ಬಿಜಾಪುರ
Wikipedia ಇಂದ
| ಬಿಜಾಪುರ | |
| ರಾಜ್ಯ - ಜಿಲ್ಲೆ |
ಕರ್ನಾಟಕ - ಬಿಜಾಪುರ |
| ನಿರ್ದೇಶಾಂಕಗಳು | |
| ವಿಸ್ತಾರ - ಎತ್ತರ |
10541 km² - 770 ಮೀ. |
| ಸಮಯ ವಲಯ | IST (UTC+5:30) |
| ಜನಸಂಖ್ಯೆ (2001) - ಸಾಂದ್ರತೆ |
1808863 - 172/ಚದರ ಕಿ.ಮಿ. |
| ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 586101-105 - +08352 - KA-28 |
ವಿಜಾಪುರ (ಆಂಗ್ಲ: ಬಿಜಾಪುರ) ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಈ ಜಿಲ್ಲೆಯ ಜಿಲ್ಲಾಡಾಳಿತ ಮತ್ತು ಪ್ರಮುಖ ನಗರ ವಿಜಾಪುರ. ಬಿಜಾಪುರ ನಗರ ಬೆಂಗಳೂರಿನಿಂದ ಉತ್ತರಪಶ್ಚಿಮಕ್ಕೆ ೫೩೦ ಕಿಮೀ ದೂರದಲ್ಲಿದೆ. ಈ ಜಿಲ್ಲೆಯಲ್ಲಿ ೫ ನದಿಗಳು ಹರಿಯುವದರಿಂದ ಇದಕ್ಕೆ ಪಂಚನದಿಗಳ ಬೀಡು, ಆದರೂ ಅತಿ ಕಡಿಮೆ ಮಳೆ, ಒಣ ಹವೆ,ನೀರಾವರಿ ಸವಲತ್ತುಗಳಿಲ್ಲದ ಕಾರಣ ಯಾವತ್ತೂ ನೀರಿನ ಅಭಾವ ಇದ್ದೇ ಇದೆ. ದಕ್ಷಿಣದ ಪಂಜಾಬ ಎಂಬುದು ಅಣಕದ ಮಾತು.
ಪರಿವಿಡಿ |
[ಬದಲಾಯಿಸಿ] ಚರಿತ್ರೆ
ವಿಜಾಪುರದ (ಇಂಗ್ಲೀಷ್:ಬಿಜಾಪುರ) ಪುರಾತನ ಹೆಸರು ವಿಜಯಪುರ. ಈ ಜಿಲ್ಲೆಯು ಐತಿಹಾಸಿಕ ಸ್ಥಳಗಳಿಂದ ಕೂಡಿದೆ. ೧೦-೧೧ ನೆ ಶತಮಾನಗಳಲ್ಲಿ ಕಲ್ಯಾಣಿ ಚಾಲುಕ್ಯರಿಂದ ಸ್ಥಾಪಿತವಾಯಿತು. ೧೩ ನೆ ಶತಮಾನದ ಕೊನೆಯ ಹೊತ್ತಿಗೆ ದೆಹಲಿಯ ಖಿಲ್ಜಿ ಸುಲ್ತಾನರ ಪ್ರಭಾವಕ್ಕೆ ಬಂದ ಬಿಜಾಪುರ, ಕಿ. ಶ. ೧೩೪೭ ರಲ್ಲಿ ಬೀದರಿನ ಬಹಮನಿ ಸುಲ್ತಾನರ ಆಳ್ವಿಕೆಗೆ ಒಳಗಾಯಿತು.
ಕಿ. ಶ. ೧೫೧೮ ರಲ್ಲಿ ಬಹಮನಿ ಸುಲ್ತಾನೇಟ್ ಸಾಮ್ರಾಜ್ಯ ಒಡೆದು ಐದು ರಾಜ್ಯಗಳಾಗಿ ಹಂಚಿಹೋಯಿತು. ಆಗ ರೂಪುಗೊಂಡ ರಾಜ್ಯಗಳಲ್ಲಿ ವಿಜಾಪುರವೂ ಒಂದು. ಇದು ಆದಿಲ್ ಶಾಹಿ ಸುಲ್ತಾನರ ರಾಜ್ಯ. ಕಿ. ಶ. ೧೬೮೬ ರಲ್ಲಿ ಮುಘಲ್ ಸಾಮ್ರಾಜ್ಯದ ಔರಂಗಜೇಬ್ ಈ ಪ್ರದೇಶವನ್ನು ಗೆದ್ದ ನಂತರ ಆದಿಲ್ ಶಾಹಿ ಸುಲ್ತಾನರ ಆಳ್ವಿಕೆ ಕೊನೆಗೊಂಡಿತು. ಕಿ. ಶ. ೧೭೨೪ರಲ್ಲಿ ವಿಜಾಪುರ ಹೈದರಾಬಾದನ ನಿಜಾಮರ ಆಳ್ವಿಕೆಗೆ ವಳಪಟ್ಟಿತು. ಕಿ. ಶ. ೧೭೬೦ ರಲ್ಲಿ ಮರಾಠರಿಂದ ನಿಜಾಮರು ಸೊಲಲ್ಪಟ್ಟಾಗ ವಿಜಾಪುರ ನಿಜಾಮರಿಂದ ಮರಾಠ ಪೆಶಾವರ ಅಳ್ವಿಕೆಗೆವಳಪಟ್ಟಿತ್ತು. ನಂತರ ಕಿ. ಶ. ೧೮೧೮ ರ ೩ ನೆ ಆಂಗ್ಲ್-ಮರಠಾ ಯುದ್ದದಲ್ಲಿ ಬ್ರಿಟಿಷರಿಂದ ಮರಾಠರು ಸೊಲಲ್ಪಟ್ಟಾಗ ವಿಜಾಪುರ ಮರಾಠರಿಂದ ಬ್ರಿಟಿಷರ ಅಳ್ವಿಕೆಗೆವಳಪಟ್ಟಿತ್ತು. ನಂತರ ವಿಜಾಪುರನ್ನು ಬ್ರಿಟಿಷ ಈಸ್ಟ್ ಇಂಡಿಯಾ ಕಂಪನಿಗೆ ಹಸ್ತಾಂತರಿಸಲಾಯಿತು. ಬಳಿಕ ಸಾತಾರಾ ರಾಜರಿಗೆ ಓಪ್ಪಿಸಲಾಯಿತು. ಕಿ. ಶ. ೧೮೪೮ ರಲ್ಲಿ ಸಾತಾರಾ ಮತ್ತು ವಿಜಾಪುರನ್ನು ಮುಂಬಾಯಿ ಪ್ರಾಂತ್ಯಕ್ಕೆ ಸೆರಿಸಲಾಯಿತು. ಬ್ರಿಟಿಷರಿಂದ ನಿರೂಪಿಸ್ಲ್ಪಟ್ಟ ಕಲದಗಿ ಜಿಲ್ಲೆಗೆ ಈಗಿನ ವಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳು ಸೆರಿಸ್ಲ್ಪಟ್ಟವು. ಕಿ. ಶ. ೧೮೮೫ ರಲ್ಲಿ ವಿಜಾಪುರನ್ನು ಜಿಲ್ಲಾಡಳಿತ ಪ್ರದೆಶವಾಗಿ ಮಾಡಲಾಯಿತು ಮತ್ತು ವಿಜಾಪುರನ್ನು ಆಗಿನ ಮುಂಬಯಿ (ಬಾಂಬೆ) ರಾಜ್ಯಕ್ಕೆ ಸೆರಿಸಲಾಯಿತು. ತದನಂತರ ಕಿ.ಶ. ೧೯೫೬ ರಲ್ಲಿ ಆಗಿನ ಮೈಸೂರು ರಾಜ್ಯಕ್ಕೆ (ಈಗಿನ ಕರ್ನಾಟಕ ರಾಜ್ಯಕ್ಕೆ) ಸೆರಿಸಲಾಯಿತು.
[ಬದಲಾಯಿಸಿ] ಆಕರ್ಷಣೆಗಳು
ವಿಜಾಪುರ ಜಿಲ್ಲೆಯಲ್ಲಿ ಅನೇಕ ಚಾರಿತ್ರಿಕ ಆಕರ್ಷಣೆಗಳಿವೆ. ಮುಖ್ಯವಾಗಿ, ವಿಜಾಪುರ ಮುಸ್ಲಿಮ್ ಶೈಲಿಯ ವಾಸ್ತುಶಿಲ್ಪಕ್ಕೆ ಹೆಸರಾಗಿದೆ.
