ವಿಷಯಕ್ಕೆ ಹೋಗು

ಕುಂಬಾರನ್ ಭಾಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕುಂಬಾರನ್
ಬಳಕೆಯಲ್ಲಿರುವ 
ಪ್ರದೇಶಗಳು:
ಭಾರತ
ಒಟ್ಟು 
ಮಾತನಾಡುವವರು:
೧೦,೦೦೦
ಭಾಷಾ ಕುಟುಂಬ:
 ದಕ್ಷಿಣ
  (?)
   ಕುಂಬಾರನ್
ಭಾಷೆಯ ಸಂಕೇತಗಳು
ISO 639-1: ಯಾವುದೂ ಇಲ್ಲ
ISO 639-2: ಸೇರಿಸಬೇಕು
ISO/FDIS 639-3: wkb

ಕುಂಬಾರನ್ ಎಂಬುದು ಭಾರತದ ಪರಿಶಿಷ್ಟ ಜಾತಿಯಿಂದ ಮಾತನಾಡುವ ವರ್ಗೀಕರಿಸದ ದಕ್ಷಿಣ ದ್ರಾವಿಡ ಭಾಷೆಯಾಗಿದೆ. ಇದು ಒಂದು ಅಥವಾ ಹೆಚ್ಚು ನಿಖರವಾದ ನಮೂದುಗಳೊಂದಿಗೆ ಬದಲಾಯಿಸಲ್ಪಟ್ಟಿರುವುದರಿಂದ ಗ್ಲೋಟೊಲಾಗ್‌ನಲ್ಲಿ ಸ್ಥಳಾಂತರ ಹೊಂದಿದ ಭಾಷೆಯಾಗಿದೆ. [] []

ಇವರು ಹಿಂದೂ ಧರ್ಮೀಯರಾಗಿದ್ದು, ವಿಶೇಷ ಆರಾಧನೆ ಮತ್ತು ಆಚರಣೆಗಳ ಸಂದರ್ಭದಲ್ಲಿ ತಲೆಗೆ ಹೂವು ಕಟ್ಟಿಕೊಂಡು ಮಡಿಕೆಯೊಳಗೆ ವಿಗ್ರಹವನ್ನಿಟ್ಟುಕೊಂಡು ಕುಣಿಯುತ್ತಾರೆ.[]

ಉಪಜಾತಿ-ಉಪಭಾಷೆ

[ಬದಲಾಯಿಸಿ]

ಭಾರತದಲ್ಲಿ ಕುಂಬರನ್ ಚೆಟ್ಟಿಯಾರ್‌ಗಳು, ಅಥವಾ ಆದಿ ಆಂಧ್ರ ಜಾತಿಗಳ ಉಪಜಾತಿ. ಇದು ಭಾರತದ ಪ್ರಮುಖ ಉಪಜಾತಿಗಳಲ್ಲಿ ಒಂದಾಗಿದೆ. ಇವರು ಮಣ್ಣು ಅಥವಾ ಜೇಡಿ ಮಣ್ಣಿನಿಂದ ಮಡಿಕೆ, ಇಟ್ಟಿಗೆ ಇತ್ಯಾದಿ ತಯಾರಿಸುತ್ತಾರೆ. ಕುಂಬಾರನ್ ಅವರ ಒಟ್ಟು ಜನಸಂಖ್ಯೆ ನಿಖರವಾಗಿ ತಿಳಿದಿಲ್ಲವಾದರೂ ೧೦,೦೦೦ ವೆಂದು ಅಂದಾಜಿಸಲಾಗಿದೆ.[]

ಕೆಲಸ ಮತ್ತು ಉದ್ಯೋಗ

[ಬದಲಾಯಿಸಿ]

ಕುಂಬರನ್ ಸಾಂಪ್ರದಾಯಿಕ ಚಕ್ರವನ್ನು ಬಳಸಿ ಮಡಿಕೆ ತಯಾರಿಸುತ್ತಾರೆ. ಕೈಯಿಂದ ಚಾಲನೆಕೊಡುವ ಮತ್ತು ಯಾಂತ್ರಿಕವಾಗಿ ಚಲಿಸುವ ಚಕ್ರಗಳಿವೆ. ಪುರುಷ ಕುಂಬಾರನ್ ಚಕ್ರದ ಕೆಲಸಗಾರರು. ಗಂಡು ಮಕ್ಕಳು ಇವರನ್ನು ಅನುಸರಿಸಿ ಚಕ್ರದ ಕೆಲಸದಲ್ಲಿ ತರಬೇತಿ ಪಡೆದುಕೊಳ್ಳುತ್ತಾರೆ. ಮಹಿಳೆಯರು ಮಣ್ಣು ತಂದುಕೊಡುವ ಮತ್ತು ರಸ್ತೆ ಬದಿಯಲ್ಲಿ, ಮಾರುಕಟ್ಟೆಯಲ್ಲಿ ಮತ್ತು ಹಳ್ಳಿಗಳಲ್ಲಿ ಮಾರಾಟಕ್ಕೆ ಸಹಾಯ ಮಾಡುತ್ತಾರೆ. ಹಸಿ ಮಡಕೆಗಳನ್ನು ಇಟ್ಟಿಗೆಯ ಗೂಡಿನಲ್ಲಿ ತೆಂಗಿನ ಸಿಪ್ಪೆ, ತರಗೆಲೆ, ಮರಮಟ್ಟುಗಳನ್ನು ಬಳಸಿ ಬೆಂಕಿಮಾಡಿ ಬೇಯಿಸುತ್ತಾರೆ.[]

ಉಲ್ಲೇಖಗಳು

[ಬದಲಾಯಿಸಿ]
  1. "Glottolog 4.8 - Kumbaran".
  2. https://www.wisdomlib.org/definition/kumbara
  3. https://www.ijfmr.com/papers/2023/1/1589.pdf
  4. https://dbpedia.org/describe/?uri=http%3A%2F%2Fdbpedia.org%2Fresource%2FKumbaran_language
  5. https://www.ijfm.org/PDFs_IJFM/14_3_PDFs/02_Kumbaran.pdf