ಜಠರ/ಜಠರೀಯ ಹುಣ್ಣು/ವ್ರಣ
Peptic ulcer | |
---|---|
Classification and external resources | |
ICD-10 | K25-K27 |
ICD-9 | 531-534 |
DiseasesDB | 9819 |
eMedicine | med/1776 ped/2341 |
MeSH | D010437 |
ಯೂಲ್ಕಸ್ ಪೆಪ್ಟಿಕಮ್ , PUD ಅಥವಾ ಜಠರ/ಜಠರೀಯ ಹುಣ್ಣು/ವ್ರಣ ರೋಗ ,[೧] ಎಂದೂ ಕರೆಯಲ್ಪಡುವ ಜಠರ/ಜಠರೀಯ ಹುಣ್ಣು/ವ್ರಣ , ಎಂಬುದು ಜಠರ ಹಾಗೂ ಕರುಳುಗಳ ನಡುವಿನ ಪ್ರದೇಶದಲ್ಲಿ ಉಂಟಾಗುವ ಹುಣ್ಣು/ವ್ರಣ (0.5 cmನಷ್ಟು ಅಥವಾ ಹೆಚ್ಚಿನ ಗಾತ್ರದ ಮ್ಯುಕೋಸಲ್/ಲೋಳೆಪೊರೆ ಸವೆತ ಎಂದು ನಿರೂಪಿಸಲಾಗುವ)ವಾಗಿದ್ದು ಸಾಧಾರಣವಾಗಿ ಆಮ್ಲೀಯವಾಗಿರುವುದರಿಂದ ವಿಪರೀತ ನೋವುಂಟುಮಾಡಬಲ್ಲದಾಗಿರುತ್ತದೆ. 80%ರಷ್ಟು ಹುಣ್ಣು/ವ್ರಣಗಳಿಗೆ ಹೆಲಿಕೋಬ್ಯಾಕ್ಟರ್ ಪೈಲೊರಿ , ಎಂಬ ಹೊಟ್ಟೆ/ಉದರದ ಆಮ್ಲೀಯ ವಾತಾವರಣದಲ್ಲಿ ಜೀವಿಸುವ ಸುರುಳಿ-ಆಕಾರದ ಬ್ಯಾಕ್ಟೀರಿಯ/ಸೂಕ್ಷ್ಮಜೀವಿ/ಏಕಾಣುಜೀವಿಗಳೇ ಕಾರಣವಾಗಿದ್ದರೂ, ಅವುಗಳಲ್ಲಿ ಕೇವಲ 40%ರಷ್ಟು ಪ್ರಕರಣಗಳು ಮಾತ್ರ ವೈದ್ಯರ ಬಳಿ ಹೋಗುತ್ತವೆ. ಹುಣ್ಣು/ವ್ರಣಗಳು ಆಸ್ಪಿರಿನ್‌ನಂತಹಾ ಔಷಧಗಳಿಂದ ಹಾಗೂ ಇತರ NSAIDಗಳಿಂದ ಕೂಡಾ ಉಂಟಾಗಬಹುದು ಅಥವಾ ಉಲ್ಬಣಿಸಬಹುದು.
ಸಾಮಾನ್ಯ ನಂಬಿಕೆಗೆ ವಿರುದ್ಧವಾಗಿ, ಹೆಚ್ಚಿನ ಜಠರ/ಜಠರೀಯ ಹುಣ್ಣು/ವ್ರಣಗಳು ಡ್ಯುವೋಡೆನಮ್(ಹೊಟ್ಟೆ/ಉದರದ ನಂತರ ಬರುವ ಸಣ್ಣಕರುಳಿನ ಮೊದಲನೇ ಭಾಗ)ನಲ್ಲಿ ಆಗುತ್ತದೆಯೇ ಹೊರತು ಹೊಟ್ಟೆ/ಉದರದಲ್ಲಲ್ಲ. ಹೊಟ್ಟೆ/ಉದರ ಹುಣ್ಣು/ವ್ರಣಗಳಲ್ಲಿ ಸುಮಾರು 4%ರಷ್ಟು ಅರ್ಬುದಕಾರಕ ಗೆಡ್ಡೆಗಳಿಂದ ಆಗಿರುವ ಸಾಧ್ಯತೆ ಇರುವುದರಿಂದ, ಅನೇಕ ಬಾರಿ ಅಂಗಾಂಶ ಪರೀಕ್ಷೆಗಳನ್ನು ಮಾಡಿದ ನಂತರವೇ ಅರ್ಬುದದ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯ. ಡ್ಯುವೋಡೆನಮ್‌ನ ಹುಣ್ಣು/ವ್ರಣಗಳು ಸಾಧಾರಣವಾಗಿ ಸೌಮ್ಯವಾಗಿರುತ್ತವೆ.
ವರ್ಗೀಕರಣ
[ಬದಲಾಯಿಸಿ]- ಹೊಟ್ಟೆ/ಉದರ (ಜಠರದ/ಗ್ಯಾಸ್ಟ್ರಿಕ್ ಹುಣ್ಣು/ವ್ರಣ ಎನ್ನುತ್ತಾರೆ )
- ಡ್ಯುವೋಡೆನಮ್ (ಡ್ಯುವೋಡೆನಮ್‌ನ ಹುಣ್ಣು/ವ್ರಣ ಎನ್ನುತ್ತಾರೆ )
- ಅನ್ನನಾಳ (ಅನ್ನನಾಳೀಯ ಹುಣ್ಣು/ವ್ರಣ ಎನ್ನುತ್ತಾರೆ )
- ಮೆಕೆಲ್ರ ನಾಳ ಮೊಂಡುಕೋಶ/ಡೈವರ್ಟಿಕ್ಯುಲಮ್ (ಮೆಕೆಲ್ರ ನಾಳ ಮೊಂಡುಕೋಶ/ಡೈವರ್ಟಿಕ್ಯುಲಮ್ ಹುಣ್ಣು/ವ್ರಣ ಎನ್ನುತ್ತಾರೆ )
ಜಠರ/ಜಠರೀಯ ಹುಣ್ಣು/ವ್ರಣಗಳ ವಿಧಗಳು:
- ವಿಧ I: ಹೊಟ್ಟೆ/ಉದರದ ಅಲ್ಪ ಬಾಗುವಿಕೆಯೊಂದಿಗಿನ ಹುಣ್ಣು/ವ್ರಣ
- ವಿಧ II: ಎರಡು ಹುಣ್ಣು/ವ್ರಣಗಳಿರುತ್ತವೆ - ಒಂದು ಜಠರದ/ಗ್ಯಾಸ್ಟ್ರಿಕ್‌ದ್ದಾಗಿದ್ದು, ಇನ್ನೊಂದು ಡ್ಯುವೋಡೆನಮ್‌ನದಾಗಿರುತ್ತದೆ
- ವಿಧ III: ಪೈಲೋರಸ್‌ನ ಆರಂಭಿಕ ಭಾಗದ ಹುಣ್ಣು/ವ್ರಣ
- ವಿಧ IV: ಜಠರ-ಅನ್ನನಾಳ ನಿಕಟಸ್ಥ ಹುಣ್ಣು/ವ್ರಣ
- ವಿಧ V: ಎಲ್ಲಿ ಬೇಕಾದರೂ ಆಗಬಹುದು
ರೋಗ ಸೂಚನೆ ಹಾಗೂ ಲಕ್ಷಣಗಳು
[ಬದಲಾಯಿಸಿ]ಜಠರ/ಜಠರೀಯ ಹುಣ್ಣು/ವ್ರಣಗಳ ಸಾಧ್ಯವಾಗಬಹುದಾದ ರೋಗಲಕ್ಷಣಗಳು
- ಕಿಬ್ಬೊಟ್ಟೆಯ ನೋವು, ಸಾಧಾರಣವಾಗಿ ಅಧಿಜಠರದ/ಗ್ಯಾಸ್ಟ್ರಿಕ್ ಊಟದ ಸಮಯದ ಮೇಲೆ ಆಧಾರಿತವಾಗಿ ತೀವ್ರತೆಯೊಂದಿಗಿರುತ್ತದೆ, ಊಟವಾದ ಸುಮಾರು 3 ಗಂಟೆಗಳ ನಂತರ (ಡ್ಯುವೋಡೆನಮ್‌ನ ಹುಣ್ಣು/ವ್ರಣಗಳು ರೂಢಿಗತವಾಗಿ ಆಹಾರದಿಂದ ಉಪಶಮನಗೊಂಡರೆ, ಜಠರದ/ಗ್ಯಾಸ್ಟ್ರಿಕ್ ಹುಣ್ಣು/ವ್ರಣಗಳು ಅದರಿಂದಲೇ ಉಲ್ಬಣಗೊಳ್ಳುತ್ತವೆ);
- ಕಿಬ್ಬೊಟ್ಟೆ ತುಂಬಿಕೊಳ್ಳುವಿಕೆ ಹಾಗೂ ಉಬ್ಬುವಿಕೆ ;
- ನೀರುನುಗ್ಗುವಿಕೆ (ಅನ್ನನಾಳದಲ್ಲಿರುವ ಆಮ್ಲವನ್ನು ಸಾರಗುಂದಿಸಲು ಹೊರಕಕ್ಕುವಿಕೆಯ ನಂತರ ನುಗ್ಗಿಬರುವ ಜೊಲ್ಲು/ಲಾಲಾರಸ);
- ಪಿತ್ತೋದ್ರೇಕ, ಹಾಗೂ ವಿಪರೀತ ವಾಂತಿಮಾಡುವಿಕೆ;;
- ಹಸಿವುರಾಹಿತ್ಯ ಹಾಗೂ ತೂಕ ಕಳೆದುಕೊಳ್ಳುವಿಕೆ;
- ಹೆಮಟೆಮಿಸಿಸ್ (ರಕ್ತ ವಾಂತಿಮಾಡುವಿಕೆ); ಜಠರದ/ಗ್ಯಾಸ್ಟ್ರಿಕ್ ಹುಣ್ಣು/ವ್ರಣದಿಂದ ನೇರವಾಗಿ ರಕ್ತ ಹರಿಯುವಿಕೆಯಿಂದ ಅಥವಾ ತೀವ್ರ/ಸತತ ವಾಂತಿಮಾಡುವಿಕೆಯಿಂದ ಘಾಸಿಗೊಂಡ ಅನ್ನನಾಳದಿಂದ ಆಗಬಹುದು.
- ದುರ್ಗಂಧಪೂರಿತ ಮಲ (ಹಿಮೋಗ್ಲೋಬಿನ್‌ಯಿಂದ ಆಕ್ಸಿಡೀಕರಿಸಿದ ಕಬ್ಬಿಣದಿಂದಾಗಿ ಟಾರೆಣ್ಣೆಯಂತಹ, ಹೊಲಸು ವಾಸನೆಯ ಮಲ);
- ಅಪರೂಪವಾಗಿ, ಹುಣ್ಣು/ವ್ರಣವು ಜಠರದ/ಗ್ಯಾಸ್ಟ್ರಿಕ್ ಅಥವಾ ಡ್ಯುವೋಡೆನಮ್‌ನ ರಂಧ್ರೀಕರಣಕ್ಕೆ ಕಾರಣವಾಗಬಲ್ಲದು. ಇದು ವಿಪರೀತ ಯಾತನಾಪೂರಿತವಾಗಿದ್ದು ತಕ್ಷಣದ ಶಸ್ತ್ರಚಿಕಿತ್ಸೆ ಅವಶ್ಯಕವಾಗಿರುತ್ತದೆ.
ಎದೆಯುರಿ, ಜಠರ-ಅನ್ನನಾಳೀಯ ಹಿಮ್ಮುಖಹರಿತ ರೋಗ(GERD)ಗಳ ರೋಗಇತಿಹಾಸ ಹಾಗೂ ಕೆಲ ನಿರ್ದಿಷ್ಟ ರೂಪದ ಔಷಧಿಗಳು ಜಠರ/ಜಠರೀಯ ಹುಣ್ಣು/ವ್ರಣದ ಲಕ್ಷಣಗಳನ್ನು ತೋರಬಲ್ಲವು. ಜಠರ/ಜಠರೀಯ ಹುಣ್ಣು/ವ್ರಣದೊಂದಿಗೆ ಸಂಬಂಧಿತವಾದ ಇತರೆ ಔಷಧಿಗಳೆಂದರೆ ಸೈಕ್ಲೋಆಕ್ಸಿಜೆನೇಸ್, ಹಾಗೂ ಬಹುತೇಕ ಗ್ಲೂಕೋಕಾರ್ಟಿಕಾಯ್ಡ್‌ಗಳು (e.g. ಡೆಕ್ಸಾಮೆಥಾಸೋನ್ ಹಾಗೂ ಪ್ರೆಡ್ನಿಸೊಲೋನ್)ಗಳನ್ನು ನಿರೋಧಿಸುವಂತಹಾ NSAID (ಸ್ಟಿರಾಯ್ಡ್‌ಅಲ್ಲದ ಉರಿಶಮನದ ಔಷಧಿಗಳು)ಗಳು.
ಮೇಲಿನ ರೋಗಲಕ್ಷಣಗಳನ್ನು ಎರಡು ವಾರಕ್ಕೂ ಹೆಚ್ಚು ಕಾಲದಿಂದ ಹೊಂದಿರುವ 45ರ ಮೇಲ್ಪಟ್ಟ ರೋಗಿಗಳಲ್ಲಿ, EGDಯಿಂದ ತ್ವರಿತ ತಪಾಸಣೆ ಅಗತ್ಯವಾಗುವ ಮಟ್ಟಿಗೆ ಜಠರ/ಜಠರೀಯ ಹುಣ್ಣಾಗಿರುವಿಕೆಯ ಸಾಧ್ಯತೆಯೇ ಹೆಚ್ಚು (ಕೆಳಗೆ ನೋಡಿ).
ಊಟದ ಸಮಯಕ್ಕನುಗುಣವಾಗಿ ರೋಗಲಕ್ಷಣಗಳ ಕಾಣಿಸಿಕೊಳ್ಳುವಿಕೆಯು ಜಠರದ/ಗ್ಯಾಸ್ಟ್ರಿಕ್ ಹಾಗೂ ಡ್ಯುವೋಡೆನಮ್‌ನ ಹುಣ್ಣು/ವ್ರಣಗಳ ನಡುವೆ ವ್ಯತ್ಯಾಸಗಳನ್ನು ಹೊಂದಿರುತ್ತದೆ: ಜಠರದ/ಗ್ಯಾಸ್ಟ್ರಿಕ್ ಹುಣ್ಣು/ವ್ರಣವು ಅಧಿಜಠರದ/ಎಪಿಗ್ಯಾಸ್ಟ್ರಿಕ್ ಜಠರದ/ಗ್ಯಾಸ್ಟ್ರಿಕ್ ಆಮ್ಲವು ಒಸರುತ್ತಿದ್ದ ಹಾಗೆಯೇ ಊಟದ ಸಮಯದಲ್ಲಿಯೇ ಅಥವಾ ನಂತರ ಕ್ಷಾರೀಯ ಡ್ಯುವೋಡೆನಮ್ ಅಂಶಗಳು ಹೊಟ್ಟೆ/ಉದರದೊಳಕ್ಕೆ ಮರುಪೂರಣಗೊಂಡಾಗ ನೋವನ್ನುಂಟುಮಾಡುತ್ತದೆ. ಡ್ಯುವೋಡೆನಮ್‌ನ ಹುಣ್ಣು/ವ್ರಣಗಳ ರೋಗಲಕ್ಷಣಗಳು ಆಮ್ಲವು (ಹಸಿವಿನಿಂದ ಪ್ರೇರಿತವಾದ ಉತ್ಪಾದನೆ) ಡ್ಯುವೋಡೆನಮ್‌ನೊಳಗೆ ಹರಿದುಬಂದಾಗ ಬಹುಮಟ್ಟಿಗೆ ಊಟಕ್ಕಿಂತ ಮುಂಚೆಯೇ ಕಾಣಿಸಿಕೊಳ್ಳುತ್ತವೆ. ಆದಾಗ್ಯೂ ಇದು ವೈದ್ಯಕೀಯವಾಗಿ ನಂಬಲರ್ಹವಾದ ಲಕ್ಷಣಗಳಲ್ಲ.
ತೊಡಕುಗಳು
[ಬದಲಾಯಿಸಿ]- ಜಠರ ಹಾಗೂ ಕರುಳುಗಳಿಂದ ರಕ್ತಹರಿಯುವಿಕೆ ಯು ಬಹು ಸಾಮಾನ್ಯವಾದ ತೊಡಕಾಗಿದೆ. ಇದ್ದಕ್ಕಿದ್ದಂತೆ ಆಗಬಹುದಾದ ತೀವ್ರ ಪ್ರಮಾಣದ ರಕ್ತಸ್ರಾವ ಜೀವಕ್ಕೆ ಅಪಾಯ ಉಂಟುಮಾಡಬಲ್ಲದು.[೨] ಹುಣ್ಣಿನಿಂ/ವ್ರಣದಿಂದಾಗಿ ರಕ್ತನಾಳಗಳಲ್ಲಿ ಒಂದಾದರೂ ಸವೆದರೆ ಹೀಗಾಗುತ್ತದೆ.
- ರಂಧ್ರೀಕರಣ ವು (ಭಿತ್ತಿಯಲ್ಲಿನ ರಂಧ್ರವಾಗುವಿಕೆ) ಅನೇಕ ವೇಳೆ ಅನಾಹುತಕಾರಿ ಪರಿಣಾಮಗಳೆಗೆಡೆ ಮಾಡುತ್ತದೆ. ಹುಣ್ಣಿನಿಂ/ವ್ರಣದಿಂದಾಗಿ ಜಠರ ಹಾಗೂ ಕರುಳುಗಳ ಭಿತ್ತಿಯ ಸವೆತವು ಕಿಬ್ಬೊಟ್ಟೆಯ ಕುಹರದೊಳಗೆ ಹೊಟ್ಟೆ/ಉದರ ಅಥವಾ ಕರುಳುಗಳ ಸಾರದ ಸೋರಿಕೆಗೆ ಕಾರಣವಾಗುತ್ತದೆ. ಹೊಟ್ಟೆ/ಉದರದ ಮೇಲಿನ ಭಾಗದಲ್ಲಾಗುವ ರಂಧ್ರೀಕರಣವು ಮೊದಲಿಗೆ ರಾಸಾಯನಿಕ ಹಾಗೂ ನಂತರ ಸೂಕ್ಷ್ಮಜೀವಿಪೀಡಿತ ಜಠರದ ಉರಿಯೂತವುಂಟಾಗಿ ತೀವ್ರವಾದ ಜಠರದ ಒಳಪೊರೆಯ ಉರಿಯೂತಕ್ಕೆ ಕಾರಣವಾಗುವುದು. ಇದರ ಪ್ರಥಮ ಲಕ್ಷಣವೆಂದರೆ ಆಗ್ಗಾಗ್ಗೆ ಇದ್ದಕ್ಕಿದ್ದಂತೆ ತೀವ್ರ ಕಿಬ್ಬೊಟ್ಟೆಯ ನೋವುಂಟಾಗುವುದು. ಹಿಂಭಾಗದ ಭಿತ್ತಿಯ ರಂಧ್ರೀಕರಣವು ಮೆದೋಜೀರಕದ ಉರಿಯೂತಕ್ಕೆ ಕಾರಣವಾಗುತ್ತದೆ; ಈ ಸಂದರ್ಭದಲ್ಲುಂಟಾಗುವ ನೋವು ಬೆನ್ನಿಗೂ ಸಹಾ ವ್ಯಾಪಿಸುತ್ತದೆ.
- ಹುಣ್ಣು/ವ್ರಣ ಪಿತ್ತಜನಕಾಂಗ ಹಾಗೂ ಮೆದೋಜೀರಕ ಗ್ರಂಥಿಗಳಂತಹಾ ನೆರೆಯ ಅಂಗಗಳಿಗೆ ಹಬ್ಬುವುದನ್ನು ಭೇದನ ವೆನ್ನುತ್ತಾರೆ.[೩]
- ಹುಣ್ಣು/ವ್ರಣಗಳಿಂದಾಗುವ ಗಾಯದ ಗುರುತು/ಮಚ್ಚೆಗಳು ಹಾಗೂ ಊದಿಕೊಳ್ಳುವಿಕೆಗಳು ಡ್ಯುವೋಡೆನಮ್‌ನಲ್ಲಿ ಇಕ್ಕಟ್ಟನ್ನು ಉಂಟುಮಾಡಿ ಜಠರದ/ಗ್ಯಾಸ್ಟ್ರಿಕ್ ಬಹಿದ್ವಾರದಲ್ಲಿ ತಡೆ ಯುಂಟುಮಾಡುತ್ತವೆ. ರೋಗಿಯು ಆಗ್ಗಾಗ್ಗೆ ತೀವ್ರವಾಗಿ ವಾಂತಿಮಾಡುತ್ತಾರೆ.
