ಕತ್ತಲೆ
ಕತ್ತಲೆಯು ಉಜ್ಜ್ವಲತೆಯ ಧ್ರುವೀಯ ವಿರೋಧ ಪದ, ಮತ್ತು ಇದನ್ನು ಗೋಚರ ಬೆಳಕಿನ ಬಹಳ ಕಡಿಮೆ ಪ್ರಮಾಣ ಅಥವಾ ಅನುಪಸ್ಥಿತಿಯ ಸ್ಥಿತಿ ಎಂದು ತಿಳಿಯಲಾಗುತ್ತದೆ.
ಮಾನವರು ಹೆಚ್ಚು ಉಜ್ಜ್ವಲತೆ ಅಥವಾ ಹೆಚ್ಚು ಕತ್ತಲೆಯ ಸ್ಥಿತಿಗಳಲ್ಲಿ ಬಣ್ಣಗಳನ್ನು ವ್ಯತ್ಯಾಸ ಮಾಡಲು ಅಸಮರ್ಥರಾಗಿದ್ದಾರೆ.[೧] ಸಾಕಷ್ಟಿಲ್ಲದ ಬೆಳಕಿನ ಸ್ಥಿತಿಗಳಲ್ಲಿ, ಗ್ರಹಿಕೆಯು ವರ್ಣರಹಿತ ಮತ್ತು ಅಂತಿಮವಾಗಿ, ಕಪ್ಪು ಆಗಿರುತ್ತದೆ.
ಕತ್ತಲೆಗೆ ಭಾವನಾತ್ಮಕ ಪ್ರತಿಕ್ರಿಯೆಯು ಅನೇಕ ಸಂಸ್ಕೃತಿಗಳಲ್ಲಿ ಈ ಪದದ ಅಲಂಕಾರಿಕ ಬಳಕೆಗಳನ್ನು ಉಂಟುಮಾಡಿದೆ.
ಸಂಪೂರ್ಣ ಕತ್ತಲೆ ಅಂದರೆ ಸೂರ್ಯನು ದಿಗಂತದ ೧೮ ಡಿಗ್ರಿಗಳಿಗಿಂತ ಕೆಳಗಿರುವ ಸ್ಥಿತಿ.
ಭೌತಶಾಸ್ತ್ರದ ಪರಿಭಾಷೆಯಲ್ಲಿ, ಒಂದು ವಸ್ತುವು ಫೋಟಾನ್‍ಗಳನ್ನು ಹೀರಿಕೊಂಡಾಗ ಅದನ್ನು ಕಪ್ಪು ಎಂದು ಹೇಳಲಾಗುತ್ತದೆ, ಮತ್ತು ಅದು ಇತರ ವಸ್ತುಗಳೊಡನೆ ಹೋಲಿಸಿದಾಗ ಮಬ್ಬಾಗಿ ಕಾಣಿಸುತ್ತದೆ. ಉದಾಹರಣೆಗೆ, ಮಂದ ಕಪ್ಪು ವರ್ಣದ್ರವ್ಯ ಹೆಚ್ಚು ಗೋಚರ ಬೆಳಕನ್ನು ಪ್ರತಿಬಿಂಬಿಸುವುದಿಲ್ಲ ಮತ್ತು ಮಬ್ಬಾಗಿ ಕಾಣಿಸುತ್ತದೆ, ಅದೇ ಬಿಳಿ ವರ್ಣದ್ರವ್ಯ ಬಹಳಷ್ಟು ಬೆಳಕನ್ನು ಪ್ರತಿಬಿಂಬಿಸುತ್ತದೆ ಮತ್ತು ಉಜ್ಜ್ವಲವಾಗಿ ಕಾಣಿಸುತ್ತದೆ. ಒಂದು ವಸ್ತುವು ಮಬ್ಬಾಗಿ ಕಾಣಿಸಬಹುದು, ಆದರೆ ಅದು ಮಾನವರು ಗ್ರಹಿಸಲಾಗದ ಆವರ್ತನದಲ್ಲಿ ಉಜ್ಜ್ವಲವಾಗಿರಬಹುದು.
ಉಲ್ಲೇಖಗಳು
[ಬದಲಾಯಿಸಿ]- ↑ "W. Wundt (1907): Outlines of Psychology - 6. Pure sensations". uni-leipzig.de.