ವಿಷಯಕ್ಕೆ ಹೋಗು

ಜಲಚರ ಸಾಕಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಡಲತೀರದ ಪಕ್ಕದಲ್ಲಿರುವ ಕಟ್ಟಡಗಳೊಂದಿಗಿನ ಕಡಲತೀರರೇಖೆಯ ಛಾಯಾಚಿತ್ರ ಮತ್ತು ಹಿನ್ನೆಲೆಯಲ್ಲಿ ಕಾಡುಬೆಳೆದ ಪರ್ವತಪಾರ್ಶ್ವ
ದಕ್ಷಿಣ ಚಿಲಿಯಲ್ಲಿ ಜಲಕೃಷಿ ಸ್ಥಾಪನೆಗಳು

ಜಲಚರ ಸಾಕಣೆ ಎಂಬುದು ಈಜುರೆಕ್ಕೆ ಮೀನು, ಮೃದ್ವಂಗಿಗಳು, ಕಠಿಣಚರ್ಮಿಗಳಂಥ ಸಿಹಿನೀರಿನ ಹಾಗೂ ಉಪ್ಪುನೀರಿನ ಜೀವಿಗಳು ಮತ್ತು ಜಲವಾಸಿ ಸಸ್ಯಗಳ ಸಾಕುವಿಕೆಯಾಗಿದೆ.[][] ಜಲಕೃಷಿ ಎಂದೂ ಹೆಸರಾಗಿರುವ ಜಲಚರ ಸಾಕಣೆಯು ನಿಯಂತ್ರಿತ ಸನ್ನಿವೇಶಗಳ ಅಡಿಯಲ್ಲಿ ಜಲವಾಸಿ ಜೀವಿಗಳ ಸಾಕುವಿಕೆ ಅಥವಾ ಬೆಳೆಸುವಿಕೆಯನ್ನು ಒಳಗೊಂಡಿದೆ, ಮತ್ತು ಇದನ್ನು ಸಾಕಿರದ ಮೀನನ್ನು ಹಿಡಿಯುವ ವಿಧಾನವಾದ ವಾಣಿಜ್ಯ ಮೀನುಗಾರಿಕೆಯೊಂದಿಗೆ ತದ್ವಿರುದ್ಧವಾಗಿ ಪರಿಗಣಿಸಬಹುದಾಗಿದೆ.[] ವಾಣಿಜ್ಯ ಜಲಚರ ಸಾಕಣೆಯು ಮಾನವರು ನೇರವಾಗಿ ಸೇವಿಸುವ ಮೀನು ಮತ್ತು ಚಿಪ್ಪುಮೀನುಗಳ ಪೈಕಿ ಒಂದರ್ಧವನ್ನು ಪೂರೈಸುತ್ತದೆ.[]

ಜಲಕೃಷಿ ಉತ್ಪಾದನೆಯಲ್ಲಿ ಸಿಹಿನೀರು ಮೀನುಗಳದ್ದೇ ಸಿಂಹಪಾಲು. ಆದರೂ ಪ್ರಪಂಚದಲ್ಲಿ ಅನೇಕ ಜಾತಿಯ ಸಿಹಿನೀರು ಹಾಗೂ ಕಡಲ ಜಲಚರಗಳನ್ನು ಸಾಕಾಣಿಕೆ ಮಾಡಲಾಗುತ್ತದೆ, ಸೀಗಡಿ, ಕಡಲ ಇಚಿಪ್ಪುಮೀನುಗಳು, ಮುತ್ತಿನ ಚಿಪ್ಪುಗಳು, ಕಾಡ್ ಮೀನು, ಹೇಕ್, ಹೆಡಕ್ ಮೀನುಗಳು, ಟ್ಯೂನಾ ಗಳು, ಸಿಹಿನೀರು ಸೀಗಡಿ, ಏಡಿಗಳು, ಸಿಹಿನೀರು ಚಿಪ್ಪುಪ್ರಾಣಿಗಳು, ಹೀಗೆ ನೂರಾರು ಜಾತಿಯ ಜಲಚರಗಳ ಕೃಷಿ ಮಾಡಲಾಗುತ್ತಿದೆ. ಇವುಗಳ ಮೀನುಮರಿಗಳ ಉತ್ಪಾದನೆ, ಪಾಲನೆ ಕೇಂದ್ರಗಳ (ಹ್ಯಾಚರಿ) ಸ್ಥಾಪನೆ ಮತ್ತು ನಿರ್ವಹಣೆ ಜಲಕೃಷಿಯ ಒಂದು ಅವಿಭಾಜ್ಯ ಉದ್ಯಮವಾಗಿದೆ.

ಸಮುದ್ರಜೀವಿ ಸಾಕಣೆ ಎಂಬ ಪದವು ಸಮುದ್ರ ಪರಿಸರಗಳಲ್ಲಿ ನಡೆಸುವ ಜಲಚರ ಸಾಕಣೆಯ ಪರಿಪಾಠಕ್ಕೆ ಅನ್ವಯಿಸುತ್ತದೆ. ಜಲಚರ ಸಾಕಣೆಯ ನಿರ್ದಿಷ್ಟ ಬಗೆಗಳಲ್ಲಿ ಪಾಚಿ ಕೃಷಿ (ಕಡಲುಚೇಣಿ/ಕಡಲಕಳೆ ಮತ್ತು ಇತರ ಪಾಚಿಗಳ ಉತ್ಪಾದನೆ), ಮೀನು ಸಾಕಣೆ, ಸೀಗಡಿ ಸಾಕಣೆ, ಸಿಂಪಿ ಸಾಕಣೆ, ಕೃಷಿಮಾಡಿದ ಮುತ್ತುಗಳನ್ನು ಬೆಳೆಸುವುದು ಹಾಗೂ ಅಲಂಕಾರಿಕ ಮೀನುಗಳನ್ನು ಬೆಳೆಸಿ ಮಾರುವುದು ಮೊದಲಾದವು ಸೇರಿವೆ. ನಿರ್ದಿಷ್ಟ ವಿಧಾನಗಳಲ್ಲಿ ಆಕ್ವಾಪೋನಿಕ್ಸ್‌ ಎಂಬುದೂ ಸೇರಿಕೊಂಡಿದ್ದು, ಇದು ಮೀನಿನ ಸಾಕಣೆ ಹಾಗೂ ಸಸ್ಯ ಕೃಷಿಯನ್ನು ಏಕೀಕರಿಸುತ್ತದೆ.

ಇತಿಹಾಸ

[ಬದಲಾಯಿಸಿ]
ತೊಟ್ಟಿಕ್ಕುವ, ಬಟ್ಟಲಿನಾಕಾರದ ಬಲೆಯ ಛಾಯಾಚಿತ್ರ. ಸುಮಾರು [4]ನಷ್ಟು ವ್ಯಾಸವನ್ನು ಇದು ಹೊಂದಿದೆ ಮತ್ತು ಸರಿಸಮಾನವಾಗಿ ಎತ್ತರವಾಗಿದ್ದು ಅರ್ಧದಷ್ಟು ಮೀನನ್ನು ತುಂಬಿಸಿಕೊಂಡಿದೆ. ಇದನ್ನು ಕ್ರೇನಿನ ಕಂಬಗಳಿಂದ ತೂಗುಬಿಡಲಾಗಿದ್ದು, ನೀರಿನಲ್ಲಿರುವ ಬೃಹತ್ತಾದ ವರ್ತುಲದಾಕಾರದ ರಚನೆಯ ಮೇಲೆ ಹಾಗೂ ಅದರ ಸುತ್ತಲೂ 4 ಕೆಲಸಗಾರರಿದ್ದಾರೆ.
ಮಿಸಿಸಿಪಿಯಲ್ಲಿನ ಡೆಲ್ಟಾ ಪ್ರೈಡ್ ಬೆಕ್ಕುಮೀನು ಕೇಂದ್ರಗಳಿಂದ ಕಾರ್ಮಿಕರು ಬೆಕ್ಕುಮೀನುಗಳನ್ನು ಹಿಡಿಯುತ್ತಿದ್ದಾರೆ

ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿನ ಸ್ಥಾನಿಕ ಗುಂಡಿತ್‌ಜ್ಮಾರಾ ಜನರು ಕ್ರಿ.ಪೂ. 6000 ರಷ್ಟು ಮುಂಚೆಯೇ ಹಾವುಮೀನುಗಳನ್ನು ಪೋಷಿಸಿ ಬೆಳೆಸಿರಬಹುದೆಂದು ತೋರುತ್ತದೆ. ಅವರು ಕಾಂಡಾಹ್‌ ಸರೋವರದ ಸಮೀಪದಲ್ಲಿನ ಸುಮಾರು ...100 square kilometres (39 sq mi) ರಷ್ಟು ಅಗ್ನಿಪರ್ವತ ಪ್ರವಾಹ ಬಯಲುಗಳನ್ನು ಕಾಲುವೆಗಳು ಹಾಗೂ ಅಣೆಕಟ್ಟುಗಳ ಸಂಕೀರ್ಣವಾಗಿ ಅಭಿವೃದ್ಧಿಪಡಿಸಿದರು ಎಂಬುದಕ್ಕೆ ಪುರಾವೆಯು ಲಭ್ಯವಿದೆ. ಅಷ್ಟೇ ಅಲ್ಲ, ಹಾವುಮೀನುಗಳನ್ನು ಸೆರೆಹಿಡಿಯಲು ಅವರು ಹೆಣೆದ ಬಲೆಗಳನ್ನು ಬಳಸುತ್ತಿದ್ದರು ಎಂಬುದಕ್ಕೆ, ಮತ್ತು ಹಾವುಮೀನುಗಳನ್ನು ಹಿಡಿದು ಹೊಗೆಹಿಡಿಸಿ ಅವುಗಳನ್ನು ರಕ್ಷಿಸಿಟ್ಟುಕೊಳ್ಳುತ್ತಿದ್ದುದು ಅವರಿಗೆ ವರ್ಷಾದ್ಯಂತ ಆಧಾರವಾಗಿರುತ್ತಿತ್ತು ಎಂಬುದಕ್ಕೂ ಸಹ ಪುರಾವೆಯು ಲಭ್ಯವಿದೆ.[][]

ಮೀನು ಸಾಕಾಣಿಕೆ ಬಹಳ ಹಿಂದಿನಿಂದಲೂ ಇತ್ತೆಂಬುದು ತಿಳಿದು ಬಂದಿದೆ. ಮೀನು ಸಾಕಾಣಿಕೆಯಲ್ಲಿ ಈಜಿಪ್ಟ್‌ನ ಜನರು ಬಹುಶಃ ಪ್ರಪಂಚದಲ್ಲೇ ಮೊದಲಿಗರರಿಬೇಕೆಂಬುದಕ್ಕೆ ಪುರಾವೆಗಳಿವೆ. ಸುಮಾರು ಕ್ರಿ.ಪೂ. 2500 ರಲ್ಲೇ ಈಜಿಪ್ಟ್‌ನಲ್ಲಿ ಮೀನು ಸಾಕಾಣಿಕೆ ಬಗ್ಗೆ ಅಲ್ಲಿನ ಪಿರಮಿಡ್‌ಗಳ ಮೇಲಿನ ಕೆತ್ತಿರುವ ಚಿತ್ರಣಗಳಿಂದ ತಿಳಿದುಬರುತ್ತದೆ. ಸುಮಾರು ಕ್ರಿ.ಪೂ. 2000 ರಲ್ಲಿ ಚೀನಾ ದೇಶದಲ್ಲಿ ಗೆಂಡೆ ಮೀನುಗಳ ಸಾಕಾಣಿಕೆಯನ್ನು ವ್ಯಾಪಕವಾಗಿ ಮಾಡಲಾಗುತ್ತಿತ್ತು. ಭಾರತದಲ್ಲಿಯೂ ಮೀನುಕೃಷಿಯು ನೂರಾರು ವರ್ಷಗಳಿಂದ ಮಾಡಲಾಗುತ್ತಿದೆ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ, ರಾಜ ಸೋಮೇಶ್ವರನ ವಿಶ್ವಕೋಶದಲ್ಲಿ ಇದರ ಬಗ್ಗೆ ಉಲ್ಲೇಖಗಳಿವೆ. ಬಹಳ ಹಿಂದೆ ಮೀನು ಕೃಷಿಯೆಂದರೆ ಕೆರೆ, ಕೊಳ, ನದಿಗಳಲ್ಲಿ ದೊರೆಯುವ ಮೀನುಗಳನ್ನು ಕೃತಕವಾಗಿ ನಿರ್ಮಿಸಿದ ತೊಟ್ಟಿಗಳಲ್ಲಿ ಕೆಲಕಾಲ ಇಟ್ಟುಕೊಂಡು ಬೇಕಾದಾಗ ಹಿಡಿಯುವುದೇ ಆಗಿತ್ತು.

ಸುಮಾರು ಕ್ರಿ.ಪೂ. 2500 ಯಷ್ಟು ಹಿಂದೆಯೇ ಜಲಚರ ಸಾಕಣೆಯು ಚೀನಾದಲ್ಲಿ ನಡೆಸಲ್ಪಡುತ್ತಿತ್ತು.[] ನದಿಪ್ರವಾಹಗಳ ನಂತರ ಜಲಭಾಗವು ಇಳಿದುಹೋದಾಗ, ಕೆಲವೊಂದು ಮೀನುಗಳು, ಅದರಲ್ಲೂ ಮುಖ್ಯವಾಗಿ ಕಾರ್ಪ್‌ ಮೀನುಗಳು ಸರೋವರಗಳಲ್ಲಿ ಸಿಕ್ಕಿಬೀಳುತ್ತಿದ್ದವು. ಬಹಳ ಹಿಂದಿನ ಜಲಚರ ಸಾಕಣೆಗಾರರು ಚಿಕ್ಕ ಕೊಡತಿ ಹುಳುಗಳು ಮತ್ತು ರೇಷ್ಮೆಹುಳು ಹಿಕ್ಕೆಯನ್ನು ಬಳಸಿಕೊಂಡು ತಮ್ಮ ಹಿಂಡನ್ನು ಪೋಷಿಸಿ, ನಂತರ ಅವನ್ನು ತಿನ್ನುತ್ತಿದ್ದರು. ಪುಣ್ಯವಶಾತ್ತಾಗಿ ಆದ ಕಾರ್ಪ್‌ ಮೀನಿನ ಒಂದು ಜೀನ್‌‌‌‌ನ ಹಠಾತ್‌ ಬದಲಾವಣೆಯು (ನವವಿಕೃತಿಯು) ಟ್ಯಾಂಗ್‌ ರಾಜವಂಶದ ಅವಧಿಯಲ್ಲಿ ಹೊನ್ನಮೀನು ಹೊರಹೊಮ್ಮುವುದಕ್ಕೆ ಕಾರಣವಾಯಿತು.

ಬೀಜಕಗಳಿಗೆ ಭದ್ರವಾದ ಹಿಡಿತದ ಮೇಲ್ಮೈಗಳಾಗಿ ಕಾರ್ಯನಿರ್ವಹಿಸಲು ಬಿದಿರಿನ ಬೊಂಬುಗಳನ್ನು ಒದಗಿಸಿ, ನಂತರ ಬಲೆಗಳು ಹಾಗೂ ಸಿಂಪಿ ಚಿಪ್ಪುಗಳನ್ನು ಒದಗಿಸಿ ಜಪಾನ್‌‌ ದೇಶದ ಕೃಷಿಕರು ಕಡಲಕಳೆಯನ್ನು ಕೃಷಿಮಾಡುತ್ತಿದ್ದರು.

ರೋಮನ್ನರು ಮೀನುಗಳನ್ನು ಕೊಳಗಳಲ್ಲಿ ಸಾಕಿದರು.[]

ಮಧ್ಯ ಯುರೋಪ್‌‌ನಲ್ಲಿ, ಬಹಳ ಹಿಂದಿನ ಕ್ರೈಸ ಸನ್ಯಾಸಿಗಳ ನಿವಾಸಗಳು ರೋಮನ್‌ ಶೈಲಿಯ ಜಲಚರ ಸಾಕಣೆಯ ಪರಿಪಾಠಗಳನ್ನು ಅಳವಡಿಸಿಕೊಂಡಿದ್ದವು.[] ಸಮುದ್ರತೀರಗಳು ಹಾಗೂ ದೊಡ್ಡ ನದಿಗಳಿಂದ ದೂರವಿದ್ದ ಕಾರಣದಿಂದಾಗಿ ಮೀನುಗಳು ದುರ್ಲಭ/ದುಬಾರಿಯಾಗಿದ್ದರಿಂದ, ಯುರೋಪ್‌‌ನಲ್ಲಿ ಮಧ್ಯಯುಗಗಳ ಅವಧಿಯಲ್ಲಿ ಜಲಚರ ಸಾಕಣೆಯು ಹರಡಿತು. 19ನೇ ಶತಮಾನದ ಅವಧಿಯಲ್ಲಿ ಸಾಗಾಣಿಕೆಯಲ್ಲಿ ಸುಧಾರಣೆಗಳು ಕಂಡುಬಂದಿದ್ದರಿಂದಾಗಿ, ಒಳನಾಡಿನ ಪ್ರದೇಶಗಳಲ್ಲೂ ಸಹ ಮೀನುಗಳು ಸುಲಭವಾಗಿ ಮತ್ತು ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗತೊಡಗಿದವು. ಇದು ಜಲಚರ ಸಾಕಣೆಯ ಜನಪ್ರಿಯತೆಯನ್ನು ತಗ್ಗಿಸಿತು.

ಹವಾಯಿಯ ಜನರು ಸಾಗರದ ಸಮೀಪದ ಮೀನಿನ ಕೊಳಗಳನ್ನು ನಿರ್ಮಿಸಿದರು. ಅಲೆಕೊಕೊ ಎಂಬಲ್ಲಿರುವ ಕನಿಷ್ಟಪಕ್ಷ 1,000 ವರ್ಷಗಳಷ್ಟು ಹಿಂದಿನ ಕಾಲಕ್ಕೆ ಸೇರಿರುವ ಒಂದು ಮೀನು ಕೊಳವು ಗಮನಾರ್ಹವಾದ ಉದಾಹರಣೆಯಾಗಿದೆ. ಐತಿಹ್ಯವು ಹೇಳುವ ಪ್ರಕಾರ, ಪುರಾಣದ ಮೆನೆಹ್ಯೂನ್‌ ಕುಬ್ಜ ಜನರಿಂದ ಇದು ನಿರ್ಮಿಸಲ್ಪಟ್ಟಿತು.

