ಅಣಶಿ ರಾಷ್ಟ್ರೀಯ ಉದ್ಯಾನ

ಅಣಶಿ ರಾಷ್ಟ್ರೀಯ ಉದ್ಯಾನ ಇದು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ದಾಂಡೇಲಿಯ ಬಳಿಯಿರುವ ಒಂದು ರಾಷ್ಟ್ರೀಯ ಉದ್ಯಾನ. ಈ ಅಭಯಾರಣ್ಯದ ಪ್ರದೇಶವು ಗೋವಾ ಮತ್ತು ಮಹಾರಾಷ್ಟ್ರದ ಗಡಿಯಲ್ಲಿರುವ 6 ಬೇರೆ ಅರಣ್ಯ ಪ್ರದೇಶಗಳನ್ನು ಹೊಂದಿಕೊಂಡಿದ್ದು ಒಟ್ಟು 2200 ಚದರ ಕಿಲೋಮೀಟರ್ ರಕ್ಷಿತ ಅರಣ್ಯ ಪ್ರದೇಶವನ್ನು ಹೊಂದಿದೆ. ಇಲ್ಲಿ ಕಪ್ಪು ಚಿರತೆ, ಹುಲಿ ಮತ್ತು ಆನೆ ಮುಖ್ಯ ಪ್ರಾಣಿಗಳಾಗಿವೆ. 1987 ರಲ್ಲಿ ಸ್ಥಾಪನೆಯಾದ ಈ ರಾಷ್ಟ್ರೀಯ ಉದ್ಯಾನವನವು 250 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿದೆ. 1956 ರಲ್ಲಿ ಸ್ಥಾಪನೆಯಾದ ದಾಂಡೇಲಿ ವನ್ಯಜೀವಿ ಅಭಯಾರಣ್ಯವನ್ನು ನಂತರ ರಾಷ್ಟ್ರೀಯ ಉದ್ಯಾನವನವನ್ನಾಗಿ ಮಾಡಲಾಯಿತು. ಇಲ್ಲಿನ ಭೂದೃಶ್ಯವು ಕಡಿದಾದ ಕಣಿವೆಗಳು ಮತ್ತು ಬೆಟ್ಟಗಳಿಂದ ತುಂಬಿದೆ.
ಹುಲಿ ಸಂರಕ್ಷಣಾ ಯೋಜನೆ
[ಬದಲಾಯಿಸಿ]ಉದ್ಯಾನವನದ 340 ಚದರ ಕಿಲೋಮೀಟರ್ ಪ್ರದೇಶವು ಹುಲಿ ಸಂರಕ್ಷಣಾ ಯೋಜನೆಯಡಿಯಲ್ಲಿದೆ , ಇದನ್ನು ಜನವರಿ 2007 ರಲ್ಲಿ ಘೋಷಿಸಲಾಯಿತು.
ಸಸ್ಯ ಸಂಪತ್ತು
[ಬದಲಾಯಿಸಿ]ಈ ನಿತ್ಯಹರಿದ್ವರ್ಣ ಕಾಡಿನಲ್ಲಿರುವ ಪ್ರಮುಖ ಮರಗಳು ತೇಗ , ಸಿಲ್ವರ್ ಓಕ್ , ಅಕೇಶಿಯ ಮತ್ತು ಬಬುಸಾ .
ಪ್ರಾಣಿಸಂಕುಲ
[ಬದಲಾಯಿಸಿ]ಇದು ಕಾಡುಹಂದಿ , ಜಿಂಕೆ , ಚುಕ್ಕೆ ಜಿಂಕೆ , ಕಾಡುನಾಯಿ , ಆನೆ , ಹೆಬ್ಬಾವು , ಹಾರ್ನ್‌ಬಿಲ್ , ಕಾಡುಗೂಬೆ ಮತ್ತು ರಾಜ ನಾಗರಹಾವುಗಳ ಆವಾಸಸ್ಥಾನವಾಗಿದೆ .
ವಿಕಿಮೀಡಿಯ ಕಾಮನ್ಸ್‌ನಲ್ಲಿ ಅನ್ಶಿ ರಾಷ್ಟ್ರೀಯ ಉದ್ಯಾನವನಕ್ಕೆ ಸಂಬಂಧಿಸಿದ ಚಿತ್ರಗಳಿವೆ
ಸ್ಥಳ
[ಬದಲಾಯಿಸಿ]ಈ ಉದ್ಯಾನವನವು ಪಶ್ಚಿಮ ಘಟ್ಟಗಳಲ್ಲಿದೆ. ಉದ್ಯಾನವನದ ಕೆಲವು ಭಾಗಗಳು ಸಮುದ್ರ ಮಟ್ಟದಿಂದ 27–927 ಮೀಟರ್ ಎತ್ತರದಲ್ಲಿವೆ.
ವಿದ್ಯುತ್ ಉತ್ಪಾದನೆ
[ಬದಲಾಯಿಸಿ]ಈ ಉದ್ಯಾನವನದೊಳಗೆ ವಿವಿಧ ಜಲವಿದ್ಯುತ್ ಕೇಂದ್ರಗಳು ಮತ್ತು ಪರಮಾಣು ವಿದ್ಯುತ್ ಸ್ಥಾವರಗಳಿವೆ.
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |