ಸಂಖ್ಯೆ
Jump to navigation
Jump to search
ಸಂಖ್ಯೆ ಎನ್ನುವುದು ಎಣಿಕೆ ಮತ್ತು ಅಳತೆಯಲ್ಲಿ ಉಪಯೋಗಿಸುವ ಒಂದು ಅಮೂರ್ತ ಕಲ್ಪನೆ. ಗಣಿತಶಾಸ್ತ್ರದಲ್ಲಿ, ಸಂಖ್ಯೆಯ ಪರಿಕಲ್ಪನೆಯನ್ನು ವಿಸ್ತರಿಸಿ ಸ್ವಾಭಾವಿಕ ಸಂಖ್ಯೆಗಳು, ಸೊನ್ನೆ, ಧ್ರುವ ಸಂಖ್ಯೆಗಳು, ಋಣ ಸಂಖ್ಯೆಗಳು ಇನ್ನೂ ಮುಂತಾದ ಹೊಸ ರೀತಿಯ ಸಂಖ್ಯೆಗಳನ್ನೂ ಸೇರಿಸಿಕೊಳ್ಳಲಾಗಿದೆ.
ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ ಮುಂತಾದ ಸಂಖ್ಯೆಗಳ ಮೇಲೆ ಮಾಡುವ ಕ್ರಿಯೆಗಳ ಅಭ್ಯಾಸಕ್ಕೆ ಸಂಖ್ಯಾಗಣಿತ ಎನ್ನುವರು.
ಮೌಲ್ಯ | ಕನ್ನಡ ಸಂಖ್ಯೆ | ಆಂಗ್ಲ ಸಂಖ್ಯೆ |
---|---|---|
ಸೊನ್ನೆ | ೦ | 0 |
ಒಂದು | ೧ | 1 |
ಎರಡು | ೨ | 2 |
ಮೂರು | ೩ | 3 |
ನಾಲ್ಕು | ೪ | 4 |
ಐದು | ೫ | 5 |
ಆರು | ೬ | 6 |
ಏಳು | ೭ | 7 |
ಎಂಟು | ೮ | 8 |
ಒಂಬತ್ತು | ೯ | 9 |
ಮೌಲ್ಯ | ಕನ್ನಡ ಸಂಖ್ಯೆ | ಆಂಗ್ಲ ಸಂಖ್ಯೆ |
---|---|---|
ಹತ್ತು | ೧೦ | 10 |
ನೂರು | ೧೦೦ | 100 |
ಐನೂರು | ೫೦೦ | 500 |
ಸಾವಿರ | ೧೦೦೦ | 1000 |
ಲಕ್ಷ | ೧೦೦೦೦೦ | 100000 |
ಕೋಟಿ | ೧೦೦೦೦೦೦೦ | 10000000 |
ಕಾಲದೊಂದಿಗೆ ಕನ್ನಡ ಲಿಪಿಯು ಹಲವಾರು ಬದಲಾವಣೆಹಳನ್ನು ಹೊಂದಿದೆ. ಅಂತೆಯೇ ಸಂಖ್ಯೆಗಳನ್ನು ಬರೆಯವ ರೀತಿಯಲ್ಲೂ ಅನೇಕ ಮಾರ್ಪಾಟುಗಳಾಗಿವೆ. ಸಂಖ್ಯಾ ಇತಿಹಾಸವು ಭಾಷಾ ವಿಙ್ಞಾನದ ಪ್ರಮುಖ ವಿಭಾಗವಾಗಿದೆ.