ಸಿಖ್ ಧರ್ಮದ ಮೂರು ಆಧಾರಸ್ತಂಭಗಳು
ಗೋಚರ
ಸಿಖ್ ಧರ್ಮದ ಮೂರು ಮುಖ್ಯ ಆಧಾರ ಸ್ತಂಭಗಳನ್ನು ಧರ್ಮಗುರು ಸಂತ ಗುರು ನಾನಕ್ ದೇವ್ ಅವರು ಸೂತ್ರವಾಗಿ ನೀಡಿದ್ದಾರೆ.
ನಾಮ ಜಪ
[ಬದಲಾಯಿಸಿ]ಪಂಜಾಬಿ:ನಾಮ್ ಜಪೋ, ಪಂಜಾಬಿ ಗುರುಮುಖಿ: ਨਾਮ ਜਪੋ
- ದೇವರ ನಾಮ ಸ್ಮರಣೆಯನ್ನು ಎಂದೂ ಮರೆಯದಿರುವುದು.
- ದೇವರ ಕೃಪೆಗಾಗಿ ನಿತ್ಯವೂ ಸಿಖ್ ಶ್ಲೋಕಗಳಾದ ನಿತ್ನಮ್ ಬನಿ(ಸಿಖ್ಖರ ದಿನ ನಿತ್ಯದ ಶ್ಲೋಕಗಳು)ಗಳನ್ನು ಪಠಿಸುವುದು.
ನಿಯತ್ತಿನ ಜೀವನ
[ಬದಲಾಯಿಸಿ]ಪಂಜಾಬಿ:ಕಿರಾತ್ ಕರೋ, ಪಂಜಾಬಿ ಗುರುಮುಖಿ: ਕਿੱਰਤ ਕਰੋ
- ನಿಯತ್ತಿನಿಂದ ಗಳಿಸುವುದು.
- ಕಷ್ಟ ಪಟ್ಟು ದುಡಿಯುವುದು.
- ತಮ್ಮ ಮಾನಸಿಕ ಹಾಗು ದೈಹಿಕ ಶಕ್ತಿಗಳನ್ನು ಯಥಾವತ್ತಾಗಿ ದುಡಿಸಿಕೊಂಡು ಮಾತ್ರವೇ ಸಂಪಾದಿಸುವುದು.
- ದೇವರು ಕೊಡಮಾಡಿದ ಎಲ್ಲವನ್ನೂ ವರವೆಂದು ಪರಿಗಣಿಸಿ ಸದಾಕಾಲ ಸತ್ಯವನ್ನೇ ನುಡಿಯುತ್ತಾ ಸಭ್ಯರಾಗಿ ಬದುಕುವುದು.
- ಉತ್ತಮ ನೈತಿಕ ಹಾಗು ಆಧ್ಯಾತ್ಮಿಕ ಮೌಲ್ಯಗಳನ್ನು ರೂಢಿಸಿಕೊಳ್ಳುವುದು.
ಹಂಚಿತಿನ್ನುವುದು
[ಬದಲಾಯಿಸಿ]ಪಂಜಾಬಿ:ವಾಂದ್ ಚಕ್ಕೋ, ಪಂಜಾಬಿ ಗುರುಮುಖಿ: ਵੰਡ ਛਕੋ
- ಆಹಾರ, ಸಂಪತ್ತು, ಧನ ಯಾವುದೇ ಆಗಲಿ ಧರ್ಮ, ಜಾತಿ, ಮತ, ಪಂಗಡಗಳ ಯಾವುದೇ ಭೇದವಿಲ್ಲದೆ ಎಲ್ಲರೊಂದಿಗೂ ಹಂಚಿಕೊಂಡು ಬಾಳುವುದು.
- ಸಿಖ್ ಧರ್ಮದ ಮೌಲ್ಯಗಳನ್ನು ಎತ್ತಿ ಹಿಡಿಯುವ ಯಾವುದೇ ಸಮುದಾಯದೊಂದಿಗೆ ಗುರುತಿಸಿಕೊಳ್ಳುವುದು ಹಾಗು ತಮ್ಮ ಕೈಲಾದಷ್ಟು ಆ ಸಮುದಾಯಕ್ಕೆ ನೆರವು ನೀಡುವುದು.
- ಕೊಡುವುದರ ಬಗ್ಗೆ ಶ್ರದ್ಧೆ ಬೆಳೆಸಿಕೊಳ್ಳುವುದು. ಕೊಡುವುದರಿಂದಲೇ ಶ್ರೇಯಸ್ಸು ಎಂಬ ಭಾವ ತಳೆಯುವುದು.