ಬುದ್ಬುದ

ವಿಕಿಪೀಡಿಯ ಇಂದ
Jump to navigation Jump to search
ಅಮಾದಕ ಪಾನೀಯದಲ್ಲಿ ಅನಿಲದ ಬುದ್ಬುದಗಳು

ಬುದ್ಬುದ ಎಂದರೆ ಒಂದು ವಸ್ತುವಿನಲ್ಲಿ ಮತ್ತೊಂದು ವಸ್ತುವಿನ ಗೋಳಕಣ, ಸಾಮಾನ್ಯವಾಗಿ ದ್ರವದಲ್ಲಿ ಅನಿಲದ ಕಣ.[೧] ಮಾರಾಂಗೋನಿ ಪರಿಣಾಮದ ಕಾರಣ, ಬುದ್ಬುದಗಳು ಮುಳುಗಿದ ಪದಾರ್ಥದ ಮೇಲ್ಮೈಯನ್ನು ತಲುಪಿದಾಗಲೂ ಅಖಂಡವಾಗಿ ಉಳಿದಿರಬಹುದು.

ಸಾಮಾನ್ಯ ಉದಾಹರಣೆಗಳು[ಬದಲಾಯಿಸಿ]

ದೈನಂದಿನ ಜೀವನದಲ್ಲಿ ಅನೇಕ ಸ್ಥಳಗಳಲ್ಲಿ ಬುದ್ಬುದಗಳು ಕಾಣುತ್ತವೆ, ಉದಾಹರಣೆಗೆ:

  • ಅಮಾದಕ ಪಾನೀಯಗಳಲ್ಲಿ ಅಧಿಪರ್ಯಾಪ್ತವಾದ ಇಂಗಾಲದ ಡೈಆಕ್ಸೈಡ್‍ನ ಸಹಜ ಬೀಜೀಭವನವಾಗಿ
  • ಕುದಿಯುತ್ತಿರುವ ನೀರಿನಲ್ಲಿ ಆವಿಯಾಗಿ
  • ಕಲಕಿದ ನೀರಿನೊಳಗೆ ಮಿಶ್ರಣಗೊಂಡ ಗಾಳಿಯಾಗಿ, ಉದಾಹರಣೆಗೆ ಜಲಪಾತದ ಕೆಳಗೆ
  • ಕಡಲನೊರೆಯಾಗಿ
  • ಸಾಬೂನಿನ ಬುದ್ಬುದವಾಗಿ
  • ರಾಸಾಯನಿಕ ಪ್ರಕ್ರಿಯೆಗಳಲ್ಲಿ ಉತ್ಸರ್ಜನವಾಗಿ, ಉದಾ. ಅಡುಗೆ ಸೋಡಾ + ವಿನಿಗರ್
  • ಗಾಜಿನ ತಯಾರಿ ವೇಳೆಯಲ್ಲಿ ಸಿಲುಕಿಕೊಂಡ ಅನಿಲವಾಗಿ
  • ಫ಼್ಲಾರೆಸೀನ್ ಹಾಗೂ ನೀರಿನ (ಅಥವಾ ಆಲ್ಕೊಹಾಲ್) ದ್ರಾವಣದಲ್ಲಿ ಅನಿಲದ ಬುದ್ಬುದವು ರಸಮಟ್ಟದ ಅತ್ಯಗತ್ಯ ಭಾಗವಾಗಿದೆ

ಉಲ್ಲೇಖಗಳು[ಬದಲಾಯಿಸಿ]

  1. Subramanian, R. Shankar; Balasubramaniam, R. (2001-04-09). The Motion of Bubbles and Drops in Reduced Gravity (in ಇಂಗ್ಲಿಷ್). Cambridge University Press. ISBN 9780521496056.
"https://kn.wikipedia.org/w/index.php?title=ಬುದ್ಬುದ&oldid=915852" ಇಂದ ಪಡೆಯಲ್ಪಟ್ಟಿದೆ