- ಜಠರದ ಬಹಿದ್ವಾರದಲ್ಲಿ ಸಂಕುಚನ
ಕಾರಣ
[ಬದಲಾಯಿಸಿ]ಇದಕ್ಕೆ ಪ್ರಮುಖ ಕಾರಣವೆಂದರೆ (60%ರಷ್ಟು ಜಠರದ/ಗ್ಯಾಸ್ಟ್ರಿಕ್‌ಗೆ ಹಾಗೂ ಸುಮಾರು 90%ರಷ್ಟು ಡ್ಯುವೋಡೆನಮ್‌ನ ಹುಣ್ಣು/ವ್ರಣಗಳಿಗೆ) ಹೆಲಿಕೋಬ್ಯಾಕ್ಟರ್ ಪೈಲೊರಿ ಯು ಕೋಟರದ ಲೋಳೆಪೊರೆಯನ್ನು ಆಕ್ರಮಿಸಿಕೊಳ್ಳುವದರಿಂದಾಗುವ ಬೇರೂರಿದ/ಸತತವಾಗಿ ಇರುವ ಉರಿಯೂತ. ಪ್ರತಿಕಾಯಗಳು ಕಂಡುಬಂದರೂ ರೋಗನಿರೋಧಕ ವ್ಯವಸ್ಥೆಯು ಸೋಂಕನ್ನು ನಿವಾರಿಸಲಾಗುವುದಿಲ್ಲ. ಆದ್ದರಿಂದ ಬ್ಯಾಕ್ಟೀರಿಯ/ಸೂಕ್ಷ್ಮಜೀವಿ/ಏಕಾಣುಜೀವಿಯು ಬೇರೂರಿದ ಸಕ್ರಿಯ ಜಠರದುರಿತ (ವಿಧ B ಜಠರದುರಿತ)ವನ್ನು ಉಂಟುಮಾಡಿ, ಹೊಟ್ಟೆ/ಉದರದ ಆ ಭಾಗದಲ್ಲಿನ ಗ್ಯಾಸ್ಟ್ರಿನ್ ಉತ್ಪಾದನೆಯ ನಿಯಂತ್ರಣಕ್ಕೆ ಕುಂದುಂಟಾಗುವಂತೆ ಮಾಡಬಲ್ಲದು, ಇಷ್ಟೇ ಅಲ್ಲದೇ ಗ್ಯಾಸ್ಟ್ರಿನ್ ಸ್ರವಿಸುವಿಕೆಯು ರಾಹಿತ್ಯ ಅಥವಾ ಆಕ್ಲಾರ್‌ಹೈಡ್ರಿಯಾಕ್ಕೆ ಕಾರಣವಾಗುವ ಹಾಗೆ (ಬಹಳಷ್ಟು ಪ್ರಕರಣಗಳಲ್ಲಿ) ಇಳಿಕೆಯಾಗಬಲ್ಲದು ಅಥವಾ ಏರಿಕೆಯಾಗಬಲ್ಲದು. ಗ್ಯಾಸ್ಟ್ರಿನ್ ದೇಹಭಿತ್ತಿಯ ಕೋಶಗಳು ಜಠರದ/ಗ್ಯಾಸ್ಟ್ರಿಕ್ ಆಮ್ಲವನ್ನು ಉತ್ಪಾದಿಸುವಂತೆ ಪ್ರಚೋದಿಸುತ್ತವೆ, ಅಲ್ಲದೇ ಗ್ಯಾಸ್ಟ್ರಿನ್‌ಅನ್ನು ಹೆಚ್ಚಿಸುವ H. ಜಠರದ ಕಿರುದ್ವಾರದಲ್ಲಿನ ಆಕ್ರಮಿಸುವಿಕೆಗಳಿಂದಾಗಿ ಹೆಚ್ಚಿದ ಆಮ್ಲವು ಲೋಳೆಪೊರೆಯ ಸವೆತಕ್ಕೆ ಕಾರಣವಾಗಿ ಅದರಿಂದ ಹುಣ್ಣು/ವ್ರಣ ಉಂಟು ಮಾಡಬಲ್ಲದು.
ಮತ್ತೊಂದು ಪ್ರಮುಖ ಕಾರಣವೆಂದರೆ NSAIDಗಳ (ಮೇಲೆ ನೋಡಿ) ಬಳಕೆ. ಜಠರದ/ಗ್ಯಾಸ್ಟ್ರಿಕ್ ಲೋಳೆಪೊರೆಯು ಜಠರದ/ಗ್ಯಾಸ್ಟ್ರಿಕ್ ಆಮ್ಲದಿಂದ ತನ್ನನ್ನು ಲೋಳೆಯ ಪದರದಿಂದ ರಕ್ಷಿಸಿಕೊಳ್ಳುತ್ತದೆ, ನಿರ್ದಿಷ್ಟ ಪ್ರೋಸ್ಟಾಗ್ಲಾಂಡಿನ್‌ಗಳು ಇದರ ಸ್ರವಿಸುವಿಕೆಗೆ ಪ್ರಚೋದಿಸುತ್ತವೆ. NSAIDಗಳು ಈ ಪ್ರೋಸ್ಟಾಗ್ಲಾಂಡಿನ್‌ಗಳ ಉತ್ಪಾದನೆಗೆ ಅಗತ್ಯವಾಗಿರುವ ಸೈಕ್ಲೋಆಕ್ಸಿಜೆನೇಸ್ 1ರ (cox-1 ), ಚಟುವಟಿಕೆಯನ್ನು ತಡೆಯುತ್ತವೆ. COX-2 ಆಯ್ದ ಉರಿಯೂತ ಶಮನಕಾರಕಗಳು (ಸೆಲೆಕಾಕ್ಸಿಬ್ ಅಥವಾ ಹಿಂತೆಗೆದುಕೊಳ್ಳಲಾದ ರಾಫೆಕಾಕ್ಸಿಬ್) ಆದ್ಯತೆಯ ಮೇರೆಗೆ ತಡೆಯುಂಟುಮಾಡುವ cox-2 , ಜಠರದ/ಗ್ಯಾಸ್ಟ್ರಿಕ್ ಲೋಳೆಪೊರೆಗೆ ಹೆಚ್ಚೇನೂ ಅಗತ್ಯವಲ್ಲದ, NSAID-ಸಂಬಂಧಿತ ಜಠರದ/ಗ್ಯಾಸ್ಟ್ರಿಕ್ ಹುಣ್ಣಾಗುವಿಕೆಯ ಅಪಾಯವನ್ನು ಸುಮಾರಾಗಿ ಅರ್ಧ ಕಡಿಮೆಯಾಗಿಸುತ್ತದೆ. ಹೆಚ್ಚಿದ ಚಿಕಿತ್ಸೆಗಳಿಂದಾಗಿ ಪಾಶ್ಚಿಮಾತ್ಯ ವಿಶ್ವದಲ್ಲಿ H. ಪೈಲೊರಿ-ಚೋದಿತ ಹುಣ್ಣಾಗುವಿಕೆಯ ಪ್ರಭಾವವು ಕಡಿಮೆಯಾಗುತ್ತಿದ್ದ ಹಾಗೆ, ಹೆಚ್ಚಿನ ಪ್ರಮಾಣದ ಹುಣ್ಣು/ವ್ರಣಗಳಿಗೆ ಕಾರಣ ನೋವು ಲಕ್ಷಣಗಳನ್ನು ಹೊಂದಿದ ವ್ಯಕ್ತಿಗಳ ಹಾಗೂ ಸಂಧಿವಾತಕ್ಕೆ ತುತ್ತಾಗುವಿಕೆ ಹೆಚ್ಚುತ್ತಿರುವ ಮಧ್ಯವಯಸ್ಕ/ವೃದ್ಧರಲ್ಲಿನ ಹೆಚ್ಚಿದ NSAID ಬಳಕೆ.
ಡ್ಯುವೋಡೆನಮ್‌ನ ಹುಣ್ಣು/ವ್ರಣಗಳ ಪ್ರಮಾಣ ಗಮನಾರ್ಹವಾಗಿ ಕಳೆದ 30 ವರ್ಷಗಳಲ್ಲಿ ಇಳಿಕೆ ಕಂಡಿದ್ದರೆ, ಪ್ರಮುಖವಾಗಿ NSAIDಗಳ ವ್ಯಾಪಕ ಬಳಕೆಯಿಂದಾಗಿ ಜಠರದ/ಗ್ಯಾಸ್ಟ್ರಿಕ್ ಹುಣ್ಣು/ವ್ರಣಗಳ ಪ್ರಮಾಣವು ಅಲ್ಪ ಏರಿಕೆಯನ್ನು ಹೊಂದಿದೆ. ಪ್ರಮಾಣದ ಇಳಿಕೆಯು ರೋಗದ ಚಿಕಿತ್ಸೆಯಲ್ಲಿನ ಪ್ರಗತಿಯ ಮೇಲೆ ಆಧರಿಸದೇ ಸ್ವತಂತ್ರವಾದ ಸಮೂಹ-ಬೆಳವಣಿಗೆ ಎಂದು ಪರಿಗಣಿಸಲಾಗಿದೆ. ಸಮೂಹ-ಬೆಳವಣಿಗೆಯನ್ನು H. ಪೈಲೊರಿ ಯ ಸೋಂಕುಗಳ ಪ್ರಮಾಣವನ್ನು ಇಳಿಸಲು ಕಾರಣವಾದ ಜೀವನಮಟ್ಟದ ಸುಧಾರಣೆಗಳು ವಿವರಿಸಬಹುದು.[೪]
ಧೂಮಪಾನ ಹಾಗೂ ಹುಣ್ಣು/ವ್ರಣ ಉಂಟಾಗುವಿಕೆ[೫]ಗಳ ನಡುವೆ ಪರಸ್ಪರ ಸಂಬಂಧಗಳಿರುವುದನ್ನು ಕೆಲ ಅಧ್ಯಯನಗಳು ಪತ್ತೆಹಚ್ಚಿರುವುದಾದರೂ, ನಿರ್ದಿಷ್ಟವಾಗಿ ಇದರ ಅಪಾಯಗಳನ್ನು ಕುರಿತು ಮಾಡಿದ ಇತರ ಅಧ್ಯಯನಗಳು ಧೂಮಪಾನವೊಂದೇ ಇದಕ್ಕೆ ಕಾರಣವಾಗುವುದಿಲ್ಲ ಬದಲಿಗೆ H. ಪೈಲೊರಿ ಸೋಕಿನೊಂದಿಗೆ ಜೊತೆಗೂಡಿದಾಗ ಮಾತ್ರವೇ ಅಪಾಯಕಾರಿಯಾಗಬಲ್ಲದು ಎಂದು ಪತ್ತೆಹಚ್ಚಿವೆ [೬][೭][೮] [nb ೧]. 20ನೇ ಶತಮಾನದ ಉತ್ತರ ಭಾಗದವರೆಗೆ ಆಹಾರಕ್ರಮ, ಮಸಾಲೆ, ಕ್ಷಯ ಹಾಗೂ ರಕ್ತ ವಿಧಗಳಂತಹಾ ಕೆಲ ಸೂಚಿತ ಸಾಧ್ಯತೆಗಳನ್ನು ಹುಣ್ಣು/ವ್ರಣಕಾರಕಗಳೆಂದು (ಹುಣ್ಣು/ವ್ರಣಗಳುಂಟಾಗಲು ಸಹಾಯ ಮಾಡುವಂತಹವು) ಊಹನೆ ಮಾಡಲಾಗಿತ್ತಾದರೂ, ಇವು ಜಠರ/ಜಠರೀಯ ಹುಣ್ಣು/ವ್ರಣಗಳುಂಟಾಗಲು ಸಾಪೇಕ್ಷವಾಗಿ ಅಲ್ಪ ಪ್ರಾಮುಖ್ಯತೆ ಹೊಂದಿವೆಯೆಂದು ಸಿದ್ಧಪಡಿಸಲಾಗಿದೆ.[೯]. ಇದೇ ರೀತಿಯಲ್ಲಿ, H. ಪೈಲೊರಿ ಸೋಂಕಿರುವಾಗ ಮದ್ಯಪಾನವು ಅಪಾಯವನ್ನು ಹೆಚ್ಚಿಸುವುದೆಂದು ಅಧ್ಯಯನಗಳು ಹೇಳುತ್ತವಾದರೂ, H. ಪೈಲೊರಿ ಸೋಂಕಿನೊಂದಿಗೆ ಸಂಬಂಧಿಸಿದ್ದರೂ, ಇದರಿಂದಾಗುವ ಏರಿಕೆಯು ಪ್ರಮುಖ ಕಾರಣಕ್ಕೆ ಹೋಲಿಸಿದರೆ ಅಲ್ಪದ್ದಾಗಿರುತ್ತದೆ [೬][೧೦][nb ೨].
