ವಿಷಯಕ್ಕೆ ಹೋಗು

ಕುಣಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕನ್ನಡ ಉತ್ಸವದಲ್ಲಿ ಸಾಂಸ್ಕೃತಿಕ ಡೊಳ್ಳು ಕುಣಿತ

ಮಾನವನ ಸ್ವಭಾವ, ಮಾತು ಬುದ್ಧಿಶಕ್ತಿ ಗಾಯನ ಇವುಗಳೆಲ್ಲ ಯಾವ ಕ್ರಮದಲ್ಲಿ ಬೆಳೆವಣಿಗೆಯಾದುವೆಂದು ಹೇಳುವುದು ಕಷ್ಟ. ಆದರೆ ಮಾತಿನ ಜೊತೆಯಲ್ಲಿ ಅಥವಾ ಮಾತುಗಳಿಗಿಂತಲೂ ಮುಂಚಿತವಾಗಿಯೇ, ರಾಗ ಹಾಡು ಗಾಯನಗಳಲ್ಲಿ ಅವನಿಗೆ ಅಭಿರುಚಿಯುಂಟಾಗಿರಬಹುದೆಂದು ಊಹಿಸಲು ಅವಕಾಶವಿದೆ. ಜನಪದ ವಾಙ್ಮಯ, ಸಂಸ್ಕೃತಿ ಮತ್ತು ಪರಂಪರೆಯಲ್ಲಿ ನಾದ ಗಾನ ತಾಳ ಲಯಗಳಿಗೆ ಪ್ರಧಾನಸ್ಥಾನ. ಗ್ರಾಮೀಣ ಜನತೆ, ಗುಡ್ಡಗಾಡಿನವರು ಆದಿವಾಸಿಗಳು ತಮ್ಮ ಭಾವನೆಗಳನ್ನು ಹಾಡುಗಬ್ಬಗಳು ತ್ರಿಪದಿಗಳು ಲಾವಣಿಗಳು ಕೋಲಾಟದ ಪದಗಳು ಮುಂತಾದ ಕಲಾವಿಧಾನದಿಂದಲೇ ಪ್ರಕಟಿಸುತ್ತಾರೆ. ಮಾತಿಗಿಂತ ಗಾಯನ ಯಾವಾಗಲೂ ಹೆಚ್ಚು ಮನೋಹರ ಮತ್ತು ಹೃದಯಂಗಮ. ಹಳ್ಳಿಗಾಡಿನ ಜನಕ್ಕೆ ಗಾಯನ ಸಂತೋಷವನ್ನು ಕೊಡುವ ವಸ್ತು ಮಾತ್ರವೇ ಅಲ್ಲ; ಅವರ ಕೆಲಸಗಳಲ್ಲಿ ಸಹಾಯಕವಾಗಿ ಅವರ ಕಾರ್ಯವನ್ನು ಸುಲಭ ಮಾಡುವ ಕಲೆಯೂ ಆಗಿದೆ. ರೈತರಂತೆ ಬಯಲಿನಲ್ಲಿ, ನದಿಯ ತೀರದಲ್ಲಿ, ಸದಾ ನೀರು ಹರಿಯುವ ನಾಲೆ ದಡದಲ್ಲಿ, ಹಸಿರು ಹೊಲಗದ್ದೆ ತೋಟಗಳಲ್ಲಿ ಕೆಲಸ ಮಾಡುವವರಿಗೆ, ಪ್ರಕೃತಿಯ ಚೈತನ್ಯ ಮತ್ತು ಉತ್ಸಾಹದಿಂದ, ಹಾಡು, ಬಾಯಿಂದ ತಾನೇ ತಾನಾಗಿ ಹೊರಡುತ್ತದೆ (ನೋಡಿ- ಕೆಲಸದ-ಹಾಡುಗಳು). ಯಾತದಿಂದ ನೀರೆತ್ತುವಾಗ, ಭಾರವೆಳೆವಾಗ, ದೊಡ್ಡ ದೊಡ್ಡ ದಿಮ್ಮಿಗಳನ್ನೂ ಕಲ್ಲುಚಪ್ಪಡಿಗಳನ್ನೂ ಸಾಗಿಸುವಾಗ, ಗಾಡಿ ಹೊಡೆಯುವಾಗ ಹೆಂಗಳೆಯರು ಹೊಲಗದ್ದೆಗಳಲ್ಲಿ ಕೆಲಸ ಮಾಡುವಾಗ, ರಾಗಿ ಬೀಸುವಾಗ ಜೊತೆಗೆ ಗಾಯನವಿದ್ದರೆ ಕೆಲಸದ ಆಯಾಸ ತೋರುವುದೇ ಇಲ್ಲ. ನಮ್ಮ ಜನಪದಕ್ಕಂತೂ ಸಂಗೀತ ಜೀವನದ ಸಂತತಸಖಿ. ಮದುವೆ ಸಾವು ಹಬ್ಬ ಹರಿದಿನ ಜಾತ್ರೆ ದೇವರ ಉತ್ಸವ ಯಾವುದಕ್ಕೂ ಸಂಗೀತ ಬೇಕೇ ಬೇಕು. ಯಕ್ಷಗಾನ, ಬಯಲಾಟ, ಬೊಂಬೆಯಾಟ ಇನ್ನೂ ಉಳಿದ ನಾನಾ ವಿಧಗಳಾದ ಜನಪದ ಆಟಗಳು ಮನೋರಂಜನೆ ಮುಂತಾದ ವಿನೋದಗಳು ಸಂಗೀತ ಮಯವಾಗಿಯೇ ಇರುತ್ತದೆ.[]

