ಮುದ್ದೇಬಿಹಾಳ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮುದ್ದೇಬಿಹಾಳ
India-locator-map-blank.svg
Red pog.svg
ಮುದ್ದೇಬಿಹಾಳ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಬಿಜಾಪುರ
ನಿರ್ದೇಶಾಂಕಗಳು 16.1833° N 75.7000° E
ವಿಸ್ತಾರ
 - ಎತ್ತರ
೧೨೦೦ km²
 - 770 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೧೨)
 - ಸಾಂದ್ರತೆ
೩೫,೦೦೦
 - ೧೫೦/ಚದರ ಕಿ.ಮಿ.
ಅಂತರ್ಜಾಲ ತಾಣ: www.muddebihaltown.gov.in


ಮುದ್ದೇಬಿಹಾಳ ಒಂದು ಗ್ರಾಮ, ನಗರ, ಪುಣ್ಯಕ್ಷೇತ್ರ ಹಾಗೂ ತಾಲ್ಲೂಕು ಕೇಂದ್ರ .ಇದು ಕರ್ನಾಟಕ ರಾಜ್ಯದ ಬಿಜಾಪೂರ ಜಿಲ್ಲೆಯಲ್ಲಿದೆ. ಮುದ್ದೇಬಿಹಾಳ ಪಟ್ಟಣವು ಬಿಜಾಪೂರ - ಮುದ್ದೇಬಿಹಾಳ ರಾಜ್ಯ ಹೆದ್ದಾರಿಯಲ್ಲಿ ಇದೆ. ಜಿಲ್ಲಾ ಕೇಂದ್ರ ವಿಜಾಪೂರದಿಂದ ಸುಮಾರು ೮೦ ಕಿ. ಮಿ. ದೂರ ಇದೆ.

ಮುದ್ದೇಬಿಹಾಳದಲ್ಲಿ ಒಳ್ಳೆಯ ಶಿಕ್ಷಣ ಕೇಂದ್ರ, ವ್ಯಾಪಾರ ಕೇಂದ್ರ, ಹಣಕಾಸು ಕೇಂದ್ರ, ಸಾರಿಗೆ ಕೇಂದ್ರ, ನೆಮ್ಮದಿ ಕೇಂದ್ರ, ಉಪ ತಹಶಿಲ್ದಾರರ ಕಚೇರಿ, ಬಿ.ಎಸ್.ಎನ್.ಎಲ್ ಕಚೇರಿ, ರೈತ ಸಂಪರ್ಕ ಕೇಂದ್ರ, ಬಸ್ ನಿಲ್ದಾಣ, ಅಂಚೆ ಕಚೇರಿ, ಬ್ಯಾಂಕಗಳು ಹಾಗೂ ಇತರೆ ಕಚೇರಿಗಳಿವೆ.

ಚರಿತ್ರೆ[ಬದಲಾಯಿಸಿ]

ಬಾಸರಗೌಡ ನಾಡಗೌಡರ ಪೂರ್ವಜರಾದ ಪರಮಣ್ಣನವರಿಂದ ೧೬೮೦ ರಲ್ಲಿ ಸ್ಥಾಪಿಸಲಾಯಿತು.ಅದೇ ಮನೆತನದ ಹುಚ್ಚಪ್ಪನವರು ೧೭೨೦ ರಲ್ಲಿ ಕೋಟೆ ಕಟ್ಟಿಸಿದ್ದರು.

