ಪೌಷ್ಟಿಕ
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (June 2007) |
ಪೌಷ್ಟಿಕ ವೆಂಬುದು ಒಂದು ರಾಸಾಯನಿಕವಾಗಿದ್ದು, ಜೀವಿಯ ಜೀವಿತಕ್ಕೆ ಹಾಗು ಬೆಳವಣಿಗೆಗೆ ಅಗತ್ಯವಾಗಿದೆ ಅಥವಾ ಒಂದು ಜೀವಿಯ ಉಪಾಪಚಯಕ್ಕೆ ಬಳಕೆಯಾಗುವ, ಅದರ ಪರಿಸರದಿಂದ ತೆಗೆದುಕೊಳ್ಳಲಾದ ಪದಾರ್ಥವಾಗಿದೆ.[೧] ಪೌಷ್ಟಿಕಗಳೆಂಬುದು ದೇಹವನ್ನು ಪುಷ್ಟಿಗೊಳಿಸುವ ಪದಾರ್ಥಗಳಾಗಿವೆ. ಇವುಗಳು ಜೀವಕೋಶಗಳನ್ನು ರೂಪಿಸುತ್ತವೆ ಹಾಗು ಸರಿಪಡಿಸುತ್ತವೆ, ಶಾಖ ಹಾಗು ಶಕ್ತಿಯನ್ನು ನೀಡುತ್ತವೆ, ಹಾಗು ದೇಹದ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತವೆ. ಪೌಷ್ಟಿಕವನ್ನು ಒಳತೆಗೆದುಕೊಳ್ಳುವ ವಿಧಾನಗಳು ಭಿನ್ನವಾಗಿರುತ್ತವೆ, ಪ್ರಾಣಿಗಳು ಹಾಗು ಪ್ರೋಟಿಸ್ಟ್(ಪ್ರಟಿಸ್ಟ ಜೀವಿರಾಜ್ಯದ ಯಾವುದೇ ಏಕಕೋಶ ಜೀವಿ)ಗಳು ಆಂತರಿಕ ಪಚನ ವ್ಯವಸ್ಥೆಯಿಂದ ಜೀರ್ಣವಾಗುವ ಆಹಾರಗಳನ್ನು ಸೇವಿಸುತ್ತವೆ, ಆದರೆ ಹಲವು ಸಸ್ಯಗಳು ಮಣ್ಣಿನಿಂದ ನೇರವಾಗಿ ತಮ್ಮ ಬೇರುಗಳ ಮೂಲಕ ಅಥವಾ ವಾತಾವರಣದ ಮೂಲಕ ಪೌಷ್ಟಿಕಗಳನ್ನು ಸೇವಿಸುತ್ತವೆ. ಇದಕ್ಕೆ ಅಪವಾದವೆಂದರೆ ಮಾಂಸಾಹಾರಿ ಸಸ್ಯಗಳು, ಇವುಗಳು ಪೌಷ್ಟಿಕವನ್ನು ಸೇವಿಸುವ ಮುಂಚೆ ಪ್ರಾಣಿಗಳಿಂದ ಉಂಟಾಗುವ ಪೌಷ್ಟಿಕವನ್ನು ಬಾಹ್ಯವಾಗಿ ಜೀರ್ಣಿಸಿಕೊಳ್ಳುತ್ತವೆ. ಪೌಷ್ಟಿಕಗಳ ಪರಿಣಾಮವು ಪ್ರಮಾಣ-ಅವಲಂಬಿತವಾಗಿರುತ್ತವೆ.
ಜೈವಿಕ ಪೌಷ್ಟಿಕಗಳಲ್ಲಿ ಕಾರ್ಬೋಹೈಡ್ರೇಟ್ ಗಳು, ಕೊಬ್ಬುಗಳು, ಪ್ರೋಟೀನ್ ಗಳು(ಅಥವಾ ಅವುಗಳು ನಿರ್ಮಿಸುವ ವ್ಯೂಹಗಳು, ಅಮೈನೋ ಆಮ್ಲಗಳು), ಹಾಗು ವಿಟಮಿನ್ ಗಳು ಒಳಗೊಂಡಿವೆ. ಅಜೈವಿಕ ರಾಸಾಯನಿಕ ಸಂಯುಕ್ತಗಳಾದ ಆಹಾರ ಖನಿಜಗಳು, ನೀರು, ಹಾಗು ಆಮ್ಲಜನಕವನ್ನೂ ಸಹ ಪೌಷ್ಟಿಕಗಳೆಂದು ಪರಿಗಣಿಸಬಹುದು.[ಸಾಕ್ಷ್ಯಾಧಾರ ಬೇಕಾಗಿದೆ] ಸಾಕಷ್ಟು ಪ್ರಮಾಣದಲ್ಲಿ ಜೀವಿಯಿಂದ ಸಂಯೋಜಿತವಾಗದಿದ್ದರೆ ಪೌಷ್ಟಿಕವು ಒಂದು ಜೀವಿಗೆ ಅಗತ್ಯವಾಗುತ್ತದೆ ಜೊತೆಗೆ ಇದನ್ನು ಒಂದು ಬಾಹ್ಯ ಮೂಲದಿಂದ ಪಡೆದುಕೊಳ್ಳಬೇಕಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ಅಗತ್ಯವಿರುವ ಪೌಷ್ಟಿಕಗಳನ್ನು ಮ್ಯಾಕ್ರೋನ್ಯೂಟ್ರಿಯಂಟ್ ಗಳೆಂದು ಕರೆಯಲಾಗುತ್ತದೆ; ಮೈಕ್ರೋನ್ಯೂಟ್ರಿಯಂಟ್ ಗಳು ಕೇವಲ ಸಣ್ಣ ಪ್ರಮಾಣದಲ್ಲಿ ಅಗತ್ಯವಿರುತ್ತದೆ.