1859ರಲ್ಲಿ, ನ್ಯೂಯಾರ್ಕ್‌ನ ವೆಸ್ಟ್‌‌ ಬ್ಲೂಮ್‌ಫೀಲ್ಡ್‌‌‌ನ ಸ್ಟೀಫನ್‌ ಐನ್ಸ್‌ವರ್ತ್‌ ಎಂಬಾತ ತೊರೆಯ ಟ್ರೌಟ್‌ ಮೀನುಗಳಿಗೆ ಸಂಬಂಧಿಸಿದಂತೆ ಪ್ರಯೋಗಗಳನ್ನು ಶುರುಮಾಡಿದ. 1864ರ ಹೊತ್ತಿಗೆ ಸೇಥ್‌ ಗ್ರೀನ್‌ ಎಂಬಾತ ನ್ಯೂಯಾರ್ಕ್‌‌ನ ರೋಚೆಸ್ಟರ್‌‌‌‌ಗೆ ಸಮೀಪದ ಕ್ಯಾಲೆಡೋನಿಯಾ ಸ್ಪ್ರಿಂಗ್ಸ್‌‌ನಲ್ಲಿ ಒಂದು ವಾಣಿಜ್ಯ ಸ್ವರೂಪದ ಮೀನು ಮರಿಮಾಡುವ ಕಾರ್ಯಾಚರಣೆಯನ್ನು ಸ್ಥಾಪಿಸಿದ್ದ. 1866ರ ಹೊತ್ತಿಗೆ, ಮ್ಯಾಸಚೂಸೆಟ್ಸ್‌‌ನ ಕಾನ್‌ಕಾರ್ಡ್‌‌‌ನ ಡಾ. ಡಬ್ಲ್ಯು. ಡಬ್ಲ್ಯು. ಫ್ಲೆಚರ್‌‌ ಎಂಬಾತನು ತೊಡಗಿಸಿಕೊಂಡಿದ್ದರಿಂದ, ಕೆನಡಾ ಹಾಗೂ ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಈ ಎರಡೂ ಕಡೆಯಲ್ಲೂ ಕೃತಕ ಮೀನಿನ ಮೊಟ್ಟೆಗಳನ್ನು ಮರಿಮಾಡುವ ಕೇಂದ್ರಗಳು ಪ್ರಗತಿಯಲ್ಲಿದ್ದವು.[೧೦] 1889ರಲ್ಲಿ ಕೆನಡಾದ ನ್ಯೂಫೌಂಡ್‌ಲ್ಯಾಂಡ್‌ನಲ್ಲಿನ ಡಿಡೋ ದ್ವೀಪದಲ್ಲಿ ಮೀನಿನ ಮೊಟ್ಟೆ ಮರಿಮಾಡುವ ಕೇಂದ್ರವು ಪ್ರಾರಂಭಗೊಂಡಾಗ, ಅದು ವಿಶ್ವದಲ್ಲಿನ ಅತಿದೊಡ್ಡ ಹಾಗೂ ಅತ್ಯಂತ ಮುಂದುವರಿದ ಕೇಂದ್ರವಾಗಿ ಹೊರಹೊಮ್ಮಿತ್ತು.

ಕ್ಯಾಲಿಫೋರ್ನಿಯಾದ ಜನರು ಕಾಡುಜಾತಿಯ ಕಡಲುಚೇಣಿಯನ್ನು ಸಾಕಿದರು ಮತ್ತು ಸುಮಾರು 1900ರ ಹೊತ್ತಿಗೆ ಪೂರೈಕೆಯನ್ನು ನಿರ್ವಹಿಸಲು ಪ್ರಯತ್ನಿಸಿದರು, ನಂತರ ಇದಕ್ಕೆ ಯುದ್ಧ ಸಮಯದ ಒಂದು ಸಂಪನ್ಮೂಲವೆಂಬ ಹಣೆಪಟ್ಟಿಯನ್ನು ಕಟ್ಟಿದರು.[೧೧]

ಕಾಲಕ್ರಮೇಣ ನದಿಗಳಿಂದ ಮೀನಿನ ಮರಿಗಳನ್ನು ಹಿಡಿದು ತಂದು ಕೊಳಗಳಲ್ಲಿ ಸಾಕುವ ವಿಧಾನ ರೂಢಿಗೆ ಬಂತು. ಈ ವಿಧಾನ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಬಹಳ ಹಿಂದಿನಿಂದಲೂ ಮಾಡಲಾಗುತ್ತಿತ್ತು. ತದನಂತರ ಇತರೆ ರಾಜ್ಯಗಳಿಗೂ ಈ ವಿಧಾನ ಹರಡಿತು. ಆನಂತರ ಬಂಗಾಳದಲ್ಲಿ ಬಂದ್‌ಗಳನ್ನು ನಿರ್ಮಿಸಿ ಗೆಂಡೆಮೀನುಗಳ ಮರಿಮಾಡಿಸುವಿಕೆ ಪ್ರಾರಂಭವಾದ ನಂತರ ಗೆಂಡೆ ಮೀನುಗಳ ಕೃಷಿ ಹೆಚ್ಚು ಹೆಚ್ಚು ಜನಪ್ರಿಯವಾಗತೊಡಗಿತು. ಗೆಂಡೆ ಮೀನುಗಳು ನಿಂತ ಕೋಳಗಳ ನೀರಿನಲ್ಲಿ ಮರಿ ಮಾಡುವುದಿಲ್ಲವಾದ್ದರಿಂದ ಇವುಗಳ ಕೃಷಿಗೆ ಬಹಳ ಕಾಲ ಮೀನುಮರಿಗಳ ಕೊರತೆಯಿತ್ತು. ಭಾರತದಲ್ಲಿ 1957 ರಲ್ಲಿ ಗೆಂಡೆ ಮೀನುಗಳ ಪ್ರಚೋದಿತ ಸಂತಾನೋತ್ಪತ್ತಿ ವಿಧಾನವನ್ನು ಪರಿಚಯಿಸಿದ ನಂತರವಂತೂ ಗೆಂಡೆ ಮೀನುಗಳ ಮರಿಗಳ ಲಭ್ಯತೆ ಹೆಚ್ಚಾಗಿ ಇವುಗಳ ಜಲಕೃಷಿ ತೀವ್ರಗತಿಯಲ್ಲಿ ಬೆಳೆಯತೊಡಗಿತು. ಪ್ರಸ್ತುತ ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ, ಪಂಜಾಬ್ ರಾಜ್ಯಗಳು ಗೆಂಡೆ ಮೀನುಕೃಷಿಯ ಮಂಚೂಣಿಯಲ್ಲಿವೆ. ಕರ್ನಾಟಕದಲ್ಲಿರುವ ಅಗಾಧ ಕೆರೆ ಜಲಾಶಯಗಳಲ್ಲಿಯೂ ಗೆಂಡೆ ಮೀನುಮರಿಗಳನ್ನು ಬಿತ್ತನೆ ಮಾಡಿ ಬೆಳೆಸಲಾಗುತ್ತಿದೆ.

ಒಂದು ಲಂಬವಾದ ದಾರ ಅಥವಾ ಕಡ್ಡಿಯ ಮೇಲೆ ತೂಗುಹಾಕಲ್ಪಟ್ಟಿರುವ ಐದು ಅಥವಾ ಅದಕ್ಕಿಂತ ಹೆಚ್ಚು ತೊಟ್ಟಿಕ್ಕುತ್ತಿರುವ ಮೀನಿನ ಛಾಯಾಚಿತ್ರ
ಅದರ ಹೊಂದಿಕೊಳ್ಳುವಿಕೆಯ ಕಾರಣದಿಂದ ಸಾಮಾನ್ಯವಾಗಿ ಕೃಷಿ ಮಾಡಲಾದ ಟಿಲಾಪಿಯಾ ಮೀನು

21ನೇ ಶತಮಾನಲ್ಲಿನ ಸ್ಥಿತಿ

[ಬದಲಾಯಿಸಿ]

2007ರ ವೇಳೆಗೆ ಇದ್ದಂತೆ, ಸಂಗೋಪನ ಕೃಷಿ ಮಾಡಲ್ಪಟ್ಟ ಜಾತಿಗಳ ಪೈಕಿ ಸುಮಾರು 430 ರಷ್ಟು (97%) ಜಾತಿಗಳನ್ನು 20ನೇ ಶತಮಾನದ ಅವಧಿಯಲ್ಲಿ ಪಳಗಿಸಿ ಒಗ್ಗಿಸಲಾಗಿತ್ತು; ಇದರ ಪೈಕಿ ಸುಮಾರು 106 ಜಾತಿಗಳು 2007 ರ ವರೆಗಿನ ದಶಕದಲ್ಲಿ ಬಂದವು. ಕೃಷಿಯ ದೀರ್ಘಾವಧಿ ಪ್ರಾಮುಖ್ಯದ ಅರಿವಿರುವ ಸ್ಥಿತಿಯಲ್ಲಿ ಕುತೂಹಲಕರವಾಗಿರುವ ಸಂಗತಿಯೆಂದರೆ, ತಿಳಿದಿರುವ ಸಮುದ್ರ ಸಸ್ಯ ಜಾತಿಗಳ ಪೈಕಿ 0.17% ನಷ್ಟು ಹಾಗೂ ತಿಳಿದಿರುವ ಸಮುದ್ರ ಪ್ರಾಣಿ ಜಾತಿಗಳ ಪೈಕಿ 0.13% ನಷ್ಟಿರುವ ಪ್ರಮಾಣಕ್ಕೆ ಹೋಲಿಸಿದಾಗ, ಇಂದಿನವರೆಗೆ ತಿಳಿದಿರುವ ನೆಲದ ಸಸ್ಯ ಜಾತಿಗಳ ಪೈಕಿ ಕೇವಲ 0.08% ನಷ್ಟು ಹಾಗೂ ತಿಳಿದಿರುವ ನೆಲದ ಪ್ರಾಣಿ ಜಾತಿಗಳ ಪೈಕಿ 0.0002% ನಷ್ಟು ಪಳಗಿಸಿ ಒಗ್ಗಿಸಲಾಗಿದೆ. ವಿಶಿಷ್ಟವೆನಿಸುವಂತೆ, ಒಗ್ಗಿಸುವಿಕೆಯು ಸುಮಾರು ಒಂದು ದಶಕದಷ್ಟು ಸುದೀರ್ಘವಾದ ವೈಜ್ಞಾನಿಕ ಸಂಶೋಧನೆಯನ್ನು ಒಳಗೊಂಡಿದೆ.[೧೨] ಜಲವಾಸಿ ಜಾತಿಗಳ ಒಗ್ಗಿಸುವಿಕೆಗೆ ಸಂಬಂಧಿಸಿ ಹೇಳುವುದಾದರೆ, ಇದು ಮಾನವರಿಗೆ ಅಲ್ಪಪ್ರಮಾಣದ ಅಪಾಯಗಳನ್ನು ಒಡ್ಡಿದೆ. ಇದಕ್ಕೆ ಹೋಲಿಸಿದಾಗ ನೆಲದ ಪ್ರಾಣಿಗಳನ್ನು ಒಗ್ಗಿಸುವುದು ದೊಡ್ಡ ಸಂಖ್ಯೆಯಲ್ಲಿ ಮಾನವರ ಜೀವಕ್ಕೆ ವರವಾಗಿದೆ ಎನ್ನಬಹುದು. ಸಿಡುಬು ಮತ್ತು ಗಂಟಲಮಾರಿಯಂಥ ಕಾಯಿಲೆಗಳ ಮೂಲಕ, ಪಳಗಿಸಿ ಒಗ್ಗಿಸಲ್ಪಟ್ಟ ಪ್ರಾಣಿಗಳಲ್ಲಿ[೧೩] ಹುಟ್ಟಿಕೊಂಡಿರುವ ಅತ್ಯಂತ ಪ್ರಮುಖವಾದ ಮಾನವರ ಕಾಯಿಲೆಗಳು, ಬಹುಪಾಲು ಸಾಂಕ್ರಾಮಿಕ ಕಾಯಿಲೆಗಳಂತೆ ಪ್ರಾಣಿಗಳಿಂದ ಮಾನವರಿಗೆ ಹಬ್ಬುತ್ತವೆ. ಹೋಲಿಸಬಹುದಾದ ವಿಷಮತೆಯಿರುವ ಯಾವುದೇ ಮಾನವ ರೋಗಕಾರಕಗಳು ಸಮುದ್ರ ಜಾತಿಗಳಿಂದ ಇನ್ನೂ ಹೊರಹೊಮ್ಮಿಲ್ಲ.

ಕಾಡು ಮೀನುಗಾರಿಕೆಯಲ್ಲಿ ಹಿಡಿದ ಬೇಟೆಯ ಜಡತೆ ಮತ್ತು ಜನಪ್ರಿಯ ಸಮುದ್ರ ಜಾತಿಗಳ ಮಿತಿಮೀರಿದ ಬಳಕೆ, ಜೊತೆಗೆ ಉನ್ನತ ಗುಣಮಟ್ಟದ ಪ್ರೋಟೀನಿಗೆ ಬೆಳೆಯುತ್ತಿರುವ ಬೇಡಿಕೆ ಸೇರಿಕೊಂಡು, ಇತರ ಸಮುದ್ರ ಜಾತಿಗಳನ್ನು ಪಳಗಿಸಿ ಒಗ್ಗಿಸಲು ಜಲಚರ ಸಾಕಣೆಗಾರರಿಗೆ ಉತ್ತೇಜನ ನೀಡಿವೆ.[೧೪][೧೫]

ಉತ್ಪಾದನೆಯ ಪ್ರಮಾಣ

[ಬದಲಾಯಿಸಿ]

2004ರಲ್ಲಿ, ಮೀನುಗಾರಿಕಾ ಕೇಂದ್ರಗಳ ಒಟ್ಟು ಜಾಗತಿಕ ಉತ್ಪಾದನೆಯು ...140,500,000 tonnes (138,300,000 long tons; 154,900,000 short tons) ರಷ್ಟಿದ್ದು, ಇದರ ಪೈಕಿ ಜಲಚರ ಸಾಕಣೆಯ ಕೊಡುಗೆಯು ...45,500,000 tonnes (44,800,000 long tons; 50,200,000 short tons) ರಷ್ಟಿತ್ತು ಅಥವಾ ಸುಮಾರು 32%ನಷ್ಟಿತ್ತು.[೧೬] ವಿಶ್ವವ್ಯಾಪಿ ಜಲಚರ ಸಾಕಣೆಯ ಬೆಳವಣಿಗೆ ದರವು ನಿರಂತರ ಮತ್ತು ಕ್ಷಿಪ್ರವಾಗಿದ್ದು, ಕಳೆದ ಮೂವತ್ತು ವರ್ಷಗಳ ಅವಧಿಯಲ್ಲಿ ಪ್ರತಿ ವರ್ಷಕ್ಕೆ ಸುಮಾರು 8 ಪ್ರತಿಶತದಷ್ಟು ಸರಾಸರಿ ಬೆಳವಣಿಗೆಯನ್ನು ಅದು ತೋರಿಸುತ್ತಿದೆ. ಇದೇ ವೇಳೆಗೆ, ಕಾಡು ಮೀನುಗಾರಿಕೆ ಕೇಂದ್ರಗಳಿಂದ ಹಿಡಿದಿರುವ ಮೀನುಗಳ ಪ್ರಮಾಣವು ಕಳೆದ ದಶಕಕ್ಕೆ ಸಂಬಂಧಿಸಿದಂತೆ ಮೂಲಭೂತವಾಗಿ ಕುಸಿದಿದೆ.

ವಿಭಿನ್ನ ಜಾತಿಗಳು ಗುಂಪುಗಳಿಗೆ ಸಂಬಂಧಿಸಿದ ಸರಾಸರಿ ವಾರ್ಷಿಕ ಶೇಕಡಾವಾರು ಬೆಳವಣಿಗೆ [೧೬]
ಕಾಲಾವಧಿ ಕಠಿಣಚರ್ಮಿಗಳು ಮೃದ್ವಂಗಿಗಳು ಸಿಹಿನೀರಿನ
ಮೀನುಗಳು
ಉಭಯನೀರಿನಲ್ಲೂ ವಾಸಿಸುವ
ಮೀನುಗಳು
ಸಮುದ್ರದ
ಮೀನುಗಳು
ಒಟ್ಟಾರೆ
1970–2004 18.9 7.7 9.3 7.3 10.5 8.8
1970–1980 23.9 5.6 6.0 6.5 14.1 6.2
1980–1990 24.1 7.0 13.1 9.4 5.3 10.8
1990–2000 9.1 11.6 10.5 6.5 12.5 10.5
2000–2004 19.2 5.3 5.2 5.8 9.6 6.3
2004ರಲ್ಲಿನ ಪ್ರಮುಖ ಜಾತಿಗಳ ಗುಂಪುಗಳು
ಜಾತಿಗಳ ಗುಂಪು ದಶಲಕ್ಷ ಟನ್ನುಗಳು[೧೬]
ಸಿಹಿನೀರಿನ ಮೀನುಗಳು 23.87
ಮೃದ್ವಂಗಿಗಳು 13.93
ಜಲವಾಸಿ ಸಸ್ಯಗಳು 13.24
ಉಭಯನೀರಿನಲ್ಲೂ ವಾಸಿಸುವ ಮೀನುಗಳು 3.68
ಕಠಿಣಚರ್ಮಿಗಳು 2.85
ಸಮುದ್ರ ಮೀನುಗಳು 1.45
ಇತರ ಜಲವಾಸಿ ಪ್ರಾಣಿಗಳು 0.38
ಜಲಚರ ಸಾಕಣೆಯಲ್ಲಿ ಕಾರ್ಪ್‌ಗಳು ಪ್ರಬಲವಾದ ಮೀನುಗಳಾಗಿವೆ
2004ರಲ್ಲಿನ ಮೊದಲ ಹತ್ತು ಜಾತಿಗಳ ಗುಂಪುಗಳು
ಜಾತಿಗಳ ಗುಂಪು ದಶಲಕ್ಷ ಟನ್ನುಗಳು[೧೬]
ಕಾರ್ಪ್‌ ಮೀನುಗಳು ಮತ್ತು ಇತರ ಸೈಪ್ರಿನಿಡ್‌‌ಗಳು 18.30
ಸಿಂಪಿಗಳು 4.60
ಮಳಿ ಮೃದ್ವಂಗಿಗಳು, ದಾರೆಮಳಿ ಮೃದ್ವಂಗಿಗಳು, ಆರ್ಕ್‌ ಚಿಪ್ಪುಗಳು 4.12
ವಿವಿಧ ಸಿಹಿನೀರಿನ ಮೀನುಗಳು 3.74
ಇಂಚಾಕಗಳು, ಸೀಗಡಿಗಳು 2.48
ಸಾಲ್ಮನ್‌‌ಗಳು, ಟ್ರೌಟ್‌ ಮೀನುಗಳು, ಸ್ಮೆಲ್ಟ್‌ ಮೀನುಗಳು 1.98
ಶಂಬೂಕಗಳು (ಕಪ್ಪೆಚಿಪ್ಪಿನ ಪ್ರಾಣಿಗಳು) 1.86
ಟಿಲಾಪಿಯಾಗಳು ಮತ್ತು ಇತರ ಸಿಕ್ಲಿಡ್‌‌‌ಗಳು 1.82
‌ಸ್ಕ್ಯಾಲಪ್‌ಗಳು, ಪೆಕ್ಟಿನ್‌‌ಗಳು 1.17
ವಿವಿಧ ಸಮುದ್ರ ಮೃದ್ವಂಗಿಗಳು 1.07