ಗ್ಯಾಸ್ಟ್ರಿನೋಮಗಳು (ಝಾಲಿಂಗರ್ ಎಲ್ಲಿಸನ್ ಲಕ್ಷಣ), ಅಪರೂಪದ ಗ್ಯಾಸ್ಟ್ರಿನ್-ಸ್ರವಿಸುವಿಕೆ ಗೆಡ್ಡೆಗಳು/ಊತಗಳು, ಕೂಡಾ ಅನೇಕ ಸಂಖ್ಯೆಯ ಹುಣ್ಣು/ವ್ರಣಗಳನ್ನುಂಟು ಮಾಡುವುದಲ್ಲದೇ ಗುಣಪಡಿಸಲು ಕಷ್ಟಸಾಧ್ಯವಾಗಿರುತ್ತದೆ.
ಒತ್ತಡ
[ಬದಲಾಯಿಸಿ]ಸಂಶೋಧಕರು ಒತ್ತಡವನ್ನೂ ಕೂಡಾ ಹುಣ್ಣು/ವ್ರಣಗಳ ಬೆಳವಣಿಗೆಗೆ ಸಂಭವನೀಯ ಕಾರಣ ಅಥವಾ ಕನಿಷ್ಠ ತೊಡಕಾದರೂ ಆಗಿರಬಹುದಾದ ಸಾಧ್ಯತೆಯ ಬಗ್ಗೆ ಪರಿಶೀಲಿಸುತ್ತಿದ್ದಾರೆ. ಮಾನಸಿಕ ಒತ್ತಡವು ಜಠರ/ಜಠರೀಯ ಹುಣ್ಣು/ವ್ರಣಗಳುಂಟಾಗುವುದರಲ್ಲಿ ಪ್ರಭಾವ ಬೀರಬಹುದೆಂಬ ಬಗ್ಗೆ ವಾದವಿವಾದಗಳಿವೆ. ಯಾಂತ್ರಿಕ ಉಸಿರಾಟದ ಚಿಕಿತ್ಸೆ ಪಡೆಯುತ್ತಿರುವ ಅನೇಕ ರೋಗಿಗಳಲ್ಲಿ ಗಮನಿಸಿದ ಹಾಗೆ ಉರಿಯೂತ ಹಾಗೂ ತಲೆಗಾದ ಗಾಯಗಳು ದೈಹಿಕ ಒತ್ತಡದಿಂದಾಗುವ ಹುಣ್ಣು/ವ್ರಣಗಳಿಗೆ ಕಾರಣವಾಗಬಹುದಾಗಿದೆ.
ಅಕಾಡೆಮಿ ಆಫ್ ಬಿಹೇವಿಯರಲ್ ಮೆಡಿಸಿನ್ ರೀಸರ್ಚ್ ಸಂಸ್ಥೆ ಏರ್ಪಡಿತ ತಜ್ಞರ ಮಂಡಳಿಯು ಹುಣ್ಣು/ವ್ರಣಗಳು ಸಂಪೂರ್ಣವಾಗಿ ಸೋಂಕಿನಿಂದಲೇ ಆಗುವ ರೋಗವಲ್ಲವೆಂದೂ ಮಾನಸಿಕ ಕಾರಣಗಳು ಗಮನಾರ್ಹ ಪರಿಣಾಮ ಬೀರುವವೆಂಬ ಅಭಿಪ್ರಾಯಕ್ಕೆ ಬಂದಿರುತ್ತಾರೆ.[೧] ಸಂಶೋಧಕರು H. ಪೈಲೊರಿ ಸೋಂಕಿಗೆ ಒತ್ತಡವು ಹೇಗೆ ಕಾರಣವಾಗಬಹುದೆಂದು ಪರೀಕ್ಷಿಸುತ್ತಿದ್ದಾರೆ. ಉದಾಹರಣೆಗೆ, ಹೆಲಿಕೋಬ್ಯಾಕ್ಟರ್ ಪೈಲೊರಿ ಯು ಆಮ್ಲೀಯ ವಾತಾವರಣದಲ್ಲಿ ವರ್ಧಿಸುತ್ತವೆ, ಹಾಗೂ ಒತ್ತಡವು ಹೆಚ್ಚುವರಿ ಹೊಟ್ಟೆ/ಉದರ ಆಮ್ಲದ ಉತ್ಪಾದನೆಗೆ ಕಾರಣವಾಗುತ್ತದೆಂದು ಆಗಲೇ ನಿದರ್ಶಿಸಲಾಗಿದೆ. ಇದನ್ನು ದೀರ್ಘಕಾಲೀನ ನೀರಲ್ಲಿ-ಮುಳುಗಿಸುವುದಕ್ಕೆ-ವಿರೋಧಿಸುವ ಒತ್ತಡ ಹಾಗೂ H. ಪೈಲೊರಿ ಯ ಸೋಂಕುಗಳೆರಡೂ ಜಠರ/ಜಠರೀಯ ಹುಣ್ಣು/ವ್ರಣಗಳೊಂದಿಗೆ ಸ್ವತಂತ್ರವಾದ ಸಂಬಂಧ ಹೊಂದಿವೆ ಎಂಬುದನ್ನು ಇಲಿಗಳ ಮೇಲೆ ನಡೆಸಿದ ಅಧ್ಯಯನವು ಸಮರ್ಥಿಸಿತು.[೧೧]
ಥಾಯ್ ಆಸ್ಪತ್ರೆಯಲ್ಲಿನ ಜಠರ/ಜಠರೀಯ ಹುಣ್ಣು/ವ್ರಣ ರೋಗಿಗಳ ಅಧ್ಯಯನವು ತೀವ್ರವಾದ ಒತ್ತಡವು ಜಠರ/ಜಠರೀಯ ಹುಣ್ಣು/ವ್ರಣದ ಹೆಚ್ಚಿನ ಸಾಧ್ಯತೆಯ ಅಪಾಯ ಹೊಂದಿದೆ ಎಂಬುದನ್ನು ತೋರಿಸಿತು, ಅಷ್ಟೇ ಅಲ್ಲದೇ ತೀವ್ರ ಒತ್ತಡ ಹಾಗೂ ಊಟದ ಸಮಯದಲ್ಲಿನ ಏರುಪೇರುಗಳ ಸಂಯೋಜನೆಯು ಗಮನಾರ್ಹ ಅಪಾಯವನ್ನುಂಟುಮಾಡಬಲ್ಲದು.[೧೨]
ರೋಗನಿರ್ಣಯ/ನಿದಾನ
[ಬದಲಾಯಿಸಿ]ಜಠರದರ್ಶಕವೆಂದೂ ಕರೆಯಲಾಗುವ ಈಸೋಫೆಗೋಗ್ಯಾಸ್ಟರೋಡ್ಯುವೋಡೆನೋಸ್ಕೊಪಿ (EGD), ಜಠರ/ಜಠರೀಯ ಹುಣ್ಣು/ವ್ರಣಪೀಡಿತರೆಂದು ಅನುಮಾನಿತರಾದ ರೋಗಿಗಳಿಗೆ ಮಾಡುವ ಎಂಬುದು ಒಂದು ವಿಧವಾದ ಅಂತರ್ದರ್ಶನ ಪ್ರಕ್ರಿಯೆಯಾಗಿದೆ. ನೇರವಾಗಿ ನೋಡುವ ಮೂಲಕ ಹುಣ್ಣಿನ/ವ್ರಣದ ಸ್ಥಳ ಹಾಗೂ ತೀವ್ರತೆಯನ್ನು ಪತ್ತೆಹಚ್ಚಬಹುದು. ಅಷ್ಟೇಅಲ್ಲದೇ ಯಾವುದೇ ಹುಣ್ಣು/ವ್ರಣ ಇರದಿದ್ದರೆ, EGDಯು ಅನೇಕವೇಳೆ ಪರ್ಯಾಯ ರೋಗನಿದಾನವನ್ನು ನೀಡಬಲ್ಲದು.
ಹೆಲಿಕೋಬ್ಯಾಕ್ಟರ್ ಪೈಲೊರಿ ಯ ರೋಗನಿದಾನವನ್ನು ಕೆಳಕಂಡಂತೆ ಮಾಡಬಹುದು:
- ಯೂರಿಯಾ ಶ್ವಾಸ/ಉಸಿರು ತಪಾಸಣೆ (ಆಕ್ರಮಣಕಾರಿಯಲ್ಲದ/ಗಾಯಗೊಳ್ಳುವಿಕೆಯಿಲ್ಲದ ಹಾಗೂ EGD ಬೇಡದ);
- EGD ಅಂಗಾಂಶಛೇದನೆಯ ಮಾದರಿಯಿಂದ ನೇರ ಸಂಗೋಪನೆ; ಇದನ್ನು ಮಾಡುವುದು ಕಷ್ಟಸಾಧ್ಯವಲ್ಲದೇ ದುಬಾರಿಯಾದುದು. ಬಹುತೇಕ ವೈದ್ಯಕೀಯ ಲ್ಯಾಬ್‌ಗಳು H. ಪೈಲೊರಿ ಯ ಸಂಗೋಪನೆಯ ಸೌಲಭ್ಯಗಳನ್ನು ಹೊಂದಿರುವುದಿಲ್ಲ;
- ತ್ವರಿತ ಯೂರೇಸ್ ತಪಾಸಣೆಯ ಮೂಲಕ ಅಂಗಾಂಶಛೇದನೆ ಮಾದರಿಯಲ್ಲಿನ ಯೂರೇಸ್ ಚಟುವಟಿಕೆಯ ನೇರ ಪತ್ತೆ;
- ರಕ್ತದಲ್ಲಿನ ಪ್ರತಿಕಾಯಗಳ ಮಟ್ಟದ ಅಳೆಯುವಿಕೆ (EGD ಅಗತ್ಯವಿಲ್ಲ). EGDರಹಿತ ಧನಾತ್ಮಕ ಪ್ರತಿಕಾಯದ ಅಸ್ಥಿತ್ವ ಮಾತ್ರವೇ ನಿರ್ಮೂಲನ ಚಿಕಿತ್ಸೆ ನಡೆಸಲು ನಿರ್ಧಾರಕವೇ ಎಂಬುದಿನ್ನೂ ವಿವಾದಾತ್ಮಕವಾಗಿದೆ;
- ಮಲದಲ್ಲಿನ ಪ್ರತಿಜನಕ ತಪಾಸಣೆ;
- EGD ಅಂಗಾಂಶಛೇದನೆಯನ್ನು ಊತಕಶಾಸ್ತ್ರೀಯ ತಪಾಸಣೆ ಹಾಗೂ ವರ್ಣಸಿಕ್ತಗೊಳಿಸುವಿಕೆ.
ಹುಣ್ಣು/ವ್ರಣಗಳ ಇತರೆ ಕಾರಣಗಳ ಸಾಧ್ಯತೆಯನ್ನು, ಪ್ರಮುಖವಾಗಿ ಮಾರಣಾಂತಿಕತೆಯನ್ನು (ಜಠರದ/ಗ್ಯಾಸ್ಟ್ರಿಕ್ ಅರ್ಬುದ)ದ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಹೊಟ್ಟೆ/ಉದರದಲ್ಲಿನ ದೀರ್ಘವಾದ (ದೊಡ್ಡ) ಬಾಗುವಿಕೆ ಯ ಹುಣ್ಣು/ವ್ರಣಗಳ ವಿಚಾರದಲ್ಲಿ ಇದು ವಿಶೇಷವಾಗಿ ಅನ್ವಯಿಸುತ್ತದೆ ; ಇವುಗಳಲ್ಲಿ ಬಹುತೇಕವುಗಳು ಬೇರೂರಿದ H. ಪೈಲೊರಿ ಸೋಂಕಿನ ಪರಿಣಾಮವಾಗಿರುತ್ತವೆ.
