ಸದಸ್ಯ:Maheshmmhshm
ಈ ಸದಸ್ಯರ ಊರು ಬೆಂಗಳೂರು. |
ಬೇಬಲ್ ಬಳಕೆದಾರರ ಮಾಹಿತಿ | ||||
---|---|---|---|---|
| ||||
ಭಾಷೆಯ ಬಳಕೆದಾರರು |
ಮಹೇಶ್ ಎಂ
[ಬದಲಾಯಿಸಿ]ಪರಿಚಯ
[ಬದಲಾಯಿಸಿ]ಹುಟ್ಟಿದ್ದು ಬೆಂಗಳೂರಿನ ೫೦ ಕಿಲೋ ಮೀಟರ್ ದೂರದ ಮಾಗಡಿಯಲ್ಲಿ. ಶಾಲೆ ಪೂರ್ತಿ ಓದಿದ್ದು ಬರೆದಿದ್ದು ಕನ್ನಡ ಮಾಧ್ಯಮದಲ್ಲಿಯೇ, ಆದರೆ ಉದ್ಯೋಗದ ಕಾರಣ ಹಾಗು ಸದ್ಯ ಜಗತ್ತು ಸಾಗುತ್ತಿರುವ ಬಗೆ ನೋಡಿ ಇಂಗ್ಲಿಷ್ ನಲ್ಲಿ ಕಾಲೇಜು ಶಿಕ್ಷಣವನ್ನು ಪಡೆಯಲೇಬೇಕಾಯಿತು. ಮುಂದೆ ಪದವಿಯಲ್ಲಿ ತಾಂತ್ರಿಕ ಶಿಕ್ಷಣದ ಜೊತೆಗೆ ವ್ಯಕ್ತಿತ್ವ ವಿಕಸನ ಶಿಬಿರಗಳು ಹಾಗು ಇಂಗ್ಲಿಷ್ ಭಾಷಾ ಸಂವಹನ ತರಬೇತಿ ಇಂಗ್ಲಿಷ್ ಮೇಲೆ ತಕ್ಕ ಮಟ್ಟಿನ ಹಿಡಿತ ತಂದು ಕೊಟ್ಟಿತು. ಇದಾಗಿ ಉದ್ಯೋಗ ನಿಮಿತ್ತ ಮಹಾರಾಷ್ಟ್ರದ ಪುಣೆಯಲ್ಲಿ ಕೆಲ ದಿನ ನೆಲೆಸಲಾಗಿ ಹಿಂದಿ ಭಾಷೆಯ ಮೇಲೂ ಕೊಂಚ ಮಟ್ಟಿಗೆ ಪ್ರೀತಿ ಹಾಗು ಅಷ್ಟೇ ಪ್ರಮಾಣದ ಹಿಡಿತವಿದೆ.