- ಗೋಲ್ ಗುಂಬಜ್: ಇದು ಮಹಮದ್ ಆದಿಲ್ ಶಾ (ಆಳ್ವಿಕೆ: ೧೬೨೭-೧೬೫೭)ನ ಗೋರಿಯಾಗಿ ಕಟ್ಟಲಾದ ಸ್ಮಾರಕ. ಇದರ ಉದ್ದ ಮತ್ತು ಅಗಲ ೫೦ ಮೀ ಇದ್ದು, ಮೇಲಿನ ಗೋಲಾಕಾರದ ಗುಂಬಜ್ ೩೯ ಮೀ ನ ವ್ಯಾಸ ಹೊಂದಿದೆ. ಇದು ವಿಶ್ವದ ಎರಡನೆ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್. ಇದರ ವಿಶೇಷ ಆಕರ್ಷಣೆಯೆಂದರೆ ಇದರೊಳಗಿನ ಪ್ರಧಾನ ಕೊಠಡಿಯಲ್ಲಿ ಪ್ರತಿ ಶಬ್ದವೂ ಏಳು ಬಾರಿ ಪ್ರತಿಧ್ವನಿತವಾಗುತ್ತದೆ !ಹಾಗೆಯೆ ಇಲ್ಲಿರುವ "ಪಿಸುಗುಟ್ಟುವ ಶಾಲೆ"ಯಲ್ಲಿ ಅತಿ ಸಣ್ಣ ಶಬ್ದವೂ ೩೭ ಮಿ ದೂರದಲ್ಲಿ ಸ್ಪಷ್ಟವಾಗಿ ಕೇಳಿಬರುತ್ತದೆ.
- ಇಬ್ರಾಹಿಮ್ ರೌಜಾ: ಇದು ಇಬ್ರಾಹಿಮ್ ಆದಿಲ್ ಶಾ (ಆಳ್ವಿಕೆ: ೧೫೮೦-೧೬೨೭) ನ ಗೋರಿ. ಒಂದೇ ಶಿಲೆಯಲ್ಲಿ ಕಟ್ಟಲ್ಪಟ್ಟ ರೌಜಾ ತನ್ನ ಉದ್ದಳತೆಯ ಸಮರೂಪತೆಗೆ ಹೆಸರಾಗಿದೆ. ಇದರ ಶಿಲ್ಪಿ ಮಲಿಕ್ ಸಂದಾಲ್ ಇರಾನ್ ದೇಶದವನಾಗಿದ್ದು, ಶಿಲ್ಪಿಯ ಗೋರಿಯೂ ಸಹ ಇಲ್ಲಿಯೇ ಇದೆ. ಇದರ ವಿನ್ಯಾಸ ಮುಂದೆ ಪ್ರಸಿದ್ಧ ತಾಜ್ ಮಹಲ್ ನ ವಿನ್ಯಾಸಕ್ಕೆ ಸ್ಫೂರ್ತಿಯಾಯಿತೆಂಬ ಹೇಳಿಕೆಯಿದೆ.
- ವಿಜಾಪುರದ ಇನ್ನೂ ಅನೇಕ ಚಾರಿತ್ರಿಕ ಆಕರ್ಷಣೆಗಳಲ್ಲಿ ಮಾಲಿಕ್-ಎ-ಮೈದಾನ್ ಫಿರಂಗಿ, ಬಾರಾ ಕಮಾನ್, ಜುಮ್ಮಾ ಮಸೀದಿ ಮೊದಲಾದವನ್ನು ಹೆಸರಿಸಬಹುದು.
- ವಿಜಾಪುರ ಜಿಲ್ಲೆಯಲ್ಲಿ ಇರುವ ಇನ್ನೊಂದು ಚಾರಿತ್ರಿಕ ಸ್ಥಳವೆಂದರೆ ಪಟ್ಟದಕಲ್ಲು. ಇಲ್ಲಿ ಚಾಲುಕ್ಯ ಶೈಲಿಯ ದೇವಾಲಯಗಳಿವೆ.
