ಚೋರಗಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚೋರಗಿ
ಚೋರಗಿ,CHORAGI
village

ಚೋರಗಿ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿದೆ. ಈ ಗ್ರಾಮದ ಸುತ್ತಲೂ ಚವಡಿಹಾಳ,ಚಿಕ್ಕ ಬೆನೂರ,ಅಂಜುಟಗಿ,ಕೂಡಗಿ ಮತ್ತು ಬಬಲಾದ ಗ್ರಾಮಗಳಿವೆ.

ಭೌಗೋಳಿಕ

ಗ್ರಾಮವು ಭೌಗೋಳಿಕವಾಗಿ 16* 31' 10"x ಉತ್ತರ ಅಕ್ಷಾಂಶ ಮತ್ತು 75* 31' 19" ಪೂರ್ವ ರೇಖಾಂಶದಲ್ಲಿ ಬರುತ್ತದೆ.

ಹವಾಮಾನ

  • ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ 43 ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ 9 ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆಕಾಲ - 35°C-43°C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು
  • ಮಳೆಗಾಲ - 18°C-30°C ಡಿಗ್ರಿ ಸೆಲ್ಸಿಯಸ್.
  • ಮಳೆ - ಪ್ರತಿ ವರ್ಷ ಮಳೆ 300 - 600ಮಿಮಿ ಗಳಸ್ಟು ಆಗಿರುತ್ತದೆ.
  • ಗಾಳಿ -ಗಾಳಿ ವೇಗ 18 ಕಿಮಿ/ಗಂ (ಜೂನ), 19 ಕಿಮಿ/ಗಂ (ಜುಲೈ)ಹಾಗೂ 17 ಕಿಮಿ/ಗಂ (ಅಗಸ್ಟ್) ಇರುತ್ತದೆ.

ಜನಸಂಖ್ಯೆ

ಗ್ರಾಮದಲ್ಲಿ ಜನಸಂಖ್ಯೆ ಸುಮಾರು 2500 ಇದೆ. ಅದರಲ್ಲಿ 1300 ಪುರುಷರು ಮತ್ತು 1200 ಮಹಿಳೆಯರು ಇದ್ದಾರೆ.

ಸಾಂಸ್ಕೃತಿಕ

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಕಲೆ ಮತ್ತು ಸಂಸ್ಕೃತಿ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.

ಧರ್ಮ

ಗ್ರಾಮದಲ್ಲಿ ಹಿಂದೂ ಧರ್ಮದ ಜನರಿದ್ದಾರೆ. ಅದರಲ್ಲಿಯೂ ಲಿಂಗಾಯತ ಜನರು ಅಧಿಕ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಪಾಟೀಲ, ಮೇಡೆದಾರ, ಬಿರಾದರ, ದೇಸಾಯಿ, ಹಲಸಂಗಿ, ಸಿದ್ದಾಬಸಿ, ಹೀರೆಮಠ, ಬಡಿಗೆರ್, ಬಗಲಿ, ಅಹಿರಸಂಗ, ಪತ್ತಾರ, ಸಾಕರೆ, ಹತ್ತಳ್ಳಿ ಎಂಬ ಹಲವಾರು ಒಂದೆ ತಲೆಮಾರಿನ ಕುಟುಂಬಗಳ ಜೊತೆಗೆ ದಲಿತರ ನಿಂಗದಳ್ಳಿ, ಹೊಸಮನಿ, ಹೊನಕೋರೆ, ಕಾಂಬಳೆ ಕುಟುಂಬಗಳು ಒಗ್ಗಟ್ಟಾಗಿ ಶಾಂತಿಯಿಂದ ಬಾಳ್ವೆ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ತಳವಾರ ಜಾತಿಯ ಒಂದೆ ಕುಟುಂಬ ಇಲ್ಲಿ ವಾಸವಾಗಿದೆ. ತಳವಾರ "ಧ್ಯಾಮವ್ವ"ನೆ ಈಡಿ ಊರಿನ ಸಕಲ ಕಾರ್ಯಕ್ರಮಗಳಲ್ಲಿ ತನ್ನ ತಳವಾರಿಕೆಯನ್ನು ತೋರಿಸುವುದು ವಿಶೇಷವಾಗಿದೆ. ಅದೇ ರೀತಿ "ಸವಿತಾ" ಸಮಾಜದ ನೌದಗಿ "ಮಲ್ಲ"ನೂ ಕೂಡ ಇಡಿ ಊರಲ್ಲಿರುವ ಒಬ್ಬನೆ ಕ್ಷೌರಿಕ ಎಂಬುದು ವಿಶೇಷ.[ಸೂಕ್ತ ಉಲ್ಲೇಖನ ಬೇಕು]

ಭಾಷೆ

ಗಡಿ ಭಾಗವಾದರೂ ಕನ್ನಡದ ಸೊಬಗು ಎಲ್ಲಡೆ ಹರಡಿದೆ. ಇಲ್ಲಿ ಕನ್ನಡವೆ ಸತ್ಯ ಕನ್ನಡವೆ ನಿತ್ಯ. ಮರಾಠಿ, ಹಿಂದಿ ಮಿಶ್ರಿತವಾದ ಕನ್ನಡ ಇದೆ.