ಚರಿತ್ರೆ

ಕುಣಿತ ಸಾಂಪ್ರದಾಯಿಕ ನೃತ್ಯವಾಗಿದೆ. ಕುಣಿತ ಬೆಳೆದ ಧಾನ್ಯವನ್ನು ಒಕ್ಕುವ ಅಥವಾ ಧಾನ್ಯವನ್ನು ಮನೆ ತುಂಬಿಸಿಕೊಳ್ಳುವ ಸಂದರ್ಭದಲ್ಲಿ ರೈತಾಪಿವರ್ಗ ಮಾಡುವ ಸಂತೋಷದ ನೃತ್ಯ ಅಥವಾ ಕುಣಿತ. ಜಗತಿನಾದ್ಯಂತ ಇಂಥ ಆಚರಣೆ ಕಂಡುಬರುತ್ತದೆ. ಇಂಗ್ಲೆಂಡಿನ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಸುಗ್ಗಿಯ ಆಚರಣೆಗಳನ್ನು (ಹಾರ್ವೆಸ್ಟ್ ಹೋಮ್) ಉತ್ಸವಗಳು ಎಂದು ಕರೆಯುತ್ತಾರೆ. ಈ ಸಂದರ್ಭದಲ್ಲಿ ಕುಣಿತ ಪ್ರಮುಖವಾಗಿರುತ್ತದೆ. ಸ್ಕಾಟ್ಲೆಂಡಿನಲ್ಲಿ ಈ ಕುಣಿತವನ್ನು ಕೆರ್ನ್ ಎಂದು ಕರೆಯುತ್ತಾರೆ. ಬೆಳೆದ ದವಸ ಧಾನ್ಯಗಳನ್ನು ಮನೆಗೆ ತರುವ ಸಂದರ್ಭದಲ್ಲಿ ಕೊನೆಯ ಗಾಡಿಯಲ್ಲಿ ಸುಗ್ಗಿಯರಾಣಿ ಎಂದೇ ಕರೆಯಲ್ಪಡುವ ಮತ್ತು ಹೆಣ್ಣು ಮಕ್ಕಳ ಉಡುಪನ್ನು ಧರಿಸಿರುವ ಗೊಂಬೆಯನ್ನು ಒಂದು ಕೇಂದ್ರ ಸ್ಥಾನಕ್ಕೆ ತಂದಿರಿಸಿ ಅಲ್ಲಿ ನೆರೆದಿರುವ ಎಲ್ಲ ಜನರು ನೀರು ಹಾಗೂ ಸೇಬುಗಳನ್ನು ಎಸೆಯುತ್ತಾರೆ. ಆ ಸಂದರ್ಭದಲ್ಲಿ ತಮ್ಮದೇ ಆದ ವಿಶಿಷ್ಟ ಉಡುಪಿನೊಂದಿಗೆ ಕುಣಿಯುತ್ತಾರೆ. ಈ ಗೊಂಬೆಯನ್ನು ಶಕ್ತಿದೇವತೆ ಎಂದು ಭಾವಿಸುತ್ತಾರೆ. ಮುಂಬರುವ ಚಳಿಗಾಲದ ಕೃಷಿಯ ಕೆಲಸಗಳು ಜರಗುವವರೆಗೂ ಈ ಗೊಂಬೆಯನ್ನು ಸಂರಕ್ಷಿಸಿ ಇಡುವುದ ಲ್ಲದೆ ಹುಲ್ಲಿನಿಂದ ಮಾಡಿದ ಗೊಂಬೆಯ ಕೆಲವು ಭಾಗಗಳನ್ನು ಕುದುರೆ ಹಾಗೂ ಜಾನುವಾರುಗಳಿಗೆ ಕೊಡುತ್ತಾರೆ ಅಥವಾ ಬಿತ್ತುವ ಬೀಜದೊಂದಿಗೆ ಬೆರಸುತ್ತಾರೆ. ಇದೇ ಮಾದರಿಯ ಸುಗ್ಗಿಯ ಗೊಂಬೆಗಳನ್ನು ಯುರೋಪಿನ ಹಲವು ಭಾಗಗಳಲ್ಲಿ ಕಾಣಬಹುದು.