ಮಾನವನ ಪೋಷಣೆಯಲ್ಲಿ ಪೌಷ್ಟಿಕಗಳ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಆರೋಗ್ಯಕರ ಆಹಾರಕ್ರಮವನ್ನು ನೋಡಿ.
ಪೌಷ್ಟಿಕದ ಮಾದರಿಗಳು
[ಬದಲಾಯಿಸಿ]ಮ್ಯಾಕ್ರೋನ್ಯೂಟ್ರಿಯಂಟ್ ಗಳನ್ನು ಹಲವಾರು ವಿವಿಧ ರೀತಿಯಲ್ಲಿ ಅರ್ಥನಿರೂಪಣೆ ಮಾಡಲಾಗುತ್ತದೆ.
- ಮಾನವರು ಸೇವಿಸುವ ಅತ್ಯಂತ ದೊಡ್ಡ ಪ್ರಮಾಣದ ರಾಸಾಯನಿಕ ಅಂಶಗಳೆಂದರೆ ಕಾರ್ಬನ್, ಹೈಡ್ರೋಜನ್, ನೈಟ್ರೋಜನ್, ಆಮ್ಲಜನಕ, ಫಾಸ್ಫಾರಸ್, ಹಾಗು ಸಲ್ಫರ್.
- ಮಾನವರು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಸೇವಿಸುವ ಹಾಗು ಹೆಚ್ಚಿನ ಶಕ್ತಿಯನ್ನು ನೀಡುವ ರಾಸಾಯನಿಕ ಸಂಯುಕ್ತಗಳ ವರ್ಗಗಳಲ್ಲಿ ಕಾರ್ಬೋಹೈಡ್ರೇಟ್ ಗಳು, ಪ್ರೋಟೀನ್ ಗಳು, ಹಾಗು ಕೊಬ್ಬುಗಳು. ನೀರು ಹಾಗು ವಾತವರಣದಲ್ಲಿ ದೊರೆಯುವ ಆಮ್ಲಜನಕವನ್ನೂ ಸಹ ದೊಡ್ಡ ಪ್ರಮಾಣಗಳಲ್ಲಿ ಸೇವಿಸಬೇಕು, ಆದರೆ ಇವುಗಳನ್ನು ಯಾವಾಗಲೂ "ಆಹಾರ" ಅಥವಾ "ಪೌಷ್ಟಿಕಗಳೆಂದು" ಪರಿಗಣಿಸಲಾಗುವುದಿಲ್ಲ.
- ಕ್ಯಾಲ್ಷಿಯಂ, ಲವಣ, (ಸೋಡಿಯಂ ಹಾಗು ಕ್ಲೋರೈಡ್), ಮೆಗ್ನಿಶಿಯಂ, ಹಾಗು ಪೊಟ್ಯಾಷಿಯಂ(ಫಾಸ್ಫರಸ್ ಹಾಗು ಸಲ್ಫರ್ ನೊಂದಿಗೆ) ಅನ್ನು ಕೆಲವೊಂದು ಬಾರಿ ಮ್ಯಾಕ್ರೋನ್ಯೂಟ್ರಿಯಂಟ್ ಗಳ ಪಟ್ಟಿಯಲ್ಲಿ ಸೇರಿಸಲಾಗುತ್ತದೆ, ಏಕೆಂದರೆ ಇತರ ವಿಟಮಿನ್ ಗಳು ಹಾಗು ಖನಿಜಗಳಿಗೆ ಹೋಲಿಸಿದರೆ ಇವುಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸಬೇಕು. ಇವುಗಳನ್ನು ಕೆಲವೊಂದು ಬಾರಿ ಮ್ಯಾಕ್ರೋಮಿನರಲ್ಸ್ ಎಂದು ಸೂಚಿಸಲಾಗುತ್ತದೆ.
ಉಳಿದ ವಿಟಮಿನ್ ಗಳು, ಖನಿಜಗಳು, ಕೊಬ್ಬುಗಳು ಅಥವಾ ಅಂಶಗಳನ್ನು, ಮೈಕ್ರೋನ್ಯೂಟ್ರಿಯಂಟ್ ಗಳೆಂದು ಕರೆಯಲಾಗುತ್ತದೆ ಏಕೆಂದರೆ ತುಲನಾತ್ಮಕವಾಗಿ ಇವುಗಳು ಕಡಿಮೆ ಪ್ರಮಾಣದಲ್ಲಿ ಅಗತ್ಯವಾಗಿರುತ್ತವೆ.
