ಬಸವನ ಬಾಗೇವಾಡಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಬಸವನ ಬಾಗೇವಾಡಿ ಬಿಜಾಪುರ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಬಸವನ ಬಾಗೇವಾಡಿ ಬಿಜಾಪುರ ಜಿಲ್ಲೆಯ ಪ್ರಸಿದ್ಧ ಹಾಗೂ ಪ್ರಾಚೀನ ಸ್ಥಳ. ಬಿಜಾಪುರ ಜಿಲ್ಲಾ ಕೇಂದ್ರದಿಂದ 43 ಕಿಲೋ ಮೀಟರ್ ದೂರದಲ್ಲಿರುವ ಈ ನಾಡು ಪವಿತ್ರ ಪುಣ್ಯಕ್ಷೇತ್ರವಾಗಲು ಕಾರಣವೇ ಭಕ್ತಿ ಭಂಡಾರಿ ಬಸವಣ್ಣನವರು. ಬಸವೇಶ್ವರು ಹುಟ್ಟಿದ ಈ ಪುಣ್ಯಭೂಮಿ ಇತಿಹಾಸಪ್ರಸಿದ್ಧ ನಾಡಾಗಿ ವಿಶ್ವದ ಗಮನ ಸೆಳೆದಿದೆ.

ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಶ್ರೀಮಂತವಾಗಿರುವ ಈ ಪುಣ್ಯಭೂಮಿ ನೋಡಲೇಬೇಕಾದ ಸ್ಥಳ. ಪ್ರತಿ ನಿತ್ಯ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಬಸವಣ್ಣನವರು ಹುಟ್ಟಿದ ಪುಣ್ಯಭೂಮಿಯ ದರ್ಶನದಿಂದ ಪುನೀತರಾಗುತ್ತಾರೆ.

ಐತಿಹ್ಯ: 800 ವರ್ಷಗಳ ಹಿಂದೆ ಇಲ್ಲಿ ವಾಸಿಸುತ್ತಿದ್ದ (ವಾದಿರಾಜ) ಮಾದರಸ ಹಾಗೂ ಮಾದಲಾಂಬಿಕೆ ಎಂಬ ದಂಪತಿ ನಂದೀಶ್ವರನ ಭಕ್ತರಾಗಿದ್ದರು. ಅವರು ಕೈಗೊಂಡ ನಂದಿವ್ರತದ ಫಲವಾಗಿ ದೈವಕೃಪೆಯಿಂದ ಶಿವನೇ ತನ್ನ ವಾಹನ ನಂದಿಯನ್ನು ಇವರ ಪುತ್ರರಾಗಿ ಹುಟ್ಟುವಂತೆ ಅನುಗ್ರಹಿಸಿದನಂತೆ. ಹೀಗೆ ದೈವಾನುಗ್ರದಿಂದ ಜನಿಸಿದ ಆ ಕಂದನೇ 12ನೆಯ ಶತಮಾನವನ್ನು ಭರತಖಂಡದ ಧಾರ್ಮಿಕ ಪರಂಪರೆಯಲ್ಲಿ ಒಂದು ಚಿರಸ್ಮರಣೀಯ ಘಟ್ಟವನ್ನಾಗಿಸಿದ ಮಹಾವ್ಯಕ್ತಿ ಜಗಜ್ಯೋತಿ ಬಸವೇಶ್ವರರು.

ಬ್ರಾಹ್ಮಣ ಕುಲದಲ್ಲಿ ಹುಟ್ಟಿದ ಬಸವಣ್ಣನವರು, ತಮ್ಮ ಉಪನಯನದ ಬಳಿಕ, ಮೇಲು -ಕೀಳೆಂಬ ಸಾಮಾಜಿಕ ವ್ಯವಸ್ಥೆಯನ್ನು ಪ್ರತಿಭಟಿಸಲು ಯಜ್ಞೋಪವೀತವನ್ನು ಕಿತ್ತು ಹಾಕಿ, ಸಂಗಮಕ್ಕೆ ಹೋದರೆಂದು ಹೇಳಲಾಗಿದೆ.