ಜಲಚರ ಸಾಕಣೆಯು ಚೀನಾದಲ್ಲಿ ವಿಶೇಷವಾಗಿ ಒಂದು ಮುಖ್ಯ ಆರ್ಥಿಕ ಚಟುವಟಿಕೆಯಾಗಿದೆ. ಚೈನೀಸ್‌ ಬ್ಯೂರೋ ಆಫ್‌ ಫಿಶರೀಸ್‌ ಸಂಸ್ಥೆಯು ವರದಿ ಮಾಡಿರುವ ಪ್ರಕಾರ, 1980 ಮತ್ತು 1997ರ ನಡುವೆ ಜಲಚರ ಸಾಕಣೆಯ ಉತ್ಪನ್ನಗಳು 16.7 ಪ್ರತಿಶತದಷ್ಟು ವಾರ್ಷಿಕ ದರದಲ್ಲಿ ಬೆಳೆಯುವ ಮೂಲಕ, ...1,900,000 tonnes (1,900,000 long tons; 2,100,000 short tons) ರಿಂದ ಸುಮಾರು ...23,000,000 tonnes (23,000,000 long tons; 25,000,000 short tons) ರವರೆಗೆ ನೆಗೆದವು. 2005ರಲ್ಲಿ, ಜಾಗತಿಕ ಉತ್ಪಾದನೆಯ ಪೈಕಿ ಚೀನಾದ ಕೊಡುಗೆಯು 70%ನಷ್ಟಿತ್ತು.[೧೭][೧೮] ಇದು ಸದ್ಯಕ್ಕೆ ಯು.ಎಸ್.ನಲ್ಲಿನ ಆಹಾರ ಉತ್ಪಾದನೆಯ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಲಯಗಳಲ್ಲಿ ಒಂದೆನಿಸಿಕೊಂಡಿದೆ.[೧೯]

ಹಾಂಗ್‌ಕಾಂಗ್‌‌ನ ಹೈ ಐಲೆಂಡ್‌ ಆಚೆಗಿನ ಸಮುದ್ರಜೀವಿ ಸಾಕಣೆ
2004ರಲ್ಲಿನ ಮೊದಲ ಹತ್ತು ಜಲಚರ ಸಾಕಣೆ ಉತ್ಪಾದಕ ದೆಶಗಳು
ದೇಶ ದಶಲಕ್ಷ ಟನ್ನುಗಳು[೧೬]
ಚೀನಾ 30.61
ಭಾರತ 2.47
ವಿಯೆಟ್ನಾಂ 1.20
ಥೈಲೆಂಡ್‌ 1.17
ಇಂಡೋನೇಷಿಯ 1.05
ಬಾಂಗ್ಲಾದೇಶ 0.91
ಜಪಾನ್‌ 0.78
ಚಿಲಿ 0.67
ನಾರ್ವೆ 0.64
ಅಮೆರಿಕಾ ಸಂಯುಕ್ತ ಸಂಸ್ಥಾನಗಳು 0.61
ಇತರ ದೇಶಗಳು 5.35
ಒಟ್ಟು 45.47

ಯು.ಎಸ್.ನ ಎಲ್ಲಾ ಇಂಚಾಕ ಬಳಕೆಯ ಪೈಕಿ ಸರಿಸುಮಾರು 90%ನಷ್ಟು ಭಾಗವನ್ನು ಕೃಷಿಮಾಡಲಾಗುತ್ತದೆ ಮತ್ತು ಆಮದು ಮಾಡಿಕೊಳ್ಳಲಾಗುತ್ತದೆ.[೨೦] ಇತ್ತೀಚಿನ ವರ್ಷಗಳಲ್ಲಿ ಸಾಲ್ಮನ್‌ ಜಲಚರ ಸಾಕಣೆಯು ದಕ್ಷಿಣ ಭಾಗದ ಚಿಲಿಯಲ್ಲಿ, ಅದರಲ್ಲೂ ವಿಶೇಷವಾಗಿ ಚಿಲಿಯ ಅತಿವೇಗವಾಗಿ-ಬೆಳೆಯುತ್ತಿರುವ ನಗರವಾದ ಪುಯೆರ್ಟೊ ಮಾಂಟ್‌‌‌ನಲ್ಲಿ ಒಂದು ಪ್ರಮುಖ ರಫ್ತು ವಸ್ತುವಾಗಿ ಮಾರ್ಪಟ್ಟಿದೆ.

ಜಾಗತಿಕ ಮಟ್ಟದಲ್ಲಿ ಹೇಳುವದಾದರೂ ಇತ್ತೀಚಿನ ಎಫ್.ಎ.ಒ. ಅಂಕಿ-ಅಂಶಗಳ ಪ್ರಕಾರ ಒಟ್ಟು ಉತ್ಪಾದನೆಯ ಶೇಕಡ 42 ರಷ್ಟು ಗೆಂಡೆ ಮೀನುಗಳು ಮತ್ತದರ ಸಂಬಂಧಿ ಸಿಪ್ರಿನಿಡೆ ಕುಟುಂಬದ ಮೀನುಗಳ ಜಲಕೃಷಿಯಿಂದ ಬರುತ್ತಿದೆ. ಇತ್ತೀಚೆಗೆ ಕಡಲ ಹಿಡುವಳಿ ಉತ್ಪನ್ನ ಸ್ಥಿರಗೊಳ್ಳುತ್ತಿದ್ದು ಹೆಚ್ಚುತ್ತಿರುವ ಜನಸಂಖ್ಯೆಯ ಆಹಾರ ಬೇಡಿಕೆ ನೀಗಿಸಲು ಇರುವ ವಿಫುಲ ಅವಕಾಶವೆಂದರೆ, ಮೀನುಕೃಷಿ. ಕಡಲ ಮೀನುಗಳ ಕೃಷಿಗಿಂತ ಒಳನಾಡು ಮೀನುಗಳ ಕೃಷಿ ತೀವ್ರಗತಿಯಲ್ಲಿ ಹೆಚ್ಚುತ್ತಿದೆ. 2003 ರಲ್ಲಿ ಹಿಡುವಳಿಯಿಂದ ಒಟ್ಟು 90.30 ದಶ ಲಕ್ಷ ಟನ್ ಉತ್ಪಾದನಯಾಗಿದ್ದರೆ ಮೀನುಕೃಷಿಯಿಂದ 34.20 ದಶ ಲಕ್ಷ ಟನ್‌ಗಳಷ್ಟು ಉತ್ಪಾದನೆಯಗಿದೆ. ಗಮನಸಿಬೇಕಾದ ಅಂಶವೆಂದರೆ 2002 ಕ್ಕೆ ಹೋಲಿಸದರೆ ಹಿಡಿವಳಿಯ ಉತ್ಪಾದನೆ ಶೇ.3 ರಷ್ಟು ಕುಸಿತ ಕಂಡಿದ್ದರೆ ಮೀನುಕೃಷಿಯಿಂದ ಉತ್ಪಾದನೆ ಶೇ. 5 ರಷ್ಟು ಹೆಚ್ಚಿದೆ. ಏಷ್ಯಾದ ದೇಶಗಳಿಂದ ಶೇ.90 ರಷ್ಟು ಮೀನುಕೃಷಿ ಉತ್ಪಾದನೆಯಾಗುತ್ತಿದೆ. ಆದ್ದರಿಂದ ಮೀನುಕೃಷಿಯಿಂದ ಉತ್ಪಾದನೆ ಹೆಚ್ಚಿಸಲು ವಿಫುಲ ಅವಕಾಶಗಳಿವೆ.

ಮಿತಿಮೀರಿ ವರದಿ ಮಾಡುವುದು

[ಬದಲಾಯಿಸಿ]

ವರದಿಮಾಡಲ್ಪಟ್ಟಿರುವ ಜಲಚರ ಸಾಕಣೆಯ ಉತ್ಪಾದನೆಯಲ್ಲಿ ಚೀನಾ ದೇಶವು ಜಾಗತಿಕ ಮಟ್ಟದಲ್ಲಿ ಅಗಾಧ ಪ್ರಮಾಣದಲ್ಲಿ ಮೇಲುಗೈ ಹೊಂದಿದೆ. ಜಗತ್ತಿನ ಉಳಿದ ದೇಶಗಳ ಉತ್ಪಾದನೆಯನ್ನು ಒಟ್ಟಿಗೆ ಸೇರಿಸಿದರೆ ಆಗುವ ಪ್ರಮಾಣಕ್ಕೆ ದುಪ್ಪಟ್ಟಿನಷ್ಟಿರುವ ಒಟ್ಟು ಉತ್ಪಾದನೆಯನ್ನು ಅದು ವರದಿಮಾಡುತ್ತದೆ. ಆದಾಗ್ಯೂ, ಚೀನಾದ ಹುಟ್ಟುವಳಿಗಳ ನಿಖರತೆಗೆ ಸಂಬಂಧಿಸಿದಂತೆ ಒಂದಷ್ಟು ವಿವಾದಾಂಶಗಳೂ ಇವೆ.

2001ರಲ್ಲಿ, ಮೀನುಗಾರಿಕಾ ವಲಯಕ್ಕೆ ಸಂಬಂಧಿಸಿದ ರೆಗ್‌ ವಾಟ್ಸನ್‌ ಮತ್ತು ಡೇನಿಯೆಲ್‌ ಪಾಲಿ ಎಂಬ ವಿಜ್ಞಾನಿಗಳು ನೇಚರ್‌‌ ನಿಯತಕಾಲಿಕಕ್ಕೆ ಬರೆದ ಪತ್ರವೊಂದರಲ್ಲಿ ಕಳವಳಗಳನ್ನು ವ್ಯಕ್ತಪಡಿಸುತ್ತಾ, 1990ರ ದಶಕದಲ್ಲಿನ ತನ್ನ ಸಾಕಿರದ ಮೀನುಗಳ ಮೀನುಗಾರಿಕೆಯಿಂದ ಹಿಡಿದ ಮೀನುಗಳ ಪ್ರಮಾಣವನ್ನು ಚೀನಾ ದೇಶವು ಮಿತಿಮೀರಿ ವರದಿಮಾಡುತ್ತಿದೆ ಎಂದು ತಿಳಿಸಿದರು.[೨೧][೨೨] ಅವರು ತಮ್ಮ ಅಭಿಪ್ರಾಯವನ್ನು ಮುಂದುವರಿಸುತ್ತಾ, 1988 ರಿಂದೀಚೆಗೆ ಜಾಗತಿಕ ಮಟ್ಟದಲ್ಲಿನ ಹಿಡಿಯಲ್ಪಟ್ಟ ಮೀನುಗಳ ಪ್ರಮಾಣವು ವಾರ್ಷಿಕವಾಗಿ 300,000 ಟನ್ನುಗಳಷ್ಟು ಹೆಚ್ಚುತ್ತಿದೆ ಎಂದು ಕಾಣಿಸುವಂತೆ ಚೀನಾ ದೇಶವು ವರದಿ ಮಾಡಿದ್ದು, ವಾಸ್ತವವಾಗಿ ಈ ಪ್ರಮಾಣವು ವಾರ್ಷಿಕವಾಗಿ 350,000 ಟನ್ನುಗಳಷ್ಟು ಕುಸಿಯುತ್ತಿದೆ ಎಂದು ತಿಳಿಸಿದರು. ವಾಟ್ಸನ್‌ ಮತ್ತು ಪಾಲಿ ಸೂಚಿಸಿದ ಅನುಸಾರ, ಇದು ಚೀನಾದ ಕಾರ್ಯನೀತಿಗಳಿಗೆ ಪ್ರಾಯಶಃ ಸಂಬಂಧಿಸಿದಂತಿದೆ. ಆರ್ಥಿಕತೆಯನ್ನು ನಿಯಂತ್ರಿಸುವ ದೇಶದ ಅಸ್ತಿತ್ವಗಳಿಗೆ ಉತ್ಪಾದನೆಯನ್ನು ಹೆಚ್ಚಿಸುವ ಕೆಲಸ ವಹಿಸಲಾಗಿರುವುದು ಅಲ್ಲಿನ ವೈಶಿಷ್ಟ್ಯವಾಗಿದೆ. ಅಷ್ಟೇ ಅಲ್ಲ, ತೀರಾ ಇತ್ತೀಚಿನವರೆಗೆ, ಚೀನಾದ ಅಧಿಕಾರಿಗಳ ಬಡತಿಯು ಅವರದೇ ಸ್ವಂತದ ಪ್ರದೇಶಗಳಿಗೆ ಸೇರಿದ ಉತ್ಪಾದನೆಯ ಹೆಚ್ಚಳಗಳ ಮೇಲೆ ಆಧರಿಸಿತ್ತು.[೨೩][೨೪]

ಈ ವಾದವನ್ನು ಚೀನಾವು ಅಲ್ಲಗಳೆಯುತ್ತದೆ. ಕ್ಷಿನ್‌ಹುವಾ ನ್ಯೂಸ್‌ ಏಜೆನ್ಸಿ ಎಂಬ ಅಧಿಕೃತ ಸಂಸ್ಥೆಯು, ಕೃಷಿ ಖಾತೆಯ ಮೀನುಗಾರಿಕಾ ವಿಭಾಗದ ಮಹಾ ನಿರ್ದೇಶಕನಾದ ಯಾಂಗ್‌ ಜಿಯಾನ್ ಎಂಬಾತನು ಚೀನಾದ ಅಂಕಿ-ಅಂಶಗಳು "ಮೂಲಭೂತವಾಗಿ ಸರಿ"ಯಾಗಿದ್ದವು ಎಂದು ಹೇಳಿರುವುದನ್ನು ಉಲ್ಲೇಖಿಸಿದೆ.[೨೫] ಆದಾಗ್ಯೂ, ಚೀನಾದ ಅಂಕಿ-ಅಂಶದ ಹುಟ್ಟುವಳಿಗಳ ವಿಶ್ವಾಸಾರ್ಹತೆಗೆ ಸಂಬಂಧಿಸಿದಂತೆ ಒಂದಷ್ಟು ವಿವಾದಾಂಶಗಳಿವೆ ಎಂಬುದಕ್ಕೆ ಎಪ್ಎಒ ಸಮ್ಮತಿಸಿದೆ, ಹಾಗೂ ಜಲಚರ ಸಾಕಣೆ ದತ್ತಾಂಶವೂ ಸೇರಿದಂತೆ ಚೀನಾದಿಂದ ಬಂದಿರುವ ದತ್ತಾಂಶವನ್ನು ವಿಶ್ವದ ಉಳಿದ ಭಾಗಗಳ ದತ್ತಾಂಶದಿಂದ ಸದ್ಯಕ್ಕೆ ಪ್ರತ್ಯೇಕವಾಗಿ ಪರಿಗಣಿಸುವುದಾಗಿ ತಿಳಿಸಿದೆ.[೨೬]

ಗಮನದಲ್ಲಿಡಬೇಕಾದ ಅಂಶಗಳು

[ಬದಲಾಯಿಸಿ]

ಜಲಕೃಷಿ ಕೈಗೊಳ್ಳಬೇಕಾದರೆ ಗಮನದಲ್ಲಿಡಬೇಕಾದ ಪ್ರಮುಖ ಅಂಶಗಳೆಂದರೆ, ಕೊಳ ನಿರ್ಮಾಣಕ್ಕೆ ಸ್ಥಳದ ಆಯ್ಕೆ, ಉತ್ತಮ ಹಾಗೂ ಹೇರಳ ನೀರಿನ ಲಭ್ಯತೆ, ಶೀಘ್ರವಾಗಿ ಬೆಳೆಯುವ, ಬೇಡಿಕೆಯುಳ್ಳ ಸೂಕ್ತ ತಳಿಯ ಆಯ್ಕೆ, ಆ ತಳಿಯ ಬಿತ್ತನೆಮರಿಗಳ ಲಭ್ಯತೆ, ಪಾಲನಾ ವಿಧಾನ, ನಿರ್ವಹಣಾ ವಿಧಾನ, ಮತ್ತು ಹಿಡುವಳಿ ಮತ್ತು ಮಾರಾಟ ವಿಧಾನಗಳು. ಇತ್ತೀಚೆಗೆ ಮೀನುಗಾರಿಕೆ ಉತ್ಪಾದನೆ ಹೆಚ್ಚಳಕ್ಕೆ ಜಲಕೃಷಿಯನ್ನೇ ಅವಲಂಬಿಸಲಾಗಿದೆ.

ವಿಧಾನಗಳು

[ಬದಲಾಯಿಸಿ]

ಸಮುದ್ರಜೀವಿ ಸಾಕಣೆ

[ಬದಲಾಯಿಸಿ]

ಸಮುದ್ರಜೀವಿ ಸಾಕಣೆ ಎಂಬುದು ಸಮುದ್ರದ ನೀರಿನಲ್ಲಿನ, ಸಾಮಾನ್ಯವಾಗಿ ತೀರಪ್ರದೇಶದ ರಕ್ಷಿತ ಜಲಭಾಗದಲ್ಲಿನ, ಸಮುದ್ರ ಜೀವಿಗಳನ್ನು ಬೆಳೆಸುವುದಕ್ಕೆ ಸಂಬಂಧಿಸಿದ ಪದವಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಸಮುದ್ರ ಮೀನಿನ ಸಾಕುವಿಕೆಯು ಸಮುದ್ರಜೀವಿ ಸಾಕಣೆಯ ಒಂದು ಉದಾಹರಣೆಯಾಗಿದೆ, ಮತ್ತು ಸಮುದ್ರ ಕಠಿಣಚರ್ಮಿಗಳು (ಇಂಚಾಕಗಳಂಥವು), ಮೃದ್ವಂಗಿಗಳು (ಸಿಂಪಿಗಳ ರೀತಿಯವು) ಹಾಗೂ ಕಡಲಕಳೆಯ ಸಾಕುವಿಕೆಗೂ ಇದು ಅನ್ವಯಿಸುತ್ತದೆ.

