ವೇತನ ಆಯೋಗ
ಭಾರತ ಸರ್ಕಾರದಿಂದ ನಿಯೋಜನೆಗೊಳ್ಳುವ ಈ ಆಯೋಗವು ಕಾಲಕ್ಕನುಗುಣವಾಗಿ ಸರ್ಕಾರಿ ಕೆಲಸಗಾರರ ವೇತನ ಸ್ವರೂಪ ಬದಲಾವಣೆಗೆ ಶಿಫಾರಸ್ಸು ಮಾಡಲೆಂದೇ ರಚಿತವಾಗಿರುತ್ತದೆ. ಸ್ವತಂತ್ರ ಬಂದಾಗಿನಿಂದ ಇಲ್ಲಿಯವರೆವಿಗೂ ಏಳು ವೇತನ ಆಯೋಗಗಳನ್ನು ರಚಿಸಿ ಅವುಗಳಿಂದ ಸರ್ಕಾರಿ ಕೆಲಸಗಾರರ ವೇತನ ಕುರಿತಾಗಿ ಶಿಫಾರಸ್ಸು ಪಡೆಯಲಾಗಿದೆ. ಸರ್ಕಾರದ ನಾಗರೀಕ ಸೇವಾ ವಲಯಗಳು ಹಾಗು ದೇಶದ ಸೇನಾ ವಿಭಾಗಗಳಿಗೆ ವೇತನ ಆಯೋಗದ ಶಿಫಾರಸ್ಸು ಬಹು ಮುಖ್ಯವಾಗಿರುತ್ತದೆ[೧]. ವೇತನ ಆಯೋಗದ ಮುಖ್ಯ ಕಚೇರಿ ದೆಹಲಿಯಲ್ಲಿದ್ದು ಭಾರತ ಸರ್ಕಾರ ವೇತನ ಆಯೋಗವನ್ನು ರಚನೆ ಮಾಡುವ ಜವಾಬ್ದಾರಿ ಹಾಗು ಅಧಿಕಾರವನ್ನು ಹೊಂದಿದೆ. ವೇತನ ಆಯೋಗ ಅಸ್ತಿತ್ವದಲ್ಲಿರುವ ಅವಧಿ ಕೇವಲ ಹದಿನೆಂಟು ತಿಂಗಳುಗಳು ಮಾತ್ರ. ಆಯೋಗ ರಚನೆಯಾದಂದಿನಿಂದ ಹದಿನೆಂಟು ತಿಂಗಳುಗಳ ಒಳಗೆ ವೇತನ ಆಯೋಗವು ತನ್ನ ಸಂಪೂರ್ಣ ಶಿಫಾರಸ್ಸನ್ನು ಸರ್ಕಾರಕ್ಕೆ ಸಲ್ಲಿಸಬೇಕು.
ಮೊದಲನೇ ವೇತನ ಆಯೋಗ
[ಬದಲಾಯಿಸಿ]ಭಾರತದಲ್ಲಿ ಮೊದಲ ಬಾರಿಗೆ ವೇತನ ಆಯೋಗವನ್ನು ೧೯೪೬ರ ಜನವರಿ ತಿಂಗಳಿನಲ್ಲಿ ರಚಿಸಲಾಯಿತು. ಬ್ರಿಟೀಷ್ ಸರ್ಕಾರ ಚಾಲ್ತಿಯಲ್ಲಿದ್ದಾಗ ರಚಿತವಾದ ಆಯೋಗ ಇದಾಗಿದ್ದು ಅದರ ಶಿಫಾರಸ್ಸು ವರದಿಗಳನ್ನು ೧೯೪೭ ರ ಮೇ ತಿಂಗಳಿನಲ್ಲಿ ಅಂದರೆ ಸ್ವಾತಂತ್ರ್ಯ ಬರುವ ಕೆಲವೇ ತಿಂಗಳುಗಳ ಮೊದಲು ಭಾರತದ ಮಧ್ಯಂತರ ಸರ್ಕಾರಕ್ಕೆ [೨] ಸಲ್ಲಿಸಲಾಯಿತು. ಆಗ ರಚಿತವಾಗಿದ್ದ ವೇತನ ಆಯೋಗಕ್ಕೆ ಛೇರ್ಮನ್ ಆಗಿದ್ದವರು ಶ್ರೀನಿವಾಸ ವರದಾಚಾರಿಯರ್. ಒಂಬತ್ತು ಸದಸ್ಯರನ್ನೊಳಗೊಂಡ ಮೊದಲ ವೇತನ ಆಯೋಗವನ್ನು ಬ್ರಿಟಿಷ್ ಸರ್ಕಾರ ನಾಗರೀಕ ಸೇವಾ ವಲಯಗಳಲ್ಲಿನ ಸರ್ಕಾರಿ ಕೆಲಸಗಾರರಿಗೆ ಕೊಡಮಾಡುವ ವೇತನ ಪರಿಷ್ಕರಿಸಲೆಂದೇ ರಚಿಸಲಾಗಿತ್ತು.
ಇವನ್ನೂ ನೋಡಿ
[ಬದಲಾಯಿಸಿ]- ಆರನೇ ವೇತನ ಆಯೋಗದ ವರದಿ.
- ಕೇಂದ್ರ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗದ ಸುದ್ದಿ ತಾಣ Archived 2018-10-15 ವೇಬ್ಯಾಕ್ ಮೆಷಿನ್ ನಲ್ಲಿ..
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "ಮೂರನೇ ವೇತನ ಆಯೋಗದ ಶಿಫಾರಸ್ಸು ಅಂಶಗಳು" (ಪಿಡಿಎಫ್ ವರದಿ) (in ಆಂಗ್ಲ). ನವ ದೆಹಲಿ. ೦೬ ಅಕ್ಟೋಬರ್ ೨೦೧೬ ರಂತೆ.
{{cite web}}
: CS1 maint: location (link) CS1 maint: unrecognized language (link) - ↑ "ನಮ್ಮ ಕುರಿತಾಗಿ". ವೇತನ ಆಯೋಗ, ೧೭ ಸೆಪ್ಟೆಂಬರ್ ೨೦೧೪ ರಂತೆ. Archived from the original on 2014-08-15. Retrieved 2018-10-14.