ದೇವಸ್ಥಾನಗಳು

  • ಶ್ರೀ ವೀರಭದ್ರೆಶ್ವರ ದೇವಾಲಯ
  • ಶ್ರೀ ಲಕ್ಷ್ಮೀ ದೇವಾಲಯ
  • ಶ್ರೀ ಭಾಗ್ಯವಂತಿ ದೇವಾಲಯ
  • ಶ್ರೀ ಬಸವೇಶ್ವರ ದೇವಸ್ಥಾನ
  • ಶ್ರೀ ಎಣ್ಣಿಂಗೆಶ್ವರ ದೇವಾಲಯ
  • ಶ್ರೀ ರೇವಣಸಿದ್ದೆಶ್ವರ ದೇವಾಲಯ
  • ಶ್ರೀ ಹಣಮಂತ ದೇವಾಲಯ
  • ಶ್ರೀ ಕಾಳಿಕಾಂಬ ದೇವಾಲಯ
  • ಶ್ರೀ ದುರ್ಗಾದೇವಿ ದೇವಾಲಯ

ನೀರಾವರಿ

ಗ್ರಾಮದ ಪ್ರತಿಶತ 50 ಭಾಗ , ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಮಳೆಯಾಶ್ರಿತ ಬೆಳೆಗಳಾದ ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ. ಬೇಸಿಗೆ ದಿನಗಳಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಇರುವ ಈ ಊರಲ್ಲಿ ನೀರಾವರಿ ಬೇಳೆಗಳ ನೀರಿಕ್ಷೆ ಸಾಧ್ಯವಿಲ್ಲ.ಅದಕ್ಕಾಗಿ ಇಲ್ಲಿನ ರೈತರೂ ಒಣ ಬೇಸಾಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಕೃಷಿ ಮತ್ತು ತೋಟಗಾರಿಕೆ

ಗ್ರಾಮದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು ೭೫% ಜನರು ಕೆಲಸ ಮಾಡುತ್ತಾರೆ. ಗ್ರಾಮದಲ್ಲಿ ಕೇವಲ ೧೫% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ ೮೫% ಭೂಮಿ ಮಳೆಯನ್ನೇ ಅವಲಂಭಿಸಿದೆ.

ಆರ್ಥಿಕತೆ

ಗ್ರಾಮದಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ.

ಉದ್ಯೋಗ

ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ 70% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ,ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ. ಉಳಿದಂತೆ ಊರಲ್ಲಿರುವ ವಿದ್ಯಾವಂತ ಯುವಕರು KSRTC, KSP, INDIAN ARMY ಇಲಾಖೆಗಳು ಸೇರಿದಂತೆ ಮುಂತಾದ ಕಡೆ ಕೆಲಸವನ್ನು ಮಾಡುತ್ತಿದ್ದಾರೆ.

ಬೆಳೆ

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಹಬ್ಬ ಮತ್ತು ಜಾತ್ರೆಗಳು

ಇಲ್ಲಿಯ ಜನ ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ,ಸಂಕ್ರಾತಿ ಹಬ್ಬಗಳನ್ನು ಆಚರಿಸುತ್ತಾರೆ. ಪ್ರತಿ ವರ್ಷ ಬಾದಮಿ ಅಮವಾಸ್ಯೆ ಸಮಯದಲ್ಲಿ ಊರಿನಲ್ಲಿರುವ ವೀರಭದ್ರೇಶ್ವರನ ಜಾತ್ರೆಯನ್ನು ಸಡಗರದಿಂದ ದೂರದಲ್ಲಿರುವ ಬಿಗರು-ಬಿದ್ದರನ್ನು ಕರೆಸಿಕೊಂಡು ಸಂತೋಷದಿಂದ ಎಲ್ಲ ಜಾತಿಯ ಜನ ಒಗ್ಗಟ್ಟಾಗಿ ಸಂತೋಷದಿಂದ ಆಚರಿಸುತ್ತಾರೆ. ಹಾಗೆಯೇ ಬಸವ ಜಯಂತಿಯ ದಿನ ಹಲಸಂಗಿ ವಸ್ತಿಯಲ್ಲಿರುವ ಜನರೆಲ್ಲಾ ಸೇರಿ ಬಸವಣ್ಣೆಪ್ಪನ ಜಾತ್ರೆಯನ್ನು ಊರವರನ್ನೆಲ್ಲಾ ಒಂದೂ ಗೂಡಿಸಿ ಆಚರಿಸುತ್ತಾರೆ.

ಶಿಕ್ಷಣ

ಗ್ರಾಮದಲ್ಲಿ ಮೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಇವೆ. ಎರಡೂ ಅಂಗನವಾಡಿಗಳಿವೆ. ಇವು ಅಲ್ಲಿನ ಮಕ್ಕಳ ಪ್ರಾಥಮಿಕ ಶಿಕ್ಷಣವನ್ನು ಒದಗಿಸುತ್ತಿದ್ದು. ಹೈಸ್ಕೂಲು ಶಿಕ್ಷಣಕ್ಕಾಗಿ ಊರಲ್ಲಿಯ ವಿದ್ಯಾರ್ಥಿಗಳು ಪಕ್ಕದ ಹಳ್ಳಿಯಾದ ಚವಡಿಹಾಳದ ಭಾಗ್ಯವಂತಿ ಶಿಕ್ಷಣ ಸಂಸ್ಥೆಯ ಮೇಲೆ ಅವಲಂಬಿತರಾಗಿದ್ದಾರೆ.ಈ ಮೊದಲು ನಿಂಬಾಳ ಗ್ರಾಮದ ಮೇಲೆ ಹೈಸ್ಕೂಲು ಶಿಕ್ಷಣಕ್ಕೆ ಅವಲಂಬಿತರಾಗಿದ್ದರು. ಪಿಯು ಶಿಕ್ಷಣಕ್ಕೆ ಹನ್ನೆರಡು ಕಿಮೀ ದೂರದ ಇಂಡಿ ನಗರದಲ್ಲಿನ ಕಾಲೆಜುಗಳ ಮೇಲೆ ಹಾಗೂ ರೈಲ್ವೆ ವ್ಯವಸ್ಥೆಯಿಂದ ಲಚ್ಯಾಣದವರೆಗೂ ಹೋಗಿ ತಮ್ಮ ಪದವಿ ಪೂರ್ವ ಶಿಕ್ಷಣವನ್ನು ಪಡೆದುಕೊಳ್ಳುತ್ತಾರೆ. ಪದವಿಗಾಗಿ ಇಂಡಿ ನಗರ ಹಾಗೂ ಬೊಳೆಗಾಂವದಲ್ಲಿರುವ ಕಾಲೇಜಿನಲ್ಲಿ ಓದಿ ತಮ್ಮ ಪದವಿಗಳನ್ನು ಪಡೆಯುತ್ತಿದ್ದಾರೆ.

ಸಾಕ್ಷರತೆ

ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ.

ರಾಜಕೀಯ

ಗ್ರಾಮವು ವಿಜಯಪುರ ಲೋಕಸಭಾ ಕ್ಷೇತ್ರದ ಹಾಗೂ ಇಂಡಿ ವಿಧಾನಸಭಾ ಕ್ಷೇತ್ರದ ಮತ್ತು ಚವಡಿಹಾಳ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುತ್ತದೆ. ಈ ಗ್ರಾಮದ ಹೋಬಳಿ ಕೇಂದ್ರ ಬಳ್ಳೊಳಿಯಲ್ಲಿದೆ. ಊರಿನ ರಾಜಕೀಯ ನಾಯಕರು ಬೇರೆ ಬೇರೆ ಪಕ್ಷದ ಹಿಂಬಾಲಕರಾಗಿದ್ದರೂ ಊರಿನ ಏಳಿಗೆಗಾಗಿ ಒಗ್ಗಟ್ಟಾಗಿ ಕೆಲಸ ಮಾಡುವುದು ಪ್ರಶಂಸನೀಯ ವಿಷಯವಾಗಿದೆ.ಯಾವುದೇ ರೀತಿ ದೊಡ್ಡ ಮಟ್ಟದ ಜಗಳ ಕೋಲಾಹಲಕ್ಕೆ ಈ ಊರಲ್ಲಿ ಆಸ್ಪದವಿಲ್ಲ.

ಸಾರಿಗೆ ವ್ಯವಸ್ಥೆ

"https://kn.wikipedia.org/w/index.php?title=ಚೋರಗಿ&oldid=994191" ಇಂದ ಪಡೆಯಲ್ಪಟ್ಟಿದೆ