ಸಂಯೋಜಿಸಲ್ಪಟ್ಟ ವಿಧಾನ

[ಬದಲಾಯಿಸಿ]

ಇಂಟಿಗ್ರೇಟೆಡ್‌ ಮಲ್ಟಿ-ಟ್ರೋಫಿಕ್‌ ಆಕ್ವಾಕಲ್ಚರ್‌‌ (IMTA) ಎಂಬುದು ಒಂದು ಪರಿಪಾಠವಾಗಿದ್ದು, ಇದರಲ್ಲಿ ಒಂದು ಜಾತಿಗೆ ಸೇರಿದ ಉಪ-ಉತ್ಪನ್ನಗಳನ್ನು (ತ್ಯಾಜ್ಯಗಳು) ಮತ್ತೊಂದಕ್ಕೆ ಪ್ರದಾನವಾಗಿ (ಇನ್ಪುಟ್) (ರಸಗೊಬ್ಬರಗಳು, ಆಹಾರ) ಮರುಬಳಕೆ ಮಾಡಲಾಗುತ್ತದೆ. ಪರಿಸರೀಯ ಸಮರ್ಥನೀಯತೆ (ಜೈವಿಕ ಉಪಶಮನ), ಆರ್ಥಿಕ ಸ್ಥಿರತೆ (ಉತ್ಪನ್ನ ವೈವಿಧ್ಯೀಕರಣ ಹಾಗೂ ಅಪಾಯವನ್ನು ತಗ್ಗಿಸುವುದು) ಮತ್ತು ಸಾಮಾಜಿಕ ಸ್ವೀಕಾರಾರ್ಹತೆಗೆ (ಉತ್ತಮವಾದ ನಿರ್ವಹಣಾ ಪರಿಪಾಠಗಳು) ಸಂಬಂಧಿಸಿದ ಸಮತೋಲಿತ ವ್ಯವಸ್ಥೆಗಳನ್ನು ಸೃಷ್ಟಿಸುವ ಸಲುವಾಗಿ, ಉಣಿಸಲ್ಪಟ್ಟ ಜಲಚರ ಸಾಕಣೆಯನ್ನು (ಉದಾಹರಣೆಗೆ, ಮೀನು, ಇಂಚಾಕ) ಅಜೈವಿಕ ಸಾರದಂಥ ವಸ್ತು (ಉದಾಹರಣೆಗೆ ಕಡಲಕಳೆ) ಮತ್ತು ಜೈವಿಕ ಸಾರದಂಥ ವಸ್ತುವಿನೊಂದಿಗೆ (ಉದಾಹರಣೆಗೆ ಚಿಪ್ಪುಮೀನು) ಸಂಯೋಜಿಸಲಾಗುತ್ತದೆ.[೨೭]

"ಬಹು-ಪೌಷ್ಟಿಕ" ಎಂಬ ಪದವನ್ನು ಅದೇ ವ್ಯವಸ್ಥೆಯಲ್ಲಿನ ವಿಭಿನ್ನ ಪೌಷ್ಟಿಕ ಅಥವಾ ಪೋಷಣೆಯ ಮಟ್ಟಗಳಿಗೆ ಸೇರಿದ ಜಾತಿಗಳ ಒಟ್ಟುಗೂಡಿಸುವಿಕೆಗೆ ಉಲ್ಲೇಖಿಸಲಾಗುತ್ತದೆ.[೨೮] ಇದು ತುಂಬಾ ಪ್ರಾಚೀನವಾಗಿರುವ ಜಲವಾಸಿ ಬಹುಕೃಷಿಯ ಪರಿಪಾಠದಿಂದ ಪ್ರತ್ಯೇಕವಾಗಿರುವ ಸಂಭಾವ್ಯ ವೈಲಕ್ಷಣ್ಯವಾಗಿದ್ದು, ಇದು ಸರಳವಾಗಿ ಅದೇ ಪೌಷ್ಟಿಕ ಮಟ್ಟಕ್ಕೆ ಸೇರಿರುವ ವಿಭಿನ್ನ ಮೀನು ಜಾತಿಗಳ ಸಹ-ಕೃಷಿಯಾಗಿರಬಹುದು. ಈ ನಿದರ್ಶನದಲ್ಲಿ, ಕೆಲವು ಸಹಕ್ರಿಯಾ ಪ್ರಯೋಜನಗಳೊಂದಿಗೆ ಒಂದೇ ರೀತಿಯ ಜೈವಿಕ ಮತ್ತು ರಾಸಾಯನಿಕ ಪ್ರಕ್ರಿಯೆಗಳನ್ನು ಈ ಜೀವಿಗಳೆಲ್ಲವೂ ಹಂಚಿಕೊಳ್ಳಬಹುದಾಗಿದ್ದು, ಅದು ಸಂಭವನೀಯವಾಗಿ ಪರಿಸರ ವ್ಯವಸ್ಥೆಯಲ್ಲಿನ ಗಮನಾರ್ಹ ಸ್ಥಳಾಂತರಣಗಳಿಗೆ ಕಾರಣವಾಗುತ್ತದೆ. ವಾಸ್ತವವಾಗಿ, ಒಂದೇ ಕೊಳದಲ್ಲಿನ ವ್ಯಾಪಕ ಕೃಷಿಗಳಾಗಿ (ಕಡಿಮೆ ತೀವ್ರತೆ, ಕಡಿಮೆ ನಿರ್ವಹಣೆ) ಹಲವಾರು ನೆಲೆಗಳನ್ನು ಆಕ್ರಮಿಸಿಕೊಂಡಿರುವ ಜಾತಿಗಳ ಮಹತ್ತರ ವೈವಿಧ್ಯವನ್ನು ಕೆಲವೊಂದು ಸಾಂಪ್ರದಾಯಿಕ ಬಹುಕೃಷಿ ವ್ಯವಸ್ಥೆಗಳು ಸಂಯೋಜಿಸಬಹುದು. IMTAಯಲ್ಲಿ "ಸಂಯೋಜಿಸಲ್ಪಟ್ಟಿರುವ" ಎಂಬುದು, ನೀರಿನ ಮೂಲಕದ ಪೌಷ್ಟಿಕ ದ್ರವ್ಯ ಹಾಗೂ ಶಕ್ತಿಯ ವರ್ಗಾವಣೆಯಿಂದ ಸಂಪರ್ಕಿಸಲ್ಪಟ್ಟಿರುವ ಒಂದಕ್ಕೊಂದರ ಸಾಮೀಪ್ಯದಲ್ಲಿರುವ, ವಿಭಿನ್ನ ಜಾತಿಗಳ ಹೆಚ್ಚು ತೀವ್ರವಾದ ಬೆಳೆಸುವಿಕೆಗೆ ಉಲ್ಲೇಖಿಸಲ್ಪಡುತ್ತದೆ.

ಆದರ್ಶಪ್ರಾಯವಾಗಿ, IMTA ವ್ಯವಸ್ಥೆಯೊಂದರಲ್ಲಿನ ಜೈವಿಕ ಹಾಗೂ ರಾಸಾಯನಿಕ ಪ್ರಕ್ರಿಯೆಗಳು ಸಮತೋಲನದಲ್ಲಿರುವುದು ಅಗತ್ಯ. ವಿಭಿನ್ನ ಪರಿಸರ ವ್ಯವಸ್ಥೆಯ ಕಾರ್ಯಚಟುವಟಿಕೆಗಳನ್ನು ಒದಗಿಸುವ ವಿಭಿನ್ನ ಜಾತಿಗಳ ಸೂಕ್ತ ಆಯ್ಕೆ ಹಾಗೂ ಪ್ರಮಾಣಗಳ ಮೂಲಕ ಇದನ್ನು ಸಾಧಿಸಲಾಗುತ್ತದೆ. ಸಹ-ಸಂಗೋಪನ ಕೃಷಿ ಮಾಡಲ್ಪಟ್ಟ ಜಾತಿಗಳು ವಿಶಿಷ್ಟವೆನಿಸುವಂತೆ ಕೇವಲ ಜೈವಿಕ ಸೋಸುಕಗಳಿಗಿಂತ ಹೆಚ್ಚಾಗಿರುತ್ತವೆ; ಅವು ವಾಣಿಜ್ಯ ಮೌಲ್ಯವನ್ನು ಹೊಂದಿರುವ ಕೊಯ್ಲುಮಾಡಬಹುದಾದ ಬೆಳೆಗಳಾಗಿವೆ.[೨೮] ಸಹ-ಸಂಗೋಪನ ಕೃಷಿ ಮಾಡಲ್ಪಟ್ಟ ಜಾತಿಗಳು ಹಾಗೂ ಸುಧಾರಿತ ಪರಿಸರ ವ್ಯವಸ್ಥೆಯ ಆರೋಗ್ಯಕ್ಕೆ ಇರುವ ಪರಸ್ಪರ ಪ್ರಯೋಜನಗಳನ್ನು ಆಧರಿಸಿ, ಒಂದು ಕಾರ್ಯಮಾಡುವ IMTA ವ್ಯವಸ್ಥೆಯು ಮಹತ್ತರವಾದ ಒಟ್ಟು ಉತ್ಪಾದನೆಯನ್ನು ಉಂಟುಮಾಡಬಲ್ಲದು; ಒಂದು ವೇಳೆ ಪ್ರತ್ಯೇಕ ಜಾತಿಗಳ ಉತ್ಪಾದನೆಯು ಅಲ್ಪ ಕಾಲಾವಧಿಯಲ್ಲಿ ಆಗುವ ಎಕಫಸಲಿನ ಕೃಷಿಯಲ್ಲಿ ಇರುವುದಕ್ಕಿಂತ ಕಡಿಮೆ ಇರುವಾಗಲೂ ಇದು ಕಂಡುಬರುತ್ತದೆ.[೨೯]

"ಸಂಯೋಜಿಸಲ್ಪಟ್ಟ ಜಲಚರ ಸಾಕಣೆ" ಎಂಬ ಪದಗುಚ್ಛವನ್ನು ನೀರಿನ ವರ್ಗಾವಣೆಯ ಮೂಲಕ ನಡೆಯುವ ಎಕಫಸಲಿನ ಕೃಷಿಗಳ ಸಂಯೋಜಿಸುವಿಕೆಯನ್ನು ವಿವರಿಸಲು ಕೆಲವೊಮ್ಮೆ ಬಳಸಲಾಗುತ್ತದೆ.[೨೯] ಆದಾಗ್ಯೂ, ಎಲ್ಲಾ ಆಶಯಗಳು ಹಾಗೂ ಉದ್ದೇಶಗಳಿಗೆ ಸಂಬಂಧಿಸಿದಂತೆ, "IMTA" ಹಾಗೂ "ಸಂಯೋಜಿಸಲ್ಪಟ್ಟ ಜಲಚರ ಸಾಕಣೆ" ಎಂಬ ಪದಗುಚ್ಛಗಳು ಕೇವಲ ತಮ್ಮ ವರ್ಣನಾತ್ಮಕತೆಯ ಮಟ್ಟದಲ್ಲಿ ಭಿನ್ನವಾಗುತ್ತವೆ. ಆಕ್ವಾಪೋನಿಕ್ಸ್‌, ಫ್ರಾಕ್ಷನೇಟೆಡ್‌ ಆಕ್ವಾಕಲ್ಚರ್‌‌ (ವಿಭಾಗಿಸಲ್ಪಟ್ಟ ಜಲಚರ ಸಾಕಣೆ), IAAS-ಇಂಟಿಗ್ರೇಟೆಡ್‌ ಅಗ್ರಿಕಲ್ಚರ್‌-ಆಕ್ವಾಕಲ್ಚರ್‌ ಸಿಸ್ಟಮ್ಸ್‌ (ಸಂಯೋಜಿಸಲ್ಪಟ್ಟ ಕೃಷಿ-ಜಲಚರ ಸಾಕಣೆ ವ್ಯವಸ್ಥೆಗಳು), IPUAS-ಇಂಟಿಗ್ರೇಟೆಡ್‌ ಪೆರಿ-ಅರ್ಬನ್‌ ಆಕ್ವಾಕಲ್ಚರ್‌ ಸಿಸ್ಟಮ್ಸ್‌ (ಸಂಯೋಜಿಸಲ್ಪಟ್ಟ ನಗರವನ್ನಾವರಿಸಿದ-ಜಲಚರ ಸಾಕಣೆ ವ್ಯವಸ್ಥೆಗಳು), ಮತ್ತು IFAS-ಇಂಟಿಗ್ರೇಟೆಡ್‌ ಫಿಶರೀಸ್‌-ಆಕ್ವಾಕಲ್ಚರ್‌ ಸಿಸ್ಟಮ್ಸ್‌ (ಸಂಯೋಜಿಸಲ್ಪಟ್ಟ ಮೀನುಗಾರಿಕಾ ಕೇಂದ್ರಗಳ-ಜಲಚರ ಸಾಕಣೆ ವ್ಯವಸ್ಥೆಗಳು) ಇವೆಲ್ಲವೂ IMTA ಪರಿಕಲ್ಪನೆಯ ಇತರ ರೂಪಾಂತರಗಳಾಗಿವೆ.

ಜಾತಿಯ ಗುಂಪುಗಳು

[ಬದಲಾಯಿಸಿ]

ಈಜುರೆಕ್ಕೆ ಮೀನು

[ಬದಲಾಯಿಸಿ]

ಈಜುರೆಕ್ಕೆ ಮೀನಿನ ಸಾಕುವಿಕೆಯು ಜಲಚರ ಸಾಕಣೆಯ ಅತ್ಯಂತ ಸಾಮಾನ್ಯ ಸ್ವರೂಪವಾಗಿದೆ. ಕೆರೆಗಳು, ಕೊಳಗಳು, ಅಥವಾ ಸಾಗರದ ಆವರಣಗಳಲ್ಲಿ, ಸಾಮಾನ್ಯವಾಗಿ ಆಹಾರಕ್ಕಾಗಿ ಮೀನುಗಳನ್ನು ವಾಣಿಜ್ಯ ಸ್ವರೂಪದಲ್ಲಿ ಬೆಳೆಸುವುದನ್ನು ಇದು ಒಳಗೊಳ್ಳುತ್ತದೆ. ವಿಹಾರದ ಮೀನುಗಾರಿಕೆಗೆ ಸಂಬಂಧಿಸಿದಂತೆ ಅಥವಾ ಒಂದು ಜಾತಿಯ ಸ್ವಾಭಾವಿಕ ಸಂಖ್ಯೆಗಳಿಗೆ ಪೂರಕವಾಗಿರಲು ಎಳೆಯ ಹರೆಯದ ಮೀನುಗಳನ್ನು ಕಾಡುಮೇಡುಗಳಲ್ಲಿ ಬಿಡುವ ಸೌಲಭ್ಯವನ್ನು ಸಾಮಾನ್ಯವಾಗಿ ಮೀನು ಮೊಟ್ಟೆ ಮರಿಮಾಡುವ ಕೇಂದ್ರ ಎಂದು ಉಲ್ಲೇಖಿಸಲಾಗುತ್ತದೆ. ಮೀನು ಸಾಕಣೆ ಕೇಂದ್ರಗಳಿಂದ ಬೆಳೆಸಲ್ಪಟ್ಟಿರುವ ಮೀನು ಜಾತಿಗಳಲ್ಲಿ ಸಾಲ್ಮನ್‌, ದೊಡ್ಡ ಕಣ್ಣಿನ ಟೂನಾ, ಕಾರ್ಪ್‌ ಮೀನು, ಟಿಲಾಪಿಯಾ, ಬೆಕ್ಕುಮೀನು ಹಾಗೂ ಕಾಡ್‌ ಮೊದಲಾದವು ಸೇರಿವೆ.[೩೦]

ಮೆಡಿಟರೇನಿಯನ್‌ ಸಮುದ್ರದಲ್ಲಿ, ಕಿರಿಯ ನೀಲಿ ಈಜುರೆಕ್ಕೆಯ ಟೂನಾಗಳನ್ನು ಸಮುದ್ರದಲ್ಲಿ ಬಲೆಯನ್ನುಪಯೋಗಿಸಿ ಹಿಡಿಯಲಾಗುತ್ತದೆ ಮತ್ತು ಅವನ್ನು ಕಡಲತೀರದೆಡೆಗೆ ನಿಧಾನವಾಗಿ ತಳ್ಳಿಕೊಂಡು ಬರಲಾಗುತ್ತದೆ. ನಂತರ ಅವನ್ನು ಕಡಲತೀರದಾಚೆಯ ದೊಡ್ಡಿಗಳಲ್ಲಿ ನಿರ್ಬಂಧಿಸಿಡಲಾಗುತ್ತದೆ ಮತ್ತು ಅಲ್ಲಿ ಅವನ್ನು ಮಾರುಕಟ್ಟೆಯ ಅಗತ್ಯಗಳಿಗೆ ಸಂಬಂಧಿಸಿದಂತೆ ಮತ್ತಷ್ಟು ಬೆಳೆಸಲಾಗುತ್ತದೆ.[೩೧] 2009 ರಲ್ಲಿ, ಆಸ್ಟ್ರೇಲಿಯಾದಲ್ಲಿನ ಸಂಶೋಧಕರು ಮೊಟ್ಟಮೊದಲ ಬಾರಿಗೆ ನೆಲಾವೃತ ಕೆರೆಗಳಲ್ಲಿ ಟ್ಯೂನಾಗಳನ್ನು (ದಕ್ಷಿಣ ಭಾಗದ ನೀಲಿ ಈಜುರೆಕ್ಕೆಯ ಮೀನು) ಬೆಳೆಸಲು ಪುಸಲಾಯಿಸುವಲ್ಲಿ ಯಶಸ್ವಿಯಾದರು.[೩೨]

ಚಿಪ್ಪುಮೀನು

[ಬದಲಾಯಿಸಿ]
ಕಡಲ್ಗಿವಿಯ ಸಾಕಣೆಕೇಂದ್ರ

ಕಡಲ್ಗಿವಿಯ ಸಾಕುವಿಕೆಯು ಜಪಾನ್‌ ಮತ್ತು ಚೀನಾ ದೇಶಗಳಲ್ಲಿ 1950ರ ದಶಕದ ಅಂತ್ಯ ಹಾಗೂ 1960ರ ದಶಕದ ಆರಂಭದಲ್ಲಿ ಶುರುವಾಯಿತು.[೩೩] 1990ರ ದಶಕದ ಮಧ್ಯಭಾಗದಿಂದೀಚೆಗೆ, ಈ ಉದ್ಯಮವು ಗಣನೀಯವಾಗಿ ಯಶಸ್ವಿಯಾಗಿದೆ.[೩೪] ಅತಿಯಾದ-ಮೀನುಗಾರಿಕೆ ಮತ್ತು ಅತಿಕ್ರಮಿಸುವಿಕೆಗಳು ವನ್ಯ ಮೀನುಗಳ ಒಟ್ಟುಸಂಖ್ಯೆಯನ್ನು ಎಷ್ಟರಮಟ್ಟಿಗೆ ತಗ್ಗಿಸಿವೆಯೆಂದರೆ, ಬಹುತೇಕ ಕಡಲ್ಗಿವಿ ಮಾಂಸದ ಅಗತ್ಯವನ್ನು ಸಾಕಣೆ ಮಾಡಲ್ಪಟ್ಟ ಅಥವಾ ಬೆಳೆಸಲ್ಪಟ್ಟ ಕಡಲ್ಗಿವಿಯು ಈಗ ಪೂರೈಸುತ್ತಿದೆ.

ಕಠಿಣಚರ್ಮಿಗಳು

[ಬದಲಾಯಿಸಿ]

ವಾಣಿಜ್ಯ ಸ್ವರೂಪದಲ್ಲಿನ ಇಂಚಾಕ ಸಾಕಣೆಯು 1970 ರ ದಶಕದಲ್ಲಿ ಪ್ರಾರಂಭವಾಯಿತು, ಮತ್ತು ಅಲ್ಲಿಂದೀಚೆಗೆ ಉತ್ಪಾದನೆಯು ತೀವ್ರವಾಗಿ ಬೆಳೆದಿದೆ. 2003 ರಲ್ಲಿ ಜಾಗತಿಕ ಉತ್ಪಾದನೆಯು ...1,600,000 tonnes (1,600,000 long tons; 1,800,000 short tons) ಕ್ಕಿಂತ ಹೆಚ್ಚು ಪ್ರಮಾಣವನ್ನು ಮುಟ್ಟುವುದರ ಮೂಲಕ, ಸುಮಾರು 9,000 ದಶಲಕ್ಷದಷ್ಟು ಯು.ಎಸ್. ಡಾಲರುಗಳ ಮೌಲ್ಯವನ್ನು ಅದು ಪ್ರತಿನಿಧಿಸಿತು. ಬೆಳೆಸಲಾದ ಇಂಚಾಕದ ಪೈಕಿ 75% ನಷ್ಟು ಭಾಗವನ್ನು ಏಷ್ಯಾದಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ಚೀನಾ ಹಾಗೂ ಥೈಲೆಂಡ್‌‌‌ನಲ್ಲಿ ಉತ್ಪಾದಿಸಲಾಗುತ್ತದೆ. ಇತರ 25% ನಷ್ಟು ಭಾಗವನ್ನು ಮುಖ್ಯವಾಗಿ ಲ್ಯಾಟಿನ್‌ ಅಮೆರಿಕಾದಲ್ಲಿ ಉತ್ಪಾದಿಸಲಾಗುತ್ತಿದ್ದು, ಇಲ್ಲಿ ಬ್ರೆಜಿಲ್‌ ಅತಿದೊಡ್ಡ ಉತ್ಪಾದಕನಾಗಿದೆ. ಥೈಲೆಂಡ್‌ ಅತಿದೊಡ್ಡ ರಫ್ತುದಾರನಾಗಿದೆ.

