ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ

ವಿಕಿಪೀಡಿಯ ಇಂದ
Jump to navigation Jump to search
Karnataka State Road Transport Corporation
ಪ್ರಕಾರ ಸಾರ್ವಜನಿಕ ಸಾರಿಗೆ ನಿಗಮ
ಸ್ಥಾಪನೆ 1961
ಮುಖ್ಯ ಕಾರ್ಯಾಲಯ ಬೆಂಗಳೂರು, ಭಾರತ
ವ್ಯಾಪ್ತಿ ಪ್ರದೇಶ ಕರ್ನಾಟಕ, ಗೋವಾ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳ, ತೆಲಂಗಾಣ ಮತ್ತು ಪುದುಚೇರಿ
ಪ್ರಮುಖ ವ್ಯಕ್ತಿ(ಗಳು)

[[Gopala poojari ]] (ಅಧ್ಯಕ್ಷರು)[೧]

ಎಸ್ ಆರ್ ಉಮಾಶಂಕರ್(ವ್ಯವಸ್ಥಾಪಕ ನಿರ್ದೇಶಕರು)
ಉದ್ಯಮ ಸಾರ್ವಜನಿಕ ಸಾರಿಗೆ ಬಸ್ ಸೇವೆ
ಸೇವೆಗಳು ಸಾರ್ವಜನಿಕ ಸಾರಿಗೆ
ಉಪಾಂಗ ಸಂಸ್ಥೆಗಳು
ಅಂತರಜಾಲ ತಾಣ KSRTC
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಐರಾವತ ಬಸ್ಸು

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು ೧೯೬೧ದಲ್ಲಿ ಸ್ಥಾಪಿಸಲಾಯಿತು. ೧೯೬೧ರಲ್ಲಿ ೧೭೯೨ ಬಸ್ಸುಗಳಿದ್ದವು. ಸಂಸ್ಥೆಯು ಕರ್ನಾಟಕ ಸರ್ಕಾರದ ಮಾಲೀಕತ್ವದಲ್ಲಿದೆ. ಭಾರತ ಸರ್ಕಾರವು ಕೂಡ ಸಂಸ್ಥೆಯಲ್ಲಿ ಹೂಡಿಕೆ ಹೊಂದಿದೆ. ಸಂಸ್ಥೆಯು ದೇಶದಲ್ಲೇ ಮೊದಲನೆ ಭಾರಿಗೆ ವೋಲ್ವೊ ಹವಾನಿಯಂತ್ರಿತ ಬಸ್ಸುಗಳನ್ನ ಪರಿಚಯಿಸಿದ ಹೆಗ್ಗಳಿಕೆ ಹೊಂದಿದೆ.[೨]

ವಾಹನಗಳು[ಬದಲಾಯಿಸಿ]

೧೯೯೭ರವರೆಗೆ ಕ ರಾ ರ ಸಾ ನಿವು ೧೦,೪೦೦ ಬಸ್ಸುಗಳನ್ನು ೯೫೦೦ ಮಾರ್ಗಗಳಲ್ಲಿ ನಡೆಸುತ್ತಿತ್ತು. ಆಗಸ್ಟ್ ೧೯೯೭ರಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯನ್ನು ಸ್ವತಂತ್ರ ಸಂಸ್ಥೆಯನ್ನಾಗಿ ಮಾಡಲಾಯಿತು. ಇದು ಕರಾರಸಾನಿಯ ಮೊದಲನೆ ವಿಭಾಗೀಕರಣ. ನವೆಂಬರ್ ೧೯೯೭ರಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮವನ್ನು ವಾಯುವ್ಯ ಕರ್ನಾಟಕದ ಸೇವೆಗೆಂದು ಪ್ರಾರಂಭಿಸಲಾಯಿತು. ಅದಾದ ನಂತರ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮವನ್ನು ಈಶಾನ್ಯ ಕರ್ನಾಟಕದ ಸೇವೆಗೆಂದು ಪ್ರಾರಂಭಿಸಲಾಯಿತು.

ಸಂಸ್ಥೆಯು ಹಲಾವಾರು ರೀತಿಯ ಬಸ್ಸುಗಳನ್ನು ನಡೆಸುತ್ತದೆ.