ಮುದ್ದೇಬಿಹಾಳ ನಗರವು ವಿಜಾಪೂರ ಜಿಲ್ಲೆಯ ಪಡುಮೂಲೆಯ ಒಂದು ತಾಲೂಕು. ಹೀಗೆ ಪಡುಮೂಲೆಯ ತಾಲೂಕೆಂದು ಹೆಸರು ಬರಲು ತಾಲೂಕಿನ ತಾಳಿಕೋಟಿ, ಪ್ರಸಿದ್ಧ ವ್ಯಾಪಾರ ಕೇಂದ್ರವಾಗಿರುವುದೇ ಕಾರಣ. ತಾಳಿಕೋಟಿಯು ತಾಲೂಕು ಕೇಂದ್ರ ಮುದ್ದೇಬಿಹಾಳಕ್ಕಿಂತ ವ್ಯಾಪಾರ ಮುಂತಾದ ಕ್ಷೇತ್ರಗಳಲ್ಲಿ ಮುಂದಿದೆ. ಜಿಲ್ಲೆಯ ಅತ್ಯಂತ ಚಿಕ್ಕ ಗಾತ್ರದ ತಾಲೂಕು. ಐತಿಹಾಸಿಕವಾಗಿ ಪ್ರಸಿದ್ಧವಾದ ಅನೇಕ ಸ್ಥಳಗಳು ಇಲ್ಲಿವೆ. ವಿಜಯನಗರ ಸಾಮ್ರಾಜ್ಯದ ಪತನಕ್ಕೆ ಕಾರಣವಾದ ೧೫೬೫ರ ತಾಳಿಕೋಟಿ(ರಕ್ಕಸ ತಂಗಡಗಿ) ಯುದ್ಧ ಸ್ಥಳಗಳು ಇಲ್ಲಿವೆ.

ಈ ತಾಲೂಕಿನಲ್ಲಿ ಒಟ್ಟು ೩೧ ಗ್ರಾಮ ಪಂಚಾಯತಿಳು ಹಾಗೂ ೪ ಹೋಬಳಿಗಳನ್ನು ಒಳಗೊಂಡಿದೆ. ೪ ಹೋಬಳಿಗಳೆಂದರೆ,

೧) ಮುದ್ದೇಬಿಹಾಳ

೨) ತಾಳಿಕೋಟಿ

೩) ನಾಲತವಾಡ ಹಾಗೂ

೪) ಢವಳಗಿ

ಇಲ್ಲಿರುವ ಒಂದು ಈಶ್ವರ ದೇವಾಲಯ ಪ್ರಸಿದ್ದ. ಬಸರಕೋಡ ಗ್ರಾಮದಲ್ಲಿ ಜಕಣಾಚಾರ್ಯರಿಂದ ನಿರ್ಮಿತವಾದ ಒಂದು ಜೈನ ದೇವಾಲಯವು,೧೭೫೦ ರಲ್ಲಿ ಮಲ್ಲಿಕಾರ್ಜುನ,೧೮೦೫ ರಲ್ಲಿ ೩ಲಿಂಗ ಗುಡಿ. ೨ ಮಸೀದಿಗಳಲ್ಲಿ ಪಾಂಚ್ ಪೀರ್ ಮಸೀದಿ-ಪಂಚ ಪಾಂಡವ ದೇವಾಸ್ಥಾನವೆಂದು ಹಿಂದುಗಳಿಗೆ ಪ್ರಸಿದ್ದವಾಗಿದೆ.

ಪ್ರಸ್ತುತ ಶಾಸಕರು :

ಶ್ರೀ ಸಿ.ಎಸ್. ನಾಡಗೌಡ್ರ (ಅಪ್ಪಾಜಿ) ಇವರು ಪ್ರಸ್ತುತ ತಾಲೂಕ ಶಾಸಕರಾಗಿದ್ದು, ಇವರು ಸತತ ಮೂರು ಸಲ ಶಾಸಕರಾಗಿ ತಾಲೂಕಿನಲ್ಲಿ ದಾಖಲೆ ನಿರ್ಮಿಸಿದ್ದಾರೆ.

ಮುದ್ದೇಬಿಹಾಳ ಪುರಸಭೆ

ಭೌಗೋಳಿಕ[ಬದಲಾಯಿಸಿ]

ಕರ್ನಾಟಕದ ಉತ್ತರದ ಗಡಿಯಲ್ಲಿರುವ ಮುದ್ದೇಬಿಹಾಳ ತಾಲ್ಲೂಕವು ಉತ್ತರಕ್ಕೆ ಸಿಂದಗಿ ಜಿಲ್ಲೆ , ಪಶ್ಚಿಮಕ್ಕೆ ಬಸವನ ಬಾಗೇವಾಡಿ ತಾಲ್ಲೂಕು ಮತ್ತು ವಿಜಾಪೂರ ತಾಲ್ಲೂಕು, ದಕ್ಷಿಣಕ್ಕೆ ರಾಯಚೂರ ಜಿಲ್ಲೆ ಮತ್ತು ಪೂರ್ವಕ್ಕೆ ಗುಲ್ಬರ್ಗಾ ಜಿಲ್ಲೆ ಇದೆ. ಈ ತಾಲ್ಲೂಕದ ವಿಸ್ತೀರ್ಣ ೨೨೨೫ ಚ.ಕಿಮೀ ಮತ್ತು ವಾರ್ಷಿಕ ಮಳೆ ೫೯.೫ ಸೆ.ಮೀ. ಇದೆ. ಮುದ್ದೇಬಿಹಾಳ ತಾಲ್ಲೂಕವು ೧೪೩ ಹಳ್ಳಿಗಳು, ೩೨ ಗ್ರಾಮ ಪಂಚಾಯತಗಳು, ೪ ಹೊಬಳ್ಳಿಗಳನ್ನೊಳಗೊಂಡಿದೆ.

ಕರ್ನಾಟಕ ಸರ್ಕಾರವು ಫೆಬ್ರುವರಿ ೮, ೨೦೧೩ ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ ವಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ತಾಳಿಕೋಟಿ ನಗರವನ್ನು ಹೊಸ ತಾಲ್ಲೂಕನ್ನಾಗಿ ರಚಿಸಿದೆ.

ಕೃಷಿ[ಬದಲಾಯಿಸಿ]

ಕೃಷಿ ಮುದ್ದೇಬಿಹಾಳ ತಾಲ್ಲೂಕಿನ ಮುಖ್ಯ ವೃತ್ತಿ. ಕೃಷಿಗೆ ನೀರಿನ ಸರಬರಾಜು ಆಲಮಟ್ಟಿಯಲ್ಲಿನ ಕೃಷ್ಣಾ ಅಣೆಕಟ್ಟಿನಿಂದ ಆಗುತ್ತದೆ. ಇಲ್ಲಿ ಬೆಳೆಯಲ್ಪಡುವ ಮುಖ್ಯ ಬೆಳೆಗಳು ಜೋಳ, ನೆಲಗಡಲೆ (ಶೆಂಗಾ), ಸೂರ್ಯಕಾಂತಿ ಮತ್ತು ಕಬ್ಬು ಇತ್ಯಾದಿ.

Bold text==ದೇವಾಲಯಗಳು==

ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಪಾಂಡುರಂಗ - ವಿಠ್ಠಲ ದೇವಸ್ಥಾನ ಹಾಗೂ ಶ್ರೀ ಹಣಮಂತ ದೇವಾಲಯ ನಾಗಲಿಂಗೆಶ್ವರ ,ಪವಾಡ ಬಸವೇಶ್ವರದೇವಾಲಯಗಳನ್ನು ನಿರ್ಮಿಸಿದ್ದಾರೆ.

ಮಸೀದಿಗಳು[ಬದಲಾಯಿಸಿ]

ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ನೀರಾವರಿ[ಬದಲಾಯಿಸಿ]

ಮುದ್ದೇಬಿಹಾಳ ತಾಲ್ಲೂಕಿನ ಪ್ರತಿಶತ ೩೦ ಭಾಗ ಭೂಮಿ ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಹಬ್ಬಗಳು[ಬದಲಾಯಿಸಿ]

ಪ್ರತಿವರ್ಷ ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಶಿಕ್ಷಣ[ಬದಲಾಯಿಸಿ]

