ಕಂಠ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಧ್ವನ್ಯಂಗ

ಕೇಶಿರಾಜನು ನಿರೂಪಿಸುವ ಭಾಷಾವಿಜ್ಞಾನದ ನೆಲೆಯಲ್ಲಿ ಶುದ್ಧಾಕ್ಷರಗಳು ೪೭. ಆತನ ಪ್ರಕಾರ ಯಾವ ಯಾವ ಅಕ್ಷರಗಳು ಎಲ್ಲೆಲ್ಲಿ ಹುಟ್ಟುತ್ತವೆ ? ಎಂಬ ಜಿಜ್ಞಾಸೆಯನ್ನು ಶಬ್ದಮಣಿದರ್ಪಣಂ ಕೃತಿಯಲ್ಲಿ ನೀಡಿದ್ದಾನೆ. ಆತನ ಪ್ರಕಾರ, ನಾಭಿಮೂಲದೊಳ್ ಕಹಳೆಯ ಪಾಂಗಿನವೋಲ್ ಅಕ್ಷರಗಳು ಹುಟ್ಟಿಕೊಳ್ಳುತ್ತವೆ. ಈ ಅಕ್ಷರಗಳು ಹೊಕ್ಕಳದ ಮೂಲಭಾಗದಿಂದ ಹೊರಟ ಶಬ್ದವೊಂದರಿಂದ ಹುಟ್ಟುತ್ತವೆ. ಹಾಗೆ ಹೊರಟ ಶಬ್ದವು ಗಂಟಲು, ದವಡೆ, ಮೂರ್ಧ(ನಾಲಗೆಯ ಮೇಲ್ಭಾಗದ ಭಾಗ), ತುಟಿ, ಹಲ್ಲು – ಇತ್ಯಾದಿ ಅವಯವಗಳ ಸಹಾಯದಿಂದ ಬೇರೆ ಬೇರೆ ಅಕ್ಷರಗಳಾಗುತ್ತವೆ.[೧]

ಕಂಠ್ಯ ಎಂದರೇನು?[ಬದಲಾಯಿಸಿ]

ಕಂಠ್ಯ ಧ್ವನ್ಯಂಗದ ಒಂದು ಭಾಗ. ಬಾಯಿಯ ಕುಹರದ ಹಿಂಭಾಗದ ಬಳಿ ಜೋಡಣೆಯ ಪ್ರಾಥಮಿಕ ಸ್ಥಳವಿರುವ ಜಾಗದಲ್ಲಿ ಹುಟ್ಟುವ ಧ್ವನಿ ಕಂಠ್ಯ. ಮೃದುತಾಲುವಿನ ಅನಂತರ ಅದಕ್ಕೆ ತಾಗಿಕೊಂಡು ಕಿರುನಾಲಗೆ ಯಿದೆ. ಆಮೇಲೆ ಅಲ್ಲಿ ಅನ್ನನಾಳ ಶ್ವಾಸನಾಳಗಳು ಬಂದು ಕೂಡುವ ಪೊಳ್ಳು ಜಾಗ. ಸ್ವಲ್ಪ ಕೆಳಭಾಗಕ್ಕೆ ಗಲಕುಹರವಿದೆ. ಅಲ್ಲಿಂದ ಒಂದು ನಾಳ ಅನ್ನವನ್ನು ಸಾಗಿಸಲು ಜಠರದೆಡೆಗೆ ಇನ್ನೊಂದು ಶ್ವಾಸವನ್ನು ಸಾಗಿಸಲು ಪುಪ್ಪುಸದೆಡೆಗೆ ಹೋಗುತ್ತವೆ. ಗಲ ಕುಹರದ ಭಾಗವೆಲ್ಲ ಕಂಠದಲ್ಲಿ ಒಳಗೊಳ್ಳುತ್ತವೆ.[೨]

ಕಂಠ್ಯ ಧ್ವನಿಗಳು[ಬದಲಾಯಿಸಿ]

ಇವು ಕಂಠದಲ್ಲಿ ಹುಟ್ಟುತ್ತವಾದ್ದರಿಂದ ಇವನ್ನು ‘ಕಂಠ್ಯ’ ವರ್ಣವೆನ್ನುತ್ತಾರೆ.

ಕಂಠ್ಯ ಹ್ರಸ್ವ ಸ್ವರಗಳು[ಬದಲಾಯಿಸಿ]

, ,

ವರ್ಗೀಯ ಕಂಠ್ಯ ವ್ಯಂಜನಗಳು[ಬದಲಾಯಿಸಿ]

, , , , ,

ಅವರ್ಗೀಯ ಕಂಠ್ಯ ವ್ಯಂಜನ[ಬದಲಾಯಿಸಿ]

ಯೋಗವಾಹ ಕಂಠ್ಯ ವ್ಯಂಜನಗಳು[ಬದಲಾಯಿಸಿ]

ವಿಸರ್ಗ - ಃ ಅಃ

ಉಲ್ಲೇಖ[ಬದಲಾಯಿಸಿ]

  1. ಕೇಶಿರಾಜಶಬ್ದಮಣಿದರ್ಪಣಂ
  2. ಸಂಗಮೇಶ ಸವದತ್ತಿಮಠ, ೧೯೭೯. ಕನ್ನಡ ಭಾಷಾವ್ಯಾಸಂಗ, ಕಲಬುರ್ಗಿ:ರೂಪರಶ್ಮಿ ಪ್ರಕಾಶನ
"https://kn.wikipedia.org/w/index.php?title=ಕಂಠ್ಯ&oldid=807718" ಇಂದ ಪಡೆಯಲ್ಪಟ್ಟಿದೆ