ರೂಪಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರೂಪಕ ಎಂದರೆ ದೃಶ್ಯಕಾವ್ಯ ; ನಾವೀಗ ಇದೇ ಅರ್ಥದಲ್ಲಿ ನಾಟಕ ಎಂಬ ಪದ ಬಳಸುತ್ತೇವೆ. ರೂಪಕ ಮತ್ತು ಉಪರೂಪಕಗಳ ವಿಷಯ ಭರತನ ಕಾಲದಿಂದಲೂ ರೂಢಿಯಲ್ಲಿದೆ.

ಪ್ರಕಾರಗಳು[ಬದಲಾಯಿಸಿ]

ಭರತ ರೂಪಕಗಳನ್ನು ಹತ್ತು ರೀತಿಯಾಗಿಯೂ ಉಪರೂಪಕಗಳನ್ನು ಹದಿನಾಲ್ಕು ರೀತಿಯಾಗಿಯೂ ವಿಭಾಗಿಸಿದ. ಅವನ ಶಿಷ್ಯ ಕೋಹಲ ರೂಪಕದಲ್ಲಿ 20 ಭೇದಗಳಿವೆಯೆನ್ನುತ್ತಾನೆ. ಶಾರದಾತನಯ ತನ್ನ ಭಾವ ಪ್ರಕಾಶನದ ಪ್ರಕಾರ ರೂಪಕ 10, ಉಪರೂಪಕಗಳು 20 ಎಂದಿದ್ದಾನೆ. ದಶರೂಪದ ಧನಂಜಯನ ಪ್ರಕಾರ ರೂಪಕಗಳು 20. ವಿಶ್ವನಾಥ ಇಪ್ಪತ್ತೆಂಟು ಎನ್ನುತ್ತಾನೆ. ಅಗ್ನಿಪುರಾಣದಲ್ಲಿ 27 ಎಂದಿದೆ.

ರೂಪಕ ಉಪರೂಪಕವೆಂಬ ಭೇದ ರಸಕ್ಕಿಂತಲೂ ಅವುಗಳ ಪ್ರಯೋಗವನ್ನಾಶ್ರಯಿಸಿದೆ ಎನ್ನುವುದು ಉಚಿತ.

ಕೋಹಲ ರೂಪಕಗಳನ್ನು ಮಾರ್ಗ ಮತ್ತು ದೇಶೀ ಎಂದು ವಿಂಗಡಿಸಿದ್ದಾನೆ. ನೃತ್ಯಗೀತೆಗಳು ಗಂಭೀರವಾಗಿದ್ದ ಶಾಸ್ತ್ರೀಯವಾಗಿದ್ದರೆ ಮಾರ್ಗ, ಆಯಾ ದೇಶದ ಪದ್ಧತಿಯಂತೆ ಸ್ವಚ್ಚಂಧವಾಗಿದ್ದರೆ ದೇಶೀ ಎಂದು ಆತನ ತಾತ್ಪರ್ಯವಿರಬಹುದು. ನಾಟಿಕಾ, ಪ್ರಕಟಣಿಕಾ, ಬಾಣಿಕಾ, ಹಾಸಿಕಾ, ಅಯೋಗಿನೀ, ಡಮಿಕಾ, ಕಲೋತ್ಸಾಹವತೀ, ಚಿತ್ರಾ, ಜುಗುಪ್ಸಿತಾ, ಚಿತ್ರಶಾಲಾ ಎಂಬ ಹತ್ತು ಮತ್ತು ಪ್ರಸಿದ್ಧ ನಾಟಕಾದಿ ಹತ್ತು ಒಟ್ಟು ರೂಪಕಗಳು ಇಪ್ಪತ್ತು ಎಂದು ಕೋಹಲನ ಅಭಿಪ್ರಾಯ. ಸಂಗೀತವಾಗಲಿ, ನೃತ್ಯವಾಗಲಿ ಈ ಇಪ್ಪತ್ತರಲಿಲ್ಲ. ದೇಶೀ ರೂಪಕಗಳಾದ ದೊಂಬಿಕಾ, ಭಾಣಕಾ, ಪ್ರಸ್ಥಾನ ಷಿಡ್ಗಕಾ, ಭಾಣಿಕಾ, ಪ್ರೇರಣ, ರಾಮಕ್ರೀಡಾ, ರಾಗಕಾವ್ಯ, ರಾಸಕಾ-ಇವು ರಮ್ಯ ಹಾಗೂ ಭಯಂಕರ ವಸ್ತುವನ್ನುಳ್ಳ ನೃತ್ಯನಾಟಕಗಳು. ದತ್ತಿಲನೂ 16 ರೀತಿ ಸದ್ವಕಗಳನ್ನು ಹೇಳುತ್ತಾನೆ.

