ಧೂಪ ಎಣ್ಣೆ
ಧೂಪ ಎಣ್ಣೆಯನ್ನು ಧೂಪ ಮರದ ಬೀಜದಿಂದ ತೆಗೆಯಲಾಗುತ್ತದೆ. ಧೂಪ ಮರವನ್ನು ಇನ್ ಸಾಲ್ ಧೂಪ, (saldhupa), ದಾಮರ್ (Damar) ಎಂದೂ ಕರೆಯುತ್ತಾರೆ. ಧೂಪಮರ ಡಿಪ್ಟೆರೊಕಾರ್ಪೆಸಿ (Diptero carpaceae) ಸಸ್ಯ ಕುಟುಂಬಕ್ಕೆ ಸೇರಿದ ಮರ. ಇದರ ಸಸ್ಯ ಶಾಸ್ತ್ರ ಹೆಸರು ವೆಟೆರಿಯ ಇಂಡಿಕ(veteria indica).
- ಸಂಸ್ಕೃತ=ಧೂಪ(dhupa),ಕುಂದುರ(kundura) ಅಜಕರ್ಣ(ajakarna)
- ಹಿಂದಿ=ಖರುಬ(kharuba),ಸಫೇಡ್ ದಮರ್(safed damar),ಸುಂದ್ರಾಸ್(sundras),(Badasal)
- ತೆಲುಗು=ಧೂಪ(dhupa)
- ತಮಿಳು=ಧೂಪ ಮರಮ್(dhupa maram),Painimaram, Vellaikundrikam
- ಮಲಯಾಳಂ= Baine, Kunturukkam, Paenoe
ಭಾರತ ದೇಶದಲ್ಲಿ ಬೆಳೆಯುವ ಪ್ರಾಂತಗಳು
[ಬದಲಾಯಿಸಿ]ಕರ್ನಾಟಕ ದಿಂದ ಕೇರಳ ದವರೆಗೆ ಇರುವ ಪಶ್ಚಿಮ ದಿಕ್ಕಿನ ಕಣಿವೆ, ಪರ್ವತಪಾದ ಪ್ರಾಂತ್ಯಗಳಲ್ಲಿ ಬೆಳೆಯುತ್ತವೆ.[೩] . ಇನ್ನೂ ಪಶ್ಚಿಮ ತೀರ ಪ್ರಾಂತ್ಯದ ಉದ್ದಕ್ಕೂ ಕುರುಂಬು (ಎತ್ತರದಲ್ಲಿನ ವಿಸ್ತಾರವಾದ ಚಪ್ಪಟೆ ಭೂಮಿ), ೬೦-೧೨೨೦ ಅಡಿ ಎತ್ತರದಲ್ಲಿರುವ ಗುಟ್ಟೆ ಪ್ರಾಂತ್ಯದಲ್ಲಿ ಕಂಡು ಬರುತ್ತದೆ. ಇನ್ನೂ ಮಹಾರಾಷ್ಟ್ರ, ಒಡಿಶಾ ಪ್ರಾಂತ್ಯಗಳಲ್ಲಿ ಬೆಳೆಯುತ್ತಾರೆ . ವಿದೇಶಗಳಲ್ಲಿ ವೆಸ್ಟ್ ವಿಂಡಿಸ್ ದ್ವೀಪ ಪ್ರಾಂತ್ಯ ದಲ್ಲಿಯು ಕಂಡು ಬರುತ್ತದೆ. ಬೆಳವಣಿಗೆಗೆ ಬೇಕಾಗಿರುವ ಅನುಕೂಲವಾದ ಉಷ್ಣೋಗ್ರತೆ ಗರಿಷ್ಠವಾಗಿ ೩೫-೩೮ ೦< /sup> C, ಕನಿಷ್ಠವಾಗಿ ೧೨.೨-೧೮೦C ಇರಬೇಕು. ಮಳೆ ೨೦೦ ಮಿ.ಮೀ.ರಿಂದ ೫೦೦ ಮಿ.ಮೀ.ಗಳು ಇರಬೇಕು.