ಒಂದು ವೇಳೆ ಜಠರ/ಜಠರೀಯ ಹುಣ್ಣು/ವ್ರಣವು ಒಳನುಗ್ಗಿ ಆಚೆಬಂದರೆ, ಜಠರ ಹಾಗೂ ಕರುಳುಗಳ ನಡುವಿನ ಪ್ರದೇಶದ ಒಳಗಿಂದ ಗಾಳಿಯು ಹೊರಬಂದು (ಇದು ಯಾವಾಗಲೂ ಸ್ವಲ್ಪ ಗಾಳಿಯನ್ನು ಹೊಂದಿರುತ್ತದೆ) ಜಠರದ ಒಳಪೊರೆಯ ಕುಹರದೊಳಕ್ಕೆ ಹೋಗುತ್ತದೆ (ಇಲ್ಲಿ ಸಾಮಾನ್ಯವಾಗಿ ಗಾಳಿ ಇರುವುದಿಲ್ಲ). ಇದರಿಂದಾಗಿ ಜಠರದ ಒಳಪೊರೆಯ ಕುಹರದೊಳಗೆ "ಮುಕ್ತ ಅನಿಲ" ಉಂಟಾಗುವುದಕ್ಕೆ ಕಾರಣವಾಗುತ್ತದೆ. ಎದೆಯ X-ರೇ ತೆಗೆಯುವಾಗಿನಂತೆ ನೇರ ನಿಂತಿದ್ದರೆ, ಅನಿಲವು ವಪೆಯ ಕೆಳಗಿನವರೆಗೆ ತೇಲಿಹೋಗುತ್ತದೆ. ಆದ್ದರಿಂದ ನಿಂತು ತೆಗೆಸಿದ ಎದೆಯ X-ರೇ ಅಥವಾ ಅಂಗಾತನಾಗಿ ಪಾರ್ಶ್ವ ಕಿಬ್ಬೊಟ್ಟೆಯ X-ರೇಯಲ್ಲಿ ಕಂಡುಬರುವ ಜಠರದ ಒಳಪೊರೆಯ ಕುಹರದೊಳಗಿನ ಅನಿಲವು ರಂಧ್ರೀಕರಣಗೊಂಡ ಜಠರ/ಜಠರೀಯ ಹುಣ್ಣು/ವ್ರಣ ರೋಗದ ಸೂಚನೆಯಾಗಿರುತ್ತದೆ.
ಸ್ಥೂಲದೃಷ್ಠಿಗೋಚರ ಕಾಣಿಸಿಕೊಳ್ಳುವಿಕೆ
[ಬದಲಾಯಿಸಿ]ಜಠರದ/ಗ್ಯಾಸ್ಟ್ರಿಕ್ ಹುಣ್ಣು/ವ್ರಣಗಳು ಬಹುತೇಕವಾಗಿ ಹೊಟ್ಟೆ/ಉದರದ ಅಲ್ಪ ಬಾಗುವಿಕೆಯ ಪ್ರದೇಶದಲ್ಲಿ ಕೇಂದ್ರೀಕರಣಗೊಂಡಿರುತ್ತದೆ. ಹುಣ್ಣು/ವ್ರಣವು 2ರಿಂದ 4 cm ವ್ಯಾಸದ, ಮೃದು ತಲದ ಹಾಗೂ ಲಂಬ ಅಂಚುಗಳುಳ್ಳ ವೃತ್ತಾಕಾರದಿಂದ ಅಂಡಾಕೃತಿ ಮಾದರಿಯ ದೇಹಭಿತ್ತಿಯ ದೋಷ ("ರಂಧ್ರ")ವಾಗಿರುತ್ತದೆ. ಜಠರ/ಜಠರೀಯ ಹುಣ್ಣು/ವ್ರಣದ ತೀವ್ರತರವಾದ ರೂಪದಲ್ಲಿ ಈ ಅಂಚುಗಳು ಎತ್ತರಿಸಿರುವುದಿಲ್ಲ ಅಥವಾ ಅನಿಯತವಾಗಿರುತ್ತದೆ, ಆದರೆ ನಿಯತವಾಗಿದ್ದು ಎತ್ತರಿಸಿದ ಅಂಚುಗಳೊಂದಿಗೆ ಸುತ್ತಲೂ ಉರಿಯೂತವನ್ನು ಬೇರೂರಿದ ರೂಪವು ಹೊಂದಿರುತ್ತದೆ. ಹುಣ್ಣು/ವ್ರಣ ರೂಪಿ ಜಠರದ/ಗ್ಯಾಸ್ಟ್ರಿಕ್ ಅರ್ಬುದದಲ್ಲಿ ಅಂಚುಗಳು ಅನಿಯತವಾಗಿರುತ್ತವೆ. ಸುತ್ತಲಿರುವ ಲೋಳೆಪೊರೆಯು ದೇಹಭಿತ್ತಿಯ ಮೇಲಾದ ಮಚ್ಚೆ ಗುರುತಿನ ಪರಿಣಾಮವಾಗಿ ರೇಡಿಯಲ್ ಮೂಳೆಯಲ್ಲಿ ಮಡಿಕೆಗಳನ್ನುಂಟು ಮಾಡಬಹುದು.
ಸೂಕ್ಷ್ಮರೂಪದಲ್ಲಿ ಕಾಣಿಸಿಕೊಳ್ಳುವಿಕೆ
[ಬದಲಾಯಿಸಿ]ಜಠರದ/ಗ್ಯಾಸ್ಟ್ರಿಕ್ ಜಠರ/ಜಠರೀಯ ಹುಣ್ಣು/ವ್ರಣ ಆಮ್ಲ-ಪೆಪ್ಸಿನ್ ಆಕ್ರಮಣದಿಂದಾಗಿ ಉಂಟಾಗುವ ಮಸ್ಕ್ಯುಲಾರಿಸ್ ಲೋಳೆಪೊರೆಗಳು ಹಾಗೂ ಮಸ್ಕ್ಯುಲಾರಿಸ್ ಪ್ರೋಪ್ರಿಯಾಗಳ ಮೂಲಕ ತೂರಿಹೋಗುವ ಲೋಳೆಪೊರೆಯ ದೋಷವಾಗಿದೆ. ಹುಣ್ಣು/ವ್ರಣದ ಪಾರ್ಶ್ವಗಳು ಲಂಬವಾಗಿದ್ದು ದೀರ್ಘಕಾಲೀನ ಜಠರದುರಿತಕ್ಕೆ ಕಾರಣವಾಗುತ್ತದೆ. ಸಕ್ರಿಯ ಹಂತದಲ್ಲಿ, ಹುಣ್ಣು/ವ್ರಣದ ತಲವು 4 ವಲಯಗಳನ್ನು ಹೊಂದಿರುತ್ತದೆ: ಉರಿಯೂತದ ಸ್ರಾವ, ಫೈಬ್ರಿನಾಭ ಊತಕದ ಕ್ಷಯ/ನೆಕ್ರೋಸಿಸ್, ಕಣದಂತಹಾ ಉಬ್ಬುಗಳಾಗುವ ಅಂಗಾಂಶ ಹಾಗೂ ಎಳೆಗಳಿಂದ ಕೂಡಿದ/ನಾರಿನಂಥ ಅಂಗಾಂಶ. ಹುಣ್ಣು/ವ್ರಣದ ಎಳೆಗಳಿಂದ ಕೂಡಿದ ತಲವು ದಪ್ಪಭಿತ್ತಿಯ ನಾಳಗಳನ್ನು ಹೊಂದಿರಬಹುದು ಅಥವಾ ಗರಣೆಗಟ್ಟಿದ ರಕ್ತನಾಳಗಳನ್ನು ಹೊಂದಿರಬಹುದು.[೧೩]
ಅಧಿಜಠರದ/ಗ್ಯಾಸ್ಟ್ರಿಕ್ ನೋವಿನ ಭಿನ್ನಲಕ್ಷಣಗಳ ರೋಗನಿದಾನ
[ಬದಲಾಯಿಸಿ]ಚಿಕಿತ್ಸೆ
[ಬದಲಾಯಿಸಿ]EGDಯನ್ನು ಕೈಗೊಳ್ಳುವ ಮುನ್ನ ಹುಣ್ಣು/ವ್ರಣದಂತಹಾ ರೋಗಲಕ್ಷಣಗಳನ್ನು ಹೊಂದಿರುವ ಯುವ ರೋಗಿಗಳಿಗೆ ಅನೇಕವೇಳೆ ಪ್ರತ್ಯಾಮ್ಲಗಳು ಅಥವಾ H2 ಪ್ರತಿವರ್ತಿಗಳನ್ನು ನೀಡಿ ಚಿಕಿತ್ಸೆ ನೀಡುವುದು ವಾಡಿಕೆ. ಬಿಸ್ಮುತ್ ಸಂಯುಕ್ತಗಳು ವಾಸ್ತವವಾಗಿ ಸಾವಯವಿಗಳನ್ನು ಕಡಿಮೆಗೊಳಿಸಬಲ್ಲವು ಅಥವಾ ನಿರ್ಮಲಗೊಳಿಸಬಲ್ಲವು, ಬಿಸ್ಮುತ್ ಸಬ್‌ಸಾಲಿಸೈಲೇಟ್ ಉತ್ಪನ್ನಗಳ ಮೇಲಿನ ಲೇಬಲ್‌ಗಳಲ್ಲಿ ಹುಣ್ಣು/ವ್ರಣಗಳನ್ನು ಹೊಂದಿರುವ ವ್ಯಕ್ತಿಗಳು ಅವುಗಳನ್ನು ಬಳಸಬಾರದು ಎಂದು ಎಚ್ಚರಿಸಿರುತ್ತವೆ.
ಸ್ಟಿರಾಯ್ಡ್‌ಅಲ್ಲದ ಉರಿಶಾಮಕಗಳನ್ನು(NSAIDಗಳು) ತೆಗೆದುಕೊಳ್ಳುವ ರೋಗಿಗಳಿಗೆ NSAIDಗಳ ಉಪ-ಪರಿಣಾಮವಾದ ಜಠರ/ಜಠರೀಯ ಹುಣ್ಣು/ವ್ರಣಗಳನ್ನು ತಡೆಯಲು ಪ್ರೋಸ್ಟಾಗ್ಲಾಂಡಿನ್ ಸದೃಶಗಳನ್ನು ಕೂಡಾ (ಮೈಸೋಪ್ರಾಸ್ಟಲ್ ), ತೆಗೆದುಕೊಳ್ಳಲು ಸೂಚಿಸಬಹುದು.