ಶಕ್ತಿಯನ್ನು ಒದಗಿಸುವ ಪದಾರ್ಥಗಳು
[ಬದಲಾಯಿಸಿ]- ಕಾರ್ಬೋಹೈಡ್ರೇಟ್ ಗಳು ಸಕ್ಕರೆಯಿಂದ ತಯಾರಾದ ಸಂಯುಕ್ತಗಳಾಗಿವೆ. ಅವುಗಳಲ್ಲಿರುವ ಸಿಹಿ ಅಂಶಗಳನ್ನು ಆಧರಿಸಿ ಕಾರ್ಬೋಹೈಡ್ರೇಟ್ ಗಳನ್ನು ವರ್ಗಾವಣೆ ಮಾಡಲಾಗುತ್ತದೆ: ಮೋನೋಸ್ಯಾಕರೈಡ್ ಗಳು (ಉದಾಹರಣೆಗೆ ಗ್ಲುಕೋಸ್ ಹಾಗು ಫ್ರುಕ್ಟೋಸ್), ಡಿಸ್ಯಾಕರೈಡ್ ಗಳು (ಉದಾಹರಣೆಗೆ ಸುಕ್ರೋಸ್ ಹಾಗು ಲ್ಯಾಕ್ಟೋಸ್), ಆಲಿಗೋಸ್ಯಾಕರೈಡ್ ಗಳು, ಹಾಗು ಪಾಲಿಸ್ಯಾಕರೈಡ್ ಗಳು(ಉದಾರಹಣೆಗೆ ಪಿಷ್ಟ, ಗ್ಲೈಕೋಜನ್, ಹಾಗು ಸೆಲ್ಯುಲೋಸ್).
- ಪ್ರೋಟೀನ್ ಗಳು ಜೈವಿಕ ಸಂಯುಕ್ತಗಳಾಗಿವೆ, ಇವುಗಳು ಪೆಪ್ಟೈಡ್ ಬಂಧಗಳಿಂದ ಒಂದುಗೂಡಿದ ಅಮೈನೋ ಆಮ್ಲಗಳನ್ನು ಒಳಗೊಂಡಿರುತ್ತವೆ. ದೇಹವು ಕೆಲವು ಅಮೈನೋ ಆಮ್ಲಗಳನ್ನು ಉತ್ಪಾದಿಸಲು ಸಾಧ್ಯವಿಲ್ಲ(ಇವುಗಳನ್ನು ಅಗತ್ಯ ಅಮೈನೋ ಆಮ್ಲಗಳೆಂದು ಹೆಸರಿಸಲಾಗಿದೆ); ಆಹಾರವು ಇವುಗಳನ್ನು ಪೂರೈಕೆ ಮಾಡಬೇಕು. ಪೌಷ್ಟಿಕತೆಯಲ್ಲಿ, ಪ್ರೋಟೀನ್ ಗಳು ಪ್ರೋಟಿಯೇಸ್ ಗಳಿಂದ ಪಚನವಾಗುವ ಮೂಲಕ ಬೇರ್ಪಟ್ಟು ಮತ್ತೆ ಮುಕ್ತವಾದ ಅಮೈನೋ ಆಮ್ಲಗಳಾಗ* ಪ್ರೋಟೀನ್ ಗಳು ಜೈವಿಕ ಸಂಯುಕ್ತಗಳಾಗಿವೆ, ಇವುಗಳು ಪೆಪ್ಟೈಡ್ ಬಂಧಗಳಿಂದ ಒಂದುಗೂಡಿದ ಅಮೈನೋ ಆಮ್ಲಗಳನ್ನು ಒಳಗೊಂಡಿರುತ್ತವೆ. ದೇಹವು ಕೆಲವು ಅಮೈನೋ ಆಮ್ಲಗಳನ್ನು ಉತ್ಪಾದಿಸಲು ಸಾಧ್ಯವಿಲ್ಲ(ಇವುಗಳನ್ನು ಅಗತ್ಯ ಅಮೈನೋ ಆಮ್ಲಗಳೆಂದು ಹೆಸರಿಸಲಾಗಿದೆ); ಆಹಾರವು ಇವುಗಳನ್ನು ಪೂರೈಕೆ ಮಾಡಬೇಕು. ಪೌಷ್ಟಿಕತೆಯಲ್ಲಿ, ಪ್ರೋಟೀನ್ ಗಳು ಪ್ರೋಟಿಯೇಸ್ ಗಳಿಂದ ಪಚನವಾಗುವ ಮೂಲಕ ಬೇರ್ಪಟ್ಟು ಮತ್ತೆ ಮುಕ್ತವಾದ ಅಮೈನೋ ಆಮ್ಲಗಳಾಗುತ್ತವೆ.
