ವಿಜ್ಞಾನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರಾಯಶಃ ನಮ್ಮ ಕಾಲದ ಅತ್ಯಂತ ಜನಪ್ರಿಯ ವಿಜ್ಞಾನಿಯಾದ ಅಲ್ಬರ್ಟ್ ಐನ್‍ಸ್ಟೈನ್

ಅತ್ಯಂತ ವಿಶಾಲವಾದ ಅರ್ಥದಲ್ಲಿ, ವಿಜ್ಞಾನಿ ಪದವು ಜ್ಞಾನವನ್ನು ಗಳಿಸುವ ವ್ಯವಸ್ಥಿತವಾದ ಚಟುವಟಿಕೆಯಲ್ಲಿ ಭಾಗವಹಿಸುವ ಯಾವುದೇ ವ್ಯಕ್ತಿಯನ್ನು ಅಥವಾ ತತ್ವ ಸಿದ್ಧಾಂತಕ್ಕೆ ಅಥವಾ ತಾತ್ವಿಕ ಪಂಥಕ್ಕೆ ಸಂಬಂಧಿಸಿರುವಂಥ ಉದ್ಯೋಗಗಳು ಮತ್ತು ಸಂಪ್ರದಾಯಗಳಲ್ಲಿ ಭಾಗವಹಿಸುವ ವ್ಯಕ್ತಿಯನ್ನು ನಿರ್ದೇಶಿಸುತ್ತದೆ. ಹೆಚ್ಚು ಸೀಮಿತ ಅರ್ಥದಲ್ಲಿ, ವಿಜ್ಞಾನಿ ಪದವು ವೈಜ್ಞಾನಿಕ ವಿಧಿಯನ್ನು ಬಳಸುವ ವ್ಯಕ್ತಿಗಳನ್ನು ನಿರ್ದೇಶಿಸುತ್ತದೆ. ಆ ವ್ಯಕ್ತಿಯು ವಿಜ್ಞಾನದ ಒಂದು ಅಥವಾ ಹೆಚ್ಚು ಕ್ಷೇತ್ರಗಳಲ್ಲಿ ಪರಿಣಿತನಿರಬಹುದು.