ಕೊಳೆ

ವಿಕಿಪೀಡಿಯ ಇಂದ
Jump to navigation Jump to search
ಕಂಪ್ಯೂಟರ್‌ನ ಒಳಭಾಗ ಕೊಳೆಯಾಗಿದೆ

ಕೊಳೆ ಎಂದರೆ ಅಶುದ್ಧ ವಸ್ತು, ವಿಶೇಷವಾಗಿ ಒಬ್ಬ ವ್ಯಕ್ತಿಯ ಬಟ್ಟೆಗಳು, ಚರ್ಮ ಅಥವಾ ಸ್ವತ್ತುಗಳ ಸಂಪರ್ಕದಲ್ಲಿದ್ದಾಗ. ಅಂತಹ ಸಂದರ್ಭದಲ್ಲಿ ಅವು ಕೊಳೆಯಾಗಿವೆ ಎಂದು ಹೇಳಲಾಗುತ್ತದೆ. ಸಾಮಾನ್ಯ ಪ್ರಕಾರಗಳ ಕೊಳೆಗಳಲ್ಲಿ ಈ ಮುಂದಿನವು ಸೇರಿವೆ: ಮಣ್ಣು - ಆಧಾರಶಿಲೆಯ ಮೇಲಿರುವ ಜೇಡಿಮಣ್ಣು, ಮರಳು, ಮಣ್ಣುಗೊಬ್ಬರಗಳ ಮಿಶ್ರಣ; ಧೂಳು - ಸಾವಯವ ಅಥವಾ ಖನಿಜ ಪದಾರ್ಥದ ಸಾಮಾನ್ಯ ಪುಡಿ; ಹೊಲಸು - ಮಲದಂತಹ ದುರ್ವಾಸನೆಯ ವಸ್ತು; ಇಲ್ಲಣ - ಹೊಗೆಮಸಿಯಂತಹ ಗಟ್ಟಿಯಾಗಿ ಹತ್ತಿಕೊಂಡ ಕಪ್ಪನೆಯ ಧೂಳು.

ವಸ್ತುಗಳು ಕೊಳೆಯಾದಾಗ, ಅವನ್ನು ಸಾಮಾನ್ಯವಾಗಿ ಗಟ್ಟಿ ಮೇಲ್ಮೈ ಮಾರ್ಜಕಗಳು ಮತ್ತು ಇತರ ರಾಸಾಯನಿಕ ದ್ರಾವಣಗಳಂತಹ ದ್ರಾವಣಗಳಿಂದ ಸ್ವಚ್ಛಮಾಡಲಾಗುತ್ತದೆ; ಹೆಚ್ಚಿನ ಮನೆ ಚಟುವಟಿಕೆ ಈ ಉದ್ದೇಶಕ್ಕಾಗಿರುತ್ತದೆ — ಬಟ್ಟೆ ಒಗೆಯುವುದು, ಕಸ ಗುಡಿಸುವುದು ಇತ್ಯಾದಿ.[೧] ವಾಣಿಜ್ಯಿಕ ಆವರಣದಲ್ಲಿ, ಕೊಳಕಾದ ನೋಟವು ಕೆಟ್ಟ ಅಭಿಪ್ರಾಯವನ್ನು ನೀಡುತ್ತದೆ. ಅಂತಹ ಸ್ಥಳದ ಒಂದು ಉದಾಹರಣೆಯೆಂದರೆ ರೆಸ್ಟೊರೆಂಟ್. ಅಂತಹ ಸಂದರ್ಭಗಳಲ್ಲಿ ಕೊಳೆಯನ್ನು ತಾತ್ಕಾಲಿಕ, ಶಾಶ್ವತ ಮತ್ತು ಉದ್ದೇಶಪೂರ್ವಕ ಎಂದು ವರ್ಗೀಕರಿಸಬಹುದು. ತಾತ್ಕಾಲಿಕ ಕೊಳೆ ಎಂದರೆ ಪಟ್ಟೆಗಳು ಮತ್ತು ವಿಶೀರ್ಣ ವಸ್ತು. ಇವನ್ನು ಸಾಧಾರಣ ದಿನನಿತ್ಯದ ಸ್ವಚ್ಛಗೊಳಿಸುವಿಕೆಯಿಂದ ತೆಗೆಯಬಹುದು. ಶಾಶ್ವತ ಕೊಳೆ ಎಂದರೆ ಗಟ್ಟಿಯಾಗಿ ಹತ್ತಿಕೊಂಡ ಕಲೆಗಳು ಅಥವಾ ವಸ್ತುವಿಗೆ ಭೌತಿಕ ಹಾನಿ. ಇವುಗಳನ್ನು ತೆಗೆಯಲು ದೊಡ್ಡ ನವೀಕರಣ ಬೇಕಾಗುತ್ತದೆ. ಉದ್ದೇಶಪೂರ್ವಕ ಕೊಳೆ ಎಂದರೆ ವಿನ್ಯಾಸ ನಿರ್ಧಾರಗಳಿಂದ ಉಂಟಾದ ಕೊಳೆ, ಉದಾಹರಣೆಗೆ ಕೊಳಕು ಕಿತ್ತಳೆ ಬಣ್ಣದಲ್ಲಿ ಅಲಂಕಾರ ಅಥವಾ ಗ್ರಂಜ್ ಶೈಲಿ.