ಧನಂಜಯ ನ ಪ್ರಕಾರ ದಶರೂಪಕಗಳು ಯಾವುವು, ಅವುಗಳ ವೈಶಿಷ್ಟ್ಯವೇನು ಎಂಬುದನ್ನು ಈ ಕೆಳಗಿನ ಪಟ್ಟಿಯಲ್ಲಿ ತಿಳಿಸಿದೆ.

ಸಂಖ್ಯೆ ರೂಪಕದ ಹೆಸರು ವಸ್ತು ನಾಯಕ ರಸ ಇತರ ಸಂಗತಿಗಳು
1 ನಾಟಕ ಉದಾ: ಶಾಕುಂತಲ, ಉತ್ತರರಾಮಚರಿತ, ನಾಗಾನಂದ ಪ್ರಖ್ಯಾತ ಧೀರೋದಾತ್ತ ವೀರ,ಶೃಂಗಾರ, (ಕರುಣ)-ಇವುಗಳಲ್ಲಿ ಯಾವುದಾದರೂ ಒಂದು ಮುಖ್ಯ ; ಮಿಕ್ಕವು ಅದಕ್ಕೆ ಪೋಷಕ. (ಕೊನೆಯಲ್ಲಿ ಅದ್ಬುತರಸ) ಮುಖಾಸಂಧಿಗಳು ಸಾಂಗವಾಗಿಯೂ ಸ್ಪಷ್ಟವಾಗಿಯೂ ಇರುತ್ತವೆ.ಐದರಿಂದ ಹತ್ತು ಅಂಕಗಳಿರುತ್ತವೆ.
2 ಪ್ರಕರಣ ಉದಾ : ಮೃಚ್ಛಕಟಿಕ, ಮಾಲತೀಮಾಧವ ಉತ್ಪಾದ್ಯ ಮತ್ತು ಲೌಕಿಕ ಧೀರಶಾಂತ-ಮಂತ್ರಿ ಬ್ರಾಹ್ಮಣ ಅಥವಾ ವರ್ತಕ; ಇವನು ಧರ್ಮ ಕಾರ್ಯತತ್ಪರ ಮತ್ತು ಕಷ್ಟಕ್ಕೆ ಸಿಕ್ಕುವವನು. ನಾಯಿಕೆ ಕುಲಸ್ತ್ರೀ ಅಥವಾ ವೇಶ್ಯೆ (ಒಬ್ಬಳಾಗಲಿ ಇಬ್ಬರೂ ಆಗಲಿ ಇರಬಹುದು).

" "