ಮರ
[ಬದಲಾಯಿಸಿ]ಧೂಪದ ಮರವನ್ನು ಇಂಡಿಯನ್ ಕೊಪಲ್ (indian copal) ಮರ ಎಂದು ಕರೆಯಲಾಗುತ್ತದೆ. ಇದು ದೊಡ್ಡ ಗಾತ್ರದ, ಸುಂದರವಾದ ನಿತ್ಯ ಹರಿದ್ವರ್ಣದ ಮರ. ೧೫ ಮೀಟರುಗಳಿಗಿಂತ ಹೆಚ್ಚಾಗಿ ಬೆಳೆಯುತ್ತದೆ. ಈ ಮರಮುಟ್ಟನ್ನು ಬೆಂಕಿಪೆಟ್ಟಿಗೆ, ಪದರಹಲಿಗೆ(plywood) ತಯಾರು ಮಾಡುವುದರಲ್ಲಿ ಉಪಯೋಗಿಸುತ್ತಾರೆ. ಎಲೆಗಳು ಔಷಧ ಗುಣಗಳನ್ನು ಹೊಂದಿವೆ. ಮರದ ತೊಗಟೆಯನ್ನು ಗರ್(gur) ಕೈಗಾರಿಕೆಯಲ್ಲಿ ಉಪಯೋಗಿಸುತ್ತಾರೆ. ಮರದ ಅಂಟು/ರಾಳ(resin)ವನ್ನು ವಾರ್ನಿಷ್, ಮೇಣದ ಬತ್ತಿ, ಹಚ್ಚು ಮದ್ದು ತಯಾರಿಕೆಯಲ್ಲಿ ಬಳಸಲ್ಪಡುತ್ತದೆ.
ಹಣ್ಣು-ವಿತ್ತನ
[ಬದಲಾಯಿಸಿ]ಹೂಗಳು ವಿಕಸಿಸುವ ಸಮಯ ಜನವರಿ-ಮಾರ್ಚಿ ತಿಂಗಳುಗಳು. ಪುಷ್ಪಗಳು ಬೆಳ್ಳಗೆ ಪರಿಮಳ ಭರಿತವಾಗಿರುತ್ತವೆ. ಹಣ್ಣು ಮೇ-ಜುಲೈ ತಿಂಗಳುಗಳಲ್ಲಿ ಪಕ್ವಕ್ಕೆ ಬರುತ್ತವೆ. ಹಣ್ಣು ದಪ್ಪಗಿದ್ದು, ನಿಡುನಾಲ್ಮೂಲೆ ಆಗಿ ಇಲ್ಲವೆ ಗೋಲಾಕಾರವಾಗಿ, ಭರಣಿ ರೂಪದಲ್ಲಿ ಇರುತ್ತದೆ. ಹಣ್ಣು ನೋಡುವುದಕ್ಕೆ ಸಪೋಟ ಹಣ್ಣಿನ ತರಹ ಕಂಡು ಬರುತ್ತದೆ. ಹಣ್ಣು ಪರಿಮಾಣ 6X4 ಸೆಂ.ಮೀ. ಒಂದು ಮರದಿಂದ ೪೦೦-೫೦೦ಕಿಲೋಗಳ ಹಣ್ಣು ಉತ್ಪನ್ನವಾಗುತ್ತದೆ. ಹಣ್ಣಿನಲ್ಲಿ ಬೀಜಗಳು ೪೭% ಇರುತ್ತದೆ. ಹಣ್ಣು ಪಕ್ವವಾದಾಗ ಕಂದು ಬಣ್ಣ ಹೊಂದಿರುತ್ತದೆ. ಬೀಜಗಳಲ್ಲಿ ತೇವ ಹೆಚ್ಚಿನ ಶೇಕಡದಲ್ಲಿ ಇರುತ್ತದೆ. ಬೀಜಗಳ ತೇವ ಪ್ರತಿಶತ ೫-೬ % ಬರೋವರೆಗೆ ಚೆನ್ನಾಗಿ ಒಣಗಿಸಬೇಕು. ಬೀಜಗಳಲ್ಲಿ ೧೯-೨೩%ವರಗೆ ಎಣ್ಣೆ /ಕೊಬ್ಬು ಇರುತ್ತದೆ[೪]. ಕರ್ನಾಟಕ ರಾಜ್ಯದಲ್ಲಿ ೫ ಸಾವಿರ, ಕೇರಳದಲ್ಲಿ ೭ ಸಾವಿರ ಟನ್ನು ಬೀಜಗಳನ್ನು ಶೇಖರಣೆ ಮಾಡುವುದಕ್ಕೆ ಅವಕಾಶವಿದೆ.