- ಕೊಬ್ಬುಗಳು ಮೂರು ನೆಣಾಮ್ಲಗಳಿಂದ ಕೂಡಿಕೊಂಡು ಗ್ಲಿಸರಿನ್ ಅಣುವನ್ನು ಒಳಗೊಂಡಿರುತ್ತವೆ. ನೆಣಾಮ್ಲಗಳು ಕವಲೊಡೆಯದ ಹೈಡ್ರೋಕಾರ್ಬನ್ ಸರಪಣಿಗಳಾಗಿರುತ್ತವೆ, ಇವುಗಳು ಏಕವಾದ ಬಂಧಕಗಳಿಂದ (ಸಂಪೂರಿತವಾದ ನೆಣಾಮ್ಲಗಳು) ಅಥವಾ ಎರಡು ಹಾಗು ಒಂದು ಬಂಧಕಗಳಿಂದ ಸಂಯೋಜಿತವಾಗಿರುತ್ತವೆ (ಸಂಪೂರಿತವಾಗದ ನೆಣಾಮ್ಲಗಳು). ಕೊಬ್ಬುಗಳು, ಕೋಶದ ಒಳಪೊರೆಯು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ಅಗತ್ಯವಾಗಿದೆ, ಇವುಗಳು ದೇಹದ ಅಂಗಾಂಗಗಳು ಆಘಾತಕ್ಕೆ ವಿರೋಧವಾಗಿ ವಿಯೋಜಿಸಲು, ದೇಹದ ತಾಪಮಾನವನ್ನು ಸ್ಥಿರವಾಗಿ ಕಾಪಾಡಿಕೊಳ್ಳಲು, ಹಾಗು ಆರೋಗ್ಯಕರ ಚರ್ಮ ಹಾಗು ಕೂದಲನ್ನು ಪೋಷಿಸಿಕೊಳ್ಳಲು ಅಗತ್ಯವಾಗಿದೆ. ದೇಹವು ಕೆಲವು ನೆಣಾಮ್ಲಗಳನ್ನು ಉತ್ಪಾದಿಸುವುದಿಲ್ಲ(ಇದನ್ನು ಅಗತ್ಯ ನೆಣಾಮ್ಲಗಳೆಂದು ಕರೆಯಲಾಗುತ್ತದೆ) ಹಾಗು ಆಹಾರವು ಇವುಗಳ ಪೂರೈಕೆ * ಕೊಬ್ಬುಗಳು ಮೂರು ನೆಣಾಮ್ಲಗಳಿಂದ ಕೂಡಿಕೊಂಡು ಗ್ಲಿಸರಿನ್ ಅಣುವನ್ನು ಒಳಗೊಂಡಿರುತ್ತವೆ. ನೆಣಾಮ್ಲಗಳು ಕವಲೊಡೆಯದ ಹೈಡ್ರೋಕಾರ್ಬನ್ ಸರಪಣಿಗಳಾಗಿರುತ್ತವೆ, ಇವುಗಳು ಏಕವಾದ ಬಂಧಕಗಳಿಂದ (ಸಂಪೂರಿತವಾದ ನೆಣಾಮ್ಲಗಳು) ಅಥವಾ ಎರಡು ಹಾಗು ಒಂದು ಬಂಧಕಗಳಿಂದ ಸಂಯೋಜಿತವಾಗಿರುತ್ತವೆ (ಸಂಪೂರಿತವಾಗದ ನೆಣಾಮ್ಲಗಳು). ಕೊಬ್ಬುಗಳು, ಕೋಶದ ಒಳಪೊರೆಯು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ಅಗತ್ಯವಾಗಿದೆ, ಇವುಗಳು ದೇಹದ ಅಂಗಾಂಗಗಳು ಆಘಾತಕ್ಕೆ ವಿರೋಧವಾಗಿ ವಿಯೋಜಿಸಲು, ದೇಹದ ತಾಪಮಾನವನ್ನು ಸ್ಥಿರವಾಗಿ ಕಾಪಾಡಿಕೊಳ್ಳಲು, ಹಾಗು ಆರೋಗ್ಯಕರ ಚರ್ಮ ಹಾಗು ಕೂದಲನ್ನು ಪೋಷಿಸಿಕೊಳ್ಳಲು ಅಗತ್ಯವಾಗಿದೆ. ದೇಹವು ಕೆಲವು ನೆಣಾಮ್ಲಗಳನ್ನು ಉತ್ಪಾದಿಸುವುದಿಲ್ಲ(ಇದನ್ನು ಅಗತ್ಯ ನೆಣಾಮ್ಲಗಳೆಂದು ಕರೆಯಲಾಗುತ್ತದೆ) ಹಾಗು ಆಹಾರವು ಇವುಗಳ ಪೂರೈಕೆ ಮಾಡಬೇಕು.
