ವಿಷಯಕ್ಕೆ ಹೋಗು

ಐಸಾಕ್ರಟೀಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಐಸಾಕ್ರೆಟ್ಸ್ ಪ್ರತಿಮೆ
ಐಸಾಕ್ರೆಟ್ಸ್ ಪ್ರತಿಮೆ
ಜನನ
ಐಸಾಕ್ರೆಟ್ಸ್ ಪ್ರತಿಮೆ

ರ.ಶ.ಪು. 436-338
ಪೋಷಕ

ಐಸಾಕ್ರಟೀಸ್: ಪ್ರ.ಶ.ಪು. 436-338[೧]. ಆಟಿಕ ದೇಶದ ವಾಗ್ಮಿ. ಗ್ರೀಸಿನ ಅಧೀನ ನಗರರಾಜ್ಯವೊಂದರ ಪೌರ ತಿಯೊಡೊರಸನ ಮಗ.

ಬಾಲ್ಯ ಮತ್ತು ವಿದ್ಯಾಭ್ಯಾಸ[ಬದಲಾಯಿಸಿ]

ಜನನ ಅಥೆನ್ಸ್‌ನಲ್ಲಿ. ಪ್ರಾಡಿಗಸ್, ಸಾಕ್ರಟೀಸರೊಂದಿಗೂ ಅನಂತರ ಥೆಸಲಿಯಲ್ಲಿ ಗೋರ್ಜಿಯಸನೊಂದಿಗೂ ವಿದ್ಯಾಭ್ಯಾಸ ಮಾಡಿದ. ಪೆಲೊಪೊನೀಸಿಯನ್ ಯುದ್ಧದ ಪರಿಣಾಮವಾಗಿ ಬಡತನ ಬಂದಾಗ ನ್ಯಾಯಾಲಯದ ಬಳಿ ಕುಳಿತು ಅರ್ಜಿ ಬರೆದು ಹಣ ಗಳಿಸಿದ. ಕೊನೆಗೆ 393ರಲ್ಲಿ ಭಾಷಣ ವಿದ್ಯೆಯನ್ನು ಕಲಿಯಲು ಶಾಲೆಯೊಂದನ್ನು ತೆರೆದ. ಈತನ ಕ್ರಮ ಅಂದಿನ ಭಾಷಣತಂತ್ರವನ್ನು ಸಾಕಷ್ಟು ತಿದ್ದಿತು. ಸನ್ನಿವೇಶವನ್ನು ಕಲ್ಪಿಸಿಕೊಂಡು ಅದಕ್ಕೆ ಹೊಂದುವಂಥ ಭಾಷಣವನ್ನು ಬರೆದೋದಬೇಕೆಂದು ಇವನ ಅಭಿಪ್ರಾಯ. ಭಾಷಣದಲ್ಲಿ ವ್ಯಾಕರಣಶುದ್ಧವಾದ ಮತ್ತು ಖಚಿತಾರ್ಥವನ್ನುಳ್ಳ ಪದಗಳನ್ನೇ ಬಳಸಬೇಕು. ಅಲಂಕಾರಗಳು ಇರಬಾರದು. ಅದು ಚರಿತ್ರೆ ಮತ್ತು ತತ್ತ್ವಶಾಸ್ತ್ರದಿಂದ ವಿಪುಲ ಉದಾಹರಣೆಗಳನ್ನೊಳಗೊಂಡಿರಬೇಕು. ಇದೇ ಸರಿಯಾದ ಭಾಷಣ-ಎಂದು ಆತನ ಅಭಿಮತ. ಪುರ್ಣವಿರಾಮವನ್ನು ಈತ ಯುಕ್ತವಾಗಿ ಬಳಸಿದ. ಸಿಸರೋನ ಮೂಲಕ ಉಳಿದು ಬಂದಿರುವ ಈತನ ಭಾಷಣಗಳು ಇಂದಿಗೂ ಕಲಾಮಯವಾಗಿವೆ. ಇವನದು ಸೋಫಿಸ್ಟ್‌ ತತ್ತ್ವಕ್ಕೆ ವಿರುದ್ಧವಾದುದು. ಇವನ ಶಾಲೆಯಲ್ಲಿ ಭಾಷಣ ಕಲೆಯೊಂದಿಗೆ ತತ್ತ್ವಶಾಸ್ತ್ರ ಬೋಧನೆಯೂ ನಡೆಯುತ್ತಿತ್ತಲ್ಲದೆ ಸಾಂಪ್ರದಾಯಿಕ ಶಿಸ್ತು ಮತ್ತು ನಡೆವಳಿಕೆಗೆ ಪ್ರಾಧಾನ್ಯವಿತ್ತು. ಈತ ಪ್ಲೇಟೊವನ್ನು ಸಾಮಾನ್ಯವಾಗಿ ಒಪ್ಪಿದ್ದನಾದರೂ ಆತನ ಆಧಾರರಹಿತ ಊಹೆಗಳನ್ನೂ ಭೌತಾತೀತ ನೀತಿತತ್ತ್ವಗಳನ್ನೂ ಖಂಡಿಸುತ್ತಿದ್ದ[೨].