 • ಗ್ರಾಮಾಂತರ ಸಾರಿಗೆ: ಮಾರ್ಗದಲ್ಲಿನ ಎಲ್ಲಾ ನಿಲ್ದಾಣಗಳಲ್ಲಿ ನಿಲುಗಡೆ ನೀಡುವ ಬಸ್ಸುಗಳು.
 • ಸುವರ್ಣ ಕರ್ನಾಟಕ ಸಾರಿಗೆ: ಮಾರ್ಗದಲ್ಲಿ ನಿಗದಿತ ನಿಲ್ದಾಣಗಳಲ್ಲ್ಲಿ ಮಾತ್ರ ನಿಲುಗಡೆ ನೀಡುವ ಬಸ್ಸುಗಳು.
 • ಮೈಸೂರು ಮಲ್ಲಿಗೆ: ಬೆಂಗಳೂರು-ಮೈಸೂರು ನಡುವಿನ ತಡೆರಹಿತ ಸೇವೆ.
 • ರಾಜಹಂಸ: ಸುಖಾಸೀನ ಸೇವೆ.
 • ಶೀತಲ್: ಹವಾನಿಯಂತ್ರಿತ ಸಾಮಾನ್ಯ ಸೇವೆ.
 • ಮಯೂರ: ಹವಾನಿಯಂತ್ರಿತ ಸಾಮಾನ್ಯ ಸೇವೆ.
 • ಮೇಘದೂತ: ಹವಾನಿಯಂತ್ರಿತ ಸೇವೆ.
 • ಐರಾವತ: ಹವಾನಿಯಂತ್ರಿತ ಐಷಾರಾಮಿ ವೋಲ್ವೊ ಸೇವೆ.
 • ಅಂಬಾರಿ: ಹವಾನಿಯಂತ್ರಿತ ಸ್ಲೀಪರ್ ಸೇವೆ.

ಕಾರ್ಯಾಲಯ ಮತ್ತು ಇತರೆ ಸೇವೆಗಳು[ಬದಲಾಯಿಸಿ]

 • ಕ ರಾ ರ ಸಾ ನಿ ಒಂದು ಕಾರ್ಯಾಲಯವನ್ನು ಬೆಂಗಳೂರಲ್ಲಿ ಹೊಂದಿದೆ.
 • ವಿಭಾಗೀಯ ಕಾರ್ಯಾಲಯಗಳು: ೧೪
 • ಬಸ್ಸು ಘಟಕಗಳು: ೭೧
 • ಬಸ್ಸು ನಿಲ್ದಾಣಗಳು : ೧೧೯
 • ಬಸ್ಸುಗಳ ಕವಚ ನಿರ್ಮಾಣ ಕಾರ್ಯಾಗಾರಗಳು: ೨
 • ಮುದ್ರಣಾಲಯಗಳು :೧
 • ಚಾಲಕ ಮತ್ತು ಇತರೆ ತರಬೇತಿ ಶಾಲೆಗಳು: ೩
 • ಆಸ್ಪತ್ರೆ: ೧

ಪ್ರಶಸ್ತಿಗಳು ಮತ್ತು ಮಾನ್ಯತೆ[ಬದಲಾಯಿಸಿ]

 1. Union Transport Minister’s Trophy for lowest accident during 1996-99, 1997-00 and 1998-01.
 2. Parisara Award 2001 by the State Govt.
 3. Safety Award for 2001-02 by the Chartered Institute of Logistic and Transport, India.
 4. IRTE Pince Michale International Road Safety Award 2001.
 5. PCRA Award 2001-02 and 2002-03.
 6. Golden Peacock International Award for 2002 (runners-up).
 7. Golden Peacock Environment Management Award for 2003 (winner).
 8. Golden Peacock Eco Innovation Award 2004 (second time).
 9. India Pride Award-2010
 10. “Earth Care Award-2010” for Innovation for Climate Protection

ಹೊರಸಂಪರ್ಕಗಳು[ಬದಲಾಯಿಸಿ]

 • "Management | Book Bus Ticket Online – KSRTC". ksrtc.in. Retrieved 1 May 2016. 
 • ಕ.ರಾ.ರ.ಸಾ.ನಿಗಮದ ಬಗ್ಗೆ