ಇಂಚಾಕ ಸಾಕಣೆಯು ಆಗ್ನೇಯ ಏಷ್ಯಾದಲ್ಲಿನ ತನ್ನ ಸಾಂಪ್ರದಾಯಿಕ, ಸಣ್ಣ-ಪ್ರಮಾಣದ ಸ್ವರೂಪದಿಂದ ಒಂದು ಜಾಗತಿಕ ಉದ್ಯಮವಾಗಿ ಬದಲಾವಣೆಗೊಂಡಿದೆ.

ಪ್ರತಿ ಏಕಮಾನ ವಿಸ್ತೀರ್ಣದಲ್ಲಿನ ಹಿಂದೆಂದೂ ಇಲ್ಲದ ಅತೀವ ದಟ್ಟಣೆಗಳಿಗೆ ತಾಂತ್ರಿಕ ಪ್ರಗತಿಗಳು ಕಾರಣವಾಗಿವೆ, ಹಾಗೂ ಸಾಕಿದ ತಳಿಯನ್ನು ವಿಶ್ವವ್ಯಾಪಿಯಾಗಿ ಸಾಗಿಸಲಾಗುತ್ತಿದೆ. ವಸ್ತುತಃ ಎಲ್ಲಾ ಸಾಕಲ್ಪಡುವ ಇಂಚಾಕಗಳು ಪೆನೇಯೀಡ್‌‌‌‌‌‌ಗಳಾಗಿವೆ (ಅಂದರೆ, ಪೆನೇಯೀಡೇ ವಂಶಕ್ಕೆ ಸೇರಿದ ಇಂಚಾಕಗಳಾಗಿವೆ), ಮತ್ತು ಇಂಚಾಕದ ಕೇವಲ ಎರಡು ಜಾತಿಗಳು— ಅಂದರೆ ಪೆನೇಯಸ್‌ ವನ್ನಾಮೀ (ಪೆಸಿಫಿಕ್‌ ಬಿಳಿ ಇಂಚಾಕ) ಹಾಗೂ ಪೆನೇಯಸ್‌ ಮೊನೊಡಾನ್‌ (ದೈತ್ಯ ಹುಲಿ ಸೀಗಡಿ)- ಸಾಕಲ್ಪಟ್ಟ ಉಳಿದೆಲ್ಲಾ ಇಂಚಾಕಗಳ ಪೈಕಿ ಸ್ಥೂಲವಾಗಿ 80% ರಷ್ಟು ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತವೆ. ಈ ಕೈಗಾರಿಕಾ ಸ್ವರೂಪದ ಎಕಫಸಲಿನ ಕೃಷಿಗಳು ಕಾಯಿಲೆಗೆ ಅತ್ಯಂತ ಸುಲಭವಾಗಿ ಈಡಾಗುತ್ತವೆ; ಇದರಿಂದಾಗಿ ಸಮಗ್ರ ವಲಯಗಳಾದ್ಯಂತ ಇರುವ ಇಂಚಾಕಗಳ ಒಟ್ಟುಸಂಖ್ಯೆಗಳಲ್ಲಿ, ಹತ್ತರಲ್ಲಿ ಒಂಬತ್ತರಷ್ಟರ ಪ್ರಮಾಣದಲ್ಲಿ ಇಂಚಾಕಗಳು ಸಾಯುತ್ತಿರುವುದು ಕಂಡುಬಂದಿದೆ. ಹೆಚ್ಚುತ್ತಲೇ ಇರುವ ಪರಿಸರ ವಿಜ್ಞಾನದ ಸಮಸ್ಯೆಗಳು, ಮರುಕಳಿಸಿದ ಕಾಯಿಲೆಯ ಏಕಾಏಕಿ ಆರಂಭಗಳು, ಮತ್ತು ಒತ್ತಡವಷ್ಟೇ ಅಲ್ಲದೇ ಎನ್‍ಜಿಒಗಳು ಹಾಗೂ ಬಳಕೆದಾರ ದೇಶಗಳಿಂದ ಬರುವ ಟೀಕೆಯು 1990ರ ದಶಕದ ಅಂತ್ಯದ ವೇಳೆಗೆ ಉದ್ಯಮದಲ್ಲಿನ ಬದಲಾವಣೆಗಳಿಗೆ ಮತ್ತು ಸಾಮಾನ್ಯವಾಗಿ ಬಲವಾಗಿರುವ ಕಟ್ಟುಪಾಡುಗಳಿಗೆ ಕಾರಣವಾದವು. 1999ರಲ್ಲಿ, ಹೆಚ್ಚು ಸಮರ್ಥನೀಯವಾದ ಸಾಕುವಿಕೆಯ ಪರಿಪಾಠಗಳನ್ನು ಅಭಿವೃದ್ಧಿಪಡಿಸುವ ಹಾಗೂ ಉತ್ತೇಜಿಸುವ ಕಡೆಗೆ ಗುರಿಯನ್ನು ಹೊಂದಿರುವ ಕಾರ್ಯಸೂಚಿಯೊಂದಕ್ಕೆ ಸರ್ಕಾರಗಳು, ಉದ್ಯಮ ಪ್ರತಿನಿಧಿಗಳು, ಹಾಗೂ ಪರಿಸರೀಯ ಸಂಘಟನೆಗಳು ಚಾಲನೆ ನೀಡಿದವು.

ಅನೇಕ ಸಮಸ್ಯೆಗಳನ್ನು ಒಳಗೊಂಡಿರುವುದರ ಜೊತೆಗೆ, ಸಿಹಿನೀರಿನ ಸೀಗಡಿ ಸಾಕಣೆಯು ಸಮುದ್ರದ ಇಂಚಾಕ ಸಾಕಣೆಯೊಂದಿಗೆ ಅನೇಕ ಗುಣಲಕ್ಷಣಗಳನ್ನು ಹಂಚಿಕೊಳ್ಳುತ್ತದೆ. ಮುಖ್ಯ ಜಾತಿಗಳ (ದೈತ್ಯ ನದಿ ಸೀಗಡಿಯಾಗಿರುವ ಮ್ಯಾಕ್ರೋಬ್ರಾಕಿಯಂ ರೋಸೆನ್‌ಬರ್ಗಿಲ್‌ ) ಬೆಳವಣಿಗೆಯ ಜೀವನಚಕ್ರದಿಂದ ಅನನ್ಯ ಸಮಸ್ಯೆಗಳು ಪರಿಚಯಿಸಲ್ಪಟ್ಟಿವೆ.[೩೫]

ಜಾಗತಿಕ ಮಟ್ಟದಲ್ಲಿನ ಸಿಹಿನೀರಿನ ಸೀಗಡಿಗಳ ವಾರ್ಷಿಕ ಉತ್ಪಾದನೆಯು (ಏಡಿಮೀನು ಮತ್ತು ಏಡಿಗಳನ್ನು ಹೊರತುಪಡಿಸಿ) 2003 ರಲ್ಲಿ ಸುಮಾರು ...280,000 tonnes (280,000 long tons; 310,000 short tons) ನಷ್ಟಿತ್ತು; ಇದರ ಪೈಕಿ ಚೀನಾ ದೇಶವು ...180,000 tonnes (180,000 long tons; 200,000 short tons) ನಷ್ಟು ಪ್ರಮಾಣವನ್ನು ಉತ್ಪಾದಿಸಿದರೆ, ಭಾರತ ಹಾಗೂ ಥೈಲೆಂಡ್‌ ದೇಶಗಳು ತಲಾ ...35,000 tonnes (34,000 long tons; 39,000 short tons) ನಷ್ಟು ಪ್ರಮಾಣವನ್ನು ಉತ್ಪಾದಿಸಿದವು. ಹೆಚ್ಚುವರಿಯಾಗಿ, ಚೀನಾ ದೇಶವು ಸುಮಾರು ...370,000 tonnes (360,000 long tons; 410,000 short tons) ನಷ್ಟು ಪ್ರಮಾಣದಲ್ಲಿ ಚೀನಾದ ನದಿ ಏಡಿಯನ್ನು (ಎರಿಯೋಚೆಯಿರ್‌‌ ಸಿನೆನ್ಸಿಸ್‌ ) ಉತ್ಪಾದಿಸಿತು.[೩೬]

ಕಂಟಕಚರ್ಮಿಗಳು

[ಬದಲಾಯಿಸಿ]

ವಾಣಿಜ್ಯ ಸ್ವರೂಪದಲ್ಲಿ ಬೆಳೆಸಲಾದ ಕಂಟಕಚರ್ಮಿಗಳಲ್ಲಿ ಸಮುದ್ರ ಸೌತೆಗಳು ಮತ್ತು ಕಡಲಚಿಳ್ಳೆಗಳು ಸೇರಿವೆ. ಚೀನಾದಲ್ಲಿ, ಸಮುದ್ರ ಸೌತೆಗಳನ್ನು ಕೃತಕ ಕೊಳಗಳಲ್ಲಿ ಬೆಳೆಸಲಾಗುತ್ತದೆ. ಈ ಕೊಳಗಳು ...1,000 acres (400 ha)ನಷ್ಟು ದೊಡ್ಡದಿರುತ್ತವೆ.[೩೭]

ಪಾಚಿಗಳು

[ಬದಲಾಯಿಸಿ]

ತೇಲುಸಸ್ಯ, ಸೂಕ್ಷ್ಮಸಸ್ಯಗಳು, ಅಥವಾ ಪ್ಲವಕದ ಪಾಚಿಗಳು ಎಂದೂ ಉಲ್ಲೇಖಿಸಲ್ಪಡುವ ಸೂಕ್ಷ್ಮಪಾಚಿಗಳು ಕೃಷಿಮಾಡಲ್ಪಟ್ಟ ಪಾಚಿಗಳ ಬಹುಪಾಲನ್ನು ಆವರಿಸಿಕೊಳ್ಳುತ್ತವೆ.

ಕಡಲಕಳೆ ಎಂದು ಸಾಮಾನ್ಯವಾಗಿ ಪರಿಚಿತವಾಗಿರುವ ಬೃಹತ್‌‌ಪಾಚಿಗಳು ಅನೇಕ ವಾಣಿಜ್ಯ ಹಾಗೂ ಕೈಗಾರಿಕಾ ಉಪಯೋಗಗಳನ್ನು ಹೊಂದಿವೆಯಾದರೂ, ಅವುಗಳ ಗಾತ್ರ ಹಾಗೂ ನಿರ್ದಿಷ್ಟ ಅವಶ್ಯಕತೆಗಳ ಕಾರಣದಿಂದಾಗಿ ಅವನ್ನು ಒಂದು ದೊಡ್ಡ ಪ್ರಮಾಣದಲ್ಲಿ ಸುಲಭವಾಗಿ ಕೃಷಿಮಾಡಲಾಗುವುದಿಲ್ಲ ಹಾಗೂ ಬಹುತೇಕ ಸಂದರ್ಭಗಳಲ್ಲಿ ಅವನ್ನು ಸಹಜವಾಗಿರುವ ಕಾಡುಸ್ಥಿತಿಯಲ್ಲಿ ಪಡೆಯಲಾಗುತ್ತದೆ.

ವಿವಾದಾಂಶಗಳು

[ಬದಲಾಯಿಸಿ]

ನೈಸರ್ಗಿಕ ಸ್ಥಿತಿಯ ಮೀನುಗಾರಿಕೆಯನ್ನು ಬಳಸಿಕೊಳ್ಳುವುದಕ್ಕಿಂತ ಜಲಚರ ಸಾಕಣೆಯು ಪರಿಸರೀಯವಾಗಿ ಹೆಚ್ಚು ಹಾನಿಯುಂಟುಮಾಡಬಲ್ಲದು.[೩೮] ಇದಕ್ಕೆ ಸಂಬಂಧಿಸಿದ ಕಳವಳಗಳಲ್ಲಿ, ತ್ಯಾಜ್ಯ ನಿರ್ವಹಣೆ, ಪ್ರತಿಜೀವಕಗಳ ಪಾರ್ಶ್ವ-ಪರಿಣಾಮಗಳು, ಕೃಷಿಮಾಡಿದ ಮತ್ತು ಸಾಕಿರದ ಪ್ರಾಣಿಗಳ ನಡುವಿನ ಪೈಪೋಟಿ, ಮತ್ತು ಹೆಚ್ಚು ಮಾರುಕಟ್ಟೆ ಮಾಡಬಹುದಾದ ಮಾಂಸಾಹಾರಿ ಮೀನುಗಳನ್ನು ಪೋಷಿಸಲು ಇತರ ಮೀನುಗಳನ್ನು ಬಳಸುವುದು ಇವೇ ಮೊದಲಾದವು ಸೇರಿವೆ. ಆದಾಗ್ಯೂ, 1990 ರ ದಶಕ ಮತ್ತು 2000 ರ ದಶಕದ ಅವಧಿಯಲ್ಲಿ ಕಂಡುಬಂದ ಸಂಶೋಧನೆ ಹಾಗೂ ವಾಣಿಜ್ಯ ಸ್ವರೂಪದ ಪೋಷಣೆಯಲ್ಲಿನ ಸುಧಾರಣೆಗಳು ಇವುಗಳ ಪೈಕಿ ಬಹಳಷ್ಟನ್ನು ಕಡಿಮೆಮಾಡಿವೆ.[೩೯]

ಮೀನು ತ್ಯಾಜ್ಯವು ಸಾವಯವ ಸ್ವರೂಪದ್ದಾಗಿದ್ದು, ಜಲವಾಸಿ ಆಹಾರ ಜಾಲಗಳ ಎಲ್ಲಾ ಘಟಕಗಳಲ್ಲಿ ಅಗತ್ಯವಾಗಿರುವ ಪೌಷ್ಟಿಕ ದ್ರವ್ಯಗಳಿಂದ ಅದು ರಚಿತವಾಗಿದೆ. ಸಾಗರದಲ್ಲಿ ಸಾಮಾನ್ಯವಾದ ಮೀನಿನ ತ್ಯಾಜ್ಯ ಸಾಂದ್ರತೆಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿನ ಸಾಂದ್ರತೆಗಳನ್ನು ಜಲಚರ ಸಾಕಣೆಯು ಅನೇಕವೇಳೆ ಉತ್ಪಾದಿಸುತ್ತದೆ. ಈ ತ್ಯಾಜ್ಯವು ಸಾಗರದ ತಳಭಾಗದಲ್ಲಿ ಸಂಗ್ರಹಗೊಂಡು, ತಳಭಾಗದಲ್ಲಿ ವಾಸಿಸುವ ಜೀವರಾಶಿಗೆ ಹಾನಿಯುಂಟುಮಾಡುತ್ತದೆ ಇಲ್ಲವೇ ಅವನ್ನು ನಿರ್ಮೂಲಗೊಳಿಸುತ್ತದೆ. ತ್ಯಾಜ್ಯವು ನೀರಿನ ಸ್ತಂಭದಲ್ಲಿನ ಕರಗಿದ ಆಮ್ಲಜನಕ ಮಟ್ಟಗಳನ್ನು ಸಹ ತಗ್ಗಿಸುವ ಸಾಮರ್ಥ್ಯವನ್ನು ಹೊಂದಿದ್ದು, ಇದು ಸಾಕಿರದ ಪ್ರಾಣಿಗಳ ಮೇಲೆ ಮತ್ತಷ್ಟು ಒತ್ತಡವನ್ನು ಹೇರುತ್ತದೆ.

ಕಾಯಿಲೆಯನ್ನು ತಡೆಗಟ್ಟುವ ಉದ್ದೇಶದಿಂದ ಬೇಸಾಯಗಾರರು ಅನೇಕವೇಳೆ ತಮ್ಮ ಪ್ರಾಣಿಗಳಿಗೆ ಪ್ರತಿಜೀವಕಗಳ ಪೂರೈಕೆಯನ್ನು ಮಾಡುತ್ತಾರೆ. ಜಾನುವಾರುಗಳಲ್ಲಿ ಆಗುವಂತೆಯೇ ಇದು ಬ್ಯಾಕ್ಟೀರಿಯಾದ ನಿರೋಧಕತೆಯ ವಿಕಸನದ ವೇಗವನ್ನು ಹೆಚ್ಚಿಸಬಲ್ಲದಾಗಿರುತ್ತದೆ.

ಮೀನಿನ ಎಣ್ಣೆಗಳು

[ಬದಲಾಯಿಸಿ]

ಆಹಾರದಲ್ಲಿ ಸೇರಿಸಲ್ಪಟ್ಟಿರುವ ಕಾಳಿನ ಪ್ರಮಾಣದ ಕಾರಣದಿಂದಾಗಿ ಸಾಕಣೆ-ಕೇಂದ್ರದಲ್ಲಿ ಬೆಳೆಸಿದ ಟಿಲಾಪಿಯಾದ ಪೋಷಣೆಯ ಮೌಲ್ಯವು ರಾಜಿಗೆ ಒಳಗಾಗಬೇಕಾಗಬಹುದು. ಸಣ್ಣ ಸರಪಳಿಯ ಒಮೆಗಾ-6 ಕೊಬ್ಬಿನ ಆಮ್ಲಗಳನ್ನು ಕಾಳು ಒಳಗೊಂಡಿರುತ್ತದೆಯಾದ್ದರಿಂದ, ಮೀನುಗಳಲ್ಲಿ ಈ ದ್ರವ್ಯಗಳು ರೂಪುಗೊಳ್ಳಲು ಈ ಆಮ್ಲಗಳು ತಮ್ಮದೇ ಆದ ಕೊಡುಗೆಯನ್ನು ನೀಡುತ್ತವೆ. "ದೀರ್ಘ-ಸರಪಳಿಯ ಒಮೆಗಾ-6ರಿಂದ ದೀರ್ಘ-ಸರಪಳಿಯ ಒಮೆಗಾ-3ವರೆಗಿನ, ಕ್ರಮವಾಗಿ AAಯಿಂದ EPAವರೆಗಿನ ಅನುಪಾತಗಳು ಟಿಲಾಪಿಯಾದಲ್ಲಿ ಸುಮಾರು 11:1ರಷ್ಟು ಸರಾಸರಿ ಪ್ರಮಾಣದಲ್ಲಿವೆ; ಇದಕ್ಕೆ ಹೋಲಿಸಿದಾಗ ಸಾಲ್ಮನ್‌ ಮತ್ತು ಟ್ರೌಟ್‌ ಮೀನುಗಳೆರಡರಲ್ಲೂ ಕ್ರಮವಾಗಿ 1:1 ಅನುಪಾತದಲ್ಲಿ (AAಗಿಂತ EPA ಪ್ರಮಾಣವು ಹೆಚ್ಚಿದೆ ಎಂಬುದನ್ನು ಇದು ಸೂಚಿಸುತ್ತದೆ) ಈ ಪ್ರಮಾಣವು ಕಂಡುಬರುತ್ತದೆ." 2005ರಲ್ಲಿ ...1,500,000 tonnes (1,500,000 long tons; 1,700,000 short tons) ನಷ್ಟು ಪ್ರಮಾಣದ ಟಿಲಾಪಿಯಾವನ್ನು ಅಮೇರಿಕ ಉತ್ಪಾದಿಸಿದ್ದು, 2010ರ ವೇಳೆಗೆ ಇದು ...2,500,000 tonnes (2,500,000 long tons; 2,800,000 short tons) ನಷ್ಟು ಇರುತ್ತದೆ ಎಂದು ಮುನ್ನಂದಾಜು ಮಾಡಲ್ಪಟ್ಟಿದೆ. ಮೀನುಗಳ ಬಳಕೆಯನ್ನು ಪ್ರೋತ್ಸಾಹಿಸುವ ವ್ಯಾಪಕವಾದ ಪ್ರಚಾರವು, ಒಂದು ಸಮತೋಲಿತ ಆಹಾರವನ್ನು ಸೇವಿಸಲು ಪ್ರಯತ್ನಿಸುತ್ತಿರುವ ಕಡಿಮೆ ಆದಾಯಗಳಿರುವ ಜನರಿಂದ ಟಿಲಾಪಿಯಾದ ಬಳಕೆಯು ಹೆಚ್ಚು ಪ್ರಮಾಣದಲ್ಲಿ ಆಗಲು ಕಾರಣವಾಗಿದೆ. ಟಿಲಾಪಿಯಾದಲ್ಲಿ ಕಂಡುಬರುವ ಒಮೆಗಾ-3 ಸಂಯುಕ್ತಗಳ ಕಡಿಮೆ ಪ್ರಮಾಣ ಹಾಗೂ ಒಮೆಗಾ-6 ಸಂಯುಕ್ತಗಳ ಹೆಚ್ಚಿನ ಅನುಪಾತಗಳು, ಈ ಮೀನುಗಳನ್ನು ಸೇವಿಸುವುದರಿಂದ ದೊರೆಯುವ ಆರೋಗ್ಯದ ಪ್ರಯೋಜನಗಳ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ.[೪೦]