3 ಭಾಣ ಕಲ್ಪಿತ : ಕಳ್ಳಕಾಕರ ಧೂರ್ತ ಚರಿತ್ರೆ ವಿಟ-ಆಕಾಶಭಾಷಿತಗಳಿಂದ ಒಬ್ಬನೇ ತಾನು ಅಥವಾ ಇತರರೂ ಅನುಭವಿಸಿದ ವೃತ್ತಾಂತಗಳನ್ನು ತಿಳಿಸುವುದು. ವೀರ, ಶೃಂಗಾರ (ಸೂಚನೆ ಮಾತ್ರ). ಒಂದೇ ಅಂಕ : ಭಾರತೀವೃತ್ತಿ ಪ್ರಧಾನ ಮುಖ ನಿರ್ವಹಣ ಎರಡೇ ಸಂಧಿಗಳು.
4 ಪ್ರಸಹನ ಕಲ್ಪಿತ; ಕೀಳುಜನರ ಚರಿತ್ರೆ ಪಾಷಂಡ, ಬ್ರಾಹ್ಮಣ, ಚೇಟ ಇತ್ಯಾದಿ. ಹಾಸ್ಯ ಅಂಕಸಂಧಿಗಳು ಭಾಣದಂತೆಯೇ.
5 ಡಿಮ ಉದಾ: ತ್ರಿಪುರ ಸಂಹಾರ ಪ್ರಖ್ಯಾತ;ಮಾಯೆ, ಇಂದ್ರಜಾಲ, ಕೋಪ, ಜಗಳ ಮುಂತಾದವುಗಳ ಕೋಲಾಹಲದಿಂದ ಕೂಡಿದ್ದು ದೇವ ಗಂಧರ್ವ ಯಕ್ಷ ರಾಕ್ಷಸ ಭೂತಪ್ರೇತಾದಿ ಉದ್ಧತರಾದ ಹದಿನಾರು ವ್ಯಕ್ತಿಗಳು ರೌದ್ರ ಪ್ರಧಾನ-ವೀರಕರುಣ ಅದ್ಭುತ ಯಾನಕ ಭೀಭತ್ಸಗಳು ಪೋಷಕ ರಸಗಳು ಉಜ್ವಲವಾಗಿರುತ್ತವೆ. ನಾಲ್ಕು ಅಂಕಗಳು; ವಿಷ್ಕಂಭಕ ಪ್ರವೇಶಕಗಳಿಲ್ಲ; ಕೈಶಿಕೀವೃತ್ತಿಯನ್ನು ಬಿಟ್ಟು ಮಿಕ್ಕ ವೃತ್ತಿಗಳೆಲ್ಲ ಇರಬಹುದು; ವಿಮರ್ಶಕಸಂಧಿಯನ್ನು ಬಿಟ್ಟು ಮಿಕ್ಕ ಸಂಧಿಗಳು ಇರುತ್ತವೆ.
6 ವ್ಯಾಯೋಗ ಉದಾ: ನರಕಾಸುರ ವ್ಯಾಯೋಗ ಪ್ರಖ್ಯಾತ; ಒಂದೇ ದಿನದಲ್ಲಿ ನಡೆದ ಯುದ್ಧದ ವಿಚಾರ (ಈ ಯುದ್ಧ ಸ್ತ್ರೀ ನಿಮಿತ್ತಕ ವಾಗಿರಬಾರದು) ಪ್ರಸಿದ್ಧ ಮತ್ತು ಉದ್ಧತ. (ಉದಾ:ಪರಶು ರಾಮ) ' ' ಗರ್ಭ ವಿಮರ್ಶೆ ಸಂಧಿಗಳಿಲ್ಲ; ಒಂದೆ ಅಂಕ;ಅನೇಕ ಪುರುಷ ಪಾತ್ರಗಳು ಇರುತ್ತವೆ.
7 ಸಮವಾಕಾರ ಪ್ರಖ್ಯಾತವಾದ ದೇವಾಸುರ ವಿಚಾರ ಪ್ರಖ್ಯಾತರೂ ಉದಾತ್ತರೂ ಆದ 12 ದೇವದಾನವರು, ಪ್ರತಿಯೊಬ್ಬರೂ ಬೇರೆ ಬೇರೆ ಫಲವನ್ನು ಅಪೇಕ್ಷಿಸತಕ್ಕವರು ವೀರ ಪ್ರಧಾನ; ಮಿಕ್ಕ ರಸಗಳು ಪೋಷಕ ವಿಮರ್ಶಸಂಧಿಯಿಲ್ಲ;ನಾಟಕದಲ್ಲಿರುವಂತೆಯೇ ಪ್ರಸ್ತಾವನೆಯುಂಟು. ಎಲ್ಲ ವೃತ್ತಿಗಳೂ ಉಂಟು; ಕೈಶಿಕೀ ಮಾತ್ರ ಸೂಕ್ಷ್ಮವಾಗಿರಬೇಕು. ಬಿಂದು ಪ್ರವೇಶಕಗಳಿಲ್ಲ; ಮೂರು ಅಂಕಗಳು; ಮೊದಲನೆಯದು ಎರಡು ಸಂಧಿಗಳುಳ್ಳದ್ದಾಗಿಯೂ 24 ಘಳಿಗೆಗಳಲ್ಲಿ ನಡೆದ ಸಂಗತಿಯನ್ನುಳ್ಳದ್ದಾಗಿಯೂ ಎರಡನೆಯದು 8 ಘಳಿಗೆಯ ನಡೆದ ಸಂಗತಿಯನ್ನು ಒಳಗೊಂಡದ್ದಾಗಿಯೂ ಮೂರನೆಯದು 4 ಘಳಿಗೆಯಲ್ಲಿ ನಡೆದ ಸಂಗತಿಯನ್ನು ಒಳಗೊಂಡದ್ದಾಗಿಯೂ ಇರಬೇಕು. ಇದರಲ್ಲಿ ಮೂರು ಕಪಟಗಳು, ಮೂರು ವಿದ್ರವಗಳು,ಮೂರು ಶೃಂಗಾರಗಳು ಬರಬೇಕು.
8 ವೀಥಿ ? ಒಂದೆರಡು ಪಾತ್ರಗಳು ಮಾತ್ರ ಶೃಂಗಾರ-ಇತರ ರಸಗಳೂ ಸ್ವಲ್ಪಸ್ವಲ್ಪ ಕೈಶಿಕೀವೃತ್ತಿ; ಸಂಧ್ಯಂಗ ಅಂಕಗಳಲ್ಲಿ ಭಾಣದಂತೆಯೇ; ಪ್ರಸ್ತಾವನೆ ಮುಂತಾದ ಭಾಗಗಳೂ ಉದ್ಧಾತ್ಯಕ ಮುಂತಾದ ಅಂಗಗಳೂ ಇರಬೇಕು.
9 ಅಂಕ (ಉತ್ಸೃಷ್ಟಿಕಾಂತ) ಕಲ್ಪಿತ; ಹೆಂಗಸರ ಗೋಳಾಟ ದಿಂದ ಕೂಡಿದ್ದು ಸಾಮಾನ್ಯ ಜನರು ಕರುಣರಸ ಪ್ರಧಾನ