ಪ್ರಮುಖ ಶಿಕ್ಷಣ ಸಂಸ್ಥೆಗಳು

  • ಸರಕಾರಿ ಹಿರಿಯ ಗಂಡು ಮಕ್ಕಳ ಪ್ರಾಥಮಿಕ ಶಾಲೆ, ಮುದ್ದೇಬಿಹಾಳ
  • ಸರಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ, ಮುದ್ದೇಬಿಹಾಳ
  • ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ, ಮುದ್ದೇಬಿಹಾಳ
  • ಸರಕಾರಿ ಉರ್ದು ಪ್ರೌಡ ಶಾಲೆ, ಮುದ್ದೇಬಿಹಾಳ
  • ಲಯನ್ಸ್ ಶಾಲೆ, ಮುದ್ದೇಬಿಹಾಳ
  • ಸರಕಾರಿ ಪ್ರೌಡ ಶಾಲೆ, ಮುದ್ದೇಬಿಹಾಳ
  • ಜ್ಣಾನಭಾರತಿ ಪ್ರೌಡ ಶಾಲೆ, ಮುದ್ದೇಬಿಹಾಳ
  • ವಿ.ಬಿ.ಸಿ. ಪ್ರೌಡ ಶಾಲೆ, ಮುದ್ದೇಬಿಹಾಳ
  • ಎಮ್.ಜಿ.ಎಮ್.ಕೆ.(ಆಂಗ್ಲ ಮಾಧ್ಯಮ) ಪ್ರೌಡ ಶಾಲೆ, ಮುದ್ದೇಬಿಹಾಳ
  • ಎಮ್.ಜಿ.ವಿ.ಸಿ. ಪದವಿಪೂರ್ವ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಮುದ್ದೇಬಿಹಾಳ
  • ಎಮ್.ಜಿ.ಎಮ್.ಕೆ. ಪದವಿಪೂರ್ವ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಮುದ್ದೇಬಿಹಾಳ
  • ಅಂಜುಮನ್ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಮುದ್ದೇಬಿಹಾಳ
  • ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಮುದ್ದೇಬಿಹಾಳ
  • ಎಮ್.ಜಿ.ವಿ.ಸಿ. ಕಲಾ, ವಾಣಿಜ್ಯ ಮತ್ತು ವಿಜ್ಣಾನ ಮಹಾವಿದ್ಯಾಲಯ, ಮುದ್ದೇಬಿಹಾಳ
  • ಶ್ರೀ ವೀರೇಶ್ವರ ಕಲಾ ಮಹಾವಿದ್ಯಾಲಯ, ನಾಲತವಾಡ, ಮುದ್ದೇಬಿಹಾಳ
  • ಶ್ರೀ ಸಿದ್ರಾಮೇಶ್ವರ ಕೈಗಾರಿಕಾ ತರಬೇತಿ ಕೇಂದ್ರ, ಮುದ್ದೇಬಿಹಾಳ
  • ಬಾಪೂಜಿ ಕೈಗಾರಿಕಾ ತರಬೇತಿ ಕೇಂದ್ರ, ಮುದ್ದೇಬಿಹಾಳ
  • ಎ.ಪಿ.ಜೆ.ಅಬ್ದುಲ್ ಕಲಾಮ್ ಕೈಗಾರಿಕಾ ತರಬೇತಿ ಕೇಂದ್ರ, ಮುದ್ದೇಬಿಹಾಳ
  • ಮಾತೋಶ್ರೀ ಗಂಗಮ್ಮ ವೀರಪ್ಪ ಚಿನಿವಾರ ಪ್ರಾಥಮಿಕ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ಮುದ್ದೇಬಿಹಾಳ
  • ಶಿವಯೋಗಿ ಸಂಗಮಾರ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ಮುದ್ದೇಬಿಹಾಳ
  • ಶ್ರೀ ವೀರೇಶ್ವರ ಶಿಕ್ಷಣ ಮಹಾವಿದ್ಯಾಲಯ, ನಾಲತವಾಡ, ಮುದ್ದೇಬಿಹಾಳ

ಪ್ರಮುಖ ವ್ಯಕ್ತಿಗಳು[ಬದಲಾಯಿಸಿ]

ರಾಜಕೀಯ[ಬದಲಾಯಿಸಿ]

ಮುದ್ದೇಬಿಹಾಳ ನಗರವು ಬಿಜಾಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರವಾಗಿದೆ.