ಸಾಲ್ಮನ್‌ ಹಾಗೂ ಇತರ ಮಾಂಸಾಹಾರಿ ಮೀನುಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಪ್ರಮಾಣದಲ್ಲಿರುವ ಆಹಾರಗಳನ್ನು ಸೋಯಾದಂಥ ಪ್ರೋಟೀನು ಮೂಲಗಳಿಂದ ರೂಪಿಸಲು ಸಾಧ್ಯವಿದೆಯಾದರೂ, ಸೋಯಾ-ಆಧಾರಿತ ಆಹಾರಕ್ರಮಗಳು ಒಮೆಗಾ-6 ಮತ್ತು ಒಮೆಗಾ-3 ಕೊಬ್ಬಿನ ಆಮ್ಲಗಳ ನಡುವಿನ ಸಮತೋಲನವನ್ನು ಬದಲಾಯಿಸಬಹುದಾಗಿದೆ.[೪೧]

ಸಾಕಿರದ ಮೀನಿನ ಮೇಲಿನ ಪ್ರಭಾವಗಳು

[ಬದಲಾಯಿಸಿ]

ಆಹಾರಕ್ಕಾಗಿ ಇರುವ ಸಾಕಿರದ ಮೇವು ಮೀನಿಗೆ ಸಂಬಂಧಿಸಿದಂತೆ, ಸಾಲ್ಮನ್‌ ಸಾಕಣೆಯು ಸದ್ಯಕ್ಕೆ ಹೆಚ್ಚಿನ ಬೇಡಿಕೆಯನ್ನು ಒಳಗೊಂಡಿದೆ. ಮಾಂಸಾಹಾರಿಗಳಾಗಿರುವ ಸಾಲ್ಮನ್‌ಗಳಿಗೆ ಪ್ರೋಟೀನಿನ ಅಗತ್ಯ ಹೆಚ್ಚು ಕಂಡುಬರುತ್ತದೆ, ಮತ್ತು ಕೃಷಿಮಾಡಿ ಬೆಳೆಸಿದ ಸಾಲ್ಮನ್‌ ಮೀನುಗಳು ತಾವು ಉತ್ಪತ್ತಿ ಮಾಡುವುದಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಮೀನನ್ನು ತಿನ್ನುತ್ತವೆ. ಕೃಷಿ ಮಾಡಿ ಬೆಳೆಸಲಾದ ಪ್ರತಿ ಪೌಂಡಿನಷ್ಟು ಸಾಲ್ಮನ್‌ ಮೀನಿಗೆ ಸುಮಾರು 6 ಪೌಂಡುಗಳಷ್ಟು ಪ್ರಮಾಣದಲ್ಲಿ ಸಾಕಿರದ ಮೀನಿನ ಅವಶ್ಯಕತೆಯಿರುತ್ತದೆ.[೪೨] ವಿಶ್ವದ ನಿಯಂತ್ರಿತ ಮೀನುಗಾರಿಕಾ ಕೇಂದ್ರಗಳ ಪೈಕಿ ಎಪ್ಪತ್ತೈದು ಪ್ರತಿಶತ ಭಾಗದಷ್ಟು ಈಗಾಗಲೇ ತಮ್ಮ ಗರಿಷ್ಠ ಸಮರ್ಥನೀಯ ಇಳುವರಿಯ ಹತ್ತಿರದಲ್ಲಿವೆ ಅಥವಾ ಅದನ್ನು ಮೀರಿವೆ."[೪೩] ಸಾಲ್ಮನ್‌ ಸಾಕಣೆಗೆ ಸಾಕಿರದ ಮೇವು ಮೀನನ್ನು ಕೈಗಾರಿಕಾ ಪ್ರಮಾಣದಲ್ಲಿ ಪಡೆಯುವುದು, ಆಹಾರಕ್ಕಾಗಿ ಅವನ್ನು ನೆಚ್ಚಿಕೊಂಡಿರುವ ಸಾಕಿರದ ಪರಭಕ್ಷಕ ಮೀನಿನ ಉಳಿಯುವ ಸಾಮರ್ಥ್ಯದ ಮೇಲೂ ಪ್ರಭಾವ ಬೀರುತ್ತದೆ.

ತಮ್ಮ ಸಾಕಿರದ ಸಹವರ್ತಿಗಳೊಂದಿಗೆ ಪರಸ್ಪರ ತಳಿಸೃಷ್ಟಿಯನ್ನು ಮಾಡಲು ಅವಕಾಶವಿರುವ ತೀರಪ್ರದೇಶದ ದೊಡ್ಡಿಗಳಿಂದ ಮೀನುಗಳು ತಪ್ಪಿಸಿಕೊಳ್ಳಬಲ್ಲದು; ಇದರಿಂದಾಗಿ ಸಾಕಿರದ ಆನುವಂಶಿಕ ಮೂಲಗಳ ಪ್ರಭಾವವು ಕುಗ್ಗುತ್ತದೆ.[೪೪] ತಪ್ಪಿಸಿಕೊಂಡ ಮೀನು, ಯಶಸ್ಸನ್ನು ಸಾಧಿಸುವ ಸ್ಥಳೀಯ ಜಾತಿಗಳನ್ನು ಮೀರಿಸಿ ಆಕ್ರಮಣಶೀಲವಾಗಿ ಮಾರ್ಪಡಬಲ್ಲದು.[೪೫]

ತೀರಪ್ರದೇಶದ ಪರಿಸರ ವ್ಯವಸ್ಥೆಗಳು

[ಬದಲಾಯಿಸಿ]

ಜಲಚರ ಸಾಕಣೆಯು ತೀರಪ್ರದೇಶದ ಪರಿಸರ ವ್ಯವಸ್ಥೆಗಳಿಗೆ ಗಮನಾರ್ಹ ಅಪಾಯವಾಗಿ ಮಾರ್ಪಡುತ್ತಿದೆ. ಸೀಗಡಿ ಸಾಕಣೆಯ ಭಾಗಶಃ ಕಾರಣದಿಂದಾಗಿ ಸುಮಾರು 20 ಪ್ರತಿಶತ ಭಾಗದಷ್ಟು ಮ್ಯಾಂಗ್ರೋವ್‌ ಮರದ ಕಾಡುಗಳು 1980 ರಿಂದಲೂ ನಾಶವಾಗುತ್ತಾ ಬಂದಿವೆ.[೪೬] ಉಪ್ಪಾದ ಇಂಚಾಕ ಕೊಳಗಳಾಗಿ ಮ್ಯಾಂಗ್ರೋವ್‌ ಮರಗಳ ದೊಡ್ಡ ಪ್ರಮಾಣದ ಪರಿವರ್ತನೆಗಳು, "ಕಡಿದು ಸುಡುವ" ಕೃಷಿಯ ಸಮುದ್ರ-ಸಮಾನ ವಿಧಾನವೆಂದು ನಿರೂಪಿಸಲ್ಪಟ್ಟಿವೆ.[೪೭] ಮ್ಯಾಂಗ್ರೋವ್‌ ಮರದ ಪರಿಸರ ವ್ಯವಸ್ಥೆಗಳ ಮೇಲೆ ನಿರ್ಮಾಣಗೊಂಡ ಇಂಚಾಕ ಜಲಚರ ಸಾಕಣೆಯ ಒಟ್ಟು ಆರ್ಥಿಕ ಮೌಲ್ಯದ ವಿಸ್ತರಿತ ವೆಚ್ಚ–ಪ್ರಯೋಜನ ವಿಶ್ಲೇಷಣೆಯು ಕಂಡುಕೊಂಡಿರುವ ಪ್ರಕಾರ, ಬಾಹ್ಯ ಪ್ರಯೋಜನಗಳಿಗಿಂತಲೂ ಬಾಹ್ಯ ವೆಚ್ಚಗಳು ಸಾಕಷ್ಟು ಹೆಚ್ಚಿನ ಮಟ್ಟದಲ್ಲಿದ್ದವು.[೪೮] ಕಳೆದ ನಾಲ್ಕು ದಶಕಗಳಿಂದಲೂ ....269,000 hectares (660,000 acres) ನಷ್ಟು ಇಂಡೋನೇಷ್ಯಾದ ಮ್ಯಾಂಗ್ರೋವ್‌ ಮರಗಳು ಸೀಗಡಿ ಸಾಕಣೆ ಕೇಂದ್ರಗಳಾಗಿ ಪರಿವರ್ತನೆಯಾಗಿವೆ. ಜೀವಾಣುವಿಷದ ರೂಪುಗೊಳ್ಳುವಿಕೆ ಮತ್ತು ಪೌಷ್ಟಿಕ ದ್ರವ್ಯದ ನಷ್ಟದ ಕಾರಣದಿಂದಾಗಿ, ಇವುಗಳ ಪೈಕಿ ಬಹಳಷ್ಟು ಸಾಕಣೆ ಕೇಂದ್ರಗಳನ್ನು ಒಂದೇ ದಶಕದೊಳಗೆ ತ್ಯಜಿಸಲಾಗಿದೆ.[೪೯][೫೦]

ವಿಶಿಷ್ಟವೆನಿಸುವಂತೆ, ಸಾಲ್ಮನ್‌ ಸಾಕಣೆ ಕೇಂದ್ರಗಳು ಮಲಿನವಾಗಿಲ್ಲದ ತೀರಪ್ರದೇಶದ ಪರಿಸರ ವ್ಯವಸ್ಥೆಗಳಲ್ಲಿ ನೆಲೆಗೊಂಡಿದ್ದು, ನಂತರದಲ್ಲಿ ಅವು ಆ ತಾಣಗಳನ್ನು ಮಲಿನಗೊಳಿಸುತ್ತವೆ. 200,000 ಸಾಲ್ಮನ್‌ಗಳನ್ನು ಹೊಂದಿರುವ ಒಂದು ಸಾಕಣೆ ಕೇಂದ್ರವು, 60,000 ಜನರನ್ನು ಹೊಂದಿರುವ ಒಂದು ನಗರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಿಕ್ಕೆಯ ತ್ಯಾಜ್ಯವನ್ನು ಹೊರಹಾಕುತ್ತದೆ. ಈ ತ್ಯಾಜ್ಯವನ್ನು ಸಂಸ್ಕರಿಸದೆ ಸುತ್ತಮುತ್ತಲಿನ ಜಲವಾಸಿ ಪರಿಸರದೊಳಕ್ಕೆ ನೇರವಾಗಿ ಹೊರಹಾಕಲಾಗುತ್ತದೆ; ಅನೇಕವೇಳೆ ಇದು ಪ್ರತಿಜೀವಕಗಳು ಮತ್ತು ಕೀಟನಾಶಕಗಳನ್ನು ಒಳಗೊಂಡಿರುತ್ತದೆ."[೪೩] ಸಾಲ್ಮನ್‌ ಸಾಕಣೆ ಕೇಂದ್ರಗಳಿಗೆ ಸಮೀಪದಲ್ಲಿರುವ ಜಲತಳ ಜೀವಿಗಳ (ಸಮುದ್ರತಳ) ಮೇಲೆ ಭಾರದ ಲೋಹಗಳ, ಅದರಲ್ಲೂ ನಿರ್ದಿಷ್ಟವಾಗಿ ತಾಮ್ರ ಮತ್ತು ಸತುವು ಲೋಹಗಳ ಶೇಖರಣೆಯು ಕಂಡುಬರುತ್ತದೆ.[೫೧]

ತಳಿ ಮಾರ್ಪಾಡು

[ಬದಲಾಯಿಸಿ]

ವೇಗದ ಬೆಳವಣಿಗೆಗೆ ಸಂಬಂಧಿಸಿದಂತೆ ಸಾಲ್ಮನ್‌ಗಳನ್ನು ತಳೀಯವಾಗಿ ಮಾರ್ಪಡಿಸಲಾಗಿದೆಯಾದರೂ, ಪ್ರತಿರೋಧವನ್ನು ಎದುರಿಸಬೇಕಾದ ಕಾರಣದಿಂದಾಗಿ ವಾಣಿಜ್ಯ ಬಳಕೆಗೆ ಸಂಬಂಧಿಸಿದಂತೆ ಅವು ಮಾನ್ಯತೆಯನ್ನು ಪಡೆದಿಲ್ಲ.[೫೨] ಪ್ರಯೋಗಾಲಯದ ಸಜ್ಜಿಕೆಯೊಂದರಲ್ಲಿನ ಅಧ್ಯಯನವೊಂದು ಕಂಡುಕೊಂಡಿರುವ ಪ್ರಕಾರ, ಸಾಕಿರದ ತಮ್ಮ ಸಂಬಂಧಿಗಳೊಂದಿಗೆ ಬೆರಕೆ ಮಾಡಲ್ಪಟ್ಟ ಮಾರ್ಪಾಡುಗೊಂಡ ಸಾಲ್ಮನ್‌ಗಳು ಪೈಪೋಟಿ ನಡೆಸುವಲ್ಲಿ ಆಕ್ರಮಣಶೀಲವಾಗಿದ್ದರೂ, ಅಂತಿಮವಾಗಿ ವಿಫಲಗೊಂಡವು.[೫೩]

ನಿರೀಕ್ಷೆಗಳು

[ಬದಲಾಯಿಸಿ]

ನದೀಮುಖಗಳಂಥ ಬೆಲೆಬಾಳುವ ಆವಾಸಸ್ಥಾನಗಳು ವಿಷಮಸ್ಥಿತಿಯಲ್ಲಿ ಇರುವುದರಿಂದ, ಜಾಗತಿಕ ಮಟ್ಟದ ವನ್ಯ ಮೀನುಗಳ ಹಿಡಿಯುವಿಕೆಗಳು ಕುಸಿತವನ್ನು ಕಾಣುತ್ತಿವೆ.[೫೪] ಸಾಲ್ಮನ್‌‌‌ನಂಥ ಮೀನು ತಿನ್ನುವ ಮೀನಿನ ಜಲಚರ ಸಾಕಣೆಯು ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ನೆರವಾಗುವುದಿಲ್ಲ, ಏಕೆಂದರೆ ಮೀನು ಹಿಟ್ಟು ಅಥವಾ ಮೀನು ಎಣ್ಣೆಯಂಥ, ಇತರ ಮೀನುಗಳಿಂದ ಬರುವ ಉತ್ಪನ್ನಗಳನ್ನು ಅವು ತಿನ್ನಬೇಕಾಗಿ ಬರುತ್ತದೆ. ಅಧ್ಯಯನಗಳು ತೋರಿಸಿರುವ ಪ್ರಕಾರ, ಸಾಲ್ಮನ್‌ ಸಾಕಣೆಯು ಸಾಕಿರದ ಸಾಲ್ಮನ್‌ಗಳ ಮೇಲೆ ಪ್ರಮುಖವಾದ ಋಣಾತ್ಮಕ ಪ್ರಭಾವಗಳನ್ನು ಹೊಂದಿದೆ; ಅಷ್ಟೇ ಅಲ್ಲ, ಸಾಲ್ಮನ್‌ಗಳನ್ನು ಪೋಷಿಸಲು ಅಗತ್ಯವಾಗಿ ಹಿಡಿಯಬೇಕಿರುವ ಮೇವು ಮೀನುಗಳ ಮೇಲೂ ಅದು ಋಣಾತ್ಮಕ ಪ್ರಭಾವಗಳನ್ನು ಹೊಂದಿದೆ.[೫೫][೫೬] ಆಹಾರ ಸರಪಳಿಯ ಮೇಲೆ ಉನ್ನತ ಸ್ಥಾನದಲ್ಲಿರುವ ಮೀನುಗಳು ಆಹಾರ ಶಕ್ತಿಯ ಕಡಿಮೆ ಪರಿಣಾಮಕಾರಿ ಮೂಲಗಳಾಗಿವೆ.

ಮೀನು ಹಾಗೂ ಇಂಚಾಕಗಳನ್ನು ಹೊರತುಪಡಿಸಿ, ಕಡಲಕಳೆ ಮತ್ತು ಸಿಂಪಿಗಳು, ಮಳಿ ಮೃದ್ವಂಗಿಗಳು, ಶಂಬೂಕಗಳು ಮತ್ತು ಸ್ಕ್ಯಾಲಪ್‍ಗಳಂಥ ಸೋಸುಕದಿಂದ-ಪೋಷಿಸಲ್ಪಡುವ ಎರಡು ಚಿಪ್ಪುಗಳ ಮೃದ್ವಂಗಿಗಳಂಥ ಕೆಲವೊಂದು ಜಲಚರ ಸಾಕಣೆ ಕಾರ್ಯಗಳು ತುಲನಾತ್ಮಕವಾಗಿ ಹಾನಿಕರವಲ್ಲದ್ದಾಗಿವೆ ಮತ್ತು ಪರಿಸರೀಯವಾಗಿಯೂ ಪುನಶ್ಚೈತನ್ಯಕಾರಿಯಾಗಿವೆ.[೧೫] ಸೋಸುಕ-ಪೋಷಕಗಳು ಮಾಲಿನ್ಯಕಾರಕಗಳನ್ನಷ್ಟೇ ಅಲ್ಲದೇ ನೀರಿನಿಂದ ಬರುವ ಪೌಷ್ಟಿಕ ದ್ರವ್ಯಗಳನ್ನು ಸೋಸುತ್ತವೆಯಾದ್ದರಿಂದ ನೀರಿನ ಗುಣಮಟ್ಟವು ಸುಧಾರಿಸುತ್ತವೆ.[೫೭] ಅಕಾರ್ಬನಿಕ ಸಾರಜನಕ ಮತ್ತು ರಂಜಕದಂಥ ಪೌಷ್ಟಿಕ ದ್ರವ್ಯಗಳನ್ನು ಕಡಲಕಳೆಗಳು ನೀರಿನಿಂದ[೨೭] ನೇರವಾಗಿ ತೆಗೆಯುತ್ತವೆ ಮತ್ತು ಸೋಸುಕದಿಂದ-ಪೋಷಿಸಲ್ಪಡುವ ಮೃದ್ವಂಗಿಗಳು ತೇಲುಸಸ್ಯ ಮತ್ತು ಅವಶೇಷದಂಥ ಪೃಥಕ್ಕಣ ದ್ರವ್ಯಗಳನ್ನು ಸೇವಿಸುತ್ತವೆಯಾದ್ದರಿಂದ, ಅವು ಪೌಷ್ಟಿಕ ದ್ರವ್ಯಗಳ ಸಾರವನ್ನು ತೆಗೆಯಬಲ್ಲವಾಗಿರುತ್ತವೆ.[೫೮]

ಜಲಚರ ಸಾಕಣೆಗೆ ಸಂಬಂಧಿಸಿದ ಕೆಲವೊಂದು ಲಾಭದಾಯಕ ಸಹಕಾರ ಸಂಸ್ಥೆಗಳು ಸಮರ್ಥನೀಯ ಪರಿಪಾಠಗಳನ್ನು ಉತ್ತೇಜಿಸುತ್ತವೆ.[೫೯] ಮೀನಿನ ಒತ್ತಡವನ್ನು ಕನಿಷ್ಠಗೊಳಿಸುವುದು, ಬಲೆಯ ದೊಡ್ಡಿಗಳ ಕಳೆತೆಗೆಯಲು ಪಾಡುಬಿಡುವುದು, ಮತ್ತು ಸಂಯೋಜಿಸಲ್ಪಟ್ಟ ಕೀಟ ನಿರ್ವಹಣೆಯನ್ನು ಅನ್ವಯಿಸುವುದರ ಮೂಲಕ, ಹೊಸ ವಿಧಾನಗಳು ಜೈವಿಕ ಹಾಗೂ ರಾಸಾಯನಿಕ ಮಾಲಿನ್ಯದ ಅಪಾಯವನ್ನು ತಗ್ಗಿಸುತ್ತವೆ. ಕಾಯಿಲೆ ನಿಯಂತ್ರಣಕ್ಕೆ ಸಂಬಂಧಿಸಿದಂತಿರುವ ಪ್ರತಿಜೀವಕದ ಬಳಕೆಯನ್ನು ತಗ್ಗಿಸಲು ಹೆಚ್ಚು ಹೆಚ್ಚು ಲಸಿಕೆಗಳನ್ನು ಬಳಸಲಾಗುತ್ತಿದೆ.[೬೦]

ತೀರದಲ್ಲಿರುವ ಮರುಪ್ರಸರಣಗೊಳ್ಳುವ ಜಲಚರ ಸಾಕಣೆ ವ್ಯವಸ್ಥೆಗಳು, ಬಹುಕೃಷಿ ಕೌಶಲಗಳನ್ನು ಬಳಸಿಕೊಳ್ಳುತ್ತಿರುವ ಸೌಕರ್ಯಗಳು, ಮತ್ತು ಸೂಕ್ತವಾಗಿ-ನೆಲೆ ಕಲ್ಪಿಸಲಾದ ಸೌಲಭ್ಯಗಳು (ಉದಾಹರಣೆಗೆ, ಪ್ರಬಲವಾದ ಹರಿವುಗಳಿರುವ ಕಡಲತೀರದಾಚೆಯ ಪ್ರದೇಶಗಳು) ಋಣಾತ್ಮಕ ಪರಿಸರೀಯ ಪ್ರಭಾವಗಳನ್ನು ನಿರ್ವಹಿಸುವಲ್ಲಿನ ವಿಧಾನಗಳ ಉದಾಹರಣೆಗಳಾಗಿವೆ.