ಇವನ ಕಾಲದಲ್ಲಿ ಗ್ರೀಸಿನ ನಗರರಾಜ್ಯಗಳಲ್ಲಿ ಒಗ್ಗಟ್ಟಿಲ್ಲದೆ ಅಂತಃಕಲಹಗಳಾಗುತ್ತಿದ್ದುವು. ಪರ್ಷಿಯನರು ಗ್ರೀಸಿನ ಮೇಲೆ ದಾಳಿ ನಡೆಸಲಾರಂಭಿಸಿದ್ದರು. ಆಗ ಈತ ಗ್ರೀಸಿನ ಸಂಘಟನೆಗಾಗಿ ಅನೇಕ ಭಾಷಣಗಳನ್ನು ಕೊಟ್ಟ. ಅವು ಉದ್ರೇಕಪುರ್ಣವಾಗಿದ್ದಂತೆ ವಿದ್ವತ್ಪೂರ್ಣವೂ ಆಗಿದ್ದುವು. ತನ್ನ ವಾಕ್ಚಾತುರ್ಯದಿಂದ ಗ್ರೀಕರನ್ನು ಒಗ್ಗಟ್ಟಾಗಲು ಹೀಗೆ ಈತ ಹುರಿದುಂಬಿಸಿದ. ಪ್ಯಾನೆಗಿರಿಕಸ್ (380) ಎಂಬ ತನ್ನ ಭಾಷಣದಲ್ಲಿ ಪರ್ಷಿಯನರನ್ನು ಎದುರಿಸಲು ಸ್ಪಾರ್ಟ ಮತ್ತು ಅಥೆನ್ಸ್‌ ಒಟ್ಟುಗೂಡುವ ರಾಷ್ಟ್ರೀಯ ದೃಷ್ಟಿಯನ್ನು ಸೊಗಸಾಗಿ ವರ್ಣಿಸಿದ್ದಾನೆ. ಫಿಲಿಪ್ಪಸ್ ಲೇಖನದಲ್ಲಿ ಪರ್ಷಿಯನರ ವಿರುದ್ಧ ಯುದ್ಧದಲ್ಲಿ ಗ್ರೀಸಿನ ನಾಯಕತ್ವವನ್ನು ವಹಿಸಲು ಮ್ಯಾಸಿಡೋನಿಯದ ದೊರೆಗೆ ಕರೆ ಕೊಟ್ಟಿದ್ದಾನೆ. ಈತನ ಆನ್ ದಿ ಪೀಸ್ (335) ಮತ್ತು ಅರಿಯೊಪಜೆಟಕಸ್ ಎಂಬ ಎರಡು ಭಾಷಣಗಳು ಸಾಹಿತ್ಯದೃಷ್ಟಿಯಿಂದ ಅತಿ ಸೊಗಸಾಗಿವೆ[೩].

ಉಲ್ಲೇಖನಗಳು[ಬದಲಾಯಿಸಿ]