ಆರೋಗ್ಯ[ಬದಲಾಯಿಸಿ]

ಮುದ್ದೇಬಿಹಾಳ ನಗರದಲ್ಲಿ ಸರಕಾರಿ ತಾಲ್ಲೂಕು ಆಸ್ಪತ್ರೆಯಿದೆ.

ವಿದ್ಯುತ್ ಪರಿವರ್ತನಾ ಕೇಂದ್ರಗಳು[ಬದಲಾಯಿಸಿ]

ಮುದ್ದೇಬಿಹಾಳ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು

  • ೧೧೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಮುದ್ದೇಬಿಹಾಳ
  • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ತಂಗಡಗಿ
  • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಢವಳಗಿ
  • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ನಾಲತವಾಡ
  • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ತಾಳಿಕೋಟಿ

ಬ್ಯಾಂಕಗಳು [ಬದಲಾಯಿಸಿ]

  • ವಿಜಯ ಬ್ಯಾಂಕ, ಮುದ್ದೇಬಿಹಾಳ
  • ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ, ಮುದ್ದೇಬಿಹಾಳ
  • ಡಿ.ಸಿ.ಸಿ. ಬ್ಯಾಂಕ, ಮುದ್ದೇಬಿಹಾಳ
  • ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ, ಮುದ್ದೇಬಿಹಾಳ
  • ಸ್ಟೇಟ್ ಬ್ಯಾಂಕ ಆಫ್ ಇಂಡಿಯಾ, ಮುದ್ದೇಬಿಹಾಳ
  • "' ಯೂನಿಯನ್ ಬ್ಯಾಂಕ ಆಫ್ ಇಂಡಿಯಾ ಮುದ್ದೇಬಿಹಾಳ
  • ಸಿಂಡಿಕೇಟ್ ಬ್ಯಾಂಕ, ಮುದ್ದೇಬಿಹಾಳ
  • ಕಾರ್ಪೋರೇಶನ್ ಬ್ಯಾಂಕ, ಮುದ್ದೇಬಿಹಾಳ
  • ಕರ್ನಾಟಕ ಸಹಕಾರಿ ಬ್ಯಾಂಕ್, ಮುದ್ದೇಬಿಹಾಳ, ಬಿಜಾಪೂರ.(ಮುಖ್ಯ ಕಚೇರಿ)
  • ಮುಸ್ಲಿಂ ಸಹಕಾರಿ ಬ್ಯಾಂಕ್, ತಾಳಿಕೋಟ, ಮುದ್ದೇಬಿಹಾಳ, ಬಿಜಾಪೂರ.(ಮುಖ್ಯ ಕಚೇರಿ)
  • ತಾಳಿಕೋಟ ಸಹಕಾರಿ ಬ್ಯಾಂಕ್, ತಾಳಿಕೋಟ, ಮುದ್ದೇಬಿಹಾಳ, ಬಿಜಾಪೂರ.(ಮುಖ್ಯ ಕಚೇರಿ)
  • ಭಾವಸಾರ ಕ್ಷತ್ರೀಯ ಸಹಕಾರಿ ಬ್ಯಾಂಕ್, ತಾಳಿಕೋಟ, ಮುದ್ದೇಬಿಹಾಳ, ಬಿಜಾಪೂರ.(ಮುಖ್ಯ ಕಚೇರಿ)
  • ಶ್ರೀ ಶರಣ ವೀರೇಶ್ವರ ಸಹಕಾರಿ ಬ್ಯಾಂಕ್, ನಾಲತವಾಡ, ಮುದ್ದೇಬಿಹಾಳ, ಬಿಜಾಪೂರ.(ಮುಖ್ಯ ಕಚೇರಿ)

