ರಾಷ್ಟ್ರೀಯ ತನಿಖಾ ದಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಷ್ಟ್ರೀಯ ತನಿಖಾ ದಳ
National_Investigation_Agency_Logo
ಸಾಮಾನ್ಯ ಹೆಸರುಎನ್‌ಐಎ
ಸಂಸ್ಥೆಯ ಮೇಲ್ನೋಟ
ಸ್ಥಾಪನೆ೨೦೦೯
ಸಕ್ರಿಯ ಸದಸ್ಯರು೬೪೯
ವಾರ್ಷಿಕ ಆಯವ್ಯಯ೧೦೦೦ ಕೋಟಿ
ನ್ಯಾಯವ್ಯಾಪ್ತಿಯ ರಚನೆ
Federal agencyಭಾರತ
ಕಾರ್ಯಾಚರಣೆಯ ವ್ಯಾಪ್ತಿಭಾರತ
ಕಾನೂನು ವ್ಯಾಪ್ತಿಭಾರತ
ಆಡಳಿತ ಮಂಡಳಿ[[ಟೆಂಪ್ಲೇಟು:Trim brackets]]
General natureFederal law enforcement
ಮುಖ್ಯ ಕಾರ್ಯಾಲಯನವದೆಹಲಿ

ಚುನಾಯಿತ ಅಧಿಕಾರಿ
  • ಅಮಿತ್ ಶಾ, ಗೃಹ ಸಚಿವ
Website
www.nia.gov.in
ರಾಷ್ಟ್ರೀಯ ತನಿಖಾ ದಳದ ಕೇಂದ್ರ ಕಛೇರಿ, ನವದೆಹಲಿ

ರಾಷ್ಟ್ರೀಯ ತನಿಖಾ ದಳ (ಆಂಗ್ಲ:National Investigation Agency-NIA) ಒಂದು ಭಾರತ ಸರ್ಕಾರದ ಭಯೋತ್ಪಾದನಾ ನಿಗ್ರಹ ಸಂಸ್ಥೆಯಾಗಿದ್ದು ಭಯೋತ್ಪಾದನೆಗೆ ಸಂಬಂಧಿಸಿದ ಅಪರಾಧಗಳ ಪತ್ತೆಗೆ ಶ್ರಮಿಸುವ ಸಂಸ್ಥೆಯಾಗಿದೆ. ಇದು ಕೇಂದ್ರ ಸರ್ಕಾರದ ಗೃಹ ಮಂತ್ರಾಲಯದ ಅಡಿಯಲ್ಲಿ ಕೆಲಸ ಮಾಡುವ ತನಿಖಾ ಸಂಸ್ಥೆಯಾಗಿದ್ದು, ಭಾರತದ ಯಾವ ರಾಜ್ಯಗಳಲ್ಲಿ ಬೇಕಾದರೂ ಆಯಾ ರಾಜ್ಯಗಳ ಅನುಮತಿಯಿಲ್ಲದೆ ಭಯೋತ್ಪಾದಕ ಕೃತ್ಯಗಳ ಕುರಿತು ತನಿಖೆ ಮಾಡುವ ಅಥವಾ ಕ್ರಮ ಜರುಗಿಸುವ ಅಧಿಕಾರವನ್ನು ಹೊಂದಿದೆ. ಈ ಸಂಸ್ಥೆಯು ರಾಷ್ಟ್ರೀಯ ತನಿಖಾ ದಳ ಕಾಯ್ದೆ ೨೦೦೮ರ ಪ್ರಕಾರ ಅಸ್ತಿತ್ವಕ್ಕೆ ಬಂದಿದೆ[೧]. ಡಿಸೆಂಬರ್ ೩೧, ೨೦೦೮ರಂದು ಭಾರತದ ಸಂಸತ್ತಿನಲ್ಲಿ ಈ ಸಂಸ್ಥೆ ಅನುಮೋದನೆ ಪಡೆದುಕೊಂಡು ರಚಿತವಾಯಿತು.

