ಅರ್ಥ (ಸಂಸ್ಕೃತ ಪದ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅರ್ಥ "ಉದ್ದೇಶ, ಕಾರಣ, ಉದಾಹರಣೆ, ಅರ್ಥ, ಕಲ್ಪನೆ, ಸಂಪತ್ತು, ಆರ್ಥಿಕ ಸ್ಥಿತಿ ಅಥವಾ ಲಾಭ" ಎಂಬ ಭಾವದ ಒಂದು ಸಂಸ್ಕೃತ ಪದ. ಅದು ವಸ್ತುದ್ರವ್ಯ ಏಳಿಗೆಯ ಕಲ್ಪನೆಯನ್ನು ಸೂಚಿಸುತ್ತದೆ. ಹಿಂದೂ ಧರ್ಮದಲ್ಲಿ, ಅರ್ಥವು ಪುರುಷಾರ್ಥಗಳೆಂದು ಪರಿಚಿತವಾಗಿರುವ ಜೀವನದ ನಾಲ್ಕು ಗುರಿಗಳ ಪೈಕಿ ಒಂದು.