ಎಲಾನ್ ಮಸ್ಕ್

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ಎಲಾನ್ ಮಸ್ಕ್
Elon Musk 2015.jpg
2015ರಲ್ಲಿ ಎಲಾನ್ ಮಸ್ಕ್
ಜನನ
ಎಲಾನ್ ರೀವ್ ಮಸ್ಕ್

(1978-06-28) June 28, 1978 (age 43)
Nationalityದಕ್ಷಿಣ ಆಫ್ರಿಕಾ (1971 - ಇಂದಿನವರೆಗೂ)
ಕೆನಡಾ(1971 - ಇಂದಿನವರೆಗೂ)
ಯು.ಎಸ್.ಎ(2002 - ಇಂದಿನವರೆಗೂ)
Alma materಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ,ಯು.ಎಸ್.ಎ
ಉದ್ಯೋಗಇಂಜಿನಿಯರ್
ಉದ್ದಿಮೆದಾರ
ಕೈಗಾರಿಕಾ ವಿನ್ಯಾಸಗಾರ
Net worthUS$179.8 ಬಿಲಿಯನ್ (12 ಮಾರ್ಚ್ 2021ರಂತೆ)
Spouse(s)ಜಸ್ಟೀನ್ ವಿಲ್ಸನ್ (ವಿವಾಹ 2000; ವಿಚ್ಛೇದನ 2008)
ಟ್ಯಾಟುಲಾ ರಿಲೆ (ವಿವಾಹ 2010; ವಿಚ್ಛೇದನ 2016)
ಮಕ್ಕಳು7
Parent(s)ಎರೋಲ್ ಮಸ್ಕ್(ತಂದೆ)
ಮೇ ಮಸ್ಕ್(ತಾಯಿ)
ನೆಂಟರುಕಿಂಬಲ್ ಮಸ್ಕ್(ತಮ್ಮ)
ಟೋಸ್ಕಾ ಮಸ್ಕ್(ತಂಗಿ)

ಎಲಾನ್ ರೀವ್ ಮಸ್ಕ್(ಆಂಗ್ಲ: Elon Reeve Musk) ಒಬ್ಬ ಖ್ಯಾತ ಇಂಜಿನಿಯರ್, ಕೈಗಾರಿಕಾ ತಜ್ಞ ಹಾಗು ಉದ್ದಿಮೆದಾರ. ಖಾಸಗಿ ಬಾಹ್ಯಾಕಾಶ ನೌಕೆ 'ಸ್ಪೇಸ್-ಎಕ್ಸ್'ನ ಸಂಸ್ಥಾಪಕ, ಕಾರ್ಯ ನಿರ್ವಾಹಕ ಅಧ್ಯಕ್ಷ ಹಾಗು ಮುಖ್ಯ ವಿನ್ಯಾಸಗಾರ ಕೂಡ. ಖ್ಯಾತ ಕಾರು ಕಂಪನಿ 'ಟೆಸ್ಲಾ'ದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಹೂಡಿಕೆದಾರ ಹಾಗು ವಿನ್ಯಾಸಗಾರ. 'ದಿ ಬೋರಿಂಗ್ ಕಂಪನಿ', 'ನ್ಯೂರೋಲಿಂಕ್', 'ಓಪನ್-ಎಐ' ಕಂಪನಿಗಳ ಪ್ರಮುಖ ಸ್ಥಾಪಕರಲ್ಲೊಬ್ಬರಾದ ಇವರು ಪ್ರಪಂಚದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಜೀವನ[ಬದಲಾಯಿಸಿ]