ಆಗ ಕಳಚೂರ್ಯ ಬಿಜ್ಜಳನ ಬಳಿ ದಂಡಾಧಿಶನಾಗಿದ್ದ ಇವರ ಸೋದರಮಾವ ಬಲದೇವ ತನ್ನ ಒಬ್ಬಳೇ ಮಗಳು ಗಂಗಾಂಬಿಕೆಯನ್ನು ಕೊಟ್ಟು ಮದುವೆ ಮಾಡಿದರು.ನಂತರ ಬಸವೇಶ್ವರರು ಬಿಜ್ಜಖನ ಇನ್ನೊಬ್ಬ ದಂಡನಾಯಕ ಸಿದ್ಧರಸನ ಮಗಳು ನೀಲಾಂಬಿಕೆಯನ್ನು ವರಿಸಿದರು.

ಬಿಜ್ಜಳನ ಭಂಡಾರದ ಮಂತ್ರಿಯಾಗಿ, ಹಲವು ಕ್ರಾಂತಿಕಾರಿ ಕ್ರಮಕೈಗೊಂಡ ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಕಲ್ಪನೆ ಜೀವನಾದರ್ಶವಾಗಿದೆ.

ವಚನಕಾರರಾಗಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಬಸವಣ್ಣನವರ ಜನ್ಮಭೂಮಿ ಇಂದು ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಬಸವನಬಾಗೇವಾಡಿ ಎಂದೇ ಖ್ಯಾತವಾಗಿದೆ.


[ಬದಲಾಯಿಸಿ] ಬಸವನ ಬಾಗೇವಾಡಿ ಪುರಸಭೆ

ಬಸವನ ಬಾಗೇವಾಡಿ ಪುರಸಭೆಯು 1973 ರಲ್ಲಿ ಸ್ಥಾಪನೆಯಾಯಿತು. ಬಸವನ ಬಾಗೇವಾಡಿ ಪುರಸಭೆಯು ಬೆಂಗಳೂರಿನಿಂದ ಬಿಜಾಪೂರಗೆ ಹೋಗುವ ಎನ್ಎಚ್-13 ರಸ್ತೆಯಲ್ಲಿದ್ದು ಬಿಜಾಪೂರನಿಂದ ಸುಮಾರು 42 ಕೀಲೋಮೀಟರ್ ದೂರದಲ್ಲಿರುತ್ತದೆ. 2001 ರ ಜನಗಣತಿಯ ಪ್ರಕಾರ ಬಸವನ ಬಾಗೇವಾಡಿ ಪುರಸಭೆ ವ್ಯಾಪ್ತಿಯಲ್ಲಿ 28526 ಜನಸಂಖ್ಯೆಯನ್ನು ಹೊಂದಿರುತ್ತದೆ. ಬಸವನ ಬಾಗೇವಾಡಿ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್ ಗಳಿದ್ದು 23 ಚುನಾಯಿತ ಸದಸ್ಯರು ಹಾಗೂ 5 ನಾಮನಿರ್ದೇಶಿತ ಸದಸ್ಯರಿರುತ್ತಾರೆ. ಬಸವನ ಬಾಗೇವಾಡಿ ಪುರಸಭೆಯ ವ್ಯಾಪ್ತಿಯು ಒಟ್ಟು 16.00 ಚದುರ ಕೀಲೋಮೀಟರ್ ಗಳಿರುತ್ತದೆ. ಶ್ರೀ ಬಸವೇಶ್ವರ ಜನ್ಮ ಸ್ಥಳಕ್ಕೆ “ಬಸವ ಸ್ಮಾರಕ ಎಂದು ಪ್ರಸಿದ್ದಿ ಪಡೆದಿದೆ. ಪುರಸಭೆ ವ್ಯಾಪ್ತಿಯಲ್ಲಿದ್ದು ಈ ಸ್ಥಳವು ಕೂಡಲ ಸಂಗಮ ಪ್ರಾಧಿಕಾರ ಇಲಾಖೆಗೆ ಒಳಪಡುತ್ತದೆ. ಬಸವನ ಬಾಗೇವಾಡಿ ಪ್ರಸಿದ್ದವಾದ ಪುರಾತನ ಕಾಲದ ಬಸವೇಶ್ವರ ದೇವಸ್ಥಾನ ಈ ದೇವಾಲಯಕ್ಕೆ ಜನರು ದೇಶ ವಿದೇಶದಿಂದ ಬರುತ್ತಾರೆ ಹಾಗೂ ವರ್ಷಕೊಮ್ಮೆ ನಡೆಯುವ ಜಾತ್ರೆ ಸಮಯದಲ್ಲಿ ಈ ದೇವರನ್ನು ನೋಡಲು ಜನಸಾಗರವೇ ಹರಿದು ಬರುತ್ತದೆ."ನಮನ"

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು