ತಂತಿವಾದ್ಯ

ವಿಕಿಪೀಡಿಯ ಇಂದ
Jump to navigation Jump to search
ಹಲವಾರು ತಂತಿವಾದ್ಯಗಳು

ತಂತಿವಾದ್ಯಗಳು ಸಂಗೀತಗಾರನು ಯಾವುದೋ ರೀತಿಯಲ್ಲಿ ತಂತಿಗಳನ್ನು ನುಡಿಸಿದಾಗ ಅಥವಾ ಬಾಜಿಸಿದಾಗ, ಕಂಪಿಸುವ ತಂತಿಗಳಿಂದ ಶಬ್ದವನ್ನು ಉತ್ಪತ್ತಿಮಾಡುವ ಸಂಗೀತ ವಾದ್ಯಗಳು.

ಸಂಗೀತಗಾರರು ತಂತಿಗಳನ್ನು ತಮ್ಮ ಬೆರಳುಗಳು ಅಥವಾ ಮೀಟು ದಂತದಿಂದ ಮೀಟುವ ಮೂಲಕ ಕೆಲವು ತಂತಿವಾದ್ಯಗಳನ್ನು ನುಡಿಸುತ್ತಾರೆ, ಮತ್ತು ಇತರ ತಂತಿವಾದ್ಯಗಳನ್ನು ತಂತಿಗಳನ್ನು ಒಂದು ಹಗುರವಾದ ಕಟ್ಟಿಗೆಯ ಸುತ್ತಿಗೆಯಿಂದ ಹೊಡೆದು ಅಥವಾ ತಂತಿಗಳನ್ನು ಕಮಾನಿನಿಂದ ಉಜ್ಜಿ ನುಡಿಸುತ್ತಾರೆ. ಹಾರ್ಪ್ಸಿಕಾರ್ಡ್‌ನಂತಹ ಕೆಲವು ಕೀಲಿಮಣೆ ವಾದ್ಯಗಳಲ್ಲಿ, ಸಂಗೀತಗಾರನು ಒಂದು ಕೀಲಿಯನ್ನು ಒತ್ತಿದಾಗ ಅದು ತಂತಿಯನ್ನು ಮೀಟುತ್ತದೆ.

ಕಮಾನುಳ್ಳ ವಾದ್ಯಗಳಲ್ಲಿ, ನುಡಿಸುವವನು ತಂತಿಗಳನ್ನು ಜವಿಯ ಕಮಾನಿನಿಂದ ಉಜ್ಜುತ್ತಾನೆ, ಇದರಿಂದ ಅವು ಕಂಪಿಸುತ್ತವೆ. ಹರ್ಡಿ-ಗರ್ಡಿ ವಾದ್ಯದಲ್ಲಿ, ಸಂಗೀತಗಾರನು ಒಂದು ಯಾಂತ್ರಿಕ ಚಕ್ರವನ್ನು ನಡೆಸಿದಾಗ ಅದು ತಂತಿಗಳನ್ನು ಉಜ್ಜುತ್ತದೆ.

ತಂತಿವಾದ್ಯಗಳ ಕೆಲವು ಉದಾಹರಣೆಗಳೆಂದರೆ ಪಿಟೀಲು, ವಿಯೋಲ, ಚೆಲೋ, ಡಬಲ್ ಬಾಸ್, ಫ಼ಿಡಲ್, ಗಿಟಾರ್, ಸಿತಾರ್, ಮ್ಯಾಂಡೊಲಿನ್, ಹಾರ್ಪ್, ರಿಬಾಬ್, ಬ್ಯಾಂಜೊ, ಯೂಕಲೇಲಿ, ಬೊಜ಼ೂಕಿ ಇತ್ಯಾದಿ.

ಬಾಹ್ಯ ಕೊಂಡಿಗಳು[ಬದಲಾಯಿಸಿ]