ವಿಕಿಪೀಡಿಯಾದ ಒಡನಾಟ
[ಬದಲಾಯಿಸಿ]ಕೆಲವು ವರ್ಷಗಳ ಹಿಂದೆ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧ ಪಟ್ಟ ಲೇಖನಗಳನ್ನು ಹುಡುಕುತ್ತಿದ್ದ ನನಗೆ ಅದರ ಬಗ್ಗೆ ಕನ್ನಡದಲ್ಲಿ ಇಂಟರ್ನೆಟ್ ನಲ್ಲಿ ಸಿಕ್ಕಿದ್ದು ಬಹಳ ಕಡಿಮೆ. ಈ ಮಾರ್ಗವಿಲ್ಲದಿದ್ದರೆ ಉಳಿದದ್ದು ಸಾಂಪ್ರದಾಯಿಕ ರೀತಿಯಲ್ಲಿ ಪುಸ್ತಕದ ಹುಳುವಾಗುವುದೊಂದೇ. ಹಾಗೆ ವಿಕಿಪೀಡಿಯದಲ್ಲಿ ಹುಡುಕುತ್ತಾ ಸಾಗಿದ ನನಗೆ ಕನ್ನಡದ ವಿಷಯದಲ್ಲಿ ಅಸಂಖ್ಯಾತ 'ಇಲ್ಲ'ಗಳು ದೊರೆತವು. ಆದರೆ ನೆರೆಯ ತಮಿಳು ಹಾಗು ತೆಲುಗು ಭಾಷೆಗಳಲ್ಲಿ ಬಹುತೇಕ ಎಲ್ಲ ವಿಚಾರಗಳ ಬಗ್ಗೆಯೂ ಲೇಖನಗಳಿದ್ದದ್ದನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಾನೇ ಏಕೆ ನನ್ನ ಕೈಲಾದಷ್ಟು 'ಇಲ್ಲ' ಗಳನ್ನೂ ತುಂಬಬಾರದು ಎನ್ನುವ ನಿರ್ಧಾರ ಮಾಡಿ, ನನ್ನ ಜ್ಞಾನ ಮಟ್ಟವನ್ನು ವೃದ್ಧಿಸುವ ಹಾಗು ಕನ್ನಡ ನುಡಿಗೂ ಸೇವೆಯಾಗುವ ವಿಕಿಪೀಡಿಯಾ ಸಂಪಾದನೆಯಲ್ಲಿ 2013 ರಿಂದ ತೊಡಗಿಸಿಕೊಂಡೆ.
ಆಸಕ್ತಿ ವಿಷಯಗಳು
[ಬದಲಾಯಿಸಿ]- ಮೂಲತಃ ನಾಟಕಕಾರ,ನಾಟಕ, ಸಿನೆಮಾಗಳನ್ನೂ ನೋಡುವುದಕ್ಕಿಂತ ಅಭಿನಯಿಸುವುದೇ ಹಂಬಲ.
- ವಿಕಿಪೀಡಿಯಾದಲ್ಲಿ ಈಗಾಗಲೇ ಇರುವ ಲೇಖನಗಳ ಪರಿಷ್ಕರಣೆ.
- ಇತಿಹಾಸ, ಅಂತರಾಷ್ಟ್ರೀಯ ಸಂಬಂಧಗಳು, ರಾಷ್ಟ್ರೀಯ ಭದ್ರತೆ, ಅರ್ಥಶಾಸ್ತ್ರ, ರಾಜಕೀಯ, ಭಕ್ತಿ ವಿಚಾರಗಳ ಬಗ್ಗೆ ವಿಪರೀತ ಆಸಕ್ತಿ, ಈ ಕಾರಣಕ್ಕಾಗಿಯೇ ನನ್ನ ಎಲ್ಲ ವಿಕಿ ಕೊಡುಗೆಗಳೂ ಮೇಲಿನ ವಿಷಯಕ್ಕೆ ಸಂಬಂಧಿಸಿದವು.
- ಆಡಳಿತ ವ್ಯವಸ್ಥೆಯ ಮೇಲಿನ ಚರ್ಚೆ ಮತ್ತೊಂದು ನನ್ನ ಪಾಲಿಗೆ ಮತ್ತೊಂದು ಆಸಕ್ತಿದಾಯಕ ವಿಚಾರವಾಗಿದ್ದು ಫೇಸ್ಬುಕ್ ತಾಣದ ಮೂಲಕ ಜನಜಾಗೃತಿ ಮೂಡಿಸಲು ಲೇಖನಗಳನ್ನು ಬರೆದು ಪ್ರಕಟಿಸುವುದು ನನ್ನ ಒಂದು ಧನಾತ್ಮಕ ಚಟ!.
- ಉತ್ತಮ ಸುಧಾರಣೆ ತರಬಲ್ಲ ಯಾವ ಚಳುವಳಿಯಾದರೂ ಇ-ಮಾಧ್ಯಮದ ಮುಖಾಂತರ ಬೆಂಬಲ ಹಾಗು ಜಾಗೃತಿ.
