ಅರ್ಥಶಾಸ್ತ್ರ (ಶಾಸ್ತ್ರಗ್ರಂಥ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅರ್ಥಶಾಸ್ತ್ರ ರಾಜ್ಯತಂತ್ರ, ಆರ್ಥಿಕ ಕಾರ್ಯನೀತಿ ಮತ್ತು ಸೇನಾ ಕಾರ್ಯತಂತ್ರದ ಮೇಲಿನ ಒಂದು ಪ್ರಾಚೀನ ಭಾರತೀಯ ಶಾಸ್ತ್ರಗ್ರಂಥ ಮತ್ತು ಇದರ ಲೇಖಕ ಕೌಟಿಲ್ಯ. ಈತನಿಗೆ ವಿಷ್ಣುಗುಪ್ತ, ಚಾಣಕ್ಯ ಎಂಬ ಹೆಸರುಗಳೂ ಇವೆ. ಕೌಟಿಲ್ಯ ಮೌರ್ಯ ಸಾಮ್ರಾಜ್ಯದ ಸ್ಥಾಪಕ ಸಾಮ್ರಾಟ್ ಚಂದ್ರಗುಪ್ತ ಮೌರ್ಯನ ಗುರು ಹಾಗೂ ಪೋಷಕನಾಗಿದ್ದ. ಮೊದಲಿನದು ಲೇಖಕನ ಗೋತ್ರ, ಮತ್ತು ನಂತರದ್ದು ಅವನ ವೈಯಕ್ತಿಕ ಹೆಸರು ಎಂದು ಅನೇಕ ವಿದ್ವಾಂಸರು ನಂಬುತ್ತಾರೆ. ರಾಜ್ಯಾಡಳಿತ, ಆರ್ಥಿಕ ನೀತಿ, ಸೇನಾ ವ್ಯೂಹ ರಚನೆಯ ಕುರಿತ ನಾಲ್ಕನೇ ಶತಮಾನದ ಶಾಸ್ತ್ರಗ್ರಂಥ ಕೌಟಿಲ್ಯನ ಅರ್ಥಶಾಸ್ತ್ರ. ಶೀರ್ಷಿಕೆ "ಅರ್ಥಶಾಸ್ತ್ರ" ಸಾಮಾನ್ಯವಾಗಿ "ರಾಜಕೀಯ ವಿಜ್ಞಾನ" ಗೆ ಅನುವಾದಿಸಿದ್ದಾರೆ. ಇದರಲ್ಲಿ ಕೃಷಿ, ಮಿನರಾಲಜಿ, ಗಣಿಗಾರಿಕೆ ಮತ್ತು ಲೋಹಗಳ, ಪಶುಸಂಗೋಪನೆ, ಔಷಧ, ಅರಣ್ಯ ಹಾಗೂ ವನ್ಯಜೀವಿಗಳ ಪ್ರಾಚೀನ ಆರ್ಥಿಕ ಮತ್ತು ಸಾಂಸ್ಕೃತಿಕ ವಿವರಗಳನ್ನು ಒಳಗೊಂಡಿದೆ.