ವಿಷಯಕ್ಕೆ ಹೋಗು

ಏಲು ಭಾಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಏಲು
ಹೇಳು
ಪ್ರದೇಶ ಶ್ರೀಲಂಕಾ
ಯುಗ ಸಿಂಹಳೀಯ ಮತ್ತು ಧಿವೇಹಿ ಭಾಷೆಗಳಾಗಿ ವಿಕಸನಗೊಂಡಿತು
ಭಾಷಾ ಸಂಕೇತಗಳು ISO 639-3
ಗ್ಲೋಟೊಲಾಗ್ ಯಾವುದೂ ಇಲ್ಲ

ಏಲು, ಹೇಲು ಅಥವಾ ಹೇಳು ಎಂದು ಕರೆಯಲ್ಪಡುವ ಭಾಷೆಗಳು ಒಂದೇ ಆಗಿವೆ. ಇದು ಕ್ರಿ.ಪೂ ೩ ನೇ ಶತಮಾನದಲ್ಲಿದ್ದ ಮಧ್ಯ ಇಂಡೋ-ಆರ್ಯನ್ ಭಾಷೆ ಅಥವಾ ಪ್ರಾಕೃತ ಭಾಷೆ. ಇದು ಸಿಂಹಳೀಯ ಮತ್ತು ಧಿವೇಹಿ ಭಾಷೆಗಳಿಗೆ ಮೂಲವಾಗಿದೆ. ಸಿಂಹಳ ಭಾಷೆ ಶ್ರೀಲಂಕಾ ದೇಶದ ರಾಷ್ಟ್ರೀಯ ಭಾಷೆ. ಇದರ ಹಿಂದಿನ ರೂಪವಾದ ಏಲು ಮತ್ತು ಪ್ರಾಕೃತ ಭಾಷೆಯಲ್ಲಿ ಶ್ರೀಲಂಕಾದಲ್ಲಿ ಸಿಕ್ಕಿರುವ ಹಲವು ಶಿಲಾಶಾಸನಗಳಿವೆ. ಇದರಲ್ಲೇ ಶ್ರೀಲಂಕಾದಲ್ಲಿನ ತೇರವಾಡ ಬುದ್ಧ ಧರ್ಮಕ್ಕೆ ಸಂಬಂಧಿಸಿದ ಗ್ರಂಥಗಳೂ ಇವೆ.

ಆರ್. ಸಿ, ಚಿಲ್ಡರ್ಸ್ ಅವರು ತಮ್ಮ Journal of the Royal Asiatic Society ರಲ್ಲಿ ಹೀಗೆ ಹೇಳುತ್ತಾರೆ

[Elu] is the name by which is known an ancient form of the Sinhala language from which the modern vernacular of Ceylon is immediately received, and to which the latter bears is of the same relation that the English of today bears to Anglo-Saxon...The name Elu is no other than Sinhala much succeeded, standing for an older form, Hĕla or Hĕlu, which occurs in some ancient works, and this again for a still older, Sĕla, which brings us back to the Pali Sîhala.[]

ಅಂದರೆ ಏಲು ಎಂದು ಕರೆಯಲ್ಪಡುವ ಸಿಂಹಳ ಭಾಷೆಯಿಂದ ಈಗಿನ ಸಿಲೋನ್(ಶ್ರೀಲಂಕಾದ ಹಿಂದಿನ ಹೆಸರು)ನಲ್ಲಿರುವ ಭಾಷೆ ಬೆಳೆದುಬಂದಿತು. ಈಗಿನ ಇಂಗ್ಲೀಷ್ ಭಾಷೆ ಹಿಂದಿನ ಆಂಗ್ಲೋ ಸ್ಯಾಕ್ಸನ್ ಭಾಷೆಯೊಂದಿಗೆ ಹೊಂದಿರುವಂತಹ ಸಂಬಂಧವನ್ನೇ ಇಂದಿನ ಸಿಂಹಳ ಹಿಂದಿನ ಏಲುವಿನೊಂದಿಗೆ ಹೊಂದಿದೆ .ಏಲು ಎಂಬ ಭಾಷೆ ಅದರ ಹಿಂದಿನ ರೂಪ ಹೇಲ ಅಥವಾ ಹೇಲುವಿನಿಂದ ಮತ್ತು ಅವು ಅವುಗಳ ಇನ್ನೂ ಹಿಂದಿನ ರೂವ ಸೇಲದಿಂದ ಬೆಳೆದುಬಂದವು. ಈ ಸೇಲ ಭಾಷೆ ಸಿಂಹಳ ಪ್ರಾಂತ್ಯದಲ್ಲಿ ಬಳಕೆಯಲ್ಲಿದ್ದ ಪಾಲಿಯನ್ನು ಹೋಲುತ್ತದೆ.