ಶೈವ ಸಂಪ್ರದಾಯಕ್ಕೆ ಸೇರಿದ ಕರ್ನಾಟಕದ ಒಂದು ಜನಪದ ಧಾರ್ಮಿಕ ವೀರನೃತ್ಯ. ಕರ್ನಾಟಕ ರಾಜ್ಯದ ಒಂದು ರಂಗದ ಕುಣಿತ ಜನಪದ ಕುಣಿತ. ಭಾರತದ ಶಾಸ್ತ್ರೀಯ ನೃತ್ಯ ನಡುವೆ, ಭರತನಾಟ್ಯ ಮೈಸೂರು ಶೈಲಿಯ ಹಳೆಯ ಮತ್ತು ಅತ್ಯಂತ ಜನಪ್ರಿಯ ನೃತ್ಯ ಪ್ರಕಾರವಾಗಿದೆ .

ನೃತ್ಯ ಮತ್ತು ಸಂಗೀತ

ನೃತ್ಯವನ್ನು ಸಾಮಾನ್ಯವಾಗಿ, ಪ್ರತ್ಯೇಕವಾಗಿರದಿದ್ದರೂ, ಸಂಗೀತದ ಪಕ್ಕವಾದ್ಯದೊಂದಿಗೆ ಪ್ರದರ್ಶಿಸಲಾಗುತ್ತದೆ ಮತ್ತು ಅಂತಹ ಸಂಗೀತದ ಸಮಯದಲ್ಲಿ ಪ್ರದರ್ಶನ ನೀಡಬಹುದು ಅಥವಾ ಮಾಡಲಾಗುವುದಿಲ್ಲ. ಕೆಲವು ನೃತ್ಯಗಳು ( ಟ್ಯಾಪ್ ಡ್ಯಾನ್ಸ್‌ನಂತಹವು ) ಸಂಗೀತದ ಬದಲಿಗೆ (ಅಥವಾ ಹೆಚ್ಚುವರಿಯಾಗಿ) ತನ್ನದೇ ಆದ ಶ್ರವ್ಯ ಪಕ್ಕವಾದ್ಯವನ್ನು ಒದಗಿಸಬಹುದು. ಸಂಗೀತ ಮತ್ತು ನೃತ್ಯದ ಅನೇಕ ಆರಂಭಿಕ ರೂಪಗಳು ಪರಸ್ಪರ ರಚಿಸಲ್ಪಟ್ಟವು ಮತ್ತು ಆಗಾಗ್ಗೆ ಒಟ್ಟಿಗೆ ಪ್ರದರ್ಶನಗೊಳ್ಳುತ್ತವೆ. ಸಾಂಪ್ರದಾಯಿಕ ನೃತ್ಯ / ಸಂಗೀತದ ಜೋಡಣೆಗಳ ಗಮನಾರ್ಹ ಉದಾಹರಣೆಗಳಲ್ಲಿ ಜಿಗ್, ವಾಲ್ಟ್ಜ್, ಟ್ಯಾಂಗೋ, ಡಿಸ್ಕೋ ಮತ್ತು ಸಾಲ್ಸಾ ಸೇರಿವೆ . ಕೆಲವು ಸಂಗೀತ ಪ್ರಕಾರಗಳು ಬರೊಕ್ ಸಂಗೀತ ಮತ್ತು ಬರೊಕ್ ನೃತ್ಯದಂತಹ ಸಮಾನಾಂತರ ನೃತ್ಯ ರೂಪವನ್ನು ಹೊಂದಿವೆ; ನೃತ್ಯ ಮತ್ತು ಸಂಗೀತದ ಇತರ ಪ್ರಭೇದಗಳು ನಾಮಕರಣವನ್ನು ಹಂಚಿಕೊಳ್ಳಬಹುದು ಆದರೆ ಶಾಸ್ತ್ರೀಯ ಸಂಗೀತ ಮತ್ತು ಶಾಸ್ತ್ರೀಯ ಬ್ಯಾಲೆಗಳಂತಹ ಪ್ರತ್ಯೇಕವಾಗಿ ಅಭಿವೃದ್ಧಿಪಡಿಸಬಹುದು.