ಸಂಧಿ ವೃತ್ತಿ ಅಂಗಗಳು ಭಾಣದಲ್ಲಿರುವಂತೆಯೇ; ಯುದ್ಧ ಜಯಾಪಜಯಯಾದಿಗಳು ಬರಿಯ ಮಾತಿನಿಂದ ವರ್ಣಿಸಲ್ಪಡಬೇಕು.

10 ಈಹಾಮೃಗ ಮಿಶ್ರ; ದಿವ್ಯ ಸ್ತ್ರೀಯನ್ನು ಅವಳ ಇಷ್ಟಕ್ಕೆ ವಿರುದ್ಧವಾಗಿ ಹೊತ್ತು ಕೊಂಡು ಹೋಗುವುದು-ಇತ್ಯಾದಿ ಧೀರೋದಾತ್ತರಾದ ನಾಯಕ ಪ್ರತಿ ನಾಯಕರು ಇವರು ದಿವ್ಯ ಮತ್ರ್ಯರಾಗಲಿ ಬೇರೆಯಾಗಲಿ ಆಗಿರಬಹುದು ನಾಯಕನಲ್ಲಿ ಶೃಂಗಾರಾ ಭಾಸ ನಾಲ್ಕು ಅಂಕಗಳು ಮತ್ತು ಮೂರು (ಮುಖ ಪ್ರತಿಮುಖ ಮತ್ತು ನಿರ್ವಹಣ) ಸಂಧಿಗಳುಳ್ಳದ್ದು. ಪ್ರತಿ ನಾಯಕ ಅಯುಕ್ತವಾಗಿ ಆಚರಿಸುವನು. ಬೇಕಾದಷ್ಟು ಕೋಪವನ್ನು ಎಬ್ಬಿಸಬೇಕು; ಆದರೆ ಯುದ್ಧವನ್ನು ತರದೆ ಅದನ್ನು ಉಪಾಯವಾಗಿ ನಿವಾರಣೆಮಾಡಬೇಕು-ಮಹಾತ್ಮನಿಗೆ ವಧೆ ಪ್ರಾಪ್ತವಾದರೂ ಅದನ್ನು ಪ್ರದರ್ಶಿಸಬಾರದು.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ರೂಪಕ&oldid=1102286" ಇಂದ ಪಡೆಯಲ್ಪಟ್ಟಿದೆ