2008ರ ಮುಂಬೈ ದಾಳಿಯಿಂದ ಎಚ್ಚೆತ್ತ ಭಾರತ ಸರ್ಕಾರ ದೇಶದೊಳಗಣ ಭಯೋತ್ಪಾದಕ ಕೃತ್ಯಗಳನ್ನು ಹತ್ತಿಕ್ಕಲು ಹಾಗು ಭಯೋತ್ಪಾದಕ ಸಂಬಂಧಿ ಚಟುವಟಿಕೆಗಳನ್ನು ಸಮರ್ಥವಾಗಿ ನಿಗ್ರಹಿಸಲು ಸಂಸ್ಥೆಯ ಅವಶ್ಯಕತೆಯಿರುವುದನ್ನು ಮನಗಂಡಿತು. ೨೦೦೮ರ ಮುಂಬೈ ದಾಳಿ ದೇಶದಲ್ಲಿನ ಭದ್ರತಾ ಲೋಪಗಳಿಗೆ ಹಾಗು ಭಯೋತ್ಪಾದಕ ಕೃತ್ಯ ನಿಗ್ರಹಣೆಗೆ ಹಿಡಿದ ಕೈಗನ್ನಡಿಯಾಗಿ ಹಲವಾರು ಲೋಪಗಳನ್ನು ಎತ್ತಿ ಹಿಡಿದ ಕಾರಣ ಸರ್ಕಾರ ರಾಷ್ಟ್ರೀಯ ತನಿಖಾ ದಳವನ್ನು ಹುಟ್ಟುಹಾಕಿತು. ಈ ಸಂಸ್ಥೆಯು ಕಾರ್ಯಾರಂಭ ಮಾಡಿದಂದಿನಿಂದ ಇಂದಿನವರೆಗೂ ದಾಖಲಾದ ೧೮೫ ದೂರುಗಳಲ್ಲಿ ೧೬೭ ದೂರುಗಳನ್ನು ವಿಲೇವಾರಿ ಮಾಡುವ ಮೂಲಕ(೯೫ ಪ್ರತಿಶತ ದೂರುಗಳನ್ನು) ಅಪರಾಧ ನಿರ್ಣಯಗಳಲ್ಲಿ ಬೇರೆ ಸರ್ಕಾರೀ ಸಂಸ್ಥೆಗಳಿಗಿಂತ ಒಂದು ಹೆಜ್ಜೆ ಮುಂದಿದೆ.

ಈ ಸರ್ಕಾರೀ ಸಂಸ್ಥೆಯ ರಚನೆಗೆ ಅಡಿಪಾಯ ಹಾಕಿದವರಲ್ಲಿ ಹಾಗು ಈ ಸಂಸ್ಥೆಯ ಮೊಟ್ಟ ಮೊದಲ ಅಧ್ಯಕ್ಷರಾಗಿದ್ದ ರಾಧಾ ವಿನೋದ್ ರಾಜು ರವರು ೨೦೧೦ ರ ಜನವರಿ ೩೧ರ ವರೆವಿಗೂ ಡೈರೆಕ್ಟರ್-ಜನರಲ್ ಆಗಿ ರಾಷ್ಟ್ರೀಯ ಅನ್ವೇಷಣಾ ಸಂಸ್ಥೆಗೆ ಸೇವೆ ಸಲ್ಲಿಸಿದ್ದಾರೆ. ಅವರ ನಂತರ ಶರದ್ ಚಂದ್ರ ಸಿನ್ಹಾ ಮಾರ್ಚ್ ೨೦೧೩ ರ ವರೆವಿಗೂ ಅವರನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಸದಸ್ಯರನ್ನಾಗಿ ನೇಮಿಸುವವರೆವಿಗೂ ಮಖ್ಯಸ್ಥ ಸ್ಥಾನ ಅಲಂಕರಿಸಿದ್ದರು. ೨೦೧೭ರ ಸೆಪ್ಟೆಂಬರ್ ನಲ್ಲಿ ವೈ.ಸಿ ಮೋದಿಯವರನ್ನು ಎನ್.ಐ.ಎ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು.