H. ಪೈಲೊರಿ ಸೋಂಕಿರುವಾಗ, ಹೆಚ್ಚು ಪ್ರಭಾವಶಾಲಿಯಾದ ಚಿಕಿತ್ಸೆಯೆಂದರೆ 2 ಪ್ರತಿಜೀವಕಗಳ ಸಂಯೋಜನೆಯನ್ನು (e.g. ಕ್ಲಾರಿಥ್ರೋಮೈಸಿನ್, ಅಮಾಕ್ಸಿಸಿಲ್ಲಿನ್, ಟೆಟ್ರಾಸೈಕ್ಲೀನ್, ಮೆಟ್ರೋನಿಡಜೋಲ್) ಹಾಗೂ 1 ಪ್ರೋಟಾನ್ ಪಂಪ್ ತಡೆಕಾರಕವನ್ನು (PPI), ಕೆಲವೊಮ್ಮೆ ಬಿಸ್ಮುತ್ ಸಂಯುಕ್ತದೊಂದಿಗೆ ನೀಡುವುದು. ಜಟಿಲ, ಚಿಕಿತ್ಸಾ-ವಿರೋಧಿ ಪ್ರಕರಣಗಳಲ್ಲಿ, 3 ಪ್ರತಿಜೀವಕಗಳನ್ನು (e.g. ಅಮಾಕ್ಸಿಸಿಲ್ಲಿನ್ + ಕ್ಲಾರಿಥ್ರೋಮೈಸಿನ್ + ಮೆಟ್ರೋನಿಡಜೋಲ್) PPIಯೊಂದಿಗೆ ಒಟ್ಟಿಗೆ ಬಳಸಬಹುದು ಹಾಗೂ ಕೆಲವೊಮ್ಮೆ ಬಿಸ್ಮುತ್ ಸಂಯುಕ್ತದೊಂದಿಗೆ ಬಳಸಬಹುದು.. ಜಟಿಲವಲ್ಲದ ಪ್ರಕರಣಗಳಲ್ಲಿ ಪ್ರಭಾವೀ ಪ್ರಥಮ ಸ್ತರದ ಚಿಕಿತ್ಸೆಯೆಂದರೆ ಅಮಾಕ್ಸಿಸಿಲ್ಲಿನ್ + ಮೆಟ್ರೋನಿಡಜೋಲ್ + ಪ್ಯಾಂಟಾಪ್ರಾಜೋಲ್ (ಇದೊಂದು PPI)ಗಳ ಬಳಕೆ. H. ಪೈಲೊರಿ ಇಲ್ಲದೆಡೆ, ದೀರ್ಘಕಾಲೀನ ಡೋಸ್‌ನ PPIಗಳನ್ನು ಅನೇಕವೇಳೆ ಬಳಸಲಾಗುವುದು.
H. ಪೈಲೊರಿ ಚಿಕಿತ್ಸೆಯು ಸಾಧಾರಣವಾಗಿ ಸೋಂಕನ್ನು ಗುಣಪಡಿಸಿ, ರೋಗಲಕ್ಷಣಗಳಿಂದ ಬಿಡುಗಡೆಗೊಳಿಸಿ ಅಂತಿಮವಾಗಿ ಹುಣ್ಣು/ವ್ರಣಗಳನ್ನು ಗುಣಪಡಿಸುತ್ತವೆ. ಸೋಂಕು ಮರುಕಳಿಸಬಹುದಾಗಿದ್ದು ಅಗತ್ಯವಿದ್ದಲ್ಲಿ ಇತರೆ ಪ್ರತಿಜೈವಿಕಗಳನ್ನು ಬಳಸಿಕೊಂಡು ಮರುಚಿಕಿತ್ಸೆಯೂ ಬೇಕಾಗಬಹುದು. 1990ರ ದಶಕದ ನಂತರದ PPI'ಗಳ ವ್ಯಾಪಕ ಬಳಕೆಯ ನಂತರ, ಜಟಿಲ್ಲವಲ್ಲದ ಜಠರ/ಜಠರೀಯ ಹುಣ್ಣು/ವ್ರಣಗಳಿಗೆ ಶಸ್ತ್ರಚಿಕಿತ್ಸೀಯ ಪ್ರಕ್ರಿಯೆಗಳನ್ನು ("ಅಧಿಕ ಆಯ್ಕೆಯ ವ್ಯಾಗೋಟಮಿ"ಯಂತಹಾ) ತ್ಯಜಿಸಲಾಗಿದೆ.
ರಂಧ್ರೀಕೃತ ಜಠರ/ಜಠರೀಯ ಹುಣ್ಣು/ವ್ರಣವು ತುರ್ತು ಶಸ್ತ್ರಚಿಕಿತ್ಸೆಯ ಪ್ರಕರಣವಾಗಿದ್ದು ರಂಧ್ರೀಕರಣದ ಶಸ್ತ್ರಚಿಕಿತ್ಸೆಯ ಸರಿಪಡಿಕೆ ಅವಶ್ಯವಾಗಿರುತ್ತದೆ. ಬಹುತೇಕ ರಕ್ತಸ್ರಾವ ಹುಣ್ಣು/ವ್ರಣಗಳಿಗೆ ಬರೆಗುಳ, ಚುಚ್ಚುಮದ್ದು, ಅಥವಾ ಕತ್ತರಿಸುವಿಕೆಗಳ ಮೂಲಕ ರಕ್ತಸ್ರಾವವನ್ನು ನಿಲ್ಲಿಸಲು ತುರ್ತಾಗಿ ಅಂತರ್ದರ್ಶನವು ಅಗತ್ಯವಾಗಿರುತ್ತದೆ.
ಸೋಂಕು/ಸಾಂಕ್ರಾಮಿಕಶಾಸ್ತ್ರ
[ಬದಲಾಯಿಸಿ]ಬಹುತೇಕ ರಕ್ತಸ್ರಾವ ಹುಣ್ಣು/ವ್ರಣಗಳಿಗೆ ಬರೆಗುಳ, ಚುಚ್ಚುಮದ್ದು, ಅಥವಾ ಕತ್ತರಿಸುವುದರ ಮೂಲಕ ರಕ್ತಸ್ರಾವವನ್ನು ನಿಲ್ಲಿಸಲು ತುರ್ತಾಗಿ ಅಂತರ್ದರ್ಶನವು ಅಗತ್ಯವಾಗಿರುತ್ತದೆ.[೧೫]
ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹೆಲಿಕೋಬ್ಯಾಕ್ಟರ್ ಪೈಲೊರಿ ಸೋಂಕುಗಳ ಅಟ್ಟಹಾಸದ ಸಾಧ್ಯತೆಯು ಸ್ಥೂಲವಾಗಿ ವಯಸ್ಸಿನೊಂದಿಗೆ ಏರುತ್ತದೆ (i.e., 20ನೇ ವಯಸ್ಸಿನಲ್ಲಿ 20%, 30ನೇ ವಯಸ್ಸಿನಲ್ಲಿ 30%, 80ನೇ ವಯಸ್ಸಿನಲ್ಲಿ 80% etc). ಇದರ ಹರಡಿಕೆಯು ಮೂರನೇ ವಿಶ್ವದ ರಾಷ್ಟ್ರಗಳಲ್ಲಿ ಹೆಚ್ಚಿದೆ. ಇದರ ಪ್ರಸಾರವು ಆಹಾರ, ಕಲುಷಿತ ಅಂತರ್ಜಲ, ಹಾಗೂ ಮಾನವ ಜೊಲ್ಲು/ಲಾಲಾರಸಗಳಿಂದ (ಚುಂಬನ ಅಥವಾ ಆಹಾರಪಾತ್ರೆಗಳನ್ನು ಹಂಚಿಕೊಳ್ಳುವುದರಿಂದ) ಆಗುತ್ತದೆ.[ಸೂಕ್ತ ಉಲ್ಲೇಖನ ಬೇಕು]
ಹೆಲಿಕೋಬ್ಯಾಕ್ಟರ್ ಸೋಂಕುಗಳ ಅಲ್ಪ ಪ್ರಮಾಣದ ಪ್ರಕರಣಗಳು ಅಂತಿಮವಾಗಿ ಹುಣ್ಣು/ವ್ರಣಕ್ಕೆ ಕಾರಣವಾಗುವುದಲ್ಲದೇ, ಹೆಚ್ಚಿನ ಸಂಖ್ಯೆಯ ಜನರು ಅನಿರ್ದಿಷ್ಟ ಅಸೌಖ್ಯತೆ, ಕಿಬ್ಬೊಟ್ಟೆಯ ನೋವು ಅಥವಾ ಜಠರದುರಿತಗಳನ್ನು ಹೊಂದುತ್ತಾರೆ.
ಇತಿಹಾಸ
[ಬದಲಾಯಿಸಿ]ಈ ರೋಗಕ್ಕೆ ಸೂಕ್ಷ್ಮಜೀವಿಗಳೇ ಪ್ರಮುಖ ಕಾರಣ ಎಂದು ತಿಳಿದುಬರುವ ಸಾಕಷ್ಟು ಹಿಂದೆಯೇ 1958ರಿಂದಲೇ ಆರಂಭಗೊಂಡು ಜಾನ್ ಲಿಕೌಡಿಸ್, ಎಂಬ ಗ್ರೀಸ್‌ನಲ್ಲಿನ ಓರ್ವ ವೈದ್ಯ, ಜಠರ/ಜಠರೀಯ ಹುಣ್ಣು/ವ್ರಣ ರೋಗದ ರೋಗಿಗಳಿಗೆ ಅಜೈವಿಕಗಳ ಸಹಾಯದಿಂದ ಚಿಕಿತ್ಸೆ ಕೊಡುತ್ತಿದ್ದನು.[೧೬]
1982ರಲ್ಲಿ, ಹೆಲಿಕೋಬ್ಯಾಕ್ಟರ್ ಪೈಲೊರಿ ಗಳು ಹುಣ್ಣು/ವ್ರಣಗಳಿಗೆ ಮೂಲಕಾರಣವೆಂಬುದನ್ನು ರಾಬಿನ್ ವಾರ್ರೆನ್ ಹಾಗೂ ಬ್ಯಾರಿ J. ಮಾರ್ಷಲ್ ಎಂಬ ಇಬ್ಬರು ಆಸ್ಟ್ರೇಲಿಯನ್ ವಿಜ್ಞಾನಿಗಳು ಮತ್ತೆ ಕಂಡುಹಿಡಿದಿದ್ದರು.[೧೭] ತಮ್ಮ ಮೂಲ ಲೇಖನದಲ್ಲಿ, ವಾರ್ರೆನ್ ಹಾಗೂ ಮಾರ್ಷಲ್ ಈ ಬ್ಯಾಕ್ಟೀರಿಯ/ಸೂಕ್ಷ್ಮಜೀವಿ/ಏಕಾಣುಜೀವಿಯ ಆಕ್ರಮಿಸುವಿಕೆಯಿಂದ ಬಹುತೇಕ ಹೊಟ್ಟೆ/ಉದರ ಹುಣ್ಣು/ವ್ರಣಗಳು ಹಾಗೂ ಜಠರದುರಿತಗಳು ಉಂಟಾಗುತ್ತವೆಯೇ ಹೊರತು ಈ ಹಿಂದೆ ಊಹಿಸಿದ ಹಾಗೆ ಒತ್ತಡ ಅಥವಾ ಮಸಾಲೆಯುಕ್ತ ಆಹಾರದಿಂದಲ್ಲ ಎಂದು ವಾದಿಸಿದ್ದರು.[೧೮]
H. ಪೈಲೊರಿ ಯ ಊಹಾಕಲ್ಪನೆಗೆ ಹೆಚ್ಚಿನ ಪ್ರೋತ್ಸಾಹ ಸಿಗಲಿಲ್ಲ,[ಸಾಕ್ಷ್ಯಾಧಾರ ಬೇಕಾಗಿದೆ] ಹಾಗಾಗಿ ಸ್ವಯಂ-ಪ್ರಾಯೋಗಿಕ ಪರೀಕ್ಷೆಯ ಅಂಗವಾಗಿ ಮಾರ್ಷಲ್ ರೋಗಿಯಿಂದ ಹೊರತೆಗೆಯಲ್ಪಟ್ಟ ಸೂಕ್ಷ್ಮಜೀವಿಗಳ ಸಂಗೋಪನೆಯನ್ನು ಹೊಂದಿರುವ ಪೆಟ್ರಿ ಆಹಾರ/ಪೇಯವನ್ನು ಕುಡಿದ ಪರಿಣಾಮವಾಗಿ ಕೆಲವೇ ಸಮಯದಲ್ಲಿ ಜಠರದುರಿತಕ್ಕೀಡಾದರು. ಅವರ ರೋಗಲಕ್ಷಣಗಳು ಎರಡು ವಾರಗಳ ನಂತರ ಮಾಯವಾದರೂ, ಸೋಂಕಿನ ರೋಗಲಕ್ಷಣಗಳಲ್ಲಿ ದುರ್ಗಂಧಶ್ವಾಸವೂ ಒಂದಾದುದರಿಂದ ತನ್ನ ಪತ್ನಿಯ ಒತ್ತಾಯದ ಮೇರೆಗೆ ಉಳಿದ ಸೂಕ್ಷ್ಮ ಜೀವಿಗಳನ್ನು ಕೊಲ್ಲಲು ಅಜೈವಿಕಗಳನ್ನು ಸೇವಿಸಿದರು.[೧೯] ಈ ಪ್ರಯೋಗವನ್ನು 1984ರಲ್ಲಿ ಆಸ್ಟ್ರೇಲಿಯನ್ ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟಿಸಲಾಯಿತು ಹಾಗೂ ಜರ್ನಲ್‌ನ ಬಹುಚರ್ಚಿತ ಲೇಖನಗಳಲ್ಲೊಂದಾಯಿತು.