ನೃತ್ಯ ಮತ್ತು ಲಯ

ಲಯ ಮತ್ತು ನೃತ್ಯವು ಇತಿಹಾಸ ಮತ್ತು ಅಭ್ಯಾಸದಲ್ಲಿ ಆಳವಾಗಿ ಸಂಬಂಧ ಹೊಂದಿದೆ. ಅಮೇರಿಕನ್ ನರ್ತಕಿ ಟೆಡ್ ಶಾನ್ ಬರೆದಿದ್ದಾರೆ; ನೃತ್ಯದ ಎಲ್ಲಾ ಅಧ್ಯಯನಗಳಿಗೆ ಆಧಾರವಾಗಿರುವ ಲಯದ ಪರಿಕಲ್ಪನೆಯು ನಾವು ಶಾಶ್ವತವಾಗಿ ಮಾತನಾಡಬಲ್ಲದು, ಮತ್ತು ಇನ್ನೂ ಮುಗಿಯಲಿಲ್ಲ.[] ಸಂಗೀತದ ಲಯಕ್ಕೆ ಎರಡು ಮುಖ್ಯ ಅಂಶಗಳು ಬೇಕಾಗುತ್ತವೆ; ಮೊದಲನೆಯದಾಗಿ, ನಿಯಮಿತವಾಗಿ ಪುನರಾವರ್ತಿಸುವ ನಾಡಿ (ಇದನ್ನು "ಬೀಟ್" ಅಥವಾ "ಟ್ಯಾಕ್ಟಸ್" ಎಂದೂ ಕರೆಯುತ್ತಾರೆ) ಇದು ಗತಿಯನ್ನು ಸ್ಥಾಪಿಸುತ್ತದೆ. ಎರಡನೆಯದಾಗಿ, ಮೀಟರ್ ಅಥವಾ ಮೂಲ ಲಯಬದ್ಧ ಮಾದರಿಯನ್ನು ಸ್ಥಾಪಿಸುವ ಉಚ್ಚಾರಣಾ ಮತ್ತು ವಿಶ್ರಾಂತಿ ಮಾದರಿ . ಮೂಲ ನಾಡಿ ಸರಳ ಹಂತ ಅಥವಾ ಗೆಸ್ಚರ್ ಅವಧಿಗೆ ಸರಿಸುಮಾರು ಸಮಾನವಾಗಿರುತ್ತದೆ.

ಉಲ್ಲೇಖ

  1. https://books.google.co.in/books?id=K4FN1lOcR-wC&pg=PA43&redir_esc=y#v=onepage&q&f=false
  2. Shawn, Ted, Dance We Must, 1946, Dennis Dobson Ltd., London, p. 50
"https://kn.wikipedia.org/w/index.php?title=ಕುಣಿತ&oldid=948795" ಇಂದ ಪಡೆಯಲ್ಪಟ್ಟಿದೆ