ಕೊಬ್ಬು 9 kcal/g (~37.7 kJ/g)ನಷ್ಟು ಶಕ್ತಿಯ ಅಂಶವನ್ನು ಹೊಂದಿದೆ; ಪ್ರೋಟೀನ್ ಗಳು ಹಾಗು ಕಾರ್ಬೋಹೈಡ್ರೇಟ್ ಗಳು 4 kcal/g (~16.7 kJ/g). ಎಥನೋಲ್(ಗ್ರೈನ್ ಆಲ್ಕೋಹಾಲ್) 7 kcal/g (~29.3 kJ/g)ನಷ್ಟು ಶಕ್ತಿಯ ಅಂಶವನ್ನು ಹೊಂದಿರುತ್ತದೆ.[೨]
ಉಪಾಪಚಯಕ್ಕೆ ಸಹಕರಿಸುವ ಪದಾರ್ಥಗಳು
[ಬದಲಾಯಿಸಿ]ಆಹಾರದಲ್ಲಿನ ಖನಿಜಗಳು ಸಾಧಾರಣವಾಗಿ ಸಿದ್ಧಪಡಿಸಿದ ಅಂಶಗಳು, ಲವಣಗಳು, ಅಥವಾ ಅಯಾನುಗಳಾಗಿವೆ ಉದಾಹರಣೆಗೆ ತಾಮ್ರ ಹಾಗು ಕಬ್ಬಿಣ. ಈ ಖನಿಜಗಳಲ್ಲಿ ಕೆಲವೊಂದು ಮಾನವ ಉಪಾಪಚಯಕ್ಕೆ ಅಗತ್ಯವಾಗಿದೆ.
- ವಿಟಮಿನ್ ಗಳು ದೇಹಕ್ಕೆ ಅಗತ್ಯವಾದ ಜೈವಿಕ ಸಂಯುಕ್ತಗಳಾಗಿವೆ. ಇವುಗಳು ಸಾಮಾನ್ಯವಾಗಿ ದೇಹದಲ್ಲಿರುವ ವಿವಿಧ ಪ್ರೋಟೀನುಗಳ ಸಹಕಿಣ್ವಗಳಾಗಿ ಅಥವಾ ಸಹಅಂಶಗಳಾಗಿ ಕಾರ್ಯ ನಿರ್ವಹಿಸುತ್ತವೆ.
- ನೀರು ಅಗತ್ಯವಾದ ಒಂದು ಪೌಷ್ಟಿಕವಾಗಿದೆ ಜೊತೆಗೆ ವಿಲೇಯಕವಾದ ಇದರಿಂದ ದೇಹದ ಎಲ್ಲ ರಾಸಾಯನಿಕ ಪ್ರಕ್ರಿಯೆಗಳು ನಡೆಯುತ್ತವೆ.
ಸಸ್ಯಗಳು ಅತ್ಯಂತ ಅಗಾಧ ಪ್ರಮಾಣದಲ್ಲಿ ಸೇವಿಸುವ ರಾಸಾಯನಿಕ ಅಂಶಗಳೆಂದರೆ ಕಾರ್ಬನ್, ಹೈಡ್ರೋಜನ್, ಹಾಗು ಆಮ್ಲಜನಕ. ಇವುಗಳು ನೀರು ಹಾಗು ಇಂಗಾಲದ ಡೈ ಆಕ್ಸೈಡ್ ರೂಪದಲ್ಲಿ ಪರಿಸರದಲ್ಲಿ ಇರುತ್ತದೆ; ಶಕ್ತಿಯನ್ನು ಸೂರ್ಯನಕಿರಣವು ಒದಗಿಸುತ್ತದೆ. ನೈಟ್ರೋಜನ್, ಫಾಸ್ಫರಸ್, ಪೊಟ್ಯಾಷಿಯಂ, ಹಾಗು ಸಲ್ಫರ್ ಗಳೂ ಸಹ ದೊಡ್ಡ ಪ್ರಮಾಣಗಳಲ್ಲಿ ಅಗತ್ಯವಾಗಿದೆ. ಒಟ್ಟಾರೆಯಾಗಿ, ಇವುಗಳು ಸಸ್ಯಗಳಿಗೆ ಅತ್ಯಗತ್ಯವಾದ ಮ್ಯಾಕ್ರೋನ್ಯೂಟ್ರಿಯಂಟ್ ಗಳಾಗಿವೆ, ಸಾಮಾನ್ಯವಾಗಿ ಮೊದಲಕ್ಷರ CHNOPSನಿಂದ ಸೂಚಿತವಾಗುತ್ತದೆ. ಸಾಮಾನ್ಯವಾಗಿ ಇವುಗಳನ್ನು ಅಜೈವಿಕ (ಉದಾಹರಣೆಗೆ ಇಂಗಾಲದ ಡೈ ಆಕ್ಸೈಡ್, ನೀರು, ನೈಟ್ರೇಟ್, ಫಾಸ್ಫೇಟ್, ಸಲ್ಫೇಟ್ ಅಥವಾ ಜೈವಿಕ ಮೂಲಗಳಿಂದ ಉತ್ಪತ್ತಿಯನ್ನು ಹೊಂದಿರುತ್ತವೆ (ಉದಾಹರಣೆಗೆ ಕಾರ್ಬೋಹೈಡ್ರೇಟ್ ಗಳು, ಮೆದಸ್ಸುಗಳು, ಪ್ರೋಟೀನ್ ಗಳು ಸಂಯುಕ್ತಗಳು), ಆದಾಗ್ಯೂ ಅತ್ಯಗತ್ಯವಾದ ನೈಟ್ರೋಜನ್ ಹಾಗು (ವಿಶೇಷವಾಗಿ) ಆಮ್ಲಜನಕದ ಡೈಅಟಾಮಿಕ್(ಅಣುವಿನಲ್ಲಿ ಎರಡು ಪರಮಾಣುಗಳಿರುವ) ಅಣುಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.
ಇತರ ರಾಸಾಯನಿಕ ಅಂಶಗಳೂ ಸಹ ವಿವಿಧ ದೇಹ ಪ್ರಕ್ರಿಯೆಗಳಿಗೆ ಹಾಗು ನಿರ್ಮಾಣ ವಿನ್ಯಾಸಗಳಿಗೆ ಅಗತ್ಯವಾಗಿದೆ; ಹೆಚ್ಚಿನ ಮಾಹಿತಿಗಾಗಿ ಗೊಬ್ಬರ ಹಾಗು ಮೈಕ್ರೋನ್ಯೂಟ್ರಿಯಂಟ್ ವಿಭಾಗವನ್ನು ನೋಡಿ.
ಇದರಲ್ಲಿ ಕೆಲವೊಂದು ನಿರ್ದಿಷ್ಟ ಜೀವಿಗಳಲ್ಲಿ ಮ್ಯಾಕ್ರೋನ್ಯೂಟ್ರಿಯಂಟ್ ಗಳೆಂದು ಪರಿಗಣಿತವಾಗಿದೆ. ನೆನಪಿನ ಸಾಧನ C. HOPKiN'S CaFe Mg(C. ಹಾಪ್ಕಿನ್ಸ್ ಕಾಫಿ ಮಗ್ ಎಂದು ಬಳಸಬೇಕು) ಅನ್ನು ಕೆಲವು ವಿಧ್ಯಾರ್ಥಿಗಳು ಈ ಕೆಳಕಂಡ ಪಟ್ಟಿಯನ್ನು ಸ್ಮರಿಸಿಕೊಳ್ಳಲು ಬಳಸಿಕೊಳ್ಳುತ್ತಾರೆ: ಕಾರ್ಬನ್, ಹೈಡ್ರೋಜನ್, ಆಮ್ಲಜನಕ, ಫಾಸ್ಫರಸ್, ಪೊಟ್ಯಾಷಿಯಂ, ನೈಟ್ರೋಜನ್, ಸಲ್ಫರ್, ಕ್ಯಾಲ್ಷಿಯಂ, ಕಬ್ಬಿಣ, ಹಾಗು ಮೆಗ್ನಿಶಿಯಂ. ಸಿಲಿಕಾನ್, ಕ್ಲೋರೈಡ್, ಸೋಡಿಯಂ, ತಾಮ್ರ, ಜಿಂಕ್, ಹಾಗು ಮಲಿಬ್ಡಿನಂ ಗಳನ್ನೂ ಸಹ ಕೆಲವೊಂದು ಬಾರಿ ಸೇರಿಸಲಾಗುತ್ತದೆ, ಆದರೆ ಇತರ ಪರಿಸ್ಥಿತಿಗಳಲ್ಲಿ ಮೈಕ್ರೋನ್ಯೂಟ್ರಿಯಂಟ್ ಗಳೆಂದು ಪರಿಗಣಿಸಲಾಗುತ್ತದೆ.[೩]
ಸಸ್ಯಕ್ಕೆ ಪೌಷ್ಟಿಕಗಳನ್ನು ಅಗತ್ಯಕ್ಕಿಂತ ಹೆಚ್ಚಾಗಿ ಒದಗಿಸುವುದು ಪರಿಸರದಲ್ಲಿ ಅಧಿಕ ಸಸ್ಯಗಳ ಬೆಳವಣಿಗೆ ಹಾಗು ಪಾಚಿಯ ಬೆಳವಣಿಗೆ ಕಾರಣವಾಗುತ್ತದೆ. ಯುಟ್ರೋಫಿಕೇಶನ್(ಜಲಚರಗಳು ಆಮ್ಲಜನಕವಿಲ್ಲದೆ ಸಾಯುವಷ್ಟು ಸಸ್ಯಗಳು ಬೆಳೆಯುವಂತೆ ವಿಪರೀತವಾಗಿ ಫಲವತ್ತಾಗಿರುವಿಕೆ) ಎಂದು ಕರೆಯಲ್ಪಡುವ ಈ ಪ್ರಕ್ರಿಯೆಯು, ಜನಸಂಖ್ಯೆಯಲ್ಲಿ ಅಸಮತೋಲನವನ್ನು ಉಂಟುಮಾಡುತ್ತದೆ ಹಾಗು ಇತರ ಪೌಷ್ಟಿಕಗಳು ಕೆಲವೊಂದು ಜೀವಿಗಳಿಗೆ ಹಾನಿಕರವಾಗಿದೆ. ಉದಾಹರಣೆಗೆ, ಒಂದು ಪಾಚಿಯ ಬೆಳವಣಿಗೆಯು, ಮೀನಿಗೆ ಉಸಿರಾಡಲು ಲಭ್ಯವಿರುವ ಆಮ್ಲಜನಕವನ್ನು ನಿಷ್ಕಾಸಗೊಳಿಸುತ್ತದೆ. ಇದರ ಕಾರಣಗಳಲ್ಲಿ ಕೃಷಿ ಭೂಮಿಯಿಂದ ಬಿಡುಗಡೆಯಾಗುವ ರೊಚ್ಚು ಅಥವಾ ಹೆಚ್ಚುವರಿ ನೀರಿನಿಂದ ಉಂಟಾಗುವ ಜಲ ಮಾಲಿನ್ಯ ಸೇರಿದೆ(ಅಧಿಕವಾದ ಕೃಷಿ ಗೊಬ್ಬರಗಳ ಹರಿವು) ಅತ್ಯಂತ ಸಾಮಾನ್ಯ ಬೆಳವಣಿಗೆಯನ್ನು ಸೀಮಿತಗೊಳಿಸುವ ಅಂಶಗಳೆಂದರೆ ನೈಟ್ರೋಜನ್ ಹಾಗು ಫಾಸ್ಫರಸ್, ಜೊತೆಗೆ ಈ ರೀತಿಯಾಗಿ ಕೃತಕವಾಗಿ ಪರಿಚಯಿಸಿದಾಗ ಯುಟ್ರೋಫಿಕೇಶನ್ ಸರಣಿಕ್ರಿಯಾಕಾರಿಯಾಗಬಹುದು.
ಅಗತ್ಯ ಹಾಗು ಅನಗತ್ಯ ಪೌಷ್ಟಿಕಗಳು
[ಬದಲಾಯಿಸಿ]ಪೌಷ್ಟಿಕಗಳನ್ನು ಸಾಧಾರಣವಾಗಿ ಅಗತ್ಯ ಅಥವಾ ಅನಗತ್ಯಗಳೆಂದು ವಿಂಗಡಿಸಲಾಗಿದೆ. ಅಗತ್ಯ ಪೌಷ್ಟಿಕಗಳನ್ನು ಆಂತರಿಕವಾಗಿ ಸಂಶ್ಲೇಷಿತಗೊಳಿಸಲು ಅಸಮರ್ಥವಾಗಿದೆ(ಸಂಪೂರ್ಣವಾಗಿ, ಅಥವಾ ಸಾಕಷ್ಟಿಲ್ಲದ ಪ್ರಮಾಣಗಳು), ಹಾಗು ಈ ರೀತಿಯಾಗಿ ಒಂದು ಜೀವಿಯು ತನ್ನ ಪರಿಸರದಿಂದ ಇದನ್ನು ಸೇವಿಸಬೇಕು.
ಮಾನವರಿಗೆ, ಇದರಲ್ಲಿ ಅಗತ್ಯ ನೆಣಾಮ್ಲಗಳು, ಅಗತ್ಯ ಅಮೈನೋ ಆಮ್ಲಗಳು, ವಿಟಮಿನ್ ಗಳು, ಹಾಗು ನಿರ್ದಿಷ್ಟ ಆಹಾರ ಖನಿಜಗಳು. ಮಾನವನ ಅಸ್ತಿತ್ವಕ್ಕೆ ಆಮ್ಲಜನಕ ಹಾಗು ನೀರು ಸಹ ಅಗತ್ಯವಾಗಿದೆ, ಆದರೆ ಇವುಗಳನ್ನು ಪ್ರತ್ಯೇಕವಾಗಿ ಸೇವಿಸಿದಾಗ ಸಾಧಾರಣವಾಗಿ "ಆಹಾರ" ಎಂದು ಪರಿಗಣಿಸಲಾಗುವುದಿಲ್ಲ.
ಮನುಷ್ಯರು, ಕೊಬ್ಬುಗಳು, ಕಾರ್ಬೋಹೈಡ್ರೇಟ್ ಗಳು, ಪ್ರೋಟೀನುಗಳು ಹಾಗು ಎಥನೋಲ್ ನಿಂದ ವ್ಯಾಪಕವಾಗಿ ಶಕ್ತಿಯನ್ನು ಪಡೆಯಬಹುದು, ಜೊತೆಗೆ ಅಗತ್ಯ ಪೌಷ್ಟಿಕಗಳಿಂದ ಅಗತ್ಯವಾದ ಇತರ ಅಮೈನೋ ಆಮ್ಲಗಳನ್ನು ಸಂಶ್ಲೇಷಿತಗೊಳಿಸಬಹುದು.