1997ರಲ್ಲಿ, ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಸಂಸ್ಥೆಯು, ಇತರೆ ಸರ್ಕಾರಿ ಸಂಸ್ಥೆ, ವಿದ್ಯಾಸಂಸ್ಥೆ ಹಾಗೂ ಉದ್ಯಮಗಳೊಂದಿಗೆ ಸೇರಿ H. ಪೈಲೊರಿ ಹಾಗೂ ಹುಣ್ಣು/ವ್ರಣಗಳ ನಡುವಿನ ಸಂಬಂಧದ ಬಗ್ಗೆ ಆರೋಗ್ಯ ಉತ್ಪನ್ನಗಳ ಸೇವಾದಾರರು ಹಾಗೂ ಗ್ರಾಹಕರುಗಳಿಗೆ ಮಾಹಿತಿ ಒದಗಿಸಲು ರಾಷ್ಟ್ರೀಯ ಶಿಕ್ಷಣ ಅಭಿಯಾನವನ್ನು ಪ್ರಾರಂಭಿಸಿತು. ಈ ಅಭಿಯಾನದಿಂದಾಗಿ ಹುಣ್ಣು/ವ್ರಣಗಳು ಗುಣವಾಗಬಹುದಾದ ಸೋಂಕಾಗಿದ್ದು, ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದೆಂದು ಹಾಗೂ H. ಪೈಲೊರಿ ಬಗ್ಗೆ ಮಾಹಿತಿ ಪ್ರಸರಿಸುವ ಮೂಲಕ ಹಣ ಉಳಿಸಬಹುದು ಎಂಬ ಸುದ್ದಿಯು ಬಲಗೊಂಡಿತು.[೨೦]
2005ರಲ್ಲಿ, ಸ್ಟಾಕ್‌ಹೋಮ್‌ನ ಕರೋಲಿಂಕಾ ಇನ್‌ಸ್ಟಿಟ್ಯೂಟ್ ಸಂಸ್ಥೆಯು ಶರೀರವಿಜ್ಞಾನ ಅಥವಾ ವೈದ್ಯಕೀಯಕ್ಕೆಂದು ನೀಡಲಾಗುವ ನೊಬೆಲ್ ಪ್ರಶಸ್ತಿಯನ್ನು Dr. ಮಾರ್ಷಲ್ ಹಾಗೂ ಅವರ ದೀರ್ಘಕಾಲೀನ ಸಹಯೋಗಿ Dr. ವಾರ್ರೆನ್ ರವರುಗಳಿಗೆ "ಬ್ಯಾಕ್ಟೀರಿಯ/ಸೂಕ್ಷ್ಮಜೀವಿ/ಏಕಾಣುಜೀವಿ ಹೆಲಿಕೋಬ್ಯಾಕ್ಟರ್ ಪೈಲೊರಿ ಯ ಪತ್ತೆ ಹಾಗೂ ಜಠರದುರಿತ ಹಾಗೂ ಜಠರ/ಜಠರೀಯ ಹುಣ್ಣು/ವ್ರಣ ರೋಗಗಳಲ್ಲಿ ಅದರ ಪಾತ್ರವನ್ನು ಪತ್ತೆ ಮಾಡಿದುದಕ್ಕಾಗಿ" ನೀಡಿದರು. ಪ್ರಾಧ್ಯಾಪಕ ಮಾರ್ಷಲ್ H. ಪೈಲೊರಿ ಬಗೆಗಿನ ಸಂಶೋಧನೆಯನ್ನು ಮುಂದುವರೆಸಿಕೊಂಡು ಅಣುಜೀವವಿಜ್ಞಾನದ ಪ್ರಯೋಗಾಲಯವನ್ನು ಪಶ್ಚಿಮ ಆಸ್ಟ್ರೇಲಿಯಾದ ಪರ್ತ್‌ನ UWAನಲ್ಲಿ ನಡೆಸುತ್ತಿದ್ದಾರೆ.
ಈ ಹಿಂದೆ ಮೆಲುಕು-ಮಿಠಾಯಿ/ಚ್ಯೂಯಿಂಗ್‌ಗಮ್‌ನ ಬಳಕೆಯು ಜಠರದ/ಗ್ಯಾಸ್ಟ್ರಿಕ್ ಹುಣ್ಣು/ವ್ರಣಗಳಿಗೆ ಕಾರಣವಾಗುತ್ತದೆ ಎಂಬ ತಪ್ಪು ಭಾವನೆಯನ್ನು ವ್ಯಾಪಕವಾಗಿ ಒಪ್ಪಲಾಗಿತ್ತು. ಗಮ್‌ಅನ್ನು ಅಗಿಯುವುದು ಹೊಟ್ಟೆ/ಉದರದಲ್ಲಿ ಹೈಡ್ರೋಕ್ಲೋರಿಕ್ ಆಮ್ಲದ ಉತ್ಪಾದನೆಗೆ ವಿಪರೀತ-ಪ್ರಚೋದನೆ ನೀಡುತ್ತದೆಂದು ವೈದ್ಯಕೀಯ ವೃತ್ತಿಪರರು ಭಾವಿಸಿದ್ದರು. ಕೆಳ(ಆಮ್ಲೀಯ) pH(pH2)ಮಟ್ಟದ, ಅಥವಾ ಹೈಪರ್‌ಕ್ಲೋರ್‌ಹೈಡ್ರಿಯಾವು ಆಹಾರದ ಕೊರತೆಯ ಸಮಯದಲ್ಲಿ ಹೊಟ್ಟೆ/ಉದರ ಪಟ್ಟಿಯನ್ನು ಕರಗಿಸುತ್ತದೆ ಹಾಗೂ ಅದರಿಂದಾಗಿ ಜಠರದ/ಗ್ಯಾಸ್ಟ್ರಿಕ್ ಹುಣ್ಣು/ವ್ರಣಗಳು ಉಂಟಾಗುತ್ತವೆ ಎಂದು ನಂಬಲಾಗಿತ್ತು.[೨೧]
ಇದರ ಹೊರತಾಗಿ ಬಹಳ ಹಿಂದಲ್ಲದೇ ಕೆಲವರು ನೈಸರ್ಗಿಕ ಮರದ ರಾಳದ ಹೊರತೆಗೆದ ಸಾರ, ಅಗಿಯುವ ಗಮ್‌ಗಳು, H. ಪೈಲೊರಿ ಸೂಕ್ಷ್ಮಜೀವಿಗಳನ್ನು ಸಕ್ರಿಯವಾಗಿ ನಿವಾರಿಸುತ್ತವೆ ಎಂದು ನಂಬಿದ್ದರು.[೨೨] ಆದಾಗ್ಯೂ, ಅನೇಕ ನಂತರದ ಅಧ್ಯಯನಗಳು H. ಪೈಲೊರಿ ಮಟ್ಟದ ಮೇಲೆ ಅಗಿಯುವ ಗಮ್‌ಗಳ ಬಳಕೆಯು ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಸಾಬೀತು ಪಡಿಸಿವೆ.[೨೩][೨೪]
ಟಿಪ್ಪಣಿಗಳು
[ಬದಲಾಯಿಸಿ]- ↑ ಕುರಾಟಾ 1997ರಲ್ಲಿ "Fig. 8ರಲ್ಲಿರುವ ದತ್ತವು 89% of ಎಲ್ಲಾ ಗಂಭೀರ ಮೇಲ್ಪದರದ GI ರೋಗಗಳು NSAIDಗಳು ಹಾಗೂ H. ಪೈಲೊರಿಕ್ಕೆ ಕಾರಣವಾಗುತ್ತದೆಂದು ಹಾಗೂ, ಸಿಗರೇಟ್ ಸೇವನೆಯು ಇದಕ್ಕೆ ಸಹಕ್ರಿಯಾ ಪರಿಣಾಮ ಬೀರುತ್ತದೆ ಎಂಬುದನ್ನು ಸೂಚಿಸುತ್ತಿದೆ" ಎಂದು ವಿವರಿಸುತ್ತಾರೆ."(14)
- ↑ ಸಾನ್ನೆನ್‌ಬರ್ಗ್ ತಮ್ಮ ಅಧ್ಯಯನದಲ್ಲಿ ಎಚ್ಚರಿಕೆಯಿಂದ ಹುಣ್ಣು/ವ್ರಣ ಗುಣಪಡಿಸುವಿಕೆ ಸಂಬಂಧಿಸಿದ ಇತರೆ ಸಂಭಾವ್ಯ ಕಾರಣಗಳಲ್ಲಿ, "ಮಿತವಾದ ಮದ್ಯಸೇವನೆ ಬಹುಶಃ [ಕೂಡಾ] ಹುಣ್ಣು/ವ್ರಣ ಗುಣವಾಗುವಲ್ಲಿ ಸಹಾಯಕವಾಗಬಹುದು" ಎಂಬ ನಿರ್ಣಯ ತಿಳಿಸುತ್ತಾರೆ (p. 1066)
ಆಕರಗಳು
[ಬದಲಾಯಿಸಿ]- ↑ ೧.೦ ೧.೧ "GI Consult: Perforated Peptic Ulcer". Archived from the original on 2007-08-15. Retrieved 2007-08-26.
- ↑ Cullen DJ, Hawkey GM, Greenwood DC; et al. (1997). "Peptic ulcer bleeding in the elderly: relative roles of Helicobacter pylori and non-steroidal anti-inflammatory drugs". Gut. 41 (4): 459–62. PMC 1891536. PMID 9391242.