ಪ್ರಸ್ತುತ ಬಳಕೆಯಲ್ಲಿರುವ ಸಿಂಹಳ ಭಾಷೆಯ ಬೆಳವಣಿಗೆಯನ್ನು ನಾಲ್ಕು ಹಂತಗಳಲ್ಲಿ ವಿಂಗಡಿಸಲಾಗಿದೆ.

  1. ಸಿಂಹಳ (ಕ್ರಿ.ಪೂ ೩ನೇ ಶತಮಾನದವರೆಗೆ)
  2. Proto-ಸಿಂಹಳ (ಕ್ರಿ.ಪೂ ೩ನೇ ಶತಮಾನದಿಂದ– ಕ್ರಿ.ಶ ೭ನೇ ಶತಮಾನದವರೆಗೆ)
  3. Medieval ಸಿಂಹಳ (ಕ್ರಿ.ಶ ೭ನೇ ಶತಮಾನದಿಂದ–ಹನ್ನೆರಡನೆಯ ಶತಮಾನದವರೆಗೆ)
  4. ಆಧುನಿಕ ಸಿಂಹಳ (ಕ್ರಿ.ಶ ೧೨ನೇ ಶತಮಾನದಿಂದ – ಇಲ್ಲಿನವರೆಗೆ)

ಮೇಲಿನ ವಿಂಗಡಣೆಯಂತೆ ಕ್ರಿ.ಪೂ ಮೂರನೇ ಶತಮಾನದವರೆಗೆ ಬಳಕೆಯಲ್ಲಿದ್ದ ಸಿಂಹಳ ಭಾಷೆಯ ರೂಪವೇ ಏಲು ಭಾಷೆ. ಹಾಗಾಗೇ ಈ ಭಾಷೆಯನ್ನು ಸಿಂಹಳ ಪ್ರಾಕೃತ ಎನ್ನುತ್ತಾರೆ. ಪಾಲಿ ವಿದ್ವಾಂಸರಾದ ಥಾಮಸ್ ವಿಲಿಯಂ ರೈಸ್ ಡೇವಿಡ್ಸ್ ಏಲು ಭಾಷೆಯನ್ನು "ಸಿಲೋನ್(ಶ್ರೀಲಂಕಾದ ಹಿಂದಿನ ಹೆಸರು) ಪ್ರಾಕೃತ" ಎಂದು ಉಲ್ಲೇಖಿಸುತ್ತಾರೆ. []

ಹೇಲ, ಹೇಲವ ಎಂದು ಶ್ರೀಲಂಕಾದ ಏಲು ಭಾಷೆಯ ಪದಗಳನ್ನು ಸೂಚಿಸಲು ಬಳಸುತ್ತಾರೆ. ಆಧುನಿಕ ಸಿಂಹಳೀಯರು ಏಲು ಭಾಷೆಯನ್ನು ಸಾಮಾನ್ಯವಾಗಿ "ಅಮಿಸ್ರಾ" (ಮಿಶ್ರಣವಿಲ್ಲದ್ದು) ಎಂದು ಕರೆಯುತ್ತಾರೆ. ಆಧುನಿಕ ಸಿಂಹಳ ಭಾಷೆ ಭಾರತದ ಭಾಷೆಗಳಾದ ತಮಿಳು ಮತ್ತು ಪಾಶ್ಚಾತ್ಯ ಭಾಷೆಗಳಾದ ಇಂಗ್ಲೀಷ್, ಪೋರ್ಚುಗೀಸುಗಳಿಂದ ಹಲವು ಪದಗಳನ್ನು ಎರವಲು ಪಡೆದುಕೊಂಡಿರುವುದರಿಂದ ಏಲು ಭಾಷೆಗೆ ಅಮಿಸ್ರಾ ಎಂದು ಕರೆದಿರಬಹುದು.