ಎಲಾನ್ ಮಸ್ಕ್ ಅವರ ತಾಯಿ 'ಮೇ ಮಸ್ಕ್' ಕೆನಡಾ ಮೂಲದವರು ಹಾಗು ತಂದೆ 'ಎರೋಲ್ ಮಸ್ಕ್' ದಕ್ಷಿಣ ಆಫ್ರಿಕಾ ಮೂಲದವರು. ಎರೋಲ್ ಮಸ್ಕ್ ರು ದಕ್ಷಿಣ ಆಫ್ರಿಕಾದಲ್ಲಿ ಎಲೆಕ್ಟ್ರೋಮೆಕ್ಯಾನಿಕಲ್ ಇಂಜಿನಿಯರಿಂಗ್ ವೃತ್ತಿ ಮಾಡುತ್ತಿದ್ದುದರಿಂದ ಮಸ್ಕ್ ರ ಕುಟುಂಬ ದಕ್ಷಿಣ ಆಫ್ರಿಕಾದಲ್ಲಿಯೇ ನೆಲೆ ನಿಂತಿತ್ತು. ಈ ದಂಪತಿಗಳ ಮೂರು ಜನ ಮಕ್ಕಳ ಪೈಕಿ ಎಲಾನ್ ಮಸ್ಕ್ ಮೊದಲನೆಯವರು, ಇವರ ತಮ್ಮ ಕಿಂಬಲ್ ಹಾಗು ತಂಗಿ ಟೋಸ್ಕಾ.

ದಕ್ಷಿಣ ಆಫ್ರಿಕಾದ ಉತ್ತರ ಭಾಗದಲ್ಲಿರುವ ಪ್ರಿಟೋರಿಯಾ ನಗರದಲ್ಲೇ 1971ರ ಜೂನ್ 28 ರಂದು ಎಲಾನ್ ಮಸ್ಕ್ ಜನಿಸಿದ್ದು. ಮುಂದೆ 1980 ರಲ್ಲಿ ಅವರ ಪಾಲಕರಿಬ್ಬರು ವಿಚ್ಛೇದನ ಪಡೆದುಕೊಂಡು ಬೇರ್ಪಟ್ಟಾಗ ಎಲಾನ್ ಮಸ್ಕ್ ತನ್ನ ತಂದೆಯ ಜೊತೆಯಲ್ಲಿಯೇ ಪ್ರಿಟೋರಿಯಾ ನಗರದ ಹೊರವಲಯದಲ್ಲಿ ಉಳಿಯುತ್ತಾರೆ. ಎರಡು ವರ್ಷ ತನ್ನ ತಂದೆಯ ಜೊತೆ ಕಳೆದ ಎಲಾನ್ ಮಸ್ಕ್ ಕಾರಣಾಂತರಗಳಿಂದ ತನ್ನ ತಂದೆಯ ವಿರುದ್ಧ ರೋಸಿ ಹೋಗಿ ತಾನು ಅವರ ಜೊತೆ ಉಳಿಯುವ ಆಯ್ಕೆ ಮಾಡಿದ್ದು ತಪ್ಪು ಎಂಬ ನಿರ್ಧಾರಕ್ಕೆ ಬರುತ್ತಾರೆ. 'ನನ್ನ ತಂದೆಯೊಬ್ಬ ರಾಕ್ಷಸೀಯ ಗುಣಗಳನ್ನು ಹೊಂದಿದ್ದವ, ಆತನು ಹಲವಾರು ಬಾರಿ ಮೃಗೀಯ ವರ್ತನೆ ತೋರಿದ್ದಾನೆ' ಎಂದು ಎಲಾನ್ ಮಸ್ಕ್ ನೇರವಾಗಿ ವಿಷಾದ ವ್ಯಕ್ತಪಡಿಸುತ್ತಾರೆ.[೧][೨]

ಶಿಕ್ಷಣ[ಬದಲಾಯಿಸಿ]

ಕೌಟುಂಬಿಕ ಜೀವನದ ಅಪಸವ್ಯಗಳ ಹೊರತಾಗಿ ಎಲಾನ್ ಮಸ್ಕ್ ತನ್ನ ಹತ್ತನೇ ವಯಸ್ಸಿನಲ್ಲಿಯೇ ಕಂಪ್ಯೂಟರ್ ಪ್ರೋಗ್ರಾಮಿಂಗ್ ಗಳ ಬಗ್ಗೆ ಅತೀವ ಆಸಕ್ತಿ ತಳೆದು ಅವುಗಳನ್ನು ಕೈಪಿಡಿ ಓದುವ ಮುಖಾಂತರ ಅರಿತುಕೊಳ್ಳುತ್ತಾರೆ. ತಮ್ಮ ಹನ್ನೆರಡನೇ ವಯಸ್ಸಿಗೆ 'ಬ್ಲಾಸ್ಟರ್ ಟು ಪಿಸಿ' ಹಾಗು 'ಆಫೀಸ್ ಟೆಕ್ನಾಲಜಿ ಮ್ಯಾಗಜಿನ್' ಎಂಬ ವಿಡಿಯೋ ಗೇಮ್ ಗಳನ್ನು ನಿರ್ಮಿಸಿ ಸುಮಾರು 500 ಅಮೆರಿಕನ್ ಡಾಲರ್ ಗೆ ಮಾರಾಟ ಮಾಡುತ್ತಾರೆ.[೩] ಸದಾ ಅಂತರ್ಮುಖಿಯಾಗಿರುತ್ತಿದ್ದ ಎಲಾನ್ ಮಸ್ಕ್ ರನ್ನು ಶಾಲೆಯಲ್ಲಿ ಸಹಪಾಠಿಗಳು ತಂಬಾ ಛೇಡಿಸುತ್ತಿದ್ದರಂತೆ. ಒಮ್ಮೆ ಅವರ ಶಾಲೆಯ ಹಲವು ಹುಡುಗರು ಸೇರಿ ಎಲಾನ್ ಮಸ್ಕ್ ರನ್ನು ಮೆಟ್ಟಿಲುಗಳ ಮೇಲಿಂದ ಜಾರುವಂತೆ ಕೆಳಗೆ ಎಸೆದು ಬಿಟ್ಟಾಗ ಮಸ್ಕ್ ಪಾತ್ರೆಗೆ ದಾಖಲಾಗಿ ಹಲವಾರು ದಿನಗಳ ಕಾಲ ಚಿಕಿತ್ಸೆ ಪಡೆಯಬೇಕಾಗಿ ಬಂದಿತ್ತಂತೆ[೪]. ಪ್ರಿಟೋರಿಯಾ ನಗರದಲ್ಲಿರುವ 'ವಾಟರ್ ಕ್ಲೂಫ್ ಹೌಸ್ ಪ್ರಿಪರೇಟರಿ' ಶಾಲೆ ಹಾಗು ಬ್ರೈನ್ಸ್ಟನ್ ಪ್ರೌಢ ಶಾಲೆ ಹಾಗು ಪ್ರಿಟೋರಿಯಾ ಗಂಡುಮಕ್ಕಳ ಪ್ರೌಢ ಶಾಲೆಯಲ್ಲಿ ಮಸ್ಕ್ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ.

ಆಕರಗಳು[ಬದಲಾಯಿಸಿ]

  1. "'ದಿ ಮರ್ಕ್ಯುರಿ ಟೈಮ್ಸ್' ಆಂಗ್ಲ ವೃತ್ತ ಪತ್ರಿಕೆಯ ಎಲಾನ್ ಮಸ್ಕ್ ರ ವಯ್ಯಕ್ತಿಕ ಜೀವನದ ಮೇಲೆ ಬೆಳಕು ಚೆಲ್ಲುವ ವರದಿ".
  2. "ಎಲಾನ್ ಮಸ್ಕ್ ರ ತಂದೆಯ ಜೀವನದ ಕುರಿತ ವರದಿ, 'ದಿ ಟೆಲೆಗ್ರಾಫ್' ಆಂಗ್ಲ ವೃತ್ತ ಪತ್ರಿಕೆ".
  3. "ಎಲಾನ್ ಮಸ್ಕ್ ಅಭಿವೃದ್ಧಿ ಪಡಿಸಿದ ವಿಡಿಯೋ ಗೇಮ್ ಕುರಿತಾದ ಆಂಗ್ಲ ವರದಿ".
  4. "ಉರುಳಿ ಬಿದ್ದ ಎಲಾನ್ ಮಸ್ಕ್ ರ ಕುರಿತಾಗಿನ ಆರ್ಕಿವ್ಗ್ಸ್ ವರದಿ".