ಮೆಚ್ಚಿದ ಪುಸ್ತಕಗಳು
[ಬದಲಾಯಿಸಿ]- ಅಬ್ದುಲ್ ಕಲಾಂ ರ ಜೀವನ ಚರಿತ್ರೆ 'ಅಗ್ನಿಯ ರೆಕ್ಕೆಗಳು'.
- 'ಒನ್ ಬುಕ್ ಫಾರ್ ಲೈಫ್ ಸಕ್ಸಸ್' ಇಂಗ್ಲಿಷ್ ಆವೃತ್ತಿ.
- 'ಹೂ ವಿಲ್ ಕ್ರೈ ವೆನ್ ಯು ಡೈ' ಇಂಗ್ಲಿಷ್ ಆವೃತ್ತಿ.
- ವಿಲಿಯಂ ಷೇಕ್ಸ್ ಪಿಯರ್ ನ ನಾಟಕಗಳು.
- ನೇಮಿಚಂದ್ರರ 'ಬದುಕು ಬದಲಿಸಬಹುದು'.
- ಡಿ.ವಿ.ಜಿ ಯವರ 'ಮಂಕುತಿಮ್ಮನ ಕಗ್ಗ'.
- ಕುವೆಂಪುರವರ 'ಕೊನೆಯ ತೆನೆ ಮತ್ತು ವಿಶ್ವ ಮಾನವ ಸಂದೇಶ'.
ವಿಕಿಪೀಡಿಯಾಗೆ ಬರೆಯಲ್ಪಟ್ಟಿರುವ ಲೇಖನಗಳು
[ಬದಲಾಯಿಸಿ]- ಶಿರ್ಡಿ ಸಾಯಿ ಬಾಬಾ
- ಭಕ್ತ ಕುಂಬಾರ
- ಭಾರತದ ರಾಜ್ಯಗಳು ಮತ್ತು ಪ್ರಾಂತ್ಯಗಳು
- ಶ್ರೀ ಶಿವಕುಮಾರ ಸ್ವಾಮಿಗಳು
- ವಿಠ್ಠಲ ದೇವಸ್ಥಾನ, ಪಂಢರಪುರ
- ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
- ಆಂಟಿನ್ ಲಾರೆಂಟ್ ಲವಾಸಿಯೆ
- ಮಾಗಡಿ
- ಮಹಾರಾಷ್ಟ್ರದ ಅಷ್ಟ ವಿನಾಯಕ ಕ್ಷೇತ್ರಗಳು
- ಸಾವನದುರ್ಗ
- ಶ್ರೀ ಸಿದ್ಧಲಿಂಗೇಶ್ವರ
- 2008ರ ಮುಂಬೈ ದಾಳಿ
- ಮಹಾಶರಣೆ ಶ್ರೀ ದಾನಮ್ಮ ದೇವಿ
- ಆಲಿಭಾಗ್/ಕೊಲಾಬ ಕೋಟೆ
- ಕ್ಯೂಬಾ ಕ್ಷಿಪಣಿ ಬಿಕ್ಕಟ್ಟು
- ಭಾರತದ ನಿಯಂತ್ರಕರು ಮತ್ತು ಮಹಾಲೇಖಪಾಲರು
- ಸುಬ್ರಮಣಿಯನ್ ಸ್ವಾಮಿ
- ಅಟಲ್ ಬಿಹಾರಿ ವಾಜಪೇಯಿ
- ಗೋಕಾಕ್ ಚಳುವಳಿ
- ಕಿತ್ತೂರು ಚೆನ್ನಮ್ಮ
- ವೀರಪಾಂಡ್ಯ ಕಟ್ಟಬೊಮ್ಮನ್
- ಪಾರ್ಟಿಸಿಪೇಟರಿ ನೋಟ್
- ಜಾರಿ ನಿರ್ದೇಶನಾಲಯ
- ವಿಧಾನ ಸಭೆ
- ಜಲ್ಲಿಕಟ್ಟು
- ಪ್ರಧಾನಮಂತ್ರಿ ಮುದ್ರಾ ಯೋಜನೆ
- ವಿಧಾನ ಪರಿಷತ್ತು