{{cite journal}}
: Explicit use of et al. in:|author=
(help)CS1 maint: multiple names: authors list (link) - ↑ "Peptic Ulcer: Peptic Disorders: Merck Manual Home Edition". Retrieved 2007-10-10.
- ↑ Johannessen T. "Peptic ulcer disease". Pasienthandboka. Archived from the original on 2009-02-10. Retrieved 2010-05-15.
- ↑ Kato, Ikuko (1992). "A Prospective Study of Gastric and Duodenal Ulcer and Its Relation to Smoking, Alcohol, and Diet". American Journal of Epidemiology. 135 (5): 521–530. PMID 1570818. Retrieved 2010-03-18.
{{cite journal}}
: Unknown parameter|coauthors=
ignored (|author=
suggested) (help) - ↑ ೬.೦ ೬.೧ Salih, Barik (June 2007). "H pylori infection and other risk factors associated with peptic ulcers in Turkish patients: A retrospective study". World Journal of Gastroenterology. 13 (23): 3245–3248. PMID 17589905.
{{cite journal}}
:|access-date=
requires|url=
(help); Unknown parameter|coauthors=
ignored (|author=
suggested) (help) - ↑ Martin, U.S.A.F.M.C. (Major), David F. (28 Jun 2008). "Campylobacter pylori, NSAIDS, and Smoking: Risk Factors for Peptic Ulcer Disease". American Journal of Gastroenterology. 84 (10): 1268–1272. PMID 2801677 doi:10.1111/j.1572-0241.1989.tb06166.x. Retrieved 2010-03-18.
{{cite journal}}
: Unknown parameter|coauthors=
ignored (|author=
suggested) (help)[ಶಾಶ್ವತವಾಗಿ ಮಡಿದ ಕೊಂಡಿ] - ↑ Kurata Ph.D.,M.P.H., John H. (Jan 1997). "Meta-analysis of Risk Factors for Peptic Ulcer: Nonsteroidal Antiinflammatory Drugs, Helicobacter pylori, and Smoking". Journal of Clinical Gastroenterology. 24 (1): 2–17. PMID 9013343. Retrieved 2010-03-18.
{{cite journal}}
: Unknown parameter|coauthors=
ignored (|author=
suggested) (help) - ↑ ಬಹುತೇಕ 100 ವರ್ಷಗಳ ಕಾಲ, ವಿಜ್ಞಾನಿಗಳು ಹಾಗೂ ವೈದ್ಯರು ಹುಣ್ಣು/ವ್ರಣಗಳು ಒತ್ತಡ, ಮಸಾಲೆ ಆಹಾರ, ಹಾಗೂ ಮದ್ಯಸಾರ/ಆಲ್ಕೋಹಾಲ್‌ಗಳಿಂದ ಉಂಟಾಗುತ್ತವೆ ಎಂದು ಭಾವಿಸಿದ್ದರು. ಅದರ ಚಿಕಿತ್ಸೆಯು ಹಾಸಿಗೆಯಲ್ಲಿ ವಿಶ್ರಾಂತಿ ಹಾಗೂ ಸಾತ್ವಿಕ ಆಹಾರಗಳನ್ನು ಒಳಗೊಂಡಿತ್ತು. ನಂತರ, ಸಂಶೋಧಕರು ಹೊಟ್ಟೆ/ಉದರ ಆಮ್ಲವನ್ನು ಕಾರಣಗಳ ಪಟ್ಟಿಗೆ ಸೇರಿಸಿ ಪ್ರತ್ಯಾಮ್ಲಗಳನ್ನು ಹುಣ್ಣು/ವ್ರಣಗಳ ಚಿಕಿತ್ಸೆಯಲ್ಲಿ ಬಳಸತೊಡಗಿದರು. ನ್ಯಾಷನಲ್ ಡೈಜೆಸ್ಟೀವ್ ಡಿಸೀಸಸ್ ಇನ್‌ಫರ್ಮೇಷನ್ ಕ್ಲಿಯರಿಂಗ್ ಹೌಸ್ Archived 2006-07-05 ವೇಬ್ಯಾಕ್ ಮೆಷಿನ್ ನಲ್ಲಿ.
- ↑ A, Sonnenberg (1981). "Predictors of duodenal ulcer healing and relapse". Journal of Gastroenterology. 81 (6): 1061–1067. PMID 7026344. Archived from the original on 2013-01-13. Retrieved 2010-03-18.
{{cite journal}}
: Unknown parameter|coauthors=
ignored (|author=
suggested) (help) - ↑ Kim YH, Lee JH, Lee SS; et al. (2002). "Long-term stress and Helicobacter pylori infection independently induce gastric mucosal lesions in C57BL/6 mice". Scand. J. Gastroenterol. 37 (11): 1259–64. doi:10.1080/003655202761020515. PMID 12465722.
{{cite journal}}
: Explicit use of et al. in:|author=
(help)CS1 maint: multiple names: authors list (link) - ↑ Wachirawat W, Hanucharurnkul S, Suriyawongpaisal P; et al. (2003). "Stress, but not Helicobacter pylori, is associated with peptic ulcer disease in a Thai population". J Med Assoc Thai. 86 (7): 672–85. PMID 12948263.
{{cite journal}}
: Explicit use of et al. in:|author=
(help)CS1 maint: multiple names: authors list (link) - ↑ "ATLAS OF PATHOLOGY". Retrieved 2007-08-26.
- ↑ [30]
- ↑ Snowden FM (2008). "Emerging and reemerging diseases: a historical perspective". Immunol. Rev. 225: 9–26. doi:10.1111/j.1600-065X.2008.00677.x. PMID 18837773.
{{cite journal}}
: Unknown parameter|month=
ignored (help) - ↑ ಮಾರ್ಷಲ್ B.J., ed. (2002), "ಹೆಲಿಕೋಬ್ಯಾಕ್ಟರ್ ಪಯೋನೀರ್ಸ್: ಫಸ್ಟ್‌ಹ್ಯಾಂಡ್ ಅಕೌಂಟ್ಸ್ ಫ್ರಂ ದ ಸೈಂಟಿಸ್ಟ್‌ಸ್ ಹೂ ಡಿಸ್ಕವರ್ಡ್ ಹೆಲಿಕೋಬ್ಯಾಕ್ಟರ್ಸ್, 1892–1982", ISBN 0-86793-035-7. ಬೆಸಿಲ್ ರಿಗಾಸ್, ಎಫ್ಸ್‌ಟಾಥಿಯೋಸ್ D. ಪಾಪಾವಾಸಾಸ್ಸಿಲಿಯೌವ್. ಜಾನ್ ಲಿಕೌಡಿಸ್. 1958ರಲ್ಲಿ ಜಠರ/ಜಠರೀಯ ಹುಣ್ಣು/ವ್ರಣ ರೋಗದ ರೋಗನಿದಾನ ಮಾಡಿದ ಹಾಗೂ ಅದಕ್ಕೆ ಚಿಕಿತ್ಸೆ ಕಂಡುಹಿಡಿದ ಗ್ರೀಸ್‌ನಲ್ಲಿನ ಓರ್ವ ವೈದ್ಯ.
- ↑ Marshall B.J. (1983). "Unidentified curved bacillus on gastric epithelium in active chronic gastritis". Lancet. 1 (8336): 1273–5. PMID 6134060.
- ↑ Marshall B.J., Warren J.R. (1984). "Unidentified curved bacilli in the stomach patients with gastritis and peptic ulceration". Lancet. 1 (8390): 1311–5. doi:10.1016/S0140-6736(84)91816-6. PMID 6145023.
- ↑ Van Der Weyden MB, Armstrong RM, Gregory AT (2005). "The 2005 Nobel Prize in physiology or medicine". Med. J. Aust. 183 (11–12): 612–4. PMID 16336147.
{{cite journal}}
: CS1 maint: multiple names: authors list (link) - ↑ ಹುಣ್ಣು/ವ್ರಣ, ಡಯಾಗ್ನೋಸಿಸ್ ಅಂಡ್ ಟ್ರೀಟ್‌ಮೆಂಟ್ - CDC ಬ್ಯಾಕ್ಟೀರಿಯಲ್, ಮೈಕೋಟಿಕ್ ಡಿಸೀಸಸ್
- ↑ ' ಮೆಡಿಸಿನ್ ಫಾರ್ ನರ್ಸಸ್ (ಟೂಹೇ, 1974)
- ↑ Huwez FU, Thirlwell D, Cockayne A, Ala'Aldeen DA (1998). "Mastic gum kills Helicobacter pylori [Letter to the editor, not a peer-reviewed scientific article]". N. Engl. J. Med. 339 (26): 1946. PMID 9874617. Archived from the original on 2008-09-15. Retrieved 2008-09-06.
{{cite journal}}
: Unknown parameter|month=
ignored (help)CS1 maint: multiple names: authors list (link) ಮುಂದಿನ ಸಂಪುಟದಲ್ಲಿ ಅವುಗಳ ಸರಿಪಡಿಕೆಗಳಿಗಾಗಿ Archived 2008-10-05 ವೇಬ್ಯಾಕ್ ಮೆಷಿನ್ ನಲ್ಲಿ. ಇವನ್ನೂ ನೋಡಿ. - ↑ Loughlin MF, Ala'Aldeen DA, Jenks PJ (2003). "Monotherapy with mastic does not eradicate Helicobacter pylori infection from mice". J. Antimicrob. Chemother. 51 (2): 367–71. doi:10.1093/jac/dkg057. PMID 12562704.
{{cite journal}}
: Unknown parameter|month=
ignored (help)CS1 maint: multiple names: authors list (link) - ↑ Bebb JR, Bailey-Flitter N, Ala'Aldeen D, Atherton JC (2003). "Mastic gum has no effect on Helicobacter pylori load in vivo". J. Antimicrob. Chemother. 52 (3): 522–3. doi:10.1093/jac/dkg366. PMID 12888582.
{{cite journal}}
: Unknown parameter|month=
ignored (help)CS1 maint: multiple names: authors list (link)
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಆಳ ಜಠರದ/ಗ್ಯಾಸ್ಟ್ರಿಕ್ ಹುಣ್ಣು/ವ್ರಣದ ಅಂತರ್ದರ್ಶನದ ವಿಡಿಯೋ Archived 2010-03-07 ವೇಬ್ಯಾಕ್ ಮೆಷಿನ್ ನಲ್ಲಿ.
- ಗ್ಯಾಸ್ಟ್ರಿಕ್ ಅಲ್ಸರ್ Archived 2012-07-19 ವೇಬ್ಯಾಕ್ ಮೆಷಿನ್ ನಲ್ಲಿ. ರೇಡಿಯಾಲಜಿ ಅಂಡ್ ಎಂಡೋಸ್ಕಪಿ MedPixಇಂದಾ
- CS1 errors: explicit use of et al.
- CS1 maint: multiple names: authors list
- CS1 errors: unsupported parameter
- CS1 errors: access-date without URL
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Pages using PMID magic links
- Pages using ISBN magic links
- Articles with unsourced statements from April 2008
- Articles with invalid date parameter in template
- Articles with hatnote templates targeting a nonexistent page
- ಉಲ್ಲೇಖಗಳ ಅಗತ್ಯ ಇರುವ ಲೇಖನಗಳು
- Articles that show a Medicine navs template
- ಗ್ಯಾಸ್ಟ್ರೋಎಂಟರಾಲಜಿ
- ಕಿಬ್ಬೊಟ್ಟೆ ನೋವು