ವಿಷಯಕ್ಕೆ ಹೋಗು

ಹೊಗೆಮಸಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಂದು ಡೀಸಲ್ ಟ್ರಕ್‍ನ ಹೊಗೆಯಲ್ಲಿ ಹೊಗೆಮಸಿಯ ಉತ್ಸರ್ಜನ

ಹೊಗೆಮಸಿಯು ಹೈಡ್ರೊಕಾರ್ಬನ್‍ಗಳ ಅಪೂರ್ಣ ದಹನದಿಂದ ಉಂಟಾದ ಅಶುದ್ಧ ಇಂಗಾಲ ಕಣಗಳ ದ್ರವ್ಯರಾಶಿ.[೧] ಇದು ಹೆಚ್ಚು ಸರಿಯಾಗಿ ಅನಿಲ ಹಂತದ ದಹನ ಪ್ರಕ್ರಿಯೆಯ ಉತ್ಪನ್ನಕ್ಕೆ ಸೀಮಿತವಾಗಿದೆ, ಆದರೆ ಇದನ್ನು ಸಾಮಾನ್ಯವಾಗಿ ಉಷ್ಣಪರಿವರ್ತನೆಯ ಅವಧಿಯಲ್ಲಿ ವಾಯುಗಾಮಿಯಾಗಬಹುದಾದ ಕಲ್ಲಿದ್ದಲು, ಟೊಳ್ಳುಗೋಳಗಳು, ಕರಿಕಾದ ಕಟ್ಟಿಗೆ, ಮತ್ತು ಕೋಕ್‍ನಂತಹ ಶೇಷಾತ್ಮಕ ಉಷ್ಣವಿಭಜಿತ ಇಂಧನ ಕಣಗಳನ್ನು ಒಳಗೊಳ್ಳುವಂತೆ ವಿಸ್ತರಿಸಲಾಗುತ್ತದೆ.

ಹೊಗೆಮಸಿಯು ಕ್ಯಾನ್ಸರ್ ಮತ್ತು ಶ್ವಾಸಕೋಶ ರೋಗವನ್ನು ಉಂಟುಮಾಡುತ್ತದೆ, ಮತ್ತು ಜಾಗತಿಕ ತಾಪಮಾನ ಏರಿಕೆಯ ಎರಡನೇ ಅತಿ ದೊಡ್ಡ ಮಾನವ ಕಾರಣವಿರಬಹುದು.