ಮಸೂದೆ[ಬದಲಾಯಿಸಿ]

೨೦೦೮ರ ಡಿಸೆಂಬರ್ ನಲ್ಲಿ ಎನ್.ಐ.ಎ ಯ ಮಸೂದೆಯನ್ನು ಭಾರತದ ಸಂಸತ್ತಿನಲ್ಲಿ ಮಂಡಿಸಿ ಅಂಗೀಕರಿಸಲಾಯಿತು. ಅದೇ ವರ್ಷದಲ್ಲಿ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ಅಪಾರ ಆಸ್ತಿ ಪಾಸ್ತಿ ನಷ್ಟವಾಗಿದ್ದು, ಅನೇಕ ಮುಗ್ದ ನಾಗರೀಕರ ಹತ್ಯೆಯೂ ಆಗಿತ್ತು. ಈ ಸಂಸ್ಥೆಯ ಆಲೋಚನೆಗೆ ಮುಂಬೈ ದಾಳಿಯು ಒಂದು ಪ್ರಮುಖ ಕಾರಣವಾಗಿದೆ. ಈ ಮಸೂದೆಯ ಪ್ರಕಾರ ಎನ್.ಐ.ಎ ಯು ದೇಶದ ಯಾವುದೇ ಮೂಲೆಯಲ್ಲಿಯೂ ದೇಶದ ಏಕತೆ ಹಾಗು ಸಾರ್ವಭೌಮತ್ವಕ್ಕೆ ಧಕ್ಕೆಯಾಗುವ ಕೃತ್ಯಗಳು ನಡೆಯುವುದರ ಬಗ್ಗೆ ಸಾಕ್ಷ ಕಲೆಹಾಕಬಹುದು ಹಾಗು ಕೃತ್ಯಗಳಲ್ಲಿ ಶಾಮೀಲಾದ ಯಾವುದೇ ವ್ಯಕ್ತಿಯಬಗ್ಗೆ ಕಾನೂನು ಕ್ರಮ ಜರುಗಿಸುವಂತೆ ಶಿಫಾರಸ್ಸು ಮಾಡಬಹುದು. ಪ್ರಾಣಹಾನಿಗಾಗಿ ಬಾಂಬ್ ಸಿಡಿಸುವಿಕೆ, ವಿಮಾನ ಅಥವಾ ನೌಕೆಗಳ ಅಪಹರಣ (ಹೈಜಾಕ್), ಪರಮಾಣು ಕೇಂದ್ರಗಳ ಮೇಲಿನ ದಾಳಿಯಂತಹ ಕೃತ್ಯಗಳನ್ನು ಈ ಮಸೂದೆಯ ಪ್ರಕಾರ ಭಯೋತ್ಪಾದಕ ಕೃತ್ಯಗಳಡಿಯಲ್ಲಿ ಸೇರಿಸಿ ಸಂಸ್ಥೆಯು ಅನ್ವೇಷಣೆ/ತಪಾಸಣೆ/ವಿಚಾರಣೆ ನಡೆಸಬಹುದು. ಇದೇ ಕಾಯ್ದೆಗೆ ಮುಂದೆ ತಿದ್ದುಪಡಿ ಮಾಡಿ ದೇಶದ ಆರ್ಥಿಕ ಸುಭೀಕ್ಷತೆಗೆ ಧಕ್ಕೆಯಾಗುವ ಅಥವಾ ದೇಶದ ಆರ್ಥಿಕ ವ್ಯವಸ್ಥೆಯನ್ನು ಹಾಳುಗೆಡವುವ ಉದ್ದೇಶಗಳಿಂದ ಕೂಡಿದ ಕೃತ್ಯಗಳನ್ನು ಭಯೋತ್ಪಾದಕ ಚಟುವಟಿಕೆಗಳಡಿಯಲ್ಲಿ ಸೇರಿಸಿ ಎನ್.ಐ.ಎ ತನಿಖೆ ನಡೆಸುವಂತೆ ಅವಕಾಶ ಕಲ್ಪಿಸಲಾಗಿದೆ.