ಏಳು ಭಾಷೆಯ ಒಂದು ಲಕ್ಷಣವೆಂದರೆ ಇದರಲ್ಲಿ ಹೃಸ್ವ ಸ್ವರಗಳು ಜಾಸ್ತಿ ಇರುತ್ತವೆ. ಬೇರೆ ಪ್ರಾಕೃತ ಭಾಷೆಗಳಾದ ಪಾಲಿ ಭಾಷೆಯಲ್ಲಿರುವಂತಹ ಕ್ಲಿಷ್ಟಕರ ವ್ಯಂಜನಗಳು ಇಲ್ಲಿ ಇರುವುದಿಲ್ಲ.

ಏಲುವನ್ನು ಪಾಲಿ ಮತ್ತು ಸಂಸ್ಕೃತಕ್ಕೆ ಹೋಲಿಸಿದರೆ

[ಬದಲಾಯಿಸಿ]

ಪ್ರಾಕೃತ ಭಾಷೆ ಆಗಿರುವುದರಿಂದ, ಏಲು ಪಾಲಿಯಂತಹ ಇತರ ಪ್ರಾಕೃತಗಳೊಂದಿಗೆ ನಿಕಟ ಸಂಬಂಧ ಹೊಂದಿದೆ. ವಾಸ್ತವವಾಗಿ, ಏಲು ಭಾಷೆಯ ಪದರಚನೆಯ ಹೆಚ್ಚಿನ ಪ್ರಮಾಣವು ಪಾಲಿಗೆ ಹೋಲುತ್ತದೆ. ಪಾಲಿ ಮತ್ತು ಸಂಸ್ಕೃತದ ವ್ಯಾಕರಣದ ಮತ್ತು ತಾಂತ್ರಿಕ ಅಂಶಗಳನ್ನು ಏಲುಗೆ ಪರಿವರ್ತಿಸಲಾಗಿದ್ದನ್ನು ಸುಲಭವಾಗಿ ಕಾಣಬಹುದು ಎಂದು ಭಾಷಾಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ. ಈ ರೂಪಾಂತರಗಳ ವ್ಯಾಪಕತೆಯಿಂದಾಗಿ, ಕೊಟ್ಟಿರುವ ಏಲು ಭಾಷೆಯ ಪದವು ಹಳೆಯ ಪ್ರಾಕೃತ ನಿಘಂಟಿನ ಭಾಗವಾಗಿದೆಯೇ ಅಥವಾ ಸಂಸ್ಕೃತದಿಂದ ರೂಪಾಂತರಗೊಂಡಿದೆಯೇ ಎಂದು ಹೇಳಲು ಯಾವಾಗಲೂ ಸಾಧ್ಯವಿಲ್ಲ.

ಸ್ವರಗಳು ಮತ್ತು ವ್ಯಂಜನಗಳು

[ಬದಲಾಯಿಸಿ]
  • ಸಂಸ್ಕೃತದ ದೀರ್ಘ ಆಕಾರ ಏಲು ಭಾಷೆಯ ಅಕಾರವಾಗುತ್ತದೆ

ಉದಾಹರಣೆಗಳು: ಆಕ್ರೋಶ → ಅಕೋಸ ಆಕ್ರೋಶ → ಅಕೋಸ ಆದರ → ಅದರ ಆನಂದ → ಅನದ ಬ್ರಾಹ್ಮಣ → ಬಮುಣ

  • ಸಂಸ್ಕೃತದ ಐ ಮತ್ತು ಔ ಯಾವಾಗಲೂ ಅನುಕ್ರಮವಾಗಿ ಏಲುವಿನ ಇ ಮತ್ತು ಒ ಗೆ ರೂಪಾಂತರ ಹೊಂದಿರುತ್ತದೆ
ಉದಾಹರಣೆಗಳು: ಮೈತ್ರಿ → ಮೆತ್
ಔಷಧ → ಒಸದ
  • ಸಂಸ್ಕೃತ ಅವಿ ಆಗುತ್ತದೆ ಎಲುವಿನ (ಅಂದರೆ ಅವಿ → ಐ → )
ಉದಾಹರಣೆ: ಸ್ಥವಿರ → ಥೇರ

