ವರದರಾಜ ಪೆರುಮಾಳ್ ದೇವಾಲಯ, ಕಾಂಚಿಪುರಂ
ವರದರಾಜ ಪೆರುಮಾಳ್ ಅಥವಾ 'ಹಸ್ತಗಿರಿ' ಅಥವಾ 'ಅತ್ತಿಯೂರನ್' ಎಂದು ಕರೆಸಿಕೊಳ್ಳುವ ಮಹಾ ವಿಷ್ಣುವಿನ ಈ ದೇವಾಲಯವಿರುವುದು ತಮಿಳುನಾಡಿನ ಪುರಾತನ ಹಾಗು ಧಾರ್ಮಿಕ ನಗರವಾದ ಕಾಂಚಿಪುರದಲ್ಲಿ. ತಮಿಳುನಾಡಿನ ಭಕ್ತಿ ಪರಂಪರೆಯಲ್ಲಿ ಅಗ್ರ ಸ್ಥಾನ ಪಡೆದಿರುವ ವೈಷ್ಣವ ಪಂಥದ ೧೨ ಸಂತರು ಅಥವಾ ಆಳ್ವಾರರುಗಳು ಭೇಟಿ ಕೊಟ್ಟ ಮಹಾ ವಿಷ್ಣುವಿನ ೧೦೮ ದಿವ್ಯ ಕ್ಷೇತ್ರಗಳಲ್ಲಿ ಈ ವರದರಾಜ ಸ್ವಾಮಿಯ ಆಲಯವು ಒಂದಾಗಿದೆ. ಕಾಂಚಿಪುರದ ಉಪನಗರವಾದ ಸ್ಥಳದಲ್ಲಿ ಈ ಆಲಯವು ಸ್ಥಿತ್ಯವಾಗಿದೆ, ಹಾಗು ಇನ್ನಿತರ ಅನೇಕ ವಿಷ್ಣುವಿನ ದೇವಾಲಯಗಳು ಇಲ್ಲಿವೆ. ಆದರಿಂದ ಕಾಂಚಿನಗರದ ಈ ಭಾಗಕ್ಕೆ 'ವಿಷ್ಣು ಕಂಚಿ' ಎಂದೂ ಕರೆಯಲಾಗುತ್ತದೆ.ವೈಷ್ಣವ ಪಂಥದಲ್ಲಿ ವಿಶಿಷ್ಟಾದ್ವೆತ ಪ್ರವರ್ತಕರಾಗಿದ್ದ ಶ್ರೀ ರಾಮಾನುಜಾಚಾರ್ಯರು ಇಲ್ಲಿ ನೆಲೆಸಿದ್ದರು ಎನ್ನಲಾಗಿದೆ[೧].
ಕಂಚಿಯ ಏಕಂಬರೇಶ್ವರ, ಕಾಮಾಕ್ಷಿ ದೇವಾಲಯಗಳು ಜನಜನಿತವಾಗಿರುವಂತೆಯೇ ವರದರಾಜ ಸ್ವಾಮಿಯ ಆಲಯವು ಪ್ರಸಿದ್ದಿಯಲ್ಲಿರುವುದರಿಂದ ಕಂಚಿಯನ್ನು 'ಮುಮೂರ್ತಿ ವಾಸಂ' ಎಂದು ತಮಿಳು ಸ್ಥಳೀಯ ಭಕ್ತರು ಸಂಭೋದಿಸುವುದುಂಟು. ತಮಿಳುನಾಡಿನ ಶ್ರೀರಂಗಂ ಹಾಗು ಕಂಚಿ ವರದರಾಜ, ಆಂಧ್ರಪ್ರದೇಶದ ತಿರುಪತಿ ಹಾಗು ಕರ್ನಾಟಕದ ಮೇಲುಕೋಟೆ ಇವು ನಾಲ್ಕು ಸ್ಥಳಗಳು ವೈಷ್ಣವ ಮತದ ಪರಿಪಾಲಕರಿಗೆ ಅತಿ ಪವಿತ್ರ ಕ್ಷೇತ್ರಗಳಾಗಿವೆ. ಈ ನಾಲ್ಕು ಕ್ಷೇತ್ರಗಳ ದರ್ಶನದಿಂದ ಪರಮಪದ ಲಭ್ಯವಾಗುತ್ತದೆ ಎನ್ನುವುದು ವೈಷ್ಣವ ಪಂಥದ ಬಲವಾದ ನಂಬುಗೆ[೨].
ವರದ ರಾಜ ಪೆರುಮಾಳ್ ದೇವಾಲಯದ ಚಿತ್ರ ಮಾಹಿತಿ
[ಬದಲಾಯಿಸಿ]-
ಮುಖ್ಯ ಗೋಪುರ
-
ಶ್ರೀ ತೀರ್ಥ ಕಲ್ಯಾಣಿ
-
ದೇವಾಲಯ ಪ್ರಾಕಾರ
-
ಕಂಬದ ಮೇಲೆ ಮಹಾವಿಷ್ಣುವಿನ ಕೆತ್ತನೆ
-
ರಾತ್ರಿಯ ಸಮಯದಲ್ಲಿ ಮುಖ್ಯ ಗೋಪುರ
-
ಕಂಬದ ಮೇಲಿನ ಶಿಲ್ಪ ಕಲಾಕೃತಿಗಳು
-
ಕಂಬದ ಮೇಲಿನ ಶಿಲ್ಪ ಕಲಾಕೃತಿಗಳು