ಸುಚರಿತ್ರ
ಕರ್ನಾಟಕ ಸಂಗೀತ | |
---|---|
ಪರಿಕಲ್ಪನೆಗಳು | |
ಸಂಗೀತ ರಚನೆಗಳು | |
ಸಂಗೀತೋಪಕರಣಗಳು | |
ಮಾಧುರ್ಯ: ಸರಸ್ವತಿ ವೀಣೆ • ವೇಣು • ಪಿಟೀಲು • ಚಿತ್ರ ವೀಣ • ನಾದಸ್ವರ • ಮ್ಯಾಂಡೊಲಿನ್ ತಾಳ: ಮೃದಂಗ • ಘಟಂ • ಮೋರ್ಸಿಂಗ್ • ಕಂಜೀರ • ತವಿಲ್ ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ | |
ಸಂಗೀತಕಾರರು | |
ಸುಚರಿತ್ರ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ೬೭ ನೆಯ ರಾಗ.ಈ ರಾಗವನ್ನು ಮುತ್ತುಸ್ವಾಮಿ ದೀಕ್ಷಿತರು ಸಂಪಾದಿಸಿದ ಸಂಗೀತ ಗ್ರಂಥದಲ್ಲಿ ಸಂತಾನಮಂಜರಿ ಎಂದು ಹೆಸರಿಸಿದ್ದಾರೆ.[೧][೨] .
ರಾಗ ಸ್ವರೂಪ ಮತ್ತು ಲಕ್ಷಣ
[ಬದಲಾಯಿಸಿ]ಇದು ಹನ್ನರಡನೆಯ ಆದಿತ್ಯ ಚಕ್ರದ ಮೊದಲನೆಯ ರಾಗ.ಇದರ ನೆನೆಪಿನ ಹೆಸರು ಆದಿತ್ಯ-ಪಾ ನೆನಪಿನ ನುಡಿಕಟ್ಟು:ಸ ರು ಗು ಮಿ ಪ ಧ ನ [೧] ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ.
ಆರೋಹಣ ಸ ರಿ೩ ಗ೩ ಮ೨ ಪ ದ೧ ನಿ೧ ಸ
ಅವರೋಹಣ ಸ ನಿ೧ ದ೧ ಪ ಮ೨ ಗ೩ ರಿ೩ ಸ
ಇದು ಒಂದು ಸಂಪೂರ್ಣ ರಾಗವಾಗಿದೆ.ಇದರ ಸ್ವರಶ್ರೇಣಿ. 'ಷಡ್ಜ, ಷಟ್‍ಶೃತಿ ರಿಷಭ,ಅಂತರ ಗಾಂಧಾರ,ಪ್ರತಿಮಧ್ಯಮ,ಪಂಚಮ,ಶುದ್ಧ ಧೈವತಮತ್ತು ಶುದ್ಧ ನಿಷಾಧ.ಇದು ೩೧ನೆಯ ಮೇಳಕರ್ತ ರಾಗವಾದ ಯಾಗಪ್ರಿಯಗೆ ಸಮಾನವಾದ ಪ್ರತಿಮಧ್ಯಮವನ್ನು ಹೊಂದಿದೆ.
ಜನ್ಯ ರಾಗಗಳು
[ಬದಲಾಯಿಸಿ]ಈ ರಾಗಕ್ಕೆ ಕೆಲವು ಜನ್ಯ ರಾಗಗಳಿವೆ.
ಜನಪ್ರಿಯ ರಚನೆಗಳು
[ಬದಲಾಯಿಸಿ]ಈ ರಾಗದಲ್ಲಿ ಹಲವಾರು ರಚನೆಗಳಿದ್ದು, ಕೆಲವು
- ಚಿಂತಯಾಮಿ ಸಂತತಮ್- ಎಂ. ಬಾಲಮುರಳಿ ಕೃಷ್ಣ
- ವೇಲು ಮಾಯಿಲುಮೆ- ಕೋಟೀಶ್ವರ ಐಯ್ಯರ್
- ಸಂತಾನ ಮಂಜರಿ- ಮುತ್ತುಸ್ವಾಮಿ ದೀಕ್ಷಿತರು
ಸಂಬಂಧಿತ ರಾಗಗಳು
[ಬದಲಾಯಿಸಿ]ಗ್ರಹಭೇದಮ್ ಸೂತ್ರವನ್ನು ಸುಚರಿತ್ರ ರಾಗಕ್ಕೆ ಅನ್ವಯಿಸಿದಾಗ ಯಾವುದೇ ರಾಗಗಳು ದೊರೆಯುವುದಿಲ್ಲ.