ಧ್ವನಿ ಬದಲಾವಣೆಗಳು

[ಬದಲಾಯಿಸಿ]
  • ಸಂಸ್ಕೃತ ಮತ್ತು ಪಾಲಿಯಲ್ಲಿನ ಆರಂಭಿಕ ಕ ಏಲುವಿನಲ್ಲಿ ಸ ಅಥವಾ ಹ ಆಗುತ್ತದೆ
ಉದಾಹರಣೆಗಳು: ಕಂದ → ಸಂದ , ಹಂದ
  • ಪ ಅನ್ನು ಬಿಟ್ಟುಬಿಡದಿದ್ದರೆ ವ ಆಗುತ್ತದೆ
ಉದಾಹರಣೆಗಳು: ರೂಪರುವಾ, ದೀಪದಿವಾ
  • ಸಂಸ್ಕೃತದ ಸ, ಶ, ಷ ಗಳು ಎಲುವಿನಲ್ಲಿ ಸ ಆಗುತ್ತದೆ
ಉದಾಹರಣೆಗಳು: ಶರಣ → ಸರಣ, ದೋಷದೋಸ
ದೇಶ--> ದೇಸ
  • ಸಂಸ್ಕೃತದ ಕ್ತಿ ಏಲುವಿನಲ್ಲಿ ತಿ ಅಥವಾ ವಿ ಆಗುತ್ತದೆ
ಉದಾಹರಣೆಗಳು: ಭಕ್ತಿಬಟಿಯ, ಶಕ್ತಿಸವಿಯ

ಸಂಯುಕ್ತ ವ್ಯಂಜನಗಳು

[ಬದಲಾಯಿಸಿ]