ಈ ಸಂಸ್ಥೆಗೆ ಬೇಕಾದ ಸಿಬ್ಬಂದಿಗಳನ್ನು ರಾಷ್ಟ್ರ ರಾಜಧಾನಿ ದೆಹಲಿಗೆ ಅನ್ವಯವಾಗುವಂತೆ ಈಗಾಗಲೇ ಕೇಂದ್ರ ಸರ್ಕಾರೀ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಗ ಸಂಸ್ಥೆಗಳಿಂದಲೇ ನೇಮಿಸಲಾಗುತ್ತದೆ. ಆದರೆ ರಾಜ್ಯಗಳಿಗೆ ಅನ್ವಯವಾಗುವಂತೆ ಸಿಬ್ಬಂದಿಗಳನ್ನು ಆಯಾ ರಾಜ್ಯಗಳ ಪೊಲೀಸ್ ಇಲಾಖೆಯಿಂದ ಶಾಶ್ವತವಾಗಿ ನೇಮಿಸುವ ಅವಕಾಶ ಕಲ್ಪಿಸಲಾಗಿದೆ.

ರಾಷ್ಟ್ರೀಯ ತನಿಖಾ ದಳ ಮಸೂದೆ ಹಾಗು ಕಾನೂನು ಬಾಹಿರ ಚಟುವಟಿಕೆ (ತಡೆ) ಕಾಯ್ದೆ ತಿದ್ದುಪಡಿ ಮಸೂದೆಗೆ ೨೦೦೮ ರ ಡಿಸೆಂಬರ್ ೩೦ರಂದು ಅಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ರವರಿಂದ ಅಂಕಿತ ಬೀಳುವುದರೊಂದಿಗೆ ಆರಂಭವಾಗಿ ಅದೇ ವರ್ಷದ ಕೊನೆಯ ಅಧಿವೇಶನದಲ್ಲಿ ಮಸೂದೆ ಮಂಡನೆಯಾಯಿತು.

ಧ್ಯೇಯೋದ್ದೇಶಗಳು[ಬದಲಾಯಿಸಿ]

ಅಂತರಾಷ್ಟ್ರೀಯ ಗುಣಮಟ್ಟದಲ್ಲಿ ಭಾರತೀಯ ಅನ್ವೇಷಣಾ/ತನಿಖಾ ಸಂಸ್ಥೆಯನ್ನು ಅಭಿವೃದ್ಧಿ ಪಡಿಸುವುದರೊಂದಿಗೆ ತನಿಖೆಗಾಗಿಯೇ ಮೀಸಲಿರುವ ಸುಸಜ್ಜಿತ ದಳವೊಂದನ್ನು ಸೇವೆಗಾಗಿ ತಯಾರಿಡುವುದು ಎನ್.ಐ.ಎ ಯ ಮುಖ್ಯ ಉದ್ದೇಶವಾಗಿದೆ.

ಅದರೊಡನೆ ಈ ಕೆಳಕಂಡ ಧ್ಯೇಯೋದ್ದೇಶಗಳು ಕೂಡಿವೆ,

  • ಸುಸಜ್ಜಿತ ಸಿಬ್ಬಂದಿ ವರ್ಗದಿಂದ ಕೂಡಿದ ತನಿಖಾ ಸಂಸ್ಥೆಯು ದೇಶದೊಳಗೆ ಜಾರಿಯಲ್ಲಿದ್ದು ಭಯೋತ್ಪಾದಕ ಕೃತ್ಯ, ರಾಷ್ಟ್ರವಿರೋಧಿ ಕೃತ್ಯ, ರಾಷ್ಟ್ರದಲ್ಲಿ ಶಾಂತಿ ಕದಡುವ ಶಕ್ತಿಗಳ ವಿರುದ್ಧ ವ್ಯವಸ್ಥಿತವಾಗಿ ಸೆಣಸಲು ರಾಷ್ಟ್ರಕ್ಕೆ ಯಾವ ಕ್ಷಣದಲ್ಲಿ ಬೇಕಾದರೂ ದೊರೆಯುವಂತೆ ತಯಾರಿರುವುದು.
  • ತನಿಖಾ ಸಂಸ್ಥೆಗೆ ಅವಶ್ಯವಿರುವ ಮಾನವ ಸಂಪನ್ಮೂಲಕ್ಕೆ/ಸಿಬ್ಬಂದಿ ವರ್ಗಕ್ಕೆ ಉನ್ನತ ತರಬೇತಿಗಳ ಮೂಲಕ ಜಾಗೃತವಾಗಿರುವಂತೆ ನೋಡಿಕೊಳ್ಳುವುದು.
  • ಈಗಾಗಲೇ ದೇಶದೊಳಗಿರುವ ಭಯೋತ್ಪಾದಕ ಸಂಘಟನೆಗಳನ್ನು/ವ್ಯಕ್ತಿಗಳನ್ನು ಹತ್ತಿಕ್ಕುವುದು.
  • ಭಯೋತ್ಪಾದಕ ಕೃತ್ಯಗಳ ಸಕಲ ಮಾಹಿತಿಯನ್ನು ಸಂಗ್ರಹಿಸುವುದು/ಸಂಗ್ರಹಿಸಲು ಅವಶ್ಯವಾದ ಜಾಲವನ್ನು , ಕಾರ್ಯಸೂಚಿಯನ್ನು ಜಾರಿಯಲ್ಲಿರುವಂತೆ ನೋಡಿಕೊಳ್ಳುವುದು.

ಕಾನೂನಾತ್ಮಕ ಅಧಿಕಾರ[ಬದಲಾಯಿಸಿ]

  • ಎನ್.ಐ.ಎ ಕಾಯ್ದೆಯಲ್ಲಿ ತಿಳಿಸಿರುವಂತೆ ಈ ಸಂಸ್ಥೆಗೆ ಭಯೋತ್ಪಾದಕ ಕೃತ್ಯ ಸಂಬಂಧಿ ತನಿಖೆಗಳನ್ನು ದೇಶದ ಯಾವುದೇ ಮೂಲೆಯಲ್ಲಿ ಕೈಗೊಳ್ಳಲು ಸರ್ವಾಧಿಕಾರವಿರುತ್ತದೆ. ಇಷ್ಟೇ ಅಲ್ಲದೆ ಅಂತಹ ಕೃತ್ಯಗಳಲ್ಲಿ ಶಾಮೀಲಾಗಿರುವ ಯಾವುದೇ ವ್ಯಕ್ತಿ/ ಸಂಸ್ಥೆಗಳ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸಲು ಶಿಫಾರಸ್ಸು ಮಾಡುವ ಅಧಿಕಾರವನ್ನು ಹೊಂದಿರುತ್ತದೆ.
  • ಎನ್.ಐ.ಎ ಕಾಯ್ದೆಯಲ್ಲಿ ನಮೂದಾಗಿರುವ ಯಾವುದೇ ಕೃತ್ಯಗಳ ಮಾದರಿ ಕೃತ್ಯಗಳು ರಾಜ್ಯಸರ್ಕಾರದಲ್ಲಿ ದೂರುಗಳಾಗಿ ಅದಾಗಲೇ ದಾಖಲಾಗಿದ್ದಾರೆ ಅಂತಹ ದೂರುಗಳನ್ನು ಎನ್.ಐ.ಎ ಗೆ ವರ್ಗಾಯಿಸುವಂತೆ ಆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರವನ್ನು ಕೋರಿಕೊಳ್ಳಬಹುದು.
  • ಕೇಂದ್ರ ಸರ್ಕಾರವೇ ನೇರವಾಗಿ ಯಾವುದೇ ಭಯೋತ್ಪಾದಕ ಮಾದರಿಯ ಕೃತ್ಯಗಳನ್ನು ತನಿಖೆ ಮಾಡುವಂತೆ ಆಜ್ಞಾಪಿಸಬಹುದು.
  • ಎನ್.ಐ.ಎ ಗೆ ನಿಯೋಜಿತರಾದ ಅಧಿಕಾರಿಗಳು ಭಾರತೀಯ ರಾಜಸ್ವ ಸೇವೆ, ಭಾರತೀಯ ಪೊಲೀಸ್ ಸೇವೆ, ರಾಜ್ಯ ಪೊಲೀಸ್ ಸೇವೆ, ಆದಾಯ ತೆರಿಗೆ ಇಲಾಖೆ, ಕೇಂದ್ರ ಸಶಸ್ತ್ರ ದಳ ಡಾ ಮೂಲದವರೇ ಆಗಿದ್ದು ಅವರಿಗೆ ಯಾವುದೇ ತನಿಖಾಧಿಕಾರಿಗಳಿಗಿರುವ ಎಲ್ಲ ಸ್ಥಾನ ಮಾನಗಳು ಹಾಗು ಕಾನೂನಾತ್ಮಕ ಗೌರವಾದರಗಳು ಸಂದಾಯವಾಗುತ್ತವೆ.