- ಸುಕನ್ಯ ಸಮೃದ್ಧಿ ಯೋಜನೆ
- ಭಾರತ ಸ್ವಾತಂತ್ರ್ಯ ಕಾಯ್ದೆ ೧೯೪೭
- ಗಾಂಧಿ- ಇರ್ವಿನ್ ಒಪ್ಪಂದ
- ಕೇಂದ್ರ ಲೋಕ ಸೇವಾ ಆಯೋಗ
- ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆ
- ಕನ್ನಡ ಕಾವ್ಯ
- ಸುಹಾಸ್ ಗೋಪಿನಾಥ್
- ಡೈನಮೊ (ಜಾದೂಗಾರ)
- ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ
- ರಾಷ್ಟ್ರೀಯ ತನಿಖಾ ದಳ
- ರಾಷ್ಟ್ರೀಯ ಮಾನವ ಹಕ್ಕು ಸಂಸ್ಥೆಗಳ ಒಕ್ಕೂಟ
- ಖ್ಯಾಲ್
- ಭಾರತೀಯ ಪರಿಷತ್ ಅಧಿನಿಯಮ ೧೯೦೯
- ವೇತನ ಆಯೋಗ
- ಕೇಶವಾನಂದ ಭಾರತಿ ಹಾಗೂ ಕೇರಳ ಸರ್ಕಾರ
- ಪೂನಾ ಒಪ್ಪಂದ
- ರೈತವಾರಿ ಪದ್ಧತಿ
- ರೌಲತ್ ಕಾಯ್ದೆ
- ೨೦೦೮ರ ಬೆಂಗಳೂರು ಸರಣಿ ಸ್ಫೋಟ
- ವರದರಾಜ ಪೆರುಮಾಳ್ ದೇವಾಲಯ, ಕಾಂಚಿಪುರಂ
- ಕರ್ನಾಟಕ ವಿಸ್ತರಣೆ
- ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ
- ರಿಯಲ್ ಎಸ್ಟೇಟ್(ನಿಯಂತ್ರಣ ಹಾಗು ಅಭಿವೃದ್ಧಿ) ಕಾಯ್ದೆ ೨೦೧೬
- ಸಿಖ್ ಧರ್ಮದ ಮೂರು ಆಧಾರಸ್ತಂಭಗಳು
- ಎಲಾನ್ ಮಸ್ಕ್
ವಿಕಿಪೀಡಿಯಾಗೆ ಎಡಿಟ್ ಮಾಡಲ್ಪಟ್ಟಿರುವ ಲೇಖನಗಳು
[ಬದಲಾಯಿಸಿ]- ಕೃಷ್ಣದೇವರಾಯ
- ಅಜಿತ್ ಡೋವಲ್
- ನಾಗ್ರಾಜ್ ಮಂಜುಳೆ
- ಮಲೈ ಮಹದೇಶ್ವರ ಬೆಟ್ಟ
- ಪಶ್ಚಿಮ ಘಟ್ಟಗಳು
- ಛತ್ರಪತಿ ಶಿವಾಜಿ
- ಫ್ರೆಂಚ್ ಕ್ರಾಂತಿ
- ಪುಲಕೇಶಿ 2
- ಕೆ.ಎಲ್.ರಾಹುಲ್
- ಜಾನ್ ಎಫ್.ಕೆನೆಡಿ
- ಅತುಲ್ ಕುಲಕರ್ಣಿ
ವಿಕಿ ಟೆಂಪ್ಲೇಟು ನವೀಕರಣ
[ಬದಲಾಯಿಸಿ]ಬಾಹ್ಯ ಸಂಪರ್ಕ
[ಬದಲಾಯಿಸಿ]- ಮಿಂಚಂಚೆ: maheshmmhshm@gmail.com