ಆಹಾರದಲ್ಲಿನ ಅನಗತ್ಯ ಪದಾರ್ಥಗಳು ಆರೋಗ್ಯದ ಮೇಲೆ ಮಹತ್ವದ ಪರಿಣಾಮವನ್ನು ಬೀರಬಹುದು, ಇದು ದೇಹಕ್ಕೆ ಅನುಕೂಲವನ್ನು ಅಥವಾ ನಂಜನ್ನು ಉಂಟುಮಾಡಬಹುದು. ಉದಾಹರಣೆಗೆ, ಆಹಾರದಲ್ಲಿನ ನಾರುಗಳಲ್ಲಿ ಹೆಚ್ಚಿನವುಗಳನ್ನು ಮಾನವನ ಪಚನ ಅಂಗವು ಹೀರಿಕೊಳ್ಳುವುದಿಲ್ಲ, ಆದರೆ ಇದು ಉಳಿದಂತೆ ಹಾನಿಕರ ಪದಾರ್ಥಗಳನ್ನು ಜೀರ್ಣಮಾಡಲು ಹಾಗು ಹೀರಿಕೊಳ್ಳಲು ಬಹಳ ಮುಖ್ಯವಾಗುತ್ತದೆ. ಇತ್ತೀಚಿಗೆ ಫೈಟೋಕೆಮಿಕಲ್ ಗಳ ಬಗ್ಗೆ ಆಸಕ್ತಿ ಹೆಚ್ಚಾಗಿದೆ, ಇದರಲ್ಲಿ ಆರೋಗ್ಯಕ್ಕೆ ಪ್ರಯೋಜನವನ್ನು ಉಂಟುಮಾಡುವ ಹಲವು ಅನಗತ್ಯ ಪದಾರ್ಥಗಳನ್ನು ಒಳಗೊಂಡಿದೆ.[೧]
ಉಲ್ಲೇಖಗಳು
[ಬದಲಾಯಿಸಿ]- ಡೋನಟೆಲ್ಲೆ, ರೆಬೆಕಾ J.2008. ಹೆಲ್ತ್: ದಿ ಬೇಸಿಕ್ಸ್, 8ನೇ ಆವೃತ್ತಿ . ಬೆಂಜಮಿನ್ ಕಂಮಿಂಗ್ಸ್, ISBN 978-0321523020
- ವೈಟ್ನಿ, ಎಲನೋರ್ ಹಾಗು ಶರೋನ್ ರೋಲ್ಫೆಸ್. 2007. ಅಂಡರ್ಸ್ಟ್ಯಾಂಡಿಂಗ್ ನ್ಯೂಟ್ರಿಶನ್, 11ನೇ ಆವೃತ್ತಿ . ವ್ಯಾಡ್ಸ್ವರ್ತ್ ಪಬ್ಲಿಷಿಂಗ್ ISBN 978-0495116868
- ↑ ೧.೦ ೧.೧ ವೈಟ್ನಿ, ಎಲನೋರ್ ಹಾಗು ಶರೋನ್ ರೋಲ್ಫ್ಸ್. 2005. ಅಂಡರ್ಸ್ಟ್ಯಾಂಡಿಂಗ್ ನ್ಯೂಟ್ರಿಶನ್, 10ನೇ ಆವೃತ್ತಿ , ಪುಟ 6. ಥಾಮ್ಸನ್-ವ್ಯಾಡ್ಸ್ವರ್ತ್.
- ↑ ಕಾಯ್ಲೆ EF. 1995. ವ್ಯಾಯಾಮದ ಅವಧಿಯಲ್ಲಿ ಕೊಬ್ಬಿನ ಉಪಾಪಚಯ ಕ್ರಿಯೆ. ಕ್ರೀಡಾ ವಿಜ್ಞಾನ ವಿನಿಮಯ 8(6):59-65
- ↑ Perry, David A (1994), Forest ecosystems, Baltimore: Johns Hopkins University Press, ISBN 9780801849879
ಇವನ್ನೂ ಗಮನಿಸಿ
[ಬದಲಾಯಿಸಿ]- ಪರಿಸರ ನೈರ್ಮಲ್ಯ
- ಮ್ಯಾಕ್ರೋನ್ಯೂಟ್ರಿಯಂಟ್ ಗಳ ಪಟ್ಟಿ
- ಪೌಷ್ಟಿಕ ಸಾಂದ್ರತೆ
- ನಿಜವಾದ ಪೌಷ್ಟಿಕಗಳು
- ಪೋಷಣೆ
- Pages using the JsonConfig extension
- Articles needing additional references from June 2007
- All articles needing additional references
- ಉಲ್ಲೇಖಗಳ ಅಗತ್ಯ ಇರುವ ಲೇಖನಗಳು
- Articles with hatnote templates targeting a nonexistent page
- ರಾಸಾಯನಿಕ ಸಮುದ್ರಶಾಸ್ತ್ರ
- ಪರಿಸರ ವಿಜ್ಞಾನ
- ಪೌಷ್ಟಿಕದ್ರವ್ಯಗಳು
- ಎಡಫಾಲಜಿ
- ರಾಸಾಯನಿಕ ಅಂಶಗಳ ಜೀವಶಾಸ್ತ್ರ ಹಾಗು ಔಷಧಶಾಸ್ತ್ರ
- Pages using ISBN magic links