ಬಿಸ್ಮಿಲ್ಲಾ ಖಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಉಸ್ತಾದ್ ಬಿಸ್ಮಿಲ್ಲಾ ಖಾನ್ ಇಂದ ಪುನರ್ನಿರ್ದೇಶಿತ)
೧೯೬೪ರಲ್ಲಿ ಉಸ್ತಾದ್ ಬಿಸ್ಮಿಲ್ಲಾ ಖಾನ್

ಶೆಹನಾಯಿ ವಾದಕ ಉಸ್ತಾದ್ ಬಿಸ್ಮಿಲ್ಲಾ ಖಾನ್ (ಮಾರ್ಚ್ ೨೧, ೧೯೧೬ - ಆಗಸ್ಟ್ ೨೧, ೨೦೦೬) ಭಾರತರತ್ನ ಪಡೆದ ಮೂರನೆಯ ಶಾಸ್ತ್ರೀಯ ಸಂಗೀತಗಾರ. ಇವರಿಗೆ ೨೦೦೧ ರಲ್ಲಿ ಭಾರತದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಜೀವನ[ಬದಲಾಯಿಸಿ]

ಇವರ ಪೂರ್ವಜರು ಬಿಹಾರಿನ ದುಮ್ರಾಓ ಸಾಮ್ರಾಜ್ಯದವರೆಂದು ಹೇಳಲಾಗುತ್ತದೆ. ಬಿಸ್ಮಿಲ್ಲಾ ಖಾನ್ ತಮ್ಮ ಚಿಕ್ಕಪ್ಪ, ಅಲಿ ಬಕ್ಸ್ ವಿಲಾಯತು ಬಳಿ ಕಲಿತರೆಂದು ಹೇಳಲಾಗುತ್ತದೆ. ಅಲಿ ಬಕ್ಸ್ ವಿಲಾಯತುರವರು ವಾರಣಾಸಿಯ ವಿಶ್ವನಾಥ ದೇವಾಲಯದೊಂದಿಗಿದ್ದವರು. ಇವರು ಕೀರ್ತಿ ಉತ್ತುಂಗಕ್ಕೇರಿದ್ದರೂ ಇವರು ವಾರಣಾಸಿಯ ಸಾಮಾನ್ಯ ಜನರಂತೆ ಜೀವನ ನಡೆಸಿದರು.ಜೀವನದ ಕೊನೆಯವರೆಗು ತಮ್ಮ ಓಡಾಟಕ್ಕಾಗಿ ಸೈಕಲ್ ರಿಕ್ಷಾವನ್ನೆ ಅವಲಂಬಿಸಿದ್ದರು. ಬಿಸ್ಮಿಲ್ಲಾ ಖಾನ್ ರವರಿಗೆ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮತ್ತು ವಿಶ್ವ ಭಾರತಿ ವಿಶ್ವವಿದ್ಯಾಲಯ, ಶಾಂತಿನಿಕೇತನ ಗಳಿಂದ ಗೌರವಪೂರ್ವಕ ಡಾಕ್ಟರೇಟ್ ಲಭಿಸಿದೆ.

ಸಾಧನೆಯ ಹಾದಿ[ಬದಲಾಯಿಸಿ]

ಶೆಹನಾಯಿಯನ್ನು ಪ್ರಸಿದ್ಧ ಶಾಸ್ತ್ರೀಯ ಸಂಗೀತ ವಾದ್ಯವಾಗಿಸಿದ ಕೀರ್ತಿ ಬಿಸ್ಮಿಲ್ಲಾ ಖಾನ್ ಅವರಿಗೆ ಸಲ್ಲಬೇಕು. ೧೯೩೭ರಲ್ಲಿ ಕಲ್ಕತ್ತದಲ್ಲಿ ನಡೆದ ಅಖಿಲ ಭಾರತ ಸಂಗೀತ ಸಮ್ಮೇಳನದ ಇವರ ವಾದ್ಯ ಕಛೇರಿ ಶೆಹನಾಯಿಯನ್ನು ಪ್ರಮುಖ ವಾದ್ಯಗಳ ಸಾಲಿನಲ್ಲಿ ತಂದು ನಿಲ್ಲಿಸಿತು .೧೯೪೭ರ ಭಾರತದ ಸ್ವಾತಂತ್ರ್ಯದ ಸಂಧರ್ಭದಲ್ಲಿ ಕೆಂಪು ಕೋಟೆಯಲ್ಲಿ ಇವರ ಸಂಗೀತ ಕಛೇರಿ ಆಯೋಜಿಸಲಾಗಿತ್ತು. ಇದೊಂದು ಅವರ ಸಾಧನೆಗೆ ಸಂದ ಗೌರವವೇ ಸರಿ.ಜನವರಿ ೨೬ ೧೯೫೦ರ ಭಾರತ ಗಣರಾಜ್ಯೋತ್ಸವ ಸಂದರ್ಭದಲ್ಲಿ ಖಾನ್ ಕಾಪಿ ರಾಗದಲ್ಲಿ ಕೆಂಪು ಕೋಟೆಯಿಂದ ತಮ್ಮ ನಾದ ಲಹರಿಯನ್ನು ಹರಿಸಿದರು. ಬಿಸ್ಮಿಲ್ಲಾ ಖಾನ್ ಎಂದರೆ ಶೆಹನಾಯಿ ಎನ್ನುವಷ್ಟು ಶೆಹನಾಯಿ ವಾದನದಲ್ಲಿ ಹೆಸರುಗಳಿಸಿದ್ದರು. ಖಾನ್ ರವರು ವಿದೇಶಗಳಲ್ಲು ಪ್ರಸಿದ್ಧರು. ಅಪ್ಘಾನಿಸ್ತಾನ, ಯೂರೋಪ್, ಇರಾನ್, ಇರಾಕ್, ಪಶ್ಚಿಮ ಆಫ್ರಿಕ, ಯುಎಸ್ಎ, ಯು.ಎಸ್.ಎಸ್.ಆರ್, ಕೆನಡಾ, ಹಾಂಗ್ ಕಾಂಗ್, ಜಪಾನ್, ಇದಲ್ಲದೆ ಹಲವು ದೇಶಗಳ ಮುಖ್ಯನಗರಗಳಲ್ಲಿ ಕಛೇರಿ ನಡೆಸಿ ಕೊಟ್ಟಿದ್ದಾರೆ.

