ವಿಷಯಕ್ಕೆ ಹೋಗು

ಬೆಳಕಿನ ಕಿರಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆಳಕಿನ ಕಿರಣವು ಅಥವಾ ಕಿರಣವು ಬೆಳಕಿನ ಮೂಲದಿಂದ ನಿರ್ದೇಶಿಲ್ಪಟ್ಟ ಪ್ರಕ್ಷೇಪಿಸಿದ ಶಕ್ತಿಯಾಗಿದೆ. ಸೂರ್ಯನ ಬೆಳಕು ಅನೇಕ ಮಾಧ್ಯಮಗಳಮೂಲಕ ಹಾಯ್ದು ಬರುವಾಗ ಅಂದರೆ ಮೋಡಗಳ ಮೂಲಕ, ಎಲೆಗಳ ರಾಶಿಯ ಮೂಲಕ,ಹಾಗು ಕಿಟಕಿಗಳ ಮೂಲಕ ತೂರಿಕೊಂಡು ಬರುವಾಗ ಅದು ಬೆಳಕಿನ ಕಿರಣದ ರೂಪವಾಗುತ್ತದೆ. ಕೃತ್ರಿಮವಾಗಿ ಬೆಳಕಿನ ಕಿರಣವನ್ನು ಹೊರ ಹೊಮ್ಮಿಸಲು ಒಂದು ದೀಪವನ್ನು ಮತ್ತು ಬೋಗೊಣಿಯಾಕಾರಾದ ಪ್ರತಿಫಲಕವನ್ನು ಬಳಸಬೇಕಾಗುತ್ತದೆ.ಉದಾಹರಣೆಗೆ.ಕಾರ್ ನ ಹೆಡ್ ದೀಪಗಳು,ಸ್ಪಾಟ್ ದೀಪಗಳು,ಪಾರ್ ಕ್ಯಾನ್ ಗಳು, ಹಾಗು ಎಲ್ಈಡಿ ಕೊಠಡಿಗಳಿಂದ ಬಂದ ಕಿರಣಗಳು.

Hk-Symphony of Lights 3420
Descending into cave
Wtc-2004-memorial

ದೃಗ್ಗೋಚರ ಬೆಳಕಿನ ಕಿರಣಗಳು

[ಬದಲಾಯಿಸಿ]

ಒಂದು ಕಡೆಯಿಂದ ಬೆಳಕಿನ ಕಿರಣವು ಕಾಣಿಸಬೇಕೆಂದರೆ,ವಸ್ತುಗಳ ಮೂಲಕ ಬೆಳಕು ಚದುರಬೇಕಾಗುತ್ತದೆ. ಉದಾಹರಣೆಗೆ,ಅತಿ ಸಣ್ಣ ದೂಳಿನ ಕಣಗಳು,ನೀರಿನಬಿಂದುಗಳು (ಮಂಜು,ದಟ್ಟ ಮಂಜು,ಮಳೆ) ಹಿಮ,ಅಥವಾ ಹೊಗೆ ಅಥವಾ ದೊಡ್ಡ ವಸ್ತುಗಳಾದ ಪಕ್ಷಿಗಳು. ಬೆಳಕಿನ ಪಥದಲ್ಲಿ ಅನೇಕ ವಸ್ತುಗಳಿದ್ದರೆ ಆಗ ಬೆಳಕು ನಿರಂತರವಾಗಿರುವಂತೆ ಕಾಣುತ್ತದೆ, ಅದರಂತೆ ಕೆಲವೇ ವಸ್ತುಗಳಿದ್ದರೆ ಬೆಳಕು ವೈಯಕ್ತಿಕ ಪ್ರಖರ ಬೆಳಕಿನ ಬಿಂದುಗಳಂತೆ ಕಾಣುತ್ತದೆ.

ಯಾವುದೆ ಸಂದರ್ಭದಲ್ಲಿ,ಬೆಳಕಿನ ಕಿರಣದ ಚದುರುವಿಕೆಯು ಹಾಗೂ ಒಟ್ಟಾರೆ (ಫಲಿತ) ದೃಗ್ಗೋಚರತೆಯು ಒಂದು ಕಡೆಯಿಂದ ಆಗುವ ಪ್ರಕ್ರಿಯೆಯನ್ನು ಟಿಂಡಾಲ್ ಪರಿಣಾಮ ಎನ್ನುವರು.

Why is the sky blue

ಪಾರ್ಶ್ವ ಗೋಚರತೆಯ ಪರಿಣಾಮಗಳು

[ಬದಲಾಯಿಸಿ]
  1. ಪ್ಲಾಶ್ ಲೈಟ್(ಬ್ಯಾಟರಿ);ಕೈಗಳಿಂದ ನಿರ್ದೇಶಿಲ್ಪಟ್ಟ ಬೆಳಿನ ಕಿರಣ.
  2. ಹೆಡ್ ಲೈಟ್(ಮುಂಭಾಗದಲ್ಲಿ ಬೀಳುವ ಬೆಳಕಿನ ಕಿರಣ;ವಾಹನದ ಮುಂಭಾಗದಲ್ಲಿ ಅಳವಡಿಸಲಾದ ದೀಪ,ವ್ಯಕ್ತಿಯ ಹಣೆಗೆ ಕಟ್ಟಿಕೊಂಡಿರುವ ದೀಪ, ಉದಾ ಹೆಲ್ಮೆಟ್ ಗೆ ಅಳವಡಿಸಲಾದ ದೀಪ)
  3. ದೀಪ ಸ್ತಂಭ(ಅಡ್ಡವಾಗಿ ಹಾಗೂ ವಿಶಾಲವಾಗಿ ತಿರುಗುವ ದೀಪ)
  4. ಶೋಧಕ ದೀಪ(ಎಲ್ಲಾ ದಿಕ್ಕುಗಳಲ್ಲಿ ಹಬ್ಬಿಕೊಂಡಿರುವ ಬೆಳಕಿನ ಕಿರಣ)

ಪಾರ್ಶ್ವ ಗೋಚರತೆಯ ಉದ್ದೇಶಗಳು

[ಬದಲಾಯಿಸಿ]

ಬೆಳಕಿನ ಕಿರಣದ ಪಾರ್ಶ್ವ ಗೋಚರತೆಯ ಉದ್ದೇಶಕ್ಕಾಗಿ ಕೆಲವುಸಾರಿ ಹೇಜ್ ಯಂತ್ರ ಮತ್ತು ಹೊಗೆ ಯಂತ್ರಗಳನ್ನು ಬಳಸಲಾಗುತ್ತದೆ.ಇದರಲ್ಲಿರುವ ಮುಖ್ಯ ವ್ಯತ್ಯಾಸವೆಂದರೆ ಹೊಗೆ ಅಥವಾ ಮಂಜು ಇದೇ ಒಂದು ದೃಶ್ಯ (ಗೊಚರ) ಪರಿಣಾಮವಾಗಿದೆ.

  1. ಲೇಜರ್ ಬೆಳಕು :ಲೇಜರ್ ಬೆಳಕನ್ನು ಸಾಮಾನ್ಯವಾಗಿ ದೃಶ್ಯ ಪರಿಣಾಮಗಳಿಗಾಗಿ ಸಂಗೀತದೊಂದಿಗೆ ಬಳಸಲಾಗುತ್ತದೆ.
  2. ಶೋಧಕ ದೀಪವನ್ನು ಸಾಮಾನ್ಯವಾಗಿ ಜಾಹಿರಾತಿಗಾಗಿ ಬಳಸುತ್ತಾರೆ.ಆಸಕ್ತಿಯುಳ್ಳ ವ್ಯಕ್ತಿಗಳು ತಮಗೆ ಬೇಕಾದ ವಸ್ತುವಿಗಾಗಿ ಈ ಬೆಳಕಿನ ಸಹಾಯದಿಂದ ಪತ್ತೆಹಚ್ಚುತ್ತಾರೆ.

ಇತರ ಅನ್ವಯಗಳು

[ಬದಲಾಯಿಸಿ]
  1. ದ್ಯುತಿ ಸಂವಹನಗಳಲ್ಲಿ.
  2. ಆವಗೆಂಪು ಮಾಹಿತಿಯ ಕೂಟ ದಲ್ಲಿ