ಟಿಪ್ಪಣಿಗಳು

[ಬದಲಾಯಿಸಿ]
  1. "ಎನ್ವಿರಾನ್ಮೆಂಟಲ್‌ ಇಂಪ್ಯಾಕ್ಟ್‌ ಆಫ್‌ ಆಕ್ವಾಕಲ್ಚರ್‌‌". Archived from the original on 2004-08-20. Retrieved 2010-06-24.
  2. ಆಕ್ವಾಕಲ್ಚರ್'ಸ್‌ ಗ್ರೋತ್‌ ಕಂಟಿನ್ಯೂಯಿಂಗ್‌: ಇಂಪ್ರೂವ್ಡ್‌ ಮ್ಯಾನೇಜ್‌ಮೆಂಟ್‌ ಟೆಕ್ನಿಕ್ಸ್‌ ಕೆನ್‌ ರೆಡ್ಯೂಸ್‌ ಎನ್ವಿರಾನ್ಮೆಂಟಲ್‌ ಎಫೆಕ್ಟ್ಸ್‌ ಆಫ್‌ ದಿ ಪ್ರಾಕ್ಟೀಸ್‌.(UPDATE).” ಸಂಪನ್ಮೂಲ: ಎಂಜಿನಿಯರಿಂಗ್‌ & ಟೆಕ್ನಾಲಜಿ ಫಾರ್‌ ಎ ಸಸ್ಟೇನಬಲ್‌ ವರ್ಲ್ಡ್‌ 16.5 (2009): 20-22. ಗೇಲ್‌ ಎಕ್ಸ್‌ಪ್ಯಾಂಡೆಡ್‌ ಅಕಾಡೆಮಿಕ್‌ ASAP. ವೆಬ್‌. 1 ಅಕ್ಟೋಬರ್‌‌ 2009. <http://find.galegroup.com/‌gtx/‌start.do?prodId=EAIM[ಶಾಶ್ವತವಾಗಿ ಮಡಿದ ಕೊಂಡಿ].>.
  3. ಅಮೆರಿಕನ್‌ ಹೆರಿಟೇಜ್‌ ಡೆಫನಿಷನ್‌ ಫಾರ್‌ ಆಕ್ವಾಕಲ್ಚರ್‌‌
  4. ಹಾಫ್‌ ಆಫ್‌ ಫಿಶ್‌ ಕನ್ಸ್ಯೂಮ್ಡ್‌ ಗ್ಲೋಬಲಿ ಈಸ್‌ ನೌ ರೈಸ್ಡ್‌ ಆನ್‌ ಫಾರ್ಮ್ಸ್‌, ಸ್ಟಡಿ ಫೈಂಡ್ಸ್‌ ಸೈನ್ಸ್‌‌ ಡೈಲಿ , ಸೆಪ್ಟೆಂಬರ್‌‌ 8, 2009.
  5. ಅಬೋರಿಗಿನ್ಸ್‌ ಮೆ ಹ್ಯಾವ್‌ ಫಾರ್ಮ್‌ಡ್‌ ಈಲ್ಸ್‌, ಬಿಲ್ಟ್‌ ಹಟ್ಸ್‌ ABC ಸೈನ್ಸ್‌‌ ನ್ಯೂಸ್‌, 13 ಮಾರ್ಚ್‌ 2003.
  6. ಲೇಕ್‌ ಕೊಂಡಾಹ್‌ ಸಸ್ಟೇನಬಿಲಿಟಿ ಪ್ರಾಜೆಕ್ಟ್‌ Archived 2013-01-03 at Archive.is 2010ರ ಫೆಬ್ರುವರಿ 18ರಂದು ಮರು ಸಂಪಾದಿಸಲಾಯಿತು.
  7. "History of Aquaculture". Food and Agriculture Organization, United Nations. Retrieved August 23, 2009.
  8. "The Harbor and Fishery Remains at Cosa, Italy, by Anna Marguerite McCann". Journal of Field Archaeology 6(4):291-311. Retrieved 10 September 2009.
  9. ಝಿಂಗ್ರಾನ್‌, V.G., ಇಂಟ್ರಡಕ್ಷನ್‌ ಟು ಆಕ್ವಾಕಲ್ಚರ್‌‌. 1987, ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ, ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ, ನೈಜೀರಿಯನ್‌ ಇನ್‌‌ಸ್ಟಿಟ್ಯೂಟ್‌ ಫಾರ್‌ ಓಷನೋಗ್ರಫಿ ಅಂಡ್‌ ಮೆರೈನ್‌ ರಿಸರ್ಚ್‌.
  10. ಮಿಲ್ನರ್‌‌, ಜೇಮ್ಸ್‌‌ W. (1874). "ದಿ ಪ್ರೋಗ್ರೆಸ್‌ ಆಫ್‌ ಫಿಶ್‌-ಕಲ್ಚರ್‌ ಇನ್‌ ದಿ ಯುನೈಟೆಡ್‌ ಸ್ಟೇಟ್ಸ್‌". 1872 ಮತ್ತು 1873ಕ್ಕೆ ಸಂಬಂಧಿಸಿದ, ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಮೀನು ಮತ್ತು ಮೀನುಗಾರಿಕಾ ಕೇಂದ್ರಗಳ ಆಯೋಗದ ಆಯುಕ್ತರ ವರದಿ. 535 – 544 <http://penbay.org/cof/cof_1872_1873.html>
  11. ಪೀಟರ್‌ ನ್ಯೂಷಲ್‌, ಸೀವೀಡ್‌ ಫಾರ್‌ ವಾರ್‌: ಕ್ಯಾಲಿಫೋರ್ನಿಯಾ'ಸ್‌ ವರ್ಲ್ಡ್‌ ವಾರ್‌ I ಕೆಲ್ಪ್‌ ಇಂಡಸ್ಟ್ರಿ, ಟೆಕ್ನಾಲಜಿ ಅಂಡ್‌ ಕಲ್ಚರ್‌ 30 (ಜುಲೈ 1989), 561-583.
  12. http://www.sciencemag.org/cgi/content/full/sci;316/5823/382
  13. Guns, Germs, and Steel. New York, New York: W.W. Norton & Company, Inc. 2005. ISBN 978-0-393-06131-4.
  14. "'FAO: 'ಫಿಶ್‌ ಫಾರ್ಮಿಂಗ್‌ ಈಸ್‌ ದಿ ವೇ ಫಾರ್ವರ್ಡ್‌.'(ಬಿಗ್‌ ಪಿಕ್ಚರ್‌‌)(ಫುಡ್‌ ಅಂಡ್‌ ಅಗ್ರಿಕಲ್ಚರ್‌ ಅಡ್ಮಿನಿಸ್ಟರೇಷನ್‌'ಸ್‌ 'ಸ್ಟೇಟ್‌ ಆಫ್‌ ಫಿಶರೀಸ್‌ ಅಂಡ್‌ ಆಕ್ವಾಕಲ್ಚರ್‌' ರಿಪೋರ್ಟ್‌)." ದಿ ಇಕಾಲಜಿಸ್ಟ್‌ 39.4 (2009): 8-9. ಗೇಲ್‌ ಎಕ್ಸ್‌ಪ್ಯಾಂಡೆಡ್‌ ಅಕಡೆಮಿಕ್‌ ASAP. ವೆಬ್‌. 1 ಅಕ್ಟೋಬರ್‌‌ 2009. <http://find.galegroup.com/gtx/start.do?prodId=EAIM.>.
  15. ೧೫.೦ ೧೫.೧ "ದಿ ಕೇಸ್‌ ಫಾರ್‌ ಫಿಶ್‌ ಅಂಡ್‌ ಆಯಿಸ್ಟರ್‌ ಫಾರ್ಮಿಂಗ್‌ Archived 2009-05-12 ವೇಬ್ಯಾಕ್ ಮೆಷಿನ್ ನಲ್ಲಿ.," ಕಾರ್ಲ್‌ ಮಾರ್ಜಿಯಾಲಿ, ಯೂನಿವರ್ಸಿಟಿ ಆಫ್‌ ಸದರ್ನ್‌ ಕ್ಯಾಲಿಫೋರ್ನಿಯಾ, ಟ್ರೋಜನ್‌ ಫ್ಯಾಮಿಲಿ ಮ್ಯಾಗಝೀನ್‌, ಮೇ 17, 2009.
  16. ೧೬.೦ ೧೬.೧ ೧೬.೨ ೧೬.೩ ೧೬.೪ FAO (2006) ದಿ ಸ್ಟೇಟ್‌ ಆಫ್‌ ವರ್ಲ್ಡ್‌ ಫಿಶರೀಸ್‌ ಅಂಡ್‌ ಆಕ್ವಾಕಲ್ಚರ್‌ (SOPHIA) Archived 2008-04-12 ವೇಬ್ಯಾಕ್ ಮೆಷಿನ್ ನಲ್ಲಿ.
  17. ವೈರ್ಡ್‌ 12.05: ದಿ ಬ್ಲ್ಯೂವಾಟರ್‌ ರೆವಲ್ಯೂಷನ್‌
  18. washingtonpost.com: ಫಿಶ್‌ ಫಾರ್ಮಿಂಗ್‌‌'ಸ್‌ ಬೌಂಟಿ ಈಸ್‌ ನಾಟ್‌ ವಿಥೌಟ್‌ ಬಾರ್ಬ್ಸ್‌
  19. "ಆರ್ಕೈವ್ ನಕಲು". Archived from the original on 2004-08-20. Retrieved 2010-06-24.
  20. ದಿ ಸ್ಟೇಟ್‌ ಆಫ್‌ ವರ್ಲ್ಡ್‌ ಫಿಶರೀಸ್‌ ಅಂಡ್‌ ಆಕ್ವಾಕಲ್ಚರ್‌ (SOFIA) 2004
  21. ‌ವಾಟ್ಸನ್, ರೆಗ್‌ ಮತ್ತು ಪಾಲಿ, ಡೇನಿಯೆಲ್‌ (2001) ಸಿಸ್ಟಮ್ಯಾಟಿಕ್‌ ಡಿಸ್ಟಾರ್ಷನ್ಸ್‌ ಇನ್‌ ವರ್ಲ್ಡ್‌ ಫಿಶರೀಸ್‌ ಕ್ಯಾಚ್‌ ಟ್ರೆಂಡ್ಸ್‌ Archived 2010-05-31 ವೇಬ್ಯಾಕ್ ಮೆಷಿನ್ ನಲ್ಲಿ. ನೇಚರ್‌‌ ಗೆ ಬರೆದ ಪತ್ರ, 414: 534.
  22. ಪಿಯರ್‌‌ಸನ್‌, ಹೆಲೆನ್‌ (2001) ಚೈನಾ ಕಾಟ್‌ ಔಟ್‌ ಆಸ್‌ ಮಾಡೆಲ್‌ ಷೋಸ್‌ ನೆಟ್‌ ಫಾಲ್‌ ಇನ್‌ ಫಿಶ್‌ ನೇಚರ್‌‌ 414, 477. doi 10.1038/35107216
  23. ಹೆಲಿಪ್ರಿನ್‌, ಜಾನ್‌ (2001) ಚೈನೀಸ್‌ ಮಿಸ್‌ರಿಪೋರ್ಟಿಂಗ್‌ ಮಾಸ್ಕ್ಸ್‌ ಡ್ರಮಾಟಿಕ್‌ ಡಿಕ್ಲೈನ್‌ ಇನ್‌ ಓಷನ್‌ ಫಿಶ್‌ ಕ್ಯಾಚಸ್‌ ಅಸೋಸಿಯೇಟೆಡ್‌ ಪ್ರೆಸ್‌ , 29 ನವೆಂಬರ್‌ 2001.
  24. ರೆವಿಲ್ಲೆ, ವಿಲಿಯಂ (2002) ಸಮ್‌ಥಿಂಗ್‌ ಫಿಶಿ ಎಬೌಟ್‌ ದಿ ಫಿಗರ್ಸ್‌ ದಿ ಐರಿಶ್‌ ಟೈಮ್ಸ್‌ , 14 ಮಾರ್ಚ್‌ 2002
  25. ಚೈನಾ ಡಿಸ್ಪ್ಯೂಟ್ಸ್‌ ಕ್ಲೇಮ್‌ ಇಟ್‌ ಓವರ್‌ ರಿಪೋರ್ಟ್ಸ್‌ ಫಿಶ್‌ ಕ್ಯಾಚ್‌ ಅಸೋಸಿಯೇಟ್‌ ಪ್ರೆಸ್‌ , 17 ಡಿಸೆಂಬರ್‌‌ 2002.
  26. FAO (2006) ದಿ ಸ್ಟೇಟ್‌ ಆಫ್‌ ವರ್ಲ್ಡ್‌ ಫಿಶರೀಸ್‌ ಅಂಡ್‌ ಆಕ್ವಾಕಲ್ಚರ್‌‌ (SOPHIA) Archived 2013-05-18 at Archive-It, ಪುಟ 5.
  27. ೨೭.೦ ೨೭.೧ ‌ಚಾಪಿನ್ T, ಬುಚ್‌ಮನ್‌ AH, ಹಾಲಿಂಗ್‌‌ C, ಟ್ರೋಯೆಲ್‌ M, ಕೌಟ್ಸ್‌ಕಿ N, ನಿಯೋರಿ A, ಕ್ರೇಮರ್‌‌ GP, ಝೆರ್‌ಟುಷೆ-ಗೊನ್‌ಜಾಲೆಜ್‌ JA, ಯಾರಿಶ್‌‌ C and ನೀಫಸ್‌ C. 2001. ಇಂಟಿಗ್ರೇಟಿಂಗ್‌ ಸೀವೀಡ್ಸ್‌ ಇನ್‌ಟು ಮೆರೈನ್‌ ಆಕ್ವಾಕಲ್ಚರ್‌ ಸಿಸ್ಟಮ್ಸ್‌: ಎ ಕೀ ಟುವರ್ಡ್‌ ಸಸ್ಟೇನಬಿಲಿಟಿ. ಜರ್ನಲ್‌ ಆಫ್‌ ಫೈಕಾಲಜಿ 37: 975-986. ಉಲ್ಲೇಖ ದೋಷ: Invalid <ref> tag; name "Chopin et al. 2001" defined multiple times with different content
  28. ೨೮.೦ ೨೮.೧ ಚಾಪಿನ್‌ T. 2006. ಇಂಟಿಗ್ರೇಟೆಡ್‌ ಮಲ್ಟಿ-ಟ್ರೋಫಿಕ್‌ ಆಕ್ವಾಕಲ್ಚರ್‌. ವಾಟ್‌ ಇಟ್‌ ಈಸ್‌, ಅಂಡ್‌ ವೈ ಯು ಷುಡ್‌ ಕೇರ್‌... ಅಂಡ್‌ ಡೋಂಟ್‌ ಕನ್‌ಫ್ಯೂಸ್‌ ಇಟ್‌ ವಿತ್‌ ಪಾಲಿಕಲ್ಚರ್‌. ನಾರ್ದರ್ನ್‌ ಆಕ್ವಾಕಲ್ಚರ್‌‌, ಸಂಪುಟ 12, ಸಂಖ್ಯೆ 4, ಜುಲೈ/ಆಗಸ್ಟ್‌‌ 2006, ಪುಟ 4.
  29. ೨೯.೦ ೨೯.೧ ನಿಯೋರಿ A, ಚಾಪಿನ್‌ T, ಟ್ರೋಯೆಲ್‌ M, ಬುಚ್‌ಮನ್‌ AH, ಕ್ರೇಮರ್‌‌ GP, ಹಾಲಿಂಗ್‌‌ C, ಶ್ಪೈಗೆಲ್‌ M ಮತ್ತು ಯಾರಿಶ್‌‌ C. 2004. ಇಂಟಿಗ್ರೇಟೆಡ್‌ ಆಕ್ವಾಕಲ್ಚರ್‌‌: ರ್ಯಾಷನೇಲ್‌, ಎವಲ್ಯೂಷನ್‌ ಅಂಡ್‌ ಸ್ಟೇಟ್‌ ಆಫ್‌ ದಿ ಆರ್ಟ್‌ ಎಂಫಸೈಝಿಂಗ್‌ ಸೀವೀಡ್‌ ಬಯೋಫಿಲ್ಟರೇಷನ್‌ ಇನ್‌ ಮಾಡರ್ನ್‌ ಮೆರಿಕಲ್ಚರ್‌. ಆಕ್ವಾಕಲ್ಚರ್‌‌ 231: 361-391.
  30. McAvoy, Audrey (October 24, 2009). "Hawaii regulators approve first US tuna farm". The Associated Press. Retrieved April 9, 2010. {{cite web}}: Italic or bold markup not allowed in: |publisher= (help)
  31. ವೋಲ್ಪ್‌, J. (2005) "ಡಾಲರ್ಸ್‌ ವಿಥೌಟ್‌ ಸೆನ್ಸ್‌: ದಿ ಬೇಟ್‌ ಫಾರ್‌ ಬಿಗ್‌-ಮನಿ ಟ್ಯೂನಾ ರ್ಯಾಂಚಿಂಗ್‌ ಅರೌಂಡ್‌ ದಿ ವರ್ಲ್ಡ್‌". ಬಯೋಸೈನ್ಸ್‌‌ , 55 :301–302.
  32. ದಿ ಟಾಪ್‌ 10 ಎವೆರಿಥಿಂಗ್‌ ಆಫ್‌ 2009: ಟಾಪ್‌ 10 ಸೈಂಟಿಫಿಕ್‌ ಡಿಸ್ಕವರೀಸ್‌: 5. Archived 2013-08-26 ವೇಬ್ಯಾಕ್ ಮೆಷಿನ್ ನಲ್ಲಿ.ಬ್ರೀಡಿಂಗ್‌ ಟ್ಯೂನಾ ಆನ್‌ ಲ್ಯಾಂಡ್‌ Archived 2013-08-26 ವೇಬ್ಯಾಕ್ ಮೆಷಿನ್ ನಲ್ಲಿ., ಟೈಮ್‌ ಮ್ಯಾಗಝೀನ್‌, ಡಿಸೆಂಬರ್‌‌ 8, 2009
  33. "Abalone Farming Information". Archived from the original on 2007-11-13. Retrieved 2007-11-08.
  34. "Abalone Farming on a Boat". Retrieved 2007-01-27.
  35. ನ್ಯೂ, M. B.: ಫಾರ್ಮಿಂಗ್‌ ಫ್ರೆಶ್‌ವಾಟರ್‌ ಪ್ರಾನ್ಸ್‌ ; FAO ಫಿಶರೀಸ್‌ ಟೆಕ್ನಿಕಲ್‌ ಪೇಪರ್‌‌ 428, 2002. ISSN 0429-9345.
  36. ಸಿಹಿನೀರಿನ ಕಠಿಣಚರ್ಮಿಗಳಿಗೆ ಸಂಬಂಧಿಸಿದಂತೆ FAO ಫಿಶರೀಸ್‌ ಗ್ಲೋಬಲ್‌ ಆಕ್ವಾಕಲ್ಚರ್‌ ಪ್ರೊಡಕ್ಷನ್‌ ಡೇಟಾಬೇಸ್‌‌‌ Archived 2005-09-27 ವೇಬ್ಯಾಕ್ ಮೆಷಿನ್ ನಲ್ಲಿ. ನಿಂದ ಪಡೆಯಲಾದ ದತ್ತಾಂಶ. ತೀರಾ ಇತ್ತೀಚಿನ ದತ್ತಾಂಶ ಜೋಡಿಗಳು 2003ಕ್ಕೆ ಸಂಬಂಧಿಸಿವೆ ಮತ್ತು ಕೆಲವೊಮ್ಮೆ ಅಂದಾಜುಗಳನ್ನು ಅವು ಒಳಗೊಂಡಿರುತ್ತವೆ. 2005ರ ಜೂನ್‌ 28ರಂದು ಮರುಸಂಪಾದಿಸಲಾಯಿತು.
  37. Ess, Charlie. "Wild product's versatility could push price beyond $2 for Alaska dive fleet". National Fisherman. Archived from the original on 2009-01-22. Retrieved 2008-08-01.
  38. ಡೈಮಂಡ್‌, ಜೇರ್ಡ್‌. ಕೊಲ್ಯಾಪ್ಸ್‌: ಹೌ ಸೊಸೈಟೀಸ್‌ ಚೂಸ್‌ ಟು ಫೇಲ್‌ ಆರ್‌ ಸಕ್ಸೀಡ್‌. ವೈಕಿಂಗ್‌ ಪ್ರೆಸ್‌, 2005. ಪುಟಗಳು 479-485
  39. ಕೋಸ್ಟಾ-ಪಿಯರ್ಸ್‌, B.A., ಲೇಖಕ/ಸಂಪಾದಕ. 2002. ಇಕಲಾಜಿಕಲ್‌ ಆಕ್ವಾಕಲ್ಚರ್‌. ಬ್ಲ್ಯಾಕ್‌ವೆಲ್‌ ಸೈನ್ಸ್‌‌, ಆಕ್ಸ್‌‌ಫರ್ಡ್‌, UK.
  40. ‌‌ವೇಕ್‌ ಫಾರೆಸ್ಟ್‌ ಯೂನಿವರ್ಸಿಟಿ ಬ್ಯಾಪ್ಟಿಸ್ಟ್‌ ಮೆಡಿಕಲ್‌ ಸೆಂಟರ್ (2008, ಜುಲೈ 10). ಪಾಪ್ಯುಲರ್‌ ಫಿಶ್‌, ಟಿಲಾಪಿಯಾ, ಕಂಟೈನ್ಸ್‌ ಪೊಟೆನ್ಷಿಯಲಿ ಡೇಂಜರಸ್‌ ಫ್ಯಾಟಿ ಆಸಿಡ್‌ ಕಾಂಬಿನೇಷನ್‌ . ಸೈನ್ಸ್‌ಡೈಲಿ www.sciencedaily.com ನಿಂದ 2008ರ ಜುಲೈ 11ರಂದು ಮರುಸಂಪಾದಿಸಲಾಯಿತು
  41. ಎಸ್ಪೆ, M., A. ಲೆಮ್ಮೆ, A. ಪೆಟೀ, ಮತ್ತು A. ಎಲ್‌-ಮೊವಾಫಿ. 2006. ಕೆನ್‌ ಅಟ್ಲಾಂಟಿಕ್‌ ಸಾಲ್ಮನ್‌ (ಸಾಲ್ಮೋ ಸಾಲಾರ್‌‌ ) ಗ್ರೋ ಆನ್‌ ಡಯೆಟ್ಸ್‌ ಡಿವಾಯ್ಡ್‌ ಆಫ್‌ ಫೀಶ್‌ ಮೀಲ್‌? ಆಕ್ವಾಕಲ್ಚರ್‌‌ 255:255-262
  42. ಸ್ವಿಸ್‌ಸ್ವಿಸ್‌ WWF ಫ್ಯಾಕ್ಟ್‌ಷೀಟ್ Archived 2009-03-26 ವೇಬ್ಯಾಕ್ ಮೆಷಿನ್ ನಲ್ಲಿ., ಪುಟ 7, ಹೆಡಿಂಗ್‌ "ಫಿಶೆ ಅಂಡ್‌ ಮೀರೆಸ್‌ಫ್ರಕ್ಟೆ ಔಸ್‌ ಝುಕ್ಟೆನ್‌"
  43. ೪೩.೦ ೪೩.೧ ಸೀಫುಡ್ ಚಾಯ್ಸಸ್ ಅಲೈಯನ್ಸ್ (2005) ಇಟ್ಸ್ ಆಲ್ ಎಬೌಟ್ ಸಾಲ್ಮನ್‌ Archived 2015-09-24 ವೇಬ್ಯಾಕ್ ಮೆಷಿನ್ ನಲ್ಲಿ.
  44. "ಡೇವಿಡ್‌ ಸುಝುಕಿ ಫೌಂಡೇಷನ್‌: ಓಪನ್‌-ನೆಟ್‌-ಕೇಜ್‌ ಫಿಶ್‌ ಫಾರ್ಮಿಂಗ್‌". Archived from the original on 2016-05-15. Retrieved 2010-06-24.
  45. "'ಆಕ್ವಾಕಲ್ಚರ್‌‌'ಸ್‌ ಗ್ರೋತ್‌ ಕಂಟಿನ್ಯೂಯಿಂಗ್‌: ಇಂಪ್ರೂವ್ಡ್‌ ಮ್ಯಾನೇಜ್‌ಮೆಂಟ್‌ ಟೆಕ್ನಿಕ್ಸ್‌ ಕೆನ್‌ ರೆಡ್ಯೂಸ್‌ ಎನ್ವಿರಾನ್ಮೆಂಟಲ್‌ ಎಫೆಕ್ಟ್ಸ್‌ ಆಫ್‌ ದಿ ಪ್ರಾಕ್ಟಿಸ್‌.(UPDATE)." ಮೂಲ: ಎಂಜಿನಿಯರಿಂಗ್‌ & ಟೆಕ್ನಾಲಜಿ ಫಾರ್‌ ಎ ಸಸ್ಟೇನಬಲ್‌ ವರ್ಲ್ಡ್‌ 16.5 (2009): 20-22. ಗೇಲ್‌ ಎಕ್ಸ್‌ಪ್ಯಾಂಡೆಡ್‌ ಅಕಾಡೆಮಿಕ್‌ ASAP. ವೆಬ್‌. 1 ಅಕ್ಟೋಬರ್‌‌ 2009. <http://find.galegroup.com/gtx/start.do?prodId=EAIM.>.
  46. ಹೀರೋಸ್‌ ಆಫ್‌ ಎನ್ವಿರಾನ್ಮೆಂಟ್‌ 2008: ಜರ್ಗೆನ್ನೆ ಪ್ರೈಮಾವೆರಾ Archived 2013-08-26 ವೇಬ್ಯಾಕ್ ಮೆಷಿನ್ ನಲ್ಲಿ. ಟೈಮ್‌ ವಿಶೇಷ ವರದಿ. 2009ರ ಸೆಪ್ಟೆಂಬರ್‌ 24.
  47. ನಿಕರ್‌ಸನ್‌ DJ (1999) "ಟ್ರೇಡ್‌-ಆಫ್ಸ್‌ ಆಫ್‌ ಮ್ಯಾಂಗ್ರೂವ್‌ ಏರಿಯಾ ಡೆವಲಪ್‌ಮೆಂಟ್‌ ಇನ್‌ ದಿ ಫಿಲಿಪ್ಪೀನ್ಸ್‌"[ಶಾಶ್ವತವಾಗಿ ಮಡಿದ ಕೊಂಡಿ] ಇಕಾಲ್‌. ಇಕಾನ್‌. 28 (2):279-298.
  48. ಗುಣವರ್ಧನ1 M ಮತ್ತು ರೋವನ್‌ JS (2005) ಇಕನಾಮಿಕ್‌ ವ್ಯಾಲ್ಯುಯೇಷನ್‌ ಆಫ್‌ ಎ ಮ್ಯಾಂಗ್ರೂವ್‌ ಇಕೋಸಿಸ್ಟಮ್‌ ಥ್ರೆಟನ್ಡ್‌ ಬೈ ಶ್ರಿಂಪ್‌ ಆಕ್ವಾಕಲ್ಚರ್‌ ಇನ್‌ ಶ್ರೀಲಂಕಾ[ಶಾಶ್ವತವಾಗಿ ಮಡಿದ ಕೊಂಡಿ] ಜರ್ನಲ್‌ ಆಫ್‌ ಎನ್ವಿರಾನ್ಮೆಂಟಲ್‌ ಮ್ಯಾನೇಜ್‌ಮೆಂಟ್‌ , 36 (4)535-550.
  49. ಹಿನ್ರಿಕ್‌ಸೆನ್‌‌ D (1998) ಕೋಸ್ಟಲ್‌ ವಾಟರ್ಸ್‌ ಆಫ್‌ ದಿ ವರ್ಲ್ಡ್‌: ಟ್ರೆಂಡ್ಸ್‌, ಥ್ರೆಟ್ಸ್‌, ಅಂಡ್‌ ಸ್ಟ್ರಾಟಜೀಸ್‌ ಐಲೆಂಡ್‌ ಪ್ರೆಸ್‌. ISBN 1-55963-383-2
  50. ಮೀಟ್‌ ಅಂಡ್‌ ಫಿಶ್ Archived 2011-06-24 ವೇಬ್ಯಾಕ್ ಮೆಷಿನ್ ನಲ್ಲಿ. AAAS ಅಟ್ಲಾಸ್‌ ಆಫ್‌ ಪಾಪ್ಯುಲೇಶನ್‌ ಅಂಡ್‌ ಎನ್ವಿರಾನ್ಮೆಂಟ್‌. 2010ರ ಜನವರಿ 4ರಂದು ಮರುಸಂಪಾದಿಸಲಾಯಿತು.
  51. FAO: ಕಲ್ಚರ್ಡ್‌ ಅಕ್ವಾಟಿಕ್‌ ಸ್ಪೀಷೀಸ್‌ ಇನ್ಫರ್ಮೇಷನ್‌ ಪ್ರೋಗ್ರ್ಯಾಮ್‌: ಒಂಕೊರೈಂಕಸ್‌ ಕಿಸುಟ್ಚ್‌ (ವಾಲ್‌ಬೌಮ್‌, 1792) ರೋಮ್‌. 2009ರ ಮೇ 8ರಂದು ಮರು ಸಂಪಾದಿಸಲಾಯಿತು.
  52. ಮೆಕ್‌ಲಿಯೋಡ್‌ C, J ಗ್ರೈಸ್‌, H ಕ್ಯಾಂಪ್‌ಬೆಲ್‌‌ ಮತ್ತು T ಹರ್ಲೆತ್‌‌ (2006) ಸೂಪರ್‌ ಸೂಪರ್‌ ಸಾಲ್ಮನ್‌: ದಿ ಇಂಡಸ್ಟ್ರಿಯಲೈಸೇಷನ್‌ ಆಫ್‌ ಫಿಶ್‌ ಫಾರ್ಮಿಂಗ್‌ ಅಂಡ್‌ ದಿ ಡ್ರೈವ್‌ ಟುವರ್ಡ್ಸ್‌ GM ಟೆಕ್ನಾಲಜೀಸ್‌ ಇನ್‌ ಸಾಲ್ಮನ್‌ ಪ್ರೊಡಕ್ಷನ್‌[ಶಾಶ್ವತವಾಗಿ ಮಡಿದ ಕೊಂಡಿ] CSaFe, ಡಿಸ್ಕಷನ್‌ ಪೇಪರ್‌‌ 5, ಯೂನಿವರ್ಸಿಟಿ ಆಫ್‌ ಒಟ್ಯಾಗೊ.
  53. ಡೆಲ್ವಿನ್‌ RH, ಡಿ'ಆಂಡ್ರೇಡ್‌ M, ಉಹ್‌ M ಮತ್ತು ಬಿಯಾಗಿ CA (2004) "ಪಾಪ್ಯುಲೇಷನ್‌ ಎಫೆಕ್ಟ್ಸ್‌ ಆಫ್‌ ಗ್ರೋತ್‌ ಹಾರ್ಮೋನ್‌ ಟ್ರಾನ್ಸ್‌ಜೆನಿಕ್‌ ಕೊಹೊ ಸಾಲ್ಮನ್‌ ಡಿಪೆಂಡ್‌ ಆನ್‌ ಫುಡ್‌ ಅವೈಲಬಲಬಿಲಿಟಿ ಅಂಡ್‌ ಜೀನೋಟೈಪ್‌ ಬೈ ಎನ್ವಿರಾನ್ಮೆಂಟ್‌ ಇಂಟರಾಕ್ಷನ್ಸ್‌" Archived 2015-09-24 ವೇಬ್ಯಾಕ್ ಮೆಷಿನ್ ನಲ್ಲಿ., ಪ್ರೊಸೀಡಿಂಗ್ಸ್‌ ಆಫ್‌ ದಿ ನ್ಯಾಷನಲ್‌ ಅಕಾಡೆಮಿ ಆಫ್‌ ಸೈನ್ಸಸ್‌ , 101 (25)9303-9308.
  54. ‌ಟಯೆಟೆನ್‌ಬರ್ಗ್ TH (2006) ಎನ್ವಿರಾನ್ಮೆಂಟಲ್‌ ಅಂಡ್‌ ನ್ಯಾಚುರಲ್‌ ರಿಸೋರ್ಸ್‌ ಇಕನಾಮಿಕ್ಸ್‌: ಎ ಕಾಂಟೆಂಪರರಿ ಅಪ್ರೋಚ್‌ . ಪುಟ 28. ಪಿರಸ್‌ಸನ್‌/ಅಡಿಸನ್‌ ವೆಸ್ಲೆ. ISBN 978-0-321-30504-6
  55. ಕ್ನ್ಯಾಪ್‌ G, ರೊಹೀಮ್‌ CA ಮತ್ತು ಆಂಡರ್‌ಸನ್‌ JL (2007) ದಿ ಗ್ರೇಟ್‌ ಸಾಲ್ಮನ್‌ ರನ್‌: ಕಾಂಪಿಟಿಷನ್‌ ಬಿಟ್ವೀನ್‌ ವೈಲ್ಡ್‌ ಅಂಡ್‌ ಫಾರ್ಮ್‌ಡ್‌ ಸಾಲ್ಮನ್‌ Archived 2013-08-05 ವೇಬ್ಯಾಕ್ ಮೆಷಿನ್ ನಲ್ಲಿ. ವರ್ಲ್ಡ್‌ ವೈಲ್ಡ್‌ಲೈಫ್‌ ಫಂಡ್‌. ISBN 0-89164-175-0
  56. ವಾಷಿಂಗ್ಟನ್ ಪೋಸ್ಟ್. ಸಾಲ್ಮನ್‌ ಫಾರ್ಮಿಂಗ್‌ ಮೆ ಡೂಮ್‌ ವೈಲ್ಡ್‌ ಪಾಪ್ಯುಲೇಷನ್ಸ್‌, ಸ್ಟಡಿ ಸೇಸ್‌.
  57. OSTROUMOV S. A. (2005). "Some aspects of water filtering activity of filter-feeders". Hydrobiologia. 542: 400. Retrieved September 26, 2009.
  58. "Environmental impacts of shellfish aquaculture" (PDF). 2008. Retrieved 2009-10-08.[ಶಾಶ್ವತವಾಗಿ ಮಡಿದ ಕೊಂಡಿ]
  59. "Aquaculture: Issues and Opportunities for Sustainable Production and Trade". ITCSD. July 2006. Archived from the original on 2008-11-20. Retrieved 2010-06-24.
  60. ""ಪ್ಯೂ ಓಷನ್ಸ್‌ ಕಮಿಷನ್‌ ರಿಪೋರ್ಟ್‌ ಆನ್‌ ಆಕ್ವಾಕಲ್ಚರ್‌‌"" (PDF). Archived from the original (PDF) on 2005-01-06. Retrieved 2010-06-24.

ಆಕರಗಳು

[ಬದಲಾಯಿಸಿ]

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]
ಜಾಗತಿಕ
ಪ್ರಾದೇಶಿಕ
ವಿಷಯ ಉದ್ದೇಶಿತ
ವೆಬ್‌ ಸಂಪನ್ಮೂಲಗಳು
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: