ಜಲವಾಸಿ ಸಸ್ಯಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಿಂಫಿಯಾ ಆಲ್ಬಾ, ನೀರಿನಲ್ಲಿ ಬೆಳೆಯುವ ಲಿಲಿ ಹೂವಿನ ಒಂದು ಜಾತಿ

ಜಲವಾಸಿ ಸಸ್ಯ ಗಳನ್ನು, ನೀರಿನಲ್ಲಿ ಬೆಳೆಯುವ ಸಸ್ಯಗಳು ಅಥವಾ ಜಲಸಸ್ಯ ಗಳೆಂದೂ ಸಹ ಕರೆಯಲಾಗುತ್ತದೆ, ಈ ಸಸ್ಯಗಳು ನೀರಿನ ಪರಿಸರದಲ್ಲಿ ಅಥವಾ ನೀರಿನೊಳಗೆ ಬೆಳೆಯಲು ಹೊಂದಾಣಿಕೆಯಾಗುತ್ತವೆ.[೧]

ನೀರಿನಲ್ಲಿ ಅಥವಾ ತಳಭಾಗದಲ್ಲಿ ಬೆಳೆಯುವ ಕಾರಣದಿಂದಾಗಿ ಇದಕ್ಕೆ ವಿಶೇಷ ಹೊಂದಾವಣಿಕೆ ಮಾಡಿಕೊಳ್ಳುವ ಅಗತ್ಯವಿರುತ್ತದೆ, ಜಲವಾಸಿ ಸಸ್ಯಗಳು ಕೇವಲ ನೀರಿನಲ್ಲಿ ಮಾತ್ರ ಬೆಳೆಯುತ್ತವೆ ಅಥವಾ ಸ್ಥಿರವಾಗಿ ತೇವ ತುಂಬಿದ ಮಣ್ಣಿನಲ್ಲಿ ಬೆಳೆಯುತ್ತವೆ. ಜಲವಾಸಿ ನಾಳ ಸಸ್ಯಗಳು ಜರೀಗಿಡಗಳಾಗಿರಬಹುದು ಅಥವಾ ಆವೃತ ಬೀಜಿಗಳಾಗಿರಬಹುದು.(ಏಕದಳಗಳು ಹಾಗು ದ್ವಿದಳಸಸ್ಯಗಳನ್ನೊಳಗೊಂಡಂತೆ ವಿವಿಧ ಜಾತಿಯ ಸಸ್ಯಗಳು). ಕಡಲಕಳೆಗಳು ನಾಳ ಸಸ್ಯಗಳಲ್ಲ. ಆದರೆ ಬಹುಕೊಶೀಯ ಕಡಲ ಪಾಚಿಗಳಾಗಿರುತ್ತವೆ, ಜೊತೆಗೆ ಈ ರೀತಿಯಾಗಿ ಜಲವಾಸಿ ಸಸ್ಯಗಳ ವರ್ಗಗಳಲ್ಲಿ ಇವುಗಳನ್ನು ಸಮಾನಾಂತರದಲ್ಲಿ ಸೇರಿಸಲಾಗುವುದಿಲ್ಲ. ಮೆಸೋಫೈಟ್ ಗಳು(ಸಾಧಾರಣ ಪ್ರಮಾಣದಲ್ಲಿ ನೀರು ಅಗತ್ಯವಾದ ಸಸ್ಯ) ಹಾಗು ಸೆರೋಫೈಟ್(ಮರುಸಸ್ಯಗಳು)ಗಳಂತಹ ಸಸ್ಯದ ಮಾದರಿಗಳಿಗೆ ವ್ಯತಿರಿಕ್ತವಾಗಿ, ಜಲಸಸ್ಯಗಳಿಗೆ ನೀರನ್ನು ಉಳಿಸಿಕೊಳ್ಳುವಲ್ಲಿ ಯಾವುದೇ ಸಮಸ್ಯೆಯಿರುವುದಿಲ್ಲ, ಏಕೆಂದರೆ ಇವುಗಳು ತಮ್ಮ ಪರಿಸರದಲ್ಲಿ ಸಾಕಷ್ಟು ನೀರನ್ನು ಹೊಂದಿರುತ್ತವೆ. ಇದರರ್ಥ ಸಸ್ಯವು ಉತ್ಸರ್ಜನವನ್ನು ನಿಯಂತ್ರಿಸುವ ಕಡಿಮೆ ಅಗತ್ಯ ಹೊಂದಿರುತ್ತವೆ.(ವಾಸ್ತವವಾಗಿ, ಉತ್ಸರ್ಜನದ ನಿಯಂತ್ರಣದಲ್ಲಿ ಭಾಗಿಯಾದ ಸಂಭಾವ್ಯ ಪ್ರಯೋಜನಗಳಿಗಿಂತ ಹೆಚ್ಚಾಗಿ, ಅಧಿಕ ಶಕ್ತಿಯ ಅಗತ್ಯವಿರುತ್ತದೆ).

ಜಲಸಸ್ಯಗಳ ವೈಶಿಷ್ಟ್ಯಗಳು:[ಬದಲಾಯಿಸಿ]

ಒಂದು ತೆಳುವಾದ ಹೊರಪೊರೆ. ಹೊರಪೊರೆಗಳು ಪ್ರಾಥಮಿಕವಾಗಿ ನೀರಿನ ನಷ್ಟಕ್ಕೆ ಅಡ್ಡಿಪಡಿಸುತ್ತವೆ; ಈ ರೀತಿಯಾಗಿ ಹೆಚ್ಚಿನ ಜಲಸಸ್ಯಗಳಿಗೆ ಯಾವುದೇ ಹೊರಪೊರೆಗಳ ಅಗತ್ಯವಿರುವುದಿಲ್ಲ.

ನೀರಿನ ಸಮೃದ್ಧತೆಯಿಂದ ಹೆಚ್ಚಿನ ಸಮಯ ತೆರೆದುಕೊಂಡಂತೆ ಇರುವ ಎಲೆಯ ಹೊರತೊಗಟೆ ಹಾಗು ಈ ರೀತಿಯಾಗಿ ಸಸ್ಯದೊಳಗೆ ಉಳಿಯಬೇಕಾದ ಯಾವುದೇ ಅಗತ್ಯವಿರುವುದಿಲ್ಲ. ಇದರರ್ಥ ಎಲೆಯ ಹೊರತೊಗಟೆಯನ್ನು ರಕ್ಷಿಸುವ ಕೋಶಗಳು ಸಾಧಾರಣವಾಗಿ ನಿಷ್ಕ್ರಿಯವಾಗಿರುತ್ತವೆ.

ಎಲೆಯ ಹೊರತೊಗಟೆಯಲ್ಲಿ ಹೆಚ್ಚಿನ ಸಂಖ್ಯೆಯು, ಎಲೆಯ ಎರಡೂ ಬದಿಗಳಲ್ಲಿ ಇರಬಹುದು.

ಕಡಿಮೆ ಗಡಸುತನ ಹೊಂದಿರುವ ವಿನ್ಯಾಸ: ನೀರಿನ ಒತ್ತಡವು ಅವುಗಳಿಗೆ ಸಹಕಾರಿಯಾಗಿದೆ.

ತೇಲಲು ಮೇಲ್ಮೈ ಸಸ್ಯಗಳ ಮೇಲೆ ಚಪ್ಪಟೆಯಾದ ಎಲೆಗಳು.

ತೇಲಿಕೆಗಾಗಿ ಗಾಳಿ ಚೀಲಗಳು.

ಸಣ್ಣದಾದ ಬೇರುಗಳು: ನೇರವಾಗಿ ನೀರು ಎಲೆಗಳಿಗೆ ಹರಡುತ್ತವೆ .

ಗರಿ ತುಂಬಿದ ಬೇರುಗಳು: ಸಸ್ಯಕ್ಕೆ ಆಧಾರ ನೀಡುವ ಅಗತ್ಯವಿರುವುದಿಲ್ಲ.

ವಿಶೇಷವಾದ ಬೇರುಗಳು ಆಮ್ಲಜನಕ ಹೀರಿಕೊಳ್ಳುವಲ್ಲಿ ಸಮರ್ಥವಾಗಿರುತ್ತವೆ.

ಉದಾಹರಣೆಗೆ, ಕಾಕಪಾದದ(ಹಳದಿ ಹೂ ಬಿಡುವ ಒಂದು ಸಸ್ಯ)ಕೆಲವು ಜಾತಿಗಳು(ಕುಲ ರಾನುನ್ಕುಲಸ್ ) ನೀರಿನಲ್ಲಿ ಸ್ವಲ್ಪಮಟ್ಟಿಗೆ ಮುಳುಗಿ ಮೇಲಕ್ಕೆ ತೇಲುತ್ತವೆ; ಕೇವಲ ಹೂಗಳು ಮಾತ್ರ ನೀರಿನಿಂದ ಮೇಲಕ್ಕೆ ಕಂಡು ಬರುತ್ತವೆ. ಅವುಗಳ ಎಲೆಗಳು ಹಾಗು ಬೇರುಗಳು ಉದ್ದವಾಗಿರುವುದರ ಜೊತೆಗೆ ತೆಳುವಾಗಿರುತ್ತವೆ. ಅಲ್ಲದೇ ಇವು ರೋಮದ ಮಾದರಿಯಲ್ಲಿ ಕಂಡುಬರುತ್ತವೆ; ತಾನಿರುವ ಪ್ರದೇಶದಲ್ಲಿ ವಿಶಾಲವಾಗಿ ಹರಡಲು ಸಸ್ಯ ರಾಶಿಗೆ ಸಹಕಾರಿಯಾಗಿವೆ; ಇದು ಸಸ್ಯವನ್ನು ಹೆಚ್ಚು ಪ್ಲಾವಕಶೀಲವನ್ನಾಗಿ ಮಾಡುತ್ತದೆ. ಉದ್ದನೆಯ ಬೇರುಗಳು ಹಾಗು ತೆಳುವಾದ ಎಲೆಗಳು, ಖನಿಜ ದ್ರಾವ್ಯಗಳು ಹಾಗು ಆಮ್ಲಜನಕ ಹೀರಲು ದೊಡ್ಡದಾದ ಮೇಲ್ಮೈ ಜಾಗ ಒದಗಿಸುತ್ತವೆ.[೨]

ನೀರ ಹೂಗಿಡಗಳಲ್ಲಿರುವ(ಕುಲ ನಿಮ್ಫೆಸಿಯೆ) ಅಗಲ, ಚಪ್ಪಟೆಯಾದ ಎಲೆಗಳು, ದೊಡ್ಡ ಪ್ರದೇಶದಲ್ಲಿ ಅವುಗಳ ಗಾತ್ರ, ತೂಕವನ್ನು ಎಲ್ಲೆಡೆ ಹರಡುವಲ್ಲಿ ಸಹಕಾರಿಯಾಗಿವೆ. ಈ ರೀತಿಯಾಗಿ ಸಸ್ಯವು ಮೇಲ್ಭಾಗದಲ್ಲಿ ತೇಲಲು ಸಹಾಯ ಮಾಡುತ್ತವೆ.

ಮೀನನ್ನು ಸಾಕುವ ಹಲವರು, ಉಪಾಪಚಯಚವನ್ನು ತೆಗೆದುಹಾಕುವ ಮೂಲಕ ತೇಲುಸಸ್ಯ ಹಾಗು ಪಾಚಿಯನ್ನು ನಿಯಂತ್ರಿಸಲು ಮೀನಿನ ತೊಟ್ಟಿಯಲ್ಲಿ ಜಲವಾಸಿ ಸಸ್ಯಗಳನ್ನು ಇರಿಸುತ್ತಾರೆ.

ಜಲವಾಸಿ ಸಸ್ಯದ ಹಲವು ಜಾತಿಗಳು ಆಕ್ರಮಣಶೀಲ ಜಾತಿಗಳಾಗಿವೆ. ಜಲವಾಸಿ ಸಸ್ಯಗಳು ವಿಶೇಷವಾಗಿ ಉತ್ತಮ ಕಳೆ ಎನಿಸಿವೆ, ಏಕೆಂದರೆ ಇವುಗಳು ಅವಶೇಷಗಳಿಂದ ಸಸ್ಯಕವಾಗಿ ಪುನರುತ್ಪಾದಿಸುತ್ತವೆ.

ಅಂಗಾಂಶ ರಚನೆ[ಬದಲಾಯಿಸಿ]

ಕೆಲವು ಜಲಸಸ್ಯಗಳಲ್ಲಿ ಏರೆಂಕಿಮ ಅಂಗಾಂಶ ಅಲ್ಪ ಮೊತ್ತದಲ್ಲಿರುವುದರಿಂದ ಇದನ್ನು ಸಮತೂಗಿಸಲು ತೆಳುವಾದ ಕೋಶಭಿತ್ತಿಗಳಿಂದ ರಚಿತವಾದ ವಪೆಗಳೆಂಬ ರಚನೆಗಳಿವೆ (ಉದಾ: ಪಾಂಟಿಡೇರಿಯ, ಪೊಟಮೊಜೆಟಾನ್, ಸ್ಯಾಜಿಟೇರಿಯ). ಇವು ವಾಯುಕುಳಿಗಳನ್ನು ಛೇದಿಸಿ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುತ್ತವೆ. ವಪೆಗಳು ಸಾಮಾನ್ಯವಾಗಿ ನೀರಿನಲ್ಲಿ ಮುಳುಗಿರುವ ಸಸ್ಯಭಾಗದ ಗಿಣ್ಣುಗಳಲ್ಲಿ ಹಾಗೂ ಎಲೆಗಳ ತೊಟ್ಟುಗಳಲ್ಲೂ ಇತರ ಜಲವಾಸಿ ಏಕದಳ ಸಸ್ಯಗಳಲ್ಲೂ ನೋಡಬಹುದು.[೩]

ವಾಯುಕುಳಿ ಮತ್ತು ಬೇರಿನ ರಚನೆ[ಬದಲಾಯಿಸಿ]

ಜಲಸಸ್ಯಗಳು ನಿರಂತರವಾಗಿ ನೀರಿನ ಸಂಪರ್ಕದಲ್ಲಿರುವುದರಿಂದ ನೀರನ್ನು ಹೀರುವ ಅಂಗಗಳಾದ ಬೇರುಗಳು ಚೆನ್ನಾಗಿ ರೂಪುಗೊಂಡಿಲ್ಲ. ಬೇರು ಸಾಮಾನ್ಯವಾಗಿ ಚಿಕ್ಕವಾಗಿದ್ದು ಅಲ್ಪಪ್ರಮಾಣದಲ್ಲಿ ಕವಲೊಡೆದಿರುತ್ತವೆ. ಕೆಲವು ವೇಳೆ ಇರುವುದೇ ಇಲ್ಲ. ಸೆರಟೊಫಿಲಂ ಎಂಬ ಸಸ್ಯದಲ್ಲಿ ಬೇರು ರೋಮಗಳು ಸಂಪೂರ್ಣವಾಗಿ ನಶಿಸಿಹೋಗಿವೆ. ಜಸ್ಸಿಯದಲ್ಲಿ ಸಾಮಾನ್ಯವಾಗಿ ಬೆಳೆಯುವ ಬೇರುಗಳಲ್ಲದೆ ಗಿಣ್ಣುಗಳಿಂದ ಸ್ಪಂಜಿನಂಥ ಬೇರುಗಳು ಮೇಲ್ಮಖವಾಗಿ ಬೆಳೆಯುವುದನ್ನು ಕಾಣಬಹುದು. ಜಲಸಸ್ಯಗಳಲ್ಲಿ ದೇಹದ ಒಂದಿಲ್ಲೊಂದು ಭಾಗದಲ್ಲಿ ಕಾಣಬರುವ ವಾಯುಕುಳಿಗಳ ರೂಪುಗೊಳ್ಳುವಿಕೆ ಅನುವಂಶಿಕ ನಿಯಂತ್ರಣಕ್ಕೊಳಗಾಗಿದೆ ಎಂದು ಭಾವಿಸಲಾಗಿದೆ. ವಾಯುಕುಳಿಗಳು ನಿರ್ದಿಷ್ಟ ಸಂಖ್ಯೆಯಲ್ಲಿರುವುದರಿಂದ ಈ ಗುಣವನ್ನು ಒಂದೇ ಜಾತಿಯ ಸಸ್ಯಗಳ ಪ್ರಭೇದಗಳನ್ನು ಗುರುತಿಸಲು ಬಳಸಿಕೊಳ್ಳಲಾಗಿದೆ.ಸೈಪರಸ್, ಟೈಫ ಮೊದಲಾದ ಸಸ್ಯಗಳಲ್ಲಿ ನಿರ್ದಿಷ್ಟ ಋತುಗಳಲ್ಲಿ ಪ್ರಕಂದಗಳು ವಿಶಾಲವಾಗಿ ಹರಡಿಕೊಂಡು ಬೆಳೆಯುತ್ತವೆ. ವ್ಯಾಲಿಸ್ನೇರಿಯ, ಐಸೋಯಿಟೇಸ್ ಮತ್ತು ಅಪೊನೊಜೆಟಾನ್‍ಗಳಲ್ಲಿ ಬೇರಿನ ಬುಡ ದಪ್ಪವಾಗಿದೆ. ಐಕಾರ್ನಿಯ, ಪಿಸ್ಟಿಯ ಮೊದಲಾದ ತೇಲುವ ಜಲಸಸ್ಯಗಳಲ್ಲಿ ತಂತು ಬೇರುಗಳು ವಿಪುಲವಾಗಿ ಬೆಳೆದಿವೆ. ಗಿಡಗಳು ಭೂಮಿಯಲ್ಲಿ ಗಟ್ಟಿಯಾಗಿ ನಿಲ್ಲಲು ಇವು ಉಪಯೋಗವಾಗದಿದ್ದರೂ ಮೇಲ್ಭಾಗದಲ್ಲಿ ಗುಂಪಾಗಿ ಬೆಳೆದಿರುವ ಎಲೆಗಳಿಗೆ ಸ್ಥಿತಿ ಸ್ಥಾಪಕತೆಯನ್ನು ಕೊಡುತ್ತವೆ. ಈ ಬೇರುಗಳ ಎಪಿಡರ್ಮಿಸಿನಲ್ಲಿ ಕೆಲವೊಮ್ಮೆ ಕ್ಲೋರೋಫಿಲ್ ಇರುವುದರಿಂದ ಅಲ್ಪ ಮೊತ್ತದಲ್ಲಿ ಆಹಾರವೂ ತಯಾರಾಗುತ್ತದೆ. ಸೆರಟಾಪ್ಪರಿಸ್ ಗಿಡದಲ್ಲಿ ಬೇರುಗಳು ಬಹುವಾಗಿ ಕವಲೊಡೆದಿವೆ. ಮತ್ತೆ ಕೆಲವು ಜಲಸಸ್ಯಗಳಲ್ಲಿ ಬೇರುರೋಮಗಳು ಸಮೃದ್ಧವಾಗಿ ಬೆಳೆದಿರುವುದುಂಟು.[೪]

ಎಲೆಗಳ ರಚನೆ[ಬದಲಾಯಿಸಿ]

ಹೆಚ್ಚು ಆಳವಿಲ್ಲದ ನೀರಿನಲ್ಲಿ ಬೆಳೆಯುವ ಜಲಸಸ್ಯಗಳ ಎಲೆಗಳಲ್ಲಿ ದ್ವಿರೂಪತೆ ಕಂಡುಬರುತ್ತದೆ. ಅಂದರೆ ನೀರಿನಲ್ಲಿ ಮುಳುಗಿರುವ ಎಲೆಗಳು ನೀರಿನ ಮೇಲೆ ಬೆಳೆಯುವ ಎಲೆಗಳಿಂಗಿಂತ ಭಿನ್ನವಾಗಿರುತ್ತವೆ. ಲಿಮ್ನೊಫಿಲ ಹೆಟರೋಫಿಲ್ಲ, ಸ್ಯಾಜಿಟೇರಿಯ ಮೊದಲಾದ ಸಸ್ಯಗಳಲ್ಲಿ ಈ ರೀತಿಯ ಎಲೆಗಳನ್ನು ಕಾಣಬಹುದು. ನೀರಿನಲ್ಲಿ ಮುಳುಗಿರುವ ಎಲೆಗಳು ಅತಿ ಸೂಕ್ಷ್ಮವಾಗಿ ವಿಚ್ಛೇದಿಸಲ್ಪಟ್ಟಿದ್ದು ನೀರಿನ ಮೇಲ್ಭಾಗದ ಎಲೆಗಳು ಅಖಂಡವಾಗಿರುತ್ತವೆ. ಈ ಲಕ್ಷಣಕ್ಕೆ ಅಸಮಪತ್ರ ರೂಪತೆ (ಹೆಟರೊಫಿಲಿ) ಎಂದು ಹೆಸರು. ಇದು ಸುತ್ತಲ ಪರಿಸರ, ವಾತಾವರಣದ ಉಷ್ಣತೆ ಮತ್ತು ಆದ್ರ್ರತೆಗಳನ್ನು ಅವಲಂಬಿಸಿರುತ್ತದೆ.

ಕೆಲವು ಜಲಸಸ್ಯಗಳಲ್ಲಿ ಪ್ರಾರಂಭದಲ್ಲಿ ಮೂಡುವ ಎಲೆಗಳು ನಂತರ ಹುಟ್ಟುವ ಎಲೆಗಳಿಗಿಂತ ತೀರ ಭಿನ್ನವಾಗಿರುತ್ತವೆ. ಇದರಲ್ಲಿ ಸುತ್ತಲ ಪರಿಸರ ಯಾವ ಪರಿಣಾಮವನ್ನೂ ಬೀರುವುದಿಲ್ಲ. ಈ ಗುಣಕ್ಕೆ ಹೆಟಿರೊಬ್ಲಾಸ್ಟಿಕ್ ಎಂದು ಹೆಸರು. ಉದಾಹರಣೆಗಾಗಿ ಸ್ಯಾಜಿಟೇರಿಯ ಸ್ಯಾಜಿಟಿಫೋಲಿಯ ಪ್ರಭೇದದಲ್ಲಿ ಆರಂಭದ ಎಳಸಾದ ಎಲೆಗಳು ಛಿದ್ರವಾಗಿ ಇಲ್ಲವೇ ನೀಳವಾಗಿದ್ದು ನೀರಿನಲ್ಲಿ ಮುಳುಗಿರುತ್ತವೆ. ಆದರೆ ಅನಂತರ ಹುಟ್ಟಿದ ಎಲೆಗಳು ನೀರಿನ ಮೇಲ್ಮೈ ಮೇಲೆ ತೇಲಾಡುವುವು ಇಲ್ಲವೆ ನೀರಿನಿಂದ ಮೇಲಕ್ಕೆ ಚಾಚಿ ಬೆಳೆಯುವುವು. ನೀರಿನಲ್ಲಿ ಮುಳುಗಿರುವ ಕಿರಿದಾದ ಛಿದ್ರವಾಗಿರುವ ಎಲೆಗಳು ನೀರಿನ ಪ್ರವಾಹವನ್ನು ಸಮರ್ಥವಾಗಿ ಎದುರಿಸಬಲ್ಲವು. ಅಖಂಡವಾದ ಹಾಗೂ ಅಗಲವಾದ ಎಲೆಗಳಿದ್ದರೆ ನೀರಿನ ಸೆಳೆತ ಮತ್ತು ಒತ್ತೆಗಳಿಗೆ ಗುರಿಯಾಗಿ ಇಡೀ ಸಸ್ಯವೇ ಅಪಾಯಕ್ಕೊಳಗಾಗುತ್ತಿತ್ತು. ಇದೇ ರೀತಿಯ ಕಾರಣಕ್ಕಾಗಿ ಐಕಾರ್ನಿಯದ ಎಲೆಗಳ ಅಂಚುಗಳಲ್ಲಿ ಆಧಾರ ಅಂಗಾಂಶಗಳುಂಟು. ತಾವರೆ ಗಿಡದಲ್ಲಿ ಎಲೆಗಳು ನೀರಿನ ಮೇಲೆ ತೇಲುವಂತೆ ಮಾಡಲು ಅವುಗಳ ತೊಟ್ಟುಗಳು ಬಹಳ ಉದ್ದ ಇವೆ. [೫]

ಪತ್ರ ಕಂದ(ಬಲ್ಬಿಲ್ಸ್)ಗಳ ರಚನೆ[ಬದಲಾಯಿಸಿ]

ಅಪೊನೊಜೆಟಾನ್ ಮತ್ತು ಅಲಿಸ್ಮೇಸೀ ಕುಟುಂಬದ ಸಸ್ಯಗಳಲ್ಲಿ ಮಿಥ್ಯಾ ವೈವಿಪರಿ ಕಂಡುಬರುತ್ತದೆ. ಇವುಗಳ ಹೂಗೊಂಚಲಿನಲ್ಲಿ ಹೂಗಳ ಬದಲಾಗಿ ಪತ್ರ ಕಂದಗಳು (ಬಲ್ಬಿಲ್ಸ್) ಎಂಬ ರಚನೆಗಳು ಉತ್ಪತ್ತಿಯಾಗುತ್ತವೆ. ಅಮೆರಿಕದ ಕೆಲವು ಐಕಾರ್ನಿಯ ಗಿಡಗಳ ಹೂಗೊಂಚಲಿನಲ್ಲಿ ಹೂಗಳ ಸ್ಥಾನದಲ್ಲಿ ಚಿಕ್ಕ ಚಿಕ್ಕ ಗಿಡಗಳು ರೂಪುಗೊಳ್ಳುತ್ತವೆ. ಕಾಲಾನಂತರದಲ್ಲಿ ಇವು ಗಿಡಗಳಿಂದ ಬೇರ್ಪಟ್ಟು ಸ್ವತಂತ್ರ ಗಿಡಗಳಾಗಿ ಬೆಳೆಯುತ್ತವೆ. ಹಲವು ಜಲಸಸ್ಯಗಳ ಎಲೆಗಳಲ್ಲಿ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ವರ್ಧನ ಅಂಗಾಂಶದ ಚಟುವಟಿಕೆಯಿಂದ ಜೆಮ ಎಂಬ ವಿಶೇಷ ರೀತಿಯ ಮೊಗ್ಗುಗಳು ರೂಪುಗೊಳ್ಳುತ್ತವೆ. ಇವು ಕೂಡ ಗಿಡಗಳಿಂದ ಬೇರೆಯಾಗಿ ಸ್ವತಂತ್ರ ಸಸ್ಯಗಳಾಗಿ ಬೆಳೆಯತೊಡಗುತ್ತವೆ.[೬]

ರೂಪಾಂತರಗಳು(ಅಳವಡಿಕೆಗಳು)[ಬದಲಾಯಿಸಿ]

 • ಪ್ಲಾವಕ ಸಸ್ಯಗಳು: ನೀರಿರುವ ಹೊರಾಂಗಣ ಪ್ರದೇಶದಲ್ಲಿ, ಇವುಗಳು ಮುಳುಗುವ ಸಸ್ಯಗಳಿಗಿಂತ ಹೆಚ್ಚಿನ ಸೂರ್ಯರಷ್ಮಿ ಪಡೆಯುತ್ತವೆ. ಸೂರ್ಯನ ಕಿರಣಕ್ಕಾಗಿ ಇವುಗಳು ಒಂದರ ಜೊತೆಗೆ ಮತ್ತೊಂದು ಅಪರೂಪವೆಂಬಂತೆ ಪೈಪೋಟಿ ನಡೆಸುತ್ತವೆ.
 • ಮುಳುಗುವ ಸಸ್ಯಗಳು: ಮುಳುಗುವ ಸಸ್ಯಗಳ ಎಲೆಗಳು ಕಡಿಮೆ ಮಟ್ಟದ ಸೂರ್ಯನ ಕಿರಣವನ್ನು ಪಡೆಯುತ್ತವೆ. ಏಕೆಂದರೆ ನೀರಿನ ಭಾಗದ ಮೂಲಕ ಹಾದು ಹೋಗುವಾಗ ಬೆಳಕಿನ ಶಕ್ತಿಯು ಕುಗ್ಗುತ್ತದೆ.

ಎಲ್ಲ ಪ್ಲಾವಕ ಸಸ್ಯಗಳು

 • ಇವುಗಳಿಗೆ ಬೇರಿನಲ್ಲಿರುವ ವಾಯುಪ್ರದೇಶವನ್ನು ತಡೆಯುತ್ತದೆ, ಅಥವಾ ಅವುಗಳ ಒಡಲಿನಲ್ಲಿರುವ(ಯೇರೆನ್ಕೈಮ) ವಾಯುಪ್ರದೇಶವು ಅವುಗಳು ತೇಲಲು ಸಹಾಯ ಮಾಡುತ್ತದೆ. ಈ ರೀತಿಯಾಗಿ ಸಾಕಷ್ಟು ಪ್ರಮಾಣದ ಸೂರ್ಯನ ಕಿರಣವು ಸಸ್ಯಕ್ಕೆ ಲಭ್ಯವಾಗುತ್ತದೆ
 • ಗಾಳಿಗೆ ತಡೆಯೊಡ್ಡುವ ಎಳೆಯಂತಹ ಅಂಗಾಂಶವು ಅವುಗಳ ಎಲೆಗಳ ಮೇಲಿರುತ್ತವೆ
 • ರಾಚನಿಕ ಅಳವಡಿಕೆಗಳು

ಬಾತುಕಳೆ, ನೀರಿನಲ್ಲಿ ಬೆಳೆಯುವ ಎಲೆಕೋಸು

 • ಎಲೆಗಳ ಮೇಲ್ಭಾಗದಲ್ಲಿ ಕ್ಲೋರೋಪ್ಲ್ಯಾಸ್ಟ್ ಕಂಡುಬರುತ್ತದೆ.
 • ಮೇಲ್ಭಾಗವು ದಪ್ಪನಾಗಿದ್ದು, ಮೇಣದಂತಹ ಹೊರಪೊರೆಯು ನೀರನ್ನು ನಿರೋಧಿಸುವುದರ ಜೊತೆಗೆ ಎಲೆಯ ಹೊರತೊಗಟೆಯನ್ನು ಮುಕ್ತವಾಗಿ ಹಾಗು ನಿರ್ಮಲವಾಗಿರಿಸುತ್ತದೆ.
 • ರಾಚನಿಕ ಅಳವಡಿಕೆ
 • ಸಣ್ಣದಾಗಿ ತೆಳುವಾಗಿರುತ್ತದೆ

ನೀರ ಹೂಗಿಡ

 • ರಾಚನಿಕ ಪದಾರ್ಥವು ಅಧಿಕ ಮಟ್ಟ ತಲುಪಿ ಹೆಚ್ಚಿನ ಸೂರ್ಯನ ಕಿರಣವನ್ನು ಪಡೆಯುತ್ತವೆ.
 • ರಾಚನಿಕ ಅಳವಡಿಕೆ

ಫ್ಲೋಟಿಂಗ್ ಹಾರ್ಟ್,(ನೀರ ಮೇಲೆ ತೇಲುವ ಹಳದಿ ಹೂ) ನೀರ ಹೂಗಿಡ, ತಾವರೆ, ಎಲ್ಲೋ ಪಾಂಡ್ ಲಿಲಿ, ವಾಟರ್ ಶೀಲ್ಡ್

 • ಯಾವುದೇ ಪ್ರಮುಖ ಭಾರವನ್ನು ಹೊಂದಿರದ ಈ ಎಲೆಗಳು ಅಗಲವಾಗಿರುತ್ತವೆ, ನೀರಿನ ಮೇಲ್ಮೈಯಲ್ಲಿ ಸಪಾಟಾಗಿ ಉಳಿಯಲು, ಅವುಗಳ ಮೇಲ್ಮೈ ವರ್ಧಿಸಲು, ಹಾಗು ಎಷ್ಟು ಸಾಧ್ಯವೋ ಅಷ್ಟು ಸೂರ್ಯನ ಕಿರಣವನ್ನು ಬಳಸಿಕೊಳ್ಳುವುದು. ಅವುಗಳ ಕ್ಲೋರೋಪ್ಲ್ಯಾಸ್ಟ್ ಗಳು, ಅವುಗಳ ಎಲೆಗಳ ಮೇಲೆ ಕಂಡುಬರುತ್ತವೆ.
 • ರಾಚನಿಕ/ನಡವಳಿಕೆಯ ಅಳವಡಿಕೆಗಳು [೭]

ಭಾಗಶಃ ಹೆಚ್ಚಾಗಿ ಮುಳುಗಿದಂತೆ ಕಂಡುಬರುವ ("ಹೊರಹೊಮ್ಮುವ") ಸಸ್ಯಗಳು

 • ಅವುಗಳ ಅಂಗಾಂಶದೊಳಗಿರುವ ವಾಯುಪ್ರದೇಶವು ಅವುಗಳನ್ನು ಪ್ಲಾವಕಶೀಲವನ್ನಾಗಿ ಮಾಡುತ್ತವೆ, ಇದರಿಂದ ಇವುಗಳ ಎಲೆಗಳು ನೀರಿನ ಮೇಲ್ಭಾಗಕ್ಕೆ ತಲುಪಿ, ಸಾಕಷ್ಟು ಪ್ರಮಾಣದ ಸೂರ್ಯನ ಕಿರಣವನ್ನು ಪಡೆಯಬಹುದು.
 • ರಾಚನಿಕ ಅಳವಡಿಕೆ

ಛೇದಿಸಿದ: ಪ್ಯಾರೆಟ್'ಸ್ ಫೆದರ್, (ಗಿಳಿಯ ಪುಕ್ಕ ಹೋಲುವ,ಗರಿ ಎಲೆ)ಹಾರ್ನ್ ವರ್ಟ್(ಕವಲೆಲೆಗಳಲ್ಲ, ಗಡಸು ನೀರಿನಲ್ಲಿ ಬೆಳೆಯುವ ಒಂದು ಸಸ್ಯ)
ದಾರದ ಮಾದರಿ: ಡಿಚ್ ಗ್ರಾಸ್, ಕ್ವಿಲ್ ವರ್ಟ್

 • ಹೆಚ್ಚಾಗಿ ಅಂಗಛೇದನಗೊಂಡಿರುವ/ಬೇರ್ಪಟ್ಟ ಎಲೆಗಳು ಅಥವಾ ದಾರದ ಮಾದರಿ ಸಸ್ಯಗಳು, ದೊಡ್ಡದಾದ ಮೇಲ್ಮೈ ಜಾಗಕ್ಕೆ ಅವಕಾಶ ನೀಡುತ್ತವೆ.(ಗಾತ್ರದ ನಿಷ್ಪತ್ತಿಗೆ ಮೇಲ್ಮೈ)
 • ರಾಚನಿಕ ಅಳವಡಿಕೆ

ಹೈಡ್ರಿಲ್ಲಾ

 • ಅವುಗಳ ತೆಳು, ಉದ್ದ, ಚೂಪಾಗಿರುವ ಆಕಾರದಿಂದಾಗಿ ನೀರು ಮೇಲ್ಮೈಯನ್ನು ಶೀಘ್ರವಾಗಿ ತಲುಪಿ ನೀರಿನ ಮೇಲ್ಭಾಗದಲ್ಲಿ ಹರಡಿಕೊಳ್ಳುತ್ತವೆ;ಇವು ನೀರಿನ ತಳದಲ್ಲಿ ಹೆಚ್ಚಿನ ಬೆಳಕನ್ನು ಪಡೆಯಬಹುದು.[೮]
 • ರಾಚನಿಕ/ನಡವಳಿಕೆಯ ಹೊಂದಾಣಿಕೆ
 • ಊತಕ ನಾಳಗಳು ಇರುವುದಿಲ್ಲ

ಮಾನವನಿಗೆ ಪೌಷ್ಟಿಕಾಂಶವಾಗಿ[ಬದಲಾಯಿಸಿ]

ಹಲವು ಜಲವಾಸಿ ಸಸ್ಯಗಳನ್ನು ಮಾನವರು ಆಹಾರ ಮೂಲವಾಗಿ ಬಳಕೆಮಾಡುತ್ತಾರೆ. ವಿಶೇಷವಾಗಿ(ಆಗ್ನೇಯ)ಏಶಿಯದಲ್ಲಿ ತಿನ್ನಲು ಯೋಗ್ಯವಾದ ಆದರೆ ಬೇಯಿಸದ ಜಲಸಸ್ಯಗಳನ್ನು ಎಚ್ಚರಿದಿಂದ ಸೇವಿಸಬೇಕಾಗುತ್ತದೆ.ಇಲ್ಲವಾದರೆ ಫಾಸ್ಸಿಯೋಲೋಪ್ಸಿಯಾಸಿರೋಗ ಹರಡುವ ಸಂಭವ ಜಾಸ್ತಿ.ಇದನ್ನು ಇಲ್ಲಿ ಗಮನಿಸಬೇಕು.[೯] ಫ್ಯಾಸಿಯೋಲ ಹೆಪಾಟಿಕ ವನ್ನೂ ಸಹ ನೋಡಿ.(ಇದು ಜಠರದ ಕಾಯಿಲೆಗೆ ಕಾರಣವಾಗುವ ಹುಳುವಿನ ತಾಣವಿರಬಹುದು)

 • ಕಾಡು ಭತ್ತ (ಜಿಜಾನಿಯ )
 • ನೀರಿನ ಸಣ್ಣನೆಗ್ಗಿಲು (ಟ್ರಾಪ ನಟನ್ಸ್ )
 • ನೀರಿನಲ್ಲಿ ದೊರೆಯುವ ಚೈನೀಸ್ ಚೆಸ್ಟ್ ನಟ್ (ಎಲೆಯೋಚಾರಿಸ್ ದಲ್ಸಿಸ್ )
 • ಭಾರತೀಯ ತಾವರೆ (ನೆಲುಂಬೊ ನುಸಿಫೆರ )
 • ನೀರಿನಲ್ಲಿ ಬಿಡುವ ಸ್ಪಿನಾಚ್ (ಇಪೋಮೊಯೆಯ ಆಕ್ವಾಟಿಕ )
 • ಜಲಸಸ್ಯ (ರೋರಿಪ್ಪ ನಾಸ್ಟ್ರುಟಿಯಂ-ಆಕ್ವಾಟಿಕಂ )
 • ವಾಟರ್ ಮಿಮೊಸೆ, ವಾಟರ್ ಮಿಮೊಸ ? (ನೆಪ್ಚೂನಿಯ ನಟನ್ಸ್ )
 • ಟರೋ (ಕಾಲೋಕಾಸಿಯ ಎಸ್ಕ್ಯುಲೆಂಟ ' )
 • ಅಕ್ಕಿ (ಓರ್ಯ್ಜ ) ಎಂಬುದು ಮೂಲತಃ ಒಂದು ಜಲಸಸ್ಯವಲ್ಲ.
 • ಬುಲ್ ರಷ್, ಕ್ಯಾಟ್ಟೈಲ್, (ಟೈಪ್ಹ )
 • ವಾಟರ್-ಪೆಪ್ಪರ್ (ಪಾಲಿಗೋನಂ ಹೈಡ್ರೋಪೈಪರ್ )
 • ವಸಾಬಿ (ವಸಾಬಿಯ ಜಪೋನಿಕಾ )
 • ಕ್ಜೋಸ್ಕೋ? ಫಾಸ್ಸಿಯೋಲೋಪ್ಸಿಯಾಸಿಯನ್ನೂ ಸಹ ನೋಡಿ
 • ಟೊಟೋರ (ಸ್ಕಿರ್ಪಸ್ ಕ್ಯಾಲಿಫಾರ್ನಿಕಾಸ್ )?