ಮುದ್ದೇಬಿಹಾಳ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು[ಬದಲಾಯಿಸಿ]

ಅಬ್ಬಿಹಾಳ, ಅಡವಿಹುಲಗಬಾಳ, ಅಡವಿಸೋಮನಾಳ, ಅಗಸಬಾಳ, ಆಲಕೊಪ್ಪರ, ಆಲೂರ, ಅಮರಗೋಳ, ಅರಸನಾಳ, ಆರೆಶಂಕರ, ಅರೆಮುರಾಳ, ಬೈಲಕೂರ, ಬಳಬಟ್ಟಿ, ಬಾಳದಿನ್ನಿ, ಬಳಗಾನೂರ, ಬಳವಾಟ, ಬಂಗಾರಗುಂಡ, ಬನೋಶಿ, ಬಸರಕೋಡ, ಬಾವೂರ, ಬೇಲೂರ, ಬಂಟನೂರ, ಬಿದರಕುಂದಿ, ಬಿಳೇಭಾವಿ, ಬೊಳವಾಡ, ಬೊಮ್ಮನಹಳ್ಳಿ , ಬೂದಿಹಾಳ ಪಿ.ಎನ್., ಬೂದಿಹಾಳ ಪಿ.ನಾಲತವಾಡ, ಚಲಮಿ, ಚವನಭಾವಿ, ಚಿರ್ಚನಕಲ್, ಚೋಕಾವಿ, ಚೊಂಡಿ, ದೇವರಹುಲಗಬಾಳ, ದೇವೂರ, ಢವಳಗಿ, ಡೊಂಕಮಡು, ಫತ್ತೇಪೂರ, ಗಡಿಸೋಮನಾಳ, ಗಂಗೂರ, ಗರಸಂಗಿ, ಗೆದ್ದಲಮರಿ, ಗಾಳಿಪೂಜಿ, ಗೋನಾಳ ಪಿ.ಎನ್., ಗೋನಾಳ ಎಸ್.ಎಚ್., ಗೊಟಖಂಡಕಿ, ಗುಡದಿನ್ನಿ, ಗೂಡಿಹಾಳ, ಗುಡ್ನಾಳ, ಗುಂಡಕನಾಳ, ಗುಂಡಕರಜಗಿ, ಗುಟ್ಟಿಹಾಳ, ಹಡಗಲಿ, ಹಡಗಿನಾಳ, ಹಡಲಗೇರಿ, ಹಗರಗೊಂಡ, ಹಳ್ಳೂರ, ಹಂಡರಗಲ್ಲ, ಹಂದ್ರಾಳ, ಹರಿಂದ್ರಾಳ, ಹರನಾಳ, ಹೀರೇಮುರಾಳ, ಹಿರೂರ, ಹೊಕ್ರಾಣಿ, ಹೊಸಹಳ್ಳಿ, ಹುಲ್ಲೂರ, ಹುನಕುಂತಿ, ಹೂವಿನಹಳ್ಳಿ, ಇಣಚಗಲ್, ಇಂಗಳಗೇರಿ, ಜೈನಾಪೂರ, ಜಕ್ಕೇರಾಳ, ಜಲಪೂರ, ಜಂಬಲದಿನ್ನಿ, ಜಂಗಮುರಾಳ, ಜಟ್ಟಗಿ, ಕಲದೇವನಹಳ್ಳಿ, ಕಾಳಗಿ, ಕಮಲದಿನ್ನಿ, ಕಂದಗನೂರ, ಕಾರಗನೂರ, ಕಾಶಿನಕುಂಟೆ, ಕವಡಿಮಟ್ಟಿ, ಕೇಸಾಪೂರ, ಖಾನಾಪೂರ, ಕಿಲಾರಹಟ್ಟಿ, ಕೊಡಗಾನೂರ, ಕೋಳೂರ, ಕೊಣ್ಣೂರ, ಕೊಪ್ಪ, ಕುಚಬಾಳ, ಕುಂಚಗನೂರ, ಕುಂಟೋಜಿ, ಕ್ಯಾತನಡೋಣಿ, ಕ್ಯಾತನಾಳ, ಲಕ್ಕುಂಡಿ, ಲಿಂಗದಳ್ಳಿ, ಲೋಟಗೇರಿ, ಮದರಿ, ಮಡಿಕೇಶ್ವರ, ಮಾದಿನಾಳ, ಮೈಲೇಶ್ವರ, ಮಲಗಲದಿನ್ನಿ, ಮಸ್ಕನಾಳ, ಮಸೂತಿ, ಮಟಕದೇವನಹಳ್ಳಿ, ಮಾವಿನಭಾವಿ, ಮಿಣಜಗಿ, ಮುದ್ನಾಳ, ಮುದೂರ, ಮುಕಿಹಾಳ, ನಡಹಳ್ಳಿ, ನಾಗಬೇನಾಳ, ನಾಗರಬೆಟ್ಟ, ನಾಗರಾಳ, ನಾಗೂರ, ನಾಲತವಾಡ, ನಾವದಗಿ, ನೇಬಗೇರಿ, ನೆರಬೆಂಚಿ, ಪಡೆಕನೂರ, ಪೀರಾಪೂರ, ರಕ್ಕಸಗಿ, ರೂಡಗಿ, ಸಾಲವಾಡಗಿ, ಸರೂರ, ಶಳ್ಳಗಿ, ಶಿರೋಳ, ಶಿವಾಪೂರ, ಸಿದ್ದಾಪೂರ ಪಿ.ಟಿ., ಸುಲ್ತಾನಪೂರ, ಟಕ್ಕಲಕಿ, ತಮದಡ್ಡಿ, ತಂಗಡಗಿ, ತಪಲಕಟ್ಟಿ, ತಾರನಾಳ, ತುಂಬಗಿ, ವನಹಳ್ಳಿ, ವಡವಡಗಿ, ವಣಕಿಹಾಳ, ಯಲಗೂರ, ಯರಗಲ್ಲ, ಯರಝರಿ.ತಾಂಡಾಗಳು ಇವೆ.