ಬೀಜಗಳ ಶೇಖರಣೆ/ಉತ್ಪಾದನೆ
[ಬದಲಾಯಿಸಿ]ವೊದಲು ಶೇಖರಣೆ ಮಾಡಿದ ಬೀಜಗಳನ್ನು ಬಯಲು ಪ್ರದೇಶದಲ್ಲಿ ಬಿಸಿಲಿನಲ್ಲಿ ಒಣಗಿಸಿ, ಬೀಜಗಳಲ್ಲಿರುವ ತೇವ ೫-೬% ಬರುವ ತನಕ ಒಣಗಿಸಬೇಕು. ಒಣಗಿದ ಬೀಜಗಳನ್ನು ಗಾಣ, ಎಕ್ಸುಪೆಲ್ಲರು ಯಂತ್ರಗಳಲ್ಲಿ ನುಗ್ಗಿಸಿ ಎಣ್ಣೆಯನ್ನು ಸಂಗ್ರಹಣೆ ಮಾಡಲಾಗುತ್ತದೆ. ಗಾಣ,ರೋಟರಿ ಮತ್ತು ಎಕ್ಸುಪೆಲ್ಲರು ಯಂತ್ರಗಳಲ್ಲಿ ನಡೆಸಿ ಎಣ್ಣೆ ತೆಗೆದ ಮೇಲೆ ಬರುವ ಹಿಂಡಿ ಯಲ್ಲಿ ೬-೧೦% ವರೆಗೆ ಇನ್ನೂ ಎಣ್ಣೆ ಉಳಿದಿರುತ್ತದೆ. ಅದನ್ನು ಸಾಲ್ವೆಂಟ್ ಪ್ಲಾಂಟಲ್ಲಿ ತೆಗೆಯುತ್ತಾರೆ. ಎಕ್ಸುಪೆಲ್ಲರುನಲ್ಲಿ ನಡೆಸಿದಾಗ ಎಣ್ಣೆ ೭-೮% ಉತ್ಪನ್ನವಾಗುತ್ತದೆ, ಉಳಿದಿದ್ದು ಹಿಂಡಿಯಲ್ಲಿ ಇರುತ್ತದೆ.
ಎಣ್ಣೆ
[ಬದಲಾಯಿಸಿ]ಧೂಪ ಎಣ್ಣೆ ನೀಲಿ ಬಣ್ಣದಿಂದ ಇದ್ದು ಅರಿಶಿನ ವರ್ಣದಲ್ಲಿರುತ್ತದೆ, ಪರಿಮಳಯುಕ್ತವಾಗಿರುತ್ತದೆ. ಎಣ್ಣೆಯಲ್ಲಿ ೫೦-೫೫% ವರೆಗೆ ಸಂತೃಪ ಕೊಬ್ಬಿನ ಆಮ್ಲಗಳಿರುತ್ತವೆ. ಸ್ಟಿಯರಿಕ್ ಆಮ್ಲ ೩೮.೦-೪೫%, ಮತ್ತು ಪಾಮಿಟಿಕ್ ಆಮ್ಲ ೧೦-೧೩% ತನಕ ಇರುತ್ತವೆ. ಸಂತೃಪ್ತ ಕೊಬ್ಬಿನ ಆಮ್ಲಗಳು ಇದ್ದ ಕಾರಣ, ಧೂಪದ ಎಣ್ಣೆ ಕಡಿಮೆ ಉಷ್ಣೋಗ್ರತೆಯಲ್ಲಿ ಘನರೂಪದಲ್ಲಿ ಇರುತ್ತದೆ. ಅದರಿಂದ ಧೂಪ, ಎಣ್ಣೆಯನ್ನು ಧೂಪದ ಕೊಬ್ಬು ಎಂದು ಕರೆಯಲಾಗುತ್ತದೆ. ಧೂಪ ಎಣ್ಣೆಯಲ್ಲಿ ಏಕ ದ್ವಿಬಂಧವುಳ್ಳ ಒಲಿಕ್ ಆಮ್ಲ ೪೨.೦-೫೦.೦ ವರೆಗೆ ಇರುತ್ತದೆ. ಮೂರು ದ್ವಿಬಂಧಗಳಿರುವ ಲಿನೊಲೆನಿಕ್ ಕೊಬ್ಬಿನ ಆಮ್ಲ೦.೫% ವರೆಗೆ ಗೊಚರಿಸುತ್ತದೆ..
ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳ ಪಟ್ಟಿ[೧][೫]
ಕೊಬ್ಬಿನ ಆಮ್ಲ | ಶೇಕಡ |
ಮಿರಿಸ್ಟಿಕ್ ಆಮ್ಲ(C14:0) | 0.0-1.0 |
ಪಾಮಿಟಿಕ್ ಆಮ್ಲ(C16:0) | 9.7-13.0 |
ಸ್ಟಿಯರಿಕ್ ಆಮ್ಲ(C18:0) | 38.0-45.0 |
ಅರಚಿಡಿಕ್ ಆಮ್ಲ | 0.4-4.6 |
ಒಲಿಕ್ ಆಮ್ಲ | 42.0-48.0 |
ಲಿನೊಲಿಕ್ ಆಮ್ಲ | 0.2-2.3 |
ಲಿನೊಲೆನಿಕ್ | 0.5 ವರಗೆ |
ಭೌತಿಕ ಗುಣ/ಲಕ್ಷಣ | ಮಿತಿ |
ವಕ್ರಿಭವನ ಸೂಚಕ 600Cవద్ద | 1.4577-1.4677 |
ಅಯೊಡಿನ್ ಮೌಲ್ಯ | 36-51 |
ಸಪೋನಿಫಿಕೆಸನು ಸಂಖ್ಯೆ/ಮೌಲ್ಯ | 186-193 |
ಅನ್ಸಪೋನಿಫಿಯಮುಲ್ ಪದಾರ್ಥ | 1.0-2.0ಗರಿಷ್ಟವಾಗಿ |
ಟೈಟರು | 530C ಕನಿಷ್ಟವಾಗಿ |
ಎಣ್ಣೆ ಉಪಯೋಗಗಳು
[ಬದಲಾಯಿಸಿ]ಚಿತ್ರಶಾಲೆ
[ಬದಲಾಯಿಸಿ]-
ಕೊಂಬೆ
-
ಕಾಂಡ
-
ಹಣ್ಣು
-
ಹಣ್ಣಿನ ಒಳಭಾಗ(ತಿರುಳು)
ಉಲ್ಲೇಖನಗಳು
[ಬದಲಾಯಿಸಿ]- ↑ ೧.೦ ೧.೧ ೧.೨ SEA Hand Book.2009,by The Solvent Extractors' Association of India .pageNo.911
- ↑ http://www.flowersofindia.net/catalog/slides/White%20Damar.html
- ↑ http: //www.indiamart. com/ manorama-industries/products.html
- ↑ rgAD20 GGDtoC& pg=PA647 &lpg=PA647& dq= veteria+indica+oil&source=bl&ots=K6uj479mKh&sig=lpBsLv9CVdtfMWWT6vpiy6uNwUU&hl=en&sa=X&ei=w8VcUpLHFsjArAev24HgCg&ved=0CCsQ6AEwAA#v=onepage&q=veteria%20indica%20oil&f=false.The Complete Technology Book On Natural Products (Forest Based)By Himadri Pandapage No:647
- ↑ http://www.chempro.in/fattyacid.htm
- ↑ [೧].indian Standards for dhupa fat page.No.6
- ↑ "ಆರ್ಕೈವ್ ನಕಲು". Archived from the original on 2013-10-15. Retrieved 2013-10-15.