ಡೈನಮೊ (ಜಾದೂಗಾರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search


ಡೈನಮೊ
Steven Frayne.jpg
೨೦೧೪ರಲ್ಲಿ ಡೈನಮೊ
ಜನನ೧೭ನೇ ಡಿಸೆಂಬರ್ ೧೯೮೨
ಬ್ರಾಡ್ ಫೋರ್ಡ್, ಪಶ್ಚಿಮ ಯಾರ್ಕ್ ಶೈರ್, ಇಂಗ್ಲೆಂಡ್
ಉದ್ಯೋಗಜಾದೂಗಾರ
ಸಕ್ರಿಯ ವರ್ಷಗಳು೨೦೦೨ - ಹಾಲಿ
Known forಜಾದೂ, ಡೈನಮೊ: ಮ್ಯಾಜಿಷಿಯನ್ ಇಂಪಾಸಿಬಲ್- ಆಂಗ್ಲ ದೂರದರ್ಶನ ಕಾರ್ಯಕ್ರಮ
ಜಾಲತಾಣdynamoworld.com

ಡೈನಮೊ (ಜಾದೂಗಾರ) ಡೈನಮೊ ಎಂದೇ ಹೆಸರಾಗಿರುವ ಸ್ಟೀವನ್ ಫ್ರೈನ್ ಒಬ್ಬ ಖ್ಯಾತ ಆಂಗ್ಲ ಜಾದೂಗಾರ. ಇವರು ಜನಿಸಿದ್ದು ೧೯೮೨ ರ ಡಿಸೆಂಬರ್ ೧೭ ರಂದು. ಇಂಗ್ಲೀಷ್ ದೂರದರ್ಶನದಲ್ಲಿ ಪ್ರಸಾರವಾಗುವ 'ಡೈನಮೊ: ಮ್ಯಾಜಿಷಿಯನ್ ಇಂಪಾಸಿಬಲ್' ಎಂಬ ಕಾರ್ಯಕ್ರಮದಿಂದಲೇ ಪ್ರಸಿದ್ಧಿ ಪಡೆದುಕೊಂಡಿದ್ದಾರೆ. ಈ ಕಾರ್ಯಕ್ರಮ ಜುಲೈ ೨೦೧೧ ರಿಂದ ಸೆಪ್ಟೆಂಬರ್ ೨೦೧೪ ರ ವರೆಗೆ ಪ್ರಸಾರವಾಗುತ್ತಿತ್ತು[೧].

ಆರಂಭಿಕ ದಿನಗಳು[ಬದಲಾಯಿಸಿ]

ಫ್ರೈನ್ ಜನಿಸಿದ್ದು ಇಂಗ್ಲೆಂಡ್ ಪಶ್ಚಿಮ ಯಾರ್ಕ್ ಶೈರ್ ನ ಬ್ರಾಡ್ ಫೋರ್ಡ್ ನಲ್ಲಿ. ಇವರ ತಾಯಿ ಇಂಗ್ಲೀಷ್ ಮೂಲದವರೇ ಆದರೆ ತಂದೆ ಪಾಕಿಸ್ತಾನ ಮೂಲದವರು.ಕರುಳು ಸಂಬಂಧಿ ಕಾಯಿಲೆಯೊಂದರಿಂದ ನರಳಿದ ಫ್ರೈನ್ ಜೀವನ ಪರ್ಯಂತ ಸಣ್ಣ ದೇಹವನ್ನು ಹೊಂದಿರುವಂತಾಗಿದೆ. ಇವರೇ ಹೇಳುವ ಪ್ರಕಾರ ಇವರು ಮೊದಲು ಜಾದೂ ಕಲಿತಿದ್ದು ಇವರ ಅಜ್ಜನಿಂದ[೨].

ಮಾಧ್ಯಮಗಳಲ್ಲಿ ಕಾರ್ಯಕ್ರಮಗಳು[ಬದಲಾಯಿಸಿ]

  • ಡೈನಮೊ ಎರಡನೇ ಸರಣಿ ಕಾರ್ಯಕ್ರಮ, 'ಡೈನಮೊ: ದಿ ಮ್ಯಾಜಿಷಿಯನ್ ಇಂಪಾಸಿಬಲ್'.
  • ಡೈನಮೊ ಮೂರನೇ ಸರಣಿ ಕಾರ್ಯಕ್ರಮ, 'ಡೈನಮೊ: ದಿ ಮ್ಯಾಜಿಷಿಯನ್ ಇಂಪಾಸಿಬಲ್'. ೨೦೧೩ರ ಜುಲೈ ೧೧ ರಂದು ಪ್ರಸಾರವಾಯಿತು.
  • ೨೦೧೩ರ ಆಗಸ್ಟ್ ೧ ರಂದು ಡೈನಮೊ 'ನಥಿಂಗ್ ಐಸ್ ಇಂಪಾಸಿಬಲ್' ಎನ್ನುವ ತಲೆ ಬರಹವಿರುವ ತಮ್ಮ ಆತ್ಮ ಚರಿತ್ರೆಯನ್ನು ಬಿಡುಗಡೆ ಮಾಡಿದರು.

ಜಾದೂ ಪ್ರಶಸ್ತಿಗಳು[ಬದಲಾಯಿಸಿ]

  • 'ಡೈನಮೊ: ದಿ ಮ್ಯಾಜಿಷಿಯನ್ ಇಂಪಾಸಿಬಲ್' ಆಂಗ್ಲ ಕಾರ್ಯಕ್ರಮವು 'ಬ್ರಾಡ್ಕ್ಯಾಸ್ಟ್ ಅವಾರ್ಡ್ಸ್' ಕಾರ್ಯಕ್ರಮದಲ್ಲಿ ಅತ್ಯುತ್ತಮ ಮನರಂಜನೆ ಕಾರ್ಯಕ್ರಮದ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು[೩].
  • 'ಡೈನಮೊ: ಮ್ಯಾಜಿಷಿಯನ್ ಇಂಪಾಸಿಬಲ್' ಎರಡನೇ ಆವೃತ್ತಿಯೂ ಅತ್ಯತ್ತಮ ಮನರಂಜನೆ ಕಾರ್ಯಕ್ರಮಕ್ಕಾಗಿ ಸತತ ಎರಡನೇ ಬಾರಿಗೆ ವರ್ಜಿನ್ ಮೀಡಿಯಾ ಅವಾರ್ಡ್ ಪಡೆಯಿತು.
  • ಜಾದೂ ಕಲಾ ಅಕಾಡೆಮಿಯ ೪೮ ನೇ ವಾರ್ಷಿಕ ಪ್ರಶಸ್ತಿ ಪ್ರದರ್ಶನದಲ್ಲಿ ವರ್ಷದ ಜಾದೂಗಾರ ಪ್ರಶಸ್ತಿ.

ಉಲ್ಲೇಖಗಳು[ಬದಲಾಯಿಸಿ]

  1. "ಸೆಲೆಬ್ರಿಟಿಗಳ ಕುರಿತಾದ ಪ್ರಶ್ನೋತ್ತರ ಮಾಲಿಕೆ ವೆಬ್ ಪುಟ".
  2. "ಡೈನಮೊ ಆತ್ಮ ಚರಿತ್ರೆ".
  3. "ಟಿ.ವಿ ಅವಾರ್ಡುಗಳ ಕುರಿತಾದ ಬಿ.ಬಿ.ಸಿ ಆಂಗ್ಲ ವರದಿ".