ಮುದ್ದೇಬಿಹಾಳ ತಾಲ್ಲೂಕಿನ ಗ್ರಾಮ ಪಂಚಾಯತಿಗಳು[ಬದಲಾಯಿಸಿ]

ಅಡವಿ ಸೋಮನಾಳ, ಆಲೂರ, ಬಿ.ಸಾಲವಾಡಗಿ, ಬಂಟನೂರ, ಬಸರಕೋಡ, ಬಾವೂರ, ಬಿದರಕುಂದಿ, ಬಿಜ್ಜೂರ, ಢವಳಗಿ, ಹಡಲಗೇರಿ, ಹಿರೇಮುರಾಳ, ಹಿರೂರ, ಹುಲ್ಲೂರ, ಇಂಗಳಗೇರಿ, ಕಾಳಗಿ, ಕವಡಿಮಟ್ಟಿ, ಕೊಡಗಾನೂರ, ಕೋಳೂರ, ಕೊಣ್ಣೂರ, ಕುಂಟೋಜಿ, ಮಡಿಕೇಶ್ವರ, ಮಿಣಜಗಿ, ಮೊಕಿಹಾಳ, ಗಬೇನಾಳ, ನಾಲತವಾಡ, ರಕ್ಕಸಗಿ, ರೂಡಗಿ, ತಂಗಡಗಿ, ತುಂಬಗಿ, ಯರಝರಿ, ಯಲಗೂರ.