[ಬದಲಾಯಿಸಿ] ಪ್ರಮುಖ ವ್ಯಕ್ತಿಗಳು
[ಬದಲಾಯಿಸಿ] ವಿಜಾಪುರ ಜಿಲ್ಲೆಯ ತಾಲೂಕುಗಳು
- ವಿಜಾಪುರ
- ಇಂಡಿ
- ಸಿಂದಗಿ
- ಬಸವನ ಬಾಗೇವಾಡಿ
- ಮುದ್ದೇಬಿಹಾಳ
[ಬದಲಾಯಿಸಿ] ಭೌಗೋಳಿಕ
ವಿಜಾಪುರ ಜಿಲ್ಲೆಯ ವಿಸ್ತೀರಣ ೧೦೫೪೧ ಚದರ ಕಿಲೋಮಿಟರಗಳು ಮತ್ತು ಜನಸಂಖ್ಯೆ ೧,೮೦೬,೯೧೮ (೨೦೦೧ ಜನಗಣತಿ), ೧೯೯೧ ಜನಗಣತಿಯಿಂದ ೧೭.೬೩% ಹೆಚ್ಚಳವಾಗಿದೆ. ವಿಜಾಪುರ ಜಿಲ್ಲೆಯು; ಗುಲ್ಬರ್ಗ ಜಿಲ್ಲೆ (ಪೂರ್ವಕ್ಕೆ), ರಾಯಚೂರು ಜಿಲ್ಲೆ (ದಕ್ಷಿಣಕ್ಕೆ), ಬಾಗಲಕೋಟೆ ಜಿಲ್ಲೆ (ದಕ್ಷಿಣ-ಪಷ್ಚಿಮಕ್ಕೆ), ಬೆಳಗಾವಿ ಜಿಲ್ಲೆ (ಪಷ್ಚಿಮಕ್ಕೆ), ಮಹಾರಾಷ್ಟ್ರದ ಸಾಂಗಲಿ ಜಿಲ್ಲೆ(ಉತ್ತರ-ಪಷ್ಚಿಮಕ್ಕೆ) ಮತ್ತು ಮಹಾರಾಷ್ಟ್ರದ ಸೊಲಾಪುರ ಜಿಲ್ಲೆಯಿಂದ (ಉತ್ತರಕ್ಕೆ) ಆವೃತಗೊಂಡಿದೆ.
ಈ ಜಿಲ್ಲೆಯು ಕರ್ನಾಟಕ ರಾಜ್ಯದ ೫.೪೯% ವಿಸ್ತೀರಣವನ್ನು ಹೊಂದ್ದಿದೆ. ಈ ಜಿಲ್ಲೆಯು ಭೌಗೋಳಿಕದಲ್ಲಿ ೧೫ x ೫೦ ಮತ್ತು ೧೭ x ೨೮ ಉತ್ತರ್ ಅಕ್ಷಾಂಶ ಮತ್ತು ೭೪ x ೫೪ ಮತ್ತು ೭೬ x ೨೮ ಪಷ್ಚಿಮ ರೆಖಾಂಶ ದಲ್ಲಿ ಬರುತ್ತದೆ. ಈ ಜಿಲ್ಲೆಯ ಜಿಲ್ಲಾಡಾಳಿತ ಮತ್ತು ಪ್ರಮುಖ ಪಟ್ಟಣ ವಿಜಾಪುರ.
[ಬದಲಾಯಿಸಿ] ಸಾರಿಗೆ
ವಿಜಾಪುರ ಪಟ್ಟಣ ಸಾರಿಗೆ ಮತ್ತು ರೈಲು ಸಂಪರ್ಕ ಹೊಂದಿದೆ. ಸರಕಾರೇತ ಮತ್ತು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಸಾರಿಗೆ ವಾಹನಗಳು (ಬಸ್ ಗಳು) ಜಿಲ್ಲೆಯಾದ್ಯಂತ ಸಂಚರಿಸುತ್ತವೆ. ವಿಜಾಪುರದಿಂದ ಮುಂಬೈ,ಬೆಂಗಳೂರು,ಹೈದರಾಬಾದಗಳಿಗೆ ಐಷಾರಾಮಿ ಬಸ್ಸುಗಳು,ನೇರ ರೈಲುಗಳು ಓಡುತ್ತವೆ.
[ಬದಲಾಯಿಸಿ] ರಾಜಕೀಯ
ವಿಜಾಪುರ ಜಿಲ್ಲೆಯಿಂದ ೭ ಜನ ವಿಧಾನಸಭೆಗೆ (ಕೆಳಮನೆ) ಮತ್ತು ೫ ಜನ ವಿಧಾನಪರಿಷತ್ ಗೆ(ಮೇಲ್ಮನೆ) ಶಾಸಕರು ಆಯ್ಕೆಗೊಳ್ಳುತ್ತಾರೆ. ವಿಜಾಪುರ ಜಿಲ್ಲೆಯ ವಿದಾನಸಭಾ ಕ್ಷೇತ್ರಗಳು:
- ವಿಜಾಪುರ (ವಿಜಾಪುರ ಪಟ್ಟಣ)
- ಬಬಲೆಶ್ವರ (ವಿಜಾಪುರ ಗ್ರಾಮೀಣ)
- ಇಂಡಿ
- ಮುದ್ದೇಬಿಹಾಳ
- ಹೂವಿನ ಹಿಪ್ಪರಗಿ
- ಬಸವನ ಬಾಗೆವಾಡಿ
- ಸಿಂದಗಿ
- ನಾಗಠಾಣ
[ಬದಲಾಯಿಸಿ] ಶಿಕ್ಷಣ
ನಗರದಲ್ಲಿ ಅನೇಕಾನೇಕ ಪ್ರಾಥಮಿಕ, ಮಾಧ್ಯಮಿಕ, ಸ್ನಾತಕ, ಸ್ನಾತಕೋತ್ತರ ಸಂಸ್ಠೆಗಳಿಂದ ವಿವಿಧ ವಿಷಯಗಳಲ್ಲಿ ಶಿಕ್ಷಣ ಲಭ್ಯವಿದೆ. ಕಲೆ,ವಿಜ್ಞಾನ, ಕಾನೂನು,ವಾಣಿಜ್ಯ,ಆಡಳಿತ, ಗಣಕವಿಜ್ಞಾನ, ವೈದ್ಯಕೀಯ, ಆಯುರ್ವೇದ, ತಾಂತ್ರಿಕ ಮಹಾವಿದ್ಯಾಲಯಗಳಿವೆ. ಮಹಿಳಾ ವಿಷಯಗಳಿಗೆ ಸಂಬಂಧಪಟ್ಟ ಕರ್ನಾಟಕದ ಏಕಮಾತ್ರ ಮಹಿಳಾ ವಿಶ್ವವಿದ್ಯಾಲಯವಿದೆ.ಕೇಂದ್ರ ರಕ್ಷಣಾ ಖಾತೆಯಿಂದ ನಡೆಸಲ್ಪಡುವ ಸೈನಿಕ ಶಾಲೆ ಇದೆ.
[ಬದಲಾಯಿಸಿ] ಸಾಂಸ್ಕೃತಿಕ
ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮಿಶ್ರಿತ ವಿಶಿಷ್ಠವಾದ ಕನ್ನಡ 'ವಿಜಾಪುರ ಕನ್ನಡ'ವೆಂದೇ ಗುರುತಿಸಲ್ಪಡುತ್ತದೆ. ಒಕ್ಕಲುತನ ಮುಖ್ಯ ಉದ್ಯೋಗ. ಜೊತೆಗೆ ಕೆಲವೊಂದು ಗ್ರಾಮಗಳಲ್ಲಿ(ಚಡಚಣ, ತಾಂಬಾ, ವಂದಾಲ ಮುಂ.)ನೇಕಾರಿಕೆ ಇದೆ. ಪ್ರಮುಖ ಬೆಳೆಗಳು: ಜೋಳ, ಸಜ್ಜೆ, ಸೇಂಗಾ, ಸೂರ್ಯಪಾನ, ಉಳ್ಳಾಗಡ್ಡಿ(ಈರುಳ್ಳೆ). ವಿಜಾಪುರದ ದ್ರಾಕ್ಷಿ, ದಾಳಿಂಬೆ, ನಿಂಬೆ ಹಣ್ಣುಗಳು ಪರರಾಜ್ಯಗಳಿಗೆ, ಪರದೇಶಗಳಿಗೆ ರಫ್ತು ಆಗುತ್ತವೆ. ಪ್ರಮುಖ ಆಹಾರ ಧಾನ್ಯ ಜೋಳ.ಜೊತೆಗೆ ಗೋಧಿ, ಅಕ್ಕಿ, ಬೇಳೆಕಾಳುಗಳು. 'ಜವಾರಿ' ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ,ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ವಿಜಾಪುರದ ಜೋಳದ ರೊಟ್ಟಿ, ಸೇಂಗಾ ಚಟ್ನಿ, ಬದನೆಯಕಾಯಿ ಪಲ್ಯ, ಕೆನೆಮೊಸರುಗಳು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.
[ಬದಲಾಯಿಸಿ] ಬಾಹ್ಯ ಸಂಪರ್ಕಗಳು
ವಿಜಾಪುರ(ಬಿಜಾಪುರ) ಬಿಎಲ್ ಡಿಇ ವಿಶ್ವವಿದ್ಯಾಲಯ ಬಿಎಲ್ ಡಿಇ ಸಂಸ್ಥೆಯ ಶ್ರೀ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