ನಗರಗಳು ಅಭಿವೃದ್ಧಿಗೊಂಡಂತೆ, ತ್ಯಾಜ್ಯ ನಿರ್ವಹಣಾ ಸೇವೆಗಳ ಬಳಕೆಯ ಮೂಲಕ ಕಸ ವಿಲೇವಾರಿಗೆ ಏರ್ಪಾಟುಗಳನ್ನು ಮಾಡಲಾಯಿತು. ಯುನೈಟಡ್ ಕಿಂಗ್ಡಮ್‍ನಲ್ಲಿ, ಸಾರ್ವಜನಿಕ ಆರೋಗ್ಯ ಕಾಯಿದೆ ೧೮೭೫ರ ಪ್ರಕಾರ, ಮನೆಗಳು ಚಲಿಸಬಹುದಾದಂಥ ಒಂದು ಡಬ್ಬದಲ್ಲಿ ತಮ್ಮ ಕಸವನ್ನು ಇಡಬೇಕಾಗುತ್ತದೆ. ಇದರಿಂದ ಅದನ್ನು ತೆಗೆದುಕೊಂಡು ಹೋಗಲು ಸುಲಭವಾಗುತ್ತದೆ. ಇದು ಕಸದ ತೊಟ್ಟಿಯ ಮೊದಲ ಕಾನೂನಾತ್ಮಕ ಸೃಷ್ಟಿಯಾಗಿತ್ತು.

ಆಧುನಿಕ ಸಮಾಜವು ಹೆಚ್ಚು ಆರೋಗ್ಯವಾಗಿದೆ ಎಂದು ಈಗ ಭಾವಿಸಲಾಗಿದೆ. ಬೆಳೆಯುತ್ತಿರುವಾಗ ಧೂಳಿನಲ್ಲಿನ ಸೂಕ್ಷ್ಮಜೀವಿಗಳೊಂದಿಗೆ ಸಂಪರ್ಕವಿಲ್ಲದಿರುವುದು ದಮ್ಮಿನಂತಹ ಅಲರ್ಜಿಗಳ ಸಾಂಕ್ರಾಮಿಕ ರೋಗದ ಕಾರಣವಾಗಿದೆ ಎಂದು ಊಹಿಸಲಾಗಿದೆ. ಮಾನವ ಪ್ರತಿರೋಧಕ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸಲು ಸಕ್ರಿಯಗೊಳಿಸುವಿಕೆ ಮತ್ತು ವ್ಯಾಯಾಮದ ಅಗತ್ಯವಿರುತ್ತದೆ ಮತ್ತು ಕೊಳೆಗೆ ಒಡ್ಡಿಕೆಯು ಇದನ್ನು ಸಾಧಿಸಬಹುದು.

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಕೊಳೆ&oldid=882367" ಇಂದ ಪಡೆಯಲ್ಪಟ್ಟಿದೆ