ಮುದ್ದೇಬಿಹಾಳ ತಾಲ್ಲೂಕಿನ ಪಿನಕೋಡ್ ಸಂಕೇತಗಳು[ಬದಲಾಯಿಸಿ]

ಢವಳಗಿ - ೫೮೬೧೧೬, ನಾಲತವಾಡ - ೫೮೬೧೨೪, ತಂಗಡಗಿ - ೫೮೬೧೨೯,ಮುದ್ದೇಬಿಹಾಳ - ೫೮೬೨೧೨, ತಾಳಿಕೋಟಿ - ೫೮೬೨೧೪,

ಮುದ್ದೇಬಿಹಾಳ ತಾಲ್ಲೂಕಿನ ನೆಮ್ಮದಿ ಕೇಂದ್ರಗಳು[ಬದಲಾಯಿಸಿ]

ಢವಳಗಿ, ತಾಳಿಕೋಟಿ, ಮುದ್ದೇಬಿಹಾಳ, ನಾಲತವಾಡ.

ಆರಕ್ಷಕ (ಪೋಲಿಸ್) ಠಾಣೆ[ಬದಲಾಯಿಸಿ]

ಮುದ್ದೇಬಿಹಾಳ ನಗರದ ಪೋಲಿಸ್ ಠಾಣೆಯು ಸುತ್ತಲಿನ ಸುಮಾರು ೫೦ಕ್ಕೂ ಹೆಚ್ಚು ಹಳ್ಳಿಗಳ ವಾಪ್ತಿ ಹೊಂದಿದೆ.

ಮುದ್ದೇಬಿಹಾಳ ತಾಲ್ಲೂಕಿನ ಪೋಲಿಸ್ ಠಾಣೆಗಳು[ಬದಲಾಯಿಸಿ]

  • ಪೋಲಿಸ್ ಠಾಣೆ, ಮುದ್ದೇಬಿಹಾಳ
  • ಪೋಲಿಸ್ ಠಾಣೆ, ತಾಳಿಕೋಟ

ಸಕ್ಕರೆ ಕಾರ್ಖಾನೆಗಳು[ಬದಲಾಯಿಸಿ]

ಪ್ರಾಥಮಿಕ ಆರೋಗ್ಯ ಕೇಂದ್ರಗಳು[ಬದಲಾಯಿಸಿ]

ಮುದ್ದೇಬಿಹಾಳ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು

ನಾಲತವಾಡ, ಕಾಳಗಿ, ಕೊಣ್ಣೂರ, ಮಡಿಕೇಶ್ವರ, ಕಾರಿಗನೂರ, ತಮದಡ್ಡಿ, ತಂಗಡಗಿ, ಢವಳಗಿ, ಅಡವಿ ಸೋಮನಾಳ, ಬಂಟನೂರ, ಉತ್ತೂರ.

ಪಶು ಆಸ್ಪ ತ್ರೆಗಳು[ಬದಲಾಯಿಸಿ]

  • ಪಶು ಆಸ್ಪ ತ್ರೆ, ಮುದ್ದೇಬಿಹಾಳ

ಪಶು ಚಿಕಿತ್ಸಾಲಯಗಳು

ನಾಲತವಾಡ, ಕೊಡಗಾನೂರ, ತಂಗಡಗಿ, ಮಿಣಜಗಿ, ತುಂಬಗಿ, ಕಾಳಗಿ, ಢವಳಗಿ, ರಕ್ಕಸಗಿ, ಬಂಟನೂರ, ಮಡಿಕೇಶ್ವರ, ಯರಝರಿ.

ಪ್ರಾಥಮಿಕ ಪಶು ಚಿಕಿತ್ಸಾಲಯಗಳು

ಬಸರಕೋಡ, ಅಡವಿ ಸೋಮನಾಳ, ಇಂಗಳಗೇರಿ, ಹಿರೇಮುರಾಳ, ಬಿ.ಸಾಲವಾಡಗಿ, ಕೊಣ್ಣೂರ, ದೇವರ ಹುಲಗಬಾಳ, ತಮದಡ್ಡಿ .

ಆಕರ್ಷಣೆಗಳು[ಬದಲಾಯಿಸಿ]

ಈ ತಾಲೂಕಿನಲ್ಲಿ ಕೆಲವು ಇತಿಹಾಸ ಪ್ರಸಿದ್ಧ ಸ್ಥಳಗಳೂ ಇವೆ.