ವಿಷಯಕ್ಕೆ ಹೋಗು

ಧರ್ಮವತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರ್ನಾಟಕ ಸಂಗೀತ
ಪರಿಕಲ್ಪನೆಗಳು

ಶ್ರುತಿಸ್ವರರಾಗತಾಳ ಮೇಳಕರ್ತಅಸಂಪೂರ್ಣ ಮೇಳಕರ್ತ

ಸಂಗೀತ ರಚನೆಗಳು

ವರ್ಣಮ್ಕೃತಿಗೀತಂಸ್ವರಜತಿರಾಗಂ ತಾನಂ ಪಲ್ಲವಿತಿಲ್ಲಾನ

ಸಂಗೀತೋಪಕರಣಗಳು

ಮಾಧುರ್ಯ: ಸರಸ್ವತಿ ವೀಣೆವೇಣು ಪಿಟೀಲುಚಿತ್ರ ವೀಣನಾದಸ್ವರಮ್ಯಾಂಡೊಲಿನ್

ತಾಳ: ಮೃದಂಗಘಟಂಮೋರ್ಸಿಂಗ್ಕಂಜೀರತವಿಲ್

ಝೇಂಕಾರ: ತಂಬೂರಶ್ರುತಿ ಪಟ್ಟಿಗೆ

ಸಂಗೀತಕಾರರು

ಟೆಂಪ್ಲೇಟು:ಕರ್ನಾಟಕ ಸಂಗೀತ - ಪ್ರಸಿದ್ಧ ಸಂಗೀತಗಾರರು

ಧರ್ಮವತಿ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ೫೯ನೆಯ ರಾಗ.ಈ ರಾಗವನ್ನು ಮುತ್ತುಸ್ವಾಮಿ ದೀಕ್ಷಿತರು ಸಂಪಾದಿಸಿದ ಸಂಗೀತ ಗ್ರಂಥದಲ್ಲಿ ಧಾಮಾವತಿ ಎಂದು ಹೆಸರಿಸಿದ್ದಾರೆ.[][] ಈ ರಾಗವು ಹಿಂದೂಸ್ತಾನಿ ಸಂಗೀತ ಪದ್ದತಿಯಲ್ಲಿ ಮಧುವಂತಿ ಎಂಬ ಹೆಸರಿನಲ್ಲಿ ಬಳಕೆಯಲ್ಲಿದೆ.

ರಾಗ ಸ್ವರೂಪ ಮತ್ತು ಲಕ್ಷಣ

[ಬದಲಾಯಿಸಿ]
Dharmavati scale with Shadjam at C

ಇದು ಹತ್ತನೆಯ ದಿಸಿ ಚಕ್ರದ ಐದನೆಯ ರಾಗ.ಇದರ ನೆನೆಪಿನ ಹೆಸರು ದಿಸಿ-ಮಾ ನೆನಪಿನ ನುಡಿಕಟ್ಟು:ಸ ರಿ ಗಿ ಮಿ ಪ ಧಿ ನು [] ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ.
ಆರೋಹಣ ಸ ರಿ೨ ಗ೨ ಮ೨ ಪ ದ೨ ನಿ೩ ಸ
ಅವರೋಹಣ ಸ ನಿ೩ ದ೨ ಪ ಮ೨ ಗ೨ ರಿ೨ ಸ
ಇದು ಒಂದು ಸಂಪೂರ್ಣ ರಾಗವಾಗಿದೆ.ಇದರ ಸ್ವರಶ್ರೇಣಿ. 'ಷಡ್ಜ, ಚತುಶ್ರುತಿ ರಿಷಭ,ಸಾಧಾರಣ ಗಾಂಧಾರ,ಪ್ರತಿಮಧ್ಯಮ,ಪಂಚಮ,ಚತುಶೃತಿ ಧೈವತಮತ್ತು ಕಾಕಲಿ ನಿಷಾಧ.ಇದು ೨೩ನೆಯ ಮೇಳಕರ್ತ ರಾಗವಾದ ಗೌರಿಮನೋಹರಿಗೆ ಸಮಾನವಾದ ಪ್ರತಿಮಧ್ಯಮವನ್ನು ಹೊಂದಿದೆ.

ಜನ್ಯ ರಾಗಗಳು

[ಬದಲಾಯಿಸಿ]

ಈ ರಾಗಕ್ಕೆ ಕೆಲವು ಜನ್ಯ ರಾಗಗಳಿವೆ.ಇವುಗಳಲ್ಲಿ ಮಧುವಂತಿ, ಶ್ರೀ ತ್ಯಾಗರಾಜ, ರಂಜನಿ ಮತ್ತು ವಿಜಯನಗರಿ ಹೆಚ್ಚು ಬಳಕೆಯಲ್ಲಿವೆ.

ಜನಪ್ರಿಯ ರಚನೆಗಳು

[ಬದಲಾಯಿಸಿ]

ಧರ್ಮವತಿ ರಾಗದಲ್ಲಿ ಹೆಚ್ಚು ಪ್ರಚಲಿತವಿರುವ ಕೆಲವು ಕೃತಿಗಳು


ಸಂಬಂಧಿತ ರಾಗಗಳು

[ಬದಲಾಯಿಸಿ]

ಗ್ರಹಭೇದಮ್ ಸೂತ್ರವನ್ನು ಧರ್ಮವತಿ ರಾಗಕ್ಕೆ ಅನ್ವಯಿಸಿದಾಗ ೨ ರಾಗಗಳು ದೊರೆಯುತ್ತದೆ.ಅವುಗಳು ಚಕ್ರವಾಕ ಮತ್ತು ಕೋಸಲ

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ Ragas in Carnatic music by Dr. S. Bhagyalekshmy, Pub. 1990, CBH Publications
  2. Raganidhi by P. Subba Rao, Pub. 1964, The Music Academy of Madras


"https://kn.wikipedia.org/w/index.php?title=ಧರ್ಮವತಿ&oldid=1148257" ಇಂದ ಪಡೆಯಲ್ಪಟ್ಟಿದೆ