ಪ್ರಶಸ್ತಿಗಳು[ಬದಲಾಯಿಸಿ]

  1. ಭಾರತ ರತ್ನ (೨೦೦೧)
  2. ಪದ್ಮವಿಭೂಷಣ (೧೯೮೦)
  3. ಪದ್ಮಭೂಷಣ (೧೯೬೮)
  4. ಪದ್ಮಶ್ರೀ (೧೯೬೧)
  5. ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (೧೯೫೬)
  6. ಮಧ್ಯಪ್ರದೇಶ ಸರಕಾರದ ತಾನಸೇನ್ ಪ್ರಶಸ್ತಿ (೧೯೬೫)
  7. ನೆಹರು ಅಂತರರಾಷ್ಟ್ರೀಯ ಐಕ್ಯತಾ ಪ್ರಶಸ್ತಿ(೧೯೭೩)
  8. ಸ್ವರಾಲಯ ಪ್ರಶಸ್ತಿ (ಮದ್ರಾಸ್)(೧೯೯೪)
  9. ರಾಜೀವ್ ಗಾಂಧಿ ಸಧ್ಬಾವನ ಪ್ರಶಸ್ತಿ (ಕಾಂಗ್ರೆಸ್ ಪಕ್ಷ) (೧೯೯೪)

ಗೌರವಗಳು[ಬದಲಾಯಿಸಿ]

  1. ಮರಾಠವಾಡ ವಿವಿಯಿಂದ ಡಿ.ಲಿಟ್. (೧೯೮೬)
  2. ವಿಶ್ವಭಾರತಿ ಶಾಂತಿನಿಕೇತನದಿಂದ ಡಿ.ಲಿಟ್. (೧೯೮೮)
  3. ಬನಾರಸ್ ಹಿಂದು ವಿಶ್ವವಿದ್ಯಾನಿಲಯದಿಂದ ಡಿ.ಲಿಟ್. (೧೯೮೯)
  4. ಮಹಾತ್ಮಗಾಂಧಿ ಕಾಶಿ ವಿದ್ಯಾಪೀಠದಿಂದ ಡಿ.ಲಿಟ್. (೧೯೯೫)
  5. ಸಂಗೀತ ನಾಟಕ ಅಕಾಡೆಮಿಯ ಫೆಲೊ (೧೯೯೪)
  6. ರಾಷ್ಟ್ರೀಯ ಸಂಶೋಧನಾ ಪ್ರೊಫೆಸರ್ ಶಿಪ್ (೧೯೯೫)

ಸನಾದಿ ಅಪ್ಪಣ್ಣ[ಬದಲಾಯಿಸಿ]

೧೯೭೭ರಲ್ಲಿ ಬಿಡುಗಡೆಯಾದ ಸನಾದಿ ಅಪ್ಪಣ್ಣ ಕನ್ನಡ ಚಲನಚಿತ್ರದಲ್ಲಿ, ಡಾ.ರಾಜ್‍ಕುಮಾರ್ ಅವರ ಶಹನಾಯಿ ವಾದಕರಾಗಿ ಅಭಿನಯಿಸಿದ ದೃಶ್ಯಗಳಿಗೆ ಅವಶ್ಯಕವಾಗಿದ್ದ ಶಹನಾಯಿ ವಾದನವನ್ನು ಬಿಸ್ಮಿಲ್ಲಾ ಖಾನ್ ಅವರು ನುಡಿಸಿದರು. ಜಿ.ಕೆ.ವೆಂಕಟೇಶ್ ಸಂಗೀತದಲ್ಲಿ ಎಸ್.ಜಾನಕಿಯವರು ಹಾಡಿರುವ ಕರೆದರೂ ಕೇಳದೆ ಎಂಬ ಹಾಡಿನಲ್ಲಿ ಬರುವ ಶಹನಾಯಿ ವಾದನವನ್ನು ಬಿಸ್ಮಿಲ್ಲಾ ಖಾನರು ನುಡಿಸಿದ್ದಾರೆ.

ಹೊರಗಿನ ಸಂಪರ್ಕಗಳು[ಬದಲಾಯಿಸಿ]