ಪರಿಸರದಲ್ಲಿನ ಒಂದು ವಾಯುಗಾಮಿ ಮಾಲಿನ್ಯಕಾರಕವಾಗಿ ಹೊಗೆಮಸಿಯು ಅನೇಕ ವಿಭಿನ್ನ ಮೂಲಗಳನ್ನು ಹೊಂದಿದೆ, ಮತ್ತು ಇವೆಲ್ಲವೂ ಯಾವುದೋ ರೂಪದ ಉಷ್ಣಪರಿವರ್ತನೆಯ ಪರಿಣಾಮಗಳಾಗಿವೆ. ಇದರಲ್ಲಿ ಕಲ್ಲಿದ್ದಲು ಸುಡುವಿಕೆ, ಆಂತರಿಕ ದಹನ ಬಿಣಿಗೆಗಳು, ವಿದ್ಯುತ್ ಸ್ಥಾವರದ ಕುದಿಹಂಡೆಗಳು, ಹಾಗ್ ಇಂಧನದ ಕುದಿಹಂಡೆಗಳು, ಕೇಂದ್ರ ಆವಿ ಉಷ್ಣದ ಕುದಿಹಂಡೆಗಳು, ತ್ಯಾಜ್ಯ ದಹನ, ಸ್ಥಳೀಯ ಜಮೀನಿನಲ್ಲಿನ ಸುಡುವಿಕೆ, ಮನೆ ಬೆಂಕಿಗಳು, ಕಾಡ್ಗಿಚ್ಚುಗಳು, ಬೆಂಕಿಗೂಡುಗಳು, ಮತ್ತು ಕುಲುಮೆಗಳಿಂದ ಸೃಷ್ಟಿಯಾದ ಹೊಗೆಮಸಿ ಸೇರಿದೆ. ಈ ಬಾಹ್ಯ ಮೂಲಗಳ ಜೊತೆಗೆ ಒಳಾಂಗಣ ಪರಿಸರ ಮೂಲಗಳೂ ಕೊಡುಗೆ ನೀಡುತ್ತವೆ. ಈ ಮೂಲಗಳಲ್ಲಿ ಸಸ್ಯವಸ್ತುವಿನ ಹೊಗೆ, ಅಡುಗೆ, ಎಣ್ಣೆ ದೀಪಗಳು, ಮೆಣದ ಬತ್ತಿಗಳು, ಧೂಳು ನೆಲೆಗೊಂಡ ಕ್ವಾರ್ಟ್ಝ್/ಹ್ಯಾಲೊಜೆನ್ ದೀಪಗಳು, ಅಗ್ನಿ ಸ್ಥಳಗಳು, ವಾಹನಗಳಿಂದ ನಿಷ್ಕಾಸ ಉತ್ಸರ್ಜನಗಳು, ಮತ್ತು ದೋಷಯುಕ್ತ ಕುಲುಮೆಗಳು ಸೇರಿವೆ. ಬಹಳ ಕಡಿಮೆ ಸಾರತೆಯಲ್ಲಿ ಹೊಗೆಮಸಿಯು ಮೇಲ್ಮೈಗಳನ್ನು ಕಪ್ಪಾಗಿಸುವಲ್ಲಿ ಅಥವಾ ಕಣ ರಾಶಿಗಳನ್ನು ರಚಿಸುವಲ್ಲಿ ಸಮರ್ಥವಾಗಿದೆ, ಉದಾಹರಣೆಗೆ ವಾತಾಯನ ವ್ಯವಸ್ಥೆಗಳಿಂದಾದವು ಕಪ್ಪಾಗಿ ಕಾಣುತ್ತವೆ. ಹೊಗೆಮಸಿಯು ಗೋಡೆಗಳು ಹಾಗೂ ಛಾವಣಿಗಳು ಅಥವಾ ಗೋಡೆಗಳು ಮತ್ತು ನೆಲಹಾಸು ಕೂಡುವ ಸ್ಥಳದ ಬಣ್ಣ ಮಾಸುವಿಕೆಯ ಪ್ರಧಾನ ಕಾರಣವಾಗಿದೆ. ಹೊಗೆಮಸಿಯು ಸಾಮಾನ್ಯವಾಗಿ ಹಲಗೆಕಟ್ಟು ವಿದ್ಯುತ್ ತಾಪನ ಘಟಕಗಳ ಮೇಲಿನ ಗೊಡೆಗಳ ಬಣ್ಣ ಮಾಸುವಿಕೆಗೆ ಹೊಣೆಯಾಗಿರುತ್ತದೆ.

ಹೊಗೆಮಸಿ, ವಿಶೇಷವಾಗಿ ಡೀಸಲ್ ನಿಷ್ಕಾಸ ಮಾಲಿನ್ಯ ಗಾಳಿಯಲ್ಲಿನ ಒಟ್ಟು ಅಪಾಯಕಾರಿ ಮಾಲಿನ್ಯದ ಕಾಲುಭಾಗಕ್ಕಿಂತ ಹೆಚ್ಚಿನದಕ್ಕೆ ಕಾರಣವಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. Omidvarborna; et al. "Recent studies on soot modeling for diesel combustion". Renewable and Sustainable Energy Reviews. 48: 635–647. doi:10.1016/j.rser.2015.04.019.
"https://kn.wikipedia.org/w/index.php?title=ಹೊಗೆಮಸಿ&oldid=842795" ಇಂದ ಪಡೆಯಲ್ಪಟ್ಟಿದೆ