ವಿಶೇಷ ಎನ್.ಐ.ಎ ನ್ಯಾಯಾಲಯಗಳು[ಬದಲಾಯಿಸಿ]

ಎನ್.ಐ.ಎ ಕಾಯ್ದೆ ೨೦೦೮ರ ಸೆಕ್ಷನ್ ೧೧ ಹಾಗು ೨೨ರ ಅನ್ವಯ ಭಾರತ ಸರ್ಕಾರದಿಂದ ಹಲವಾರು ವಿಶೇಷ ಎನ್.ಐ.ಎ ನ್ಯಾಯಾಲಯಗಳನ್ನು ತೆರೆಯಲಾಗಿದೆ. ವಿವಿಧ ಎನ್.ಐ.ಎ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಅಥವಾ ಎನ್.ಐ.ಎಗೆ ವಹಿಸಿದ ಯಾವುದೇ ಪ್ರಕರಣಗಳ ಸಂಬಂಧಿ ವಿಚಾರಣೆಗಳನ್ನು ಇಲ್ಲಿ ನಡೆಸಲಾಗುತ್ತದೆ. ಈ ನ್ಯಾಯಾಲಯಗಳಿಗೆ ಕಾನೂನಾತ್ಮಕ ನಿಲುವುಗಳನ್ನು ತೀರ್ಮಾನ ಮಾಡುವುದು ಕೇಂದ್ರ ಸರ್ಕಾರವೇ ಆಗಿರುತ್ತದೆ.

ಈ ನ್ಯಾಯಾಲಯಗಳಿಗೆ ನ್ಯಾಯಾಧೀಶರನ್ನು ಕೇಂದ್ರ ಸರ್ಕಾರವೇ ಆಯ್ಕೆ ಮಾಡುತ್ತದೆ. ಆದರೆ ಆಯ್ಕೆ ಪ್ರಕ್ರಿಯೆಯಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಶಿಫಾರಸ್ಸು ಕೂಡ ಒಂದು ಮುಖ್ಯ ಭಾಗವಾಗಿರುತ್ತದೆ. ಭಾರತದ ಸರ್ವೋಚ್ಛ ನ್ಯಾಯಾಲಯ ಈ ಒಂದು ವಿಶೇಷ ನ್ಯಾಯಾಲಯದ ದಾವೆಯನ್ನು ಮತ್ತೊಂದು ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸುವ ಅಧಿಕಾರವನ್ನು ಹೊಂದಿದೆ. ಆ ವಿಶೇಷ ನ್ಯಾಯಾಲಯ ಸದರಿ ದಾವೆಯ ರಾಜ್ಯದಲ್ಲಿಯೇ ಇರಬೇಕೆಂಬ ನಿಯಮವಿರುವುದಿಲ್ಲ. ಎನ್.ಐ.ಎ ವಿಶೇಷ ನ್ಯಾಯಾಲಯಕ್ಕೆ ಸೆಶನ್ ನ್ಯಾಯಾಲಕ್ಕಿರುವಂತಹ ಎಲ್ಲಾ ಅಧಿಕಾರಗಳು ಇರುತ್ತವೆ. ( ೧೯೭೩ರ ಅಪರಾಧ ನೀತಿ ಸಂಹಿತೆ ಆಧಾರದ ಮೇಲೆ)

ಇವನ್ನೂ ನೋಡಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "ABOUT US". nia.gov.in. NIA. Retrieved 25 September 2022.