ಪ್ರಾಣಿಗಳಿಗೆ ಪೌಷ್ಟಿಕಾಂಶವಾಗಿ[ಬದಲಾಯಿಸಿ]

ಜಲಸಸ್ಯಗಳ ಕೆಲವು ಉದಾಹರಣೆಗಳು

 • ವಾಟರ್ ಹಯಸಿಂತ್ (ಇಚ್ಹೊರ್ನಿಯ )
 • ಬಾತುಕಳೆ: ಲೆಮ್ನ, ಸ್ಪೈರೋಡೆಲ ಹಾಗು ವೊಲ್ಫ್ಫಿಯ
 • ತ್ರಿಚಂಥೆರ ಗಿಗಂಟಾ [೧೦]

ಜಲಸಸ್ಯಗಳ ಕೆಲ ಉದಾಹರಣೆಗಳು[ಬದಲಾಯಿಸಿ]

 • ಹೆಚ್ಚಾಗಿ ಪಾಚಿಯಿಂದ ಕೂಡಿರುತ್ತವೆ, ಜೊತೆಗೆ ಎಲ್ಲ ಕಡಲಕಳೆ ಹಾಗು ಕಡಲುಚೇಣಿ
 • ಉಟ್ರಿಕ್ಯುಲಾರಿಯ (ಲ್ಯಾಟಿನ್ ನಿಂದ, ಉಟ್ರಿಕ್ಯೂಲಸ್ , ಒಂದು ಸಣ್ಣ ಚೀಲ ಅಥವಾ ಬಾಟಲ್) ಎಂಬುದು ಸಪೂರ ಜಲಸಸ್ಯಗಳ ಒಂದು ಜಾತಿ, ಇದರ ಎಲೆಗಳು ಪ್ಲಾವಕ ವಾಯು ಕೋಶಗಳನ್ನು ಹೊಂದಿರುತ್ತವೆ. ಇವುಗಳನ್ನು ಬ್ಲ್ಯಾಡರ್ ವರ್ಟ್ ಗಳೆಂದು ಕರೆಯಲಾಗುತ್ತದೆ.
 • ವಾಟರ್ ಲೆಟಿಸ್

ಇವನ್ನೂ ನೋಡಿ[ಬದಲಾಯಿಸಿ]

 • ಆಕ್ವಾ ಪ್ಲ್ಯಾಂಟ
 • ಆಕ್ವಾಸ್ಕೇಪಿಂಗ್
 • ಜಲವಾಸಿ ಪ್ರಾಣಿ
 • ಆಕ್ವಾಟಿಕ್ ಬಾಟನಿ
 • ಜೌಗು ಪ್ರದೇಶ
 • ಜಲವಾಸಿ ಸಸ್ಯಗಳ ವ್ಯಾಪಾರಿ ಉತ್ಪನ್ನ
 • ಹೆಲೋಫೈಟ್
 • ತಾಜಾನೀರಿನ ಅಕ್ವೇರಿಯಂ ಸಸ್ಯವರ್ಗಗಳ ಪಟ್ಟಿ
 • ಜವಳು ಪ್ರದೇಶ
 • ಭತ್ತದ ಗದ್ದೆ
 • ಲವಣಾಂಶದಿಂದ ಕೂಡಿದ ಜವಳು ಪ್ರದೇಶ
 • ಕಡಲಹುಲ್ಲು
 • ಜೌಗು ಪ್ರದೇಶದ ಅನಿಲ
 • ಮರುಸಸ್ಯ

ಟಿಪ್ಪಣಿಗಳು[ಬದಲಾಯಿಸಿ]

 1. https://kn.glosbe.com/kn/en/%E0%B2%9C%E0%B2%B2%E0%B2%B5%E0%B2%BE%E0%B2%B8%E0%B2%BF%20%E0%B2%B8%E0%B2%B8%E0%B3%8D%E0%B2%AF%E0%B2%97%E0%B2%B3%E0%B3%81
 2. https://sciencing.com/types-of-aquatic-plants-12003789.html
 3. https://link.springer.com/chapter/10.1007/978-94-009-3087-2_4
 4. https://www.encyclopedia.com/plants-and-animals/botany/botany-general/aquatic-plants
 5. "Aquatic Plants and Flowers". ProFlowers Blog. 18 May 2011. Retrieved 11 January 2020.
 6. Walck, Jeffrey L.; Cofer, M. Shea; Hidayati, Siti N. (December 2010). "Understanding the germination of bulbils from an ecological perspective: a case study on Chinese yam (Dioscorea polystachya)". Annals of Botany. pp. 945–955. doi:10.1093/aob/mcq189. Retrieved 11 January 2020.
 7. "ಲಾಲ್‌ಬಾಗ್‌ನಲ್ಲಿ 'ಸಂಕನ್‌ ಉದ್ಯಾನ'". Prajavani (in ಇಂಗ್ಲಿಷ್). 13 April 2017. Retrieved 11 January 2020.
 8. https://kannadaparyaya.blogspot.com/2016/03/history-today-08_8.html
 9. "ಫಾಸ್ಸಿಯೋಲೋಪ್ಸಿಯಾಸಿಸ್". Archived from the original on 2012-07-16. Retrieved 2010-11-03.
 10. ಟ್ರಿಚಂಥೆರ ಗಿಗನ್ಟೀ (ಹಂಬೋಲ್ಡ್ಟ್ & ಬೋಂಪ್ಲಂಡ್.) Archived 2008-08-28 ವೇಬ್ಯಾಕ್ ಮೆಷಿನ್ ನಲ್ಲಿ.ನೀಸ್: ಒಂದು ವಿಮರ್ಶೆ Archived 2008-08-28 ವೇಬ್ಯಾಕ್ ಮೆಷಿನ್ ನಲ್ಲಿ.

ಮೂಲ[ಬದಲಾಯಿಸಿ]

 • ಕುಕ್, C.D.K. (ಸಂಪಾದನೆ). 1974. ವಾಟರ್ ಪ್ಲ್ಯಾಂಟ್ಸ್ ಆಫ್ ದಿ ವರ್ಲ್ಡ್. Dr W ಜಂಕ್ ಪಬ್ಲಿಷರ್ಸ್, ದಿ ಹೇಗ್. ISBN 0-385-49062-3

ಬಾಹ್ಯ ಕೊಂಡಿಗಳು[ಬದಲಾಯಿಸಿ]