ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ
ಗೋಚರ
ಯೋಜನೆಯ ಹೆಸರು (DDUGJY) | |
---|---|
ದೇಶ | ಭಾರತ |
ಪ್ರಧಾನಮಂತ್ರಿ | ನರೇಂದ್ರ ಮೋದಿ |
ಮಂತ್ರಾಲಯ | Power |
ಮುಖ್ಯ ವ್ಯಕ್ತಿಗಳು | ಪಿಯೂಷ್ ಗೋಯಲ್ |
ಜಾರಿಯಗಿದ್ದು | ೨೦೧೫ |
Funding | ೭೫೬ ಬಿಲಿಯನ್ |
ಸಧ್ಯದ ಸ್ಥಿತಿ | ಸಂಪೂರ್ಣವಾಗಿದೆ |
ಅಧೀಕೃತ ಜಾಲತಾಣ | http://www.ddugjy.gov.in/ |
ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪೈಕಿ ಒಂದಾಗಿರುವ ಈ ಯೋಜನೆಯ ಉದ್ದೇಶ ಪ್ರತೀ ಗ್ರಾಮಕ್ಕೂ ತಡೆಯಿಲ್ಲದೆ ವಿದ್ಯುತ್ ಒದಗಿಸುವುದು[೧]. ಗ್ರಾಮೀಣ ವಿದ್ಯುದೀಕರಣಕ್ಕಾಗಿಯೇ ಭಾರತ ಸರ್ಕಾರ ಸುಮಾರು ೭೫೬ ಬಿಲಿಯನ್ ರೂಪಾಯಿಗಳನ್ನು ಮೀಸಲಿರಿಸಿ ಯೋಜನೆಯ ಪ್ರಗತಿಗೆ ಮುಂದಾಗಿದೆ. ಈ ಹಿಂದೆ ಇದ್ದ ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆಯ ಹೊಸ ಅವತರಣಿಕೆಯೇ ಈ ಯೋಜನೆಯಾಗಿದೆ[೨].
ಯೋಜನೆ
[ಬದಲಾಯಿಸಿ]ಈ ಯೋಜನೆಯ ಮೂಲಭೂತ ಉದ್ದೇಶಗಳೆಂದರೆ,
- ಎಲ್ಲ ಗ್ರಾಮಗಳಿಗೂ ವಿದ್ಯುತ್ ಸೌಲಭ್ಯ ಒದಗಿಸುವುದು.
- ಸ್ಥಳೀಯ ಎಲೆಕ್ಟ್ರಿಕ್ ಗ್ರಿಡ್ ಮಟ್ಟದಲ್ಲಿ ಫೀಡರ್ ಗಳನ್ನೂ ಬೇರ್ಪಡಿಸುವುದು. ಆ ಮೂಲಕ ಇತರೇ ಬಳಕೆದಾರರಿಗೂ ಹಾಗು ರೈತರಿಗೂ ಸರಬರಾಜು ಆಗುವ ವಿದ್ಯುತ್ ಮೇಲೆ ನಿಗಾ ಹಾಗು ರೈತರಿಗೆ ೨೪ ಗಂಟೆ ವಿದ್ಯುತ್ ಸೌಲಭ್ಯ.
- ವಿದ್ಯುತ್ ಸರಬರಾಜು ಮಾಡುವ ಜಾಲ ಹಾಗು ವಿತರಣಾ ಮಂಡಲಗಳನ್ನು ಅಭಿವೃದ್ಧಿಗೊಳಿಸುವ ಮೂಲಕ ವಿದ್ಯುತ್ ಸರಬರಾಜಿನಲ್ಲಿ ಗುಣಮಟ್ಟವನ್ನು ಹಾಗು ಸ್ಥಿರತೆಯನ್ನು ಕಾಯ್ದುಕೊಳ್ಳುವುದು.
- ಮಾಪಕಗಳ ಬಳಕೆಯ ಮುಖೇನ ವಿದ್ಯುತ್ ನಷ್ಟವನ್ನು ತಡೆಗಟ್ಟುವುದು.
ಉಪಯೋಗಗಳು
[ಬದಲಾಯಿಸಿ]- ಭಾರತದ ಎಲ್ಲ ಗ್ರಾಮಗಳಿಗೂ ವಿದ್ಯುತ್ ಲಭ್ಯವಾಗುವುದು.
- ಕೃಷಿಗೆ ಖರ್ಚಾಗುವ ವಿದ್ಯುತ್ ಮೇಲೆ ನಿಗಾ, ಇದರಿಂದ ಕೃಷಿ ಸಂಬಂಧಿತ ವಿದ್ಯುತ್ ಗೆ ವಿಶೇಷ ಪ್ಯಾಕೇಜ್ ಗಳನ್ನೂ ಘೋಷಿಸುವ ಸಂಧರ್ಭದಲ್ಲಿ ಅನುಕೂಲ.
- ಸುಧಾರಿತ ವಿದ್ಯುತ್ ಸರಬರಾಜು.
- ವಿದ್ಯುತ್ ಪೋಲು ತಡೆಯಲು ಅನುಕೂಲ.
ಇವನ್ನೂ ನೋಡಿ
[ಬದಲಾಯಿಸಿ]- ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯ ಪ್ರಧಾನಮಂತ್ರಿಗಳ ಕಚೇರಿಯ ಅಧೀಕೃತ ಪುಟ
- ಗ್ರಾಮೀಣ ವಿದ್ಯುದೀಕರಣ ಕುರಿತಾದ ಒನ್ ಇಂಡಿಯಾ ಸುದ್ದಿ ತಾಣದ ಕನ್ನಡ ಯೂಟ್ಯೂಬ್ ವಿಡಿಯೋ
- ವಿದ್ಯುದೀಕರಣ ಯೋಜನೆಯ ಪ್ರಸ್ತಾವನೆಯ ಕುರಿತು ಪ್ರಜಾವಾಣಿ ಕನ್ನಡ ದಿನಪತ್ರಿಕೆಯ ಸುದ್ದಿ
ಆಕರಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "ಪ್ರಧಾನಿ ಮೋದಿ ಸ್ಕೀಮ್ ನಿಂದ 23.9 ದಶಲಕ್ಷ ಮನೆಗಳಿಗೆ ವಿದ್ಯುತ್, ಇನ್ನೂ 1 ದಶಲಕ್ಷ ಬಾಕಿ!". Archived from the original on 2019-01-01. Retrieved 2020-07-31.
- ↑ "ಲೈವ್ ಮಿಂಟ್ ವೃತ್ತ ಪತ್ರಿಕೆಯ ಆಂಗ್ಲ ಮಾಹಿತ್ ತಾಣದ ಲೇಖನ".