹಲವು ವಿವಿಧ ಅನುವಾದಗಳಲ್ಲಿ ಲಭ್ಯ. ಇತರೆ ಪಠ್ಯಗಳು ಈ ಕೃತಿಗಳಲ್ಲಿನ ಮಾಹಿತಿಯನ್ನೇ ಆಧರಿಸಿ ಹೆಚ್ಚಿನ ವಿವರಗಳನ್ನು ನೀಡುತ್ತವೆ.

ಆಧುನಿಕ ಆನುಷಂಗಿಕ ಮೂಲಗಳು[ಬದಲಾಯಿಸಿ]

  • ಬರ್ಕರ್ಟ್‌, ವಾಲ್ಟರ್‌. ಲೋರ್‌ ಅಂಡ್‌ ಸಯನ್ಸ್‌ ಇನ್‌ ಏನ್ಷಿಯೆಂಟ್‌ ಪೈಥಾಗರಿಯನಿಸಮ್‌ . ಹಾರ್ವರ್ಡ್‌ ಯುನಿವರ್ಸಿಟಿ ಪ್ರೆಸ್‌, ಜೂನ್‌ 1, 1972. ISBN 0-674-53918-4
  • ಬರ್ನ್‌ಯಟ್‌, ಎಂ. ಎಫ್‌. "ದಿ ಟ್ರೂತ್‌ ಎಬೌಟ್‌ ಪೈಥಾಗರಸ್". ಲಂಡನ್‌ ರಿವ್ಯೂ ಆಫ್‌ ಬುಕ್ಸ್‌ , 22 ಫೆಬ್ರುವರಿ 2007.
  • ಗುಥ್ರೀ, ಡಬ್ಲ್ಯೂ. ಕೆ. ಎ ಹಿಸ್ಟರಿ ಆಫ್‌ ಗ್ರೀಕ್‌ ಫಿಲಾಸಫಿ: ಅರ್ಲಿಯರ್‌ ಪ್ರಿಸಾಕ್ರೆಟಿಕ್ಸ್‌ ಅಂಡ್‌ ದಿ ಪೈಥಾಗರಿಯನ್ಸ್‌ , ಕೇಂಬ್ರಿಡ್ಜ್‌ ಯುನಿವರ್ಸಿಟಿ ಪ್ರೆಸ್‌, 1979. ISBN 0-521-29420-7
  • ಕಿಂಗ್ಸ್‌ಲೇ, ಪೀಟರ್‌. ಏನ್ಷಿಯೆಂಟ್‌ ಫಿಲಾಸಫಿ, ಮಿಸ್ಟರಿ ಅಂಡ್‌ ಮ್ಯಾಜಿಕ್‌: ಎಂಪೆಡಕಲ್ಸ್‌ ಅಂಡ್‌ ದಿ ಪೈಥಾಗರಿಯನ್‌ ಟ್ರೆಡಿಷನ್‌ . ಆಕ್ಸ್‌ಫರ್ಡ್‌ ಯುನಿವರ್ಸಿಟಿ ಪ್ರೆಸ್‌, 1995
  • ಹರ್ಮನ್‌, ಅರ್ನಾಲ್ಡ್‌. ಟು ಥಿಂಕ್‌ ಲೈಕ್‌ ಗಾಡ್‌: ಪೈಥಾಗರಸ್ ಅಂಡ್‌ ಪಾರ್ಮೆನೈಡ್ಸ್‌—ದಿ ಆರಿಜಿನ್ಸ್‌ ಆಫ್‌ ಫಿಲಾಸಫಿ . ಪರ್ಮೆನಿಡ್ಸ್‌ ಪಬ್ಲಿಷಿಂಗ್‌, 2005. ISBN 978-1-930972-00-1
  • ಒ'ಮೀರಾ, ಡಾಮಿನಿಕ್‌ ಜೆ. ಪೈಥಾಗರಸ್ ರಿವೈವ್ಡ್‌ . ಮಾರ್ಗರೇಟ್‌ ಬೊಡನ್‌, ಮೈಂಡ್ ಆಸ್‌ ಮೆಷೀನ್, ಆಕ್ಸ್‌ಫರ್ಡ್‌ ಯುನಿವರ್ಸಿಟಿ ಪ್ರೆಸ್‌, 2006 ISBN 0-19-823913-0 (ಪೇಪರ್‌ಬ್ಯಾಕ್‌), ISBN 0-19-824485-1 (ಹಾರ್ಡ್‌ಕವರ್‌)

ಹೊರಗಿನ ಕೊಂಡಿಗಳು[ಬದಲಾಯಿಸಿ]

Wikiquote
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಪೈಥಾಗರಸ್]]

ಸಸ್ಯಾಹಾರ, ನ್ಯಾಯ ಮತ್ತು ಕರುಣೆ ಕುರಿತು ಪೈಥಾಗರಸ್‌ರ ಅಭಿಪ್ರಾಯಗಳ ಬಗ್ಗೆ ಪ್ರಮುಖ ಇತಿಹಾಸ ಸಾಹಿತ್ಯ ಮೂಲಗಳಿಂದ ಉಲ್ಲೇಖನೆಗಳು