ಪದದ ಆರಂಭದಲ್ಲಿ ಒಂದೇ ವ್ಯಂಜನ ಮಾತ್ರ ಉಳಿಯಬಹುದು

ಉದಾಹರಣೆಗಳು: ಧರ್ಮದಹಮ
ಉದಾಹರಣೆಗಳು: ಪ್ರಾಣ → ಪಣ

ಪದದ ಮಧ್ಯದಲ್ಲಿ ಯಾವುದೇ ಗುಂಪು ಒಂದು ವ್ಯಂಜನವನ್ನು ಮೀರಬಾರದು

ಉದಾಹರಣೆಗಳು: ಅರ್ಥಅರುತ
ಉದಾಹರಣೆಗಳು: ದಂತ → ದತ

ಸಂಸ್ಕೃತ ಮತ್ತು ಪಾಲಿ ಸಮಾನಾರ್ಥಕಗಳೊಂದಿಗೆ ಎಲು ಪದಗಳ ಪಟ್ಟಿ

[ಬದಲಾಯಿಸಿ]
ಏಲು ಭಾಷೆ ಸಂಸ್ಕೃತ ಪಾಲಿ ಇಂಗ್ಲೀಷ್
ಅಸ ಅಕ್ಷಿ ಅಕ್ಕಿ eye
ಅದರ ಆದರ respect
ಅಗ ಅಗ್ರ ಅಗ್ಗ end, chief, principal
ಅಹಸ ಆಕಾಶ ಆಕಾಸ sky
ಅಕೊಸ ಆಕ್ರೋಶ ಅಕ್ಕೊಸ insult, abuse
ಅಕ್ಮನ ಆಕ್ರಮಣ ಅಕ್ಕಮನ attack
ಅಕ್ಸುಮ ಅಕ್ಷಮ intolerance, impatience
ಅಕುರ ಅಕ್ಷರ ಅಕ್ಸರ letter of the alphabet
ಅನದ ಆನಂದ ಆನಂದ bliss
aruta artha attha meaning
asuna āsana āsana seat
ata hasta hatta hand
atuna antra anta intestine
bambu brahma brahma Brahma
bamburā barbara barbarian
bamunā brāhmaṇa babhana Brahman
basa bhāṣā bhāsā language
bima bhūmi bhūmi land
bubula budbuda bubbula bubble
boduna bhōjana bhojana food
bodu bauddha bauddha Buddhist
bōsat bōdhisattva bōdhisatta Bodhisattva
dahama, dam dharma dhamma Dharma
data danta danta tooth
däla jāla jāla Net (device)
devola devālaya devālaya temple
diga, digu dīrgha dīgha long
diva jihvā jivhā tongue
diviya jīvita jīvita life
dudana, dujana durjana dujjana wicked, malicious
dujanā durjanayā wicked person
dukata duṣkṛta wicked deed
dulaba durlabha dullabha rare
duma dhūma dhūma smoke
dupa dhūpa dhūpa incense
gama grāma gāma village
gata gātra gatta body
gatakura gātrākṣara consonant
kana karṇa kanna ear
karuvā kāra person
keta kṣetra khetta field
kiḍa krīḍā sport
kila kīlā kīlā sport
kinu kṛṣṇa dark
kilu kliṣṭa kiliṭṭha dirty
kiluTu kliṣṭa kiliṭṭha dirty
kiri kṣīra khīra milk
kumarā kumāraka kumāra son, prince
kumari kumāri kumāri girl, princess
kuriru krūra kurūra cruel
laka laṅkā lanka Sri Lanka
lassana lakṣaṇa lakkhana beautiful
lova lōka lōka world
maga mārga magga way
magula maṅgala maṅgala marriage
matura mantra manta incantation
mäda madhyama, madhya majjha middle
miturā mitra mitta friend
mugalan moggallana mogallana
mudu mṛdu mudu soft
muwa mukha mukha mouth
mädura mandira mandira palace
mula mūla mūla origin
näba nābhi nābhi navel
näva naukā nāvā ship
nētra netta eye
nidana nidhāna nidhāna treasure
nimala nirmala nimmala pure
nipana niṣpanna production
nivana nirvāṇa nibbana Nirvana
nuvara nagara nagara city
pabala prabala pabala mighty
pamana pramāna pamāna amount
parapura paramparā generation
pänaya praśna panha problem, question
pava pāpa pāpa sin
pavasa pipāsa pipāsam thirst
parana purāṇa purāna old
parusa paruṣa pharusa harsh
pasana prasanna pasanna pleasant
pāsala pāṭhaśālā pāṭasālā school
pavaruna prakaraṇa treatise
pätuma prārthanā wish, hope
pedesa pradēśa country
pema prēma pema love
piduma pūjā pūjā offering
pina punya punya merit
pokuna puṣkariṇī pokkhariṇī pond
poson pūrva-śravaṇa pubba-savana (name of a month)
pota pustaka pottaka book
pun pūra, pūrṇa punna full
pupa puṣpa puppha flower
putā putra putta son
puva pūrva pubba former, prior
puvata pravṛtti pavatti news
rada rājan rājā king
rakusā rākṣasa rakkhasa demon
ratu, rat raktaka ratta red
räsa raśmi rasmi ray
räya rātri ratti night
ruka vṛkṣa rukkha tree
ruva rūpa rūpa shape, form
sangamit sanghamitra sangamitta
sanda candra canda moon
sämuni śākyamuni sakyamuni
sena sena army
sidura chidr chidda hole, gap, space
sirura śarīra sarīra body
soyurā, sohowurā sahōdara sodariya brother
sonduru sundara sundara beautiful
supina svapna supina dream
supun sampūrṇa sampunna complete
teda teja magnificence
tavasā tāpasa hermit
tisula triśūla Trishula (trident)
utura uttara uttarā north
väkiya vākya Sentence
vesak vaiṣākha Visakha Vesak
veses viśeṣa visesa special
viyarana vyākarana grammar
yakā yakṣa yakkha yaksha
yatura yantra yanta machine
yiva jīva jīva life

ಉಲ್ಲೇಖಗಳು

[ಬದಲಾಯಿಸಿ]
  1. Henry Yule; A. C. Burnell; William Crooke (2006), A glossary of colloquial Anglo-Indian words and phrases, Asian Educational Services, p. 344, ISBN 0-7007-0321-7
  2. Rhys Davids, Thomas William (2007). Buddhist India. T. W. Press. ISBN 978-1406756326.

ಇವನ್ನೂ ನೋಡಿ

[ಬದಲಾಯಿಸಿ]
  • ಭಾರತೀಯ ಉಪಖಂಡದ ಭಾಷಾ ಇತಿಹಾಸ